ಸಹೋದರರಿಬ್ಬರ ಜಗಳ ಕೊಲೆಯಲ್ಲಿ ಅಂತ್ಯ

Friday, November 16th, 2012
Brothers murder

ಮಂಗಳೂರು :ಬೆಳ್ತಂಗಡಿ ತಾಲೂಕಿನ ಬಾರೆ ಗ್ರಾಮದ ಕೈಲಾರ ಪಿಲಿಗೂರಿನ ನಿವಾಸಿ ಜಾನ್ ಸಿಕ್ವೇರ ಎಂಬುವವರು ತನ್ನ ಸಹೋದರ ಜೋಕಿಂ ಸಿಕ್ವೇರಾ ರನ್ನು ಕಬ್ಬಿಣದ ರಾಡಿನಿಂದ ಹೊಡೆದು ಹತ್ಯೆ ಮಾಡಿರುವ ಘಟನೆ ನಡೆದಿದೆ. ಅಣ್ಣ ತಮ್ಮ ನಡುವೆ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ನಿತ್ಯ ಜಗಳವಾಗುತಿತ್ತು, ಆದರೆ ಬುಧವಾರ ಮಧ್ಯರಾತ್ರಿ ಅಣ್ಣ ತಮ್ಮ ನಡುವೆ ಭೂವಿವಾದದ ಹಿನ್ನೆಲೆಯಲ್ಲಿ ಮಾತಿನ ಚಕಮಕಿ ನಡೆಯಿತು. ಕೋಪಗೊಂಡ ಅಣ್ಣ ಜಾನ್ ಸಿಕ್ವೆರಾ ಜೋಕಿಂ ಮೇಲೆ ರಾಡ್‌ನಿಂದ ಹಲ್ಲೆ ನಡೆಸಿದ. ತಲೆಗೆ ಗಂಭೀರ ಗಾಯಗೊಂಡ ಜೋಕಿಂ […]

ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳದ ಸಂಯುಕ್ತ ಆಶ್ರಯದಲ್ಲಿ ಗೋಹತ್ಯೆ ವಿರೋಧಿಸಿ ಬೃಹತ್ ಪ್ರತಿಭಟನಾ ಸಭೆ

Friday, November 16th, 2012
cow slaughter

ಮಂಗಳೂರು :ಅಕ್ರಮ ಗೋ ಸಾಗಾಟ ಮತ್ತು ಗೋ ಹತ್ಯಾ ನಿಷೇಧ ಕಾನೂನು ಜಾರಿಗಾಗಿ ಒತ್ತಾಯಿಸಿ ನಿನ್ನೆ ಬಜರಂಗದಳ ಹಾಗೂ ವಿಶ್ವ ಹಿಂದೂ ಪರಿಷತ್ ವತಿಯಿಂದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಬಳಿ ಬೃಹತ್ ಪ್ರತಿಭಟನಾ ಸಭೆ ನಡೆಯಿತು ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಕೇರಳ ರಾಜ್ಯ ಹಿಂದೂ ಐಕ್ಯವೇದಿಯ ಉಪಾಧ್ಯಕ್ಷ ವೇದಮೂರ್ತಿ ಕುಂಟಾರು ಶ್ರೀ ರವೀಶ ತಂತ್ರಿ ಮಾತನಾಡಿ ಅಕ್ರಮ ಗೋಸಾಗಾಟ ಮತ್ತು ಹತ್ಯೆಯನ್ನು ನಿಷೇಧಿಸಿ ಎಂಬ ಕಾನೂನು ಇದ್ದರೂ ಅದು ಪಾಲನೆಗೆ ಬಂದಿಲ್ಲ. ಜಿಲ್ಲಾಡಳಿತ ಮತ್ತು ಪೋಲಿಸ್ ಇಲಾಖೆಗೆ […]

ಇಂಧನ ಸಚಿವೆ ಶೋಭಾ ಕರಂದ್ಲಾಜೆ ಯವರಿಂದ ಮಂಗಳೂರಿನ ನೂತನ ಮೆಸ್ಕಾಂ ಆಡಳಿತ ಕಚೇರಿ ಕಟ್ಟಡಕ್ಕೆ ಶಿಲಾನ್ಯಾಸ

Thursday, November 15th, 2012
ಇಂಧನ ಸಚಿವೆ ಶೋಭಾ ಕರಂದ್ಲಾಜೆ ಯವರಿಂದ ಮಂಗಳೂರಿನ ನೂತನ ಮೆಸ್ಕಾಂ ಆಡಳಿತ ಕಚೇರಿ ಕಟ್ಟಡಕ್ಕೆ ಶಿಲಾನ್ಯಾಸ

ಮಂಗಳೂರು :ಇಂಧನ ಸಚಿವೆ ಶೋಭಾ ಕರಂದ್ಲಾಜೆ ಇಂದು ನಗರದ ಕಾಪಿಕಾಡ್ ಬಳಿ ಮೆಸ್ಕಾಂ ಆಡಳಿತ ಕಚೇರಿ ಕಟ್ಟಡದ ಕಾಮಗಾರಿಗೆ ಶಿಲಾನ್ಯಾಸ ಮಾಡಿದರು. ನಂತರ ಮಾತನಾಡಿದ ಅವರು ರಾಜ್ಯದಲ್ಲಿ ಹೆಚ್ಚಿನ ವಿದ್ಯುತ್ ಉತ್ಪಾದನೆ ಹಾಗೂ ಉತ್ಪಾದನೆಯಾದ ವಿದ್ಯುತ್ ನ್ನು ಗ್ರಾಹಕರಿಗೆ ಸಮರ್ಪಕವಾಗಿ ತಲುಪಿಸುವ ಕುರಿತು ಅನೇಕ ಸಮಸ್ಯೆಗಳಿದ್ದು ವಿದ್ಯುತ್ ಸಚಿವೆಯಾಗಿ ನೇಮಕಗೊಂಡ ಸಂದರ್ಭದಲ್ಲಿ ಇವೆರಡು ಸವಾಲಿನ ವಿಷಯವಾಗಿ ಪರಿಣಮಿಸಿತ್ತು ಆದರೆ ಅಧಿಕಾರಿಗಳ ಸಹಕಾರದಿಂದ ನಂತರ ಈ ಸಮಸ್ಯೆಗಳನ್ನು ತಕ್ಕ ಮಟ್ಟಿಗೆ ಪರಿಹರಿಸಲಾಯಿತು ಎಂದರು. ಪ್ರಾರಂಭದಲ್ಲಿ ಸರಕಾರ ರಾಜ್ಯಕ್ಕೆ 5000 […]

ಮಂಗಳೂರಿನಲ್ಲಿ ನೂತನ ಮಲ್ಟಿ ಸ್ಪೆಷಾಲಿಟಿ ಕ್ಯಾನ್ಸರ್ ಆಸ್ಪತ್ರೆ

Thursday, November 15th, 2012
Instute of Anchology

ಮಂಗಳೂರು :ಮಂಗಳೂರಿನ ಪಂಪ್ ವೆಲ್ ವೃತ್ತದ ಬಳಿ ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಅಂಕೋಲಜಿ ಆಸ್ಪತ್ರೆ ಯನ್ನು ನಿರ್ಮಿಸಲಾಗಿದ್ದು ಇದರ ಉದ್ಗಾಟನೆಯು ನವೆಂಬರ್ 18 ರಂದು ನಡೆಯಲಿದೆ ಎಂದು ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಆಸ್ಪತ್ರೆಯ ನಿರ್ದೇಶಕರಾದ ಡಾ.ಸುರೇಶ್ ರಾವ್ ತಿಳಿಸಿದರು. ಕ್ಯಾನ್ಸರ್ ರೋಗವು ಮಾರಣಾಂತಿಕವಾಗಿದ್ದು ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಈ ರೋಗ ಚಿಕಿತ್ಸೆಗಾಗಿ ಕರ್ನಾಟಕದ ಕರಾವಳಿ ಪ್ರದೇಶದಲ್ಲಿ ಸರಿಯಾದ ಆಸ್ಪತ್ರೆಗಳಿಲ್ಲದೆ ಇಲ್ಲಿನ ಜನರು ದೂರದ ಮುಂಬಯಿ ಹಾಗೂ ಇನ್ನಿತರ ನಗರಗಳಿಗೆ ತೆರಳುತ್ತಿದ್ದಾರೆ ಇದನ್ನು ಮನಗಂಡು ಮಂಗಳೂರಿನ […]

ಮಕ್ಕಳ ಹಕ್ಕುಗಳ ಮಾಸೋತ್ಸವ-2012ಕ್ಕೆ ಚಾಲನೆ

Thursday, November 15th, 2012
Childs Rights

ಮಂಗಳೂರು : ಬಿಜೈ ಕಾಪಿಕಾಡ್ ನ ಚಿಣ್ಣರ ತಂಗುದಾಣದಲ್ಲಿ ಮಕ್ಕಳ ಮಾಸೋತ್ಸವ ಸಮಿತಿ ದ.ಕ.ಜಿಲ್ಲೆ ಹಾಗೂ ಚೈಲ್ಡ್ ಲೈನ್ ಮಂಗಳೂರು ಇವರ ಆಶ್ರಯದಲ್ಲಿ ಮಕ್ಕಳ ಹಕ್ಕುಗಳ ಮಾಸೋತ್ಸವ ಮತ್ತು ಚೈಲ್ಡ್ ಲೈನ್ ಸೆ ದೋಸ್ತಿ ಸಪ್ತಾಹ 2012 ಕ್ಕೆ ಬುಧವಾರ ದ.ಕ.ಜಿ.ಪಂ.ಉಪಾಧ್ಯಕ್ಷ ರಿತೇಶ್ ಶೆಟ್ಟಿ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ನಾವು ವರ್ಷದಲ್ಲಿ ಒಂದು ದಿನ ಈ ರೀತಿಯ ಆಚರಣೆಯನ್ನು ಆಚರಿಸಿದರೆ ಸಾಲದು, ನಮ್ಮ ಸಮಾಜದಲ್ಲಿ ಎಷ್ಟೋ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಅವರಿಗೆ ಸರಿಯಾದ ಶಿಕ್ಷಣ […]

‘ವರದನಾಯಕ’ನಿಗೆ ದೊಡ್ಡ ಶಕ್ತಿ ಕಿಚ್ಚ ಸುದೀಪ್

Tuesday, November 13th, 2012
Varadanayaka

ಬೆಂಗಳೂರು :’ವರದನಾಯಕ’ ಚಿತ್ರವು ಸುದೀಪ್ ನಾಯಕತ್ವದ ಚಿತ್ರವೇ ಇರಬೇಕು ಎಂದುಕೊಳ್ಳುವಷ್ಟರ ಮಟ್ಟಿಗೆ ‘ವರದನಾಯಕ’ ಚಿತ್ರದ ಪೋಸ್ಟರುಗಳಲ್ಲಿ ಕಿಚ್ಹ ಸುದೀಪ್ ರವರೆ ರಾರಾಜಿಸುತ್ತಿದ್ದಾರೆ. ಆದರೆ ವಾಸ್ತವದಲ್ಲಿ ಈ ‘ವರದನಾಯಕ’ ಚಿತ್ರದ ನಾಯಕ ಸುದೀಪ್ ಅವರಲ್ಲ, ಚಿರಂಜೀವಿ ಸರ್ಜಾ. ಚಿತ್ರದಲ್ಲಿ ಸುದೀಪ್ ನಾಯಕ ಚಿರಂಜೀವಿ ಸರ್ಜಾ ಅಣ್ಣನ ಪಾತ್ರದಲ್ಲಿ ನಟಿಸಿದ್ದಾರೆ. ಇದೇ ಹಿನ್ನೆಲೆಯಲ್ಲಿ ಕೋಟಿ ಕೋಟಿ ರೂಪಾಯಿಗಳನ್ನು ಬಿಡುಗಡೆಗೆ ಮೊದಲೇ ಚಿತ್ರ ಬಾಚಿಕೊಂಡಿದೆ. ಇಲ್ಲಿ ಚಿತ್ರದ ನಾಯಕ ಚಿರಂಜೀವಿ ಸರ್ಜಾ ಆದರೂ ಕಿಚ್ಹ ಸುದೀಪ್ ರವರೆ ಪೋಸ್ಟರ್ ಗಳಲ್ಲಿ ಮಿಂಚುತ್ತಿದ್ದಾರೆ. […]

ಮಂಗಳೂರು : ನಕಲಿ “ಹಿಜಡಾ”ಗಳ ಕಾಟ

Tuesday, November 13th, 2012
Mangalore Hijras

ಮಂಗಳೂರು :ನಾವು ನಿಮ್ಮವರೇ… ನಮ್ಮನ್ನು ನಿಮ್ಮಂತೆ ಕಾಣಿ… ನಮ್ಮ ಬಗ್ಗೆ ಮುಜಗರ… ಆತಂಕ ಬೇಡ. ಸಮಾಜದಲ್ಲಿ ನಮಗೂ ಗೌರವದ ಉದ್ಯೋಗ ಕೊಡಿ… ಭಿಕ್ಷೆ ಬೇಡುವುದನ್ನು ತತ್ಕ್ಷಣದಿಂದ ನಿಲ್ಲಿಸುವೆವು… ಹೀಗೆ ಕೆಲವು ಮಂಗಳಮುಖಿಯರು ಮಾಧ್ಯಮದ ಮೊರೆ ಹೊಕ್ಕಿದ್ದಾರೆ. ಅಂದಹಾಗೆ, ಈ ಮಂಗಳಮುಖಿಯರನ್ನು ತೃತೀಯ ಲಿಂಗಿಗಳು, ಹಿಜಡಾಗಳು, ಚಕ್ಕಾಗಳು, ಹುಸ್ರಾಗಳು, ಕೊಟ್ಟಗಳು ಎಂದೆಲ್ಲಾ ಹೇಳುತ್ತಾರೆ. ನೋಡಲು ಇವರು ಗಂಡಸರ ಹಾಗೆ ಕಾಣುತ್ತಾರೆ. ಆದರೆ ವರ್ತನೆ ಮಾತ್ರ ಹೆಂಗಸರದ್ದು. ಹಾಗಾಗಿ ಇವರಲ್ಲಿ ಹೆಚ್ಚಿನವರು ಹೆಂಗಸಿನ ವೇಷ ಧರಿಸುತ್ತಾರೆ. ಅವರ ಹಾಗೆ ಮಾತನಾಡುತ್ತಾರೆ. […]

ಸಜ್ಜನ “ಹರೇಕಳ ಹಾಜಬ್ಬ”ರಿಗೆ ಕಿರುಕುಳ

Tuesday, November 13th, 2012
Harekala Hajabba

ಮಂಗಳೂರು :ಹರೇಕಳ ಎಂಬ ಗ್ರಾಮದ ಹೆಸರು ಇಂದು ದೇಶ ವಿದೇಶಗಳಲ್ಲಿ ಗುರುತಿಸಲ್ಪಡಲು, ಅಲ್ಲಿನ ಸರಕಾರಿ ಶಾಲೆಗೆ ಖಾಸಗಿ ವ್ಯಕ್ತಿ, ಸಂಘ ಸಂಸ್ಥೆಗಳಿಂದ ಸಾಲು ಸಾಲಾಗಿ ದೇಣಿಗೆ ಬರಲು ಹರೇಕಳ ಹಾಜಬ್ಬ ಕಾರಣ. ಆದರೆ, ಇಂದು ಅದೇ ಹಾಜಬ್ಬರ ಸ್ಥಾನಪಲ್ಲಟಗೊಳಿಸಲು ಹಾಜಬ್ಬರಿಗೆ ಇನ್ನಿಲ್ಲದ ಕಿರುಕುಳ ನೀಡಲಾಗುತ್ತಿದೆ. ಈವತ್ತು ಹರೇಕಳ ಎಂದ ತಕ್ಷಣ ಹಾಜಬ್ಬ ನೆನಪಾಗುತ್ತಾರೆ. ಅವರ ಶಾಲೆ ಕಣ್ಣೆದುರು ಬರುತ್ತದೆ. ಆದರೆ, ಹಾಜಬ್ಬರ ಯಶೋಗಾಥೆಯನ್ನು ಸಹಿಸಲು ಮಾತ್ರ ಸ್ಥಳೀಯ ಕೆಲವರಿಗೆ ಸಾಧ್ಯವಾಗಲಿಲ್ಲ. `ಶಾಲೆಯ ಹೆಸರಿನಲ್ಲಿ ಹಾಜಬ್ಬ ವೈಯಕ್ತಿಕ ಲಾಭ […]

ಇದು ಕರಾವಳಿ “ಪೊಲಿ’ಟಿಕ್ಸ್”!

Tuesday, November 13th, 2012
Karavali Politics

ಮಂಗಳೂರು :2013ರಲ್ಲಿ ಕರ್ನಾಟಕ ರಾಜ್ಯ ವಿಧಾನ ಸಭಾ ಮತ್ತು 2014ರಲ್ಲಿ ಲೋಕಸಭಾ ಚುನಾವಣೆ ನಡೆಯಲಿದೆ. ಪ್ರಮುಖ ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಮತ್ತು ಬಿಜೆಪಿ ಹಾಗು ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಈಗಾಗಲೆ ಮಂಗಳೂರಿನಲ್ಲಿ ತನ್ನ ಚುನಾವಣಾ ಕಸರತ್ತು ಆರಂಭಿಸಿದೆ. ಅಕ್ಟೋಬರ್ 18ರಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮಂಗಳೂರಿಗೆ ಆಗಮಿಸಿ ಸಾವಿರಾರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಪಕ್ಷದ ಕಾರ್ಯಕರ್ತರಲ್ಲಿ ಹುರುಪು ತುಂಬುವಂತೆ ಮಾಡಿದ್ದಾರೆ. ರಾಜ್ಯ ಬಿಜೆಪಿ ಸರಕಾರವನ್ನು ಕಿತ್ತೊಗೆಯುವಂತೆ ಕರೆ ನೀಡಿದ್ದಾರೆ. ಸೋನಿಯಾರ ಮಂಗಳೂರು ಭೇಟಿಯ ಸಂಪೂರ್ಣ ಹೊಣೆ […]

ದೀಪಗಳ ಹಬ್ಬ ದೀಪಾವಳಿಯಲ್ಲಿ ಕತ್ತಲು ಬದುಕಿಗೆ ಬೆಳಕು ಮೂಡಲಿ

Tuesday, November 13th, 2012
Mahabaaratha

ಮಂಗಳೂರು :ಹಬ್ಬ ಎಂದಾಕ್ಷಣ ಮುಖ್ಯವಾಗಿ ನೆನಪಿಗೆ ಬರುವುದೇ ದೀಪಾವಳಿ. ಬಹುಶಃ ಪಟಾಕಿ ಸಿಡಿಸಲು ಅವಕಾಶವಿದೆ ಎಂಬ ಕಾರಣಕ್ಕೆ ಬಾಲ್ಯದಿಂದಲೂ ಮಕ್ಕಳಿಗೆ ಅತ್ಯಂತ ಪ್ರಿಯವಾಗಿ ಬಿಟ್ಟಿರುವುದೇ ಮನದಂಗಳದಲ್ಲಿ ಈ ಮನಸ್ಥಿತಿ ಚಿರಸ್ಥಾಯಿಯಾಗಲು ಕಾರಣವೂ ಇರಬಹುದು. ಸಮಾಜದ ಎಲ್ಲ ವರ್ಗದವರೂ, ಜಾತಿ-ಸಮುದಾಯದವರೂ ಭೇದ-ಭಾವ ಮರೆತು ಭ್ರಾತೃತ್ವ, ಸೌಹಾರ್ದತೆಯ ಪ್ರತೀಕವಾಗಿ ಆಚರಿಸುವ ಹಬ್ಬಗಳಲ್ಲಿ ಅತ್ಯಂತ ಪ್ರಮುಖವಾದದ್ದು ಕೂಡ ದೀಪಾವಳಿಯೇ. ಪ್ರತಿಯೊಂದು ಹಬ್ಬವೂ ತನ್ನದೇ ಆದ ಸಂದೇಶವನ್ನು ಸಾರುತ್ತದೆ. ಅದೇ ರೀತಿ ದೀಪಾವಳಿ ಕೂಡ ಅಜ್ಞಾನದ ಕತ್ತಲನ್ನು ಹೋಗಲಾಡಿಸಿಕೊಳ್ಳುವ ಮನಸ್ಸು ಬೆಳೆಸಿಕೊಳ್ಳಬೇಕೆಂಬ ಸಂದೇಶ […]