ಉಡುಪಿಯ ನೂತನ ಎಸ್ಪಿಯಾಗಿ ಡಾ|ಎಂ.ಬಿ. ಬೋರಲಿಂಗಯ್ಯ ಅಧಿಕಾರ ಸ್ವೀಕಾರ

Saturday, January 28th, 2012
ಉಡುಪಿಯ ನೂತನ ಎಸ್ಪಿಯಾಗಿ ಡಾ|ಎಂ.ಬಿ. ಬೋರಲಿಂಗಯ್ಯ ಅಧಿಕಾರ ಸ್ವೀಕಾರ

ಉಡುಪಿ : ಉಡುಪಿಯ ನೂತನ ಎಸ್ಪಿಯಾಗಿ ಡಾ|ಎಂ.ಬಿ. ಬೋರಲಿಂಗಯ್ಯ ಅವರು ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ. ಹಿಂದಿನ ಎಸ್ಪಿ ಡಾ|ರವಿಕುಮಾರ್‌ ಅವರು ದಾರವಾಡಕ್ಕೆ ವರ್ಗಾವಣೆಗೊಂಡಿದ್ದಾರೆ. ಹೆಚ್ಚುವರಿ ಎಸ್ಪಿ ವೆಂಕಟೇಶಪ್ಪ ಅವರಿಂದ ಅಧಿಕಾರ ಸ್ವೀಕರಿಸಿದ ಬಳಿಕ ಡಾ|ಎಂ.ಬಿ. ಬೋರಲಿಂಗಯ್ಯ ಅವರು, ಸಾಮಾನ್ಯವಾಗಿ ಕರಾವಳಿ ಜಿಲ್ಲೆಯ ಕೋಮು ಸೂಕ್ಷ್ಮ ಪರಿಸ್ಥಿತಿ, ಗಡಿ ಭಾಗದಲ್ಲಿರುವ ನಕ್ಸಲ್‌ ಸಮಸ್ಯೆಗಳ ಪರಿಹಾರಕ್ಕೆ ಬಗ್ಗೆ ಹೆಚ್ಚಿನ ಗಮನ ನೀಡಲಾಗುವುದು, ಅಲ್ಲದೆ ಮುಂದೆ ಬರುವ ಉಪಚುನಾವಣೆಯ ಭದ್ರತೆಯನ್ನು ಸಮರ್ಥವಾಗಿ ನಿರ್ವಹಿಸುವುದಾಗಿ ಪತ್ರಕರ್ತರಿಗೆ ತಿಳಿಸಿದರು. ಮೂಲತಃ ಮಂಡ್ಯ ಜಿಲ್ಲೆ ಮದ್ದೂರು […]

ನೆಹರೂ ಮೈದಾನದಲ್ಲಿ 63ನೇ ಗಣರಾಜ್ಯೋತ್ಸವ ರಾಷ್ಟ್ರ ಧ್ವಜಾರೋಹಣ

Friday, January 27th, 2012
Republic Day

ಮಂಗಳೂರು : ನೆಹರೂ ಮೈದಾನದಲ್ಲಿ ದ.ಕ ಜಿಲ್ಲಾಡಳಿತದ ವತಿಯಿಂದ ನಡೆದ 63ನೇ ಗಣರಾಜ್ಯೋತ್ಸವದ ರಾಷ್ಟ್ರ ಧ್ವಜಾರೋಹಣ ವನ್ನು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಜೆ. ಕೃಷ್ಣ ಪಾಲೆಮಾರ್‌ ನೆವೇರಿಸಿದರು. ಧ್ವಜ ವಂದನೆ ಸ್ವೀಕರಿಸಿದ ಬಳಿಕ ಸಿಎಆರ್‌, ಡಿಎಆರ್‌, ಸಿವಿಲ್‌, ಸಂಚಾರಿ ಪೊಲೀಸ್‌, ಗೃಹರಕ್ಷಕ ದಳ, ಆಗ್ನಿಶಾಮಕ ದಳ, ಎನ್‌ಸಿಸಿ ಆರ್ಮಿ, ನೇವಲ್‌, ಏರ್‌ಪೋರ್ಸ್‌ ಕಿರಿಯ ಮತ್ತು ಹಿರಿಯ, ಭಾರತ ಸೇವಾದಲ ಬಾಲಕರು ಹಾಗೂ ಬಾಲಕಿಯರ ತಂಡ, ರೋಡ್‌ ಸೇಫ್ಟಿ ಪೆಟ್ರೋಲ್‌ ಬಾಲಕರು ಮತ್ತು ಬಾಲಕಿಯರ ತಂಡ, ಸ್ಕೌಟ್ಸ್‌ […]

ಉಪ್ಪಿನಂಗಡಿ ಹಿಂದೂ ಸಮಾಜೋತ್ಸವದಲ್ಲಿ ಎಸ್‌.ಐ. ಮತ್ತು ಯುವಕರ ಮೇಲೆ ಹಲ್ಲೆ

Tuesday, January 24th, 2012
Hindu Samajotsava

ಪುತ್ತೂರು : ಉಪ್ಪಿನಂಗಡಿಯಲ್ಲಿ ಭಾನುವಾರ ನಡೆದ ಹಿಂದೂ ಸಮಾಜೋತ್ಸವದ ವೇಳೆ ಹಿಂದೂ ಕೋಮಿನ ಯುವಕರ ಮೇಲೆ ಕಬ್ಬಿಣದ ರಾಡ್‌ ಮತ್ತು ಕಲ್ಲಿನಿಂದ ಹಲ್ಲೆ ನಡೆಸಿದ ಪ್ರಕರಣ ನಡೆದಿದೆ. ಅದೇ ವೇಳೆ ಸುಬ್ರಹ್ಮಣ್ಯ ಪೊಲೀಸ್‌ ಠಾಣೆಯ ಎಸ್‌.ಐ. ಸುನಿಲ್‌ ಕುಮಾರ್‌ ಮೇಲೆ 200 ಮಂದಿಯ ಗುಂಪು ಕಲ್ಲು ತೂರಾಟ ನಡೆಸಿದ ಪ್ರಕರಣವೂ ನಡೆದಿದೆ. ಉಪ್ಪಿನಂಗಡಿ ಜುಮ್ಮಾ ಮಸೀದಿಯ ಅಧ್ಯಕ್ಷ ಹಾಜಿ ಮುಸ್ತಾಫ ಕೆಪಿ ಎಂಬವರು ಆರ್‌.ಎಸ್‌.ಎಸ್‌. ನೇತಾರ ಡಾ| ಪ್ರಭಾಕರ ಭಟ್‌ ಕಲ್ಲಡ್ಕ, ನ. ಸೀತಾರಾಮ, ಉಪ್ಪಿನಂಗಡಿ ಹಿಂದೂ […]

ಯೋಗ ಗುರು ಬಾಬಾ ರಾಮದೇವ್ ಮುಖಕ್ಕೆ ಮಸಿ ಎಸೆದ ಕಮ್ರಾನ್ ಸಿದ್ದಿಕಿ

Saturday, January 14th, 2012
Baba Ramdev

ನವದೆಹಲಿ : ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡಿದ್ದ  ಯೋಗ ಗುರು ಬಾಬಾ ರಾಮದೇವ್ ಅವರ ಮುಖಕ್ಕೆ ಮಸಿ ಎಸೆದ ಪ್ರಕರಣ ಶನಿವಾರ ಮಧ್ಯಾಹ್ನ ನಡೆದಿದೆ. ಮುಂಬರುವ ಚುನಾವಣೆ ಬಗ್ಗೆ ತಮ್ಮ ನಿಲುವು ಸ್ಪಷ್ಟಪಡಿಸಲು ಬಾಬಾ ರಾಮದೇವ್ ಈ ಸುದ್ದಿಗೋಷ್ಠಿ ಕರೆದಿದ್ದರು. ಆ ವೇಳೆ ಅವರ ವಿರುದ್ಧ ಹಲವರು ಪ್ರತಿಭಟನೆ ನಡೆಸಿ, ಘೋಷಣೆ ಕೂಗತೊಡಗಿದ್ದರು. ಗುಂಪಿನಲ್ಲಿದ್ದ ವ್ಯಕ್ತಿಯೊಬ್ಬ ರಾಮದೇವ್ ಅವರ ಮುಖಕ್ಕೆ ಮಸಿ ಎಸೆದ, ಅತನನ್ನು ರಾಮದೇವ್ ಬೆಂಬಲಿಗರು ದಾಳಿ ನಡೆಸಿ ಥಳಿಸಿದ್ದಾರೆ. ರಾಮದೇವ್ ಅವರನ್ನು ಸ್ಥಳದಿಂದ ಬೇರೆಡೆಗೆ ಕರೆದೊಯ್ಯಲಾಗಿದೆ. ಈ […]

17ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ಮುಖ್ಯಮಂತ್ರಿಗಳಿಂದ ಅದ್ದೂರಿ ಚಾಲನೆ

Friday, January 13th, 2012
National Youth Festival

ಮಂಗಳೂರು : 17ನೇ ರಾಷ್ಟ್ರೀಯ ಯುವಜನೋತ್ಸವವನ್ನು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಮಂಗಳಾ ಕ್ರೀಡಾಂಗಣದಲ್ಲಿ ಗುರುವಾರ ಸಂಜೆ ಉದ್ಘಾಟಿಸಿದರು. ಕೇಂದ್ರ ಸರಕಾರ, ರಾಜ್ಯ ಸರಕಾರ ಹಾಗೂ ನೆಹರೂ ಯುವ ಕೇಂದ್ರ ಜಂಟಿಯಾಗಿ ಸ್ವಾಮಿ ವಿವೇಕಾನಂದರ ಹುಟುಹಬ್ಬದ ಸವಿನೆನಪಿಗಾಗಿ ರಾಷ್ಟ್ರೀಯ ಯುವಜನೋತ್ಸವವನ್ನು ಅದ್ದೂರಿಯಾಗಿ ಆಯೋಜಿಸಿದೆ. ನೆಹರೂ ಮೈದಾನದಲ್ಲಿ ಗುರುವಾರ ಮಧ್ಯಾಹ್ನ ಮೂರು ಗಂಟೆಗೆ ಐದು ದಿನಗಳ ಕಾಲ ನಡೆಯುವ 17ನೇ ರಾಷ್ಟ್ರೀಯ ಯುವಜನೋತ್ಸವದ ಅದ್ದೂರಿ ಮೆರವಣಿಗೆಯನ್ನು ಉಸ್ತುವಾರಿ ಸಚಿವ ಜೆ. ಕೃಷ್ಣ ಪಾಲೆಮಾರ್‌ ಅವರು ಬಣ್ಣದ ಧ್ವಜ […]

ಮಂಗಳೂರಿನಲ್ಲಿ 23ನೇ ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹ ಉದ್ಘಾಟನೆ

Wednesday, January 11th, 2012
Road safty

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾಡಳಿತ, ಸಾರಿಗೆ ಇಲಾಖೆ ಮತ್ತು ಪೊಲೀಸ್‌ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಮಂಗಳವಾರ ಸಂತ ಅಲೋಶಿಯಸ್‌ ಪ.ಪೂ. ಕಾಲೇಜು ಆವರಣದಲ್ಲಿ ಆರಂಭವಾದ 23ನೇ ರಾಷ್ಟ್ರೀಯ ರಸ್ತೆ ಸುರಕ್ಷಾ ಸಪ್ತಾಹವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರು ಉದ್ಘಾಟಿಸಿದರು ರಸ್ತೆ ಸುರಕ್ಷಾ ಸಪ್ತಾಹವನ್ನು ಆಚರಿಸಿದರೆ ಮಾತ್ರ ಸಾಲದು ಅವುಗಳ ಪಾಲನೆಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ಸಾರ್ವಜನಿಕರು ಕೂಡಾ ನಿಯಮ ಅನುಸರಣೆ ಮಾಡುವ ಮೂಲಕ ಸುಗಮ, ಸುರಕ್ಷಿತ ಸಂಚಾರಕ್ಕೆ ನೆರವಾಗ ಬೇಕು ಎಂದು […]

ನದಿಗೆ ಆಟವಾಡಲು ಹೋಗಿದ್ದ ನಾಲ್ವರು ಬಾಲಕರು ನೀರು ಪಾಲು

Monday, January 9th, 2012
Childrens Died

ಬೆಳ್ತಂಗಡಿ :  ರವಿವಾರದ ರಜಾ ಪ್ರಯುಕ್ತ ಮನೆ ಸಮೀಪದ ನದಿಗೆ ಸಂಜೆ ಆಟವಾಡಲು ಹೋಗಿದ್ದ ನಾಲ್ವರು ಬಾಲಕರು  ಸುದೇಮುಗೇರು ಎಂಬಲ್ಲಿ  ನೀರು ಪಾಲಾದ ಘಟನೆ ವರದಿಯಾಗಿದೆ. ಕೇವಲ ಆರಡಿಯಷ್ಟು ನೀರು ನಾಲ್ವರು ಮಕ್ಕಳ ಪ್ರಾಣವನ್ನು ಬಲಿತೆಗೆದು ಕೊಂಡಿದೆ. ಲಾರಿ ನಿಲ್ಲಿಸಿ ಮರಳು ತೆಗೆಯುವ ಸ್ಥಳದಲ್ಲಿ ನೀರಿದ್ದರೂ ನಡೆದಾಡುವಷ್ಟು ಆಳದ ದಾರಿ ಇದೆ.  ರಜಾದ ಮಜಾ ಅನುಭವಿಸಲು ಈ ಮಕ್ಕಳು ಅಪರಾಹ್ನ ಸುಮಾರು 3.30ರ ವೇಳೆಗೆ ನದಿಗೆ ತೆರಳಿದ್ದರು. ಮನೆಯಿಂದ ಸುಮಾರು ಅರ್ಧ ಕಿ.ಮೀ. ದೂರದಲ್ಲಿ ಆಟವಾಡುತ್ತಿದ್ದರು.  3.45ರ ವೇಳೆಗೆ ಮಕ್ಕಳು ಕಾಣೆಯಾಗಿರುವುದು ಬೆಳಕಿಗೆ […]

ಗೋವನಿತಾಶ್ರಯ ಟ್ರಸ್ಟ್‌ ವತಿಯಿಂದ ಮೂರು ದಿನಗಳ ‘ಗೋಮಂಡಲ-ಗೋಪೂಜೆ’

Sunday, January 8th, 2012
Gomandala Gopooja

ಮಂಗಳೂರು : ಗೋವನಿತಾಶ್ರಯ ಟ್ರಸ್ಟ್‌ ಮಂಗಳೂರು ವತಿಯಿಂದ ನಗರದ ನೆಹರೂ ಮೈದಾನದಲ್ಲಿ ಶುಕ್ರವಾರ ಸಂಜೆ ಗೋಧೂಳಿ ಮಹೂರ್ತದಲ್ಲಿ ಮೂರು ದಿನಗಳ ‘ಗೋಮಂಡಲ-ಗೋಪೂಜಾ’ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ನಡೆಯಿತು. ವಜ್ರದೇಹಿ ಸಂಸ್ಥಾನದ ಶ್ರೀ ರಾಜಶೇಖರಾನಂದಜೀ ಸ್ವಾಮೀಜಿ ಅವರು ಆಶೀರ್ವಚನ ನೀಡಿದರು. ಕೊಲ್ಯ ಶ್ರೀ ರಮಾನಂದ ಸ್ವಾಮೀಜಿ ಅವರು ಗೋಮಾತೆಯ ರಕ್ಷಣೆಗೆ ಎಲ್ಲರೂ ಬದ್ಧರಾಗೋಣ ಎಂದು ಕರೆ ನೀಡಿದರು. ಸಮಾರಂಭದ ಮುಖ್ಯ ಅಥಿತಿ ಸ್ಥಾನದಿಂದ ಮಾತನಾಡಿದ ಸಂಸದ ನಳಿನ್‌ ಕುಮಾರ್‌ ಕಟೀಲು ರಾಜ್ಯ ಸರಕಾರ ರೂಪಿಸಿರುವ ಗೋಹತ್ಯೆ ನಿಷೇಧ ಕಾಯ್ದೆಗೆ […]

ರಾಷ್ಟ್ರ ಮಟ್ಟದ ಯುವಜನೋತ್ಸವಕ್ಕೆ 12 ಕೋಟಿ ವೆಚ್ಚದ ಸಿದ್ಧತೆ : ಡಿವಿಎಸ್

Thursday, January 5th, 2012
DV Sadananda Gowda

ಮಂಗಳೂರು : ರಾಷ್ಟ್ರ ಮಟ್ಟದ ಯುವಜನೋತ್ಸವದ ಸಿದ್ಧತೆಗಳ ಬಗ್ಗೆ ಪರಿಶೀಲನೆ ನಡೆಸಿದ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರು ಬುಧವಾರ ಇಲ್ಲಿನ ಸರ್ಕೀಟ್‌ ಹೌಸ್‌ನಲ್ಲಿ ಪತ್ರಕರ್ತರಿಗೆ ಯುವಜನೋತ್ಸವದ ವಿವರಣೆ ನೀಡಿದರು. ಯುವಜನೋತ್ಸವಕ್ಕೆ ರಾಜ್ಯ ಸರಕಾರದದಿಂದ 10 ಕೋಟಿ ರೂ. ಮತ್ತು ಕೇಂದ್ರ ಸರಕಾರದ 2 ಕೋಟಿ ರೂ. ಸಹಿತ ಒಟ್ಟು 12 ಕೋಟಿ ರೂ. ಬಿಡುಗಡೆಯಾಗಿದೆ, ರಾಷ್ಟ್ರ ಮಟ್ಟದ ಯುವಜನೋತ್ಸವವನ್ನು ಕರ್ನಾಟಕದಲ್ಲಿ ಪ್ರಥಮ ಬಾರಿ ನಡೆಸಲಾಗುತ್ತಿದೆ, ಮಂಗಳೂರಿನಲ್ಲಿ ಈ ತಿಂಗಳ 12ರಿಂದ 16ರ ವರೆಗೆ ನಡೆಯಲಿರುವ ಈ ಉತ್ಸವವನ್ನು […]

ಕಂಕನಾಡಿ ಕೋಟಿ ಚೆನ್ನಯ ಗರಡಿ ಕ್ಷೇತ್ರದಲ್ಲಿ ದೇಯಿ ಬೈದೆತಿ ಬಿಂಬ ಪ್ರತಿಷ್ಠಾಪನೆ

Tuesday, January 3rd, 2012
kankanady garadi

ಮಂಗಳೂರು : ನಗರದ ಕಂಕನಾಡಿ  ಕೋಟಿ ಚೆನ್ನಯ ಗರಡಿ ಕ್ಷೇತ್ರದಲ್ಲಿ ಸೋಮವಾರ  ದೇಯಿ ಬೈದೆತಿ ಬಿಂಬ ಪ್ರತಿಷ್ಠಾಪನೆ ಹಾಗೂ ವಿವಿಧ ಸೇವೆಗಳ ಸಮರ್ಪಣಾ ಸಭಾ ಕಾರ್ಯಕ್ರಮ  ನಡೆಯಿತು. ಬಿ. ಜನಾರ್ದನ ಪೂಜಾರಿ ಸಭಾಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ