ಗಣಿ ಧಣಿ ಜನಾರ್ದನ ರೆಡ್ಡಿಗೆ ಸೆಪ್ಟೆಂಬರ್ 19ರವರೆಗೆ ನ್ಯಾಯಾಂಗ ಬಂಧನ

Tuesday, September 6th, 2011
Reddy-Arest

ಬೆಂಗಳೂರು : ಶಾಸಕ ಜನಾರ್ದನ ರೆಡ್ಡಿ ಮತ್ತು ಅವರ ಓಬಳಾಪುರಂ ಎಂಡಿ ಶ್ರೀನಿವಾಸ ರೆಡ್ಡಿ ಅವರನ್ನು ಸೋಮವಾರ ಮುಂಜಾನೆ ಬಳ್ಳಾರಿಯಲ್ಲಿ ಬಂಧಿಸುವ ಜೊತೆಗೆ, ಸಿಬಿಐ ಒಂದಷ್ಟು ಮಹತ್ವದ ದಾಖಲೆಗಳನ್ನೂ ವಶಪಡಿಸಿಕೊಂಡಿದೆ. ರೆಡ್ಡಿಗಳಿಗೆ ಸೆಪ್ಟೆಂಬರ್ 19ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದ್ದು, ಅವರು ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆಯನ್ನು ಸೆ.7ಕ್ಕೆ ನಿಗದಿಪಡಿಸಲಾಗಿದೆ ಜನಾರ್ದನ ರೆಡ್ಡಿ ಬ್ಯಾಂಕ್ ಖಾತೆಗಳು ಜಫ್ತಿ ಮಾಡಲಾಗಿದ್ದು ಮನೆಯಲ್ಲಿದ್ದ 3 ಕೋಟಿ ರೂಪಾಯಿಗೂ ಹೆಚ್ಚು ನಗದು ಹಾಗೂ 30 ಕೆಜಿಗೂ ಹೆಚ್ಚು ಚಿನ್ನವನ್ನೂ ಸಿಬಿಐ ತನ್ನ ವಶಕ್ಕೆ ತೆಗೆದುಕೊಂಡಿದೆ.ಇಷ್ಟೇ […]

ಪ.ಪೂ. ಕಾಲೇಜುಗಳ ಉಪನ್ಯಾಸಕರರಿಂದ ವೇತನ ನೀತಿ ಜಾರಿಗೊಳಿಸಲು ಪ್ರತಿಭಟನೆ

Tuesday, September 6th, 2011
Shikshaka/ಉಪನ್ಯಾಸಕರ ಸಂಘ

ಮಂಗಳೂರು: ಕರ್ನಾಟಕ ರಾಜ್ಯ ಪ.ಪೂ. ಕಾಲೇಜುಗಳ ಉಪನ್ಯಾಸಕರ ಸಂಘದ ಕರೆಯ ಮೇರೆಗೆ ಸಂಘದ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಸದಸ್ಯರು ಜಿಲ್ಲಾಧಿಕಾರಿ ಕಚೇರಿ ಎದುರು ಸೋಮವಾರ ವೇತನ ತಾರತಮ್ಯ ಅಧ್ಯಯನ ಸಮಿತಿಯ ವರದಿಯನ್ನು ಜಾರಿಗೊಳಿಸ ಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಸಂಘದ ದ.ಕ. ಜಿಲ್ಲಾ ಘಟಕದ ಅಧ್ಯಕ್ಷ ಜಯರಾಮ ಶೆಟ್ಟಿ ಮಾತನಾಡಿ 1998 ರಿಂದ ಪ.ಪೂ. ಶಿಕ್ಷಣ ಕ್ಷೇತ್ಸದಲ್ಲಿ ಕೆಲಸ ನಿರ್ವಹಿಸುತ್ತಿರುವ ಪ್ರಾಂಶುಪಾಲರು ಮತ್ತು ಉಪನ್ಯಾಸಕರಿಗೆ 4ನೇ ಮತ್ತು 5 ನೇ ವೇತನ ಆಯೋಗದ ಶಿಫಾರಸು ಅನುಷ್ಠಾನದ […]

ಪುರಭವನದಲ್ಲಿ ಶಿಕ್ಷಕ ದಿನಾಚರಣೆ ಹಾಗೂ ಸನ್ಮಾನ

Monday, September 5th, 2011
Shikshakar /ಶಿಕ್ಷಕರು

ಮಂಗಳೂರು : ದ.ಕ.ಜಿ.ಪಂ. ಸಾರ್ವಜನಿಕ ಇಲಾಖೆ, ದ.ಕ.ಜಿಲ್ಲಾಮಟ್ಟದ ಶಿಕ್ಷಕರ ದಿನಾಚರಣೆ ಸಮಿತಿ ಹಾಗೂ ಮಂಗಳೂರು ನಗರ ವಲಯ ಶಿಕ್ಷಕ ದಿನಾಚರಣೆ ಸಮಿತಿ ಆಶ್ರಯದಲ್ಲಿ ನಗರದ ಪುರಭವನದಲ್ಲಿ ಸೋಮವಾರ ಜರಗಿದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಹಾಗೂ ಸಮ್ಮಾನ ಸಮಾರಂಭವನ್ನು ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಜೆ. ಕೃಷ್ಣ ಪಾಲೆಮಾರ್‌ ಅವರು ಉದ್ಘಾಟಿಸಿದರು. ಉದ್ಘಾಟನೆಯ ಬಳಿಕ ಮಾತನಾಡಿದ ಅವರು ಶಿಕ್ಷಕರನ್ನು ಚುನಾವಣಾ ಸಂಬಂಧಿ ಕರ್ತವ್ಯಗಳು ಸೇರಿದಂತೆ ಇತರ ಇಲಾಖೆಗಳ ಕೆಲಸಗಳಿಗೆ ನಿಯೋಜಿಸುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಇದು ಶಿಕ್ಷಣದ ಗುಣಮಟ್ಟದ […]

ಜಿಲ್ಲಾ ಪೊಲೀಸ್‌ ಕಚೇರಿಯಲ್ಲಿ ಪರಿಶಿಷ್ಟ ಜಾತಿ/ ಪಂಗಡದವರ ದೌರ್ಜನ್ಯ ತಡೆ ಸಭೆ

Monday, September 5th, 2011
SC ST Meeting / ಪರಿಶಿಷ್ಟ ಜಾತಿ ಪಂಗಡದವರ ದೌರ್ಜನ್ಯ ತಡೆ ಸಭೆ

ಮಂಗಳೂರು : ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಾಬೂರಾಮ್‌ ಅಧ್ಯಕ್ಷತೆಯಲ್ಲಿ ರವಿವಾರ ಕಚೇರಿಯ ಸಭಾಂಗಣದಲ್ಲಿ ಪರಿಶಿಷ್ಟ ಜಾತಿ/ ಪಂಗಡದವರ ದೌರ್ಜನ್ಯ ತಡೆ ಕುರಿತಾಗಿ ಸಭೆ ನಡೆಯಿತು. ಸಭೆಯಲ್ಲಿ ಉಪ್ಪಿನಂಗಡಿಯ ಅಂಬೇಡ್ಕರ್‌ ಭವನವನ್ನು ಸಾರ್ವಜನಿಕ ಕಾರ್ಯಕ್ರಮ ನಡೆಸಲು ದಲಿತರಿಗೆ ಬಿಟ್ಟು ಕೊಡಬೇಕು ಅಥವಾ ಅಂಬೇಡ್ಕರ್‌ ಭವನ ನಿರ್ಮಿಸಲು ಪರ್ಯಾಯ ಜಾಗ ಒದಗಿಸಬೇಕು ಎಂದು ಒತ್ತಾಯಿಸಲಾಯಿತು. ಉಪ್ಪಿನಂಗಡಿಯಲ್ಲಿ ಅಂಬೇಡ್ಕರ್‌ ಭವನ 1983 – 84ರಲ್ಲಿ ಸ್ಥಾಪಿಸಲಾಗಿದೆ. 2000 ಇಸವಿ ಬಳಿಕ ಇಲ್ಲಿ ಕಾಲೇಜು ಆರಂಭವಾಗಿದ್ದು ಕಾಲೇಜಿನವರು 35,000 ರೂ. ಖರ್ಚು ಮಾಡಿ […]

ವಿಜಯಾ ಬ್ಯಾಂಕ್‌ ನಿಂದ ಮೀನುಗಾರಿಕಾ ಮಹಿಳೆಯರಿಗೆ ಸಾಲ ಪತ್ರ ವಿತರಣೆ

Sunday, September 4th, 2011
Vijaya Bank/ವಿಜಯಾ ಬ್ಯಾಂಕ್‌

ಮಂಗಳೂರು: ವಿಜಯಾ ಬ್ಯಾಂಕ್‌ ವತಿಯಿಂದ ಸರಕಾರದ ನೂತನ ಯೋಜನೆಯಿಂದ ಮೀನುಗಾರಿಕಾ ಮಹಿಳೆಯರಿಗೆ ಜಂಟಿ ಬಾಧ್ಯತಾ ಗುಂಪು ಯೋಜನೆಯನ್ವಯ ಸಾಲ ಮಂಜೂರಾತಿ ಪತ್ರವನ್ನು ಶನಿವಾರ ನಗರದ ವುಡ್ ಲ್ಯಾಂಡ್ಸ್ ಹೋಟೇಲಿನಲ್ಲಿ ವಿತರಿಸಲಾಯಿತು. ಮೀನುಗಾರ ಮಹಿಳೆಯರನ್ನು ಆರ್ಥಿಕ ಸದೃಢರಾಗಿಸುವ ಉದ್ದೇಶದಿಂದ ರಾಜ್ಯ ಸರಕಾರ ವಿಜಯಾ ಬ್ಯಾಂಕ್‌ ಮೂಲಕ ಪ್ರತಿ ಗುಂಪಿಗೆ ತಲಾ 50 ಸಾವಿರ ರೂ. ಜಾಮೀನು ರಹಿತ ಸಾಲ ನೀಡುತ್ತಿದೆ. ಈ ಪೈಕಿ ಶೇ. 9ರಷ್ಟು ಸರಕಾರ ಸಬ್ಸಿಡಿ ನೀಡುತ್ತಿದೆ. ಮೀನು ಖರೀದಿ, ವ್ಯಾಪಾರ ಚಟುವಟಿಕೆಗಳಿಗೆ ಇದನ್ನು ಬಳಸಿಕೊಳ್ಳಬಹುದು […]

ಮಂಗಳೂರು ದಕ್ಷಿಣ ಉಪ ವಿಭಾಗ ಪೊಲೀಸ್‌ ಕಮಿಷನರೇಟ್ ಕಚೇರಿ ಉದ್ಘಾಟನೆ

Saturday, September 3rd, 2011
Commisionarate/ಪೊಲೀಸ್‌ ಕಮಿಷನರೇಟ್

ಮಂಗಳೂರು : ಪೊಲೀಸ್‌ ಕಮಿಷನರೇಟ್ ನ ಮಂಗಳೂರು ದಕ್ಷಿಣ ಉಪ ವಿಭಾಗ ಕಚೇರಿಯನ್ನು ಪಾಂಡೇಶ್ವರ ಪೊಲೀಸ್‌ ಠಾಣೆಯಲ್ಲಿ ಗುರುವಾರ ಕಮಿಷನರ್‌ ಸೀಮಂತ್‌ ಕುಮಾರ್‌ ಸಿಂಗ್‌ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮಂಗಳೂರು ದಕ್ಷಿಣ ಉಪವಿಭಾಗ ವ್ಯಾಪ್ತಿಗೆ ಪಾಂಡೇಶ್ವರ, ಗ್ರಾಮಾಂತರ, ಉಳ್ಳಾಲ ಮತ್ತು ಕೊಣಾಜೆ ಪೊಲೀಸ್‌ ಠಾಣೆಗಳು ಬರುತ್ತವೆ. ಸೆಂಟ್ರಲ್‌ ಉಪ ವಿಭಾಗದಲ್ಲಿ ಬಂದರು, ಬರ್ಕೆ, ಉರ್ವ, ಕದ್ರಿ, ಮಹಿಳಾ ಪೊಲೀಸ್‌ ಠಾಣೆ ಹಾಗೂ ಉತ್ತರ (ಪಣಂಬೂರು) ಉಪವಿಭಾಗ ವ್ಯಾಪ್ತಿಯಲ್ಲಿ ಪಣಂಬೂರು, ಕಾವೂರು, ಸುರತ್ಕಲ್‌, ಮೂಲ್ಕಿ, ಬಜಪೆ, ಮೂಡಬಿದಿರೆ […]

ಮಗನಿಗೆ ಬಾಯಿಮುಚ್ಚಿ ಕುಳಿತು ಕೊಳ್ಳಲು ಆದೇಶ ನೀಡಿದ : ದೇವೇಗೌಡ

Friday, September 2nd, 2011
Devegowda/ಎಚ್.ಡಿ.ದೇವೇಗೌಡ

ಬೆಂಗಳೂರು : ಮಾಜಿ ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ ಅವರನ್ನು ಟೀಕಿಸುವ ಮೂಲಕ ಸಾರ್ವಜನಿಕವಾಗಿ ಮುಜುಗರಕ್ಕೆ ಗುರಿಯಾಗಿರುವ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ಇನ್ನು ಮುಂದಾದರೂ ಬಾಯಿ ಬಿಡದಂತೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಸೇರಿದಂತೆ ಪಕ್ಷದ ನಾಯಕರು ತಾಕೀತು ಮಾಡಿದ್ದಾರೆ. ಲೋಕಾಯುಕ್ತ ವರದಿಯ ಕುರಿತು ನ್ಯಾಯಾಲಯದಲ್ಲಿಯೇ ಹೋರಾಟ ಮಾಡಬೇಕಾದ ಸಂದರ್ಭದಲ್ಲಿ ಆ ವರದಿಯನ್ನೇ ಸಂಶಯ ಪಡುವ ರೀತಿಯಲ್ಲಿ ಹೆಗ್ಡೆ ಅವರ ಬಗ್ಗೆ ಹೇಳಿಕೆ ನೀಡಬಾರದಿತ್ತು. ಒಮ್ಮೆ ದೇವೇಗೌಡರು ಕ್ಷಮೆಯಾಚಿಸಿದ ನಂತರ ಮತ್ತೊಮ್ಮೆ ಟೀಕೆ ಮಾಡುವಂತಹ ಅಗತ್ಯವಿರಲಿಲ್ಲ ಎಂದು ಸ್ವತಃ ದೇವೇಗೌಡ, […]

ಜಿಲ್ಲೆಯಾದ್ಯಂತ ಭಕ್ತಿ ಸಂಭ್ರಮದ ಗಣೇಶೋತ್ಸವ

Thursday, September 1st, 2011
ಜಿಲ್ಲೆಯಾದ್ಯಂತ ಭಕ್ತಿ ಸಂಭ್ರಮದ ಗಣೇಶೋತ್ಸವ

ಮಂಗಳೂರು : ಭಾದ್ರಪದ ಶುದ್ಧ ಚೌತಿಯ ಪುಣ್ಯ ದಿನ ಗಣೇಶೋತ್ಸವವನ್ನು ಹಿರಿಯ ಕಿರಿಯರೆನ್ನದೆ ದೇಶದ ಉದ್ದಗಲ ಮನು ಕುಲವೆಲ್ಲ ಆಚರಿಸುತ್ತಿದೆ. ಗಲ್ಲಿ ಗಲ್ಲಿಗಳಲ್ಲಿ, ಕೇರಿ ಕೇರಿಗಳಲ್ಲಿ ಗಣೇಶೋತ್ಸವದ ಸಂಬ್ರಮ ಮುಗಿಲು ಮುಟ್ಟಿದೆ. ಗಣೇಶನನ್ನು ಹಲವು ಬಗೆಯಲ್ಲಿ ಜನರು ಪೂಜಿಸುತ್ತಾರೆ. ಗಣಪತಿಯನ್ನು ಹೇಗೆ ರೂಪಿಸಿದರೂ ಆತ ಪೂಜ್ಯನೆ. ಇ೦ದು ಗಣಪತಿ ದೇವಸ್ಥಾನಗಳಲ್ಲಿ ಭಕ್ತರ ಮಹಾಪೂರವೇ ಹರಿದಿದೆ . ಮಂಗಳೂರಿನ ಶರವು, ಕಾಸರಗೋಡು ಜಿಲ್ಲೆಯ ಮಧೂರು, ದ.ಕ. ಜಿಲ್ಲೆಯ ಸೌತಡ್ಕ, ಉಡುಪಿ ಜಿಲ್ಲೆಯ ಆನೆಗುಡ್ಡೆ, ಹಟ್ಟಿಯಂಗಡಿ, ಗುಡ್ಡಟ್ಟು, ಬಾರಕೂರು ಬಟ್ಟೆ […]

ಈದುಲ್‌ ಫಿತರ್‌ ಹಬ್ಬವನ್ನು ಸಂಭ್ರಮೋಲ್ಲಾಸದಿಂದ ಆಚರಿಸಿದ ಮುಸ್ಲಿಮರು

Thursday, September 1st, 2011
Edga Ground

ಮಂಗಳೂರು : ದಕ್ಷಿಣ ಕನ್ನಡ ಸೇರಿದಂತೆ ಉಡುಪಿ, ಕಾಸರಗೋಡು ಜಿಲ್ಲೆಗಳಲ್ಲಿ ಬುಧವಾರ ಮುಸ್ಲಿಮರು ತಮ್ಮ ಪವಿತ್ರ ಈದುಲ್‌ ಫಿತರ್‌ ಹಬ್ಬವನ್ನು ಸಂಭ್ರಮೋಲ್ಲಾಸದಿಂದ ಆಚರಿಸಿದರು. ಮುಸ್ಲೀಮರು ಬೆಳಗ್ಗಿನಿಂದಲೇ ಮೆರವಣಿಗೆ, ಕುತುಬ್ ಪಾರಾಯಣ ಮತ್ತು ನಮಾಜಿನಲ್ಲಿ ಪಾಲ್ಗೊಂಡರು. ಒಂದು ತಿಂಗಳ ಉಪವಾಸವನ್ನು ಪೂರೈಸುವ ಮುಸ್ಲಿಮರು ಹಬ್ಬದಂದು ಹಬ್ಬದಂದು ಬೆಳಗ್ಗೆ ಬಿಳಿ ವಸ್ತ್ರವನ್ನು ಧರಿಸಿ, ಸಮೀಪದ ಮಸೀದಿಯಲ್ಲಿ ನಮಾಝ್ ಮಾಡಿ, ನಂತರ ಪರಿವಾರ ಸಮೇತ ಹತ್ತಿರದ ಬಂಧುಗಳ ಮನೆಗೆ ಭೇಟಿ, ಶುಭಾಶಯ ವಿನಿಮಯ ಮಾಡಿಕೊಳ್ಳವುದು ಈ ಹಬ್ಬದ ವಿಶೇಷತೆ. ಮುಸ್ಲಿಂ ಯುವಕರು ಹಬ್ಬದ […]

ಗಲ್ಲು ಶಿಕ್ಷೆ : ಮದ್ರಾಸ್‌ ಹೈಕೋರ್ಟ್‌ ತಡೆಗೆ ಪೂಜಾರಿ ಆಕ್ರೋಶ

Wednesday, August 31st, 2011
Poojary Press

ಮಂಗಳೂರು : ಮದ್ರಾಸ್‌ ಹೈಕೋರ್ಟ್‌ ಮಾಜಿ ಪ್ರಧಾನಿ ರಾಜೀವ್‌ ಗಾಂಧಿ ಹಂತಕರಿಗೆ ಸುಪ್ರೀಂ ಕೋರ್ಟ್‌ ವಿಧಿಸಿರುವ ಗಲ್ಲು ಶಿಕ್ಷೆಗೆ ಎಂಟು ವಾರಗಳ ತಡೆಯಾಜ್ಞೆ ನೀಡಿರುವುದರ ವಿರುದ್ಧ ಕೇಂದ್ರ ಕೇಂದ್ರ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ . ತಮಿಳುನಾಡು ವಿಧಾನಸಭೆಯಲ್ಲಿ ಹಂತಕರಿಗೆ ವಿಧಿಸಿರುವ ಗಲ್ಲು ಶಿಕ್ಷೆಯನ್ನು ರದ್ದುಗೊಳಿಸಬೇಕು ಎಂದು ನಿರ್ಣಯ ಕೈಗೊಂಡಿರುವುದು ದೇಶದ್ರೋಹಿಗಳಿಗೆ ಕುಮ್ಮಕ್ಕು ನೀಡಿದಂತಾಗಿದೆ. ಹಂತಕರಿಗೆ ಈಗಾಗಲೇ 20 ವರ್ಷ ಜೀವದಾನ ನೀಡಲಾಗಿದೆ. ಇನ್ನು ವಿಳಂಬ ಮಾಡದೆ ಗಲ್ಲು ಶಿಕ್ಷೆಗೊಳಪಡಿಸಬೇಕು ಎಂದು […]