2012 ಉತ್ಕ್ರಾಂತಿ ವರ್ಷವೇ ಹೊರೆತು ಪ್ರಳಯದ ಸಂಕೇತವಲ್ಲ

Tuesday, December 11th, 2012
Earth

ಮಂಗಳೂರು :ನಭೋಮಂಡಲದ ಚಿದಂಬರ ರಹಸ್ಯ ಭೇದಿಸಿದರೆ, `ನಿಬುರು’ ಕಪೋಲ ಕಲ್ಪಿತ ತಲೆಬುರುಡೆ ಆಕಾರದ ದೂರಗಾಮಿ ಛಾಯಾರೂಪದ ಕ್ಷುದ್ರಶಕ್ತಿ ಅಥವಾ ಅನ್ಯಗ್ರಹ. ಕ್ರಿ.ಪೂ. 1800 ವರ್ಷಗಳ ಹಿಂದೆ ಬಾಬಿಯೋನ್ ಪೂರ್ವಜರು ಇಹಲೋಕದ ಅಧಿದೇವರು ಎಂದೇ ಭಾವಿಸಿ ಈ ಗ್ರಹವನ್ನು ಪೂಜಿಸುತ್ತಿದ್ದರು. ಅವರು ಬ್ರಹ್ಮಾಂಡದ ಸೌರಮಂಡಲದಲ್ಲಿಯೇ ಅತಿ ದೊಡ್ಡದಾದ ಗುರುಗ್ರಹವನ್ನೇ ‘ನಿಬುರು’ ಎಂದು ಕರೆಯುತ್ತಿದ್ದುದು. ಇಂದು ದೂರಗಾಮಿ ಅನ್ಯಗ್ರಹಗಳು ಮತ್ತು ಕ್ಷುದ್ರಗ್ರಹಳನ್ನು ಪತ್ತೆ ಮಾಡಲು ವೈಜ್ಞಾನಿಕ ಸ್ಥಾವರಗಳು ಇವೆ. ಈ ಸ್ಥಾವರಗಳು ಹಲವು ರೇಡಿಯೋ ಟೆಲಿಸ್ಕೋಪ್ ಗಳು ಮತ್ತು ಸೂಪರ್ […]

ಇಂಧನ ಟ್ಯಾಂಕರ್ ಗೆ ಕಣ್ಣ ಹಾಕಿ ಹಣ ದೋಚುತ್ತಿದ್ದ ಜಾಲ ಪತ್ತೆ

Tuesday, December 11th, 2012
Fuel theft racket

ಮಂಗಳೂರು :ಪೆಟ್ರೋಲ್ ಟ್ಯಾಂಕರ್ ನ ಒಳಭಾಗದಲ್ಲಿ ರಹಸ್ಯವಾಗಿ ಮತ್ತೊಂದು ಟ್ಯಾಂಕ್ ನಿರ್ಮಿಸಿ ಪೆಟ್ರೋಲ್ ಸಂಸ್ಥೆ ಹಾಗೂ ಬಂಕ್ ಗಳಿಗೆ ವಂಚಿಸಿ, ನಿರಂತರವಾಗಿ ಪೆಟ್ರೋಲ್ ಹಾಗೂ ಡೀಸೆಲ್ ಕಳವು ಮಾಡುತ್ತಿದ್ದ ಜಾಲವನ್ನು ಸಿಸಿಬಿ ಪೊಲೀಸರು ಇತ್ತೀಚೆಗೆ ಪತ್ತೆಹಚ್ಚುವ ಮೂಲಕ ಬೃಹತ್ ಕಾರ್ಯಚರಣೆ ಮಾಡಿದ್ದಾರೆ. ಈ ಮೂಲಕ ಪ್ರಕರಣಕ್ಕೆ ಸಂಬಂಧಿಸಿ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ. ಒಟ್ಟು 69 ಲಕ್ಷ ರೂ. ಮೌಲ್ಯದ 5 ಟ್ಯಾಂಕರ್ ಹಾಗೂ ನಗದು 3 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ. ಬಂಟ್ವಾಳ ತಾಲೂಕು ಮಾಣಿ ಮನೆ […]

ಬೆಳ್ತಂಗಡಿಯಲ್ಲಿ ನಕ್ಸಲರೂ ಮಕ್ಕಳಾಟಿಕೆಯಾದರೂ

Tuesday, December 11th, 2012
Chaarmaadi

ಮಂಗಳೂರು :ಮನೆಯಿಂದ ಪರಾರಿಯಾಗಿದ್ದ ಬಾಲಕರಿಬ್ಬರು ಕಾಡಿನಲ್ಲಿ ದಿನಬಳಕೆ ವಸ್ತುಗಳನ್ನು ಶೇಖರಿಸಿಟ್ಟಿದ್ದು ಎಎನ್ಎಫ್ ಪೊಲೀಸರ ಕೂಂಬಿಂಗ್ ಕಾರ್ಯಾಚರಣೆ ಸಂದರ್ಭ ಪತ್ತೆಯಾಗುವ ಮೂಲಕ ಅಲ್ಲೋಲ ಕಲ್ಲೋಲ ಸೃಷ್ಟಿಸಿದ ಘಟನೆ ಚಾರ್ಮಾಡಿಯಲ್ಲಿ ಇತ್ತೀಚೆಗೆ ನಡೆಯಿತು. ಚಾರ್ಮಾಡಿಯ ಪೇಟೆಯ ರಾಷ್ಟ್ರೀಯ ಹೆದ್ದಾರಿಯಿಂದ ಸುಮಾರು ಎರಡು ಕಿ. ಮೀ. ದೂರದಲ್ಲಿ ಈ ಘಟನೆ ನಡೆದಿತ್ತು. ನಕ್ಸಲ್ ನಿಗ್ರಹ ದಳದ ಪೊಲೀಸರಿಗೆ ಚಾರ್ಮಾಡಿಯಲ್ಲಿ ನಕ್ಸಲ್ ತಂಡವಿದೆ ಎಂಬ ಮಾಹಿತಿ ಬಂದಿತ್ತು. ಅದರಂತೆ ಬೆಳಗ್ಗೆ ತಂಡವೊಂದು ಚಾರ್ಮಾಡಿ ಪೇಟೆ ಬಳಿಯ ಕಾಡಿನಲ್ಲಿ ಕೂಂಬಿಂಗ್ ಕಾರ್ಯಾಚರಣೆ ಆರಂಭಿಸಿತ್ತು. ಚಾರ್ಮಾಡಿ […]

ಲೋಕಸಭೆ ಚುನಾವಣೆಯಲ್ಲಿ ಪೂಜಾರಿ ಎಂಟ್ರಿ !

Tuesday, December 11th, 2012
Janardhan Poojari & Vinaykumar Sorake

ಮಂಗಳೂರು :ಲೋಕಸಭಾ ಚುನಾವಣೆಯಲ್ಲಿ ನಾಲ್ಕು ಬಾರಿ ಸೋಲು ನಾಲ್ಕು ಬಾರಿ ಗೆಲುವು ದಾಖಲಿಸಿರುವ ಜನಾರ್ದನ ಪೂಜಾರಿ ಐದನೆಯ ದಾಖಲೆಗಾಗಿ ಕೊನೆಯ ಹೋರಾಟಕ್ಕೆ ಇಳಿದಿದ್ದಾರೆ. ತನ್ನನ್ನು ಬೆಂಬಲಿಸಿ ಎಂದು ಸ್ಥಳೀಯ ಕಾಂಗ್ರೆಸ್ ನಾಯಕರಿಗೆ ಕರೆ ಮಾಡುತ್ತಿದ್ದಾರೆ ಆಯ್ದ ಕೆಲವರೊಂದಿಗೆ ಆತ್ಮೀಯ ಸಭೆಯನ್ನು ನಡೆಸಿದ್ದಾರೆ. ಕಾರ್ಪೊರೇಟರ್ ಗಳಿಗೆ ತನ್ನನ್ನೇ ಬೆಂಬಲಿಸುವಂತೆ ಕೋರುವ ಆದೇಶವನ್ನೂ ನೀಡಿರುವುದು ಹೊಸ ಬೆಳವಣಿಗೆ. ತೀರಾ ಇತ್ತೀಚೆಗೆ ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಕಾರ್ಪೊರೇಟರ್ ಗಳ ಗುಪ್ತ ಸಭೆ ಕರೆದು ತನಗೆ ಬೆಂಬಲಿಸುವವರ ಪಡೆಯನ್ನು ಪೂಜಾರಿ ಖಾತ್ರಿ […]

ಎಂಟು ವರ್ಷಗಳಿಂದ ಹಾಸಿಗೆ ಹಿಡಿದು ಮಲಗಿರುವ ಆನಂದ, ಸಹಾಯಕ್ಕೆ ಕೋರಿಕೆ

Monday, December 10th, 2012
Ananda Kundaaje

ಮಂಗಳೂರು :ಕಳೆದ ಎಂಟು ವರ್ಷಗಳಿಂದ ಹಾಸಿಗೆ ಹಿಡಿದು ಮಲಗಿರುವ ಆತನದ್ದು ಅಸಹನೀಯ ಬದುಕು. ಆ ಯುವಕನ ಬದುಕು ಕಮರಿ ಹೋಗಿದೆ. ಜೀವನ್ಮರಣ ಹೋರಾಟದಲ್ಲಿ ಗೆಲುವು ಅಷ್ಟರಲ್ಲೇ ಇದೆ. ಜರ್ಜರಿತಗೊಂಡ ಈತನ ಕುಟುಂಬ ಬಡತನದ ಬೇಗೆಯಲ್ಲಿ ಬಳಲಿಬೆಂಡಾಗಿದೆ. ಪುತ್ತೂರು ತಾಲೂಕಿನ ರಾಮಕುಂಜ ಗ್ರಾಮದ ಕುಂಡಾಜೆ ನಿವಾಸಿ ಆನಂದ ಎಂಬ ಯುವಕನ ಚಿಂತಾಜನಕ ಸ್ಥಿತಿ, ಹಾಗೂ ಆತನ ಕುಟುಂಬದ ಭವಣೆಯ ಒಂದು ಚಿತ್ರಣ. ಎಂಟು ವರ್ಷಗಳ ಹಿಂದೆ ಮರದಿಂದ ಬಿದ್ದು ಬೆನ್ನುಹುರಿ ನೋವಿನಿಂದ ಬಳಲುತ್ತಿರಿರುವ ಆನಂದನ ಮನೆಯಲ್ಲಿ ಆನಂದವೇ ಇಲ್ಲ, […]

ಸೈನ್ಸ್ ಆನ್ಸರ್ ಭೂಮಿಗೆ ಪ್ರಳಯ ಬರೋದೆ ಇಲ್ಲ !

Monday, December 10th, 2012
Doomsday

ಮಂಗಳೂರು :ಬಹಳಷ್ಟು ಮಂದಿ ಕಾಲಜ್ಞಾನಿಗಳು, ಕಣಿ ಜ್ಯೋತಿಷಿಗಳು ಹಾಗೂ ಪೊಳ್ಳು ವಿಜ್ಞಾನಿಗಳು ಈ ವರ್ಷದ ಡಿಸೆಂಬರ್ 21ರಂದು ಭೂಮಿ ಪ್ರಳಯಕ್ಕೆ ಆಹುತಿಯಾಗಲಿದೆ ಎಂದು ಭವಿಷ್ಯ ನುಡಿಯುತ್ತಿದ್ದಾರೆ. ಮೆಸೊ ಅಮೆರಿಕನ್ ದೀರ್ಘ ಲೆಕ್ಕಾಚಾರದ ಕ್ಯಾಲೆಂಡರ್ ನ 5125 ವರ್ಷ ಚಕ್ರವು ಡಿಸೆಂಬರ್ 21 ರಂದು ಕೊನೆಯಾಗಲಿರುವುದೇ ಈ ವದಂತಿಗೆ ಕಾರಣ. ಪ್ರಳಯದ ಕುರಿತಾಗಿ ಭವಿಷ್ಯ ನುಡಿಯುವವರು ಕಪ್ಪುರಂಧ್ರ, ಕ್ಷುದ್ರಗ್ರಹ, ಧೂಮಕೇತು ಅಥವಾ ಅರಿವಿಗೆ ಬರದ ವಿಶ್ವದ ಸಾಧ್ಯತೆಗಳೊಂದಿಗೆ ಭೂಮಿಯು ಘರ್ಷಣೆಗೊಳಪಡುವುದರಿಂದಾಗಿ ಈ ವಿನಾಶ ಸಂಭವಿಸಲಿದೆ ಎಂದು ವಾದಿಸುತ್ತಾರೆ. ಬೃಹತ್ […]

ಲೋಕಲ್ ಹುಡುಗನ `ಕುಸಾಲ್ ಗ್’ ಚಿತ್ರ

Monday, December 10th, 2012
Kusaalugu Movie

ಮಂಗಳೂರು : ಈಗ ಕೋಸ್ಟಲ್ ವುಡ್ ನಲ್ಲಿ ಕಿರುಚಿತ್ರಗಳ ಜಮಾನ ಶುರುವಾಗಿದೆ. ತಮ್ಮದೇ ಪುಟ್ಟ ಬಂಡವಾಳ ಒಟ್ಟು ಸೇರಿಸಿ ಗ್ರಾಮೀಣ ಕಲಾವಿದರನ್ನು ಒಟ್ಟು ಹಾಕಿಕೊಂಡು ತುಳು ಭಾಷೆಯಲ್ಲಿ ಕಿರುಚಿತ್ರ ನಿರ್ಮಾಣ ಮಾಡುವ ಕೆಲಸ ನಡೆಯುತ್ತಿದೆ. ಈ ಪಟ್ಟಿಯಲ್ಲಿ ಸಂತೋಷ್ ಎಂ. ಪುಚ್ಚೇರ್ ಅವರ ನಿರ್ದೇಶನದ `ಕುಸಾಲ್ ಗ್’ ಸೇರಿಕೊಳ್ಳುತ್ತದೆ. ಕೋಸ್ಟಲ್ ವುಡ್ ಚಿತ್ರನಗರಿಯಲ್ಲಿ ಈಗ ನಿಧಾನವಾಗಿ ಬಣ್ಣದ ಹೊಳಪು ಕಾಣಿಸಿಕೊಳ್ಳುತ್ತಿದೆ. ವರ್ಷಕ್ಕೆ ಒಂದು ಅಥವಾ ಅರ್ಧ ಚಿತ್ರಗಳಲ್ಲಿ ಕಾಲ ಕಳೆಯುತ್ತಿದ್ದ ಕೋಸ್ಟಲ್ ವುಡ್ ಖಜಾನೆಗೆ ಈಗ ಭರ್ಜರಿ […]

ಕೊಟೇಶ್ವರದ ಬಳಿ ಭೀಕರ ರಸ್ತೆ ಅಪಘಾತ ಬೈಕ್ ಸವಾರನ ಸಾವು

Monday, December 10th, 2012
Bus bike collision

ಕುಂದಾಪುರ : ರವಿವಾರ ರಾತ್ರಿ 9.30 ರ ಸುಮಾರಿಗೆ ಕುಂದಾಪುರದ ಕೋಟೇಶ್ವರ ಸಮೀಪ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಖಾಸಗಿ ಬಸ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಮ್ರತಪಟ್ಟಿದ್ದಾನೆ. ಮೃತ ಬೈಕ್ ಸವಾರ ಅಂಪಾರು ಮೂಲದ ಸತೀಶ್ ಶೆಟ್ಟಿ(28) ಎಂಬುವವರಾಗಿದ್ದಾರೆ. ಸತೀಶ್ ಮೂಲತಃ ಅಂಪಾರಿನವರಾಗಿದ್ದು ಕಳೆದ ಕೆಲ ವರ್ಷಗಳಿಂದ ಹೈದರಾಬಾದಿನಲ್ಲಿ ಉದ್ಯೋಗ ಮಾಡಿಕೊಂಡಿದ್ದರು. ಕಳೆದ ಕೆಲವು ದಿನಗಳ ಹಿಂದೆ ತಂದೆ ಶೇಖರ ಶೆಟ್ಟಿಯವರ ನಿಧನದ ಸಲುವಾಗಿ ಊರಿಗೆ ಆಗಮಿಸಿದ ಅವರು ತೆಕ್ಕಟ್ಟೆಯ ಹೋಟೇಲ್ವೊಂದರಲ್ಲಿ […]

ಕಲಾಂಗಣ್‌ನಲ್ಲಿ 4 ನೇ ವಿಶ್ವ ಕೊಂಕಣಿ ಸಂಗೀತ ಪ್ರಶಸ್ತಿ ಪ್ರದಾನ ಸಮಾರಂಭ

Monday, December 10th, 2012
Global Konkani Music Award

ಮಂಗಳೂರು : ಮಂಗಳೂರು ಶಕ್ತಿನಗರದ ಕಲಾಂಗಣ್‌ ಸಭಾಂಗಣದಲ್ಲಿ ಮಾಂಡ್ ಸೋಭಾಣ್ ಸಂಸ್ಥೆ ವತಿಯಿಂದ ನಾಲ್ಕನೇ ವಿಶ್ವ ಕೊಂಕಣಿ ಸಂಗೀತ ಪ್ರಶಸ್ತಿ ಪ್ರದಾನ ಸಮಾರಂಭವು ಭಾನುವಾರ ಸಂಜೆ ನಡೆಯಿತು. 2011ರ ಅತ್ಯುತ್ತಮ ಮಹಿಳಾ ಗಾಯಕಿ ಪ್ರಶಸ್ತಿಯನ್ನು ಲವಿಟಾ ಲೋಬೊ ಹಾಗೂ ಅತ್ಯುತ್ತಮ ಪುರುಷ ಗಾಯಕ ಪ್ರಶಸ್ತಿಯನ್ನು ಬೆಂಗಳೂರಿನ ಬುಟ್ಟೋ ಪಡೆದುಕೊಂಡರು. ಅತ್ಯುತ್ತಮ ಸಂಗೀತ ಸಾಹಿತ್ಯ ಪ್ರಶಸ್ತಿಯನ್ನು ಅಂಜಲೋರಿನ ರೋಶನ್ ಡಿಸೋಜ, ಅತ್ಯುತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ದಿವಂಗತ ಚಾಫ್ರಾ ಡಿಕೋಸ್ತಾ, ಅತ್ಯುತ್ತಮ ಸಂಗೀತ ಸಂಯೋಜಕ ಪ್ರಶಸ್ತಿಯನ್ನು ಹೊನ್ನಾವರದ ಕಜೆತನ್ […]

ಚೆನೈ ಚಿತ್ರ ಮಂದಿರಗಳಲ್ಲಿ ಯೋಗರಾಜ್ ಭಟ್ ಡ್ರಾಮಾ ತೆರೆಗೆ

Saturday, December 8th, 2012
Drama

ಬೆಂಗಳೂರು :ಬಾಕ್ಸ್ ಆಫೀಸ್ ನಲ್ಲಿ ಗೆದ್ದ ಯೋಗರಾಜ್ ಭಟ್ ರ ಹೊಸ ಚಿತ್ರ ‘ಡ್ರಾಮಾ’ ಚೆನೈ ನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ನಮ್ಮವು ಸಣ್ಣ ಬಜೆಟ್ ಚಿತ್ರಗಳು. ಪರಭಾಷಾ ಚಿತ್ರಗಳ ನಡುವೆ ಪೈಪೋಟಿ ಮಾಡುವುದು ಕಷ್ಟ ಎಂದು ಬಂಡಲ್ ಬಿಡುತ್ತಿದ್ದವರಿಗೆ ಯೋಗರಾಜ್ ಭಟ್ ನಿರ್ದೇಶನದ ‘ಡ್ರಾಮಾ’ ಚಿತ್ರ ಹೊಸ ದಾರಿ ತೋರಿಸಿದೆ. ಚೆನ್ನೈನ ವಿರುಗಂಬಾಕಂನ ಆರ್ಕಾಟ್ ರಸ್ತೆಯಲ್ಲಿರುವ ಫೇಮ್ ನ್ಯಾಶನಲ್ ಮಲ್ಟಿಫ್ಲೆಕ್ಸ್ ಚಿತ್ರಮಂದಿರದಲ್ಲಿ ‘ಡ್ರಾಮಾ’ ಬಿಡುಗಡೆಯಾಗಿದೆ. ಡಿಸೆಂಬರ್ 7ರಂದು ಬಿಡುಗಡೆಯಾಗಿರುವ ಈ ಚಿತ್ರ ಪ್ರತಿದಿನ 12 ಗಂಟೆಗೆ ಒಂದು […]