Blog Archive

ಬೀಡಿ ಕಾರ್ಮಿಕರಿಗೆ ನಗದು ವೇತನ ವ್ಯವಸ್ಥೆಯನ್ನೇ ಮುಂದುವರಿಸಬೇಕೆಂದು ಬೀಡಿ ಕಾರ್ಮಿಕರ ಪ್ರತಿಭಟನೆ

Wednesday, January 25th, 2017
Beedi workers

ಮಂಗಳೂರು: ಕೇಂದ್ರ ಸರ್ಕಾರವು ರೂ.500 ಮತ್ತು ರೂ.1000 ನೋಟಿನ ಮಾನ್ಯತೆ ರದ್ದು ಮಾಡಿರುವುದು ಮಾತ್ರವಲ್ಲದೆ ನಗದು ರಹಿತ ವೇತನ ವ್ಯವಸ್ಥೆಗೆ ಆದೇಶ ಹೊರಡಿಸಿದೆ. ಆದರೆ ಕರಾವಳಿ ಜಿಲ್ಲೆಯ ಬೀಡಿ ಕಾರ್ಮಿಕರಿಗೆ ಚಾಲ್ತಿಯಲ್ಲಿರುವಂತೆ ನಗದು ವೇತನ ವ್ಯವಸ್ಥೆಯನ್ನೇ ಮುಂದುವರಿಸಬೇಕೆಂದು ದ.ಕ. ಜಿಲ್ಲಾಧಿಕಾರಿ ಕಚೇರಿ ಎದುರು ಬೀಡಿ ಕಾರ್ಮಿಕರು ಮಂಗಳವಾರ ಪ್ರತಿಭಟನೆ ನಡೆಸಿದರು. ಕಾಂಟ್ರಾಕ್ಟರ್‌ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ರಫಿ ಮಾತನಾಡಿ, ನಗದು ರಹಿತ ವೇತನ ಪದ್ಧತಿ ಕರಾವಳಿ ಜಿಲ್ಲೆಯ ಬೀಡಿ ಕಾರ್ಮಿಕರು ಮತ್ತು ಕಾಂಟ್ರಾಕ್ಟರ್‌ರನ್ನು ಬೀದಿಗೆ […]

ನೀಟ್‌ ಪರೀಕ್ಷೆಯನ್ನು ರಾಜ್ಯ ಸರ್ಕಾರ ಬಹಿಷ್ಕರಿಸಬೇಕು: ಶಾಂತಲಾ ದಾಮ್ಲೆ

Friday, December 30th, 2016
AAP

ಮಂಗಳೂರು: ಅಸ್ಸಾಮಿಯಂತಹ ಭಾಷೆಗೆ ನೀಟ್‍ನಲ್ಲಿ ಅವಕಾಶ ಕಲ್ಪಿಸಿರುವ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ, ಕನ್ನಡ ಕಡೆಗಣಿಸಿದ್ದು, ಬಿಜೆಪಿಯ ಕನ್ನಡ ವಿರೋಧಿ ನೀತಿಯನ್ನು ಪ್ರದರ್ಶಿಸುತ್ತಿದೆ. ಕನ್ನಡ ಇಲ್ಲದ ನೀಟ್‌ ಪರೀಕ್ಷೆಯನ್ನು ರಾಜ್ಯ ಸರ್ಕಾರ ಬಹಿಷ್ಕರಿಸಬೇಕೆಂದು ಆಮ್ ಆದ್ಮಿ ಪಾರ್ಟಿ ಮುಖಂಡೆ ಶಾಂತಲಾ ದಾಮ್ಲೆ ಹೇಳಿದರು. ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸುಪ್ರೀಂ ಕೋರ್ಟ್‍ನ ಆದೇಶದಂತೆ ದೇಶಾದ್ಯಂತ ವೈದ್ಯಕೀಯ ಕಾಲೇಜುಗಳಿಗೆ ಏಕರೂಪ ಪ್ರವೇಶ ಪರೀಕ್ಷೆ ನಡೆಸಲು, ಕೇಂದ್ರ ಸರ್ಕಾರ ನೀಟ್ ಪರೀಕ್ಷೆ ಆಯೋಜಿಸಲು ಮುಂದಾಗಿದೆ. ಕೇಂದ್ರದ ಬಿಜೆಪಿ ನೇತೃತ್ವದ […]

ಬಾಳಿಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರವೀಂದ್ರನಾಥ್‌ ಕಾಮತ್‌ ವಿಶೇಷ ಅಭಿಯೋಜಕರಾಗಿ ನೇಮಕ

Saturday, December 24th, 2016
Vinayak-Baliga-murder-case

ಮಂಗಳೂರು: ಮಾರ್ಚ್ 21 ರಂದು ನಡೆದ ಆರ್‌ಟಿಐ ಕಾರ್ಯಕರ್ತ ವಿನಾಯಕ ಬಾಳಿಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ನ್ಯಾಯವಾದಿ ರವೀಂದ್ರನಾಥ್‌ ಕಾಮತ್‌ ಅವರನ್ನು ಸರ್ಕಾರಿ ವಿಶೇಷ ಅಭಿಯೋಜಕರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ. ಕೊಲೆ ನಡೆದು 8 ತಿಂಗಳಾದರೂ ಸಮಗ್ರ ತನಿಖೆಯಾಗದ ಕಾರಣ ಇವರನ್ನು ರಾಜ್ಯ ಸರ್ಕಾರ ವಿಶೇಷ ಸರ್ಕಾರಿ ಅಭಿಯೋಜಕರನ್ನಾಗಿ ನೇಮಕ ಮಾಡಿದೆ ಎಂದು ತಿಳಿದು ಬಂದಿದೆ. 51 ವರ್ಷದ ವಿನಾಯಕ ಪಿ. ಬಾಳಿಗಾ ಅವರನ್ನು 2016 ಮಾರ್ಚ್‌ 21 ರಂದು ಬೆಳಗ್ಗೆ ನಗರದ […]

ಸಮಾಜದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾದರೆ ಅದಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ: ನಳಿನ್ ಕುಮಾರ್

Friday, October 21st, 2016
Bjp-Workers-Protest

ಮಂಗಳೂರು: ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಆರೋಪಿಗಳನ್ನು ಒಂದು ವಾರದೊಳಗೆ ಬಂಧಿಸುವ ಮೂಲಕ ಸೂಕ್ತ ಶಿಕ್ಷೆಗೊಳಪಡಿಸಬೇಕು. ಸರ್ಕಾರ ನಿರ್ಲಕ್ಷ್ಯ ವಹಿಸಿ, ಸಮಾಜದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾದರೆ ಅದಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆಯಾಗಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಎಚ್ಚರಿಸಿದ್ದಾರೆ. ಅವರು ಭಾರತೀಯ ಜನತಾ ಪಾರ್ಟಿ ದ.ಕ. ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು. ಸಿದ್ದರಾಮಯ್ಯರ ಸರ್ಕಾರದಲ್ಲಿ ದೇಶಭಕ್ತರನ್ನು ದಮನಿಸಲಾಗುತ್ತಿದ್ದು, ಗೋ ಹಂತಕರು, ಭಯೋತ್ಪಾದಕರಿಗೆ ರಕ್ಷಣೆ ನೀಡಲಾಗುತ್ತಿದೆ. ಕಾಂಗ್ರೆಸ್ ಸರ್ಕಾರದ […]

ಸರ್ವ ಕಾಲೇಜು ವಿದ್ಯಾರ್ಥಿ ಸಂಘದಿಂದ ಅ 6 ರಂದು ರಸ್ತಾ ರೋಕೋ

Monday, October 3rd, 2016
sarva-college

ಮಂಗಳೂರು: ಎತ್ತಿನಹೊಳೆ ಯೋಜನೆಗೆ ವಿರೋಧಿಸುತ್ತಿರುವ ಕರಾವಳಿ ಜನರ ಬೇಡಿಕೆಗೆ ರಾಜ್ಯ ಸರ್ಕಾರ ಸ್ಪಂದಿಸದೆ ಇರುವುದನ್ನು ಖಂಡಿಸಿ ಜಿಲ್ಲೆಯ ಸರ್ವ ಕಾಲೇಜು ವಿದ್ಯಾರ್ಥಿ ಸಂಘ ಅ 6 ರಂದು ರಸ್ತಾ ರೋಕೋ ನಡೆಸಲಿದೆ ಎಂದು ಸಂಘದ ರಾಜ್ಯಾಧ್ಯಕ್ಷ ದಿನಕರ ಶೆಟ್ಟಿ ಹೇಳಿದರು. ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂದು ಬೆಳಗ್ಗೆ ಬೆಸೆಂಟ್ ವೃತ್ತದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗು ವುದು ಎಂದು ಎಚ್ಚರಿಸಿದರು. ಜಿಲ್ಲೆಯ ಬಗ್ಗೆ ಸರ್ಕಾರ, ಮುಖ್ಯಮಂತ್ರಿಗಳು, ಕ್ಯಾಬಿನೆಟ್ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ವರ್ತನೆ […]

ತಮಿಳುನಾಡಿಗೆ ಕಾವೇರಿ ನೀರು ಬಿಡುವುದೇ ಬೇಡ: ಜನಾರ್ದನ ಪೂಜಾರಿ

Saturday, October 1st, 2016
covrway-water

ಮಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುವುದೇ ಬೇಡ. ವಿಧಾನಸಭೆ ಹಾಗೂ ವಿಧಾನಪರಿಷತ್ ಮಾಡಿದ ನಿರ್ಣಯವನ್ನೇ ರಾಜ್ಯ ಸರ್ಕಾರ ಅನುಸರಿಸಲಿ. ಕೋರ್ಟ್‌ ನಿಂದನೆ ಮಾಡಿದ ಕಾರಣಕ್ಕೆ ನನ್ನನ್ನು ಜೈಲಿಗಟ್ಟಿದರೂ ತೊಂದರೆಯಿಲ್ಲ ಎಂದು ಕೇಂದ್ರದ ಮಾಜಿ ಸಚಿವರಾದ ಬಿ. ಜನಾರ್ದನ ಪೂಜಾರಿ ಖಡಕ್‌ ಆಗಿ ಹೇಳಿದ್ದಾರೆ. ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಸುಪ್ರೀಂ ತಮಿಳುನಾಡಿಗೆ ದಿನಕ್ಕೆ 6 ಸಾವಿರ ಕ್ಯೂಸೆಕ್‌ ನೀರು ಬಿಡುವಂತೆ ಆದೇಶಿಸಿ ಅನ್ಯಾಯದ ಮೇಲೆ ಅನ್ಯಾಯ ಮಾಡುತ್ತಿದೆ. ಕರ್ನಾಟಕ ಈಗಾಗಲೇ ತಮಿಳುನಾಡು […]

ರಾಜ್ಯ ಸರ್ಕಾರ ಆರಂಭಿಸಿರುವ 161ಕ್ಕೆ ಕರೆ ಮಾಡುವ ಮೂಲಕ ಪಡಿತರ ಕೂಪನ್

Friday, September 30th, 2016
khadar

ಮಂಗಳೂರು: ರಾಜ್ಯ ಸರ್ಕಾರ ಆರಂಭಿಸಿರುವ 161ಕ್ಕೆ ಕರೆ ಮಾಡುವ ಮೂಲಕ ಪಡಿತರ ಕೂಪನ್ ಪಡೆಯುವ ಸರಳ ವಿಧಾನವು ದೇಶದಲ್ಲೇ ಪ್ರಥಮ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ. ಖಾದರ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಇನ್ನು ಪಡಿತರ ಕೂಪನ್‌‌ಗಾಗಿ ಕ್ಯೂ ನಿಲ್ಲಬೇಕಾಗಿಲ್ಲ. ಮೊಬೈಲ್ ಫೋನ್‌‌ನಲ್ಲಿ ಕ್ಷಣಮಾತ್ರದಲ್ಲಿ ಪಡಿತರದಾರರು ತಮಗೆ ಬೇಕಾದ ಆಹಾರ ಸಾಮಗ್ರಿಗಳ ಕೂಪನ್ ಪಡೆಯಬಹುದು. ಪಂಚಾಯತ್‌ನಲ್ಲೂ ಕೂಪನ್‌ ಪಡೆಯುವ ವ್ಯವಸ್ಥೆಯಿದೆ ಎಂದರು. ಈ ಮೊದಲು ಮೂರು ತಿಂಗಳಿಗೊಮ್ಮೆ ಕೂಪನ್ ನೀಡಲು ನಿರ್ಧರಿಸಲಾಗಿತ್ತು. ಆದರೆ […]

ಬ್ರಹ್ಮಶ್ರೀ ನಾರಾಯಣ ಗುರುಗಳ 162ನೇ ಜಯಂತಿ ಆಚರಣೆ

Saturday, September 17th, 2016
Narayana-Guru

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಮೊದಲ ಬಾರಿಗೆ ರಾಜ್ಯ ಸರ್ಕಾರದ ವತಿಯಿಂದ ಸಾಮಾಜಿಕ ಪರಿವರ್ತನೆಯ ಹರಿಕಾರ ಬ್ರಹ್ಮಶ್ರೀ ನಾರಾಯಣ ಗುರುಗಳ 162ನೇ ಜಯಂತಿಯನ್ನು ಆಚರಿಸಲಾಯಿತು. ಜಿಲ್ಲಾಡಳಿತ, ಜಿಪಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಕ್ಷೇತ್ರದ ಕಲ್ಯಾಣ ಮಂಟಪದಲ್ಲಿ ನಡೆದ ಗುರು ಜಯಂತಿಯನ್ನು ಉದ್ಘಾಟಿಸಿದ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ, ಓರ್ವ ದಾರ್ಶನಿಕನಾಗಿ ಸಾಮಾಜಿಕ ಸುಧಾರಣೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳು ನಿರ್ವಹಿಸಿದ ಪಾತ್ರ ಅತಿ ಪ್ರಮುಖವಾದುದು. ಎಲ್ಲರಿಗೂ ಸುಶಿಕ್ಷಿತ ಶಿಕ್ಷಣ ದೊರೆಯಬೇಕು. […]

ರಾಜ್ಯ ಸರ್ಕಾರ ದೊಣ್ಣೆ ಕೊಟ್ಟು ಹೊಡೆಸಿಕೊಂಡಿದೆ: ಮಾಜಿ ಡಿಸಿಎಂ ಅಶೋಕ್‌‌‌

Tuesday, September 13th, 2016
r-ashok

ಬೆಂಗಳೂರು: ಕರ್ನಾಟಕದ ಪಾಲಿಗೆ ಈ ತೀರ್ಪು ದೊಡ್ದ ನೋವುಂಟು ಮಾಡಿದೆ. ಇದೊಂದು ಮಾರಣಾಂತಿಕ ತೀರ್ಪು ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಬೇಸರ ವ್ಯಕ್ತಪಡಿಸಿದ್ದಾರೆ. ಇಂದು ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ದೊಣ್ಣೆ ಕೊಟ್ಟು ಹೊಡೆಸಿಕೊಂಡಿದೆ. ಈ ಹಿಂದೆ ನೀಡಿದ ತೀರ್ಪಿನಲ್ಲಿ 15 ಸಾವಿರ ಕ್ಯೂಸೆಕ್‌‌ ನೀರು ಬಿಡಲು ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಈಗ ಮತ್ತೊಂದು ಅಘಾತ ನೀಡಿದೆ. ಸರ್ಕಾರ ಪ್ರಾರಂಭದಲ್ಲಿ ತಪ್ಪು ಮಾಡಿದೆ. ಇದು ಎರಡನೇ ಮುಖಭಂಗ ಎಂದು ದೂರಿದರು. ಸರ್ಕಾರದ ತಪ್ಪು […]

‘ಸುಪ್ರೀಂ ತೀರ್ಪಿನಿಂದ ರಾಜ್ಯಕ್ಕೆ ಮತ್ತಷ್ಟು ಶಿಕ್ಷೆ… ಪ್ರಧಾನಿ ಮಧ್ಯಪ್ರವೇಶ ಮಾಡಲೇಬೇಕು’

Monday, September 12th, 2016
devegoda

ಬೆಂಗಳೂರು: ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಟೀಕಿಸಲ್ಲ. ಆದರೆ ಇಂದು ಸುಪ್ರೀಂ ಕರ್ನಾಟಕಕ್ಕೆ ಮತ್ತಷ್ಟು ಶಿಕ್ಷೆ ನೀಡಿದೆ. ರಾಜ್ಯ ಸರ್ಕಾರದ ಮೇಲ್ಮನವಿಗೆ ನ್ಯಾಯ ಸಿಗುವ ಬದಲು ಶಿಕ್ಷೆ ಸಿಕ್ಕಿದೆ ಎಂದು ಮಾಜಿ ಪ್ರಧಾನಿ ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಾವೇರಿ ವಿವಾದ ಸಂಬಂಧ ಸುಪ್ರೀಂ ತೀರ್ಪಿನ ನಂತರ ನಗರದ ಖಾಸಗಿ ಹೋಟೆಲ್‌ನಲ್ಲಿ ದೇವೇಗೌಡರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. ಸುಪ್ರೀಂ ಆದೇಶ ಪಾಲಿಸಿ ಎಂದು ನಾನೇ ಹೇಳಿ ನಾರಿಮನ್, ಅನಿಲ್ ದಿವಾನ್ ಹಾಗೂ ಪ್ರಧಾನಿ ಬಳಿ ಹೋಗಿ ಚರ್ಚಿಸಿದ್ದೇನೆ. ಜನ […]