Blog Archive

ಕುಲಶೇಖರದ ಬಳಿ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಬಸ್

Monday, April 1st, 2013
Bus overturns at Kulashekar

ಮಂಗಳೂರು : ಮಂಗಳಾದೇವಿಯಿಂದ ಶಕ್ತಿನಗರಕ್ಕೆ ತೆರಳುತ್ತಿದ್ದ ಬಸ್ಸೊಂದು ಕುಲಶೇಖರ ಕಲ್ಪನೆ ಸಮೀಪ  ಚಾಲಕನ ನಿಯಂತ್ರಣ ತಪ್ಪಿ ಉರು ಳಿ ಬಿದ್ದ ಘಟನೆ ಶನಿವಾರ ನಡೆದಿದೆ. ಶನಿವಾರ ಸಂಜೆ 7 ಗಂಟೆ ಸುಮಾರಿಗೆ 6-ಡಿ ನಂಬರ್‌ನ ಅಂಬಿಕಾ ಬಸ್ ಕಲ್ಪನೆ ಸಮೀಪ ತೆರಳುತ್ತಿದ್ದಂತೆ ಅದರ ಚಾಲಕ ರಸ್ತೆ ಯಾ ತೀರಾ ಎಡ ಬಲಕ್ಕೆ ಬಸ್ ಚಲಾಯಿಸಿದ ಸಂದರ್ಭ ರಸ್ತೆ ಚರಂಡಿ ದಾಟಿ ಸ್ವಲ್ಪ ಎತ್ತರದ ಜಾಗಕ್ಕೆ ಬಸ್ ಚಲಿಸಿತು ಇದರಿಂದಾಗಿ ಬಸ್  ಚಾಲಕನ ನಿಯಂತ್ರಣ ಕಳೆದುಕೊಂಡಿತು. ತಕ್ಷಣ ಬಸ್‌ನ್ನು […]

ಸ್ವಾರ್ಥಕ್ಕಾಗಿ ಸಂಘಟನೆಯ ಬಳಕೆ : ಬಿಲ್ಲವರ ಯೂನಿಯನ್ ಕಾರ್ಯದರ್ಶಿ ರವಿಶಂಕರ್ ಮಿಜಾರ್ ಆರೋಪ

Thursday, March 28th, 2013
All India Billawa Union

ಮಂಗಳೂರು : ಅಖಿಲ ಭಾರತ ಬಿಲ್ಲವರ ಯೂನಿಯನ್ ನ ಅಧ್ಯಕ್ಷರಾಗಿರುವ ನವೀನ್ ಚಂದ್ರ ಸುವರ್ಣ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದು ತಮ್ಮ ಸ್ವಹಿತಾಸಕ್ತಿ ಗಾಗಿ  ಯೂನಿಯನ್ ನ ಕ್ರಮಗಳಿಗೆ ವಿರುದ್ದವಾಗಿ, ಕಾನೂನು ಬಾಹಿರ ಸಭೆಗಳನ್ನು ನಡೆಸುತ್ತಿದ್ದಾರೆ ಇದನ್ನು ಸರಿಪಡಿಸಿಕೊಳ್ಳದಿದ್ದಲಿ ಮುಂದಿನ ದಿನಗಳಲ್ಲಿ  ಅಧಕ್ಷರು ಇದಕ್ಕೆ ತಕ್ಕ ಬೆಲೆಯನ್ನು ತೆರಬೇಕಾಗುತ್ತದೆ ಎಂದು ಬಿಲ್ಲವರ ಸಂಘಟನೆಗಳ ಏಕೀಕರಣ ಸಮಿತಿ ಪ್ರಧಾನ ಕಾರ್ಯದರ್ಶಿ ರವಿಶಂಕರ್ ಮಿಜಾರ್ ಎಚ್ಚರಿಸಿದರು. ಅವರು ಗುರುವಾರ ನಗರದಲ್ಲಿ ನಡೆದ ಪತ್ರಿಕಾ ಘೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಯೂನಿಯನ್ ನ ಅಧ್ಯಕ್ಷರಾಗಿರುವ […]

ಪಕ್ಷದ ವತಿಯಿಂದ ಚುನಾವಣೆಯಲ್ಲಿ ವಿಜೇತರಾದ ಕಾರ್ಪೊರೇಟರ್‌ ಗಳಿಗೆ ಸನ್ಮಾನ

Monday, March 25th, 2013
Corporators

ಮಂಗಳೂರು : ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿ ಗೆದ್ದ ಕಾರ್ಪೊರೇಟರ್‌ಗಳಾದ ಲ್ಯಾನ್ಸಿಲಾಟ್ ಪಿಂಟೋ, ಡಿ.ಕೆ. ಅಶೋಕ್ ಕುಮಾರ್, ಕೇಶವ, ಪ್ರಕಾಶ್ ಸಾಲ್ಯಾನ್, ರಜನೀಶ್, ರಾಧಾಕೃಷ್ಣ, ಝುಬೈದಾ, ಸಬಿತ್ ಮಿಸ್ಕಿತ್, ಅಖಿಲ್ ಆಳ್ವ, ನಾಗವೇಣಿರನ್ನು ರವಿವಾರ ಪಕ್ಷದ ಕಚೇರಿಯಲ್ಲಿ ಸನ್ಮಾನಿಸಲಾಯಿತು. ಈ ಸಂದರ್ಭ ಮಾತನಾಡಿದ ಕೆಪಿಸಿ ಕಾರ್ಯದರ್ಶಿ ಐವನ್ ಡಿಸೋಜ, ಮಾತನಾಡಿ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಪಕ್ಷ ಗೆಲುವು ಸಾಧಿಸಿದ್ದು, ವಿಧಾನ ಸಭಾ ಚುನಾವಣೆಯಲ್ಲೂ ಪಕ್ಷ ಬಹುಮತ ಪಡೆಯಲಿದೆ ಎಂದರು. ಬ್ಲಾಕ್ ಅಧ್ಯಕ್ಷ […]

ಮಂಗಳೂರು : ಮೇಯರ್ – ಉಪ ಮೇಯರ್ ಯಾರು?

Monday, March 25th, 2013
Mayor

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ 6ನೆ ಅವಧಿಯ ಮೇಯರ್-ಉಪಮೇಯರ್ ಯಾರು ಎಂಬ ಪ್ರಶ್ನೆ ಇದೀಗ ಸಾರ್ವಜನಿಕರಿಗೆ ಬಲವಾಗಿ ಕಾಡುತ್ತಿದೆ. ಅದಕ್ಕೂ ಮೊದಲು ರಾಜ್ಯ ಸರಕಾರ ಮೇಯರ್-ಉಪಮೇಯರ್ ಸ್ಥಾನದ ಮೀಸಲಾತಿ ಪ್ರಕಟಿಸಬೇಕು. ಬಳಿಕ ಈ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಆದರೆ ರಾಜ್ಯ ವಿಧಾನ ಸಭೆಯ ಚುನಾವಣೆಗೆ ಸಂಬಂಧಿಸಿದಂತೆ ಆಯೋಗ ನೀತಿ ಸಂಹಿತೆ ಪ್ರಕಟಿಸಿದರೆ ಮೇಯರ್- ಉಪಮೇಯರ್ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸಿದರೂ ಚುನಾವಣೆ ನಡೆಸುವಂತಿಲ್ಲ. ನೀತಿ ಸಂಹಿತೆ ಮುಗಿದ ಬಳಿಕ ಕಾರ್ಪೋರೇಟರ್ ಗಳು ಸಭೆ ಸೇರಿ ಮೇಯರ್- ಉಪ […]

ಸ್ವಪ್ರತಿಷ್ಠೆಯ ಅಖಾಡವಾಗುತ್ತಿರುವ ಬಿಲ್ಲವರ ಯೂನಿಯನ್

Monday, March 25th, 2013
Naveenchandra

ಮಂಗಳೂರು : ಕಳೆದ ಒಂದು ವರುಷದ ಹಿಂದೆ ಅಖಿಲ ಭಾರತ ಬಿಲ್ಲವರ ಯೂನಿಯನ್ ವಿರುದ್ಧ ಸಮರ ಸಾರಿರುವ ಬಿಲ್ಲವರು ಈ ಬಾರಿಯೂ ಯೂನಿಯನ್ ಸಭೆಗೆ ಅಡ್ಡಿ ಉಂಟು ಮಾಡಿದ ಘಟನೆ ಮತ್ತೇ ನಡೆದಿದೆ. ಆದರೆ ಈ ಬಾರಿ ಅಖಿಲ ಭಾರತ ಬಿಲ್ಲವರ ಯೂನಿಯನ್ ಅಧ್ಯಕ್ಷರು ತಂತ್ರಗಾರಿಕೆ ನಡೆಸಿಯೇ ಸಭೆ ಕರೆದಿದ್ದ ಕಾರಣ ಯಾವುದೇ ಅಹಿತಕರ ಘಟನೆ ನಡೆಯದೆ ಕೋರಂ ಕೊರತೆ ಎದುರಿಸಿದರೂ ಸಭೆ ನಡೆದಿದೆ. ಅಖಿಲಭಾರತ ಬಿಲ್ಲವರ ಯೂನಿಯನ್ ಸಭೆ ನಡೆಯುವ ಸಮಯದಲ್ಲಿ ಕಳೆದ ಕೆಲವು ವರುಷದಿಂದ […]

ಏರ್ ಕಾರ್ಗೊ ಕಾಂಪ್ಲೆಕ್ಸ್ ನ ಉದ್ಘಾಟನೆಯನ್ನು ನೆರವೇರಿಸಿದ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಅಜಿತ್ ಸಿಂಗ್

Tuesday, March 19th, 2013
International Air Cargo Complex inua

ಮಂಗಳೂರು : ಮಂಗಳೂರು ಹಳೆ ವಿಮಾನ ನಿಲ್ದಾಣದಲ್ಲಿ ಅಂತಾರಾಷ್ಟ್ರೀಯ ಏರ್ ಕಾರ್ಗೊ ಕಾಂಪ್ಲೆಕ್ಸ್ ನ ಉದ್ಘಾಟನೆಯನ್ನು ಕೇಂದ್ರ ಸರ್ಕಾರದ ನಾಗರಿಕ ವಿಮಾನಯಾನ ಸಚಿವ ಅಜಿತ್ ಸಿಂಗ್ ಮಾರ್ಚ್ 18 ಸೋಮವಾರ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಪ್ರಸ್ತುತ  ಕಾರ್ಗೊ ಕಾಂಪ್ಲೆಕ್ಸ್ 1400 ಚದರ ಮೀಟರ್ ವ್ಯಾಪ್ತಿಯನ್ನು ಹೊಂದಿದ್ದು, 5000 ಮೆಟ್ರಿಕ್ ಟನ್ ಗಳಷ್ಟು ಅಂತಾರಾಷ್ಟ್ರೀಯ ಆಮದು ಕಾರ್ಗೊಗಳನ್ನು ಹಾಗೂ 13,000 ಮೆಟ್ರಿಕ್ ಟನ್ ಗಳಷ್ಟು ರಫ್ತು ಮಾಡುವ ಕಾರ್ಗೊಗಳನ್ನು ಸಂಗ್ರಹಿಸುವ ಸಾಮರ್ಥ್ಯವನ್ನು ಹೊಂದಿದೆ. ಮಂಗಳೂರು ಅಂ.ರಾ. ವಿ. […]

ಇದು ಬಾಡಿಗೆಗೆ ಅಲ್ಲ….. ಕುಡ್ಲದಲ್ಲಿ ಓಡಾಡುತ್ತಿದೆ ಅಪರೂಪದ ರಿಕ್ಷಾ !!

Wednesday, March 6th, 2013
Tauro

ಮಂಗಳೂರು : ಮಂಗಳೂರಿನ ವಲ್ಡ್ರ್  ಕ್ಲಾಸ್ ರೋಡ್ ಮ್ಯಾಲೆ ಒಂದು ಅಟೋ ರಿಕ್ಷಾ ಜಮ್ ಜೂಮ್ ನಂತೆ ಓಡಾಡುತ್ತಿದೆ. ಅದರಲ್ಲಿ ಅಂತಹದೇನೂ ವಿಶೇಷ …  ಅಟೋ ರಿಕ್ಷಾಗಳು ರಸ್ತೆ ಮ್ಯಾಲೆ ಓಡದೇ ತಲೆಯ ಮೇಲೆ ಓಡುತ್ತಾ.. ಕೇಳ ಬೇಡಿ. ಇದು ಎಲ್ಲರೂ ನೋಡುವಂತಹ  ಮೂರು ಚಕ್ರದ ವಾಹನ  ಆಟೋ ರಿಕ್ಷಾನೇ… ಅದರಲ್ಲೂ  ಕೊಂಚ ವಿಶೇಷವಿದೆ. ಅಲ್ಲಿ  ರಿಕ್ಷಾದಲ್ಲಿ ಕೂತು ಸವಾರಿ ಮಾಡುವ ಪ್ರಯಾಣಿಕರನ್ನು ಥಂಡಾ ಮಾಡುವಂತಹ ಒಂದು ಎಸಿ ಕೂಲರ್ ಇದೆ. ದಣಿವಾದಾಗ ಜಸ್ಟ್ ಕಫ್ ಆಫ್ […]

ಮಾದಕ ವ್ಯಸನಿಗಳಿಗೆ ಮಂಗಳೂರು ಅಡ್ಡೆಯೇ?.

Tuesday, February 26th, 2013

ಮಂಗಳೂರು : ಮಂಗಳೂರಿನಲ್ಲಿ ಇತ್ತೀಚೆಗೆ ಕಂಡು ಬರುವ ಕೆಲವು ವಿದ್ಯಮಾನಗಳು ಈ ಪ್ರಶ್ನೆಗೆ ಪುಷ್ಠಿ ನೀಡುತ್ತದೆ. ಮೊನ್ನೆ ಮೊನ್ನೆ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದರೆ, ಕಳೆದ ವರ್ಷ ಮತ್ತೊಬ್ಬ ಯುವತಿ ಬಲಿಯಾಗಿದ್ದಳು. ಅಲ್ಲದೆ ರಾಜಕಾರಣಿಯೊಬ್ಬರ ಪುತ್ರನ ಆಮಿಷಕ್ಕೆ ಒಳಗಾದ ಯುವತಿಯೊಬ್ಬಳನ್ನು ಹಿಂದುತ್ವವಾದಿ ಸಂಘಟನೆಗಳ ಕಾರ್ಯಕರ್ತರು ಬಚಾವ್ ಮಾಡಿದ್ದರು. ಇವೆಲ್ಲದರ ಮಧ್ಯೆ ಮಂಗಳೂರು ಪೊಲೀಸರು ಕೆಲವು ಶಾಲಾ ಕಾಲೇಜು ಕ್ಯಾಂಪಸ್ ಪಕ್ಕದ ಗೂಡಂಗಡಿಗೆ ದಾಳಿ ಮಾಡಿದ್ದಾರೆ. ಈ ಹಿಂದೆ ಗಾಂಜಾ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದವರ ಮನೆಗೂ ಪೊಲೀಸರು ದಾಳಿ ಮಾಡಿ […]

ಹಯಾತುಲ್ ಇಸ್ಲಾಂ ಎಸೋಸಿಯೇಶನ್ ವತಿಯಿಂದ ಸಾಮೂಹಿಕ ವಿವಾಹ

Monday, February 25th, 2013
Hayatul Islam Association

ಮಂಗಳೂರು : ನಗರದ ಜಮಿಯ್ಯತುಲ್ ಫಲಾಹ್ ಹಾಲ್ ನಲ್ಲಿ ಬಾನುವಾರ ಹಯಾತುಲ್ ಇಸ್ಲಾಂ ಎಸೋಸಿಯೇಶನ್ ಮಂಗಳೂರು ಇದರ ವತಿಯಿಂದ ನಡೆದ ಸಾಮೂಹಿಕ ವಿವಾಹ ದಲ್ಲಿ ಆರು ಜೋಡಿಗಳು ಗೃಹಸ್ಥಾಶ್ರಮಕ್ಕೆ ಕಾಲಿರಿಸಿದರು.  ದ.ಕ.ಜಿಲ್ಲಾ ಖಾಝಿ ಅಲ್ಹಾಜ್ ಶೈಖುನಾ ತ್ವಾಖಾ ಅಹ್ಮದ್ ಮುಸ್ಲಿಯಾರ್  ರವರ ನೇತೃತ್ವದಲ್ಲಿ ವಿವಾಹ ನೆರವೆರಿಲ್ಪಟ್ಟಿತು. ಕಾರ್ಯಕ್ರಮ ಉದ್ಘಾಟಿನೆಯನ್ನು ನೆರವೇರಿಸಿ ಮಾತನಾಡಿದ ಕುದ್ರೋಳಿಯ ಮುಹಿಯ್ಯುದ್ದೀನ್ ಜುಮಾ ಮಸ್ಜಿದ್ ಖತೀಬ್ ಹಾಜಿ ಅಬ್ದುಲ್ ಖಾದರ್ ದಾರಿಮಿ ಕುಕ್ಕಿಲ ಇಂತಹ ಸರಳ ವಿವಾಹ ಪ್ರತಿಯೊಂದು ಮುಸ್ಲಿಂ ಕುಟುಂಬದಲ್ಲೂ ನಡೆಸುವ ಮೂಲಕ ಸ್ಪರ್ಧಾತ್ಮಕ ರೀತಿಯಲ್ಲಿ ನಡೆಯುವ ಮದುವೆಗೆ […]

ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದ ಓಕುಳಿಯಾಟದಲ್ಲಿ ಸಂಭ್ರಮದಿಂದ ಪಾಲ್ಗೊಂಡ ಭಕ್ತ ಸಮೂಹ

Monday, February 18th, 2013
Okuli celebrated at Venkatramana T

ಮಂಗಳೂರು : ವಿವಿಧ ಧಾರ್ಮಿಕ ವಿದಿವಿಧಾನಗಳೊಂದಿಗೆ ಐದು ದಿನಗಳ ಕಾಲ ನಡೆದ ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಆರನೆಯ ದಿನವಾದ ಇಂದು ನಡೆದ ಓಕುಳಿ ಕಾರ್ಯಕ್ರಮದಲ್ಲಿ ಪುರುಷರು ಮಕ್ಕಳು, ಮಹಿಳೆಯರೆನ್ನದೆ ನೂರಾರು ಭಕ್ತರು ಪಾಲ್ಗೊಂಡು ಸಂಭ್ರಮಿಸಿದರು. ವರ್ಷಂಪ್ರತಿ ಆರನೇ ದಿನ ನಡೆಯುವ ಈ ಓಕುಳಿಯಾಟದಲ್ಲಿ ನಗರದಿಂದ ಮಾತ್ರವಲ್ಲದೆ  ರಾಜ್ಯದಾದ್ಯಂತ ಆಗಮಿಸಿದ ಭಕ್ತರು  ಯಾವುದೇ ರೀತಿಯ ಧರ್ಮ ಭೇದವಿಲ್ಲದೆ ಎಲ್ಲರೂ ಪಾಲ್ಗೊಂಡು ಸಂಭ್ರಮಿಸುವ ದಿನವಾಗಿದೆ. ಬೆಳಿಗ್ಗೆ ಸುಮಾರು 10 ಗಂಟೆಗೆ ಪ್ರಾರಂಭವಾದ ಓಕುಳಿಯಾಟ ದಲ್ಲಿ  […]