ತಣ್ಣೀರು ಬಾವಿ ಪ್ರದೇಶದ ಬಡ ದಲಿತ ಕುಟುಂಬಗಳಿಗೆ ಹಕ್ಕು ಪತ್ರ ನೀಡಲು ಪ್ರತಿಭಟನೆ

Monday, July 29th, 2013
CPIM Dalita Samiti

ಮಂಗಳೂರು : ತಣ್ಣೀರು ಬಾವಿ ಪ್ರದೇಶದ ಬಡ ಕುಟುಂಬಗಳಿಗೆ ಹಕ್ಕು ಪತ್ರ ನೀಡುವ ಮತ್ತು ವಲಯ ವಿಂಗಡನೆಯ ಸರ್ವೇ ಇದುವರೆಗೆ ಮಾಡದಿರುವುದನ್ನು ವಿರೋಧಿಸಿ ಇಂದು ಬೆಳಿಗ್ಗೆ ದಲಿತ ಹಕ್ಕುಗಳ ಸಮಿತಿ ದ.ಕ.ಜಿಲ್ಲೆ ಇದರ ವತಿಯಿಂದ ಜಿಲ್ಲಾಧಿಕಾರಿ ಕಛೇರಿಯ ಗೇಟಿನ ಬಳಿ ಜುಲೈ 29 ಸೋಮವಾರ ಬೆಳಿಗ್ಗೆ ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಕೃಷ್ಣಪ್ಪ ಕೊಂಚಾಡಿ ಅವರು ಕಳೆದ 80 ವರ್ಷಗಳಿಂದ ವಾಸವಾಗಿರುವ ತಣ್ಣೀರು ಬಾವಿಯ ಪ್ರದೇಶದ 300 ಬಡ ದಲಿತ ಕುಟುಂಬಗಳಿಗೆ ಹಕ್ಕು ಪತ್ರ ನೀಡುವರೇ ದಲಿತ […]

ನಗರದ ಪುರಭವನದಲ್ಲಿ ಮಲೇರಿಯಾ ಮತ್ತು ಡೆಂಗ್ಯೂ ಜಾಗೃತಿ ಕಾರ್ಯಕ್ರಮ

Monday, July 29th, 2013
Maleria Dengue

ಮಂಗಳೂರು : ಹೆಲ್ತ್  ಕನ್ಸೆರ್ನ್ ಪೌಂಡೇಶನ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಶ್ರಯದಲ್ಲಿ ಮಲೇರಿಯಾ ಮತ್ತು ಡೆಂಗ್ಯೂ ನಿಯಂತ್ರಣ ಕಾರ್ಯಕ್ರಮವು ಜುಲೈ17 ರಂದು ಪುರಭವನದಲ್ಲಿ ನಡೆಯಿತು. ಇದರ ಉದ್ಘಾಟನೆಯನ್ನು ಎಂಎಲ್ ಸಿ ಗಣೇಶ್ ಕಾರ್ಣಿಕ್ ನೆರವೇರಿಸಿದರು. ಉದ್ಘಾಟನೆಯ ಬಳಿಕ ಮಾತನಾಡಿದ ಕಾರ್ಣಿಕ್ ಅವರು ರೋಗಗಳ ಬಗ್ಗೆ ಜನರಲ್ಲಿ ನೈರ್ಮಲ್ಯ ಮತ್ತು ಶುಚಿತ್ವದ ಬಗ್ಗೆ ಅರಿವು ಮೂಡಿಸಬೇಕು. ನಗರಗಳಲ್ಲಿ ಚರಂಡಿ ಮತ್ತು ಮನೆಯ ಆವರಣದಲ್ಲಿ ಕೊಳಕು ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು. ಮಲೇರಿಯಾ ಮತ್ತು ಡೆಂಗ್ಯೂವಿನಂತಹ ರೋಗಗಳ […]

ಸಚಿವ ಯು.ಟಿ. ಖಾದರ್‌ ಲೇಡಿಗೋಷನ್‌ ಆಸ್ಪತ್ರೆಗೆ ಭೇಟಿ

Sunday, July 28th, 2013
Ut khader

ಮಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್‌ ಶನಿವಾರ ಲೇಡಿಗೋಷನ್‌ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿ ನಡೆಯುತ್ತಿರುವ ವಿವಿಧ ಕಾಮಗಾರಿಗಳನ್ನು ಪರಿಶೀಲಿಸಿದರು. ಲೇಡಿಗೋಶನ್‌ ಸರಕಾರಿ ಆಸ್ಪತ್ರೆಯಲ್ಲಿ ಪ್ರಸ್ತುತ 260 ಹಾಸಿಗೆಗಳಿದ್ದು, ಅದಕ್ಕೆ 100 ಹಾಸಿಗೆಗಳನ್ನು ಸೇರಿಸಲಾಗುವುದು, ಈ ಯೋಜನೆಗಾಗಿ ಎನ್‌ಆರ್‌ಎಚ್‌ಎಂ ಯೋಜನೆಯಲ್ಲಿ ಕೆಎಚ್‌ಎಸ್‌ಡಿಆರ್‌ಪಿ ಅಡಿಯಲ್ಲಿ 10.46 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಹೇಳಿದರು. ಮುಂದಿನ ಹಂತದಲ್ಲಿ ಇದನ್ನು 500 ಹಾಸಿಗೆಗ‌ಳ ಸುಸಜ್ಜಿತ ಮಾದರಿ ಆಸ್ಪತ್ರೆಯನ್ನಾಗಿ ಅಭಿವೃದ್ಧಿ ಪಡಿಸುವ ಗುರಿ ಹೊಂದಲಾಗಿದೆ. ಎಂಆರ್‌ಪಿಎಲ್‌ ವತಿಯಿಂದ ಹಮ್ಮಿಕೊಂಡಿರುವ ಕಾಮಗಾರಿಯ […]

ಪಡೀಲ್‌ ಹೋಂ ಸ್ಟೇ ದಾಳಿ ಪ್ರಕರಣಕ್ಕೆ 1 ವರ್ಷ,ಒಟ್ಟು 35 ಮಂದಿ ಜಾಮೀನಿನಲ್ಲಿ ಬಿಡುಗಡೆ

Sunday, July 28th, 2013
Homestay one year

ಮಂಗಳೂರು: ಪಡೀಲ್‌ ಹೋಂ ಸ್ಟೇ ದಾಳಿ ಪ್ರಕರಣಕ್ಕೆ 1 ವರ್ಷವಾಗಿದ್ದು, 2012 ಜುಲೈ 28 ರಂದು ಶನಿವಾರ ಮಧ್ಯಾಹ್ನ ನೂರಾರು ಹಿಂದೂ ಸಂಘಟನೆಯ ಕಾರ್ಯಕರ್ತರು ದಾಳಿ ಮಾಡಿ ಅಲ್ಲಿ ಬರ್ತ್‌ಡೇ ಪಾರ್ಟಿಯಲ್ಲಿ ನಿರತರಾಗಿದ್ದವರ ಮೇಲೆ ಹಲ್ಲೆ ನಡೆಸಿದ್ದರು. ಪ್ರಕರಣದಲ್ಲಿ 44 ಮಂದಿ ಆರೋಪಿಗಳ ಪೈಕಿ 38 ಮಂದಿಯನ್ನು ಬಂಧಿಸಲಾಗಿದ್ದು, 6 ಮಂದಿ ಇನ್ನೂ ತಲೆ ಮರೆಸಿಕೊಂಡಿದ್ದಾರೆ. ಬಂಧಿತ 38 ಮಂದಿಯಲ್ಲಿ ಮೂವರನ್ನು ಹೊರತು ಪಡಿಸಿ ಉಳಿದ 35 ಮಂದಿ ಜಾಮೀನಿನಲ್ಲಿ ಬಿಡುಗಡೆ ಹೊಂದಿದ್ದಾರೆ. ಇದೇ ಜು. 21 […]

ಗರೋಡಿಯ ಮನೆಯೊಂದರಲ್ಲಿ ಅಕ್ರಮವಾಗಿ ಗ್ಯಾಸ್ ತುಂಬುವ ಘಟಕ ಪತ್ತೆ

Friday, July 26th, 2013
Illigal Gas Fill

ಮಂಗಳೂರು: ಗರೋಡಿಯಲ್ಲಿ ಮನೆಯೊಂದಕ್ಕೆ ದಾಳಿ ಮಾಡಿದ ತಹಶೀಲ್ದಾರ್ ಮತ್ತು ಗ್ರಾಮಾಂತರ ಪೊಲೀಸರು, ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ತುಂಬಿಸುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ. ತಾರನಾಥ(50) ಬಂಧಿತ ವ್ಯಕ್ತಿಯಾಗಿದ್ದು ಈತ ಗ್ಯಾಸ್ ಸಿಲಿಂಡರ್ ಗಳನ್ನು ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿದ್ದ ಎಂದು  ಪೊಲೀಸರು ತಿಳಿಸಿದ್ದಾರೆ. ಆತನ ಮನೆಯಿಂದ 15.6 ಕೆ.ಜಿ.ಯ 16 ಸಿಲಿಂಡರ್ ಮತ್ತು 14.2 ಕೆ.ಜಿಯ 22 ಸಿಲಿಂಡರ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಮೂರು ಎಚ್ ಪಿ ಮೋಟರ್, ತೂಕಯಂತ್ರ ಮತ್ತು ಐದು ಸಿಲಿಂಡರ್ ಗಳನ್ನು ವಶಪಡಿಸಿಕೊಂಡಿದ್ದಾರೆ. […]

ಎಬಿವಿಪಿ ವಿದ್ಯಾರ್ಥಿಗಳಿಂದ ಕಾರ್ಗಿಲ್ ಹುತಾತ್ಮ ಯೋಧರಿಗೆ ಗೌರವ ನಮನ

Friday, July 26th, 2013
Abvp pay tribute to Kargil Martyr

ಮಂಗಳೂರು : ಕದ್ರಿ ವಾರ್ ಮೆಮೋರಿಯಲ್ ಸ್ಮಾರಕದ ಎದುರಲ್ಲಿ ಅಖಿಲ ಭಾರತ ವಿದ್ಯಾರ್ಥಿ ಪರಿಷದ್ ವತಿಯಿಂದ ಇಂದು ಜುಲೈ26ರಂದು ಕಾರ್ಗಿಲ್ ವಿಜಯೋತ್ಸವ ದಿವಸವನ್ನು ಆಚರಿಸಲಾಯಿತು. ಮತ್ತು ಹುತಾತ್ಮ ಯೋಧರಿಗೆ ಗೌರವವನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಮಾಜಿ ಯೋಧರಾದ ಮಾಸ್ಕರೇನಸ್ ಮತ್ತು ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವಿದ್ಯಾರ್ಥಿಗಳು ಹುತಾತ್ಮ ಯೋಧರ ಸ್ಮಾರಕಕ್ಕೆ ಪುಷ್ಪಗುಚ್ಚ ಇರಿಸಿದರು, ಮತ್ತು ಭಾಗವಹಿಸಿದ ವಿದ್ಯಾರ್ಥಿಗಳು ಪುಷ್ಪಾರ್ಚನೆ ಮಾಡಿದರು. ಎ.ಬಿ.ವಿ.ಪಿ. ರಾಜ್ಯ ಕಾರ್ಯದರ್ಶಿ ಬಿ.ರಮೇಶ್ ಉಪಸ್ಥಿತರಿದ್ದರು. ಬಳಿಕ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ವಿದ್ಯಾರ್ಥಿಗಳು ಜ್ಯೋತಿ ಸರ್ಕಲ್ […]

ಮಾಜಿ ಸೈನಿಕರ ಎಸೋಸಿಯೇಶನ್ ವತಿಯಿಂದ ಕಾರ್ಗಿಲ್ ಯೋಧರಿಗೆ ನಮನ

Friday, July 26th, 2013
Loins Kargil Diwas

ಮಂಗಳೂರು : ದ.ಕ. ಮಾಜಿ ಸೈನಿಕರ ಎಸೋಸಿಯೇಶನ್ ಮತ್ತು ಲಯನ್ಸ್ ಕ್ಲಬ್ ವತಿಯಿಂದ ಇಂದು ಜುಲೈ26ರಂದು ಕದ್ರಿ ಲಯನ್ಸ್ ಸೇವಾ ಮಂದಿರದಲ್ಲಿ ಕಾರ್ಗಿಲ್ ವಿಜಯ ದಿವಸವನ್ನು ಆಚರಿಸಲಾಯಿತು. ಬಿ.ಎಮ್.ಎಸ್ ಕಾಲೇಜ್ ಬೆಂಗಳೂರು ಇಲ್ಲಿಯ 3ನೇ ಬಿ.ಇ. ವಿದ್ಯಾರ್ಥಿನಿಯಾದ ದಿಶಾ ಅಮಿತ್ ರವರು ಉದ್ಘಾಟನೆಯನ್ನು ನೇರವೇರಿಸಿದರು. ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ದಿಶಾ, ಮಾಜಿ ಸೈನಿಕರು ಸಲ್ಲಿಸಿದ ಸೇವೆಯು  ಪ್ರಸ್ತುತ ಪೀಳಿಗೆಗೆ ಉತ್ತಮ ರೀತಿಯ ಸ್ಪೂರ್ತಿ ಮತ್ತು ಅನುಕರಣೀಯವಾಗಿದೆ. ಮಾಜಿ ಸೈನಿಕರು ಈ ದೇಶಕ್ಕೆ ಸಲ್ಲಿಸಿದ ಸೇವೆ ಮತ್ತು […]

ಲಾರಿ ಮತ್ತು ಖಾಸಗಿ ಬಸ್ ಡಿಕ್ಕಿ; ಚಾಲಕ ಮೃತ್ಯು, ಮೂವತ್ತು ಪ್ರಯಾಣಿಕರಿಗೆ ಗಾಯ

Friday, July 26th, 2013
Kasaragod accident

ಕಾಸರಗೋಡು: ಗುರುವಾರ ಬೆಳಗ್ಗೆ 7.45 ರ ಸಮಯದಲ್ಲಿ ಲಾರಿ ಮತ್ತು ಖಾಸಗಿ ಬಸ್ ಡಿಕ್ಕಿಯಾಗಿ ಲಾರಿ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚೆರ್ಕಳ ಸಮೀಪ ಬೇವುಂಜೆಯಲ್ಲಿ ನಡೆದಿದೆ. ಅಫಘಾತದಲ್ಲಿ 20ಕ್ಕೂ ಹೆಚ್ಚು ಮಂದಿ ಬಸ್ ಪ್ರಯಾಣಿಕರು ಗಾಯಗೊಂಡಿದ್ದಾರೆ. ಮೃತಪಟ್ಟ ವ್ಯಕ್ತಿಯನ್ನು ಹುಬ್ಬಳ್ಳಿ ನಿವಾಸಿ ನಾಗರಾಜ(29)  ಎಂದು ಗುರುತಿಸಲಾಗಿದೆ. ಕಾಸರಗೋಡಿನಿಂದ ಮಾನಂತವಾಡಿಗೆ ಸಂಚರಿಸುತ್ತಿದ್ದ ಖಾಸಗಿ ಬಸ್‌ ಮತ್ತು ಎದುರಿನಿಂದ ಬಂದ ವಾಹನವನ್ನು ಓವರ್‌ಟೇಕ್‌ ಮಾಡಿ ಬಂದ  ಲಾರಿ ಪರಸ್ಪರ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿತು. ಲಾರಿಯ ಎದುರು ಭಾಗ ಬಸ್ಸಿನ ಮುಂಭಾಗವನ್ನು […]

ಏಕ ಪೌರತ್ವದ ಕಾರ್ಡ್ ನೀಡಿ, ಸರ್ಕಾರಕ್ಕೆ ಎಂ.ಜಿ. ಹೆಗ್ಡೆ ಸೂಚನೆ

Friday, July 26th, 2013
card system

ಮಂಗಳೂರು : ಸರಕಾರದ ಬಗೆ ಬಗೆಯ ಕಾರ್ಡ್ ಬದಲು ಒಂದೇ ಕಾರ್ಡ್ ಮಾಡಿ ಗೊಂದಲ ನಿವಾರಿಸಲು  ಸಮಾನ ಮನಸ್ಕ ಸಂಘಟನೆಗಳಾದ ತುಳುನಾಡ ರಕ್ಷಣಾ ವೇದಿಕೆ, ಪ್ರೇಮ್ ಎಸೋಸಿಯೇಶನ್ ಸುರತ್ಕಲ್, ಕಡಲ ಸೇನೆ ಯುವ ಸೇವಾ ಟ್ರಸ್ಟ್ ಜಂಟಿಯಾಗಿ ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿಯ ಎದುರು ಪ್ರತಿಭಟನೆ ನಡೆಸಿತು. ಆಧಾರ್ ಕಾರ್ಡ್ ಪಡೆಯಲು ಹರಸಾಹಸ ಪಡಬೇಕಿದೆ. ಸರ್ಕಾರವು ಕಾರ್ಡ್ ಪದ್ದತಿಗಳನ್ನು ಜಾರಿ ಮಾಡುತ್ತಿದ್ದರೂ ಯಾವುದೇ ಕಾರ್ಡ್ ವ್ಯವಸ್ಥೆಯ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ. ಇದರಿಂದ ಜನತೆ ಕಾರ್ಡ್ ಪಡೆಯುವಲ್ಲಿ ಹರಸಾಹಸ […]

ಪಣಂಬೂರು ಬೀಚ್ ನಲ್ಲಿ`ಆಟಿಡ್ ರಡ್ಡ್ ದಿನ’ ಆಚರಣೆ

Thursday, July 25th, 2013
Atid Radd Dina

ಮಂಗಳೂರು: ಮಂಗಳೂರಿನ ಸೆಂಟ್ರಲ್ ರೋಟರಿ ಕ್ಲಬಿನ ವತಿಯಿಂದ ಪಣಂಬೂರು ಬೀಚ್ ಬಳಿ `ಆಟಿಡ್ ರಡ್ಡ್ ದಿನ’ ಎಂಬ ಕಾರ್ಯಕ್ರಮವನ್ನು ಆಗಸ್ಟ್ 09 ಮತ್ತು 10 ರಂದು  ಹಮ್ಮಿಕೊಳ್ಳಲಾಗಿದೆ. ಉತ್ಸವದ ಉದ್ಘಾಟನೆಯನ್ನು ಜಿಲ್ಲಾಧಿಕಾರಿಯವರು 09ರಂದು ಸಂಜೆ 4.30ಕ್ಕೆ ನೆರವೇರಿಸುವರು ಎಂದು ರೋಟರಿ ಕ್ಲಬಿನ ಅಧ್ಯಕ್ಷರಾದ ರಾಜ್ ಗೋಪಾಲ್ ರವರು  ಗುರುವಾರ ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಘೊಷ್ಠಿಯಲ್ಲಿ ತಿಳಿಸಿದರು. ಈ ಕಾರ್ಯಕ್ರಮದ ಉದ್ದೇಶವೆನೆಂದರೆ ನಮ್ಮ ಯುವಪೀಳಿಗೆಗೆ ತುಳುನಾಡಿನ ಆಚಾರ-ವಿಚಾರ, ರೀತಿ-ನಿಯಮ, ಜೀವನ ಪದ್ದತಿ ಮತ್ತು ತುಳುನಾಡಿನ ಸಂಸ್ಕೃತಿ ಬಗ್ಗೆ ಅರಿವು ಮೂಡಿಸುವುದಾಗಿದೆ, […]