ದಕ್ಷಿಣ ಕನ್ನಡ ಬಂಟರ ಸಂಘದ ಶತಮಾನೋತ್ಸವ ಹಾಗು ಬಂಟರ ಮಾಹಸಮ್ಮೇಳನ ಮೇ 9 ಕ್ಕೆ

Tuesday, May 6th, 2014
Bunts

ಮಂಗಳೂರು: ದಕ್ಷಿಣ ಕನ್ನಡ ಬಂಟರ ಯಾನೆ ನಾಡವರ ಮಾತೃ ಸಂಘದ ಶತಮಾನೋತ್ಸವ ಹಾಗು ಬಂಟರ ಮಾಹಸಮ್ಮೇಳನ ನಗರದ ಬಂಟ್ಸ್ ಹಾಸ್ಟೆಲ್‌ನಲ್ಲಿ ಮೇ 9ರಂದು ಸಂಜೆ 5.30ಕ್ಕೆ ಜರುಗಲಿದೆ ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಮಾಲಾಡಿ ಅಜಿತ್ ಕುಮಾರ್ ರೈ ಹೇಳಿದ್ದಾರೆ. ಬಂಟ್ಸ್ ಹಾಸ್ಟೆಲ್‌ನಲ್ಲಿ ಮಂಗಳವಾರ ನಡೆದ ಪತ್ರಿಕಾಗೋಷ್ಟಿಯಲ್ಲಿ ವಿವರಣೆ ನೀಡಿದ ಅವರು ಅಂದು ಸಂಜೆ 5 ಗಂಟೆಗೆ ಶತಮಾನೋತ್ಸವದ ಪ್ರಯುಕ್ತ ಪುನರ್ ನಿರ್ಮಾಣ ಮಾಡಲಾದ ಬಂಟ್ಸ್ ಹಾಸ್ಟೆಲ್ ವೃತ್ತವನ್ನು ಉದ್ಘಾಟಿಸಿ ಮಹಾನಗರ ಪಾಲಿಕೆಗೆ […]

ಟಿಪ್ಪರ್‌-ಟ್ರಕ್‌ ಮುಖಾಮುಖೀ ಚಾಲಕರಿಬ್ಬರಿಗೆ ಗಂಭೀರ ಗಾಯ

Tuesday, May 6th, 2014
lorry Accident

ಮಂಗಳೂರು: ಟಿಪ್ಪರ್‌ ಹಾಗೂ ಟ್ರಕ್‌ ಮುಖಾಮುಖೀ ಡಿಕ್ಕಿಯಾಗಿ ಚಾಲಕರಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ನಗರದ ನಂತೂರು ಸರ್ಕಲ್‌ ಬಳಿ ಮೇ6ರ ಬೆಳಗ್ಗೆ ಸಂಭವಿಸಿದೆ. ಮರಳು ಸಾಗಿಸುತ್ತಿದ್ದ ಟಿಪ್ಪರ್‌ ಮಂಗಳೂರು ಕಡೆಗೆ ಬರುತ್ತಿದ್ದರೆ ಕೊಕೊಕೋಲಾ ಪಾನಿಯಗಳ ಬಾಕ್ಸ್ ತುಂಬಿಸಿದ್ದ ಟ್ರಕ್‌ ಕೇರಳದತ್ತ ಚಲಿಸುತ್ತಿತ್ತು . ಟ್ರಕ್‌ ಚಾಲಕ ಅತ್ಯಂತ ವೇಗವಾಗಿ ಚಲಿಸುತ್ತಿದ್ದ ಕಾರಣ ನಿಯಂತ್ರಣ ತಪ್ಪಿ ಮುಖಾಮುಖೀಯಾಗಿ ಎರಡೂ ವಾಹನಗಳು ರಸ್ತೆಗೆ ಪಲ್ಟಿಯಾಗಲು ಕಾರಣವಾಯಿತು ಎನ್ನಲಾಗಿದೆ. ಗಂಭೀರವಾಗಿ ಗಾಯಗೊಂಡಿರುವ ಚಾಲಕರಿಬ್ಬರ ಗುರುತು ಇನ್ನಷ್ಟೆ ಪತ್ತೆಯಾಗಬೇಕಿದ್ದು, ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ […]

ಕಲ್ಲು ಕೋರೆಯಲ್ಲಿ ಭೀಕರ ಸ್ಫೋಟ ಇಬ್ಬರು ಸ್ಥಳದಲ್ಲೇ ಮೃತ, ನಾಲ್ವರಿಗೆ ಗಂಭೀರ ಗಾಯ

Monday, May 5th, 2014
explosion died

ಕಿನ್ನಿಗೋಳಿ : ಕಲ್ಲು ಕೋರೆ ಸಮೀಪದ ಶೆಡ್‌ನ‌ಲ್ಲಿ ರವಿವಾರ ಭೀಕರ ಸ್ಫೋಟ ಸಂಭವಿಸಿದ್ದುದರಿಂದ ಇಬ್ಬರು ಸ್ಥಳದಲ್ಲೇ ಮೃತಪಟ್ಟು ನಾಲ್ವರು ಗಾಯಗೊಂಡಿದ್ದಾರೆ. ಸ್ಫೋಟದ ತೀವ್ರತೆಗೆ ಸುಮಾರು 10ಕ್ಕೂ ಹೆಚ್ಚು ಮನೆಗಳು ಛಿದ್ರಗೊಂಡಿವೆ. ಕಿನ್ನಿಗೋಳಿಯ ಐಕಳ ನೆಲ್ಲಿಗುಡ್ಡೆಯ ಕಲ್ಲಿನ ಕೋರೆಯ ಪಕ್ಕದಲ್ಲೇ ಕಾರ್ಮಿಕರ ಶೆಡ್‌ಗಳು ಇದ್ದು ಅವುಗಳಲ್ಲಿ ತಮಿಳುನಾಡು ಸಹಿತ ರಾಜ್ಯದ ವಿವಿಧ ಭಾಗಗಳ 25ಕ್ಕೂ ಹೆಚ್ಚು ಕುಟುಂಬಗಳು ವಾಸವಾಗಿವೆ. ಕೆಲವು ಗುಡಿಸಲುಗಳು ಸಿಮೆಂಟ್‌ ಶೀಟ್‌ ಹಾಕಿ ನಿರ್ಮಿಸಿದವು ಹಾಗೂ ಮತ್ತೆ ಕೆಲವು ಪ್ಪಾಸ್ಟಿಕ್‌ ಹೊದೆಸಿದವು. ಶೆಡ್‌ನ‌ಲ್ಲಿ ವಾಸವಾಗಿದ್ದ ತಮಿಳುನಾಡು […]

ರೊಜಾರಿಯೋ ಕೆಥೆಡ್ರಲ್‌ ಚರ್ಚ್‌ನಲ್ಲಿ 21 ಜೋಡಿಗಳ ಸಾಮೂಹಿಕ ವಿವಾಹ

Monday, May 5th, 2014
Rosario Cathedral

ಮಂಗಳೂರು : ಸೈಂಟ್‌ ವಿನ್ಸೆಂಟ್‌ ಪಾವ್ಲ್ ಸಭಾ (ಎಸ್‌.ವಿ.ಪಿ.)ದ 40ನೇ ವರ್ಷದ ಸಾಮೂಹಿಕ ವಿವಾಹ ರವಿವಾರ ರೊಜಾರಿಯೋ ಕೆಥೆಡ್ರಲ್‌ ಚರ್ಚ್‌ನಲ್ಲಿ ನಡೆಯಿತು. ಸಮಾರಂಭದಲ್ಲಿ 21 ಜೋಡಿಗಳು ಸತಿ ಪತಿಗಳಾಗಿ ದಾಂಪತ್ಯ ಜೀವನ ಪ್ರವೇಶಿಸಿದರು. ಸೈಂಟ್‌ ವಿನ್ಸೆಂಟ್‌ ಪಾವ್ಲ್ ಸಭಾ ಪರವಾಗಿ ನವ ದಂಪತಿಗಳಿಗೆ ತಲಾ 5 ಸಾವಿರ ರೂ. ಠೇವಣಿ ಪತ್ರ, ಅಡುಗೆ ಸಾಮಗ್ರಿ ಮತ್ತು ಬಟ್ಟೆ ಬರೆ ಸಹಿತ ಒಟ್ಟು 10,000 ರೂ. ಮೌಲ್ಯದ ಉಡುಗೊರೆ ನೀಡಲಾಯಿತು. ಮಂಗಳೂರು ಧರ್ಮ ಪ್ರಾಂತದ ಬಿಷಪ್‌ ರೈ| ರೆ| […]

ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ’ ತುಳುಚಿತ್ರ ಮಂಗಳೂರಿನ ಜ್ಯೋತಿ ಸಿನಿಮಾ ಮಂದಿರದಲ್ಲಿ ಬಿಡುಗಡೆ

Friday, May 2nd, 2014
Narayana Guru

ಮಂಗಳೂರು: ತುಂಗಭದ್ರ ಫಿಲಮ್ಸ್‌ ಸಂಸ್ಥೆಯ ಬ್ಯಾನರ್‌ನಡಿ ತಯಾರಾದ ‘ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ’ ತುಳುಚಿತ್ರದ ಬಿಡುಗಡೆ ಸಮಾರಂಭದ ಉದ್ಘಾಟನೆಯನ್ನು ಚಿತ್ರದ ನಿರ್ಮಾಪಕ, ನಿರ್ದೇಶಕ ರಾಜಶೇಖರ ಕೋಟ್ಯಾನ್ ಅವರ ತಾಯಿ ಕಲ್ಯಾಣಿ ಯವರು ಮೇ 2, ಶುಕ್ರವಾರ ಜ್ಯೋತಿ ಸಿನಿಮಾ ಮಂದಿರದಲ್ಲಿ ನೆರವೇರಿಸಿದರು. ನಾರಾಯಣಗುರುಗಳ ಕಾಲದ ಪ್ರಾಕೃತಿಕ ಹಳ್ಳಿ ಸೊಗಡಿನ ಜನಜೀವನ ತೆರೆದಿಡುವಂತಹ ಪ್ರಯತ್ನವನ್ನು ಚಿತ್ರದಲ್ಲಿ ಮಾಡಲಾಗಿದೆ. ಮೂಲ್ಕಿ, ಕಾರ್ಕಳ, ಬಾರ್ಕೂರು, ಸುರತ್ಕಲ್‌, ಬ್ರಹ್ಮಾವರ, ಕುದ್ರೋಳಿ ಹಾಗೂ ಕೇರಳದ ಶಿವಗಿರಿಯಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂದು ಚಿತ್ರದ ನಿರ್ಮಾಪಕ, ನಿರ್ದೇಶಕ ರಾಜಶೇಖರ […]

ಮಲಬಾರ್ ಗೋಲ್ಡ್ ಸಂಸ್ಥೆಯ ಎದುರು ಭಾರತ್ ಕ್ರಾಂತಿ ಸೇನಾ ಸದಸ್ಯರಿಂದ ಪ್ರತಿಭಟನೆ

Friday, May 2nd, 2014
Kranti Sena

ಮಂಗಳೂರು: ನಗರದ ಪಳ್ನೀರ್ ಬಳಿ ಇರುವ ಮಲಬಾರ್ ಗೋಲ್ಡ್ ಸಂಸ್ಥೆಯ ಎದುರು ಭಾರತ್ ಕ್ರಾಂತಿ ಸೇನಾದ ಸದಸ್ಯರು ವಿದೇಶಗಳಿಗೆ ಅಕ್ರಮವಾಗಿ ಚಿನ್ನವನ್ನು ರವಾನೆ ಮಾಡಿಸಲು ಹಿಂದೂ ಯುವಕರನ್ನು ಮಲಬಾರ್ ಗೋಲ್ಡ್ ಸಂಸ್ಥೆ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿ ಶುಕ್ರವಾರ ಪ್ರತಿಭಟನೆ ನಡೆಸಿದರು. ಕೆಲವು ದಿನಗಳ ಹಿಂದೆ ಭಾರತ್ ಕ್ರಾಂತಿ ಸೇನಾದ ಸಂಸ್ಥಾಪಕ ಪ್ರಣವಾನಂದ ಸ್ವಾಮಿ ಅವರು ಸುದ್ದಿಗೋಷ್ಠಿ ನಡೆಸಿ ಮಲಬಾರ್ ಗೋಲ್ಡ್ ಸಂಸ್ಥೆ ವಿದೇಶಗಳಿಗೆ ಅಕ್ರಮವಾಗಿ ಚಿನ್ನವನ್ನು ಕಳ್ಳಸಾಗಾಣೆ ಮಾಡುತ್ತಿದೆ. ಇದಕ್ಕೆ ಹಿಂದೂ ಯುವಕರನ್ನು ಬಳಸಿಕೊಳ್ಳುತ್ತಿದೆ ಎಂದು ಹೇಳಿದ್ದರು. […]

ದೆಹಲಿಯಲ್ಲಿ ಬಿಸು ಪರ್ಬ, ತುಳುವಿಗೆ ಸಂವಿಧಾನದ ಮಾನ್ಯತೆಗಾಗಿ ಹೋರಾಟ

Thursday, May 1st, 2014
Delhi Tulu Siri

ನವದೆಹಲಿ: ದೆಹಲಿ ಸುತ್ತಲಿನ ಪ್ರದೇಶಗಳಲ್ಲಿ ನೆಲೆಸಿರುವ ತುಳುವರು ಭಾನುವಾರ ದೆಹಲಿಯ ನೆಹರು ಪಾಕರ್್ನಲ್ಲಿ ಸೇರಿ ತುಳು ಭಾಷೆಯನ್ನು ಸಂವಿಧಾನದ ಎಂಟನೆ ಪರಿಚ್ಚೇದಕ್ಕೆ ಸೇರಿಸುವ ತಮ್ಮ ಹೋರಾಟಕ್ಕೆ ಮರುಜೀವ ನೀಡುವ ಬಗ್ಗೆತೀರ್ಮಾನಿಸಿದ್ದಾರೆ. ದೆಹಲಿ ತುಳು ಸಿರಿ ಆಯೋಜಿಸಿದ್ದ ‘ಬಿಸು ಪರ್ಬ’ ಕಾರ್ಯಕ್ರಮದಲ್ಲಿ ಸುಮಾರು 200ಕ್ಕೂ ಮಿಕ್ಕ ತುಳುವರು ಭಾಗವಹಿಸಿದ್ದರು. ದೆಹಲಿಯಲ್ಲಿ ವಿವಿಧ ವೃತ್ತಿಯಲ್ಲಿರುವ ರಾಜ್ಯದ ಕರಾವಳಿ ಭಾಗಕ್ಕೆ ಸೇರಿದ ಉತ್ಸಾಹಿಗಳು ದೆಹಲಿಯ ಬಿಸಿಲ ಧಗೆಗೆ ಸಡ್ಡು ಹೊಡೆದು `ಪರ್ಬ’ದ ಸಡಗರವನ್ನು ಅನುಭವಿಸಿದರು. ದಿನವಿಡೀ ನಡೆದ ಕಾರ್ಯಕ್ರಮದಲ್ಲಿ ಮಕ್ಕಳು, ಯುವಕರು […]

ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರ ಚುನಾವಣೆಯ ಪ್ರಕ್ರಿಯೆಗಳ ಗೊಂದಲಗಳನ್ನು ಸರಿಪಡಿಸಲು ಜಿಲ್ಲಾಧಿಕಾರಿಗೆ ಮನವಿ

Wednesday, April 30th, 2014
bjp memorandum

ಮಂಗಳೂರು : ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರ ಚುನಾವಣೆಯ ಪ್ರಕ್ರಿಯೆಗಳ ಗೊಂದಲಗಳನ್ನು ಕೂಡಲೇ ಸರಿಪಡಿಸಿ ಸೂಕ್ತ ಕ್ರಮ ಕೈಗೊಳ್ಳುಬೇಕೆಂದು ಜಿಲ್ಲಾ ಬಿಜೆಪಿ ವತಿಯಿಂದ ಬುಧವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಈ ಹಿಂದಿನ ಸಹಕಾರಿ ಸಂಸ್ಥೆಗಳಿಗೆ ಚುನಾವಣೆ ನಡೆಯುವ ಸಂದರ್ಭದಲ್ಲಿ ಮಹಾಸಭೆಯ ನೋಟೀಸಿನ ಜೊತೆಯಲ್ಲಿಯೆ ಸ್ಪರ್ಧಿಸುವ ಅಭ್ಯರ್ಥಿಗಳ ಅರ್ಜಿ ಯ ನಮೂನೆಯನ್ನು ಕೂಡಾ ಕಳುಹಿಸಲಾಗುತ್ತಿತ್ತು. ಇದೀಗ ದಿನಾಂಕ 25.5.2014 ರಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿಗೆ ಚುನಾವಣೆಯು ನಡೆಯಲಿದ್ದು, ಸಂಘದ ಪ್ರತಿನಿಧಿ ನಿಯೋಜಿಸುವ ಅರ್ಜಿ […]

ನ್ಯಾಯಬೆಲೆ ಅಂಗಡಿಗಳ ತಪಾಸಣೆಗೆ ಡಿಸಿ ಸೂಚನೆ

Wednesday, April 30th, 2014
Ibrahim

ಮಂಗಳೂರು : ಜಿಲ್ಲೆಯಲ್ಲಿರುವ ನ್ಯಾಯಬೆಲೆ ಅಂಗಡಿಗಳ ತಪಾಸಣೆಯನ್ನು ಆಹಾರ ಇಲಾಖೆಯು ಆಗಿಂದಾಗ್ಗೆ ನಿಗದಿತವಾಗಿ ನಡೆಸಬೇಕು ಎಂದು ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಸೂಚಿಸಿದ್ದಾರೆ. ಅವರು ಬುಧವಾರ ತಮ್ಮ ಕಚೇರಿ ಸಭಾಂಗಣದಲ್ಲಿ ಆಹಾರ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡುತ್ತಿದ್ದರು. ನ್ಯಾಯಬೆಲೆ ಅಂಗಡಿಗಳ ತಪಾಸಣೆ ಕುಂಠಿತಗೊಂಡಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಅವರು, ನ್ಯಾಯಬೆಲೆ ಅಂಗಡಿಗಳ ತೂಕದ ತಕ್ಕಡಿಗಳು ಸಮರ್ಪಕವಾಗಿ ಕಾರ್ಯವಾಗುತ್ತಿರುವುದನ್ನು ತೂಕ ಮತ್ತು ಅಳತೆ ಇಲಾಖೆಯು ನೀಡಿರುವ ಪ್ರಮಾಣಪತ್ರಗಳನ್ನು ಪಡೆದುಕೊಳ್ಳುವಂತೆ ತಿಳಿಸಿದರು. ಜಿಲ್ಲೆಯಲ್ಲಿ 500 ನ್ಯಾಯಬೆಲೆ ಅಂಗಡಿಗಳು ಅಸ್ತಿತ್ವದಲ್ಲಿದೆ. ನೂತನ ನ್ಯಾಯಬೆಲೆ […]

ದೇರೆಬೈಲಿನ ಕೊಂಚಾಡಿಯ ಚರ್ಚ್ ಬಳಿ ಮಣ್ಣು ಕುಸಿದು ಓರ್ವ ಕಾರ್ಮಿಕ ಸಾವು

Wednesday, April 30th, 2014
construction

ಮಂಗಳೂರು: ದೇರೆಬೈಲಿನ ಕೊಂಚಾಡಿಯ ಚರ್ಚ್ ಬಳಿ ಬ್ಲೂಬೇರಿಸ್ ಕಂಪೆನಿಯ ಕಟ್ಟಡ ನಿರ್ಮಾಣದ ವೇಳೆ ಮಣ್ಣು ಕುಸಿದು ಕುಸಿದು ಓರ್ವ ಕಾರ್ಮಿಕ ಸಾವನ್ನಪ್ಪಿರುವ ದುರ್ಘ‌ಟನೆ ಎಪ್ರಿಲ್‌ 30ರಂದು ಸಂಭವಿಸಿದೆ. ಕಟ್ಟಡ ನಿರ್ಮಾಣಕ್ಕೆ ಮಣ್ಣು ಅಗೆಯುತ್ತಿದ್ದು ಮೇಲಿನಿಂದ ಮಣ್ಣು ಕುಸಿದು ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ಮಣ್ಣಿನಡಿಯಲ್ಲಿ ಸಿಲುಕಿಕೊಂಡಿರುವ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೃತ ವ್ಯಕ್ತಿಯನ್ನು ಕಟ್ಟಡ ಕಾರ್ಮಿಕ ಬಾಗಲಕೋಟೆಯ ಕಾಶಿಯಪ್ಪ ಎಂದು ಗುರುತಿಸಲಾಗಿದೆ. ಕಾಶಯಪ್ಪ ಅವರ ಪತ್ನಿ ಮಹಾದೇವಿ ಹಾಗೂ ಸ್ವಾಮಿ ನಾಯಕ್‌ ಎನ್ನುವವರು ಗಾಯಗೊಂಡಿದ್ದು ಅವರಿಗೆ ಸ್ಥಳೀಯ […]