ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ನಿಷೇಧ ಮೂರ್ಖತನದ ನಿರ್ಧಾರ

Saturday, November 24th, 2012
Plastic Bag

ಮಂಗಳೂರು :ದಕ್ಷಿಣ ಕನ್ನಡ ಜಿಲ್ಲಾಡಳಿತ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ನಿಷೇಧ ಎನ್ನುವ ಬೋರ್ಡ್ ತಗಲಿಸಿ ಬಹಳ ದಿನಗಳೇ ಸರಿದು ಹೋದವು.. ಆದರೆ ದಕ್ಷಿಣ ಕನ್ನಡ ಜಿಲ್ಲಾಡಳಿತಕ್ಕೆ ಗೊತ್ತಿಲ್ಲ. ಕರ್ನಾಟಕದ ಮಟ್ಟಿಗೆ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ತಯಾರಿಸುವ ಅತಿ ಹೆಚ್ಚು ಕಂಪೆನಿಗಳು ಇರುವುದು ಮಂಗಳೂರಿನಲ್ಲಿ. ಇದಕ್ಕಾಗಿ ಉದ್ಯಮಿಗಳು ಕೋಟಿಗಳ ರೂಪದಲ್ಲಿ ಬ್ಯಾಂಕ್ ಸಾಲ ಮಾಡಿ ಬಂಡವಾಳ ಹೂಡಿದ್ದಾರೆ. ದ.ಕ. ಜಿಲ್ಲೆಯಲ್ಲಿ ಅಂದಾಜು 50ರಷ್ಟು ಪ್ಲಾಸ್ಟಿಕ್ ತಯಾರಿಕೆ ಘಟಕಗಳು ಮತ್ತು ವರ್ತಕರು ಇದ್ದಾರೆ. ಸುಮಾರು ಐದು ಸಾವಿರ ಮಂದಿ ನೇರವಾಗಿ […]

‘ವರದನಾಯಕ’ನಿಗೆ ದೊಡ್ಡ ಶಕ್ತಿ ಕಿಚ್ಚ ಸುದೀಪ್

Tuesday, November 13th, 2012
Varadanayaka

ಬೆಂಗಳೂರು :’ವರದನಾಯಕ’ ಚಿತ್ರವು ಸುದೀಪ್ ನಾಯಕತ್ವದ ಚಿತ್ರವೇ ಇರಬೇಕು ಎಂದುಕೊಳ್ಳುವಷ್ಟರ ಮಟ್ಟಿಗೆ ‘ವರದನಾಯಕ’ ಚಿತ್ರದ ಪೋಸ್ಟರುಗಳಲ್ಲಿ ಕಿಚ್ಹ ಸುದೀಪ್ ರವರೆ ರಾರಾಜಿಸುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಈ ‘ವರದನಾಯಕ’ ಚಿತ್ರದ ನಾಯಕ ಸುದೀಪ್ ಅವರಲ್ಲ, ಚಿರಂಜೀವಿ ಸರ್ಜಾ. ಚಿತ್ರದಲ್ಲಿ ಸುದೀಪ್ ನಾಯಕ ಚಿರಂಜೀವಿ ಸರ್ಜಾ ಅಣ್ಣನ ಪಾತ್ರದಲ್ಲಿ ನಟಿಸಿದ್ದಾರೆ. ಇದೇ ಹಿನ್ನೆಲೆಯಲ್ಲಿ ಕೋಟಿ ಕೋಟಿ ರೂಪಾಯಿಗಳನ್ನು ಬಿಡುಗಡೆಗೆ ಮೊದಲೇ ಚಿತ್ರ ಬಾಚಿಕೊಂಡಿದೆ. ಇಲ್ಲಿ ಚಿತ್ರದ ನಾಯಕ ಚಿರಂಜೀವಿ ಸರ್ಜಾ ಆದರೂ ಕಿಚ್ಹ ಸುದೀಪ್ ರವರೆ ಪೋಸ್ಟರ್ ಗಳಲ್ಲಿ ಮಿಂಚುತ್ತಿದ್ದಾರೆ. […]

ದೀಪಗಳ ಹಬ್ಬ ದೀಪಾವಳಿಯಲ್ಲಿ ಕತ್ತಲು ಬದುಕಿಗೆ ಬೆಳಕು ಮೂಡಲಿ

Tuesday, November 13th, 2012
Mahabaaratha

ಮಂಗಳೂರು :ಹಬ್ಬ ಎಂದಾಕ್ಷಣ ಮುಖ್ಯವಾಗಿ ನೆನಪಿಗೆ ಬರುವುದೇ ದೀಪಾವಳಿ. ಬಹುಶಃ ಪಟಾಕಿ ಸಿಡಿಸಲು ಅವಕಾಶವಿದೆ ಎಂಬ ಕಾರಣಕ್ಕೆ ಬಾಲ್ಯದಿಂದಲೂ ಮಕ್ಕಳಿಗೆ ಅತ್ಯಂತ ಪ್ರಿಯವಾಗಿ ಬಿಟ್ಟಿರುವುದೇ ಮನದಂಗಳದಲ್ಲಿ ಈ ಮನಸ್ಥಿತಿ ಚಿರಸ್ಥಾಯಿಯಾಗಲು ಕಾರಣವೂ ಇರಬಹುದು. ಸಮಾಜದ ಎಲ್ಲ ವರ್ಗದವರೂ, ಜಾತಿ-ಸಮುದಾಯದವರೂ ಭೇದ-ಭಾವ ಮರೆತು ಭ್ರಾತೃತ್ವ, ಸೌಹಾರ್ದತೆಯ ಪ್ರತೀಕವಾಗಿ ಆಚರಿಸುವ ಹಬ್ಬಗಳಲ್ಲಿ ಅತ್ಯಂತ ಪ್ರಮುಖವಾದದ್ದು ಕೂಡ ದೀಪಾವಳಿಯೇ. ಪ್ರತಿಯೊಂದು ಹಬ್ಬವೂ ತನ್ನದೇ ಆದ ಸಂದೇಶವನ್ನು ಸಾರುತ್ತದೆ. ಅದೇ ರೀತಿ ದೀಪಾವಳಿ ಕೂಡ ಅಜ್ಞಾನದ ಕತ್ತಲನ್ನು ಹೋಗಲಾಡಿಸಿಕೊಳ್ಳುವ ಮನಸ್ಸು ಬೆಳೆಸಿಕೊಳ್ಳಬೇಕೆಂಬ ಸಂದೇಶ […]

ಮಂಗಳೂರು ರಾಜೋತ್ಸವ ಆಚರಣೆಗೆ ಎಸ್.ಎಫ್.ಐ. ಕಾರ್ಯಕರ್ತರಿಂದ ಅಡ್ಡಿ; ಬಂಧನ

Thursday, November 1st, 2012
Rajyotsava Lathi Charge

ಮಂಗಳೂರು :  ಜಿಲ್ಲಾಡಳಿತದ ವತಿಯಿಂದ ನಗರದ ನೆಹರೂ ಮೈದಾನದಲ್ಲಿ ಏರ್ಪಡಿಸಿದ್ದ ರಾಜೋತ್ಸವದಲ್ಲಿ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ರಾಜ್ಯೋತ್ಸವದ ಸಂದೇಶ ನೀಡಲು ಪ್ರಾರಂಬಿಸುತ್ತಿದ್ದಂತೆ ಮೈದಾನದ ಹೊರಗಿನಿಂದ ರಾಜ್ಯ ಸರಕಾರದ ವಿರುದ್ದ ಘೋಷಣೆಗಳನ್ನು ಕೂಗುತ್ತ ಒಳ ಪ್ರವೇಶಿಸಿದ ಎಸ್.ಎಫ್.ಐ. ಕಾರ್ಯಕರ್ತರು, ಕನ್ನಡ ಶಾಲೆಗಳನ್ನು ಮುಚ್ಚಲು ಹೊರಟಿರುವ ರಾಜ್ಯ ಸರಕಾರಕ್ಕೆ ರಾಜ್ಯೋತ್ಸವ ಆಚರಿಸುವ ಅರ್ಹತೆಯಿಲ್ಲ ಎಂದು ಘೋಷಣೆ ಕೂಗುತ್ತ ರಾಜೋತ್ಸವ ಆಚರಣೆಗೆ ಅಡ್ಡಿಪಡಿಸಲು ಮುಂದಾದರು. ಕಾರ್ಯಕರ್ತರು ದೆಹಲಿ ವಿಶ್ವವಿದ್ಯಾನಿಲಯದ ಉಪನ್ಯಾಸಕ ಪ್ರೊ.ಗೋವಿಂದ ತನ್ನ ವರದಿಯಲ್ಲಿ ವಿದ್ಯಾರ್ಥಿಗಳ ಕೊರತೆಯಿದೆ […]

ತೆಳ್ಳಗಾಗಲು ಆರೋಗ್ಯಕರ 10 ಟಿಪ್ಸ್

Saturday, October 27th, 2012
Weight loses tips

ದೇಹದ ತೂಕವನ್ನು ಸಮತೋಲನದಲ್ಲಿ ಇಡಬೇಕು. ದಪ್ಪವಾದರೆ ದೇಹದ ಸುಂದರ ಆಕಾರ ಹಾಳಾಗುವುದು ಮಾತ್ರವಲ್ಲ ಅನೇಕ ಕಾಯಿಲೆಗಳು ಬರಲಾರಂಭಿಸುತ್ತದೆ. ಕೆಲವರು ಸಣ್ಣಗಾಗಲು ಡಯಟ್ ಮಾಡಿ ತೆಳ್ಳಗಾಗುತ್ತಾರೆ, ಆದರೆ ಆ ಡಯಟ್ ನಿಲ್ಲಿಸಿದ ಸ್ವಲ್ಪ ದಿನದಲ್ಲಿಯೇ ಪುನಃ ದಪ್ಪಗಾಗುತ್ತಾರೆ. ಇನ್ನು ಕಟ್ಟುನಿಟ್ಟಿನಡಯಟ್ ಮಾಡಿದರಂತೂ ಪಥ್ಯದಲ್ಲಿರುವಂತೆ ಅನಿಸುವುದು, ಆದರೆ ಬಾಯಿಗೆ ರುಚಿಕರವಿಲ್ಲದೆ ಡಯಟ್ ಬಗ್ಗೆ ಬೇಸರಿಕೆ ಬಂದು ಬಿಡುತ್ತದೆ. ಆದರೆ ಈ ಕೆಳಗೆ ಸಮತೂಕಕ್ಕಾಗಿ 10 ಟಿಪ್ಸ್ ಹೇಳಲಾಗಿದೆ. ಅದನ್ನು ಪಾಲಿಸಿದರೆ ಪಥ್ಯವನ್ನು ಪಾಲಿಸಬೇಕಾಗಿಲ್ಲ, ಇಲ್ಲಿ ಹೇಳಿರುವ ಟಿಪ್ಸ್ ಗಳನ್ನು ಗಮನದಲ್ಲಿಟ್ಟು […]

ಕರಾವಳಿಯಲ್ಲಿ ತಣ್ಣಗೆ ಅಲುಗಾಡಿಸಿದ ಭೂಕಂಪ ಪ್ರಳಯದ ಸೂಚನೆಯಾ?

Friday, October 26th, 2012
Apocalypse in Karavali

ಮಂಗಳೂರು : 2012ಕ್ಕೆ ಪ್ರಳಯ ಅಂತೇ ಹೌದಾ ಎಂಬ ಪ್ರಶ್ನೆಗಳು ಈಗ ಎಲ್ಲೆಡೆ ಹರಿದಾಡುತ್ತಿದೆ. ರಾಜ್ಯದಲ್ಲಿ ಅದರಲ್ಲೂ ಪರಶುರಾಮನ ಸೃಷ್ಟಿ ಎಂದೇ ಕರೆಯಲಾಗುವ ಕರಾವಳಿಯ ನಾನಾ ಭಾಗಗಳಲ್ಲಿ ಈ ಭೂಕಂಪನದ ಅನುಭವ ಶ್ರೀಸಾಮಾನ್ಯನಿಗೂ ಆಗಿದೆ. ಈ ಮೂಲಕ 2012ರಲ್ಲಿ ಜಗತ್ತಿನ ವಿನಾಶ ಅರ್ಥಾತ್ ಪ್ರಳಯದ ಮೂನ್ಸೂಚನೆಯೇ ಈ ಭೂಕಂಪನದ ಮೂಲಕ ಬಂದಿದೆಯೇ ಎನ್ನುವ ಪ್ರಶ್ನೆ ಎದುರಾಗಿದೆ. ಅಂದಹಾಗೆ ಎಲ್ಲಿ ಧಾರ್ಮಿಕ ನಂಬಿಕೆಗಳು ಪ್ರಬಲವಾದ ಅಸ್ತಿತ್ವವನ್ನು ಹೊಂದಿರುತ್ತವೆಯೋ ಅಲ್ಲೆಲ್ಲ ಅವುಗಳ ಪರಿಣಾಮವೂ ಸಹಾತೀವ್ರವಾಗಿಯೇ ಆಗುತ್ತಿದೆ. ಅಸಲಿಗೆ ಇಂತಹದ್ದೊಂದು ಪ್ರಶ್ನೆ […]

‘ಸ್ನೇಹಿತರು’

Friday, October 26th, 2012
Snehitharu

ಕೆ ರಾಮ್ ನಾರಾಯಣ್ ನಿರ್ದೇಶನದ ‘ಸ್ನೇಹಿತರು’ ಚಿತ್ರದ ಮೊದಲ ಶೋಗೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅನಾಥ ಮಕ್ಕಳನ್ನು ಪ್ರೀತಿಸಬೇಕು, ಅಪ್ಪ-ಅಮ್ಮ ಇಲ್ಲದ ಅವರಿಗೆ ಆ ಪ್ರೀತಿಯನ್ನು ತೋರಿಸಿ ಮಾನವೀಯತೆ ಮೆರೆಯಬೇಕು ಅನಾಥ ಮಕ್ಕಳಿಗೆ ಪ್ರೀತಿ, ದಯೆ, ಅನುಕಂಪ ತೋರಿಸದೇ ಬೇರೇನೋ ಮಾಡಲು ಹೊರಟರೆ ಏನೇನಾಗುತ್ತದೆ , ಎಂಬುದು ಕಥೆಯ ಒನ್ ಲೈನ್ ಸ್ಟೋರಿ. ಈ ಚಿತ್ರದಲ್ಲಿ ಹಾಸ್ಯ ಹೇರಳವಾಗಿದೆ. ಸಿನಿಮಾ ನಿರೂಪಣೆ ಎಲ್ಲವೂ ಹಿತಮಿತವಾಗಿ ಸಂಗಮಿಸಿದ್ದು ಪ್ರೇಕ್ಷಕರು ಕೊಟ್ಟ ಕಾಸಿಗೆ ಮೋಸದ ಮಾತೇ ಇಲ್ಲ. ಗೌರವ ಪಾತ್ರದಲ್ಲಿ […]

ಕರಾವಳಿಯಲ್ಲಿ ಪುರುಷರೇ ಬಂಜೆಯರು !

Wednesday, October 24th, 2012
Banje

ಮಂಗಳೂರು : ದೇಶದಲ್ಲಿ ಬಂಜೆ ಪುರಷರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಮಂಗಳೂರು ನಗರವೊಂದರಲ್ಲೇ ಕಳೆದ ಕೆಲವು ವರ್ಷಗಳ ಪರೀಕ್ಷೆಯಲ್ಲಿ ಶೇಕಡಾ 40 ಪುರುಷರು ಸಂತಾನೋತ್ಪತ್ತಿಗೆ ವಿಫಲರಾಗಿರುವ ಆತಂಕಕಾರಿ ಅಂಶವೊಂದನ್ನು ವೈದ್ಯರೊಬ್ಬರು ಬಹಿರಂಗ ಪಡಿಸಿದ್ದಾರೆ. `ಒಂದು ಕಾಲದಲ್ಲಿ ದಂಪತಿಯೊಂದು ಮಗುವನ್ನು ಪಡೆಯಲು ವಿಫಲವಾಗಿದ್ದರೆ ಅದಕ್ಕೆ ಹೆಣ್ಮಕ್ಕಳೇ ಕಾರಣ ಎಂದು ಪರಿಗಣಿಸಲಾಗುತ್ತಿತ್ತು. ಆದರೆ ಈಗ ಈ ಪರಿಕಲ್ಪನೆ ಬದಲಾಗಿದ್ದು, ವೈದ್ಯರು ಹೇಳುವ ಪ್ರಕಾರ ಶೇಕಡಾ 40ಕ್ಕಿಂತಲೂ ಅಧಿಕ ಪ್ರಕರಣಗಳಲ್ಲಿ ಪುರುಷನೇ ಬಂಜೆಯಾಗಿರುವುದು ಪತ್ತೆಯಾಗಿದೆ. ಹಿಂದೆ ಬಹುತೇಕ ಟ್ರಕ್ ಡ್ರೈವರ್ […]

ಪಡುಬಿದ್ರಿ : ರಾಷ್ಟೀಯ ಹೆದ್ದಾರಿ 66 ರಲ್ಲಿ ಭೀಕರ ರಸ್ತೆ ಅಪಘಾತ ನಾಲ್ವರ ಸಾವು

Tuesday, October 16th, 2012
Mishape Tenka Ermal

ಉಡುಪಿ: ಸೋಮವಾರ ರಾತ್ರಿ ಸುಮಾರು  8.45 ರ ವೇಳೆಗೆ ಪಡುಬಿದ್ರಿಯ ತೆಂಕ ಎರ್ಮಾಳು ಬಳಿ ಟಾಟಾಸುಮೊ ಹಾಗೂ ಗ್ಯಾಸ್ ಸಿಲಿಂಡರ್ ಇದ್ದ ಲಾರಿಯ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಐವರು ಗಂಭೀರವಾಗಿ ಗಾಯಗೊಂಡರೆ, ನಾಲ್ವರು ಮೃತಪಟ್ಟಿದ್ದಾರೆ. ತೀವ್ರ ಗಾಯಗೊಂಡ ಉಳಿದ ನಾಲ್ವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಟಾಟಾಸುಮೊದಲ್ಲಿದ್ದವರು ಕೇರಳದವರಾಗಿದ್ದು ಒಂದೇ ಕುಟುಂಬದ ಸದಸ್ಯರೆಂದು ತಿಳಿದು ಬಂದಿದ್ದು. ಕೊಲ್ಲೂರು ಶ್ರೀ ಮೂಕಾಂಬಿಕ ದೇವಸ್ಥಾನಕ್ಕೆ ನವರಾತ್ರಿ ಆಚರಣೆಯಲ್ಲಿ ಭಾಗವಹಿಸಲು ತೆರಳುತ್ತಿದ್ದ ಸಂದರ್ಭ ಈ ಭೀಕರ ಅಪಘಾತ ಸಂಭವಿಸಿದೆ. […]

ವೃತ್ತಿಶಿಕ್ಷಣ ಕೋರ್ಸ್‌ಗಳ ಶುಲ್ಕ ಶೇ 10ರಷ್ಟು ಹೆಚ್ಚಳ

Sunday, April 1st, 2012
Student

ಬೆಂಗಳೂರು: ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಕಾಮೆಡ್- ಕೆ, ಖಾಸಗಿ ಎಂಜಿನಿಯರಿಂಗ್, ವೈದ್ಯಕೀಯ ಕಾಲೇಜುಗಳ ಆಡಳಿತ ಮಂಡಳಿಗಳ ಪದಾಧಿಕಾರಿಗಳು ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ವೈದ್ಯಕೀಯ/ದಂತ ವೈದ್ಯಕೀಯ, ಎಂಜಿನಿಯರಿಂಗ್ ಮತ್ತಿತರ ವೃತ್ತಿಶಿಕ್ಷಣ ಕೋರ್ಸ್‌ಗಳ ಶುಲ್ಕವನ್ನು ಶೇ 10ರಷ್ಟು ಹೆಚ್ಚಿಸಲು ಹಾಗೂ ಕಳೆದ ಸಾಲಿನ ಸೀಟು ಹಂಚಿಕೆ ಪ್ರಮಾಣವನ್ನೇ 2012-13ನೇ ಸಾಲಿಗೂ ಮುಂದುವರಿಸಲು ತೀರ್ಮಾನಿಸಲಾಗಿದೆ. ಶುಲ್ಕ ಹೆಚ್ಚಳ ಪದವಿ ಮತ್ತು ಸ್ನಾತಕೋತ್ತರ ವೈದ್ಯಕೀಯ/ದಂತ ವೈದ್ಯಕೀಯ, ಎಂಜಿನಿಯರಿಂಗ್, ವಾಸ್ತುಶಿಲ್ಪ ಸೇರಿದಂತೆ ಎಲ್ಲ ಕೋರ್ಸ್‌ಗಳಿಗೂ ಅನ್ವಯವಾಗಲಿದೆ. ಸೀಟು […]