ಭಾರ್ಗವನಿಗೊಲಿದ ಮಂಗಳಾದೇವಿ : ಸಂಪೂರ್ಣ ಲೇಖನ

Saturday, October 9th, 2010
ಮಂಗಳಾದೇವಿ

ಮಂಗಳೂರಿನ ಇತಿಹಾಸದಲ್ಲೇ ಧ್ರುವತಾರೆಯಾಗಿ ಖ್ಯಾತಿ ಗಳಿಸಿರುವ ಶ್ರೀ ಮಂಗಳಾದೇವಿ ದೇವಸ್ಥಾನ ಇದೀಗ ನವಿರಾಗಿ ಅಲಂಕರಿಸಿಕೊಂಡು ನಗರಕ್ಕೆ ಶೋಭೆ ತಂದಿದೆ. ಜಾತ್ರಾ ಮಹೋತ್ಸವದ ಸಂಭ್ರಮದಿಂದ ಕಂಗೊಳಿಸುತ್ತಿರುವ ಶ್ರೀ ಮಂಗಳಾದೇವಿ ದೇವಸ್ಥಾನ ಸಾವಿರಾರು ಭಕ್ತರನ್ನು ತನ್ನೆಡೆಗೆ ಬರಮಾಡಿಕೊಳ್ಳುತ್ತಿದೆ. ಇಂದು ಸಹಸ್ರಾರು ಸಂಖ್ಯೆಯಲ್ಲಿ ಭಕ್ತರನ್ನು ಪರಮ ಪವಿತ್ರ ಭಕ್ತಿಭಾವದಿಂದ ಪರಸ್ಪರ ಬಂಧಿಸಿರುವ ದೇವಸ್ಥಾನದ ಪೌರಾಣಿಕ ಹಿನ್ನೆಲೆ ನಿಜಕ್ಕೂ ರೋಮಾಂಚನಗೊಳಿಸುವಂತಾಗಿದೆ. ಒಂದು ಬಾರಿ, ಸಪ್ತ ಋಷಿಗಳು ಶ್ರೀ ಹರಿಯ ದರ್ಶನ ಪಡೆಯಲೆಂದು ವೈಕುಂಠಕ್ಕೆ ಬಂದಿದ್ದಾಗ, ವೈಕುಂಠದ ದ್ವಾರಪಾಲಕರಾದ ಜಯ-ವಿಜಯರು ಸಪ್ತಋಷಿಗಳನ್ನು ಒಳಹೋಗಲು ಬಿಡದೆ, […]

ಗೋವಾ ರಾಜ್ಯದಿಂದ ಅಕ್ರಮವಾಗಿ ಕೇರಳ ರಾಜ್ಯಕ್ಕೆ ಮದ್ಯ ಸಾಗಾಟ

Saturday, October 9th, 2010
ಮದ್ಯ ಸಾಗಾಟ

ಮಂಗಳೂರು: ಗೋವಾ ರಾಜ್ಯದಿಂದ ಅಕ್ರಮವಾಗಿ ಮದ್ಯವನ್ನು ಕೇರಳ ರಾಜ್ಯಕ್ಕೆ ಕೆ.ಎ.19 ಝಡ್ 1636 ಇಂಡಿಕಾ ಕಾರಿನಲ್ಲ್ಲಿ ಸಾಗಿಸಿ ಅಲ್ಲಿ ಹೆಚ್ಚಿನ ಜಿಲ್ಲೆಗೆ ಮಾರಾಟ ಮಾಡುತ್ತಾರೆ ಎಂಬ ಮಾಹಿತಿ ಪಡೆದ ಪಶ್ಚಿಮ ವಲಯದ ಅಬಕಾರಿ ಜಾರಿ ಮತ್ತು ಲಾಟರಿ ನಿಷೇದ ದಳದ ಪೊಲೀಸ್ ಉಪಾಧೀಕ್ಷಕರಾದ ಶ್ರೀ. ವಿಶ್ವನಾಥ ಪಂಡಿತ್ ರವರು ಪೊಲೀಸ್ ಉಪನಿರೀಕ್ಷಕರಾದ ನಾರಾಯಣ ಬೈಂದೂರು ಹಾಗೂ ಸಿಬ್ಬಂದಿಯವರೊಂದಿಗೆ ದಿನಾಂಕ 07-10-2010 ರಂದು ಮಧ್ಯಾಹ್ನ ಮುಡಿಪು ಜಂಕ್ಷನ್ ನಲ್ಲಿ ಹೊಂಚು ಹಾಕಿ ಕಾದು ಕುಳಿತುಕೊಂಡಿದ್ದಾಗ ಮಧ್ಯಾಹ್ನ ಸುಮಾರು 3.30 […]

ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಅವರಿಂದ ಬ್ರಹತ್ ಮಂಗಳೂರು ದಸಾರಕ್ಕೆ ಚಾಲನೆ

Friday, October 8th, 2010
ಮಂಗಳೂರು ದಸರಾ

ಮಂಗಳೂರು :  ಕುದ್ರೋಳಿ ಶ್ರೀ ಗೋಕರ್ಣ ಕ್ಷೇತ್ರದ ವತಿಯಿಂದ ನಡೆಯುವ ಮಂಗಳೂರು ದಸರಾವನ್ನು ದ.ಕ. ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ದೀಪ ಬೆಳಗಿಸುವುದರ ಮೂಲಕ ಇಂದು ಮಧ್ಯಾಹ್ನ ಚಾಲನೆ ನೀಡಿದರು. ಅ.8 ರಿಂದ 18 ರವರೆಗೆ ನಡೆಯುವ ನವರಾತ್ರಿ ಉತ್ಸವ ಮತ್ತು ಮಂಗಳೂರು ದಸರಾ ಪೂಜಿಸಲ್ಪಡುವ ನವದುರ್ಗೆಯರ ಮತ್ತು ಶಾರದ ಮಾತೆಯ ವಿಗ್ರಹ ಹಾಗೂ ಗಣಪತಿಯ ವಿಗ್ರಹ ವನ್ನು  ಕ್ಷೇತ್ರದ ಶ್ರೀ ಗೋಕರ್ಣ  ಕಲ್ಯಾಣಮಂಟಪದಲ್ಲಿ ಆಕರ್ಷಕವಾಗಿ ನಿರ್ಮಿಸಿದ ಸ್ವರ್ಣಮಯ ಮಂಟಪಗಳಲ್ಲಿ ಪ್ರತಿಷ್ಠಾಪಿಸಲಾಯಿತು. ಕ್ಷೇತ್ರದ ಅಧ್ಯಕ್ಷರಾದ ಎಚ್.ಎಸ್.ಸಾಯಿರಾಮ್, ಉಪಾದ್ಯಕ್ಷರಾದ ರಾಘವೇಂದ್ರ ಕುಳೂರು, […]

ಭಾಮಿನಿ ಮಾಸ ಪತ್ರಿಕೆ ಬಿಡುಗಡೆ

Wednesday, October 6th, 2010
ಭಾಮಿನಿ ಮಾಸ ಪತ್ರಿಕೆ ಬಿಡುಗಡೆ

ಮಂಗಳೂರು : ಭಾಮಿನಿ ಮಾಸ ಪತ್ರಿಕೆಯ ಬಿಡುಗಡೆ ಸಮಾರಂಭ ಇಂದು ಸಂಜೆ ಶಾರದಾ ವಿದ್ಯಾಲಯದ ಧ್ಯಾನ ಮಂದಿರದಲ್ಲಿ ನಡೆಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಮೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕ ಸುಮಂತ್ ಎಸ್. ದೀಪ ಬೆಳಗಿಸುವ ಮೂಲಕ ನೆರವೇರಿಸಿದರು. ಭಾಮಿನಿ ಪತ್ರಿಕೆಯ ಬಿಡುಗಡೆಯನ್ನು ಆಳ್ವಾಸ ಎಜುಕೇಶನ್ ಫೌಂಡೇಶನ್ ಇದರ ಅಧ್ಯಕ್ಷ ಎಂ. ಮೋಹನ ಆಳ್ವಾ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ಭಾಮಿನಿ ಮಾಸ ಪತ್ರಿಕೆ ಸುಸಂಸ್ಕೃತವಾಗಿ ಹೊರಬರಲಿ, ಓದುಗರ ಮನದಲ್ಲಿ ಭಾವೈಕ್ಯತೆ ಮೂಡಿಸಲಿ ಎಂದು ಹಾರೈಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹರಿಕೃಷ್ಣ ಪುನರೂರು […]

ಸರಕಾರದ ಯೋಜನೆಗಳು ಜನಸಾಮಾನ್ಯರ ಬಳಿಗೆ ತಲುಪುವಂತಾಗಬೇಕು : ಸಂಸದ ನಳಿನ್

Wednesday, October 6th, 2010
ಜಿಲ್ಲಾ ಸಣ್ಣ ಕೈಗಾರಿಕಾ ಸಂಘದಲ್ಲಿ `ನಾರು ಕುರಿತ ಕಾರ್ಯಗಾರ'

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಸಣ್ಣ ಕೈಗಾರಿಕಾ ಸಂಘ ಇದರ ನಾರು ಮಂಡಳಿ ಪ್ರಾದೇಶಿಕ ಕಚೇರಿ ಆಶ್ರಯದಲ್ಲಿ ಯೆಯ್ಯಾಡಿಯಲ್ಲಿ ಬುಧವಾರ ಬೆಳಿಗ್ಗೆ `ನಾರು ಕುರಿತ ಕಾರ್ಯಗಾರ’ವನ್ನು  ಸಂಸದ ನಳಿನ್ ಕುಮಾರ್ ಕಟೀಲು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಕಾರ್ಯಗಾರಗಳ ಮೂಲಕ ಸರಕಾರದ ಯೋಜನೆಗಳು ಜನಸಾಮಾನ್ಯರ ಬಳಿಗೆ ತಲುಪುವಂತಾಗಬೇಕು. ಇಂತಹ ಕಾರ್ಯಗಾರಗಳಲ್ಲಿ ಜನರು ಭಾಗವಹಿಸುವ ಮೂಲಕ ಸ್ವಂತ ಉದ್ದಿಮೆಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಉದ್ಘಾಟನೆ ಬಳಿಕ ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು. ಸರಕಾರದ ಯೋಜನೆಗಳನ್ನು ಅಧಿಕಾರಿಗಳು ಜನರಿಗೆ […]

ಹಿರಿಯ ಕಲಾವಿದ ಎಂ.ಎಸ್. ಇಬ್ರಾಹಿಂ ನಿಧನ

Wednesday, October 6th, 2010
ಹಿರಿಯ ಕಲಾವಿದ ಎಂ.ಎಸ್. ಇಬ್ರಾಹಿಂ ನಿಧನ

ಮಂಗಳೂರು : ಬಹುಮುಖ ಪ್ರತಿಭೆಯ ಹಿರಿಯ ರಂಗ ಕಲಾವಿದ, ಖ್ಯಾತ ರಂಗಕರ್ಮಿ ಎಂ.ಎಸ್. ಇಬ್ರಾಹಿಂ (78) ಇಂದು ಮುಂಜಾನೆ ಮಂಗಳೂರಿನ ಅವರ ನಿವಾಸದಲ್ಲಿ ನಿಧನರಾದರು. ಹಾಸ್ಯನಟರೂ, ತುಳು ಕನ್ನಡ, ಕೊಂಕಣಿ, ಇಂಗ್ಲಿಷ್ನಲ್ಲಿ 100 ಕ್ಕೂ ಅಧಿಕ ನಾಟಕಗಳನ್ನು ರಚಿಸಿರುವ ಶ್ರೀಯುತರು, ವರ್ಣಾಲಂಕಾರ ಪ್ರವೀಣರಾಗಿದ್ದರು. ಮಣ್ಣಗುಡ್ಡೆಯ ಎಂ.ಎಸ್. ಆರ್ಟ್ಸ್ ಸಂಸ್ಥೆಯ ಸ್ಥಾಪಕಾಧ್ಯಕ್ಷರಾಗಿರುವ ಎಂ.ಎಸ್.ಇಬ್ರಾಹಿಂ ಪತ್ನಿ ಮತ್ತು ಐವರು ಮಕ್ಕಳು ಹಾಗು ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಕನ್ನಡ, ತುಳು, ಕೊಂಕಣಿ, ಇಂಗ್ಲಿಷ್ ನಾಟಕಗಳಲ್ಲಿ ನಟಿಸಿದ್ದ, ನಿರ್ದೇಶಿಸಿದ್ದ ಎಂ.ಎಸ್. ಇಬ್ರಾಹಿಂ ಅವರು […]

ಬಿಜೆಪಿ ಸರಕಾರ ಇಕ್ಕಟ್ಟಿನಲ್ಲಿ 20 ಮಂದಿ ಬಿಜೆಪಿ ಶಾಸಕರ ಬೆಂಬಲ ವಾಪಸ್

Wednesday, October 6th, 2010
yeddyurappa

ಬೆಂಗಳೂರು : ಬಂಡಾಯದ ಬಾವುಟ ಹಾರಿಸಿರುವ  20 ಮಂದಿ ಬಿಜೆಪಿ ಶಾಸಕರು ಸರಕಾರಕ್ಕೆ ನೀಡಿದ್ದ ಬೆಂಬಲ ವಾಪಸ್ ಪಡೆದ ಪತ್ರವನ್ನು ರಾಜ್ಯಪಾಲ ಹಂಸರಾಜ್ ಭಾರದ್ವಾಜ್‌ಗೆ ಸಲ್ಲಿಸಿದ್ದಾರೆ. ಆರು ಪಕ್ಷೇತರ ಶಾಸಕರು ಸೇರಿದಂತೆ ಒಟ್ಟು 20 ಮಂದಿ  ಬಿಜೆಪಿ ಶಾಸಕರು ಪಕ್ಷೇತರ ಸಚಿವ ನರೇಂದ್ರ ಸ್ವಾಮಿ ಮೂಲಕ ಬೆಂಬಲ ವಾಪಸ್ ಪಡೆದ ಪತ್ರವನ್ನು ರಾಜ್ಯಪಾಲರಿಗೆ ತಲುಪಿಸಿದ್ದಾರೆ. ಕಮಲದ  ಭಿನ್ನಮತ ಉಂಟು ಮಾಡಲು ಸಫಲರಾಗಿರುವ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ  ಎಚ್ ಡಿ ಕುಮಾರಸ್ವಾಮಿ ಅವರು ಮತ್ತೊಮ್ಮೆ ರಾಜ್ಯದ […]

ಅನಧಿಕೃತ ಬಾಡಿಗೆ ಮಾಡುವ ಖಾಸಗಿ ಕ್ವಾಲಿಸ್ ವಾಹನಗಳ ಮುಟ್ಟಗೋಲು.

Wednesday, October 6th, 2010
ಖಾಸಗಿ ಕ್ವಾಲಿಸ್ ವಾಹನಗಳ ಮುಟ್ಟಗೋಲು

ಮಂಗಳೂರು: ಖಾಸಗಿ ಕಂಪೆನಿಯೊಂದರ ಪ್ರಚಾರಕ್ಕಾಗಿ ತಿಂಗಳ ಬಾಡಿಗೆಗೆ ನೀಡಲಾಗಿದ್ದ ಸುಮಾರು ಹನ್ನೆರಡು ಖಾಸಗಿ ಕ್ವಾಲಿಸ್ ವಾಹನಗಳನ್ನು ಇಂದು ಬೆಳಿಗ್ಗೆ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಮತ್ತು ಟ್ರಾಫಿಕ್ ಪೊಲೀಸರು ಮುಟ್ಟುಗೋಲು ಹಾಕಿದರು. ಮಂಗಳೂರಿನ ಫಳ್ನೀರಿನಲ್ಲಿ ಸದ್ಯದಲ್ಲೇ ಆರಂಭಗೊಳ್ಳಲಿರುವ ಜೋಯ್ ಆಲುಕಾಸ್ ಕಂಪೆನಿಯವರು ಸಂಸ್ಥೆಯ ಪ್ರಚಾರಕ್ಕಾಗಿ 20 ಕಾರುಗಳನ್ನು ನಿಗದಿಪಡಿಸಲಾಗಿದ್ದು ಅದರ ನಿರ್ವಹಣೆಯನ್ನು ಪ್ರಿಯಾ ಟ್ರಾವೆಲ್ಸ್ ನವರಿಗೆ ನೀಡಿದ್ದರು. ಕಾಂಟ್ರಾಕ್ಟುದಾರರಾದ ಪ್ರಿಯಾ ಟ್ರಾವೆಲ್ಸ್ ನ ಮಾಲಕರು ಕೆಲವೇ ಟೂರಿಸ್ಟ್ ಕಾರುಗಳನ್ನು ಗೊತ್ತು ಪಡಿಸಿ, ಇನ್ನುಳಿದ 12 ಕ್ವಾಲೀಸ್ ವಾಹನಗಳನ್ನು ಖಾಸಗಿಯವರಿಂದ […]

ಮಂಗಳಾದೇವಿ ದೇವಸ್ಥಾನದಲ್ಲಿ ಪರಂಪರೆಯ ನವರಾತ್ರಿ ಮಹೋತ್ಸವ

Tuesday, October 5th, 2010
ಮಂಗಳಾದೇವಿ ದೇವಸ್ಥಾನದಲ್ಲಿ ಪರಂಪರೆಯ ನವರಾತ್ರಿ ಮಹೋತ್ಸವ

ಮಂಗಳೂರು : ಇತಿಹಾಸ ಪ್ರಸಿದ್ಧ ಹಾಗೂ ಸಾವಿರಾರು ವರ್ಷಗಳ ಇತಿಹಾಸವಿರುವ ಮಹತೋಭಾರ ಶ್ರೀ ಮಂಗಳಾದೇವಿ ದೇವಸ್ಥಾನದಲ್ಲಿ ನವರಾತ್ರಿ ಮಹೋತ್ಸವವು ಅ 8 ರಿಂದ 18 ರವರೆಗೆ ನಡೆಯಲಿರುವುದು ಎಂದು ದೇವಳದ ಆಡಳಿತ ಮಂಡಳಿ ಅಧ್ಯಕ್ಷರಾದ ರಾಮಾನಾಥ ಹೆಗ್ಡೆಯವರು ಇಂದು ದೇವಸ್ಥಾನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಅ. 8ರಂದು ಎರಡೂವರೆ ಕೆ.ಜಿ. ಚಿನ್ನದಿಂದ ತಯಾರಿಸಿದ ಚಿನ್ನದ ಮುಖವಾಡವನ್ನು ದ.ಕ. ಜಿಲ್ಲಾಧಿಕಾರಿ ಪೊನ್ನುರಾಜ್ ಹಾಗೂ ಬಂಟರ ಸಂಘದ ಅಧ್ಯಕ್ಷರಾದ ಅಜಿತ್ ಕುಮಾರ್ ರೈ ಮಾಲಾಡಿಯವರ ಮತ್ತು ಭಕ್ತಾದಿಗಳ ಸಮ್ಮುಖದಲ್ಲಿ ಶ್ರೀ […]

ಹಿರಿಯ ಸಾಹಿತಿ ಡಾ| ಕೋಟ ಶಿವರಾಮ ಕಾರಂತರ 109ನೇ ಹುಟ್ಟು ಹಬ್ಬ. ಅ 10ಕ್ಕೆ.

Tuesday, October 5th, 2010
ಕೋಟ ಶಿವರಾಮ ಕಾರಂತರ 109ನೇ ಹುಟ್ಟು ಹಬ್ಬ

ಮಂಗಳೂರು : ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕಲ್ಕೂರ ಪ್ರತಿಷ್ಠಾನ ಇದರ ಆಶ್ರಯದಲ್ಲಿ ಅ. 10ನೇ ರವಿವಾರ ಮಂಗಳೂರು ಪುರಭವನದಲ್ಲಿ ಜ್ಞಾನಪೀಠ ಪ್ರಶಸ್ತಿ ವಿಜೇತ ಹಿರಿಯ ಸಾಹಿತಿ ದಿವಂಗತ ಡಾ| ಕೋಟ ಶಿವರಾಮ ಕಾರಂತ ಅವರ 109 ಹುಟ್ಟು ಹಬ್ಬವನ್ನು ಆಚರಿಸಲಾಗುವುದು ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಇಂದು ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಜೆ.ಕೃಷ್ಣಪಾಲೇಮಾರ್ ಅ 10ರ ಸಂಜೆ ಐದು ಗಂಟೆಗೆ […]