Blog Archive

ನಾಳೆ ಮಹಿಳಾ ದಿನಾಚರಣೆಗೆ ಮೋದಿ ಜತೆ ‘ಚಾಯ್ ಪೆ ಚರ್ಚಾ’

Friday, March 7th, 2014
Narendra-Modi

ಮಂಗಳೂರು: ವಿಶ್ವ ಮಹಿಳಾ ದಿನಾಚರಣೆಯಂಗವಾಗಿ ಮಾ.8 ರಂದು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಜತೆ 2ನೇ ಸುತ್ತಿನ ‘ಚಾಯ್ ಪೆ ಚರ್ಚಾ’ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸಂಜೆ 4ರಿಂದ 6.30ರ ವರೆಗೆ ಏಕಕಾಲದಲ್ಲಿ ಚಹಾದೊಂದಿಗೆ ಚರ್ಚೆ ನಡೆಯಲಿದೆ. ರಾಜ್ಯದ 110 ಕೇಂದ್ರಗಳಲ್ಲಿ, ದೇಶಾದ್ಯಂತ ಒಟ್ಟು 1500 ಸ್ಥಳಗಳಲ್ಲಿ ಈ ಸಂವಾದ ನಡೆಯಲಿದೆ. ಶೇ.50 ಚರ್ಚೆ ಗ್ರಾಮೀಣ ಪ್ರದೇಶದಲ್ಲಿ ನಡೆಯುವುದು ಈ ಬಾರಿಯ ವಿಶೇಷ ಎಂದು ಬಿಜೆಪಿ ಮಹಿಳಾ ಮೋರ್ಚಾ ರಾಜ್ಯ ಕಾರ್ಯದರ್ಶಿ ಪುಲಸ್ತ್ಯ ರೈ ಗುರುವಾರ ಸುದ್ದಿಗೋಷ್ಠಿಯಲ್ಲಿ […]

ರಾಹುಲ್ ಗಾಂಧಿ ಬಣದ ಹರ್ಷ ಮೊಯ್ಲಿಗೆ ಸೋನಿಯಾ ಬಣದ ಗುಲಾಂ ನಬಿ ವಿಲನ್

Thursday, March 6th, 2014
Rahul-Gandhi

ಮಂಗಳೂರು: ರಾಹುಲ್ ಗಾಂಧಿಯ ಆಪ್ತ ವಲಯದಲ್ಲಿದ್ದ ಹರ್ಷ ಮೊಯ್ಲಿ ಚುನಾವಣೆ ಕಣದಿಂದ ಹೊರಬೀಳಲು ಕಾರಣ ಸೋನಿಯಾ ಗಾಂಧಿ ಆಪ್ತ ವಲಯದ ಗುಲಾಂ ನಬಿ ಆಜಾದ್! ಪ್ರೈಮರೀಸ್ ಚುನಾವಣೆಯಲ್ಲಿ ಪಕ್ಷದ ಯಾವುದೇ ಪದಾಧಿಕಾರಿ, ಮಾಜಿ, ಹಾಲಿ ಜನಪ್ರತಿನಿಧಿ ಮತ್ತು ಸಮಾಜ ಸೇವೆ ಅಡಿ ನಾಮಪತ್ರ ಸಲ್ಲಿಸಬಹುದು. ಮೂರನೇ ವಿಭಾಗದಲ್ಲಿ ಹರ್ಷ ಮೊಯ್ಲಿ ನಾಮಪತ್ರ ಸಲ್ಲಿಸಿದ್ದರು. ಸಮಾಜ ಸೇವೆ ವಿಭಾಗದಲ್ಲಿ ನಾಮಪತ್ರ ಸಲ್ಲಿಸಿದರೆ ಪುರಸ್ಕರಿಸುವ ಪರಮಾಧಿಕಾರ ಚುನಾವಣೆ ಉಸ್ತುವಾರಿ ಎಐಸಿಸಿ ಪ್ರಧಾನ ಕಾರ್ಯದರ್ಶಿ (ಗುಲಾಂ ನಬಿ ಅಜಾದ್)ಗೆ. ಕೇಂದ್ರ ಸಚಿವ […]

ದ.ಕ.: ಕಾಂಗ್ರೆಸ್‌ ಅಭ್ಯರ್ಥಿ ಸ್ಥಾನಕ್ಕೆ ಮೂವರಿಂದ ನಾಮಪತ್ರ

Saturday, March 1st, 2014
ದ.ಕ.: ಕಾಂಗ್ರೆಸ್‌ ಅಭ್ಯರ್ಥಿ ಸ್ಥಾನಕ್ಕೆ ಮೂವರಿಂದ ನಾಮಪತ್ರ

ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಆಯ್ಕೆಗೆ ಅವಕಾಶ ನೀಡುವ ಕುರಿತಂತೆ ಮೂವರು ಸ್ಪರ್ಧಾಕಾಂಕ್ಷಿಗಳು ಶುಕ್ರವಾರ ಮಧ್ಯಾಹ್ನ ದ.ಕ. ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ್ದು, ಮೂರೂ ನಾಮಪತ್ರಗಳು ಸ್ವೀಕೃತವಾಗಿವೆ. ಕಾಂಗ್ರೆಸ್‌ನ ಹಿರಿಯ ಮುಖಂಡ ಬಿ. ಜನಾರ್ದನ ಪೂಜಾರಿ, ಕೇಂದ್ರ ಸಚಿವ ವೀರಪ್ಪ ಮೊಯಿಲಿ ಅವರ ಪುತ್ರ ಹರ್ಷ ಮೊಯಿಲಿ ಹಾಗೂ ಕಾಂಗ್ರೆಸ್‌ ಅಲ್ಪಸಂಖ್ಯಾಕ ಘಟಕದ ರಾಜ್ಯ ಉಪಾಧ್ಯಕ್ಷ ಕಣಚೂರು ಮೋನು ನಾಮಪತ್ರ ಸಲ್ಲಿಸಿದ್ದು, ಅಂತಿಮ ಕಣದಲ್ಲಿದ್ದಾರೆ. ಶುಕ್ರವಾರ ಮಧ್ಯಾಹ್ನ 12ರಿಂದ ನಾಮಪತ್ರ […]

ಗಣಿತ, ವಿಜ್ಞಾನ ಪಾಠಕ್ಕೆ ಗೂಗಲ್ ಗ್ರೂಪ್!

Tuesday, February 25th, 2014
Google-Group

ಮಂಗಳೂರು: ಗುಣಾತ್ಮಕ ಶಿಕ್ಷಣದ ಕೂಗು ಎಲ್ಲೆಡೆ ಕೇಳಿಬರುತ್ತಿರುವ ಬೆನ್ನಿಗೇ ಗುಣಾತ್ಮಕ ಅಧ್ಯಾಪನವನ್ನು ವಿದ್ಯಾರ್ಥಿಗಳಿಗೆ ಒದಗಿಸುವ ಹೊಣೆಗಾರಿಕೆ ಶಿಕ್ಷಕ ಸಮುದಾಯದ್ದು. ವಿದ್ಯಾರ್ಥಿಗಳ ಪಾಲಿಗೆ ಕಬ್ಬಿಣದ ಕಡಲೆಕಾಯಿ ಗಣಿತದ ಜತೆ ವಿಜ್ಞಾನ ಸುಲಭಗೊಳಿಸುವ ಕಲಿಕಾ ಪ್ರಕ್ರಿಯೆಗೆ ಬ್ಲಾಕ್ ಮಟ್ಟದಲ್ಲಿ ಮಂಗಳೂರು ಗಣಿತ ಹಾಗೂ ವಿಜ್ಞಾನ ಗೂಗಲ್‌ನಲ್ಲಿ ಆನ್‌ಲೈನ್ ಶಿಕ್ಷಕರ ವೇದಿಕೆ ಸಿದ್ಧಗೊಂಡಿದೆ. ಹೈಸ್ಕೂಲ್ ವಿದ್ಯಾರ್ಥಿಗಳಿಗೆ ಪಾಠೋಪಯೋಗಿ ಬೋಧನ ಕ್ರಮದಲ್ಲಿ ನೈಪುಣ್ಯತೆ ಗಳಿಸಲು ಶಿಕ್ಷಕರಿಗಾಗಿ ಇರುವ ವೇದಿಕೆ ಇದು. ಪ್ರಸ್ತುತ ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ ಜಿಲ್ಲೆಯ ಎಲ್ಲ ಬ್ಲಾಕ್‌ಗಳಲ್ಲಿ ವೇದಿಕೆ […]

ಮಾನವ ಸಹಿತ ಬಾಹ್ಯಾಕಾಶ ಯಾನಕ್ಕೆ ಭಾರತ ಸಿದ್ಧತೆ

Tuesday, February 25th, 2014
Dr.-Radhakrishnan

ಮಂಗಳೂರು: ಮಾನವ ಸಹಿತ ಬಾಹ್ಯಾಕಾಶ ಯಾನ ಮಾಡುವ ಮೊದಲ ಹೆಜ್ಜೆ ಅಂಗವಾಗಿ ಮೂರು ಪಟ್ಟು ಹೆಚ್ಚು ಸಾಮರ್ಥ್ಯದ ಕ್ರಯೋಜೆನಿಕ್ ಜಿಎಸ್‌ಎಲ್‌ವಿ ಮಾರ್ಸ್3 ಉಪಗ್ರಹ ಉಡ್ಡಯನಕ್ಕೆ ಸಿದ್ಧಗೊಳಿಸಲಾಗುತ್ತಿದೆ ಎಂದು ಇಸ್ರೊ ಅಧ್ಯಕ್ಷ ಡಾ.ಕೆ. ರಾಧಾಕೃಷ್ಣನ್ ಹೇಳಿದರು. ಮಂಗಳೂರು ವಿಶ್ವ ವಿದ್ಯಾಲಯ ಕ್ಯಾಂಪಸ್‌ನಲ್ಲಿ ಸೋಮವಾರ ವಿವಿ ಘಟಿಕೋತ್ಸವ ಪದವಿ ಪ್ರದಾನ ಸಮಾರಂಭದಲ್ಲಿ ಮಾತನಾಡಿದರು. ಎರಡು ವರ್ಷದ ಬಳಿಕ ಮೂವರು ಮಾನವರನ್ನು ಒಯ್ಯುವ ಸಾಮರ್ಥ್ಯದ ಜಿಎಸ್‌ಎಲ್‌ವಿ ಮಾರ್ಸ್3 ರಾಕೆಟ್ ಮೂಲಕ ಉಪಗ್ರಹ ಉಡ್ಡಯನ ಮಾಡಲಿದ್ದೇವೆ ಎಂದರು. ಮಾನವ ಸಹಿತ ಬಾಹ್ಯಾಕಾಶ ಯಾನ […]

ಇಂದು-ನಾಳೆ ಬೀಚ್, ಆಹಾರ ಉತ್ಸವ

Saturday, February 22nd, 2014
AB-Ibrahim

ಮಂಗಳೂರು: ಕರಾವಳಿ ಉತ್ಸವ ಅಂಗವಾಗಿ ಫೆ.22, 23ರಂದು ಪಣಂಬೂರ್‌ನಲ್ಲಿ ಬೀಚ್ ಉತ್ಸವ ನಡೆಯಲಿದೆ. ಈ ಸಂದರ್ಭ ಆಹಾರೋತ್ಸವ, ಗಾಳಿ ಪಟ ಉತ್ಸವ, ಆಟೋಟ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದು ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು. ಫೆ.22ರಂದು ಸಂಜೆ 3 ಗಂಟೆಯಿಂದ ಬೀಚ್ ಮತ್ತು ಆಹಾರೋತ್ಸವ, ಟೀಮ್ ಮಂಗಳೂರು ವತಿಯಿಂದ ಗಾಳಿಪಟ ಪ್ರದರ್ಶನ, ಸಂಜೆ. 3.30ರಿಂದ ಮೂರು ವರ್ಷ ಒಳಗಿನ ಮಕ್ಕಳಿಗೆ ಬೀಚ್ ಪ್ರಿನ್ಸ್ ಮತ್ತು ಪ್ರಿನ್ಸೆಸ್ ಪ್ರದರ್ಶನ ನಡೆಯಲಿದೆ. ಫೆ.23ರಂದು ಬೀಚ್ ವಾಲಿಬಾಲ್ ಪಂದ್ಯಾಟಗಳು, […]

ಗುಂಡು ಹಾರಿಸಿಕೊಂಡು ಸಿಆರ್ ಪಿಎಫ್ ಯೋಧ ಆತ್ಮಹತ್ಯೆ

Saturday, February 22nd, 2014
CRPF-jawan

ಮಂಗಳೂರು: ಹೊಟ್ಟೆಗೆ ಗುಂಡು ಹಾರಿಸಿಕೊಂಡು ಸಿಆರ್ ಪಿಎಫ್ ಯೋಧ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನ ಎನ್‌ಎಂಪಿಟಿಯಲ್ಲಿ ಶನಿವಾರ ನಡೆದಿದೆ. ಇಂದು ಬೆಳಗ್ಗೆ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಯೋಧ ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತ ಯೋಧನನ್ನು ಮಹಾರಾಷ್ಟ್ರ ಮೂಲದ 38 ವರ್ಷದ ಕೆ.ಟಿ ಸಂದೀಪ್ ಸರ್ಕಟೆ ಎಂದು ಗುರುತಿಸಲಾಗಿದೆ. ಈ ಘಟನೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಪಣಂಬೂರ್ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮಾದಕವಸ್ತುಗಳಿಗೆ ವಿದ್ಯಾರ್ಥಿಗಳ ಗುರಿ: ಜಾಗೃತರಾಗಿರಲು ತಹಶೀಲ್ದಾರ್ ಕರೆ

Thursday, February 20th, 2014
Drug-Student

ಮಂಗಳೂರು: ಇತ್ತೀಚಿನ ದಿನಗಳಲ್ಲಿ ವಿದ್ಯಾಸಂಸ್ಥೆಗಳ ಆಸುಪಾಸಿನಲ್ಲಿ ಮಾದಕ ವಸ್ತುಗಳ ಮಾರಾಟ ಮತ್ತು ಬಳಕೆಯ ಪ್ರಕರಣಗಳು ಕಂಡುಬರುತ್ತಿದ್ದು, ಈ ನಿಟ್ಟಿನಲ್ಲಿ ವಿದ್ಯಾಸಂಸ್ಥೆಗಳು ಮತ್ತು ವಿದ್ಯಾರ್ಥಿಗಳು ಜಾಗೃತರಾಗಿರುವಂತೆ ಮಂಗಳೂರು ತಹಶೀಲ್ದಾರ್ ಮೋಹನ್ ರಾವ್ ಕರೆ ನೀಡಿದ್ದಾರೆ. ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಜಿಲ್ಲಾ ವಾರ್ತಾ ಇಲಾಖೆ ಹಾಗೂ ಬದ್ರಿಯಾ ಪದವಿಪೂರ್ವ ಕಾಲೇಜು ಸಂಯುಕ್ತ ಆಶ್ರಯದಲ್ಲಿ ನಗರದ ಬದ್ರಿಯಾ ಕಾಲೇಜು ಸಭಾಂಗಣದಲ್ಲಿ ಬುಧವಾರ ನಡೆದ ಮದ್ಯ ಹಾಗೂ ಮಾದಕ ವಸ್ತುಗಳ ದುಷ್ಪರಿಣಾಮ ಕುರಿತ ವಿಚಾರಸಂಕಿರಣ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಅಮಲು […]

ನೇತ್ರಾವತಿ ತಿರುಗಿಸಿದರೆ ನಮಗೆ ಬದುಕಿಲ್ಲ: ಶ್ರೀಶಕುಮಾರ್ ಆತಂಕ

Thursday, February 20th, 2014
River

ಮಂಗಳೂರು: ನೇತ್ರಾವತಿಯ ಮಡಿಲಿನಲ್ಲಿ ಸಾವಿರಾರು ಜೀವಚರಗಳು ಬದುಕುತ್ತಿದ್ದು ನದಿಯ ನೀರು ದಕ್ಷಿಣ ಕನ್ನಡಕ್ಕೆ ಸಿಗದಿದ್ದಲ್ಲಿ ಅವುಗಳು ಸೇರಿದಂತೆ ನಾವ್ಯಾರೂ ಬದುಕಿ ಉಳಿಯಲು ಸಾಧ್ಯವಿಲ್ಲ ಎಂದು ವಿವೇಕಾನಂದ ಕಾಲೇಜ್ ಉಪನ್ಯಾಸಕ, ಪರಿಸರವಾದಿ ಡಾ.ಶ್ರೀಶಕುಮಾರ್ ಎಂ.ಕೆ. ಆತಂಕ ವ್ಯಕ್ತಪಡಿಸಿದ್ದಾರೆ. ಪುತ್ತೂರಿನ ಅನುರಾಗ ವಠಾರದಲ್ಲಿ ಕರ್ನಾಟಕ ಸಂಘ ಮತ್ತು ಇತರ ಸಂಘಟನೆಗಳ ಸಹಯೋಗದ ‘ಸಾಹಿತ್ಯ ಕಲಾಕುಶಲೋಪರಿ-11’ ಕಾರ್ಯಕ್ರಮದಲ್ಲಿ ಬುಧವಾರ ‘ನೇತ್ರಾವತಿ ನೀರು ದಕ್ಷಿಣ ಕನ್ನಡಕ್ಕೆ ಸಿಗದಿದ್ದರೆ’ ವಿಚಾರದ ಕುರಿತು ಅವರು ಉಪನ್ಯಾಸ ನೀಡಿದರು. ನೇತ್ರಾವತಿ ತಿರುವು ಯೋಜನೆಗೆಡಿ.ವಿ. ಸದಾನಂದ ಗೌಡ ಅನುಮತಿ […]

ಚೌಕಾಸಿ ಮಾಡಿ ಪ್ರಯಾಣಿಸಿದ್ರೆ ಅರ್ಧದಲ್ಲೇ ಇಳಿಸ್ತಾರೆ!

Thursday, February 20th, 2014
Private-Tourist-bus

ಮಂಗಳೂರು: ದರದಲ್ಲಿ ಚೌಕಾಸಿ ಮಾಡಿ ಟಿಕೆಟ್ ಇಲ್ಲದೆ ದೂರ ಪ್ರದೇಶಗಳಿಗೆ ಖಾಸಗಿ ಟೂರಿಸ್ಟ್ ಬಸ್‌ಗಳಲ್ಲಿ ಸಂಚರಿಸುವ ಪ್ರಯಾಣಿಕರೇ ಎಚ್ಚರ. ಇನ್ನು ಟಿಕೆಟ್ ಇಲ್ಲದೆ ಪ್ರಯಾಣಿಸಿದರೆ ಚೆಕ್ಕಿಂಗ್ ಸಿಬ್ಬಂದಿ ಮಾರ್ಗ ಮಧ್ಯೆಯೇ ಇಳಿಸುತ್ತಾರೆ. ಮಾತ್ರವಲ್ಲ ಈ ಖಾಸಗಿ ಟೂರಿಸ್ಟ್ ಬಸ್‌ಗಳಲ್ಲಿ ರಾಜ್ಯಾದ್ಯಂತ ಏಕರೂಪದ ಪ್ರಯಾಣ ದರ ಕೂಡ ಜಾರಿಗೊಳಿಸಲಾಗಿದೆ. ಇದುವರೆಗೆ ಖಾಸಗಿ ಟೂರಿಸ್ಟ್ ಬಸ್‌ಗಳಲ್ಲಿ ದಿನಕ್ಕೊಂದು ದರ ವಸೂಲಿ ಮಾಡುತ್ತಿದ್ದರು, ಇನ್ನೂ ಕೆಲವು ಬಸ್ ಕಂಪನಿಗಳು ದುಬಾರಿ ದರ ಪೀಕಿಸುತ್ತಿದ್ದರು. ನಿಗದಿತ ಜಾಗದ ಬದಲು ಅರ್ಧದಲ್ಲೇ ಇಳಿಸುತ್ತಿದ್ದರು. ಇದು […]