ಕಾಸರಗೋಡು ಜಿಲ್ಲಾ ಬಿಜೆಪಿ ಸಮಿತಿ ಪುನರ್ ರಚನೆ: ಶ್ರೀಕಾಂತ್ ಜಿಲ್ಲಾಧ್ಯಕ್ಷ

Tuesday, January 19th, 2016
Kasaragod BJP

ಕಾಸರಗೋಡು: ಬಿಜೆಪಿ ಜಿಲ್ಲಾ ಸಮಿತಿಯನ್ನು ಪುನರ್ ರಚಿಸಲಾಗಿದ್ದು,ಕಾಸರಗೋಡು ಜಿಲ್ಲಾಧ್ಯಕ್ಷರಾಗಿ ಜಿಲ್ಲಾ ಪಂಚಾಯತ್ ಸದಸ್ಯ,ಯುವ ನಾಯಕ ನ್ಯಾಯವಾದಿ ಶ್ರೀಕಾಂತ್ ರನ್ನು ನೇಮಿಸಲಾಗಿದೆ. ರಾಜ್ಯ ಸಮಿತಿ ಸದಸ್ಯರಾಗಿದ್ದ ನಗರಸಭಾ ಕೌನ್ಸಿಲರ್ ಪಿ.ರಮೇಶ್ ಹಾಗೂ ಆರ್‌ಎಸ್‌ಎಸ್ ಕಣ್ಣೂರು ವಿಭಾಗ ಕಾರ್ಯಕಾರಿ ಸಮಿತಿ ಸದಸ್ಯ ಎ.ವೇಲಾಯುಧನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾಗಿ ನಿಯುಕ್ತರಾಗಿದ್ದಾರೆ. ಈ ವೇಳೆ ಬಿಜೆಪಿ ರಾಜ್ಯ ಸಮಿತಿಯನ್ನೂ ಪುನರ್ ಸಂಘಟಿಸಲಾಗಿದ್ದು, ನಾಲ್ವರು ಪ್ರಧಾನ ಕಾರ್ಯದರ್ಶಿಗಳು, ಒಂಭತ್ತು ಉಪಾಧ್ಯಕ್ಷರುಗಳು ಮತ್ತು 42 ಮಂದಿ ಪದಾಧಿಕಾರಿಗಳನ್ನು ರಾಜ್ಯಾಧ್ಯಕ್ಷ ಕುಮ್ಮನಂ ರಾಜಶೇಖರನ್ ಘೋಷಿಸಿದ್ದಾರೆ. ಕೆ.ಸುರೇಂದ್ರನ್,ಎಎನ್ ರಾಧಾಕೃಷ್ಣನ್,ಎಂ.ಟಿ.ರಮೇಶ್,ಶೋಭಾ […]

ಆಂಧ್ರದಲ್ಲಿ ಭೀಕರ ರಸ್ತೆ ಅಪಘಾತ: ಒಂದೇ ಕುಟುಂಬದ ಐವರ ಸಹಿತ 6 ಮಂದಿಯ ದುರ್ಮರಣ

Tuesday, January 19th, 2016
Andra Accident

ಕಾಸರಗೋಡು: ಆಂಧ್ರಪ್ರದೇಶದಲ್ಲಿ ಸೋಮವಾರ ಮುಂಜಾನೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮುಳ್ಳೇರಿಯಾ ಸಮೀಪದ ದೇಲಂಪಾಡಿ ಬಳಿಯ ನಿವಾಸಿಗಳಾದ ಒಂದೇ ಕುಟುಂಬದ ಐವರ ಸಹಿತ ಆಂಧ್ರ ನಿವಾಸಿ ಮೃತಪಟ್ಟ ದಾರುಣ ಘಟನೆ ನಡೆದಿದೆ. ದೇಲಂಪಾಡಿ ಸಮೀಪದ ಊಜಮಪಾಡಿ ನಿವಾಸಿಗಳಾದ ದೇವಸ್ಯ(65),ಪತ್ನಿ ತ್ರೇಸಿ(62),ಇವರ ಪುತ್ರ ರೋಬಿನ್(38),ಪತ್ನಿ ಬಿಸ್‌ಮೋಳ್(29) ಹಾಗೂ ನಾಲ್ಕು ತಿಂಗಳ ಮಗು ಅಪಘಾತದಲ್ಲಿ ಮೃತರಾದರು.ಕಾರು ಚಾಲಕ ಆಂಧ್ರ ನಿವಾಸಿ ಪವನ್ ಎಂಬವರೂ ಘಟನೆಯಲ್ಲಿ ಮೃತರಾಗಿದ್ದಾರೆ. ಊಜಂಪಾಡಿಯ ದೇವಸ್ಯ,ಪತ್ನಿ ತ್ರೇಸಿ ಹಾಗೂ ಇವರ ಇನ್ನೋರ್ವ ಪುತ್ರ ರಿನಿಶ್ ಕಳೆದ 30 […]

ಕಣಿಪುರ ಜಾತ್ರೆ ಸಂಪನ್ನ ಬಣ್ಣದ ಲೋಕದಲ್ಲಿ ತೇಲಾಡಿಸಿದ ಕುಂಬಳೆ ಬೆಡಿ ಮಹೋತ್ಸವ

Tuesday, January 19th, 2016
Kumble Bedi

ಕುಂಬಳೆ : ಕಣಿಪುರ ಜಾತ್ರೆಯ ಇತಿಹಾಸ ಪ್ರಸಿದ್ಧ ಕುಂಬಳೆ ಬೆಡಿ ಮಹೋತ್ಸವವು ಸಹಾಸ್ರಾರು ಭಕ್ತ ಜನಸಾಗರದ ಮಧ್ಯೆ ಭಾನುವಾರ ರಾತ್ರಿ ನಡೆಯಿತು. ರಾತ್ರಿ ದೇವರ ಬಲಿ ವಾದ್ಯಘೋಷದ ಮೆರವಣಿಗೆಯಲ್ಲಿ ಬೆಡಿಕಟ್ಟೆಗೆ ತೆರಳಿ ದೇವರು ಬೆಡಿಕಟ್ಟೆಯಲ್ಲಿ ವಿರಾಜಮಾನವಾದ ಬಳಿಕ ಸಂಪ್ರದಾಯದಂತೆ ದೇವರ ದೀಪದಿಂದ ಹಣತೆಯಲ್ಲಿ ನೀಡಿದ ದೀಪದಲ್ಲಿ ಬೆಡಿಗೆ ಬೆಂಕಿ ಹಚ್ಚಲಾಯಿತು. ಬಳಿಕ ಸುಮಾರು ಒಂದು ಗಂಟೆಗಳ ಕಾಲ ಬಾನಂಗಳದಲ್ಲಿ ಬಣ್ಣದ ಚಿತ್ತಾರ ಮೂಡಿಸಿದ ಬೆಡಿ ಪ್ರದರ್ಶನ ಪ್ರೇಕ್ಷಕರನ್ನು ಮಂತ್ರ ಮುಗ್ಧಗೊಳಿಸಿತು. ವಿವಿಧ ಕಲರ್ ಔಟ್‌ಗಳು, ಚೈನೀಸ್ ಔಟ್‌ಗಳು […]

ಪೋಲಿಯೋ ಲಿಸಿಕಾ ಕಾರ್ಯಕ್ರಮ ಯಶಸ್ವಿ

Tuesday, January 19th, 2016
Kerala polio drops

ಕಾಸರಗೋಡು: ಸಂಪೂರ್ಣ ಪೋಲಿಯೋ ಮುಕ್ತ ರಾಷ್ಟ್ರವಾಗಿಸುವ ಗುರಿಯೊಂದಿಗೆ ನಡೆಸಲಾದ ಪ್ರಸಕ್ತ ಸಾಲಿನ ಮೊದಲ ಪೋಲಿಯೋ ರೋಗ ಪ್ರತಿರೋಧ ಕಾರ್ಯಕ್ರಮದಂಗವಾಗಿ ಭಾನುವಾರ ಜಿಲ್ಲೆಯಾದ್ಯಂತ 5 ವರ್ಷಗಳಿಗಿಂತ ಕೆಳಗಿನ ಹರೆಯದ ಮಕ್ಕಳಿಗೆ ಲಸಿಕೆ ನೀಡಲಾಯಿತು. ಭಾನುವಾರ ಬೆಳಿಗ್ಗೆ 8 ಗಂಟೆಗೆ ಆರಂಭಗೊಂಡ ಲಸಿಕೆ ವಿತರಣಾ ಕಾರ್ಯಕ್ರಮ ಸಂಜೆ5 ಗಂಟೆಯ ತನಕ ಯಶಸ್ವಿಯಾಗಿ ನಡೆಯಿತು.ಜಿಲ್ಲೆಯ 1997 ಬೂತ್ ಗಳಲ್ಲಿ ಲಸಿಕೆ ವಿತರಿಸಲಾಯಿತು.ಒಟ್ಟು 1,20,734 ಮಂದಿ ಮಕ್ಕಳಿಗೆ ಲಸಿಕೆ ನೀಡಲಾಗಿದೆಯೆಂದು ಪ್ರಾಥಮಿಕ ಅಂಕಿಅಂಶಗಳು ತಿಳಿಸಿವೆ.119 ಸಂಚಾರಿ ಬೂತ್ ಗಳ ಮೂಲಕವೂ ಲಸಿಕಾ ವಿತರಣೆಗೆ […]

ಕಾಸರಗೋಡು ಹೋಟೆಲ್ ಗಳಲ್ಲಿ ಹಳಸಿದ ಆಹಾರ, ಆರೋಗ್ಯ ಅಧಿಕಾರಿಗಳ ದಾಳಿ

Sunday, January 17th, 2016
hotel raid

ಕಾಸರಗೋಡು: ಕಾಸರಗೋಡು ನಗರ ಸಭಾ ವ್ಯಾಪ್ತಿಯ ಹೋಟೆಲ್ ಗಳಿಗೆ ಮುನ್ಸಿಪಲ್ ಆರೋಗ್ಯ ವಿಭಾಗದ ಅಧಿಕೃತರು ಶುಕ್ರವಾರ ಮಿಂಚಿನ ಧಾಳಿ ನಡೆಸಿ ಹಲವೆಡೆಗಳಿಂದ ಹಳಸಿದ ಆಹಾರ ಹಾಗೂ ನೈರ್ಮಲ್ಯದ ತೀವ್ರ ಕೊರತೆಯನ್ನು ಕಂಡು ನೊಟೀಸ್ ಜಾರಿಗೊಳಿಸಿದರು. ಶುಕ್ರವಾರ ಬೆಳಿಗ್ಗೆ 7.30 ರಿಂದ 9ಗಂಟೆಯ ವರೆಗೆ ನಗರದ ಕರಂದಕ್ಕಾಡು,ಕೆಎಸ್‌ಆರ್‌ಟಿಸಿ ನಿಲ್ದಾಣ ಪ್ರದೇಶ,ಹಳೆ ಬಸ್ ನಿಲ್ದಾಣ ಪರಿಸರ,ವಿದ್ಯಾನಗರ ಮೊದಲಾದ ಪ್ರದೇಶಗಳ ಹೋಟೇಲ್ ಗಳಿಗೆ ಧಾಳಿ ನಡೆಸಿ ಪರಿಶೀಲನೆ ನಡೆಸಿದರು.10 ಹೋಟೆಲ್ ಗಳು ತೀವ್ರ ಕಳವಳಕಾರಿ ಕಳಪೆ ಗುಣಮಟ್ಟದ ನಿರ್ವಹಣೆಯನ್ನು ಗುರುತಿಸಿ ನೊಟೀಸ್ […]

ಎಂಡೋ ಸಂತ್ರಸ್ಥ ಪ್ರದೇಶಗಳಿಗೆ ಭೇಟಿ ನೀಡಿದ ಪಿಣರಾಯಿ ವಿಜಯನ್

Sunday, January 17th, 2016
endo victims

ಪೆರ್ಲ: ಸಿಪಿಎಂ ಪ್ಯಾಲಿಟ್ ಬ್ಯೂರೋ ಸದಸ್ಯ,ರಾಜ್ಯ ಕಾರ್ಯದರ್ಶಿ ಪಿಣರಾಯಿ ವಿಜಯನ್ ಎಂಡೋ ಸಂತ್ರಸ್ಥ ಪ್ರದೇಶಗಳಾದ ಎಣ್ಮಕಜೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಡ್ರೆ, ಸ್ವರ್ಗ, ವಾಣೀನಗರ, ಬೋವಿಕ್ಕಾನ ಬಡ್ಸ್ ಕೇಂದ್ರಗಳ ಸಹಿತ ವಿವಿಧ ಪ್ರದೇಶಗಳನ್ನು ಗುರುವಾರ ಸಂದರ್ಶನ ನಡೆಸಿದರು. ತಮ್ಮ ಭೇಟಿಯ ಆರಂಭದಲ್ಲಿ ಪೆರ್ಲ ಕನ್ನಟಿಕಾನ ಬಡ್ಸ್ ಶಾಲೆಗೆ ಭೇಟಿ ನೀಡಿದ ಅವರು ಅಲ್ಲಿನ ಭಿನ್ನಚೇತನ ಮಕ್ಕಳಿಗೆ ಹಣ್ಣು ಹಂಪಲು ವಿತರಿಸಿದರು.ಬಳಿಕ ಇತ್ತೀಚೆಗೆ ನಿಧನರಾದ ಸ್ವರ್ಗ ಬೈರಡ್ಕದ ಸಿಪಿಐ ನಾಯಕ ಎಂ.ಕೆ.ಬಾಲಕೃಷ್ಣನ್ ರ ಮನೆಗೆ ಭೇಟಿ ನೀಡಿ ಕುಟುಂಬ […]

ಚಟ್ಟಂಚಾಲ್‌ನಲ್ಲಿ ಅಗ್ನಿ ಅನಾಹುತ: ಪೊಲೀಸ್ ವಶದಲ್ಲಿದ್ದ ವಾಹನಗಳಿಗೆ ಕಿಚ್ಚು

Sunday, January 17th, 2016
fire mishap

ಕಾಸರಗೋಡು : ಚಟ್ಟಂಚಾಲ್ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳ ಡಂಬಿಂಗ್ ಮೈದಾನದಲ್ಲಿ ಶುಕ್ರವಾರ ಉಂಟಾದ ಅಗ್ನಿಅನಾಹುತದಲ್ಲಿ ವಿವಿಧ ಪ್ರಕರಣಗಳಲ್ಲೊಳಗೊಂಡ ಮೂವತ್ತರಷ್ಟು ವಾಹನಗಳು ಅಗ್ನಿಗಾಹುತಿಯಾಗಿವೆ. ವಿದ್ಯಾನಗರ ಪೊಲೀರು ಸ್ವಯಂ ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಶುಕ್ರವಾರ ಮಧ್ಯಾಹ್ನ1.30 ಕ್ಕೆ ಗ್ರೌಂಡ್‌ನ ಒಂದು ಭಾಗದಲ್ಲಿ ಅಗ್ನಿನಾಹುತ ಉಂಟಾಗಿರುವುದು ನಾಗರಿಕರ ಗಮನಕ್ಕೆ ಬಂದಿತ್ತು. ನಂದಿಸಲು ಪ್ರಯತ್ನವೂ ನಡೆದಿತ್ತು. ಆದರೆ ಗಾಳಿಗೆ ಬೆಂಕಿ ಹರಡಿರುವುದರಿಂದ ಕಾಸರಗೋಡಿನ ಲೀಡಿಂಗ್ ಫಯರ್‌ಮ್ಯಾನ್ ಕೆ. ಸತೀಶನ್ ಅವರ ನೇತೃತ್ವದಲ್ಲಿ ಕಾಸರಗೋಡಿನಿಂದ ಎರಡು ಯೂನಿಟ್ ಹಾಗೂ ಕಾಞಂಗಾಡ್‌ನಿಂದ ಒಂದು ಯೂನಿಟ್ […]

ಭಾಷೆಯನ್ನು ಬೆಳೆಸುವುದರ ಮೂಲಕ ಸಂಸ್ಕೃತಿಯನ್ನು ಅರಿಯಲು ಪ್ರಯತ್ನಿಸೋಣ : ಪ್ರೊ.ಪಿ.ಜಿ.ಹರಿದಾಸ್

Sunday, January 17th, 2016
haridas

ಕಾಸರಗೋಡು : ಇಪ್ಪತ್ತೈದು ವರ್ಷಗಳ ಹಿಂದೆ ಮಹಾಕವಿ ಅಕ್ಕಿತ್ತಂನಿಂದ ಸಾಗಿ ಬಂದ ಸಾಂಸ್ಕೃತಿಕ ತೀರ್ಥ ಯಾತ್ರೆ 2016ಜನವರಿ 3 ರಂದು ಕನ್ಯಾಕುಮಾರಿಯಿಂದ ಆರಂಭಗೊಂಡು ಜ.17 ರಂದು ಗೋಕರ್ಣದಲ್ಲಿ ಸಮಾರೋಪಗೊಳ್ಳಲಿದೆ. ಈ ಸಾಗರ ತೀರ್ಥ ಯಾತ್ರೆಯನ್ನು ಕೈಗೊಂಡಿರುವ ತಪಸ್ಯ ಸಾಹಿತ್ಯ ಸಂಘಟನೆಗೆ ಚಿನ್ಮಯ ವಿದ್ಯಾಲಯದಲ್ಲಿ ಭವ್ಯ ಸ್ವಾಗತವನ್ನು ಕೋರಲಾಯಿತು. ನನ್ನ ಭೂಮಿ, ನನ್ನ ಭಾಷೆ, ನನ್ನ ಸಂಸ್ಕೃತಿ ಎಂಬ ಸಂದೇಶ ವಾಕ್ಯಗಳನ್ನು ಹೊತ್ತಿರುವ ತಪಸ್ಯ ಸಾಂಸ್ಕೃತಿಕ ಸಂಘಟನೆ ಸಾಂಸ್ಕೃತಿಕ ಕೇರಳದ ಬೆಟ್ಟಗುಡ್ಡಗಳೂ, ನದಿಗಳೂ ಇಲ್ಲಿ ಹುಟ್ಟಿರುವ ಕವಿಶ್ರೇಷ್ಠರೂ, ಈ […]

ಮಕ್ಕಳಲ್ಲಿ ತಂದೆತಾಯಂದಿರ ಮೇಲಿರುವ ಗೌರವ ಕಡಿಮೆಯಾಗುತ್ತಿದೆ : ಸುಲೋಚನಾ ಭಟ್

Sunday, January 17th, 2016
mathru devobhava

ಉಪ್ಪಳ: ಇತ್ತೀಚೆಗೆ ಮಕ್ಕಳಲ್ಲಿ ತಂದೆತಾಯಂದಿರ ಮೇಲಿರುವ ಗೌರವ ಕಡಿಮೆಯಾಗುತ್ತಿದೆ, ತಾಯಿಯನ್ನು ‘ಮಾತೃದೇವೋಭವ’ ಎಂದು ಹೇಳುತ್ತೇವೆ, ಚಿಕ್ಕ ಮಕ್ಕಳ ಮನಸ್ಸಿನಲ್ಲಿ ನಾವು ಒಳ್ಳೆಯ ಚಿಂತನೆಯನ್ನು ಬೆಳೆಸಿದರೆ ಮುಂದೆ ಅದು ಬೆಳೆದು ಹೆಮ್ಮರವಾಗುತ್ತದೆ, ಮಕ್ಕಳ ಮನಸ್ಸನ್ನು ಅರಳುವ ಸಮಯದಲ್ಲೇ ತಿದ್ದಬೇಕು, ಈ ಹಿನ್ನೆಲೆಯಲ್ಲಿ ಮಾತೃಪೂಜನ-ಮಾತೃಭೋಜನ ಕಾರ್ಯಕ್ರಮವು ಪೂರಕವಾಗಿದೆ ಎಂದು ಕರ್ನಾಟಕ ಬಾಲಭವನ ಸೊಸೈಟಿಯ ಮಾಜಿ ಅಧ್ಯಕ್ಷೆ ಹಾಗೂ ಕರ್ನಾಟಕ ರಾಜ್ಯ ಬಿ.ಜೆ.ಪಿ. ಉಪಾಧ್ಯಕ್ಷೆ ಸುಲೋಚನಾ ಭಟ್ ಅಭಿಪ್ರಾಯ ವ್ಯಕ್ತಪಡಿಸಿದರು. ಕೊಂಡೆವೂರು ಸದ್ಗುರು ಶ್ರೀ ನಿತ್ಯಾನಂದ ವಿದ್ಯಾಪೀಠದಲ್ಲಿ ಇತ್ತೀಚೆಗೆ ನಡೆದ ಮಾತೃಪೂಜನ-ಮಾತೃಭೋಜನ […]

ಸಿಪಿಎಂನ ನವಕೇರಳ ಯಾತ್ರೆಗೆ ಉಪ್ಪಳದಿಂದ ಅದ್ದೂರಿ ಚಾಲನೆ

Sunday, January 17th, 2016
cpm nava kerala jatha

ಉಪ್ಪಳ: ಜಾತ್ಯಾತೀತ, ಭ್ರಷ್ಟಾಚಾರ ಮುಕ್ತ ಅಭಿವೃದ್ಧಿಯ ಕೇರಳ ಎಂಬ ಘೋಷಣೆಯೊಂದಿಗೆ ಸಿಪಿಎಂ ರಾಜ್ಯ ಪ್ರಧಾನ ಕಾರ್ಯದರ್ಶಿ, ಪ್ಯಾಲಿಟ್ ಬ್ಯೂರೋ ಸದಸ್ಯ, ಪಿಣರಾಯಿ ವಿಜಯನ್ ಅವರ ನೇತೃತ್ವದಲ್ಲಿ ಸಂಚರಿಸಲಿರುವ ನವಕೇರಳ ಜಾಥಾಕ್ಕೆ ಶುಕ್ರವಾರ ಸಂಜೆ ಉಪ್ಪಳದಲ್ಲಿ ಅದ್ದೂರಿ ಚಾಲನೆ ನೀಡಲಾಯಿತು. ಸಿಪಿಎಂನ ಮಾಜಿ ಪ್ರಧಾನ ಕಾರ್ಯದರ್ಶಿ, ಪಾಲಿಟ್ ಬ್ಯೂರೋ ಸದಸ್ಯ ಪ್ರಕಾಶ್ ಕಾರಟ್ ಅವರು ಪಿಣರಾಯಿ ವಿಜಯನ್ ಅವರಿಗೆ ಕೆಂಬಾವುಟ ಧ್ವಜ ಹಸ್ತಾಂತರಿಸುವ ಮೂಲಕ ಯಾತ್ರೆಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಪ್ರಕಾಶ್ ಕಾರಟ್ ಅವರು, ಭಷ್ಟಾಚಾರದಿಂದ ಕೂಡಿದ […]