ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯಿಂದ ಜನವರಿ 24 ರಂದು ನಗರದಲ್ಲಿ ಮೌನ ಮೆರವಣಿಗೆ

Wednesday, January 23rd, 2013
Walk for Women, Walk for Justice

ಮಂಗಳೂರು : ದೇಶದಲ್ಲಿ ಇತ್ತೆಚಿನ ದಿನಗಳಲ್ಲಿ ಮಹಿಳೆಯರು ಮತ್ತು ಯುವತಿಯರ ಮೇಲೆ ಅತ್ಯಾಚಾರ ಮತ್ತು ದೌರ್ಜನ್ಯ ದಂತಹ ಪ್ರಕರಣಗಳು ನಿರಂತರವಾಗಿ ನಡೆಯುತ್ತಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಮಹಿಳೆಯರು ಹಾಗೂ ಯುವತಿಯರು ನಿರಂತರ ಶೋಷಣೆಗೊಳಗಾಗುತ್ತಿದ್ದಾರೆ. ಈ ಹಿನ್ನಲೆಯಲ್ಲಿ ದೇಶದಲ್ಲಿ ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯವನ್ನು ಖಂಡಿಸಿ ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯಿಂದ ಗುರುವಾರ ಸಂಜೆ ನಗರದಲ್ಲಿ ಮೌನ ಮೆರವಣಿಗೆ ನಡೆಯಲಿದೆ ಎಂದು ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯ ಸದಸ್ಯೆ ಗುಲಾಬಿ ಬಿಳಿಮಲೆ ಅವರು ತಿಳಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ […]

ಅಕ್ರಮ ಗಾಂಜಾ ಮಾರಾಟ ಗಾಂಜಾ ಸಹಿತ ಆರೋಪಿ ಸೆರೆ

Wednesday, January 23rd, 2013
Ganja

ಉಡುಪಿ : ಉಡುಪಿ-ಮಣಿಪಾಲ ಪರಿಸರದ ವಿದ್ಯಾರ್ಥಿಗಳಿಗೆ ಅಕ್ರಮವಾಗಿ ಗಾಂಜಾವನ್ನು ಮಾರಲು ಯತ್ನಿಸುತ್ತಿದ್ದ ಯುವಕನನ್ನು ಡಿಸಿಐಬಿ ಇನ್ಸ್‌ಪೆಕ್ಟರ್ ಪ್ರವೀಣ್ ನಾಯಕ್ ಹಾಗೂ ಸಿಬ್ಬಂದಿ ಬಂಧಿಸಿದ್ದಾರೆ. ಮಂಗಳೂರು ತಾಲೂಕು ಕೋಡಿ ಉಳ್ಳಾಲ ನಿವಾಸಿ ಮೊಹ ಮ್ಮದ್ ಇಕ್ಬಾಲ್ ಬಂಧಿತ. ಈತನಿಂದ ನಗದು 420 ರೂಪಾಯಿ ಮತ್ತು 580 ಗ್ರಾಂ ಗಾಂಜಾವನ್ನು ಪೊಲೀಸರು ವಶಪಡಿಸಿ ಕೊಂಡಿದ್ದಾರೆ. ವಶಪಡಿಸಿಕೊಂಡ ಗಾಂಜಾ ಮೌಲ್ಯ 16 ಸಾವಿರ ಎಂದು ಅಂದಾಜಿಸಲಾಗಿದೆ. ಮಂಗಳವಾರ ಖಚಿತ ಮಾಹಿತಿ ಪಡೆದ ಡಿಸಿಐಬಿ ಇನ್ಸ್‌ಪೆಕ್ಟರ್‌ ಪ್ರವೀಣ್‌ ಎಚ್‌. ನಾಯಕ್‌ ನೇತೃತ್ವದ ತಂಡ […]

ಜಿಲ್ಲೆಯಲ್ಲಿ ಗಣರಾಜ್ಯೋತ್ಸವ ಆಚರಣೆಗೆ ಸಕಲ ಸಿದ್ಧತೆ

Tuesday, January 22nd, 2013
preparation of Republic Day

ಮಂಗಳೂರು : ದೇಶದ ಪ್ರಮುಖ ರಾಷ್ಟ್ರೀಯ ಹಬ್ಬಗಳಲ್ಲಿ ಒಂದಾದ ಗಣರಾಜ್ಯೋತ್ಸವ ದಿನಾಚರಣೆಗೆ ಇನ್ನು ಕೆಲವೇ ದಿನಗಳು ಬಾಕಿ ಇದ್ದು ದೇಶದೆಲ್ಲೆಡೆ ತಯಾರಿ ನಡೆಯುತ್ತಿದ್ದು, ಪ್ರತಿ ವರ್ಷದಂತೆ ಈ ಬಾರಿಯೂ ನಗರದ ಕೇಂದ್ರ ಭಾಗವಾದ ನೆಹರೂ ಮೈದಾನದಲ್ಲಿ ತಯಾರಿ ನಡೆಸಲಾಗುತ್ತಿದೆ. ದ.ಕ. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಸುಮಾರು 5000 ವಿದ್ಯಾರ್ಥಿಗಳು ರಾಷ್ಟ್ರ ಪ್ರೇಮದ ಸಂದೇಶ ಸಾರಲು ತಮ್ಮ ತಯಾರಿ ನಡೆಸುತ್ತಿದ್ದಾರೆ. ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವದ ಸಾಂಸ್ಕ್ರತಿಕ ಕಾರ್ಯಕ್ರಮದಲ್ಲಿ ನಗರದ ವಿವಿಧ ಶಾಲೆಗಳ 5000 ವಿದ್ಯಾರ್ಥಿನಿಯರು ದೇಶ […]

ಕೊಟ್ಟಾರ ಸಮೀಪ ಚಲಿಸುತ್ತಿದ್ದ ಕಾರಿನಲ್ಲಿ ಕಾಣಿಸಿಕೊಂಡ ಬೆಂಕಿ, ತಪ್ಪಿದ ಅಪಾಯ

Tuesday, January 22nd, 2013
Fire in car near kottara

ಮಂಗಳೂರು : ನಗರದ ಕೊಟ್ಟಾರ ಜಂಕ್ಷನ್ ಬಳಿ ಸೋಮವಾರ ರಾತ್ರಿ ಮುನಾಫ್ ಶೇಖ್ ಎಂಬುವವರು ತಮ್ಮ ಸ್ನೇಹಿತನೊಂದಿಗೆ ಕಾಸರಗೋಡಿನಿಂದ ಪುಣೆಗೆ ತೆರಳುತ್ತಿದ್ದ ಸಂದರ್ಭ ಕಾರಿನ ಮುಂಭಾಗ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು ಸ್ಥಳೀಯರ ಹಾಗೂ ಅಗ್ನಿಶಾಮಕ ಇಲಾಖೆಯವರ ಸಕಾಲಿಕ ಕಾರ್ಯಾಚಣೆಯಿಂದ ಕಾರಿನಲ್ಲಿದ್ದವರಿಗೆ ಯಾವುದೇ ಅಪಾಯ ಸಂಭವಿಸಿಲ್ಲ. ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡ ಕೂಡಲೇ ಮುನಾಫ್ ಶೇಖ್ ತಮ್ಮ ಕಾರನ್ನು ರಸ್ತಯ ಬದಿ ನಿಲ್ಲಿಸಿ ಕಾರಿನ ಮುಂಭಾಗದ ಕವಚವನ್ನು ತೆರೆಯಲು ಪ್ರಯತ್ನಿಸಿದಾಗ ಅದು ತೆರೆಯಲು ಸಾಧ್ಯವಾಗದ ಸಂದರ್ಭ ಕೂಡಲೇ ಕಾರ್ಯ ಪ್ರವೃತ್ತರಾದ […]

ಅಡಿಗರ ಹತ್ಯೆಗೆ ಭೂ ವಿವಾದ, ವೈಯುಕ್ತಿಕ ದ್ವೇಷ ಕಾರಣ

Tuesday, January 22nd, 2013
Adiga murder case

ಉಡುಪಿ : ವೈಯಕ್ತಿಕ ದ್ವೇಷದ ಹಿನ್ನಲೆಯಲ್ಲಿ ಕೊಲೆ ಆಗಿರುವ ವಾಸುದೇವ ಅಡಿಗರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಆರೋಪಿಗಳ ಬಂಧನವಾಗಿದ್ದು, ಇನ್ನಿಬ್ಬರನ್ನು ಬಂಧಿಸಬೇಕಾಗಿದೆ, ಪ್ರಮುಖ ಆರೋಪಿ ರಮೇಶ ಬಾಯರಿ ಮತ್ತು ಇನ್ನೊಬ್ಬ ತಲೆಮರೆಸಿಕೊಂಡಿದ್ದಾರೆ. ಕುಂದಾಪುರ ಡಿವೈಎಸ್‌ಪಿ ಯಶೋದಾ ಎಸ್.ಒಂಟ ಗೋಡಿ ಪ್ರಕರಣದ ತನಿಖೆಯನ್ನು ಮುಂದುವರಿಸಲಿದ್ದಾರೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ.ಎಂ.ಬಿ.ಬೋರಲಿಂಗಯ್ಯ ತಿಳಿಸಿದರು. ಈ ಬಗ್ಗೆ ಅವರು ಜಿಲ್ಲಾ ಪೊಲೀಸ್ ಅಧೀಕ್ಷಕರ ಕಚೇರಿ ಸಭಾಂಗಣದಲ್ಲಿ ಸೋಮವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಬೈಂದೂರು ಸಿಪಿಐ ಅರುಣ್‌ […]

ಅಂಬಿಗರ ಚೌಡಯ್ಯ ಜಯಂತಿ ಆಚರಣೆ

Tuesday, January 22nd, 2013
Ambigara Chowdaiah Jayanthi

ಮಂಗಳೂರು : ಬಸವಣ್ಣ ಅವರ ತತ್ತ್ವಾದರ್ಶಗಳನ್ನು ಮೈಗೂಡಿಸಿಕೊಂಡು ಶಿವಸೇವೆಯಲ್ಲಿ ಸಾರ್ಥಕ ಬದುಕು ಕಂಡ ಅಂಬಿಗರ ಚೌಡಯ್ಯ ಅವರ ವಚನಗಳು, ಸಾಧನೆಗಳು ಸಾರ್ವಕಾಲಿಕವಾದುದು, ಸಾಮಾಜಿಕ ಲೋಪಗಳನ್ನು ಬಿಚ್ಚು ನುಡಿಯಲ್ಲಿ ಖಂಡಿಸುತ್ತಾ ಪರಿವರ್ತನೆ ಸಂದೇಶ ಸಾರಿದ ದಿಟ್ಟ ಶರಣ ಅಂಬಿಗರ ಚೌಡಯ್ಯ ಎಂದು ಹಿರಿಯ ಸಾಹಿತಿ ಪ್ರೊ| ಅಮೃತ ಸೋಮೇಶ್ವರ ಅವರು ಹೇಳಿದರು. ಅವರು ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮೊಗವೀರ ವ್ಯವಸ್ಥಾಪಕ ಮಂಡಳಿ ಆಶ್ರಯದಲ್ಲಿ ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ […]

ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಓಮ್ನಿ ಕಾರು-ಬಸ್ ಮುಖಾ ಮುಖಿ ಡಿಕ್ಕಿ ಓರ್ವ ಸಾವು, ನಾಲ್ವರು ಗಂಭೀರ

Monday, January 21st, 2013
Irodi accsident

ಕುಂದಾಪುರ : ಐರೋಡಿ ಸಮೀಪದ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ರವಿವಾರ ಸಂಜೆ ಓಮ್ನಿ ಕಾರು ಹಾಗೂ ಬಸ್ ಮುಖಾ ಮುಖಿ ಡಿಕ್ಕಿಯಾದ ಪರಿಣಾಮ ಓರ್ವ ಮೃತಪಟ್ಟು, ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ. ರವಿವಾರ ಮಧ್ಯಾಹ್ನ ಉಡುಪಿಯ ಬೀಚ್ ಉತ್ಸವಕ್ಕೆಂದು ಕುಂದಾಪುರದ ನವೀನ್‌ಚಂದ್ರ, ವಿಮಲೇಶ್‌ ಶೇಟ್‌, ವರದರಾಜ್‌ ಖಾರ್ವಿ, ಮನೋಹರ ಜೋಗಿ, ಸಂತೋಷ್‌ ಖಾರ್ವಿ ಯವರು ಓಮ್ನಿಕಾರಿನಲ್ಲಿ ತೆರಳುತ್ತಿದ್ದ ವೇಳೆ ಸಾಸ್ತಾನದ ಐರೋಡಿ ಬಳಿ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಬ್ರಹ್ಮಾವರದಿಂದ ಕುಂದಾ ಪುರದೆಡೆಗೆ ಸಾಗುತ್ತಿದ್ದ ಖಾಸಗಿ ಬಸ್ ಓಮ್ನಿಗೆ […]

ಮಂಗಳೂರು ವಿಶ್ವ ವಿದ್ಯಾಲಯದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಂಶೋಧನೆ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ವಿತರಣೆ

Saturday, January 19th, 2013
Laptops distributed Mangalore University

ಮಂಗಳೂರು : ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ನೀಡಲಾಗುವ ಅದೆಷ್ಟೋ ಅನುದಾನಗಳು ಸೂಕ್ತ ಫಲಾನುಭವಿಗಳಿಗೆ ದೊರಕದೆ ವೈಯುಕ್ತಿಕ ನೆಲೆಯಲ್ಲಿ ದುರುಪಯೋಗವಾಗುತ್ತಿವೆ. ಆದರೆ ವಿಶ್ವ ವಿದ್ಯಾಲಯಗಳಲ್ಲಿ ಅಂತಹ ಪ್ರಕರಣ ಕಡಿಮೆ, ವಿಶ್ವ ವಿದ್ಯಾಲಯ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಅನುದಾನ ಅವರಿಗೆ ಆಸರೆಯಾಗಬೇಕೇ ಹೊರತು ಅದು ಶಾಶ್ವತ ಊರುಗೋಲಾಗಬಾರದು. ಅನುದಾನ ಪಡೆದವರು ಮುಂದಿನ ದಿನಗಳಲ್ಲಿ ತಮಗಿಂತಲೂ ಬಡವರು, ತುಳಿತಕ್ಕೊಳಗಾದವರು ಮತ್ತು ಅಸಹಾಯಕರಿಗೆ ದೊರಕುವಂತೆ ಮಾಡುವ ಉದಾರವಾದಿಗಳಾಗಬೇಕು ಎಂದು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಹೇಳಿದರು. ಅವರು ಶುಕ್ರವಾರ ಮಂಗಳೂರು […]

ಮೊಬೈಲ್ ಒಳಗೆ ಬ್ಯಾಟರಿ ಗಾತ್ರದಲ್ಲಿ ಚಿನ್ನದ ಬಿಸ್ಕಿಟ್‌ಗಳನ್ನಿರಿಸಿ ಅಕ್ರಮ ಸಾಗಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

Saturday, January 19th, 2013
gold biscuit

ಮಂಗಳೂರು : ಮೊಬೈಲ್ ಒಳಗೆ ಬ್ಯಾಟರಿ ಗಾತ್ರದಲ್ಲಿ ಚಿನ್ನದ ಬಿಸ್ಕಿಟ್‌ಗಳನ್ನು ಇರಿಸಿ ಅಕ್ರಮ ಸಾಗಾಟ ಮಾಡುತ್ತಿದ್ದ ಕಾಸರಗೋಡು ತಳಂಗೆರೆ ನಿವಾಸಿ ಮೊಹಮ್ಮದ್ ಆಲಿ ಮೊಯ್ದಿನ್ ಕುಂಞಿ ಎಂಬಾತನನ್ನು ಕಸ್ಟಮ್ಸ್ ಅಧಿಕಾರಿಗಳು ಜನವರಿ 18 ಶುಕ್ರವಾರ ಬಂಧಿಸಿ, ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಒಟ್ಟು ಮೂರು ಮೊಬೈಲ್‌ನಲ್ಲಿ ಸುಮಾರು 10.85 ಲಕ್ಷ ರೂ. ವೌಲ್ಯದ  349.970 ಗ್ರಾಂ. ತೂಕದ ಮೂರು ಚಿನ್ನದ ಬಿಸ್ಕಿಟ್‌ಗಳು ಪತ್ತೆಯಾಗಿದೆ. ಆರೋಪಿ ದುಬೈಯಿಂದ ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಆಗಮಿಸಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದ ಸಂದರ್ಭ ಪರಿಶೀಲನೆ ನಡೆಸಿದಾಗ ಚಿನ್ನ ಪತ್ತೆಯಾಗಿದೆ.

ಮೆಗಾ ಮೀಡಿಯಾ ನ್ಯೂಸ್ ಹತ್ತನೇ ವಾರ್ಷಿಕೋತ್ಸವದ ಅಂಗವಾಗಿ ಮೆಗಾ ಮಿಡಿಯಾ ಪತ್ರಿಕೋದ್ಯಮ ಪ್ರಶಸ್ತಿ, ಸಾಧಕರಿಗೆ ಸನ್ಮಾನ ಸಾಂಸ್ಕೃತಿಕ ಹಬ್ಬ-2013 ಸಂಭ್ರಮದ ಆಚರಣೆ

Saturday, January 19th, 2013
Mega Media "Cultural Festival 2013"

ಮಂಗಳೂರು : ಜಗತ್ತು ತೀವ್ರಗತಿಯಲ್ಲಿ ಬದಲಾಗುತ್ತಿದೆ. ಈ ಬದಲಾವಣೆಯನ್ನು ಸ್ವೀಕರಿಸಿ ಉತ್ತಮ ವಿಚಾರಗಳನ್ನು ಪಾಲಿಸಿಕೊಂಡು ಬಂದಾಗ ಮಾತ್ರ ಅಭಿವೃದ್ಧಿ ಎನ್ನುವ ಮಂತ್ರ ಪಠಿಸಲು ಸಮಾಜದಲ್ಲಿ ಸಾಧ್ಯವಾಗುತ್ತದೆ ಎಂದು ಕರಾವಳಿ ಸಮೂಹ ಕಾಲೇಜು ಇದರ ಅಧ್ಯಕ್ಷ ಗಣೇಶ್ ರಾವ್ ಹೇಳಿದರು. ಅವರು ಶುಕ್ರವಾರ ಮಂಗಳೂರಿನ ಪುರಭವನದಲ್ಲಿ ನಡೆದ ಮೆಗಾ ಮೀಡಿಯಾ ನ್ಯೂಸ್ ಇದರ ಹತ್ತನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡ ಸಾಂಸ್ಕೃತಿಕ ಹಬ್ಬ-2013ರಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಮೆಗಾ ಮೀಡಿಯಾ ವಿಶೇಷ ಸಂಚಿಕೆಯನ್ನು ಕರ್ನಾಟಕ ಬ್ಯಾಂಕಿನ ಜನರಲ್ […]