Blog Archive

ಗಣಿತ, ವಿಜ್ಞಾನ ಪಾಠಕ್ಕೆ ಗೂಗಲ್ ಗ್ರೂಪ್!

Tuesday, February 25th, 2014
Google-Group

ಮಂಗಳೂರು: ಗುಣಾತ್ಮಕ ಶಿಕ್ಷಣದ ಕೂಗು ಎಲ್ಲೆಡೆ ಕೇಳಿಬರುತ್ತಿರುವ ಬೆನ್ನಿಗೇ ಗುಣಾತ್ಮಕ ಅಧ್ಯಾಪನವನ್ನು ವಿದ್ಯಾರ್ಥಿಗಳಿಗೆ ಒದಗಿಸುವ ಹೊಣೆಗಾರಿಕೆ ಶಿಕ್ಷಕ ಸಮುದಾಯದ್ದು. ವಿದ್ಯಾರ್ಥಿಗಳ ಪಾಲಿಗೆ ಕಬ್ಬಿಣದ ಕಡಲೆಕಾಯಿ ಗಣಿತದ ಜತೆ ವಿಜ್ಞಾನ ಸುಲಭಗೊಳಿಸುವ ಕಲಿಕಾ ಪ್ರಕ್ರಿಯೆಗೆ ಬ್ಲಾಕ್ ಮಟ್ಟದಲ್ಲಿ ಮಂಗಳೂರು ಗಣಿತ ಹಾಗೂ ವಿಜ್ಞಾನ ಗೂಗಲ್‌ನಲ್ಲಿ ಆನ್‌ಲೈನ್ ಶಿಕ್ಷಕರ ವೇದಿಕೆ ಸಿದ್ಧಗೊಂಡಿದೆ. ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಪಾಠೋಪಯೋಗಿ ಬೋಧನ ಕ್ರಮದಲ್ಲಿ ನೈಪುಣ್ಯತೆ ಗಳಿಸಲು ಶಿಕ್ಷಕರಿಗಾಗಿ ಇರುವ ವೇದಿಕೆ ಇದು. ಪ್ರಸ್ತುತ ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ ಜಿಲ್ಲೆಯ ಎಲ್ಲ ಬ್ಲಾಕ್‌ಗಳಲ್ಲಿ ವೇದಿಕೆ […]

ಮಾನವ ಸಹಿತ ಬಾಹ್ಯಾಕಾಶ ಯಾನಕ್ಕೆ ಭಾರತ ಸಿದ್ಧತೆ

Tuesday, February 25th, 2014
Dr.-Radhakrishnan

ಮಂಗಳೂರು: ಮಾನವ ಸಹಿತ ಬಾಹ್ಯಾಕಾಶ ಯಾನ ಮಾಡುವ ಮೊದಲ ಹೆಜ್ಜೆ ಅಂಗವಾಗಿ ಮೂರು ಪಟ್ಟು ಹೆಚ್ಚು ಸಾಮರ್ಥ್ಯದ ಕ್ರಯೋಜೆನಿಕ್ ಜಿಎಸ್‌ಎಲ್‌ವಿ ಮಾರ್ಸ್3 ಉಪಗ್ರಹ ಉಡ್ಡಯನಕ್ಕೆ ಸಿದ್ಧಗೊಳಿಸಲಾಗುತ್ತಿದೆ ಎಂದು ಇಸ್ರೊ ಅಧ್ಯಕ್ಷ ಡಾ.ಕೆ. ರಾಧಾಕೃಷ್ಣನ್ ಹೇಳಿದರು. ಮಂಗಳೂರು ವಿಶ್ವ ವಿದ್ಯಾಲಯ ಕ್ಯಾಂಪಸ್‌ನಲ್ಲಿ ಸೋಮವಾರ ವಿವಿ ಘಟಿಕೋತ್ಸವ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ಎರಡು ವರ್ಷದ ಬಳಿಕ ಮೂವರು ಮಾನವರನ್ನು ಒಯ್ಯುವ ಸಾಮರ್ಥ್ಯದ ಜಿಎಸ್‌ಎಲ್‌ವಿ ಮಾರ್ಸ್3 ರಾಕೆಟ್ ಮೂಲಕ ಉಪಗ್ರಹ ಉಡ್ಡಯನ ಮಾಡಲಿದ್ದೇವೆ ಎಂದರು. ಮಾನವ ಸಹಿತ ಬಾಹ್ಯಾಕಾಶ ಯಾನ […]

ಇಂದು-ನಾಳೆ ಬೀಚ್, ಆಹಾರ ಉತ್ಸವ

Saturday, February 22nd, 2014
AB-Ibrahim

ಮಂಗಳೂರು: ಕರಾವಳಿ ಉತ್ಸವ ಅಂಗವಾಗಿ ಫೆ.22, 23ರಂದು ಪಣಂಬೂರ್‌ನಲ್ಲಿ ಬೀಚ್ ಉತ್ಸವ ನಡೆಯಲಿದೆ. ಈ ಸಂದರ್ಭ ಆಹಾರೋತ್ಸವ, ಗಾಳಿ ಪಟ ಉತ್ಸವ, ಆಟೋಟ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಫೆ.22ರಂದು ಸಂಜೆ 3 ಗಂಟೆಯಿಂದ ಬೀಚ್ ಮತ್ತು ಆಹಾರೋತ್ಸವ, ಟೀಮ್ ಮಂಗಳೂರು ವತಿಯಿಂದ ಗಾಳಿಪಟ ಪ್ರದರ್ಶನ, ಸಂಜೆ. 3.30ರಿಂದ ಮೂರು ವರ್ಷ ಒಳಗಿನ ಮಕ್ಕಳಿಗೆ ಬೀಚ್ ಪ್ರಿನ್ಸ್ ಮತ್ತು ಪ್ರಿನ್ಸೆಸ್ ಪ್ರದರ್ಶನ ನಡೆಯಲಿದೆ. ಫೆ.23ರಂದು ಬೀಚ್ ವಾಲಿಬಾಲ್ ಪಂದ್ಯಾಟಗಳು, […]

ಗುಂಡು ಹಾರಿಸಿಕೊಂಡು ಸಿಆರ್ ಪಿಎಫ್ ಯೋಧ ಆತ್ಮಹತ್ಯೆ

Saturday, February 22nd, 2014
CRPF-jawan

ಮಂಗಳೂರು: ಹೊಟ್ಟೆಗೆ ಗುಂಡು ಹಾರಿಸಿಕೊಂಡು ಸಿಆರ್ ಪಿಎಫ್ ಯೋಧ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನ ಎನ್‌ಎಂಪಿಟಿಯಲ್ಲಿ ಶನಿವಾರ ನಡೆದಿದೆ. ಇಂದು ಬೆಳಗ್ಗೆ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಯೋಧ ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತ ಯೋಧನನ್ನು ಮಹಾರಾಷ್ಟ್ರ ಮೂಲದ 38 ವರ್ಷದ ಕೆ.ಟಿ ಸಂದೀಪ್ ಸರ್ಕಟೆ ಎಂದು ಗುರುತಿಸಲಾಗಿದೆ. ಈ ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಪಣಂಬೂರ್ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಾದಕವಸ್ತುಗಳಿಗೆ ವಿದ್ಯಾರ್ಥಿಗಳ ಗುರಿ: ಜಾಗೃತರಾಗಿರಲು ತಹಶೀಲ್ದಾರ್ ಕರೆ

Thursday, February 20th, 2014
Drug-Student

ಮಂಗಳೂರು: ಇತ್ತೀಚಿನ ದಿನಗಳಲ್ಲಿ ವಿದ್ಯಾಸಂಸ್ಥೆಗಳ ಆಸುಪಾಸಿನಲ್ಲಿ ಮಾದಕ ವಸ್ತುಗಳ ಮಾರಾಟ ಮತ್ತು ಬಳಕೆಯ ಪ್ರಕರಣಗಳು ಕಂಡುಬರುತ್ತಿದ್ದು, ಈ ನಿಟ್ಟಿನಲ್ಲಿ ವಿದ್ಯಾಸಂಸ್ಥೆಗಳು ಮತ್ತು ವಿದ್ಯಾರ್ಥಿಗಳು ಜಾಗೃತರಾಗಿರುವಂತೆ ಮಂಗಳೂರು ತಹಶೀಲ್ದಾರ್ ಮೋಹನ್ ರಾವ್ ಕರೆ ನೀಡಿದ್ದಾರೆ. ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಜಿಲ್ಲಾ ವಾರ್ತಾ ಇಲಾಖೆ ಹಾಗೂ ಬದ್ರಿಯಾ ಪದವಿಪೂರ್ವ ಕಾಲೇಜು ಸಂಯುಕ್ತ ಆಶ್ರಯದಲ್ಲಿ ನಗರದ ಬದ್ರಿಯಾ ಕಾಲೇಜು ಸಭಾಂಗಣದಲ್ಲಿ ಬುಧವಾರ ನಡೆದ ಮದ್ಯ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮ ಕುರಿತ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಅಮಲು […]

ಚೌಕಾಸಿ ಮಾಡಿ ಪ್ರಯಾಣಿಸಿದ್ರೆ ಅರ್ಧದಲ್ಲೇ ಇಳಿಸ್ತಾರೆ!

Thursday, February 20th, 2014
Private-Tourist-bus

ಮಂಗಳೂರು: ದರದಲ್ಲಿ ಚೌಕಾಸಿ ಮಾಡಿ ಟಿಕೆಟ್ ಇಲ್ಲದೆ ದೂರ ಪ್ರದೇಶಗಳಿಗೆ ಖಾಸಗಿ ಟೂರಿಸ್ಟ್ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರೇ ಎಚ್ಚರ. ಇನ್ನು ಟಿಕೆಟ್ ಇಲ್ಲದೆ ಪ್ರಯಾಣಿಸಿದರೆ ಚೆಕ್ಕಿಂಗ್ ಸಿಬ್ಬಂದಿ ಮಾರ್ಗ ಮಧ್ಯೆಯೇ ಇಳಿಸುತ್ತಾರೆ. ಮಾತ್ರವಲ್ಲ ಈ ಖಾಸಗಿ ಟೂರಿಸ್ಟ್ ಬಸ್‌ಗಳಲ್ಲಿ ರಾಜ್ಯಾದ್ಯಂತ ಏಕರೂಪದ ಪ್ರಯಾಣ ದರ ಕೂಡ ಜಾರಿಗೊಳಿಸಲಾಗಿದೆ. ಇದುವರೆಗೆ ಖಾಸಗಿ ಟೂರಿಸ್ಟ್ ಬಸ್‌ಗಳಲ್ಲಿ ದಿನಕ್ಕೊಂದು ದರ ವಸೂಲಿ ಮಾಡುತ್ತಿದ್ದರು, ಇನ್ನೂ ಕೆಲವು ಬಸ್ ಕಂಪನಿಗಳು ದುಬಾರಿ ದರ ಪೀಕಿಸುತ್ತಿದ್ದರು. ನಿಗದಿತ ಜಾಗದ ಬದಲು ಅರ್ಧದಲ್ಲೇ ಇಳಿಸುತ್ತಿದ್ದರು. ಇದು […]

ದ.ಕ. ಜಿಲ್ಲಾ ‘ಡಿ’ ವರ್ಗ ಸರಕಾರಿ ನೌಕರರ ಸಂಘ (ರಿ) ಅಭಿನಂದನಾ – ಕಾರ್ಯಕ್ರಮ

Wednesday, February 19th, 2014
Government-Employee

ಮಂಗಳೂರು : ಸರಕಾರಿ ನೌಕರರ ಸಭಾಭವನದಲ್ಲಿ ಜರುಗಿದ ದ.ಕ. ಸರಕಾರಿ ಅಧಿಕಾರಿಗಳ ಸಹಕಾರಿ ಬ್ಯಾಂಕ್ ಲಿ. ಮಂಗಳೂರು ಇದರ 2014-2019ನೇ ಸಾಲಿನ ಆಡಳಿತ ಮಂಡಳಿಗೆ ನಿದರ್ೇಶಕರಾಗಿ ಆಯ್ಕೆಯಾದ 13 ಮಂದಿಯನ್ನು ಅಭಿನಂದಿಸುವ ಕಾರ್ಯಕ್ರಮವನ್ನು ಫೆ.17 ಸೋಮವಾರದಂದು  ಏರ್ಪಡಿಸಲಾಯಿತು.  ಶ್ರೀ. ಜಾರ್ಜ್ ಪಿಂಟೋ, ಅಧ್ಯಕ್ಷರು, ಕನರ್ಾಟಕ ರಾಜ್ಯ ಸಕರ್ಾರಿ ನೌಕರರ ಸಂಘ (ರಿ), ದ.ಕ. ಜಿಲ್ಲೆ, ಮಂಗಳೂರು ಅಭಿನಂದನಾ ಸಭೆಯ ಅಧ್ಯಕ್ಷತೆಯನ್ನು ವಹಿಸಿದರು. ಏಕಲವ್ಯ ಪ್ರಶಸ್ತಿ ವಿಜೇತ ಶ್ರೀ. ಸತೀಶ್ ಕುಮಾರ್ ಕುದ್ರೋಳಿ ಇವರು ಹಾಗೂ ದ.ಕ. ಜಿಲ್ಲಾ […]

ವಂಶ, ಜಾತಿ, ಅವಸರ, ಕಾಂಗ್ರೆಸ್ ಜೀವಾಳ

Wednesday, February 19th, 2014
Narendra-Modi

ಮಂಗಳೂರು/ ದಾವಣಗೆರೆ: ವಂಶವಾದ, ಜಾತಿವಾದ, ಸಂಪ್ರದಾಯವಾದ, ಅವಸರವಾದ. ಈ ನಾಲ್ಕೂ ಅಂಶಗಳು ಕಾಂಗ್ರೆಸ್‌ನಲ್ಲಿ ಮೇಳೈಸಿವೆ. ಇದುವೇ ದೇಶದ ಅಭಿವೃದ್ಧಿಗೆ ತೊಡಕಾಗಿದೆ ಎಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಮಂಗಳವಾರ ದಾವಣಗೆರೆಯ ಹೈಸ್ಕೂಲ್ ಮೈದಾನದ ಹಾಗೂ ಮಂಗಳೂರಿನ ಕೇಂದ್ರ ಮೈದಾನದಲ್ಲಿ ಆಯೋಜಿಸಿದ್ದ ‘ಭಾರತ ಗೆಲ್ಲಿಸಿ’ ಪ್ರತ್ಯೇಕ ಸಮಾವೇಶದಲ್ಲಿ ಕಾಂಗ್ರೆಸ್, ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಉಪಾಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದರು. ವಿಶೇಷವೆಂದರೆ ಇದೇ ಮೊದಲ ಬಾರಿಗೆ ಯಡಿಯೂರಪ್ಪ ಅವರನ್ನು ಗುಣಗಾನ ಮಾಡಿದ್ದು. […]

ಕಾಣೆಯಾದ ಮಕ್ಕಳ ಬ್ಯೂರೋಃ ಜಿಲ್ಲಾ ಘಟಕಕ್ಕೆ ಚಾಲನೆ

Tuesday, February 18th, 2014
A.B.-Ibrahim

ಮಂಗಳೂರು : ಹಿರಿಯ ಮುಖ್ಯ ನ್ಯಾಯಿಕ ದಂಡಾಧಿಕಾರಿ ಹಾಗೂ ಬಾಲ ನ್ಯಾಯ ಮಂಡಳಿ ಅಧ್ಯಕ್ಷ ಪಾಟೀಲ್‌ ನಾಗಲಿಂಗನ ಗೌಡ, ಕಾಣೆಯಾದ ಮಕ್ಕಳನ್ನು ಪತ್ತೆಹಚ್ಚಿ ಮರಳಿ ಮನೆಗೆ ಸೇರಿಸುವ ಮಕ್ಕಳ ಬ್ಯೂರೋ, ದಕ್ಷಿಣ ಕನ್ನಡ ಜಿಲ್ಲಾ ಘಟಕಕ್ಕೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಘಟಕವನ್ನು ಸೋಮವಾರ  ಉದ್ಘಾಟಿಸಿದರು. ಕಾಣೆಯಾದ ಮಕ್ಕಳನ್ನು ಪತ್ತೆಹಚ್ಚಿ ಅವರನ್ನು ಮನೆಗೆ ಸೇರಿಸುವ ಈ ಘಟಕವು ಪರಿಣಾಮಕಾರಿಯಾಗಿ ಕಾರ್ಯವೆಸಗಬೇಕು ಎಂದವರು ಸಲಹೆ ನೀಡಿದರು. ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಅಧ್ಯಕ್ಷತೆ ವಹಿಸಿದ್ದರು. ಮಕ್ಕಳ ಬ್ಯೂರೋದ ಮಾಹಿತಿ ಮತ್ತು ಶೈಕ್ಷಣಿಕ ಪರಿಕರಗಳನ್ನು […]

ಮೋದಿ ಸಮಾವೇಶಕ್ಕೆ ಜನ ಜಾತ್ರೆ

Tuesday, February 18th, 2014
Modi

ಮಂಗಳೂರು: ಕೇಂದ್ರ ಮೈದಾನದಲ್ಲಿ ಫೆ.18ರಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿಯವರ ಮಾತುಕೇಳಲು ಒಂದುವರೆ ಲಕ್ಷಕ್ಕೂ ಮಿಕ್ಕಿ ಜನ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಹೇಳಿದೆ. ದಕ್ಷಿಣ ಕನ್ನಡ 1,676 ಬೂತ್ ಮತ್ತು ಉಡುಪಿಯ 1 ಸಾವಿರ ಬೂತ್‌ಳಿಂದಲೂ ಜನ ಸ್ವಯಂ ಪ್ರೇರಿತರಾಗಿ ವಾಹನ ವ್ಯವಸ್ಥೆಯೊಂದಿಗೆ ಆಗಮಿಸಲಿದ್ದಾರೆ. ಇದಕ್ಕೆ  ಜಿಲ್ಲಾಡಳಿತ ನೆರವಿನೊಂದಿಗೆ ಸರ್ವ ಸಿದ್ಧತೆ ನಡೆಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಪ್ರತಾಪ್‌ಸಿಂಹ ನಾಯಕ್ ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಸಮಾವೇಶ ವೀಕ್ಷಿಸಲು ನಗರದಲ್ಲಿ 4 ಎಲ್‌ಇಡಿ ಅಳವಡಿಸಲಾಗಿದೆ. ಕೇಂದ್ರ ಮೈದಾನದ ಹೊರಗಡೆ […]