ವಿವೇಕಾನಂದರು ಯುವಜನತೆಗೆ ನಂದಾದೀಪವಿದ್ದಂತೆ: ಎಸ್. ಮಹೇಶ್ ಕುಮಾರ್

Thursday, January 13th, 2022
Vivekananda-Jayanthi

ಮಂಗಳೂರು: ಸ್ವಾಮಿ ವಿವೇಕಾನಂದರು ಭಾರತೀಯರ ಆತ್ಮಾಭಿಮಾನವನ್ನು ಬಡಿದೆಬ್ಬಿಸದ ಸಂತ. ಅವರ ಜೀವನ, ತತ್ವಗಳು ಯುವಜನತೆಗೆ ನಂದಾದೀಪದಂತೆ, ಎಂದು ಮಂಗಳೂರು ನಗರ ಉತ್ತರ ಸಹಾಯಕ ಪೊಲೀಸ್ ಆಯುಕ್ತ ಎಸ್. ಮಹೇಶ್ ಕುಮಾರ್ ಅಭಿಪ್ರಾಯಪಟ್ಟರು. ಭಾರತೀಯ ರೆಡ್ಕ್ರಾಸ್ ಸಂಸ್ಥೆಯ ದಕ್ಷಿಣ ಕನ್ನಡ ಜಿಲ್ಲಾ ಶಾಖೆ ಮತ್ತು ಯುವ ರೆಡ್ ಕ್ರಾಸ್, ಮಂಗಳೂರು ವಿಶ್ವವಿದ್ಯಾನಿಲಯ ಇವುಗಳ ಜಂಟಿ ಸಹಭಾಗಿತ್ವದಲ್ಲಿ ಬುಧವಾರ ತಣ್ಣೀರುಬಾವಿಯ ವೃಕ್ಷ ಉದ್ಯಾನವನದಲ್ಲಿ ಹಮ್ಮಿಕೊಂಡಿದ್ದ ಸ್ವಾಮಿ ವಿವೇಕಾನಂದರ 159 ನೇ ಜನ್ಮ ದಿನಾಚರಣೆ- ʼರಾಷ್ಟ್ರೀಯ ಯುವ ದಿನಾಚರಣೆʼ ಹಾಗೂ ಯುವ […]

ಆಧುನಿಕ ಜಗತ್ತಿನ ಸವಾಲಿಗೆ ವೇದಾಂತ ಚಿಂತನೆ ಪರಿಹಾರ : ಡಾ. ವಿವೇಕ್ ಮೋದಿ

Thursday, June 17th, 2021
vivek-modi

ಮಂಗಳೂರು : “ಜಗತ್ತು ಎಷ್ಟೇ ಮುಂದುವರಿದರೂ ಭಾರತದ ಚಿಂತನೆಗಳು ಸಾರ್ವಕಾಲಿಕ. ಭಾರತೀಯ ವೇದಾಂತ ಚಿಂತನೆಗಳಲ್ಲಿ ಆಧುನಿಕ ಜಗತ್ತಿನ ಪ್ರತಿಯೊಂದು ಸವಾಲಿಗೂ ಪರಿಹಾರವಿದೆ, ಆತ್ಮಶ್ರದ್ಧೆಯೊಂದಿದ್ದರೆ ಯಾವುದೂ ಇಲ್ಲಿ ಅಬೇಧ್ಯವಲ್ಲ ಎಂಬ ಸಂದೇಶವನ್ನು ಸ್ವಾಮಿ ವಿವೇಕಾನಂದರು ನೀಡಿದ್ದಾರೆ” ಎಂದು, ಹೈದರಾಬಾದ್ನ ನಾಯಕತ್ವ ತರಬೇತುದಾರ ಡಾ. ವಿವೇಕ್ ಮೋದಿ ಹೇಳಿದರು. ಮಂಗಳೂರು ವಿಶ್ವವಿದ್ಯಾಲಯದ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಆಶ್ರಯದಲ್ಲಿ ನಡೆಯುತ್ತಿರುವ ‘ವಿವೇಕ ವಾಣಿʼ ಆನ್‌ಲೈನ್‌ ಸರಣಿ ಉಪನ್ಯಾಸ ಕಾರ್ಯಕ್ರಮದ ಐದನೇ ಉಪನ್ಯಾಸದಲ್ಲಿ “ಪ್ರಸ್ತುತ ಸವಾಲುಗಳನ್ನು ಎದುರಿಸಲು ಸ್ವಾಮಿ ವಿವೇಕಾನಂದರ ಚಿಂತನೆ” […]

ಜನವರಿ 17 ರಂದು ಮಂಗಳೂರಿನಲ್ಲಿ Be Good Do Good ಅಭಿಯಾನಕ್ಕೆ ಚಾಲನೆ.

Wednesday, January 15th, 2020
Begood do good

ಮಂಗಳೂರು : ಯುವಜನರಲ್ಲಿ ಸಾಮಾಜಿಕ ಸೇವಾ ಪ್ರಜ್ಞೆಯನ್ನು ಘೋಷಿಸುವ ’ಉತ್ತಮನಾಗುಉಪಕಾರಿಯಾಗು’ ಎಂಬ ಸ್ವಾಮಿ ವಿವೇಕಾನಂದರಜೀವನ ಸಂದೇಶವನ್ನು ಸಾರುವ ಬೃಹತ್‌ಯುವಅಭಿಯಾನಕ್ಕೆ‘Be Good Do Good-2020’ ಇದೇ ಬರುವಜನವರಿ 17 ರಂದು, ಮಂಗಳೂರಿನಲ್ಲಿ, ಮಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೋ. ಪಿ.ಎಸ್‌ಯಡಪಡಿತ್ತಾಯರು ಚಾಲನೆ ನೀಡಲಿದ್ದಾರೆ. ಸ್ವಾಮಿ ವಿವೇಕಾನಂದರ 157 ನೇ ಜಯಂತಿ ಮತ್ತು ರಾಷ್ಟ್ರೀಯ ಯುವ ದಿನದ ಅಂಗವಾಗಿ ‘Be Good Do Good-2020’ಅಭಿಯಾನಕ್ಕೆ ಚಾಲನೆ ದೊರೆಯಲಿದೆ.ಯುವಕ-ಯುವತಿಯರು ಸ್ವಾಮಿ ವಿವೇಕಾನಂದರುಯುವಜನರಿಗೆ ನೀಡಿದ ’ಉತ್ತಮನಾಗು-ಉಪಕಾರಿಯಾಗು’ (Be Good Do Good) ಎಂಬ ಸಂದೇಶವನ್ನುತಾವು […]

ಸ್ವಾಮಿ ವಿವೇಕಾನಂದರು ಮೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ನೀಡಿದವರು : ವಿದ್ಯಾಕಾಮತ್ ಜಿ

Tuesday, January 14th, 2020
shiti-school

ಮಂಗಳೂರು : ಶಿಕ್ಷಣ ಎಂದರೆ ವ್ಯಕ್ತಿತ್ವ ನಿರ್ಮಾಣ. ಶಿಕ್ಷಣದಿಂದ ವ್ಯಕ್ತಿ ತಾನು ಮಾನಸಿಕ, ಆಧ್ಯಾತ್ಮಿಕ, ಬೌದ್ಧಿಕವಾಗಿ ಜೌನತ್ಯಕ್ಕೆ ಏರುವುದಲ್ಲದೆ ಇತರರನ್ನೂ ಉನ್ನತಿಯತ್ತ ಕೊಂಡೊಯ್ಯುತ್ತಾನೆ. ಸ್ವಾಮಿ ವಿವೇಕಾನಂದರು ಯುವ ಜನತೆ ಹಾಗು ಶಿಕ್ಷಣಕ್ಕೆ ಮಹತ್ವವನ್ನು ನೀಡಿದವರು. ಸದ್‌ ಚಿಂತನೆಯ ಮೂಲಕ ಯುವ ಜನತೆಯಲ್ಲಿ ರಾಷ್ಟ್ರ ನಿರ್ಮಾಣದ ಕಿಚ್ಚು ಹಚ್ಚಿದವರು. ಅವರು ಸಾರಿದ ತತ್ವಗಳು, ಮಾಡಿದ ಭಾಷಣಗಳು ಕೇವಲ ಭಾರತಕ್ಕಷ್ಟೇ ಅಲ್ಲದೆ ರಾಷ್ಟ್ರಾತೀತ ಹಾಗೂ ಸಾರ್ವಕಾಲಿಕ ಎಂದು ಶಕ್ತಿ ವಸತಿ ಶಾಲೆಯಲ್ಲಿ ಸ್ವಾಮಿ ವಿವೇಕಾನಂದರ ಜನ್ಮ ದಿನದ ಪ್ರಯುಕ್ತ ನಡೆದ […]

ಯುವ ಜನರಿಗೆ ಸ್ವಾಮಿ ವಿವೇಕಾನಂದರು ಆದರ್ಶ : ಶಾಸಕ ಅಪ್ಪಚ್ಚು ರಂಜನ್ ಅಭಿಪ್ರಾಯ

Monday, January 13th, 2020
appacchu

ಮಡಿಕೇರಿ : ಯುವ ಜನರಿಗೆ ಸ್ವಾಮಿ ವಿವೇಕಾನಂದರು ಆದರ್ಶ ಆದ್ದರಿಂದ ಯುವ ಜನರು ಸ್ವಾಮಿ ವಿವೇಕಾನಂದರ ಸಂದೇಶಗಳನ್ನು ತಿಳಿದು ಬಲಿಷ್ಠ ರಾಷ್ಟ್ರ ನಿರ್ಮಾಣಕ್ಕೆ ಕೈಜೋಡಿಸುವಂತಾಗಬೇಕು ಎಂದು ಶಾಸಕರಾದ ಎಂ.ಪಿ.ಅಪ್ಪಚ್ಚು ರಂಜನ್ ಅವರು ಕರೆ ನೀಡಿದ್ದಾರೆ. ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್, ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು, ನೆಹರು ಯುವ ಕೇಂದ್ರ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಯುವ ಒಕ್ಕೂಟ, ತ್ರಿನೇತ್ರ ಯುವಕ ಸಂಘ […]

3ಡಿ ತಾರಾಲಯ; ಪ್ರದರ್ಶನವೆಲ್ಲ ಹೌಸ್‌ಫುಲ್‌!

Monday, March 26th, 2018
taralaya

ಪಿಲಿಕುಳ: ಇಲ್ಲಿನ ಡಾ. ಶಿವರಾಮ ಕಾರಂತ ಬಯೋಲಾಜಿಕಲ್‌ ಪಾರ್ಕ್‌ನಲ್ಲಿ ಮಾ. 1ರಿಂದ ಆರಂಭವಾಗಿರುವ ವಿಶ್ವದ 21ನೇ ಅತ್ಯಾಧುನಿಕ ಹೈಬ್ರಿಡ್‌ ತ್ರಿಡಿ ‘ಸ್ವಾಮಿ ವಿವೇಕಾನಂದ ತಾರಾಲಯ’ದ ಪ್ರದರ್ಶನಕ್ಕೆ 25 ದಿನದ ಅಂತರದಲ್ಲಿ ಸುಮಾರು 11,000 ಜನರು ಆಗಮಿಸಿ ನಭೋಮಂಡಲದ ವಿಸ್ಮಯ ವೀಕ್ಷಿಸಿದ್ದಾರೆ. ಶಾಲಾ- ಕಾಲೇಜಿನ ವಿದ್ಯಾರ್ಥಿಗಳು ದೂರದೂರಿನಿಂದ ಪಿಲಿಕುಳಕ್ಕೆ ಆಗಮಿಸಿ ತಾರಾಲಯದಲ್ಲಿ ನಭದ ವಿಸ್ಮಯ ನೋಡಲು ಹಾತೊರೆಯುವ ಹಿನ್ನೆಲೆಯಲ್ಲಿ ಟಿಕೆಟ್‌ ಬೇಗನೆ ಖಾಲಿಯಾಗುತ್ತಿದೆ. ಈಗ ಎಸೆಸೆಲ್ಸಿ ಪರೀಕ್ಷೆ ನಡೆಯುತ್ತಿದ್ದು, ಕೆಲವೇ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ರಜೆ ದೊರೆಯಲಿದೆ. ಆಗ ಭಾರೀ […]

ದೇಶದ ಮೊದಲ 3ಡಿ ತಾರಾಲಯ ಮಂಗ್ಳೂರಲ್ಲಿ ಮಾರ್ಚ್ 2ರಿಂದ ಆರಂಭ

Tuesday, February 27th, 2018
taralaya

ಮಂಗಳೂರು: ನಭೋಮಂಡಲದ ವಿಸ್ಮಯಗಳನ್ನು ಪ್ರದರ್ಶಿಸಲು ಮಂಗಳೂರಿನಲ್ಲಿ ಅಪರೂಪದ ತಾರಾಲಯವೊಂದು ನಿರ್ಮಾಣಗೊಂಡಿದೆ. ಇದು ದೇಶದಲ್ಲಿಯೇ ಪ್ರಥಮವಾಗಿರುವ ವಿಶಿಷ್ಟ ಸೌಲಭ್ಯಗಳನ್ನು ಹೊಂದಿರುವ 3ಡಿ ತಾರಾಲಯ. ಭಾರತದ ಮೊದಲ 3ಡಿ 8ಕೆ ಯುಎಚ್ ಡಿ ಹೈಬ್ರಿಡ್ ತಂತ್ರಜ್ಞಾನದ ತಾರಾಲಯ ಎಂಬ ಅಗ್ಗಳಿಕೆಗೆ ಪಾತ್ರವಾಗಿದೆ. ಮಂಗಳೂರು ಹೊರವಲಯದ ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮದ ಪ್ರಾದೇಶಿಕ ವಿಜ್ಞಾನ ಕೇಂದ್ರದ ಆವರಣದಲ್ಲಿ ನಿರ್ಮಾಣವಾಗಿರುವ ಸ್ವಾಮಿ ವಿವೇಕಾನಂದ ತಾರಾಲಯ ಭಾರತದ ಪ್ರಥಮ 3ಡಿ ತಾರಾಲಯವಾಗಿದೆ. ರಾಜ್ಯ ಸರಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಅನುದಾನದಿಂದ ನಿರ್ಮಾಣವಾಗಿದೆ. ಸ್ವಾಮಿ […]

ಭಾರತದ ಮೊದಲ 3ಡಿ ತಾರಾಲಯ ಮಂಗಳೂರಿನಲ್ಲಿ ನಿರ್ಮಾಣ

Saturday, December 23rd, 2017
3d-manglore

ಮಂಗಳೂರು: ದೇಶದ ಮೊದಲ 3ಜಿ ತಾರಾಲಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಸ್ವಾಮಿ ವಿವೇಕಾನಂದ ತಾರಾಲಯದ ಕಾಮಗಾರಿ ಶೇ.80ರಷ್ಟು ಪೂರ್ಣಗೊಂಡಿದ್ದು, ಜನವರಿ ತಿಂಗಳ ಅಂತ್ಯದೊಳಗೆ ಅಥವಾ ಫೆಬ್ರವರಿ ಮೊದಲ ವಾರದಲ್ಲಿ ಲೋಕಾರ್ಪಣೆಗೊಳ್ಳುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ದೇಶದಲ್ಲಿಯೇ ಮೊದಲ ಬಾರಿಕೆ ಆಕ್ಟಿವ್ 3ಡಿ 8ಕೆ ಪ್ರೊಜೆಕ್ಷನ್ ಸಿಸ್ಟಮ್’ನೊಂದಿಗೆ ತಾರಾಲಯ ನಿರ್ಮಾಣವಾಗುತ್ತಿದ್ದು, ಈ ತಾರಾಲಯ ಅಂತರಾಷ್ಟ್ರೀಯ ತಾರಾಲಯಗಳ ಪೈಕಿ 21ನೇ ಸ್ಥಾನದಲ್ಲಿದೆ. ತಾರಾಲಯದ ಡೋಮ್’ನೊಳಗೆ ಅತ್ಯಂತ ಪರಿಣಾಮಕಾರಿಯಾದ ನ್ಯಾನೋಸೀಮ್ ಫ್ಯಾಬ್ರಿಕೇಶನ್ ಅಳವಡಿಕೆ ಕಾರ್ಯ ಶೇ.80ರಷ್ಟು ಪೂರ್ಣಗೊಂಡಿದ್ದು, ನ್ಯಾನೋಸೀಮ್ ಫ್ಯಾಬ್ರಿಕೇಶನ್ ಮತ್ತು […]

ಸ್ವಾಮಿ ವಿವೇಕಾನಂದರ 150ನೇ ವರ್ಷದಿನಾಚರಣೆಯ ಅಂಗವಾಗಿ ನೆಹರೂ ಮೈದಾನದಿಂದ ರಾಮಕೃಷ್ಣ ಮಠದವರೆಗೆ ನಡೆದ ಬೃಹತ್ ಮೆರವಣಿಗೆ

Monday, January 14th, 2013
ಸ್ವಾಮಿ ವಿವೇಕಾನಂದರ 150ನೇ ವರ್ಷದಿನಾಚರಣೆಯ ಅಂಗವಾಗಿ ನೆಹರೂ ಮೈದಾನದಿಂದ ರಾಮಕೃಷ್ಣ ಮಠದವರೆಗೆ  ನಡೆದ ಬೃಹತ್ ಮೆರವಣಿಗೆ

ಮಂಗಳೂರು : ಸ್ವಾಮಿ ವಿವೇಕಾನಂದರ 150ನೇ ವರ್ಷದಿನಾಚರಣೆಯ ಅಂಗವಾಗಿ ಶನಿವಾರ ನಗರದ ನೆಹರೂ ಮೈದಾನದಿಂದ ರಾಮಕೃಷ್ಣ ಮಠದವರೆಗೆ ಮೆರವಣಿಗೆಯನ್ನು ಆಯೋಜಿಸಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ದ.ಕ.ಜಿಲ್ಲಾಧಿಕಾರಿ ಎನ್.ಪ್ರಕಾಶ್ ಮೆರವಣಿಗೆ ಚಾಲನೆ ನೀಡಿದರು. ದಕ್ಷಿಣ ಕನ್ನಡ ಜಿಲ್ಲಾಡಳಿತ ಹಾಗೂ ರಾಮಕೃಷ್ಣ ಮಠ ಮಂಗಳೂರು, ದ.ಕ.ಜಿಲ್ಲಾ ಪಂಚಾಯತ್ ಹಾಗೂ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ವತಿಯಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ನೆಹರೂ ಮೈದಾನದ ಮೂಲಕ ನಡೆದ ಮೆರವಣಿಗೆಯಲ್ಲಿ ಬೃಹತ್ ಸಂಖ್ಯೆಯಲ್ಲಿ ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು […]

17ನೇ ರಾಷ್ಟ್ರೀಯ ಯುವಜನೋತ್ಸವಕ್ಕೆ ಮುಖ್ಯಮಂತ್ರಿಗಳಿಂದ ಅದ್ದೂರಿ ಚಾಲನೆ

Friday, January 13th, 2012
National Youth Festival

ಮಂಗಳೂರು : 17ನೇ ರಾಷ್ಟ್ರೀಯ ಯುವಜನೋತ್ಸವವನ್ನು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರು ಮಂಗಳಾ ಕ್ರೀಡಾಂಗಣದಲ್ಲಿ ಗುರುವಾರ ಸಂಜೆ ಉದ್ಘಾಟಿಸಿದರು. ಕೇಂದ್ರ ಸರಕಾರ, ರಾಜ್ಯ ಸರಕಾರ ಹಾಗೂ ನೆಹರೂ ಯುವ ಕೇಂದ್ರ ಜಂಟಿಯಾಗಿ ಸ್ವಾಮಿ ವಿವೇಕಾನಂದರ ಹುಟುಹಬ್ಬದ ಸವಿನೆನಪಿಗಾಗಿ ರಾಷ್ಟ್ರೀಯ ಯುವಜನೋತ್ಸವವನ್ನು ಅದ್ದೂರಿಯಾಗಿ ಆಯೋಜಿಸಿದೆ. ನೆಹರೂ ಮೈದಾನದಲ್ಲಿ ಗುರುವಾರ ಮಧ್ಯಾಹ್ನ ಮೂರು ಗಂಟೆಗೆ ಐದು ದಿನಗಳ ಕಾಲ ನಡೆಯುವ 17ನೇ ರಾಷ್ಟ್ರೀಯ ಯುವಜನೋತ್ಸವದ ಅದ್ದೂರಿ ಮೆರವಣಿಗೆಯನ್ನು ಉಸ್ತುವಾರಿ ಸಚಿವ ಜೆ. ಕೃಷ್ಣ ಪಾಲೆಮಾರ್‌ ಅವರು ಬಣ್ಣದ ಧ್ವಜ […]