ಲೈಂಗಿಕ ಸಮಸ್ಯೆಗೆ ಪರಿಹಾರ ನೀಡುವ ಕ್ಲಿನಿಕ್ ಗಳಿಗೆ ದಾಳಿ, ಇಬ್ಬರು ನಕಲಿ ವೈದ್ಯರ ಬಂಧನ

Saturday, January 18th, 2014
Fake sex doctors

ಮಂಗಳೂರು: ಕರ್ನಾಟಕ ಆಯುರ್ವೇದ ಮತ್ತು ಯುನಾನಿ ಮಂಡಳಿ ಬೆಂಗಳೂರು ಅಧಿಕಾರಿಗಳು ನಗರದ ಎರಡು ಕ್ಲಿನಿಕ್ ಗಳಿಗೆ ದಾಳಿ ನಡೆಸಿ ಇಬ್ಬರು ನಕಲಿ ವೈದ್ಯರನ್ನು ಪತ್ತೆ ಹಚ್ಚಿ ಪೊಲೀಸರ ವಶಕ್ಕೆ ಒಪ್ಪಿಸಿದ ಘಟನೆ ಶನಿವಾರ ನಡೆದಿದೆ. ಬಂಧಿತರನ್ನು ಸೈಯದ್ ಯೂನಿಸ್ ರಾಣಾ ರಜಪೂತ್ ಡಾ.ರಜಪೂತ್ ಡಿಸ್ಪೆನ್ಸರಿ ಕ್ಲಿನಿಕ್ ನ್ ವೈದ್ಯ ಹಾಗೂ ನಸರತ್ ಚೌಹಾನ್, ಚೌಹಾನ್ ಡಿಸ್ಪೆನ್ಸರಿ ವೈದ್ಯ ಎಂದು ಗುರುತಿಸಲಾಗಿದೆ. ಇವರಿಬ್ಬರು ಕಳೆದ ಕೆಲವು ವರ್ಷಗಳಿಂದ ನಗರದಲ್ಲಿ ಕ್ಲಿನಿಕ್ ಗಳನ್ನು ನಡೆಸುತ್ತಿದ್ದು ಇಬ್ಬರೂ ವೈದ್ಯಕೀಯ ವಿದ್ಯಾಭ್ಯಾಸ ನಡೆಸಿ […]

ವಿದ್ಯಾವಲ್ಲಭತೀರ್ಥ ಸ್ವಾಮೀಜಿಯವರ ಪರ್ಯಾಯ ದರ್ಬಾರ್

Saturday, January 18th, 2014
Kaniyoor Paryaya

ಉಡುಪಿ : ಶನಿವಾರ ಮುಂಜಾನೆ ಸುಮಾರು ನಾಲ್ಕು ಗಂಟೆಗೆ ಜೋಡುಕಟ್ಟೆಯಿಂದ ಆರಂಭಗೊಂಡ ಪರ್ಯಾಯ ಮೆರವಣಿಗೆ ಡಯಾನ ವೃತ್ತ- ವಿತ್ರ ಆಸ್ಪತ್ರೆ- ತೆಂಕುಪೇಟೆ ಮಾರ್ಗವಾಗಿ ರಥಬೀದಿಯನ್ನು ಸೇರಿತು. ಪರ್ಯಾಯ ಮೆರವಣಿಗೆಯಲ್ಲಿ ಭಗವಾನ್‌ ಶ್ರೀ ಕೃಷ್ಣನ ವಿವಿಧ ಲೀಲೆಗಳನ್ನು ಸಾರುವ ಸ್ತಬ್ಧ ಚಿತ್ರಗಳಲ್ಲದೆ, ಆಚಾರ್ಯ ಮಧ್ವರಿಗೆ ಕೃಷ್ಣನ ವಿಗ್ರಹ ಸಿಕ್ಕಿದ ಸನ್ನಿವೇಶವನ್ನು ಸಾರುವ ಸ್ತಬ್ಧಚಿತ್ರಗಳೂ ಮೆರವಣಿಗೆಯಲ್ಲಿ ಸಾಗಿಬಂದವು. ಬಳಿಕ ಶ್ರೀ ಕಾಣಿಯೂರು ಮಠದ ಶ್ರೀ ವಿದ್ಯಾವಲ್ಲಭತೀರ್ಥ ಸ್ವಾಮೀಜಿಯವರ ಪರ್ಯಾಯ ದರ್ಬಾರ್ ರಾಜಾಂಗಣದಲ್ಲಿ ಸಾಂಪ್ರದಾಯ ಬದ್ಧವಾಗಿ ನಡೆಯಿತು. ದರ್ಬಾರ್ ಕಾರ್ಯಕ್ರಮದ ವೇದಿಕೆಯಲ್ಲಿ […]

`ಗ್ರಾಮದೆಡೆಗೆ ಬಿಜೆಪಿ ನಡಿಗೆ’ ಪೊಳಲಿಯ ರಾಜರಾಜೇಶ್ವರಿ ಸನ್ನಿಧಿಯಲ್ಲಿ ಚಾಲನೆ

Wednesday, January 15th, 2014
BJP March

ಬಂಟ್ವಾಳ : ಉಳಿಪಾಡಿಗುತ್ತು ರಾಜೇಶ್ ನಾಯಕ್ ಸಾರಥ್ಯದಲ್ಲಿ ಭಾರತೀಯ ಜನತಾ ಪಾರ್ಟಿ ಬಂಟ್ವಾಳ ವಿದಾನಸಭಾ ಕ್ಷೇತ್ರದ ಪೊಳಲಿಯ ರಾಜರಾಜೇಶ್ವರಿ ದೇವಾಲಯದ ಸನ್ನಿಧಿಯಲ್ಲಿ ಮಂಗಳವಾರ ಸಂಜೆ 13 ದಿನಗಳ ‘ಗ್ರಾಮದೆಡೆಗೆ ಬಿಜೆಪಿ ನಡಿಗೆ’ ಗೆ ಚಾಲನೆ ನೀಡಲಾಯಿತು. ಗ್ರಾಮದೆಡೆಗೆ ಬಿಜೆಪಿ ನಡಿಗೆಗೆ ದ.ಕ.ಜಿಲ್ಲಾ ಬಿಜೆಪಿ ಅಧ್ಯಕ್ಷ ಪ್ರತಾಪ್ಸಿಂಹ ನಾಯಕ್ ಅವರು ರಾಜೇಶ್ ನಾಯಕ್ ಅವರಿಗೆ ಪಕ್ಚದ ಧ್ವಜ ನೀಡುವ ಮೂಲಕ ಹಾಗೂ ಪೊಳಲಿಯ ಪ್ರಗತಿಪರ ಕೃಷಿಕ ವಾಸುದೇವಾ ಭಟ್ ಅವರು ಕೃಷಿ ಕಾರ್ಯಕ್ಕೆ ಬಳಸಿದ ನೇಗಿಲ ಪಣರವನ್ನು ದ.ಕ.ಜಿಲ್ಲಾ […]

ಮಂಗಳೂರಿನಿಂದ ಚೆನ್ನೈ ರೈಲಿನಲ್ಲಿ ಜರ್ಮನ್‌ ಮಹಿಳೆಯ ಅತ್ಯಾಚಾರ

Tuesday, January 14th, 2014
German woman

ಮಂಗಳೂರು : ಮಂಗಳೂರಿನಿಂದ ಚೆನ್ನೈಗೆ ತೆರಳುತ್ತಿದ್ದ ಎಕ್ಸ್‌ಪ್ರೆಸ್‌ ರೈಲಿನಲ್ಲಿ ಜರ್ಮನ್‌ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆದ ಬಗ್ಗೆ ವರದಿಯಾಗಿದೆ. ಭಾರತದಲ್ಲಿ ವಿದೇಶಿಯರ ಮೇಲೆ ನಡೆದ ಆತ್ಯಾಚಾರಕ್ಕೆ ಇನ್ನೊಂದು ಪ್ರಕರಣ ಸೇರಿದೆ. ಅತ್ಯಾಚಾರ ನಡೆಸಿದ ಆರೋಪಿ ಮಂಗಳೂರಿಗೆ ಬಂದಿದ್ದು ಈತನ ಪತ್ತೆಗಾಗಿ ಪೊಲೀಸ್‌ ಆಧಿಕಾರಿಗಳು ವ್ಯಾಪಕ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಪ್ರಕರಣದ ಸಂಬಂಧ ಈಗಾಗಲೇ ಎಫ್ಐಆರ್‌ ದಾಖಲಿಸಿರುವ ರೈಲ್ವೆ ಪೊಲೀಸರು ಸಂತ್ರಸ್ತ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ.

ಫೈರ್ ಆ್ಯಂಡ್ ಸೇಫ್ಟಿ ಕಾಲೇಜಿನ ವಿದ್ಯಾರ್ಥಿನಿ ಪ್ರಿಯಕರನೊಂದಿಗೆ ನಾಪತ್ತೆ

Friday, January 10th, 2014
Students missing

ಮಂಗಳೂರು: ಪಂಪ್‍ವೆಲ್‍ನ ಫೈರ್ ಆ್ಯಂಡ್ ಸೇಫ್ಟಿ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳು ಅದೇ ಕಾಲೇಜಿನ ವಿದ್ಯಾರ್ಥಿಯೊಂದಿಗೆ ಕಾಣೆ ಯಾಗಿದ್ದಾಳೆ ಎಂದು ವಿದ್ಯಾ ರ್ಥಿನಿಯ ಹೆತ್ತವರು ಕಂಕನಾಡಿ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದಾರೆ. ಪುತ್ತೂರು ತಾಲೂಕಿನ ಉಪ್ಪಳಿಗೆ ನಿವಾಸಿ ಮಧುಶ್ರೀ ಎಂಬಾಕೆ ಪಂಪ್‍ವೆಲ್‍ನ ಫೈರ್ ಆ್ಯಂಡ್ ಸೇಫ್ಟಿ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿದ್ದು, ಕಳೆದ ಮಂಗಳವಾರದಿಂದ ನಾಪತ್ತೆಯಾಗಿದ್ದಾಳೆ. ಈ ಬಗ್ಗೆ ಯುವತಿಯ ಮನೆಯವರು ಮಂಗಳವಾರ ಕಂಕನಾಡಿ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಅದರಂತೆ ನಿನ್ನೆ ಅವರು ಬಜರಂಗದಳದ ಕಾರ್ಯಕ ರ್ತರಿಗೆ ಮಗಳನ್ನು ಹುಡುಕಿಕೊಡುವಂತೆ […]

ಗುರುಪುರ ಶ್ರೀ ವಜ್ರದೇಹಿ ಮಠದಲ್ಲಿ ವಜ್ರದೇಹಿ ಜಾತ್ರೆಗೆ ಹರಿದು ಬರುತ್ತಿರುವ ಭಕ್ತ ಸಾಗರ

Sunday, January 5th, 2014
Vajaradehi Jatre

ಮಂಗಳೂರು : ಗುರುಪುರ ಶ್ರೀ ವಜ್ರದೇಹಿ ಮಠದಲ್ಲಿ ಜ.3ರಿಂದ ಆರಂಭಗೊಂಡಿರುವ ವಜ್ರದೇಹಿ ಜಾತ್ರೆಯ ಎರಡನೇ ದಿನವಾದ ಶನಿವಾರದಂದು ವಿವಿಧ ವೈದಿಕ ಕಾರ್ಯಗಳು, ಧಾರ್ಮಿಕ ಸಭೆ, ವಿವಿಧ ಕ್ಷೇತ್ರದಲ್ಲಿ ವಿಶೇಷ ಸಾಧನೆಗೈದವರಿಗೆ ಸನ್ಮಾನ ಹಾಗೂ ಗಂಗಾವತಿ ಪ್ರಾಣೇಶ್ ತಂಡದವರಿಂದ ನಗೆ ಹಬ್ಬ ಕಾರ್ಯಕ್ರಮ ನಡೆಯಿತು. ಧಾರ್ಮಿಕ ಸಭೆಯ ಉದ್ಘಾಟನೆಯನ್ನು ಗುರುಪುರ ಶ್ರೀ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ನೆರವೇರಿಸಿದರು. ಜಂಗಮ ಮಠದ ಶ್ರೀ ಮ|ನಿ|ಪ್ರ| ರುದ್ರಮುನಿ ಮಹಾಸ್ವಾಮಿ ಅನುಗ್ರಹ ಸಂದೇಶ ನೀಡಿದರು. ಧಾರ್ಮಿಕ ಸಭೆಯ ಅಧ್ಯಕ್ಷತೆಯನ್ನು ಬಂಟರ […]

ಸೆಂಟ್ರಲ್‌ ಮಾರುಕಟ್ಟೆಯ ವ್ಯಾಪಾರಿ ಸಂಘದ ಪ್ರತಿಭಟನಾ ಸಭೆಯಲ್ಲಿ ಲಾಠಿ ಪ್ರಹಾರ

Sunday, January 5th, 2014
Bidi Badi vyapari

ಮಂಗಳೂರು : ನಗರದ ಸೆಂಟ್ರಲ್‌ ಮಾರುಕಟ್ಟೆಯ ವ್ಯಾಪಾರಿ ಸಂಘದ ವತಿಯಿಂದ ಹಮ್ಮಿಕೊಂಡ ಪ್ರತಿಭಟನಾ ಸಭೆಯಲ್ಲಿ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ ಘಟನೆ‌ ಜನವರಿ 4 ರ ಶನಿವಾರ ನಡೆದಿದೆ. ಬೀದಿ ವ್ಯಾಪಾರಿಗಳನ್ನು ನಿಷೇಧಿಸಬೇಕೆಂದು ಆಗ್ರಹಿಸಿ ಮಾರುಕಟ್ಟೆಯ ವ್ಯಾಪಾರಿಗಳು ಸಭೆ ನಡೆಸಿದಾಗ ಸಿಐಟಿಯು ಸಂಘಟನೆಯ ಕಾರ್ಯಕರ್ತರು ಬೀದಿ ವ್ಯಾಪಾರಿಗಳನ್ನು ಬೆಂಬಲಿಸಿ ಏಕಾಏಕಿ ವರ್ತಕರ ವಿರುದ್ಧ ಧಿಕ್ಕಾರದ ಘೊಷಣೆಗಳನ್ನು ಕೂಗಿದರು ಆಗ ಪ್ರತಿಭಟನೆ ಉಗ್ರ ಸ್ವರೂಪ ತಾಳುವ ಮೊದಲು ಪೊಲೀಸರು ನಿಯಂತ್ರಣಕ್ಕೆ ಮುಂದಾದರು. ಪೊಲೀಸರು ಶಾಂತಿಯುತವಾಗಿ ಪ್ರತಿಭಟನೆ ನಡೆಸುವಂತೆ […]

ವೈದ್ಯಕೀಯ ವಿದ್ಯಾರ್ಥಿನಿಯ ಮೇಲಿನ ದೌರ್ಜನ್ಯ ಹಿಂದೂ ಯುವ ಸೇನೆ ಪ್ರತಿಭಟನೆ

Friday, January 3rd, 2014
Hindu yuva sene

ಮಂಗಳೂರು: ಹಿಂದೂ ಯುವ ಸೇನೆಯ ವತಿಯಿಂದ ದೇರಳಕಟ್ಟೆಯಲ್ಲಿ ಇತ್ತೀಚೆಗೆ ನಡೆದ ವೈದ್ಯಕೀಯ ವಿದ್ಯಾರ್ಥಿನಿಯ ಮೇಲಿನ ದೌರ್ಜನ್ಯವನ್ನು ಖಂಡಿಸಿ ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಶುಕ್ರವಾರ ಪ್ರತಿಭಟನೆಯನ್ನು ನಡೆಸಿತು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ, ದೇರಳಕಟ್ಟೆಯಲ್ಲಿ ನಡೆದ ಘಟನೆ ಇಡೀ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ. ಅಪರಾಧಿಗಳ ಮೇಲೆ ಗೂಂಡ ಕಾಯ್ದೆಯನ್ನು ಹೇರಿ ಮರಣದಂಡನೆ ಶಿಕ್ಷೆ ವಿಧಿಸಬೇಕು. ದೇರಳಕಟ್ಟೆ ಘಟನೆ ನಡೆದು ಹಲವು ದಿನಗಳು ಕಳೆದರೂ ಆರೋಪಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳುವ […]

ಕೆನರಾ ಬ್ಯಾಂಕ್‌ನಿಂದ 200 ಕೋಟಿ ಸಾಲ ಪಡೆಯಲು ಟೌನ್ ಹಾಲ್ ಅಡವು

Thursday, January 2nd, 2014
townhall

ಬೆಂಗಳೂರು : ಕೆನರಾ ಬ್ಯಾಂಕ್‌ನಿಂದ 200 ಕೋಟಿ ಸಾಲ ಪಡೆಯಲು ಬಿಬಿಎಂಪಿ ಟೌನ್ ಹಾಲ್ ಅಡ ಇಡುವುದಕ್ಕೆ ತೀರ್ಮಾನಿಸಿದೆ. ಹಳೆಯ ಸಾಲ ತೀರಿಸುವುದಕ್ಕೆ ಬಿಬಿಎಂಪಿ ಪಾರಂಪರಿಕ ಕಟ್ಟಡವನ್ನು ಅಡ ಇಡಲು ಬಿಬಿಎಂಪಿ ನಿರ್ಧರಿಸಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ. ಸಿಎಂ ಸಿದ್ದರಾಮಯ್ಯ ನವರು ಟೌನ್‌ಹಾಲ್ ಬದಲಿಗೆ ಬೇರೆ ಕಟ್ಟಡವನ್ನು ಅಡವಿಡುವಂತೆ ಸೂಚನೆ ನೀಡಿದ್ದಾರೆ. ಶೇ. 14 ರಂತೆ ಮುಂಚೆ ಪಡೆದ ಸಾಲದ ಮೊತ್ತ ಬಿಬಿಎಂಪಿಯಲ್ಲಿ 200 ಕೋಟಿ. ರೂ. ಮೀರಿದೆ. ಆ ಸಾಲ ತೀರಿಸುವುದಕ್ಕೆ ಈಗ ಇನ್ನೊಂದು […]

ಜನವರಿ 5ರಂದು ಮಂಗಳೂರಿನ ನೆಹರೂ ಮೈದಾನದಲ್ಲಿ ‘ತುಳುನಾಡ್ದ ಜಾತ್ರೆ’

Tuesday, December 31st, 2013
odiyoor Tulunadu Jatre

ಮಂಗಳೂರು : ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಬೆಳ್ಳಿ ಹಬ್ಬದ ಸವಿನೆನಪಿಗಾಗಿ ಫೆಬ್ರವರಿ 7ರಿಂದ ನಡೆಯಲಿರುವ ‘ತುಳುನಾಡ್ದ ಜಾತ್ರೆ’ ಬಲೇ ತೇರ್ ಒಯಿಪುಗ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಜನವರಿ 5ರಂದು ಮಂಗಳೂರಿನ ನೆಹರೂ ಮೈದಾನದಲ್ಲಿ ನಡೆಯಲಿದೆ. ಜನವರಿ 5ರಂದು ಮಧ್ಯಾಹ್ನ 2.30ಕ್ಕೆ ಮಂಗಳೂರಿನ ಜ್ಯೋತಿ ಸರ್ಕಲ್‌ನಿಂದ ‘ತುಳುನಾಡ್ದ ಜಾತ್ರೆ’ ಮೆರವಣಿಗೆ ಆರಂಭಗೊಳ್ಳಲಿದೆ. ಮೆರವಣಿಗೆಯನ್ನು ಕಲ್ಲಡ್ಕ ಶ್ರೀ ರಾಮ ವಿದ್ಯಾಸಂಸ್ಥೆಯ ಸಂಚಾಲಕ ಕಲ್ಲಡ್ಕ ಡಾ.ಪ್ರಭಾಕರ್ ಭಟ್ ಉದ್ಘಾಟಿಸಲಿದ್ದಾರೆ. ನೆಹರೂ ಮೈದಾನದಲ್ಲಿ ಸಂಜೆ 3.30ಕ್ಕೆ ತುಳುನಾಡ ಜಾತ್ರೆ ಕಾರ್ಯಕ್ರಮವನ್ನು ಉಡುಪಿಯ ಪೇಜಾವರ […]