ಬಿಗ್ ಬಜಾರ್ ಗೋದಾಮಿಗೆ ಬೆಂಕಿ, 30 ಕೋಟಿ ನಷ್ಟ

Saturday, February 1st, 2014
Bigbazar godown

ಬೆಂಗಳೂರು : ಬಿಗ್ ಬಜಾರ್ ಗ್ರೂಪ್‍ನ ಗೋದಾಮಿನಲ್ಲಿ ಬೆಂಕಿ ಆಕಸ್ಮಿಕ ಸಂಭವಿಸಿದ್ದು, ಸುಮಾರು 30 ಕೋಟಿ ನಷ್ಟ ಉಂಟಾಗಿದೆ. ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದ 220ಕ್ಕೂ ಹೆಚ್ಚು ಸಿಬ್ಬಂದಿ ಹೊರಗೋಡಿ ಬಂದಿದ್ದರಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ. 12 ಅಗ್ನಿ ಶಾಮಕ ದಳದ ವಾಹನಗಳು ಸತತ ಆರು ಗಂಟೆ ಕಾರ್ಯಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿವೆ. ಆನೇಕಲ್ ಪಟ್ಟಣದ ಇಂಡ್ಲವಾಡಿ ಕ್ರಾಸ್‍ನಲ್ಲಿರುವ ಬಿಗ್ ಬಜಾರ್ ಗ್ರೂಪ್‍ಗೆ ಸೇರಿದ ಫೀಚರ್ ಸಪ್ಲೈ ಗೋದಾಮಿನಲ್ಲಿ ಗುರುವಾರ ಮಧ್ಯಾಹ್ನ 2.30ರ ಸುಮಾರಿನಲ್ಲಿ ಶಾರ್ಟ್ […]

14ನೇ ಶತಮಾನದ ಹೊಯ್ಸಳರ ಕಾಲದ ಶಿಲ್ಪ ಪತ್ತೆ

Friday, January 31st, 2014
Ancient sculptural vestiges

ಕಾಪು: ಸ್ವಾಮಿ ವಿವೇಕಾನಂದ ಜಯಂತಿ ಸಪ್ತಾಹದ ಅಂಗವಾಗಿ ಎಳ್ಳಂಪಳ್ಳಿ ವಿಷ್ಣುಮೂರ್ತಿ ದೇವಾಲಯದ ಸಮೀಪ ಕೈಗೊಂಡ ಪುರಾತತ್ವ ಅನ್ವೇಷಣೆಯಲ್ಲಿ ಹೊಯ್ಸಳರ ಕಾಲದ ಪುರಾತನ ವಿಗ್ರಹದ ಅವಶೇಷಗಳು ಪತ್ತೆಯಾಗಿವೆ ಎಂದು ಶಿರ್ವದ ಮುಲ್ಕಿ ಸುಂದರ್‌ ರಾಮ್‌ ಶೆಟ್ಟಿ ಕಾಲೇಜಿನ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಪ್ರೊ| ಟಿ. ಮುರುಗೇಶಿ ತಿಳಿಸಿದ್ದಾರೆ. 14ನೇ ಶತಮಾನದ ಹೊಯ್ಸಳರ ಕಾಲದ ಶಿಲ್ಪ ಕಲೆಯಾಗಿರಬುಹುದಾದ ಈ ಆಕೃತಿ ಸುಮಾರು 24 ಸೆಂ.ಮೀ. ಉದ್ದದ ಬಳಪದ ಕಲ್ಲಿನ ಪೀಠಭಾಗದ ಮೇಲೆ ಎರಡು ಪಾದದ ಭಾಗ ಮಾತ್ರ […]

ಸದನದಲ್ಲಿ ಆಂಜನೇಯ, ನರೇಂದ್ರ ಸ್ವಾಮಿ ಜಟಾಪಟಿ

Friday, January 31st, 2014
assembly

ಬೆಂಗಳೂರು: ಕೊನೆಯ ದಿನವಾದ ಗುರುವಾರ ವಿಧಾನಸಭೆ ಕಲಾಪದ ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಮತ್ತು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರ ನಡುವೆ ತೀವ್ರ ಜಟಾಪಟಿ ನಡೆದಿದ್ದು, ಸರ್ಕಾರವನ್ನು ಮುಜುಗರ ಉಂಟುಮಾಡಿತು. ಗುರುವಾರದ ಕಲಾಪದಲ್ಲಿ ಮೀಸಲು ಕ್ಷೇತ್ರಗಳ ಶಾಸಕರ ಕುರಿತು ಸಚಿವ ಆಂಜನೇಯ ಅವರು ಆಡಿದ ಮಾತಿನಿಂದ ಅಸಮಾಧಾನಗೊಂಡ ನರೇಂದ್ರಸ್ವಾಮಿ, ಒಂದು ಹಂತದಲ್ಲಿ ಆಂಜನೇಯ ಅವರ ಮೇಲೆ ಏರಿ ಹೋಗುವ ಯತ್ನವನ್ನೂ ಮಾಡಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುವ ಸುಳಿವು ಅರಿತ ಇತರ ಸದಸ್ಯರು ಇಬ್ಬರನ್ನೂ ಸಮಾಧಾನಪಡಿಸಿದರು. ಪ್ರತಿಪಕ್ಷದ ನಾಯಕ ಜಗದೀಶ್‌ […]

ಕರಾವಳಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ರಾಷ್ಟ್ರ ಮಟ್ಟದ ಡಿಸೈನರ್ಸ್ ಫೆಸ್ಟ್ – ಸಂಪನ್ನ

Friday, January 31st, 2014
Karavali college

ಮಂಗಳೂರು : ಕರಾವಳಿ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ರಾಷ್ಟ್ರ ಮಟ್ಟದ ಡಿಸೈನರ್ಸ್ ಫೆಸ್ಟ್ ಡಿಸೈನ್ ಫಿಯೆಸ್ಟ 2014 ಸಮಗ್ರ ಪ್ರಥಮ ಪ್ರಶಸ್ತಿ ರೂ.25000/- ಮತ್ತು ಟ್ರೋಫಿಯನ್ನು ಎಸ್.ಡಿ.ಎಂ. ಮ್ಯಾನೇಜ್ಮೆಂಟ್ ಕಾಲೇಜ್ ಮಂಗಳೂರು ಹಾಗೂ ಸಮಗ್ರ ದ್ವಿತೀಯ ಪ್ರಶಸ್ತಿ ರೂ.15000/- ಮತ್ತು ಟ್ರೋಫಿಯನ್ನು ಶ್ರೀ ರಾಮಕೃಷ್ಣ ಕಾಲೇಜ್ ಮಂಗಳೂರು ಗಳಿಸಿತು. ಕರಾವಳಿ ಕಾಲೇಜುಗಳ ಸಮೂಹದ ಆಡಳಿತ ಮಂಡಳಿ, ಜಿ.ಆರ್ ಎಜ್ಯುಕೇಶನ್ ಟ್ರಸ್ಟ್ (ರಿ.)ನ ಸ್ಥಾಪಕಾಧ್ಯಕ್ಷರಾದ ಶ್ರೀ. ಎಸ್. ಗಣೇಶ್ ರಾವ್ ರವರು ವಿಜೇತರಿಗೆ ಬಹುಮಾನ ವಿತರಿಸಿದರು. ಕರಾವಳಿ ಇನ್ಸ್ಟಿಟ್ಯೂಟ್ […]

ಅತ್ತೂರು ಸಂತ ಲಾರೆನ್ಸರ ಪುಣ್ಯ ಕ್ಷೇತ್ರದ ವಾರ್ಷಿಕ ಮಹೋತ್ಸವ ಗುರುವಾರ ಸಂಜೆ ಸಮಾಪನ

Friday, January 31st, 2014
attur church

ಕಾರ್ಕಳ: ಉಡುಪಿ ಧರ್ಮಾಧ್ಯಕ್ಷ ಅ|ವಂ|ಡಾ| ಜೆರಾಲ್ಡ್‌ ಲೋಬೊ ಅವರ ನೇತೃತ್ವ ದಲ್ಲಿ ಕಳೆದ ಮೂರು ದಿನಗಳಿಂದ ‘ಕ್ರಿಸ್ತಕೇಂದ್ರಿತ ಕುಟುಂಬ: ವಿಶ್ವಾಸದ ತೊಟ್ಟಿಲು’ ಎಂಬ ಸಂದೇಶದೊಂದಿಗೆ ನಡೆಯುತ್ತಿದ್ದ ಅತ್ತೂರು ಸಂತ ಲಾರೆನ್ಸರ ಪುಣ್ಯ ಕ್ಷೇತ್ರದ ವಾರ್ಷಿಕ ಮಹೋತ್ಸವ ಗುರುವಾರ ಸಂಜೆ 5.30ರ ಕೊನೆಯ ದಿವ್ಯ ಬಲಿಪೂಜೆಯೊಂದಿಗೆ ಸಮಾಪನಗೊಂಡಿತು. ಗುರುವಾರ ದೇವಮಾತೆಯ ಬಲಿಪೂಜೆಯ ಬಳಿಕ ಮಾತನಾಡಿದ ಅವರು, ಕುಟುಂಬಗಳು ಸಮಾಜದ, ನಾಡಿನ ಹಾಗೂ ವಿಶ್ವದ ಬುನಾದಿ. ಅದುದರಿಂದ ನಮ್ಮ ಕುಟುಂಬಗಳು ಪಿತ, ಸುತ ಮತ್ತು ಪವಿತ್ರಾತ್ಮದ ದೈವಿಕ ಕುಟುಂಬದಂತೆ. ಏಸು […]

ಜ31ಕ್ಕೆ ನಗರದಲ್ಲಿ `ಎಪ್ಸನ್ ಎನ್ವಿಷನ್’ ತಂತ್ರಜ್ಞಾನ ಉತ್ಸವ

Thursday, January 30th, 2014
epson

ಮಂಗಳೂರು: ಡಿಜಿಟಲ್ ಇಮೇಜಿಂಗ್ ಕ್ಷೇತ್ರದಲ್ಲಿನ ಅಗ್ರಮಾನ್ಯ ಸಂಸ್ಥೆಯಾದ ಎಪ್ಸನ್ ವತಿಯಿಂದ ನಾಳೆ(ಜ.31)ನಗರದ ಹೋಟೆಲ್ ಗೇಟ್ ವೇ ಯಲ್ಲಿ `ಎಪ್ಸನ್ ಎನ್ವಿಷನ್’ ತಂತ್ರಜ್ಞಾನ ಉತ್ಸವವನ್ನು ಪೂರ್ವಾಹ್ನ 10ರಿಂದ ಸಂಜೆ 7ರವರೆಗೆ ಆಯೋಜಿಸಲಾಗಿದೆ. ಉತ್ಸವದಲ್ಲಿ ಪಾಲ್ಗೊಳ್ಳುವವರು ವಿಶೇಷವಾಗಿ ನಿರ್ಮಿಸಲಾಗಿರುವ ಹೋಮ್ ಥಿಯೇಟರ್ ವಿಭಾಗ, ಫೊಟೋ ಕಾಂಟೆಸ್ಟ್ ವಿಭಾಗ, ಅತ್ಯಾಧುನಿಕ ತಂತ್ರಜ್ಞಾನವಾದ (MOVERIO) ಪೋರ್ಟಬಲ್ ವಿಭಾಗ ಹಾಗೂ ಹೆಡ್ ಮೌಂಟೆಡ್ ಡಿಸ್ಪ್ಲೆ ಸೇರಿದಂತೆ ವಿವಿಧ ತಾಂತ್ರಿಕ ವಿಭಾಗಳು ಇರಲಿವೆ. ಫೊಟೋ ಕಾಂಟೆಸ್ಟ್ನಲ್ಲಿ ಗೆಲ್ಲುವ ವಿಜೇತರಿಗೆ ಎಪ್ಸನ್ ಎಲ್800 ಫೊಟೋ ಪ್ರಿಂಟರ್ ಬಹುಮಾನವಾಗಿ […]

ಅಮ್ಮ ಮಂಗಳೂರಿನಲ್ಲಿ-ಫೆಬ್ರವರಿ 15 ಮತ್ತು 16 ರಂದು

Thursday, January 30th, 2014
Matha Amruthanandamayi

ಮಂಗಳೂರು: ವಿಶ್ವದ ಅಗ್ರಗಣ್ಯ ಆದ್ಯಾತ್ಮಿಕ ನೇತಾರರಲ್ಲೋರ್ವರಾದ, ಕೋಟ್ಯಾಂತರ ಭಕ್ತರ ಆರಾದ್ಯ ಮಾತೆಯಾಗಿರುವ ಸದ್ಗುರು ಶ್ರೀ ಮಾತಾ ಅಮೃತಾನಂದಮಯಿ ಯವರು ಇದೇ ಬರುವ, ಫೆಬ್ರವರಿ 15 (ಶನಿವಾರ)  ಮತ್ತು 16 (ಭಾನುವಾರ) ರಂದು ಮಂಗಳೂರಿನ ಬ್ರಹ್ಮಸ್ಥಾನ ಮಹೋತ್ಸವ ಕಾರ್ಯಕ್ರಮದಲ್ಲಿ ಭಕ್ತರನ್ನು ಅನುಗ್ರಹಿಸಲಿರುವರು. (ಸ್ಥಳ: ನಗರದ ಬೋಳೂರು ಸುಲ್ತಾನ್ ಬತ್ತೇರಿಯ ಬಳಿ ಇರುವ ಅಮೃತ ವಿದ್ಯಾಲಯಂ ವಠಾರ) ಈ ಸಾಲಿನ ಅಮ್ಮನ ಭಾರತ ಯಾತ್ರೆಯು ಮಂಗಳೂರಿನ ಕಾರ್ಯಕ್ರಮದೊಂದಿಗೆ ಪ್ರಾರಂಭಗೊಳ್ಳುವುದರಿಂದ ವಿಶೇಷತೆಯನ್ನು ಪಡೆದಿದೆ. ಅಮ್ಮನವರ ಸತ್ಸಂಗ – ಭಜನೆ, ಪ್ರವಚನ, ಮಾನಸ […]

ಸೈಂಟ್ ಆ್ಯನ್ಸ್ ಸಮೂಹ ಸಂಸ್ಥೆ ಮುಲ್ಕಿ ವತಿಯಿಂದ ಗಣರಾಜ್ಯೊತ್ಸವ ಆಚರಣೆ

Thursday, January 30th, 2014
Mulki st.ann's

ಮುಲ್ಕಿ: ಸೈಂಟ್ ಆ್ಯನ್ಸ್ ಸಮೂಹ ಸಂಸ್ಥೆ ಮುಲ್ಕಿ ಹಾಗೂ ಭಾರತ ಕ್ರೈಸ್ತ  ಚರ್ಚುಗಳ ಮಹಾ ಒಕ್ಕೂಟ ಹಳೆಂಗಡಿ ಇವರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 25-1-2018 ರಂದು ಸೈಂಟ್ ಆ್ಯನ್ಸ್  ಕಾಲೇಜು ಆಫ್ ನರ್ಸಿಂಗ್ ಸಭಾಂಗಣ ಮುಲ್ಕಿಯಲ್ಲಿ ಗಣರಾಜ್ಯೊತ್ಸವ 2014 ರ ಪ್ರಯುಕ್ತ ಅಂತರ್ ಕಾಲೇಜು ಗಣರಾಜ್ಯೊತ್ಸವ ಸಂಗೀತ ಸ್ವರ್ಧೆ ಮತ್ತು ಮಧ್ಯವರ್ಜನಾ ಕಾರ್ಯಕ್ರಮವನ್ನು ರೈಟ್ ರೆವೆ. ಡಾ. ಸಿಲ್. ಪುಟರ್ಾಡೋ ವಿಶ್ರಾಂತ ಬಿಷಪ್ ಸಿ.ಎಸ್.ಐ ರವರು ಉದ್ಘಾಟಿಸಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡೇನಿಯಲ್ ದೇವರಾಜ್ ದಕ್ಷಿಣ ಭಾರತ ಕ್ರೈಸ್ತ ಚರ್ಚುಗಳ ಮಹಾ ಒಕ್ಕೂಟ […]

ಸುರತ್ಕಲ್ ವ್ಯಾಪ್ತಿಯಲ್ಲಿ ದಕ್ಷ ಪೊಲೀಸ್ ಅಧಿಕಾರಿ ಬೇಕು

Tuesday, January 28th, 2014
Munir

ಮಂಗಳೂರು :  ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ಕುಳಾಯಿ ಪರಿಸರದಲ್ಲಿ ನಿರಂತರವಾಗಿ ನಡೆಯುತ್ತಿರುವ ಕೋಮು ಸಂಬಂಧಿ ಅಹಿತಕರ ಘಟನೆಗಳನ್ನು ತಡೆಗಟ್ಟಲು ಸುರತ್ಕಲ್ ಠಾಣಾಧಿಕಾರಿ ನಟರಾಜ್ ಸಂಪೂರ್ಣ ವಿಫಲರಾಗಿದ್ದಾರೆ. ಕೋಮುಸೂಕ್ಷ್ಮ ಸುರತ್ಕಲ್ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡಲು ದಕ್ಷ ಪೊಲೀಸ್ ಅಧಿಕಾರಿಯನ್ನು ತಕ್ಷಣ ನೇಮಿಸಬೇಕು ಎಂದು ಡಿವೈಎಫ್ಐ ದ ಕ ಜಿಲ್ಲಾ ಅಧ್ಯಕ್ಷ ಮುನೀರ್ ಕಾಟಿಪಳ್ಳ ಒತ್ತಾಯಿಸಿದ್ದಾರೆ. ಕ್ರಿಕೆಟ್ ಬೆಟ್ಟಿಂಗ್ ವಿವಾದದಲ್ಲಿ ಕ್ರಿಕೆಟ್ ತಂಡಗಳ ಮಧ್ಯೆ ಆರಂಭವಾದ ಜಗಳ ಇಂದು ಅಮಾಯಕರ ಮೇಲೆ ನಿರಂತರ ಹಲ್ಲೆ, ಉದ್ವಿಗ್ನ ಪರಿಸ್ಥಿತಿಗೆ […]

ರಾಜ್ಯ ಸರ್ಕಾರದಿಂದ ಮಠಗಳ ನಿಯಂತ್ರಣ

Tuesday, January 28th, 2014
Matt

ಬೆಂಗಳೂರು : ಮಠಗಳ ಮೇಲೆ ನಿಯಂತ್ರಣ ಸಾಧಿಸುವ ಅಧಿಕಾರ ಪಡೆಯಲು ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಕಾಯ್ದೆಗೆ ತಿದ್ದುಪಡಿ ತರಲು ಸರ್ಕಾರ ಮುಂದಾಗಿದೆ. ಸರ್ಕಾರದ ನಿಯಂತ್ರಣಕ್ಕೆ ಮಠಗಳನ್ನು ಒಳಪಡಿಸಲು ಕಾನೂನು ರೂಪಿಸುವ ಅಗತ್ಯವಿದೆ ಎಂಬ ನ್ಯಾಯಾಲಯದ ಸೂಚನೆಯನ್ನೇ ಮುಂದಿಟ್ಟುಕೊಂಡು ಹಿಂದೂ ಧಾರ್ಮಿಕ ಮತ್ತು ಧರ್ಮಾದಾಯ ದತ್ತಿ ಕಾಯ್ದೆಗೆ ತಿದ್ದುಪಡಿ ಸರ್ಕಾರ ತರಲು ಹೊರಟಿದೆ. ಪ್ರಸ್ತುತ ಜಾರಿಯಲ್ಲಿರುವ ಕಾಯ್ದೆಗೆ ತಿದ್ದುಪಡಿ ಮಾಡಿ ಎಲ್ಲ ಮಠಗಳನ್ನು ಕಾಯ್ದೆಯಡಿ ತರುವ ಬಗ್ಗೆ ಚಿಂತನೆ ನಡೆಸಿದ್ದು, ಪ್ರಸ್ತಾವನೆಯು ಸರ್ಕಾರದ ಪರಿಶೀಲನೆಯಲ್ಲಿದೆ ಎಂದು […]