ಬೊಳ್ಳಿಲು ತುಳು ಚಿತ್ರದ ಧ್ವನಿಸುರುಳಿ ಬಿಡುಗಡೆ

Friday, October 30th, 2015
Bollilu CD

ಮಂಗಳೂರು: ವಿಜಯದಶಮಿಯಂದು ಬೊಳ್ಳಿಲು ಚಲನಚಿತ್ರದ ಆಡಿಯೋ ಸಿ.ಡಿಯನ್ನು ಯುವಜನ, ಕ್ರೀಡಾ ಹಾಗೂ ಮೀನುಗಾರಿಕಾ ಮಂತ್ರಿಗಳಾದ ಅಭಯಚಂದ್ರ ಜೈನ್ ಇವರು ಬಿಡುಗಡೆಗೊಳಿಸಿದರು. ಮಿತ್ರ ಹೆರಾಜೆ (ರಿಟೈರ್ಡ್ ಸೂಪರಿಡೆಂಟ್ ಆಫ್ ಪೋಲಿಸ್) ಮಂಗಳಾದೇವಿ ಕ್ರಿಯೇಶನ್ಸ್ ನಿರ್ಮಿಸುತ್ತಿರುವ ಶ್ರೀಮತಿ ಶಶಿಕಲಾ ರಾಜಶೇಖರ ಮಂಗಳಾನಗರ ಇವರ ದುರಂತ ಪ್ರೀತಿ ಕಾದಂಬರಿಯನ್ನಾಧರಿತ ಬೊಳ್ಳಿಲು ಶರತ್ ಚಂದ್ರ ಕುಮಾರ್ ಕದ್ರಿ ಇವರ ನಿರ್ದೇಶನದಲ್ಲಿ ಮೂಡಿಬಂದಿದೆ. ಜಿತಿನ್ ಶ್ಯಾಮ್ ಮುಂಬೈ ಇವರ ಸಂಗೀತ ನಿರ್ದೇಶನದಲ್ಲಿ ೫ ಹಾಡುಗಳು ಸುಂದರವಾಗಿ ಮೂಡಿ ಬಂದಿದೆ. ಬಾಲಿವುಡ್‌ನ ಖ್ಯಾತ ಗಾಯಕರುಗಳಾದ ವಿನೋದ್ […]

ಹೆಗ್ಗಡೆಯವರ ಮೇಲೆ ಅವಹೇಳನಕಾರಿ ಪ್ರಚಾರ ವಿರುದ್ಧ ಕ್ರಮ ಕೈಗೊಳ್ಳಲು ಆಗ್ರಹ

Friday, October 30th, 2015
Guruvayanakere samithi

ಬೆಳ್ತಂಗಡಿ : ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ಸಮಾಜಮುಖಿ ಕಾರ್ಯಕ್ರಮಗಳನ್ನು ಅವಹೇಳನಕಾರಿಯಾಗಿ ಬಿಂಬಿಸುವ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಗುರುವಾಯನಕೆರೆ ನಾಗರಿಕ ಸೇವಾ ಸಮಿತಿ ಮತ್ತು ಸಮಾನಾಸಕ್ತ ಸಂಘಟನೆಗಳ ನಿಯೋಗವೊಂದು ಸಹಾಯಕ ಆಯುಕ್ತರಲ್ಲಿ ಭೇಟಿ ಮಾಡಿತು. ಹೆಗ್ಗಡೆಯವರ ವಿರುದ್ಧ ಅಪಪ್ರಚಾರ ಮಾಡದಂತೆ ಬೆಳ್ತಂಗಡಿ ಮುನ್ಸಿಫ್‌ಕೋರ್ಟಿನ ತಡೆಯಾಜ್ಞೆಯಿದ್ದರೂ ದಿನಕ್ಕೊಂದು ಹೊಸ ಸುಳ್ಳನ್ನು ಹರಡುತ್ತಿರುವ ನಾಗರಿಕ ಸೇವಾ ಟ್ರಸ್ಟ್, ಮತ್ತಿತರ ವ್ಯಕ್ತಿಗಳ ಮೇಲೆ ಕಾನೂನು ಕ್ರಮಕೈಗೊಳ್ಳಬೇಕೆಂದು ನಿಯೋಗವು ಸಹಾಯಕ ಆಯುಕ್ತರನ್ನು ಭೇಟಿ ಮಾಡಿ ಮನವಿಯನ್ನು ಸಲ್ಲಿಸಲಾಯಿತು. […]

ನೆಹರೂ ಮೈದಾನದಲ್ಲಿ ಮಾಜಿ ಪ್ರಧಾನಿ ದಿ| ಜವಾಹರಲಾಲ್‌ ನೆಹರೂ ಅವರ ಪ್ರತಿಮೆ ಸ್ಥಾಪನೆ

Friday, October 30th, 2015
Neharu Maidan

ಮಂಗಳೂರು: ಮಂಗಳೂರಿನ ಹೃದಯಭಾಗದ ನೆಹರೂ ಮೈದಾನದ ಧ್ವಜ ಸ್ತಂಭದ ಬಳಿ ಜವಾಹರಲಾಲ್‌ ನೆಹರೂ ಅವರ ಪ್ರತಿಮೆ ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ತಿಳಿಸಿದ್ದಾರೆ. ನೆಹರೂ ಅವರ ಪ್ರತಿಮೆ ನಿರ್ಮಾಣದ ಕುರಿತು ಮಂಗಳವಾರ ಮೈದಾನದಲ್ಲಿ ಸ್ಥಳ ಪರಿಶೀಲನೆ ನಡೆಸಿದ ಸಚಿವರು ಅಧಿಕಾರಿಗಳ ಜತೆ ವಿಸ್ತೃತವಾಗಿ ಚರ್ಚೆ ನಡೆಸಿದರು. ನೆಹರೂ ಅವರ 125ನೇ ಜನ್ಮ ದಿನಾಚರಣೆ ಅಂಗವಾಗಿ ಮೈದಾನದ ನೆಹರೂ ಮೈದಾನದಲ್ಲಿ ಪ್ರತಿಮೆ ಸ್ಥಾಪಿಸಲಾಗುತ್ತದೆ. ಇಲ್ಲಿ ನಡೆಯುವ ಕ್ರೀಡಾ ಚಟುವಟಿಕೆ ಹಾಗೂ […]

ಲಿಪ್ಫ್ ಕೊಟ್ಟು ರೇಪ್ ಆಂಡ್ ಮರ್ಡರ್ ಮಾಡಿದವನಿಗೆ ಮರಣದಂಡನೆ

Friday, October 30th, 2015
Rape Murder

ಮುಂಬೈ: ಟೆಕ್ಕಿ ಎಸ್ತರ್ ಅನೂಹ್ಯಾ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಆರೋಪಿ ಚಂದ್ರಬಾನ್ ಸನಾಪ್ ಗೆ ಮುಂಬೈ ಕೋರ್ಟ್ ಶುಕ್ರವಾರ ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿ, ಇದು ಅತ್ಯಪರೂಪ ಪ್ರಕರಣವಾಗಿದ್ದು, ಆರೋಪಿಗೆ ಗಲ್ಲುಶಿಕ್ಷೆಯೇ ಸೂಕ್ತವಾದದ್ದು ಎಂದು ಅಭಿಪ್ರಾಯವ್ಯಕ್ತಪಡಿಸಿದೆ. 2014ರ ಜನವರಿ 5ರಂದು ಆಂಧ್ರಪ್ರದೇಶದ ವಿಶಾಖಪಟ್ಟಣಂನಿಂದ ಅನೂಹ್ಯಾ ಮುಂಬೈಗೆ ಆಗಮಿಸಿದ್ದರು. ಆ ಸಂದರ್ಭದಲ್ಲಿ ಲೋಕಮಾನ್ಯ ತಿಲಕ್ ರೈಲ್ವೆ ನಿಲ್ದಾಣದ ಬಳಿ ಅನೂಹ್ಯಳಿಗೆ ತಾನು ತನ್ನ ಬೈಕ್ ನಲ್ಲಿ ಲಿಫ್ಟ್ ಕೊಡುವುದಾಗಿ ತಿಳಿಸಿದ್ದ. ಸನಾಪ್ ಮಾತನ್ನು ನಂಬಿ ಬೈಕ್ ನಲ್ಲಿ […]

ಕರ್ನಾಟಕ ನ್ಯಾಯ ಮಂಡಳಿ ಅಧ್ಯಕ್ಷರಾಗಿ ಮೂಸಾ ಕುಂಞಿ

Tuesday, October 27th, 2015
Nayarmoole

ಮಂಗಳೂರು: ಕರ್ನಾಟಕ ಆಡಳಿತ ನ್ಯಾಯ ಮಂಡಳಿಯ ನ್ಯಾಯಾಂಗ ಸದಸ್ಯರಾಗಿ ಸೇವೆ ಸಲ್ಲಿಸುತ್ತಿರುವ ಮೂಸಾ ಕುಂಞಿ ನಾಯರ್‌ಮೂಲೆ ಅವರನ್ನು ಕರ್ನಾಟಕ ನ್ಯಾಯ ಮಂಡಳಿ(ಕೆಎಟಿ)ಯ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಿ ಸರಕಾರ ಅಸೂಚನೆ ಹೊರಡಿಸಿದೆ. ಬಂಟ್ವಾಳ ತಾಲೂಕಿನ ಮಾಣಿಲ ಗ್ರಾಮದ ಮೂಸಾ ಕುಂಞಿ, ಮಂಗಳೂರಿನಲ್ಲಿ ವಕೀಲಿ ವೃತ್ತಿ ನಡೆಸುತ್ತಿದ್ದಾಗ 1983 ರಲ್ಲಿ ನ್ಯಾಯಾಂಗ ಸೇವೆಗೆ ಆಯ್ಕೆಯಾಗಿ, ರಾಜ್ಯದ ವಿವಿಧೆಡೆಗಳಲ್ಲಿ ನ್ಯಾಯಾಶರಾಗಿ ಕರ್ತವ್ಯನಿರ್ವಹಿಸಿದ್ದರು. ಜಿಲ್ಲಾ ನ್ಯಾಯಾಶರ ಹುದ್ದೆಯಲ್ಲಿದ್ದಾಗ ಕರ್ನಾಟಕ ಲೋಕಾಯುಕ್ತದ ರಿಜಿಸ್ಟ್ರಾರ್ ಆಗಿಯೂ ಕಾರ್ಯನಿರ್ವಹಿಸಿದ್ದರು. ೨೦೧೧ರಿಂದ ರಾಜ್ಯ ಆಡಳಿತ ನ್ಯಾಯ ಮಂಡಳಿಯ ನ್ಯಾಯಾಂಗ […]

ಎಂ.ಎಸ್.ರುದ್ರೇಶ್ವರ ಸ್ವಾಮಿ ಅವರಿಗೆ ಮುದ್ದಣ ಕಾವ್ಯ ಪ್ರಶಸ್ತಿ

Tuesday, October 27th, 2015
Rudreshwara

ಮೂಡುಬಿದಿರೆ: ಕಾಂತಾವರ ಕನ್ನಡ ಸಂಘದ ಪಠೇಲ್ ಪುನರೂರು ವಾಸುದೇವರಾವ್ ಟ್ರಸ್ಟ್ ನ ಪ್ರಾಯೋಜಕತ್ವದ 2015ರ ಸಾಲಿನ ಪ್ರತಿಷ್ಠಿತ ಮುದ್ದಣ ಕಾವ್ಯ ಪ್ರಶಸ್ತಿ ಎಂ.ಎಸ್.ರುದ್ರೇಶ್ವರ ಸ್ವಾಮಿ ಅವರ ‘ಅವಳ ಕವಿತೆ’ ಎಂಬ ಕವನಸಂಕಲನ ಹಸ್ತಪ್ರತಿ ಯು ಗೆದ್ದುಕೊಂಡಿದೆ ಎಂದು ಸಂಘದ ಅಧ್ಯಕ್ಷ ಡಾ. ನಾ.ಮೊಗಸಾಲೆ ಘೋಷಿಸಿದ್ದಾರೆ. ಎಂ.ಎಸ್. ರುದ್ರೇಶ್ವರ ಸ್ವಾಮಿ ಅವರು ದಾವಣಗೆರೆ ಮೂಲದವರಾಗಿದ್ದು ಮೈಸೂರು ವಿ.ವಿಯಿಂದ ಸ್ನಾತಕೋತ್ತರ ಪದವಿ ಪಡೆದು ಅಂಚೆ ಇಲಾಖೆಯಲ್ಲಿ ದಕ್ಷ ಸೇವೆ ಸಲ್ಲಿಸಿದವರಾಗಿದ್ದು ಅದಕ್ಕಾಗಿ ಡಾಕ್ ಸೇವಾ ಪ್ರಶಸ್ತಿ ಪಡೆದಿದ್ದಾರೆ. ಸಹಾಯಕ ಪೋಸ್ಟ್ […]

ರಾಘವೇಶ್ವರ ಶ್ರೀಗಳ ಮಾನಹಾನಿ ಪ್ರಕರಣಕ್ಕೆ ಖಂಡನೆ

Monday, October 26th, 2015
Ragava

ವೇಣೂರು: ಹೊಸನಗರ ಶ್ರೀರಾಮಚಂದ್ರಾಪುರ ಮಠದ ಶ್ರೀಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿಗಳ ವಿರುದ್ಧ ಮಾಡಲಾಗುತ್ತಿರುವ ಆರೋಪಗಳು ಸತ್ಯಕ್ಕೆ ದೂರವಾದದ್ದು, ಶ್ರೀಗಳ ಮಾನಹಾನಿ ಹಾಗೂ ಪೀಠತ್ಯಾಗವನ್ನೇ ಗುರಿಯಾಗಿಟ್ಟುಕೊಂಡು ಮಾಡುತ್ತಿರುವ ಒಂದು ವ್ಯವಸ್ಥಿತ ತಂತ್ರವಾಗಿರುತ್ತದೆ ಎಂದು ಉಪ್ಪಿನಂಗಡಿ ಹವ್ಯಕ ಮಂಡಲದ ಅಧ್ಯಕ್ಷ ಬಾಲ್ಯಶಂಕರಭಟ್ ಮತ್ತು ಕಾರ್ಯದರ್ಶಿ ಅಶೋಕ್ ಕೆದ್ಲ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಶ್ರೀಗಳ ಪರವಾಗಿದ್ದ ಶಿಷ್ಯ ಭಕ್ತಸಮೂಹದವರಿಗೆ ಸುಳ್ಳನ್ನೇ ಸತ್ಯವೆಂದು ಬಿಂಬಿಸುವ ಪ್ರಯತ್ನವನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಶ್ರೀಗಳ ಪರವಾಗಿ ಸಿಐಡಿ ತನಿಖಾ ವೇಳೆ ಸಾಕ್ಷಿ ನುಡಿದ ವ್ಯಕ್ತಿಗಳು ಈಗ […]

ಕುದ್ರೋಳಿ : 17 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿದ ‘ಗೌರಿ ಮಂಟಪ’ ಸಮರ್ಪಣೆ

Friday, October 23rd, 2015
Gowri Mantapa

ಮಂಗಳೂರು: ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ಹಾಗೂ ಮಾಲತಿ ಪೂಜಾರಿ ದಂಪತಿ ಪುತ್ರ ಸಂತೋಷ್‌ ಪೂಜಾರಿ ದಂಪತಿ ಸುಮಾರು 17 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿ, ತನ್ನ ತಾಯಿ ಹೆಸರಿನಲ್ಲಿ ದೇವರಿಗೆ ಅರ್ಪಿಸಿದ ‘ಗೌರಿ ಮಂಟಪ’ವನ್ನು ಮಾಜಿ ಸಚಿವ ಜನಾರ್ದನ ಪೂಜಾರಿ ಹಾಗೂ ಅವರ ಪತ್ನಿ ಬುಧವಾರ ಉದ್ಘಾಟಿಸಿದರು. ಕುದ್ರೋಳಿ ದೇವಸ್ಥಾನ ನವೀಕರಣಗೊಂಡು ಹಾಗೂ ಮಂಗಳೂರು ದಸರಾ ಪ್ರಾರಂಭವಾಗಿ 25 ವರ್ಷ ಸಂದ ಹಿನ್ನೆಲೆಯಲ್ಲಿ ‘ಗೌರಿ ಮಂಟಪ’ ನಿರ್ಮಿಸಲಾಗಿದೆ ಎಂದು ಪೂಜಾರಿ ಹೇಳಿದರು. ಜಯ ಸಿ. […]

ಪರಿಷತ್ ಸದಸ್ಯ ಐವನ್ ಡಿಸೋಜಾ ಅವರ ಮನೆಗೆ ಸೌರಶಕ್ತಿ ಮೇಲ್ಛಾವಣಿ

Friday, October 23rd, 2015
Ivan Solar

ಮಂಗಳೂರು : ವಿಧಾನಪರಿಷತ್ ಸದಸ್ಯ ಐವನ್ ಡಿಸೋಜಾ ಅವರು ತಮ್ಮ ಮನೆಗೆ ಸೌರಶಕ್ತಿ ಮೇಲ್ಛಾವಣಿಯನ್ನು ಅಳವಡಿಸಿದ್ದಾರೆ. ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ, ಶಾಸಕ ಮೊಯಿದೀನ್ ಬಾವಾ ಬುಧವಾರ ಸೌರಶಕ್ತಿ ಮೇಲ್ಛಾವಣಿ ಘಟಕ ಅಳವಡಿಕೆಗೆ ಚಾಲನೆ ನೀಡಿದರು. ಪ್ರತಿದಿನ 47 ಯೂನಿಟ್ ವಿದ್ಯುತ್ ಉತ್ಪಾದನೆ ಮಾಡುವ ಶಕ್ತಿಯನ್ನು ಹೊಂದಿದೆ. ಸುಮಾರು 7.50 ಲಕ್ಷದಿಂದ 8 ಲಕ್ಷ ರೂಪಾಯಿ ತನಕ ವೆಚ್ಚ ಮಾಡಿ, ದಿನವೊಂದಕ್ಕೆ 47 ಯೂನಿಟ್ ವಿದ್ಯುತ್ ಉತ್ಪಾದನೆ ಮಾಡುವ ಘಟಕ ನಿರ್ಮಾಣ ಮಾಡಲಾಗಿದೆ. ಈ ಸೌರಶಕ್ತಿ ಘಟಕದಿಂದ ತಿಂಗಳಿಗೆ ತನ್ನ […]

ದ.ಕ.ಜಿಲ್ಲಾ ಪೊಲೀಸ್ ಫೇಸ್‌ಬುಕ್, ಟ್ವಿಟರ್ ಸೇರಿದಂತೆ ನೂತನ ವೆಬ್ ಸೈಟ್ ಗೆ ಚಾಲನೆ

Sunday, October 18th, 2015
Police website

ಮಂಗಳೂರು : ದ.ಕ.ಜಿಲ್ಲಾ ಪೊಲೀಸ್ ವತಿಯಿಂದ ಹೊಸ ತಂತ್ರಾಂಶಗಳಾದ ಫೇಸ್‌ಬುಕ್, ಟ್ವಿಟರ್ ಸೇರಿದಂತೆ ನೂತನ ವೆಬ್ ಸೈಟ್ ನ್ನು ಶನಿವಾರ ಎಸ್ಪಿ ಕಚೇರಿಯಲ್ಲಿ ದ.ಕ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶರಣಪ್ಪ ಎಸ್.ಡಿ. ಅವರು ಚಾಲನೆ ನೀಡಿದರು. ದ.ಕ. ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆಯುವ ಅಪರಾಧ ಸೇರಿದಂತೆ ವಿವಿಧ ಸುದ್ದಿಗಳ ಬಗ್ಗೆ ಮಾಧ್ಯಮದವರಿಗೆ ಮಾಹಿತಿ ನೀಡುವ ನಿಟ್ಟಿನಲ್ಲಿ ಕಾರ್ಯಾಚರಿಸುತ್ತಿದ್ದ ಜಿಲ್ಲಾ ಪೊಲೀಸ್ ಬ್ಲಾಗ್‌ನಲ್ಲಿ ಇದೀಗ ಸಮಗ್ರ ಮಾಹಿತಿಯನ್ನು ಅಳವಡಿಸಲಾಗಿದ್ದು, ಸಾರ್ವಜನಿಕರು ಕೂಡಾ ಇದರ ಸದುಪಯೋಗ ಪಡೆಯಬಹುದು ಎಂದು ಹೇಳಿದರು. […]