Blog Archive

ಎಡಿಬಿ:ಲೋಕಾಯುಕ್ತ ತನಿಖೆಗೆ ಆಗ್ರಹ

Friday, January 12th, 2018
mangaluru

ಮಂಗಳೂರು: ಮಂಗಳೂರು ಮಹಾ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಎಡಿಬಿ ಮೊದಲ ಹಂತದ ಯೋಜನೆಯಲ್ಲಿ ಕುಡ್ಸೆಂಪ್ ಕೈಗೊಂಡ ಒಳಚರಂಡಿ, ತ್ಯಾಜ್ಯ ಸಂಸ್ಕರಣಾ ಘಟಕ ಕಾಮಗಾರಿ ಕಳಪೆಯಾಗಿದ್ದು, ಬಹುತೇಕ ಕಡೆ ಉಪಯೋಗವಿಲ್ಲದಾಗಿದೆ. ಕಾಮಗಾರಿ ಪೂರ್ಣಗೊಳ್ಳದೆ ಹಸ್ತಾಂತರ ನಡೆಸುವ ಮೂಲಕ ವ್ಯಾಪಕ ಭ್ರಷ್ಟಾಚಾರ ಎಸಗಲಾಗಿದೆ. ಈ ಬಗ್ಗೆ ಲೋಕಾಯುಕ್ತ ತನಿಖೆ ನಡೆಸಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲು ಒತ್ತಾಯಿಸಿದ್ದಾರೆ. ಸುರತ್ಕಲ್ ಮದ್ಯ ಮಾಧವ ನಗರದ ಒಳಚರಂಡಿ ತ್ಯಾಜ್ಯ ಸಂಸ್ಕರಣಾ ಘಟಕ, ಪಡೀಲ್ ಮತ್ತು ಬಜಾಲ್‌ ರೇಚಕ ಸ್ಥಾವರಗಳಿಗೆ ಭೇಟಿ ನೀಡಿ […]

ರೈಲ್ವೇ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಜು.22ರಂದು ಸ್ಥಳ ಪರಿಶೀಲನೆ

Thursday, July 6th, 2017
Nalin Kumar

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಹಾಗೂ ರೈಲ್ವೇ ಇಲಾಖೆಗೆ ಸಂಬಂಧಿಸಿದ ಹಲವು ಸಮಸ್ಯೆಗಳು ನಿವಾರಣೆಯಾಗಿವೆ.  ಮಂಗಳೂರು-ಸುಬ್ರಹ್ಮಣ್ಯ ವ್ಯಾಪ್ತಿಯಲ್ಲಿ ರೈಲ್ವೇಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಶೀಲಿಸಿ ಪರಿಹರಿಸಿಕೊಳ್ಳಲು ಜು.22ರಂದು ಸ್ಥಳ ಪರಿಶೀಲನೆ ನಡೆಸಲಾಗುವುದು ಎಂದು ಸಂಸದ ನಳಿನ್ ಕುಮಾರ್ ತಿಳಿಸಿದ್ದಾರೆ. ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ನಡೆದ ರೈಲ್ವೇ ಅಧಿಕಾರಿಗಳ ಸಭೆಯಲ್ಲಿ ಗುರುವಾರ  ಮಾತನಾಡಿದ  ಸಂಸದ ನಳಿನ್, ಅಧಿಕಾರಿಗಳು ಸಮಸ್ಯೆ ಸೃಷ್ಟಿಯಾಗದಂತೆ ಎಚ್ಚರವಹಿಸಬೇಕು, ರೈಲ್ವೇ ಸಮಸ್ಯೆಗಳ ಕುರಿತಂತೆ ಇಲಾಖೆಯು ಪಿಡಬ್ಲ್ಯೂಡಿ, ರಾಷ್ಟ್ರೀಯ ಹೆದ್ದಾರಿ ಇಲಾಖೆ ಪರಸ್ಪರ ಸಹಭಾಗಿತ್ವದಿಂದ […]

ಜೆಡಿಎಸ್ ಅಧಿಕಾರಕ್ಕೆ ಬಂದರೆ ಎತ್ತಿನಹೊಳೆ ಯೋಜನೆಯಲ್ಲಿ ನಡೆದಿರುವ ಅಕ್ರಮದ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲಾಗುವುದು: ಎಚ್.ಡಿ.ಕೆ

Monday, February 13th, 2017
Kumaraswamy

ಮಂಗಳೂರು: ಎತ್ತಿನಹೊಳೆ ಯೋಜನೆಯನ್ನು ಬಿಜೆಪಿ ಅಧಿಕಾರದಲ್ಲಿದ್ದಾಗ ಸದಾನಂದಗೌಡರೇ ಜಾರಿ ಮಾಡಿದ್ದರು. ಆಗ ವಿರೋಧಿಸದ ನಳೀನ್‌ ಕುಮಾರ್‌ ಇಂದು ವಿರೋಧಿಸುತ್ತಿದ್ದಾರೆ. ಅವರಿಗೆ ನೈತಿಕತೆಯಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಟೀಕಿಸಿದ್ದಾರೆ. ಮಂಗಳೂರಿನಲ್ಲಿ ಮಾತನಾಡಿದ ಅವರು, ಎತ್ತಿನಹೊಳೆ ಯೋಜನೆಯ ಬಗ್ಗೆ ಕಲಾಪದಲ್ಲಿ ಈಗಾಗಲೇ ಮಾತನಾಡಿದ್ದೇನೆ. ಯೋಜನೆಗೆ ಸಾಕಾಗುವಷ್ಟು ನೀರಿಲ್ಲ ಎಂದೂ ತಿಳಿಸಿದ್ದೇನೆ. ಆದರೆ ಎತ್ತಿನಹೊಳೆ ಯೋಜನೆಗೆ ಅಡ್ಡಗಾಲು ಹಾಕಿದ್ದೇನೆ ಎಂದು ನನ್ನ ಮೇಲೆಯೇ ಗೂಬೆ ಕೂರಿಸುತ್ತಿದ್ದಾರೆ ಎಂದರು. ದ.ಕ. ಜಿಲ್ಲೆಯಲ್ಲಿ ಬಿಜೆಪಿ ಸಂಸದ ನಳಿನ್ ಕುಮಾರ್ ಕಟೀಲ್‌ಗೆ ನೈತಿಕತೆಯಿಲ್ಲ. ಬಿಜೆಪಿ […]

ಕಂಬಳ ಕ್ರೀಡೆ ನಡೆಸಲು ಕೇಂದ್ರ ಸರ್ಕಾರ ಕೂಡಲೇ ಅಗತ್ಯ ಕ್ರಮ ಕೈಗೊಳ್ಳಬೇಕು: ನಳಿನ್ ಕುಮಾರ್

Wednesday, February 8th, 2017
Nalin-kumar

ಮಂಗಳೂರು: ಕಂಬಳ ಕ್ರೀಡೆ ನಡೆಸಲು ಕೇಂದ್ರ ಸರ್ಕಾರ ಕೂಡಲೇ ಅಗತ್ಯ ಕ್ರಮ ಕೈಗೊಳ್ಳುವಂತೆ ದ.ಕ. ಸಂಸದ ನಳಿನ್ ಕುಮಾರ್ ಕಟೀಲು ಮನವಿ ಮಾಡಿದ್ದಾರೆ. ಲೋಕಸಭಾ ಚಳಿಗಾಲದ ಅಧಿವೇಶನದಲ್ಲಿ ನಿಯಮ 377ರ ಅಡಿಯಲ್ಲಿ ಮಾತನಾಡಿ ವಿಷಯ ಮಂಡಿಸಿದ ಅವರು, ಕಂಬಳವು ಕರಾವಳಿ ಕರ್ನಾಟಕದ ಒಂದು ಜಾನಪದ ಕ್ರೀಡೆ. ಕೋಣಗಳನ್ನು ಮಣ್ಣಿನ ಗದ್ದೆಯಲ್ಲಿ ಒಡಿಸುವ ಸ್ಪರ್ಧೆಯೇ ಸಾಂಪ್ರದಾಯಿಕ ಕ್ರೀಡೆಯಾಗಿದೆ. ಕಂಬಳದ ಇತಿಹಾಸದಲ್ಲಿ ಕೋಣಗಳನ್ನು ಯಾವುದೇ ರೀತಿಯಾಗಿ ಹಿಂಸಿಸುವ ಹಾಗೂ ಈ ಕ್ರೀಡೆಯ ಸಂದರ್ಭದಲ್ಲಿ ಕೋಣಗಳು ಮೃತಪಟ್ಟ ನಿದರ್ಶನಗಳಿಲ್ಲ. ಈ ಕ್ರೀಡೆಯು […]

ಬ್ಯಾಂಕ್‌ಗಳಲ್ಲಿ ಖಾತೆಗಳಿಗೆ ಆಧಾರ್ ಲಿಂಕ್ ಕಾರ್ಯ ಡಿ. 31ರೊಳಗೆ ಮುಗಿಸಬೇಕು: ನಳಿನ್ ಕುಮಾರ್

Friday, December 30th, 2016
Nalin Kumar Kateel

ಮಂಗಳೂರು: ಬ್ಯಾಂಕ್‌ಗಳಲ್ಲಿ ಖಾತೆಗಳಿಗೆ ಆಧಾರ್ ಲಿಂಕ್ ಕಾರ್ಯ ಶೇ. 55ರಷ್ಟು ಮಾತ್ರ ಪೂರ್ಣಗೊಂಡಿದ್ದು, ಉಳಿದ ಲಿಂಕ್ ಕಾರ್ಯವನ್ನು ಡಿ. 31ರೊಳಗೆ ಮುಗಿಸಬೇಕೆಂದು ಸಂಸದ ನಳಿನ್ ಕುಮಾರ್ ಕಟೀಲ್ ಬ್ಯಾಂಕ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಗುರುವಾರ ಜಿಲ್ಲಾ ಬ್ಯಾಂಕ್‌ಗಳ ಪರಿಶೀಲನಾ ಸಮಿತಿಯಿಂದ ಜಿ ಪಂ ಸಭಾಂಗಣದಲ್ಲಿ ನಡೆದ ಜಿಲ್ಲಾ ಬ್ಯಾಂಕಿಂಗ್ ಅಭಿವೃದ್ಧಿ ಕುರಿತ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಇನ್ನೂ 1 ಲಕ್ಷ ಮಂದಿಯ ಆಧಾರ್ ಲಿಂಕ್ ಕಾರ್ಯ ಬಾಕಿಯಿದೆ. ಇದನ್ನು ತ್ವರಿತಗೊಳಿಸದಿದ್ದರೆ ಉದ್ಯೋಗ ಖಾತರಿ ಯೋಜನೆಯ ಕಾರ್ಮಿಕರ […]

ದ್ವಿತೀಯ ಸ್ವಾತಂತ್ರ್ಯ ಸಂಗ್ರಾಮದಂತಹ ಕ್ರಾಂತಿಕಾರಿ ಹೋರಾಟ ನಿಶ್ಚಿತ: ನಳಿನ್ ಕುಮಾರ್

Monday, December 12th, 2016
Ratha-yathre

ಪುತ್ತೂರು: ಎತ್ತಿನಹೊಳೆ ಯೋಜನೆಯ ಬಗ್ಗೆ ದ.ಕ ಜಿಲ್ಲೆಯ ಜನರನ್ನು ಮಾತುಕತೆಗೆ ಕರೆಯದಿದ್ದರೆ, ಮುಂಬರುವ ದಿನಗಳಲ್ಲಿ ದ.ಕ. ಜಿಲ್ಲೆಯ ಪಾಲಿಗೆ ದ್ವಿತೀಯ ಸ್ವಾತಂತ್ರ್ಯ ಸಂಗ್ರಾಮದಂತಹ ಕ್ರಾಂತಿಕಾರಿ ಹೋರಾಟ ನಿಶ್ಚಿತವೆಂದು ಸಂಸದ ನಳಿನ್ ಕುಮಾರ್ ಕಟೀಲ್ ಘೋಷಿಸಿದ್ದಾರೆ. ಅವರು ಪಂಚ ತೀರ್ಥ – ಸಪ್ತ ಕ್ಷೇತ್ರ ರಥ ಯಾತ್ರೆಯು ನೇತ್ರಾವತಿ ಕುಮರಾಧಾರ ನದಿ ಸಂಗಮ ಸ್ಥಳದ ತೀರ್ಥ ಸಂಗ್ರಹಣೆಗಾಗಿ ಭಾನುವಾರ ಉಪ್ಪಿನಂಗಡಿಗೆ ಆಗಮಿಸಿದ ಹಿನ್ನೆಲೆಯಲ್ಲಿ ನಡೆದ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದರು. ಕಳೆದ ಮೂರು ವರ್ಷಗಳಿಂದ ಜಿಲ್ಲೆಯ ಜನತೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ. […]

ಸಮಾಜದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾದರೆ ಅದಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆ: ನಳಿನ್ ಕುಮಾರ್

Friday, October 21st, 2016
Bjp-Workers-Protest

ಮಂಗಳೂರು: ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಆರೋಪಿಗಳನ್ನು ಒಂದು ವಾರದೊಳಗೆ ಬಂಧಿಸುವ ಮೂಲಕ ಸೂಕ್ತ ಶಿಕ್ಷೆಗೊಳಪಡಿಸಬೇಕು. ಸರ್ಕಾರ ನಿರ್ಲಕ್ಷ್ಯ ವಹಿಸಿ, ಸಮಾಜದಲ್ಲಿ ಅಶಾಂತಿಯ ವಾತಾವರಣ ನಿರ್ಮಾಣವಾದರೆ ಅದಕ್ಕೆ ರಾಜ್ಯ ಸರ್ಕಾರವೇ ನೇರ ಹೊಣೆಯಾಗಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಎಚ್ಚರಿಸಿದ್ದಾರೆ. ಅವರು ಭಾರತೀಯ ಜನತಾ ಪಾರ್ಟಿ ದ.ಕ. ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು. ಸಿದ್ದರಾಮಯ್ಯರ ಸರ್ಕಾರದಲ್ಲಿ ದೇಶಭಕ್ತರನ್ನು ದಮನಿಸಲಾಗುತ್ತಿದ್ದು, ಗೋ ಹಂತಕರು, ಭಯೋತ್ಪಾದಕರಿಗೆ ರಕ್ಷಣೆ ನೀಡಲಾಗುತ್ತಿದೆ. ಕಾಂಗ್ರೆಸ್ ಸರ್ಕಾರದ […]

ಮಂಗಳೂರು ಭಾಗದ ರೈಲ್ವೆ ಹಳಿ ದ್ವಿಪಥ ಕಾಮಗಾರಿಗೆ 327.00 ಕೋಟಿ ರೂ. ಅನುದಾನ: ನಳಿನ್ ಕುಮಾರ್

Tuesday, August 30th, 2016
nalin-kumar-kateel

ಮಂಗಳೂರು: ಮಂಗಳೂರು ಭಾಗದ ರೈಲ್ವೆ ಹಳಿ ದ್ವಿಪಥ ಕಾಮಗಾರಿಗೆ ಕೇಂದ್ರ ಸರ್ಕಾರದಿಂದ 327.00 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. ಮಂಗಳೂರು ಜಂಕ್ಷನ್‌‌‌‌ನಿಂದ ಪಣಂಬೂರು ವರೆಗಿನ ಒಟ್ಟು 19 ಕಿ.ಮೀ ದ್ವಿಪಥ ಕಾಮಗಾರಿಗೆ ರೂ.327.00 ಕೋಟಿ ಅನುದಾನ ಈಗಾಗಲೇ ಬಿಡುಗಡೆಯಾಗಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಹೆಚ್ಚುವರಿಯಾಗಿ ಈ ಕಾಮಗಾರಿಗೆ 2016-17ನೇ ಸಾಲಿಗೆ 100.00ಕೋಟಿ ರೂ. ಅನುದಾನವನ್ನು ಕಾಯ್ದಿರಿಸಲಾಗಿದೆ ಎಂದರು. ಇನ್ನು ನೇತ್ರಾವತಿ ಕ್ಯಾಬಿನ್‌‌‌‌‌ನಿಂದ ಮಂಗಳೂರು ಕೇಂದ್ರ ರೈಲು ನಿಲ್ದಾಣದವರೆಗಿನ […]

ನೇತ್ರದಾನ ಮಾಡುವ ಸಂಕಲ್ಪ ಪತ್ರಕ್ಕೆ ಸಹಿ ಹಾಕುವ ಮೂಲಕ ಸಾಮಾಜಿಕ ಬದ್ಧತೆ: ಮೆರೆದ ನಳಿನ್‌ ಕುಮಾರ್‌

Monday, August 29th, 2016
Nalin

ಮಂಗಳೂರು: ನಗರದ ಕರಂಗಲ್ಪಾಡಿಯಲ್ಲಿಧಿರುವ ನಯನ ನೇತ್ರಾಲಯದಲ್ಲಿ ಸಂಸದ ನಳಿನ್‌ ಕುಮಾರ್‌ ಕಟೀಲು ನೇತ್ರದಾನ ಮಾಡುವ ಸಂಕಲ್ಪ ಪತ್ರಕ್ಕೆ ಸಹಿ ಹಾಕುವ ಮೂಲಕ ಸಾಮಾಜಿಕ ಬದ್ಧತೆ ಮೆರೆದಿದ್ದಾರೆ. ಕಾರ್ನಿಯಾ ಅಂಧತ್ವ ಮುಕ್ತ ಭಾರತ (ಕಾಂಬಾ) ಅಭಿಧಿಯಾನದ ಅಂಗವಾಗಿ ದ.ಕ. ಜಿಲ್ಲಾ ಬಿಜೆಪಿ ಆರೋಗ್ಯ ಪ್ರಕೋಷ್ಠ, ಸಮದೃಷಿÒ ಕ್ಷಮತಾ ವಿಕಾಸ ಮತ್ತು ಅನುಧಿಸಂಧಾನ ಮಂಡಲದ (ಸಕ್ಷಮ) ಸಹಯೋಗಧಿದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಅವರು ನೇತ್ರದಾನ ಸಂಕಲ್ಪ ಪತ್ರಕ್ಕೆ ಸಹಿ ಹಾಕಿದರು. ನಯನ ನೇತ್ರಾಲಯದ ನೇತ್ರತಜ್ಞ ಡಾ| ವಿಷ್ಣು ಪ್ರಭು ಸಂಕಲ್ಪ ಪತ್ರ […]

ಠೇವಣಿ ರಹಿತ ಎಲ್.ಪಿ.ಜಿ. ಸಂಪರ್ಕ:ವಿಸ್ತರಣೆಗೆ ಒತ್ತಡ : ಸಂಸದ ನಳಿನ್

Monday, March 30th, 2015
Nalin Kumar Kateel

ಮಂಗಳೂರು : ಬಿಪಿಎಲ್ ಕುಟುಂಬಗಳಿಗೆ ಠೇವಣಿ ರಹಿತ ಗ್ಯಾಸ್ ಸಂಪರ್ಕ ನೀಡುವ ವ್ಯವಸ್ಥೆಯನ್ನು ಮುಂದುವರಿಸಲು ತೈಲ ಕಂಪೆನಿಗಳಿಗೆ ಸೂಚಿಸುವುದಾಗಿ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್ ತಿಳಿಸಿದ್ದಾರೆ. ಅವರು ಸೋಮವಾರ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಾಗೃತಿ ಉಸ್ತುವಾರಿ ಸಮಿತಿ ಸಭೆಯಲ್ಲಿ ಮಾತನಾಡಿದರು. ಈ ಯೋಜನೆ ಮಾರ್ಚ್ 31 ಕ್ಕೆ ಕೊನೆಗೊಳ್ಳಲಿದ್ದು,ಈ ನಿಟ್ಟಿನಲ್ಲಿ ಎಪ್ರಿಲ್ 1 ರ ಬಳಿಕವೂ ವಿಸ್ತರಿಸಲು ಸಂಬಂಧಪಟ್ಟ ತೈಲ ಕಂಪೆನಿಗಳಿಗೆ ತಿಳಿಸುವುದಾಗಿ ಅವರು ಹೇಳಿದರು.ಎಪ್ರಿಲ್ ಮೊದಲ ವಾರದಲ್ಲಿ ಕೇಂದ್ರ ಪೆಟ್ರೋಲಿಯಂ ಸಚಿವಧಮೇಂದ್ರ ಪ್ರಧಾನ್ […]