ಡ್ರಗ್ಸ್‌ ಮಾಫಿಯಾ ಹತ್ತಿಕ್ಕಲು ಪೊಲೀಸ್‌ ಆಯುಕ್ತರಿಗೆ ಹಿಂದೂ ಸಂಘಟನೆಗಳ ಮನವಿ.

Wednesday, August 10th, 2011
VHP-Bajrangadal/ವಿಶ್ವ ಹಿಂದು ಪರಿಷದ್‌ ಹಾಗೂ ಬಜರಂಗದಳ

ಮಂಗಳೂರು : ವಿಶ್ವಹಿಂದು ಪರಿಷದ್‌ ಹಾಗೂ ಬಜರಂಗದಳ ಮಂಗಳವಾರ ದ.ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಡ್ರಗ್ಸ್‌ ಮಾಫಿಯಾವನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿ ಮಂಗಳೂರು ಪೊಲೀಸ್‌ ಆಯುಕ್ತರಿಗೆ ಮನವಿ ನೀಡಿತು. . ಇತ್ತೀಚೆಗೆ ಕಾಲೇಜು ವಿದ್ಯಾರ್ಥಿನಿಯೋರ್ವಳು ಇದಕ್ಕೆ ಬಲಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಈ ಡ್ರಗ್ಸ್‌ ಮಾಫಿಯಾದಲ್ಲಿ ಕಾಂಗ್ರೆಸ್‌ ಮುಖಂಡ ಅಶ್ರಫ್‌ ಅವರ ಪುತ್ರ ಆರಫನ ಕೈವಾಡವಿದ್ದು, ಆತನನ್ನು ಹಾಗೂ ಆತನ ಸ್ನೇಹಿತರನ್ನು ಬಂಧಿಸಿ ಡ್ರಗ್ಸ್‌ ಮಾಫಿಯಾವನ್ನು ಹತ್ತಿಕ್ಕಬೇಕು, ಡ್ರಗ್ಸ್‌ ಚಟಕ್ಕೆ ಹಲವಾರು ವಿದ್ಯಾರ್ಥಿ, ವಿದ್ಯಾರ್ಥಿನಿಯರು […]

ಹತ್ತು ಮಂದಿ ಸಾಧಕರಿಗೆ 2010-11ನೇ ಸಾಲಿನ ಸಾಧನಾ ಪ್ರಶಸ್ತಿ

Wednesday, August 10th, 2011
Sadhana Award/ಸಾಧನಾ ಪ್ರಶಸ್ತಿ

ಮಂಗಳೂರು : ಸಾಧನಾ ರಾಷ್ಟ್ರೀಯ ಸಾಂಸ್ಕೃತಿಕ ಪ್ರತಿಷ್ಠಾನವು ಪ್ರತಿವರ್ಷ ನೀಡುವ ಸಾಧನಾ ಪ್ರಶಸ್ತಿ ಸಮಾರಂಭವು ಆ. 28 ರಂದು ಸಂಜೆ 4 ಗಂಟೆಗೆ ಮಂಗಳೂರು ಪುರಭವನದಲ್ಲಿ ಜರಗಲಿದೆ. ಈ ಬಾರಿ ಒಂಭತ್ತು ಮಂದಿ ಹಿರಿಯ ಸಾಧಕರನ್ನು ಮತ್ತು ಒಬ್ಬ ಯುವ ಸಾಧಕರನ್ನು ಸಾಧನಾ ಯುವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕನ್ನಡ ಚಲನಚಿತ್ರ, ಕಿರುತೆರೆ ಕ್ಷೇತ್ರದಲ್ಲಿ ಹಿರಿಯ ನಟ ಅನಂತವೇಲು, ಹಿರಿಯ ಚಲನಚಿತ್ರ ನಟಿ ರಾಧಾ ರಾಮಚಂದ್ರ ನೃತ್ಯ ಕೇಂದ್ರದಲ್ಲಿ ಹಿರಿಯ ನೃತ್ಯಗುರು ಮುರಳೀಧರ್‌ ರಾವ್‌, ತುಳು ರಂಗಭೂಮಿ […]

ರಸ್ತೆ ಅಫಘಾತ ಮಂಜೇಶ್ವರ ಆನೆಕಲ್ಲು ನಿವಾಸಿ ಸಾವು

Tuesday, August 9th, 2011
Car Accident/ ರಸ್ತೆ ಅಫಘಾತ

ನೆಲ್ಯಾಡಿ : ರಾಷ್ಟ್ರೀಯ ಹೆದ್ದಾರಿ 48 ರ ನೆಲ್ಯಾಡಿ ಸಮೀಪದ ಗೋಳಿತ್ತೂಟ್ಟು ಎಂಬಲ್ಲಿ ರಿಟ್ಜ್ ಕಾರು ಮತ್ತು ಟಿಪ್ಪರ್‌ ಡಿಕ್ಕಿ ಹೊಡೆದು ಓರ್ವ ಆಸ್ಪತ್ರೆಗೆ ಸಾಗಿಸುವಾಗ ದಾರಿಯಲ್ಲೇ ಮೃತ ಪಟ್ಟ ಘಟನೆ ನಿನ್ನೆ ನಡೆದಿದೆ. ಮೃತರು ಮಂಜೇಶ್ವರ ಆನೆಕಲ್ಲು ನಿವಾಸಿ ಮಮ್ಮದರ ಪುತ್ರ ಅಬ್ದುಲ್‌ ರಝಾಕ್‌(36ವ).ಇವರು ಈಗ 2 ವರ್ಷಗಳಿಂದ ಉಪ್ಪಿನಂಗಡಿ ಸಮೀಪದ 34ನೇ ನೆಕ್ಕಿಲಾಡಿಯಲ್ಲಿ ಬಾಡಿಗೆಗೆ ವಾಸವಿದ್ದು ಬ್ರೋಕರ್‌ ಕೆಲಸ ಮಾಡುತ್ತಿದ್ದರು.ಇವರು ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಅಗಲಿರುತ್ತಾರೆ. ಟಿಪ್ಪರ್‌ ಜಲ್ಲಿ ಇಳಿಸಲು ಹಿಂದಕ್ಕೆ ಚಲಾಸುತ್ತಿದ್ದಾಗ […]

ಕೊಣಾಜೆ ಬಳಿ ಬಾಲಕನನ್ನು ಕಟ್ಟಿ ಹಾಕಿ 3 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಲೂಟಿ

Monday, August 8th, 2011
House theft/ ಮನೆ ದರೋಡೆ

ಮಂಗಳೂರು : ಕೊಣಾಜೆ ಪೋಲಿಸ್ ಠಾಣಾ ವ್ಯಾಪ್ತಿಯ ಪಜೀರು ಪೆರ್ನದ ಮನೆಯೊಂದರಿಂದ ಭಾನುವಾರ ಮುಂಜಾನೆ ಸುಮಾರು 3 ಲಕ್ಷ ರೂ. ಮೌಲ್ಯದ 15 ಪವನ್‌ ಚಿನ್ನಾಭರಣ ಕಳವು ಮಾಡಲಾಗಿದೆ. ಕಳ್ಳರು ಮನೆಯಲ್ಲಿ ಇಬ್ಬರೇ ಇರುವುದನ್ನು ಗಮನಿಸಿ ಕಳ್ಳತನದ ಕೃತ್ಯ ನಡೆಸಿದ್ದಾರೆ . ಮನೆಯ ಮಾಲೀಕ ಡೆನಿಸ್‌ ಅಪೋಸ್‌ ವಿದೇಶದಲ್ಲಿದ್ದು ಫಜೀರು ಪೆರ್ನದ ಅವರ ಮನೆಯಲ್ಲಿ ಡೆನಿಸ್‌ ಅಪೋಸ್‌ರವರ ಹತ್ತು ವರ್ಷದ ಮಗ ಮತ್ತು ಅತ್ತೆ ಮಾತ್ರ ಮನೆಯಲಿದ್ದರು. ಅವರ ಮನೆಯಲ್ಲಿ ಪತ್ನಿ ಡೊಡ್ಡಿ, ಪುತ್ರ ಡೆನ್ಮರ್‌,ಅತ್ತೆ ರೊಸಾಲಿನ್‌ […]

ಕನ್ನಡ ಭಾಷೆಯ ಅಳಿವು-ಉಳಿವು ನಮ್ಮ ಕೈಯಲ್ಲಿದೆ : ನಾಗತಿಹಳ್ಳಿ

Sunday, August 7th, 2011
Mumbai Kannada Sammelana/ಅಖೀಲ ಭಾರತ ಕನ್ನಡ ಸಂಸ್ಕೃತಿ ಸಮ್ಮೇಳನ

ಮುಂಬಯಿ: ಮುಂಬಯಿ ಕನ್ನಡ ಸಂಘ ಹಾಗೂ ಹೃದಯವಾಹಿನಿ ಕನ್ನಡ ಪತ್ರಿಕೆ ಮಂಗಳೂರು ಅವರ ಸಂಯುಕ್ತ ಆಶ್ರಯದಲ್ಲಿ ಆ. 6 ರಂದು ಸಾಂತಾಕ್ರೂಜ್‌ ಪೂರ್ವದ ಬಿಲ್ಲವ ಭವನದ ವಿ. ಕೃ. ಗೋಕಾಕ್‌ ವೇದಿಕೆಯಲ್ಲಿ ಆಯೋಜಿಸಲಾಗಿದ್ದ 2011 ನೇ ಸಾಲಿನ 8 ನೇ ಅಖೀಲ ಭಾರತ ಕನ್ನಡ ಸಂಸ್ಕೃತಿ ಸಮ್ಮೇಳನವನ್ನು ಶನಿವಾರ ಖ್ಯಾತ ಸಾಹಿತಿ ನಾಗತಿಹಳ್ಳಿ ಚಂದ್ರಶೇಖರ್‌ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಉದ್ಘಾಟನೆ ಬಳಿಕ ಸಮ್ಮೇಳನಾಧ್ಯಕ್ಷರೂ ಆಗಿದ್ದ ನಾಗತಿಹಳ್ಳಿ ಚಂದ್ರಶೇಖರ್‌ ಮಾತನಾಡಿ ಎರಡು ಸಾವಿರಕ್ಕೂ ಅಧಿಕ ಕಾಲದ ಇತಿಹಾಸವನ್ನು […]

ಸೋನಿಯಾ ಗಾಂಧಿ ಗುಣಮುಖರಾಗಲು ಪೂಜಾರಿ ನೇತೃತ್ವದಲ್ಲಿ ಉರುಳು ಸೇವೆ

Sunday, August 7th, 2011
Janardhana Poojary/ಪೂಜಾರಿ ನೇತೃತ್ವದಲ್ಲಿ ಉರುಳು ಸೇವೆ

ಮಂಗಳೂರು : ಸೋನಿಯಾ ಗಾಂಧಿ ಅವರು ಶೀಘ್ರ ಗುಣಮುಖರಾಗಿ ಭಾರತಕ್ಕೆ ಮರಳಿ ಬರಲಿ ಎಂದು ಪ್ರಾರ್ಥಿಸಿ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಅವರ ನೇತೃತ್ವದಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಶನಿವಾರ ವಿಶೇಷ ಪೂಜೆ ಹಾಗೂ ಉರುಳು ಸೇವೆ ಜರಗಿತು. ಸೋನಿಯಾ ಗಾಂಧಿ ಅವರು ಶೀಘ್ರ ಗುಣಮುಖರಾಗಿ ಭಾರತಕ್ಕೆ ಮರಳಿ ಬರಲಿ ಎಂದು ಪ್ರಾರ್ಥಿಸಿ ಪಕ್ಷದ ಹಿರಿಯ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ […]

ವಿವೇಕಾನಂದರ ಸಂದೇಶ ಹೊತ್ತು ತಂದಿರುವ ‘ವಿವೇಕ ಎಕ್ಸ್‌ಪ್ರೆಸ್‌’ ಮಂಗಳೂರಿನಲ್ಲಿ

Saturday, August 6th, 2011
Viveka Express/'ವಿವೇಕ ಎಕ್ಸ್‌ಪ್ರೆಸ್‌' ರೈಲು

ಮಂಗಳೂರು : ಭಾರತೀಯ ರೈಲ್ವೇ ವತಿಯಿಂದ ಸ್ವಾಮಿ ವಿವೇಕಾನಂದ ಅವರ 150ನೇ ಜನ್ಮದಿನಾಚರಣೆ ಅಂಗವಾಗಿ ಉದಾತ್ತವಾದ ಸಂದೇಶ ಹೊತ್ತು ತಂದಿರುವ ‘ವಿವೇಕ ಎಕ್ಸ್‌ಪ್ರೆಸ್‌’ ರೈಲು ಪಶ್ಚಿಮ ಬಂಗಾಳದ ಹೌರಾದಿಂದ ಹೊರಟು ಶುಕ್ರವಾರ ಮಂಗಳೂರು ಸೆಂಟ್ರಲ್‌ ನಿಲ್ದಾಣಕ್ಕೆ ತಲುಪಿತು. ಸ್ವಾಮಿ ವಿವೇಕಾನಂದರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಪಾಲಕ್ಕಾಡು ಡಿವಿಜನಲ್‌ ಮೆನೇಜರ್‌ ಎಸ್‌. ಕೆ. ರೈನಾ ಸಾರ್ವಜನಿಕರ ವೀಕ್ಷಣೆಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು 8 ರಾಜ್ಯಗಳಲ್ಲಿ 79 ರೈಲು ನಿಲ್ದಾಣಗಳನ್ನು ಹಾದು ಬಂದಿರುವ ವಿಶೇಷ ರೈಲಿನಲ್ಲಿರುವ […]

ಮಚ್ಚೇಂದ್ರನಾಥ ಪಾಂಡೇಶ್ವರರಿಗೆ ‘ತುಳುನಾಡ ತುಳುಶ್ರೀ’ಪ್ರಶಸ್ತಿ ಪ್ರಧಾನ

Saturday, August 6th, 2011
Machendranatha Pandeshwar/ ಮಚ್ಚೇಂದ್ರನಾಥ ಪಾಂಡೇಶ್ವರ

ಮಂಗಳೂರು : ನಾಟಕಕಾರ-ಸಿನಿಮಾ ನಟ ಮಚ್ಚೇಂದ್ರನಾಥ ಪಾಂಡೇಶ್ವರ ಅವರನ್ನು ಆಲದಪದವು ಅಕ್ಷರ ಪ್ರತಿಷ್ಠಾನ ವತಿಯಿಂದ ನೀಡಲಾಗುವ 8ನೇ ವರ್ಷದ ‘ತುಳುನಾಡ ತುಳುಶ್ರೀ’ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಕನ್ನಡ ನಾಟಕ ಹಾಗೂ ತುಳು ಸಾಹಿತ್ಯದಲ್ಲಿ ಅನೇಕ ಹಾಡುಗಳನ್ನು ರಚಿಸಿ, 160ಕ್ಕೂ ಹೆಚ್ಚು ನಾಟಕಗಳನ್ನು ಬರೆದು ಸ್ವತಃ ಹಲವು ನಾಟಕಗಳಲ್ಲಿ ಪ್ರಬುದ್ದ ನಟರಾಗಿ-ನಿರ್ದೇಶಕರಾಗಿ ಸೇವೆ ಸಲ್ಲಿಸಿದಕ್ಕೆ ಈ ಪ್ರಶಸ್ತಿ ನೀಡಲಾಗುತ್ತಿದೆ. ಆಗಸ್ಟ್ 7ರಂದು ಸಂಜೆ 3ಗಂಟೆಗೆ ರಾಯಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಲಿದೆ. ದ.ಕ.ಜಿಲ್ಲಾ ಕನ್ನಡ ಸಾಹಿತ್ಯ […]

ಮಂಗಳೂರಿನಲ್ಲಿ “ಮನಸೇ- ಮಾತಾಡು” ಕನ್ನಡ ಸ್ಕೋಪ್ ಚಲನಚಿತ್ರದ ಮುಹೂರ್ತ

Friday, August 5th, 2011
Manase Mathadu/ ಮನಸೇ- ಮಾತಾಡು

ಮಂಗಳೂರು : “ಮನಸೇ- ಮಾತಾಡು” ಕನ್ನಡ ಸ್ಕೋಪ್ ಚಲನಚಿತ್ರದ ಮುಹೂರ್ತವನ್ನು ನಗರದ ಶರವು ಮಹಾಗಣಪತಿ ದೇವಸ್ಥಾನದಲ್ಲಿ ಪ್ರಧಾನ ಅರ್ಚಕರಾದ ಶ್ರೀ ರಾಘವೇಂದ್ರ ಶಾಸ್ತ್ರಿಯವರ ಇಂದು ನೆರವೇರಿಸಿದರು. ಚಿತ್ರದ ಬಗ್ಗೆ ಪತ್ರಕರ್ತರೊಂದಿಗೆ ಮಾತನಾಡಿದ ಬ್ಯಾಂಕ್ ಜನಾರ್ಧನ್ ಈ ಚಿತ್ರದ ಚಿತ್ರೀಕರಣವನ್ನು ಚಿಕ್ಕಮಂಗಳೂರು, ಸಕಲೇಶ್‌ಪುರ, ಮಡಿಕೇರಿ ಹಾಗೂ ಕೊಟ್ಟಿಗೆಹಾರ ಮೊದಲಾದ ಸ್ಥಳಗಳಲ್ಲಿ ನಡೆಸಲಾಗುವುದು. ಚಿತ್ರವು ಲವ್ ಸ್ಟೋರಿಯ ತಳಹದಿಯೊಂದಿಗೆ ಪ್ರಾರಂಭವಾಗಲಿದೆ ಎಂದು ಮಾಹಿತಿ ನೀಡಿದರು. ಇದೇ ಸಂದರ್ಭದಲ್ಲಿ ನಿರ್ಮಾಪಕ ಟಿ.ಎನ್.ವೆಂಕಟೇಶ್ ಅವರು ಮಾತನಾಡಿ ಕಲಾವಿದರನ್ನು ಪ್ರೋತ್ಸಾಹಿಸಿ ಚಿತ್ರದ ಯಶಸ್ಸಿಗೆ ಸಹಕಾರ […]

ಮಂಗಳೂರು ಕಾಸರಗೋಡು ಬಸ್‌ ಪ್ರಯಾಣ ದರ ಆ.8 ರಿಂದ ಏರಿಕೆ

Friday, August 5th, 2011
Private Bus/ ಖಾಸಗಿ ಬಸ್‌

ಕಾಸರಗೋಡು : ಕೇರಳ ರಾಜ್ಯದಲ್ಲಿ ಡೀಸೆಲ್‌ ಮತ್ತು ಬಿಡಿ ಭಾಗಗಳ ಬೆಲೆಯೇರಿಕೆಯ ಬಿಸಿ ಖಾಸಗಿ ಬಸ್‌ ಮಾಲಕರಿಗೆ ತಟ್ಟಿದ್ದು ಅನಿವಾರ್ಯವಾಗಿ ಪ್ರಯಾಣ ದರವನ್ನು ಆ.8 ಏರಿಸಲಾಗುವುದು ಎಂದು ಕೇರಳ ಬಸ್ ಮಾಲಕರ ಪತ್ರಿಕಾ ಪ್ರಕಟಣೆಯೊಂದು ತಿಳಿಸಿದೆ. ಸಾಮಾನ್ಯ ಬಸ್‌ಗಳಲ್ಲಿ ಕನಿಷ್ಠ ಪ್ರಯಾಣ ದರ 4 ರೂ.ನಿಂದ 5 ಕ್ಕೆ ಏರಲಿದೆ. ಫಾಸ್ಟ್‌ ಪ್ಯಾಸೆಂಜರ್‌ ಬಸ್‌ ಪ್ರಯಾಣ ದರವನ್ನು 5 ರೂ.ನಿಂದ 7 ರೂ. ಗೆ ಏರಿಸಲಾಗಿದೆ. ಕನಿಷ್ಠ ದರದಲ್ಲಿ ಪ್ರಯಾಣಿಸುವ ಕಿಲೋಮೀಟರ್‌ ಮಿತಿಯನ್ನು ಎರಡೂವರೆ ಕಿ.ಮೀ.ನಿಂದ ಐದು […]