ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಿರುಷಷ್ಠಿ ಸಂದರ್ಭ ಭಕ್ತರಿಂದ ಮಡೆಸ್ನಾನ ಹರಕೆ ಸೇವೆ ನಡೆಯಿತು

Friday, January 18th, 2013
Madesnaana

ಸುಬ್ರಹ್ಮಣ್ಯ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಾರ್ಷಿಕ ಜಾತ್ರೆ ಚಂಪಾಷಷ್ಠಿಯ ಒಂದು ತಿಂಗಳ ಅನಂತರ ಕ್ಷೇತ್ರದಲ್ಲಿ ಆಚರಿಸಲಾಗುವ ಕಿರುಷಷ್ಠಿಯ ಪರ್ವದಿನವಾದ ಗುರುವಾರ ಭಕ್ತಾದಿಗಳು ಮಡೆಮಡೆಸ್ನಾನ ಹರಕೆ ಸೇವೆ ಸಲ್ಲಿಸಿದರು. ಈ ಹಿಂದೆ ಕ್ಷೇತ್ರದಲ್ಲಿ ಮಡೆಸ್ನಾನದ ಬದಲು ಎಡೆಸ್ನಾನ ನಡೆಸುವಂತೆ ಉಚ್ಚ ನ್ಯಾಯಾಲಯ ಸರಕಾರಕ್ಕೆ ಆದೇಶಿಸಿತ್ತು. ಆದರೆ ಇದಕ್ಕೆ ಪ್ರತಿಯಾಗಿ ಸುಪ್ರೀಂ ಕೋರ್ಟ್‌ನ ಮೂಲಕ ತಾತ್ಕಾಲಿಕ ತಡೆಯಾಜ್ಞೆ ತಂದ ಹಿನ್ನೆಲೆಯಲ್ಲಿ ವಾರ್ಷಿಕ ಜಾತ್ರೆಯ ವೇಳೆ ಮಡೆಸ್ನಾನ ನಡೆದಿತ್ತು. ತಡೆಯಾಜ್ಞೆ ಇನ್ನು ಜಾರಿಯಲ್ಲಿರುವುದರಿಂದ ಗುರುವಾರ ಕೂಡ ಮಡೆಸ್ನಾನದ ಹರಕೆ […]

ಉಪ್ಪಿನಕಾಯಿ ಬಾಟಲಿಯೊಳಗೆ ಕಬ್ಬಿಣದ ಸ್ಪಾನರ್ ಗ್ರಾಹಕನಿಂದ ದೂರು

Friday, January 18th, 2013
Spanner in pickle bottle

ಮಂಗಳೂರು : ಪುತ್ತೂರು ತಾಲೂಕಿನ ಸತೀಶ್ ರೈ ನಡುಬೈಲು ಎಂಬುವವರು ಅಂಗಡಿಯೊಂದರಿಂದ ಖರೀದಿಸಿದ ಉಪ್ಪಿನಕಾಯಿ ಬಾಟಲಿಯೊಳಗೆ ಕಬ್ಬಿಣದ ಸ್ಪಾನರ್ ಲಭಿಸಿದ್ದು, ಈ ಕುರಿತು ಉಪ್ಪಿನ ಕಾಯಿ ಸಂಸ್ಥೆಯ ಮಾಲಕರನ್ನು ಸಂಪ ರ್ಕಿಸಿದಾಗ ಅವರು ಹಾರಿಕೆಯ ಉತ್ತರ ನೀಡಿರುವುದಾಗಿ ಆರೋಪಿಸಿದ್ದಾರೆ. ಸತೀಶ್ ರೈ ನಡುಬೈಲು ಎರಡು ದಿನಗಳ ಹಿಂದೆ ಪುತ್ತೂ ರಿನ ಅಂಗಡಿಯೊಂದರಿಂದ ಯಜ ಮಾನ ಉಪ್ಪಿನಕಾಯಿ ಉತ್ಪನ್ನ ಖರೀದಿಸಿದ್ದು. ಅರ್ಧ ಕೆ.ಜಿ.ಯ ಬಾಟಲಿಯ ಮುಚ್ಚಳವನ್ನು ತೆರೆದು ಒಳ ನೋಡಿದಾಗ ಉಪ್ಪಿನಕಾಯಿಯ ಜೊತೆಗೆ ಕಬ್ಬಿಣದ ಸ್ಪಾನರ್ ಸಿಕ್ಕಿದ್ದು, ಈ […]

ತೀವ್ರ ಹೃದಯಾಘಾತದಿಂದ ವಿಮಾನದಲ್ಲೇ ಮೃತ ಪಟ್ಟ ಹೋಟೆಲ್ ಉದ್ಯಮಿ ನಿಟ್ಟೆ ಸುಧಾಕರ್ ಶೆಟ್ಟಿ

Thursday, January 17th, 2013
Nitte Sudhaker Shetty

ಮಂಗಳೂರು : ಮಂಗಳೂರು ಮೂಲದ ಹೋಟೆಲ್ ಉದ್ಯಮಿಯೊಬ್ಬರು ಮಂಗಳೂರಿನಿಂದ ಮುಂಬಯಿಗೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ವೇಳೆ ತೀವ್ರ ಹೃದಯಾಘಾತದಿಂದ ಬುಧವಾರ ಮೃತಪಟ್ಟಿದ್ದಾರೆ. ಮೃತರು ಮುಂಬಯಿ ಹೊಟೇಲ್ ಉದ್ಯಮ ಕ್ಷೇತ್ರದಲ್ಲಿ ಚಿರಪರಿಚಿತರಾಗಿದ್ದ ನಿಟ್ಟೆ ಸುಧಾಕರ್ ಶೆಟ್ಟಿ. ಇವರು ಮುಂಬಯಿಯಲ್ಲಿ ಹೊಟೇಲ್ ಉದ್ಯಮವನ್ನು ನಡೆಸುತ್ತಿದ್ದು, ಮುಂಬಯಿ ಬಂಟರ ಸಂಘದ ಅಧ್ಯಕ್ಷರಾಗಿದ್ದರು. ಹೊಟೇಲ್ ಉದ್ಯಮದಲ್ಲಿ ತನ್ನದೇ ಆದ ಕಾರ್ಯಶೈಲಿಯಿಂದ ಯಶಸ್ಸನ್ನು ಸಾಧಿಸಿದ ಇವರು ಮುಂಬಯಿ ಮಾತ್ರವಲ್ಲದೇ ಲೋನವಾಲದಲ್ಲಿಯೂ ಕೂಡ ಹೊಟೇಲನ್ನು ಸ್ಥಾಪಿಸುವ ಮೂಲಕ ಯಶಸ್ವೀ ಉದ್ಯಮಿಯಾಗಿದ್ದರು. ಮುಂಬಯಿ ಹೊಟೇಲ್ ಮಾಲಕರ ಸಂಘದ ಅಧ್ಯಕ್ಷರಾಗಿದ್ದ […]

ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾ ಕಾರಾಗೃಹ ಕೈದಿಗಳ ಉಪವಾಸ ಸತ್ಯಾಗ್ರಹ

Thursday, January 17th, 2013
Mangalore jail

ಮಂಗಳೂರು : ರಾತ್ರಿ ವೇಳೆ ಪೊಲೀಸರು ಹಾಗೂ ಜೈಲುಸಿಬ್ಬಂದಿಗಳು ದಾಳಿ ನಡೆಸಿ ಕಿರುಕುಳ ನೀಡುತ್ತಿದ್ದಾರೆ, ಊಟ ಹಾಗು ಇತರೆ ವ್ಯವಸ್ಥೆಗಳನ್ನು ಕಲ್ಪಿಸುವಂತೆ ಒತ್ತಾಯಿಸಿ ದಕ್ಷಿಣ ಕನ್ನಡ ಜಿಲ್ಲಾ ಕಾರಾಗೃಹದ ಎ ಬ್ಲಾಕ್‌ನಲ್ಲಿರುವ ವಿಚಾರಣಾಧೀನ ಕೈದಿಗಳು ಬುಧವಾರ ನಾನಾ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಉಪವಾಸ ಸತ್ಯಾಗ್ರಹ ನಡೆಸಿದರು. ಸುಮಾರು 90 ಕೈದಿಗಳು ಜಿಲ್ಲಾ ನ್ಯಾಯಾಧೀಶರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದು ಒತ್ತಾಯಿಸಿ ಉಪವಾಸ ನಡೆಸಿದ್ದು, ಬೆಳಗ್ಗೆ 10ರಿಂದ ಮಧ್ಯಾಹ್ನ 3 ಗಂಟೆವರೆಗೆ ಉಪವಾಸ ನಡೆಸಿದರು. ಗುರುವಾರ […]

ಹಿರಿಯ ಕಾಂಗ್ರೆಸ್ ಮುಖಂಡ ಆಸ್ಕರ್ ಫರ್ನಾಂಡಿಸ್ ಪುತ್ರನ ವಿವಾಹ

Thursday, January 17th, 2013
Wedding of Oscar's Son

ಮಂಗಳೂರು : ಬುಧವಾರ ನಗರದ ಮಿಲಾಗ್ರೀಸ್ ಚರ್ಚ್ ನಲ್ಲಿ ರಾಜ್ಯಸಭೆ ಸದಸ್ಯ, ಹಿರಿಯ ಕಾಂಗ್ರೆಸ್ ಮುಖಂಡ ಆಸ್ಕರ್ ಫರ್ನಾಂಡಿಸ್ ಅವರ ಪುತ್ರ ಓಶಾನ್ ಅವರ ವಿವಾಹವು ಜರುಗಿತು. ವಿವಾಹ ನೆರವೇರಿದ ಬಳಿಕ ನಗರದ ಲೈಟ್‌ಹಿಲ್ ಹೌಸ್ ರಸ್ತೆಯ ಲೇಡೀಸ್ ಕ್ಲಬ್‌ನಲ್ಲಿ ನಡೆದ ರಿಸೆಪ್ಶನ್‌ ನನ್ನು ಏರ್ಪಡಿಸಲಾಗಿತ್ತು. ವಿವಾಹ ಸಮಾರಂಭಕ್ಕೆ ಮುಖ್ಯಮಂತ್ರಿಗಳು, ಹಲವು ಕೇಂದ್ರ ಸಚಿವರು, ನೂರಾರು ಕಾಂಗ್ರೆಸ್ ನಾಯಕರು ಆಗಮಿಸಿದ್ದರು. ಆಸ್ಕರ್ ಫರ್ನಾಂಡಿಸ್-ಬ್ಲಾಸಂ ಫರ್ನಾಂಡಿಸ್ ದಂಪತಿ ಪುತ್ರ ಓಶಾನ್ ಸ್ಯಾಮ್ ಪಿತ್ರೋಡಾ ಅವರ ಕಂಪನಿಯ ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಉದ್ಯೋಗದಲ್ಲಿದ್ದು, ಉಡುಪಿ ಉದ್ಯಾವರದ […]

ಟಿಪ್ಪು ಒಬ್ಬ ರಾಷ್ಟ್ರ ನಾಯಕ ; ರಾಜ್ಯಪಾಲ ಹಂಸರಾಜ್ ಭಾರದ್ವಾಜ್‌

Thursday, January 17th, 2013
HR Bharadwaj visit mangalore

ಮಂಗಳೂರು : ನಾನು ರಾಜ್ಯಪಾಲನಾಗಿ ಅಧಿಕಾರ ವಹಿಸಿಕೊಂಡ ಬಳಿಕ ರಾಜ್ಯದ ಅನೇಕ ಸಚಿವರ ಮೇಲೆ ಪ್ರತಿ ದಿನ ಅನೇಕ ದೂರುಗಳು ಬರುತ್ತಿವೆ. ರಾಜ್ಯದ ಬಹುಮಂದಿ ಸಚಿವರು ಜನಸೆವೆಗಿಂತ ವಿವಿಧ ವ್ಯವಹಾರಗಳಲ್ಲಿ ನಿರತರಾಗಿದ್ದಾರೆ, ಪ್ರಗತಿಶೀಲವಾದ ಕರ್ನಾಟಕದಲ್ಲಿ ಇಂತಹ ವಿದ್ಯಮಾನ ನಡೆಯುತ್ತಿರುವುದು ವಿಷಾದದ ಸಂಗತಿ ಎಂದು ಕರ್ನಾಟಕ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಖಾಸಗಿ ಸಮಾರಂಭದ ಮೇಲೆ ಮಂಗಳೂರಿಗೆ ಆಗಮಿಸಿದ ಅವರು ಸರ್ಕಿಟ್‌ ಹೌಸ್‌ನಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದರು. ಲೋಕಾಯುಕ್ತ ನೇಮಕಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ರಾಜ್ಯಕ್ಕೆ […]

ಶಾರ್ಟ್‌ ಸರ್ಕೀಟ್ ಕಟ್ಟಡದಲ್ಲಿ ಕಾಣಿಸಿಕೊಂಡ ಬೆಂಕಿ

Wednesday, January 16th, 2013
fire in building

ಮಂಗಳೂರು : ಮಂಗಳವಾರ ಸಂಜೆ 7.45 ರ ವೇಳೆಗೆ ನಗರದ ಕೆ.ಎಸ್‌. ರಾವ್‌ ರಸ್ತೆಯ ವಿಶ್ವಭವನ ಬಸ್‌ ತಂಗುದಾಣದ ಬಳಿ ಇರುವ ಕೃಷ್ಣ ಪ್ರಸಾದ್‌ ಕಟ್ಟಡದಲ್ಲಿ, ವಿದ್ಯುತ್‌ ಮೀಟರ್‌ನಲ್ಲಿ ಉಂಟಾದ ಶಾರ್ಟ್‌ ಸರ್ಕೀಟ್ ನಿಂದಾಗಿ ಬೆಂಕಿ ಕಾಣಿಸಿಕೊಂಡಿದ್ದು, ಯಾರಿಗೂ ಅಪಾಯ ಉಂಟಾಗಿಲ್ಲ. ಶಾರ್ಟ್‌ ಸರ್ಕೀಟ್ ನಿಂದಾಗಿ ಅಂಗಡಿ ಮಳಿಗೆಗಳಲ್ಲಿ ಹೊಗೆ ತುಂಬಿದ್ದ ಕಾರಣ ದಾರಿ ಕಾಣದೆ ಸಿಕ್ಕಿ ಕೊಂಡಿದ್ದ ಕೆಲವರನ್ನು ಅಗ್ನಿ ಶಾಮಕ ದಳದ ಸಿಬಂದಿ ಕಿಟಿಕಿ ಗಾಜು ಒಡೆದು ರಕ್ಷಿಸಿದರು. ಎರಡು ಮಳಿಗೆಗಳಲ್ಲಿ ಹೊಗೆ ಕಾಣಿಸಿಕೊಂಡ […]

ಆಳ್ವಾಸ್ ವಿರಾಸತ್‌ ಸಂಗೀತ ಯಾತ್ರೆಯ ಸಮಾರೋಪ

Tuesday, January 15th, 2013
Alva-s Virasat

ಮೂಡುಬಿದಿರೆ : ಮಿಜಾರಿನ ಶೋಭಾವನದಲ್ಲಿ ವಿರಾಜಮಾನವಾಗಿ ಕಂಗೊಳಿಸುತ್ತಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ನಡೆದ 19ನೇ ವರ್ಷದ ಆಳ್ವಾಸ್ ವಿರಾಸತ್-2013 ಭಾನುವಾರ ತಡರಾತ್ರಿ ಮೌನ ತಳೆಯಿತು. ಆಳ್ವಾಸ್ ವಿರಾಸತ್-2013 ರ ನಾಲ್ಕನೇ ದಿನ, ಕೊನೆಯ ದಿನವಾದ ಭಾನುವಾರ ಖ್ಯಾತ ಹಿನ್ನಲೆಗಾಯಕರಾದ ಎಂ.ಡಿ.ಪಲ್ಲವಿ, ವಿಜಯಪ್ರಕಾಶ್ ಮತ್ತು ಬಳಗದವರು ಪ್ರಸ್ತುತಪಡಿಸಿದ ಸಂಗೀತರಸ ಸಂಜೆ ಪ್ರೇಕ್ಷಕರಿಗೆ ಸಂಗೀತ ರಸದೌತಣವನ್ನು ನೀಡಿತು. ಸಂಗೀತ ಝರಿಗೆ ಆಹ್ವಾನ ನೀಡಿದ ಗಾಯಕಿ ಎಂ.ಡಿ. ಪಲ್ಲವಿ ಬೇಂದ್ರೆ ರಚನೆಯ ಇಳಿದು ಬಾ ತಾಯೆ ಕವನಕ್ಕೆ ದನಿಯಾದರು. ಲತ್ […]

ಆದಿಚುಂಚನಗಿರಿಯ ಮಠಾಧೀಶ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಗೆ ಶ್ರದ್ಧಾಂಜಲಿ

Tuesday, January 15th, 2013
Swami Dr Balagangadharanat

ಮಂಗಳೂರು : ಸೋಮವಾರ ನಗರದ ಸಂಘ ನಿಕೇತನದಲ್ಲಿ ವಿಶ್ವ ಹಿಂದೂ ಪರಿಷತ್ ವತಿಯಿಂದ ಆದಿಚುಂಚನಗಿರಿಯ ಮಠಾಧೀಶ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಗೆ ಶ್ರದ್ಧಾಂಜಲಿ ಸಭೆಯನ್ನು ಏರ್ಪಡಿಸಲಾಗಿದ್ದು ಸಭೆಯಲ್ಲಿ ಭಾಗವಹಿಸಿದ ವಿಧಾನಸಭೆ ಉಪ ಸಭಾಧ್ಯಕ್ಷ ಎನ್.ಯೋಗೀಶ್ ಭಟ್ ಮಾತನಾಡಿ, ಸಮಾಜದ ನಾನಾ ಕ್ಷೇತ್ರಗಳಲ್ಲಿ ಬದಲಾವಣೆ ತಂದ ಬಾಲಗಂಗಾಧರನಾಥ ಸ್ವಾಮೀಜಿ ನಮ್ಮಿಂದ ದೂರವಾದರೂ ಅವರ ಚೈತನ್ಯ ಸಮಾಜದಲ್ಲಿ ಸದಾ ಉಳಿಯಲಿದೆ. ಗ್ರಾಮೀಣ ಭಾಗದ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಎಬ್ಬಿಸಿದ ಅವರು, ಧಾರ್ಮಿಕ ಕಾರ್ಯಗಳಿಗೆ ಉತ್ತೇಜನ ನೀಡಿದ್ದರು ಎಂದರು. ವಿಶ್ವ ಹಿಂದೂ ಪರಿಷತ್ […]

ಉಡುಪಿ ಶ್ರೀಕೃಷ್ಣ ಮಠದ ನೂತನ ಬ್ರಹ್ಮರಥ ಶ್ರೀಕೃಷ್ಣನ ಸೇವೆಗೆ ಅರ್ಪಣೆ

Tuesday, January 15th, 2013
Brahmaratha Sri Krishna Mutt

ಉಡುಪಿ : ಶ್ರೀಕೃಷ್ಣ ಇಹಲೋಕ ತ್ಯಜಿಸಿದ ಬಳಿಕ ಅರ್ಜುನನ ಮೇಲೆ ಇತರರು ಆಕ್ರಮಣ ನಡೆಸಿದರು. ಆಗ ಅರ್ಜುನ ಸೋತು ಹೋಗುತ್ತಾನೆ. ಕಾರಣವೆಂದರೆ ಕೃಷ್ಣ ಇಲ್ಲದೆ ಇರುವುದು. ಇಲ್ಲಿಯೂ ರಥ ನಿರ್ಮಿಸಿರಬಹುದು. ಅದರಲ್ಲಿ ಶ್ರೀಕೃಷ್ಣ ಪ್ರತಿಷ್ಠೆ ಆದರೆ ಮಾತ್ರ ಶೋಭೆ’ ಎಂದು ಶ್ರೀಸೋದೆ ವಾದಿರಾಜ ಮಠದ ಶ್ರೀವಿಶ್ವವಲ್ಲಭತೀರ್ಥರು ಹೇಳಿದರು. ಅವರು ಉಡುಪಿ ಶ್ರೀಕೃಷ್ಣ ಮಠದಲ್ಲಿ ನೂತನವಾಗಿ ನಿರ್ಮಿಸಲಾದ ರಥವನ್ನು ಶ್ರೀಕೃಷ್ಣನ ಸೇವೆಗೆ ಅರ್ಪಿಸಿದರು. ಉಡುಪಿ ಶ್ರೀಕೃಷ್ಣ ಮಠದಲ್ಲಿ ನಿರ್ಮಿಸಲಾದ ನೂತನ ಬ್ರಹ್ಮರಥ ಶ್ರೀಕೃಷ್ಣನ ಸೇವೆಗೆ ಸೋಮವಾರ ಮಕರ ಸಂಕ್ರಮಣ […]