Blog Archive

ಉಪ ಆಯುಕ್ತರನ್ನು ತರಾಟೆ ತೆಗದುಕೊಂಡ ಸಂಸದ ಪ್ರತಾಪ್ ಸಿಂಹ

Saturday, January 27th, 2018
pratap-simha

ಮೈಸೂರು: ಹುಣಸೂರು ನಗರದಲ್ಲಿ ಶನಿವಾರ ಆಯೋಜಿಸಿರುವ ಹನುಮ ಜಯಂತಿಯ ವೇಳೆ ಮಾಧ್ಯಮಗಳನ್ನು ನಿಯಂತ್ರಿಸಲು ಬಂದ ಉಪ ಆಯುಕ್ತರನ್ನು ಸಂಸದ ಪ್ರತಾಪ್ ಸಿಂಹ ತರಾಟೆಗೆ ತೆಗೆದುಕೊಂಡಿದ್ದಾರೆ. ನೀವೇನೂ ಭಿಕ್ಷೆ ನೀಡಿ ನಮಗೆ ಮೆರವಣಿಗೆಗೆ ಅವಕಾಶ ಕೊಟ್ಟಿಲ್ಲ. ನೀವು ಸೂಚಿಸಿದ ಮಾರ್ಗದಲ್ಲಿ ನಾವು ತೆರಳುತ್ತಿದ್ದೇವೆ. ನಮ್ಮ ಮೇಲೆ ಒತ್ತಡ ಹಾಕಿದ್ರೆ ನಾನು ಇಲ್ಲೆ ರಸ್ತೆಯಲ್ಲೇ ಕೂರುತ್ತೇನೆ ಎಂದು ಪ್ರತಾಪ್ ಸಿಂಹ ಉಪ ಆಯುಕ್ತರಿಗೆ ಎಚ್ಚರಿಕೆ ನೀಡಿದ್ದಾರೆ. ನಮ್ಮ ಭಾವನೆಗಳಿಗೆ ಧಕ್ಕೆ ಉಂಟಾದ್ರೆ ಕೋಪ ಬರುತ್ತೆ. ಕೋಪ ಬಂದಾಗ ಗಲಾಟೆ ಆಗುತ್ತೆ. […]

ನಮ್ಮ ಲೆಕ್ಕ ಕೇಳಲು ಅಮಿತ್‌ ಶಾ ಯಾರು? ಸಿಎಂ ಕಿಡಿ

Thursday, January 11th, 2018
siddaramaih

ಮೈಸೂರು: ಕೇಂದ್ರ ಸರಕಾರ ನೀಡಿದ ಅನುದಾನವನ್ನು ರಾಜ್ಯ ಸರ್ಕಾರ ಭ್ರಷ್ಟಾಚಾರಕ್ಕೆ ಬಳಸಿಕೊಂಡಿದೆ ಎಂದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಗುರುವಾರ ತಿರುಗೇಟು ನೀಡಿದ್ದು ‘ನಮ್ಮ ಲೆಕ್ಕ ಕೇಳಲು ಶಾ ಯಾರು’ ಎಂದು ಪ್ರಶ್ನಿಸಿದ್ದಾರೆ. ಎಚ್‌ಡಿ ಕೋಟೆಯ ಸರಗೂರಿನಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ‘ಕೇಂದ್ರ ಸರಕಾರ ಕಾನೂನಾತ್ಮಕವಾಗಿ ನಮಗೆ ನೀಡಬೇಕಾಗಿದ್ದ ನಮ್ಮ ತೆರಿಗೆ ಪಾಲನ್ನು ಕೊಟ್ಟಿದ್ದಾರೆ. ನಾವು ಖರ್ಚು ಮಾಡಿದ ಲೆಕ್ಕವನ್ನು ರಾಜ್ಯದಜನರಿಗೆ ನೀಡಬೇಕೆ ಹೊರತು ಶಾಗೆ ಅಲ್ಲ. ಅದನ್ನು ಕೇಳಲು ಅವರು ಯಾರು’ ಎಂದರು. […]

ಗ್ಯಾಸ್‌ಗೆ ಆಧಾರ್ ಗೊಡವೆ ಇಲ್ಲ

Tuesday, March 11th, 2014
Sylinder

ಮೈಸೂರು: ಅಡುಗೆ ಅನಿಲ ಸಿಲಿಂಡರ್ ಪಡೆಯಲು ‘ಆಧಾರ್’ ಇನ್ನು ಅಡ್ಡಿಯಾಗದು. ರಾಜ್ಯದೆಲ್ಲೆಡೆ ಸಬ್ಸಿಡಿ ಸಿಲಿಂಡರ್ ಗ್ರಾಹಕರ ಮನೆ ಬಾಗಿಲಿಗೆ ಬರಲಿದೆ. ಇದರ ಅರ್ಥ ಸಿಲಿಂಡರ್ ಏಜೆನ್ಸಿಗಳಿಗೆ ಆಧಾರ್ ಸಂಖ್ಯೆ ನೀಡಿ, ಅದನ್ನು ತಮ್ಮ ಬ್ಯಾಂಕ್ ಖಾತೆಗಳಿಗೆ ಲಿಂಕ್ ಮಾಡಬೇಕೆಂಬ ನಿಯಮ ಕೈಬಿಡಲಾಗಿದೆ. ಈ ನಿಯಮ ಆಧಾರ್ ಪೈಲಟ್ ಯೋಜನೆ ಜಾರಿಗೊಂಡ ರಾಜ್ಯದ ಮೂರು ಜಿಲ್ಲೆಗಳಾದ ಮೈಸೂರು, ತುಮಕೂರು ಮತ್ತು ಧಾರವಾಡ ಜಿಲ್ಲೆಗಳಿಗೂ ಅನ್ವಯವಾಗಿದೆ. ಪ್ರತಿಯೊಬ್ಬ ಗ್ರಾಹಕ ವರ್ಷಕ್ಕೆ 11 ಸಿಲಿಂಡರ್‌ಗಳನ್ನು ಪಡೆಯಬಹುದಾಗಿದ್ದು, ಪ್ರತಿ ಸಿಲಿಂಡರ್‌ಗೆ 423 ರೂ. […]

ಸಿಎಂ ತವರಿಗೆ ಸುವರ್ಣ ಭಾಗ್ಯ

Saturday, March 8th, 2014
Siddaramaiah

ಮೈಸೂರು: ಮೈಸೂರು ತಾಲೂಕು ಸಿದ್ದರಾಮನಹುಂಡಿಯ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಗಳಾಗಿ ಒಂಬತ್ತೂವರೆ ತಿಂಗಳುಗಳಾಗಿದ್ದರೂ ಈವರೆಗೆ ಸ್ವಗ್ರಾಮಕ್ಕೆ ಭೇಟಿ ನೀಡಲು ಆಗಿಲ್ಲ. ಆದರೆ ಅಭಿವೃದ್ಧಿ ಭಾಗ್ಯ ದೊರೆತಿದೆ. ಸಿದ್ದರಾಮನಹುಂಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳನ್ನು ಸುವರ್ಣ ಗ್ರಾಮೋದಯ ಯೋಜನೆಯಲ್ಲಿ ಅಭಿವೃದ್ಧಿಪಡಿಸಲು 9.60 ಕೋಟಿ ಬಿಡುಗಡೆ ಮಾಡಲಾಗಿದೆ. ಸುವರ್ಣ ಗ್ರಾಮೋದಯ ಯೋಜನೆಯ 5ನೇ ಹಂತದಲ್ಲಿ ಮೈಸೂರು ತಾಲೂಕಿಗೆ ರಾಜ್ಯ ಸರ್ಕಾರ 6.86 ಕೋಟಿ ನಿಗದಿಪಡಿಸಿತ್ತು. ಇದಕ್ಕಾಗಿ ಒಟ್ಟು 32,845 ಜನಸಂಖ್ಯೆ ಇರುವ 16 ಗ್ರಾಮಗಳನ್ನು ಆಯ್ಕೆ ಮಾಡಲಾಗಿತ್ತು. ಈ ಪೈಕಿ ಸಿದ್ದರಾಮನಹುಂಡಿ ಹಾಗೂ […]

ಐಟಿ ಬಿಟಿಯತ್ತ ಯುವಜನಾಂಗ: ಡಾ.ಸಲೀಂ ವಿಷಾದ

Wednesday, March 5th, 2014
M.A.-Salim

ಮೈಸೂರು: ಇಂದಿನ ಯುವಜನತೆ ಹೆಚ್ಚಾಗಿ ಐಟಿ ಬಿಟಿಯತ್ತ ಮುಖ ಮಾಡಿದೆ ಎಂದು ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ಹೇಳಿದರು. ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಹೊಸಮಠದ ಸಭಾಂಗಣದಲ್ಲಿ ಲಿಂಗೈಕ್ಯ ವಿದ್ವಾನ್ ಗುರುಶಾಂತಸ್ವಾಮಿಗಳ ಸ್ಮರಣಾರ್ಥ ಮಂಗಳವಾರ ಏರ್ಪಡಿಸಿದ್ದ ಅಂತರ ಕಾಲೇಜು ಕನ್ನಡ ಚರ್ಚಾ ಸ್ಪರ್ಧೆ ಉದ್ಘಾಟಿಸಿ ಅವರು ಮಾತನಾಡಿದರು. ಬದುಕಿನಲ್ಲಿ ಹಣ ಸಂಪಾದನೆಯೇ ಮುಖ್ಯವಲ್ಲ. ಆದರೆ ಇಂದು ಹಣದತ್ತ ಹೆಚ್ಚಿನ ಆಸಕ್ತಿಯನ್ನು ತೋರಿಸುತ್ತಿರುವ ಕಾರಣ, ನಾವು ಹುಟ್ಟಿದ ನಾಡು, ಕಲೆ ಹಾಗೂ ಸಂಸ್ಕೃತಿ […]

ಉದ್ಯೋಗ ಧಮಾಕಾ…

Monday, February 24th, 2014
Job-Fair

ಮೈಸೂರು: ಸರ್ಕಾರ ಈಗಾಗಲೇ ರಾಜ್ಯಾದ್ಯಂತ ಹಲವು ಸುತ್ತಿನ ಉದ್ಯೋಗ ಮೇಳವನ್ನು ಆಯೋಜಿಸಿ ಯಶಸ್ವಿಯಾಗಿದ್ದು, ಇದೀಗ ಮೈಸೂರಿನಲ್ಲಿ ಎರಡು ದಿನಗಳ ಬೃಹತ್ ಉದ್ಯೋಗ ಮೇಳ ಏರ್ಪಡಿಸಿದೆ. ಭಾನುವಾರ ಆರಂಭವಾದ ಮೇಳದಲ್ಲಿ ಸಾವಿರಾರು ಉದ್ಯೋಗಾಕಾಂಕ್ಷಿಗಳು ಪಾಲ್ಗೊಂಡು ಮೊದಲನೇ ದಿನ ಯಶಸ್ವಿಗೊಳಿಸಿದರು. ಮಹಾರಾಜ ಕಾಲೇಜು ಮೈದಾನದಲ್ಲಿ ಭವ್ಯ ವೇದಿಕೆ ನಿರ್ಮಿಸಿ 206 ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಮಾಹಿತಿ ತಂತ್ರಜ್ಞಾನ, ಆಟೋಮೊಬೈಲ್, ಬ್ಯಾಂಕಿಂಗ್, ಫೈನಾನ್ಸಿಯಲ್, ಹೆಲ್ತ್‌ಕೇರ್, ಹಾಸ್ಟಿಟಾಲಿಟಿ, ಮ್ಯಾನ್ಯೂಫ್ಯಾಕ್ಚುರಿಂಗ್, ಸೇಲ್ಸ್, ಮಾರ್ಕೆಟಿಂಗ್, ಟೆಲಿಕಾಂ, ತರಬೇತಿ, ಗಾರ್ಮೆಂಟ್ಸ್, ವಿಮಾ ಕ್ಷೇತ್ರ, ಭದ್ರತೆ ವಲಯ ಸೇರಿದಂತೆ ಒಟ್ಟು […]

ಪರೀಕ್ಷೆಗೆ ಸೀಮಿತವಾಗದಿರಲಿ ಸಿದ್ಧತೆ

Friday, February 21st, 2014
S.Rangappa

ಮೈಸೂರು: ವಿದ್ಯಾರ್ಥಿಗಳು ಕೇವಲ ಸ್ಪರ್ಧಾತ್ಮಕ ಪರೀಕ್ಷೆಗಷ್ಟೇ ಸೀಮಿತವಾಗದೆ ಎಲ್ಲ ವಿಷಯಗಳಲ್ಲೂ ವಿಶೇಷ ಕೌಶಲ್ಯ ಬೆಳೆಸಿಕೊಂಡು ಪರಿಣತಿ ಸಾಧಿಸುವಂತೆ ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಕರೆ ನೀಡಿದರು. ಮೈಸೂರು ವಿವಿ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ವಿಶೇಷ ಘಟಕ, ವಿದ್ಯಾರ್ಥಿ ಕ್ಷೇಮಾಪಾಲನ ಕೇಂದ್ರ ಹಾಗೂ ಸಾಮರ್ಥ್ಯಾಭಿವೃದ್ಧಿ ಮತ್ತು ಉದ್ಯೋಗಾವಕಾಶಗಳ ಸೇವಾ ಕೇಂದ್ರದ ಸಂಯುಕ್ತಾಶ್ರಯದಲ್ಲಿ ಗುರುವಾರ ಮಾನಸ ಗಂಗೋತ್ರಿಯ ಸೆನೆಟ್ ಭವನದಲ್ಲಿ ಏರ್ಪಡಿಸಿದ್ದ ಬೌದ್ಧಿಕ ಕೌಶಲ್ಯಾಭಿವೃದ್ಧಿ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳು ಕೇವಲ […]

ಯಾಂತ್ರಿಕ ಬದುಕಲ್ಲಿ ಸಂವೇದನೆ ವಿನಾಶ

Monday, February 10th, 2014
Nagathi-halli-chandrashekar

ಮೈಸೂರು: ಇಂದಿನ ಯಾಂತ್ರಿಕ ಬದುಕಿನಲ್ಲಿ ಭಾವಸಂವೇದನೆ ನಾಶವಾಗುತ್ತಿದೆ ಎಂದು ಹೆಸರಾಂತ ಲೇಖಕ ಹಾಗೂ ಚಿತ್ರನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ವಿಷಾದಿಸಿದರು. ಬೆಂಗಳೂರಿನ ಸ್ವರಸಂಕುಲ ಸಂಸ್ಥೆಯು ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಭಾವಧಾರೆ ಕನ್ನಡ ಭಾವಗೀತೆಗಳ ಗೀತಗಾಯನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ವಿದ್ಯುನ್ಮಾನ ಮಾಧ್ಯಮಗಳು ಬಂದನಂತರ ಕೇಳುವ ಹಾಗೂ ಓದುವ ಸಂಸ್ಕೃತಿ ಕ್ಷೀಣಿಸುತ್ತಿದ್ದು, ಇಂತಹ ಯಾಂತ್ರಿಕ ಬದುಕಿನಿಂದಾಗಿ ಮನುಷ್ಯನ ಭಾವಸಂವೇದನೆಗಳು ನಾಶವಾಗುತ್ತಿವೆ. ಹಣ ಮಾಡಬೇಕು ಹಾಗೂ ಅಹೋ ರಾತ್ರಿಯಲ್ಲಿ ಶ್ರೀಮಂತನಾಗಬೇಕು ಎನ್ನುವುದರ ಚಿತ್ತವೇ ಪ್ರಮುಖವಾಗಿದೆ ಎಂದರು. […]

ಈ ಬಾರಿ ತೃತೀಯ ರಂಗ ಸರ್ಕಾರ ಅಸ್ತಿತ್ವಕ್ಕೆ: ಅಜೀಂ

Thursday, February 6th, 2014
HD-Deve-Gowda

ಮೈಸೂರು: ಈ ಬಾರಿ ಲೋಕಸಭಾ ಚುನಾವಣೆಯ ನಂತರ ಕೇಂದ್ರದಲ್ಲಿ ತೃತೀಯ ರಂಗದ ಸರ್ಕಾರ ಅಸ್ತಿತ್ವಕ್ಕೆ ಬರಲಿದ್ದು, ಸರ್ಕಾರ ರಚನೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಜೆಡಿಎಸ್ ರಾಜ್ಯ ಮಹಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಜೀಂ ಹೇಳಿದರು. ತೃತೀಯ ರಂಗ ರಚನೆ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಈ ತಿಂಗಳ ಮೂರನೇ ವಾರ ಬೆಂಗಳೂರಿನಲ್ಲಿ 14 ಪ್ರಾದೇಶಿಕ ಪಕ್ಷಗಳ ಸಭೆ ಕರೆದಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ದೇವೇಗೌಡರು ವಹಿಸುವರು. ತೃತೀಯ ರಂಗಕ್ಕೆ ಈಬಾರಿ ಚುನಾವಣೆಯಲ್ಲಿ 240 […]

ವೀರಪ್ಪನ್ ಸಹಚರರ ಶಿಕ್ಷೆ ಇಳಿಸಬೇಡಿ

Thursday, February 6th, 2014
Rajiv-gandhi

ಮೈಸೂರು: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಆರೋಪಿಗಳಿಗೆ ಮರಣದಂಡನೆಯನ್ನು ಜೀವಾವಧಿಗಿಳಿಸುವ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ವಿರೋಧಿಸಿರುವಂತೆ ಕಾಡುಗಳ್ಳ, ನರಹಂತಕ ವೀರಪ್ಪನ್‌ನ ನಾಲ್ವರು ಸಹಚರರಿಗೆ ಮರಣದಂಡನೆಯನ್ನು ಜೀವಾವಧಿಗಿಳಿಸುವುದಕ್ಕೆ ಸಬ್ ಇನ್‌ಸ್ಪೆಕ್ಟರ್ ಶಕೀಲ್ ಅಹ್ಮದ್ ಅವರ ಸಹೋದರ ಎಂ.ಜಮೀಲ್ ಅಹ್ಮದ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಅವರು ಈ ಸಂಬಂಧ ಕೇಂದ್ರ ಗೃಹ ಕಾರ್ಯದರ್ಶಿಗೆ ಬರೆದಿರುವ ಪತ್ರ ‘ಕನ್ನಡಪ್ರಭ’ಕ್ಕೆ ಲಭ್ಯವಾಗಿದೆ. ಸ್ವಾತಂತ್ರ್ಯೋತ್ಸವದ ಮುನ್ನಾ ದಿನ ಅಂದರೆ 1992ರ ಆ.14ರಂದು ವೀರಪ್ಪನ್ ಕೊಳ್ಳೇಗಾಲ ತಾಲೂಕು ಮೀಣ್ಯಂ ಬಳಿ ನಡೆಸಿದ ಹತ್ಯಾಕಾಂಡದಲ್ಲಿ ಮೈಸೂರು […]