ನಕ್ಸಲರ ವಿರುದ್ಧ ಸೇಡು ತೀರಿಸಿಯೇ ಸಿದ್ಧ: ಸಚಿವ ಶಿಂದೆ

Thursday, March 13th, 2014
Sushil-Kumar-Shinde

ಭೋಪಾಲ್: ಛತ್ತೀಸ್‌ಗಡದಲ್ಲಿ ರಕ್ತದೋಕುಳಿ ಹರಿಸಿದ ನಕ್ಸಲರ ವಿರುದ್ಧ ಸೇಡು ತೀರಿಸಿಯೇ ಸಿದ್ಧ ಎಂದಿದ್ದಾರೆ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂದೆ. ಬುಧವಾರ ಛತ್ತೀಸ್‌ಗಡದ ಸುಕ್ಮಾ ಜಿಲ್ಲೆಗೆ ಭೇಟಿ ನೀಡಿದ ಶಿಂದೆ, ಘಟನೆಯ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯೇ ಕೈಗೆತ್ತಿಕೊಳ್ಳಲಿದೆ. ನಕ್ಸಲರು ಎಲ್ಲಿದ್ದಾರೆ ಎಂಬುದು ನಮಗೆ ಗೊತ್ತು. ಅವರನ್ನು ಸದೆಬಡಿಯುವುದು ಹೇಗೆ ಎಂದೂ ಗೊತ್ತು ಎಂದಿದ್ದಾರೆ. ಲೋಕಸಭೆ ಚುನಾವಣೆಗೆ ಅಡ್ಡಿಪಡಿಸಲೆಂದೇ ನಕ್ಸಲರು ಇಂತಹ ಕೃತ್ಯವೆಸಗಿದ್ದಾರೆ. ಆದರೆ, ಅವರ ಪ್ರಯತ್ನಕ್ಕೆ ಫಲ ಸಿಗುವುದಿಲ್ಲ ಎಂದೂ ಅವರು ಹೇಳಿದ್ದಾರೆ. ಏತನ್ಮಧ್ಯೆ, […]

ಮಮತಾಗೆ ಕೈಕೊಟ್ಟ ‘ಅಣ್ಣಾ’ ರಾಜಕೀಯ!

Thursday, March 13th, 2014
Mamata-Banerjee

ನವದೆಹಲಿ: ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಮುಂದಿಟ್ಟುಕೊಂಡು ದೆಹಲಿಯಲ್ಲಿ ರಾಜಕೀಯ ಮಾಡಲು ಹೊರಟ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಯೋಜನೆ ವಿಫಲವಾಗಿದೆ. ರಾಮಲೀಲಾ ಮೈದಾನದಲ್ಲಿ ಬುಧವಾರ ಆಯೋಜಿಸಲಾಗಿದ್ದ ರ್ಯಾಲಿಗೆ ಅಣ್ಣಾ ಕೈಕೊಟ್ಟಿದ್ದಾರೆ. ಬೆರಳೆಣಿಕೆ ಸಂಖ್ಯೆಯ ಜನರಿಗೆ ಮಮತಾ ಅವರೊಬ್ಬರೇ ಭಾಷಣ ಮಾಡಿ ಹೋಗಿದ್ದಾರೆ. ಅಣ್ಣಾ ಗೈರು ಹಾಜರಾಗಲು ಅನಾರೋಗ್ಯದ ಕಾರಣ ನೀಡಲಾಗುತ್ತಿದೆ. ಆದರೆ, ಇತ್ತೀಚೆಗಷ್ಟೇ ಬಿಜೆಪಿ ಸೇರಿದ್ದ ಬೆಂಬಲಿಗ, ಭೂ ಸೇನೆ ನಿವೃತ್ತ ಮುಖ್ಯಸ್ಥ ಜ. ವಿ.ಕೆ. ಸಿಂಗ್ ಪ್ರಭಾವವೇ ರ್ಯಾಲಿಯಿಂದ ಅಣ್ಣಾ ದೂರ ಉಳಿಯಲು […]

ನಕ್ಸಲ್ ರಕ್ತದೋಕುಳಿ 20 ಯೋಧರ ಹತ್ಯೆ

Wednesday, March 12th, 2014
Naxal

ನವದೆಹಲಿ: ಛತ್ತೀಸ್‌ಗಡದಲ್ಲಿ ನಕ್ಸಲೀಯರು ಮತ್ತೆ ರಕ್ತದೋಕುಳಿ ಹರಿಸಿದ್ದಾರೆ. ಕೆಂಪು ಉಗ್ರರು ನಡೆಸಿದ ದಾಳಿಗೆ 20 ಮಂದಿ ಭದ್ರತಾ ಸಿಬ್ಬಂದಿ ಬಲಿಯಾಗಿದ್ದಾರೆ. ಛತ್ತೀಸ್‌ಗಡದ ಸುಕ್ಮಾ ಜಿಲ್ಲೆಯ ದಟ್ಟ ಅರಣ್ಯದಲ್ಲಿ ಮಂಗಳವಾರ ಈ ದುರ್ಘಟನೆ ನಡೆದಿದೆ.  ಬೆಳಗ್ಗೆ 10.30ರ ವೇಳೆಗೆ ನಕ್ಸಲರು ಹಾಗೂ ಭದ್ರತಾ ಸಿಬ್ಬಂದಿ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ 15 ಮಂದಿ ಸಿಆರ್‌ಪಿಎಫ್ ಯೋಧರು ಹಾಗೂ 5 ಮಂದಿ ಪೊಲೀಸರು ಸಾವಿಗೀಡಾಗಿದ್ದಾರೆ. ಕೆಲವು ಭದ್ರತಾ ಸಿಬ್ಬಂದಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ನಕ್ಸಲರ ಪ್ರಾಣಹಾನಿ ಬಗ್ಗೆ ಯಾವುದೇ […]

ಯೋಗೇಶ್ವರ್ ಕಾಂಗ್ರೆಸ್ ಗೆ ಸೇರ್ಪಡೆ

Wednesday, March 12th, 2014
CP-Yogeshwar

ನವದೆಹಲಿ: ಚನ್ನಪಟ್ಟಣ ಕ್ಷೇತ್ರದ ಸಮಾಜವಾದಿ ಪಕ್ಷದ ಏಕೈಕ ಶಾಸಕ ಸಿ.ಪಿ. ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಮಂಗಳವಾರ ಎಐಸಿಸಿ ಯೋಗೇಶ್ವರ್ಗೆ ಹಸಿರು ನಿಶಾನೆ ನೀಡಿದೆ. ತಕ್ಷಣಕ್ಕೆ ಜಾರಿಗೆ ಬರುವಂತೆ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲಾಗಿದೆ. ಲೋಕಸಭಾ ಉಪ ಚುನಾವಣೆ ವೇಳೆ ಪರೋಕ್ಷವಾಗಿ ಕಾಂಗ್ರೆಸ್ ಪರವಾಗಿ ಕೆಲಸ ಮಾಡಿದ್ದ ಸಿ.ಪಿ. ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆಯೊಂದಿಗೆ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಚುನಾವಣಾ ಲೆಕ್ಕಾಚಾರಗಳು ಬದಲಾಗಿವೆ. ಜೆಡಿಎಸ್ ವಶದಲ್ಲಿದ್ದ ಆ ಕ್ಷೇತ್ರವನ್ನು ಲೋಕಸಭಾ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ವಶಪಡಿಸಿಕೊಂಡಿತ್ತು. ಡಿ.ಕೆ.ಶಿವಕುಮಾರ್ ಅವರ ಸಹೋದರ […]

ಗುಜರಾತಿಗೆ ಹೋಗಿ ಜನಪ್ರಿಯತೆ ಕಳೆದುಕೊಂಡ ಕೇಜ್ರಿವಾಲ್

Tuesday, March 11th, 2014
Arvind-Kejriwa

ಅಹಮದಾಬಾದ್: ಇತ್ತೀಚೆಗೆ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲಾ ಅವರು ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರನ್ನು ಮುಖತಃ ಭೇಟಿಯಾಗಲು ಗುಜರಾತಿಗೆ ಹೋಗಿದ್ದರಲ್ಲ. ಅದರ ಪ್ರಭಾವ/ ಪರಿಣಾಮ ಗೋಚರವಾಗಿದೆ. ಆದರೆ ಅದು ಅವರಿಗೇ ಮುಳುವಾಗಿದೆ. ಕಳೆದ ವಾರ ನಾಲ್ಕು ದಿನಗಳ ಕಾಲ ಗುಜರಾತಿನಲ್ಲಿ ಅಡ್ಡಾಡಿದ ಅರವಿಂದ್ ಕೇಜ್ರಿವಾಲಾ ಭಾರಿ ಯಶಸ್ಸು ಸಾಧಿಸಿದರು ಎಂದು AAP ಬೆಂಬಲಿಗರು ಹೇಳಿಕೊಂಡಿದ್ದರೆ ಅವರ ಟೀಕಾಕಾರರು ಅದೊಂದು ದೊಡ್ಡ ಫ್ಲಾಪ್ ಷೋ ಎಂದು ಜರಿದಿದ್ದಾರೆ. ಇನ್ನು, ಟ್ವಿಟ್ಟರ್ ಮೂಲಕ ನಡೆದಿರುವ […]

ಆರ್‌ಎಲ್‌ಡಿ ಪಕ್ಷ ಸೇರಿದ ಜಯಪ್ರದಾ, ಅಮರ್ ಸಿಂಗ್

Monday, March 10th, 2014
Jaya prada

ನವದೆಹಲಿ: ನಟಿ, ರಾಜಕಾರಣಿ ಜಯಪ್ರದಾ ಮತ್ತು ಸಮಾಜವಾದಿ ಪಕ್ಷದ ಮಾಜಿ ನೇತಾರ ಅಮರ್ ಸಿಂಗ್ ಅವರು ಸೋಮವಾರ ರಾಷ್ಟ್ರೀಯ ಲೋಕ ದಳ ಪಕ್ಷಕ್ಕೆ ಸೇರಿದ್ದಾರೆ. ಇವರಿಬ್ಬರನ್ನೂ ಆರ್‌ಎಡಿ ನಾಯಕ ಅಜಿತ್ ಸಿಂಗ್ ಸ್ವಾಗತಿಸಿದ್ದಾರೆ. ಆರ್‌ಎಲ್‌ಡಿಗೆ ಸೇರ್ಪಡೆಯಾದ ನಂತರ ಮಾತನಾಡಿದ ಅಮರ್ ಸಿಂಗ್,  ಚರಣ್ ಸಿಂಗ್ ಅವರು ಈ ದೇಶಕ್ಕೆ ಹೆಚ್ಚಿನ ಕೊಡುಗೆಗಳನ್ನು ನೀಡಿದ್ದಾರೆ ಎಂದು ಹೇಳಿದ್ದಾರೆ. ಅದೇ ವೇಳೆ ಬಿಜೆಪಿ ಮತ್ತು ಕಾಂಗ್ರೆಸ್‌ನ ಮೇಲೆ ವಾಗ್ದಾಳಿ ನಡೆಸಿದ ಅವರು ಉಭಯ ಪಕ್ಷಗಳು ಉತ್ತರ ಪ್ರದೇಶದ ವಿಭಜನೆಗೆ ಯಾವುದೇ […]

ನಟಿ ಜೂಹಿ ಚಾವ್ಲಾ ಸೋದರ ಕೊನೆಗೂ ಬದುಕಿಗೆ ವಿದಾಯ

Monday, March 10th, 2014
Bobby-Chawla

ಮುಂಬೈ: ಬಾಲಿವುಡ್ ನಟಿ, ಪ್ರೇಮಲೋಕ ಖ್ಯಾತಿಯ ಜೂಹಿ ಚಾವ್ಲಾ ಅವರ ಸೋದರ ಕೊನೆಗೂ ಬದುಕಿಗೆ ವಿದಾಯ ಹೇಳಿದ್ದಾರೆ. ನಟಿ ಜೂಹಿ ಅವರ ಸೋದರ ಬಾಬ್ಬಿ ಚಾವ್ಲಾ ಅವರು ಸರಿಯಾಗಿ ನಾಲ್ಕು ವರ್ಷಗಳ ಹಿಂದೆ ತೀವ್ರ ಹೃದಯಾಘಾತಕ್ಕೆ ತುತ್ತಾದ ನಂತರ ಕೋಮಾದಲ್ಲಿಯೇ ಇದ್ದರು. ನಿನ್ನೆ ಭಾನುವಾರ ಮುಂಬೈನ Jaslok Hospital ನಲ್ಲಿ ಅವರು ಕೊನೆಯುಸಿರೆಳೆದರು. ಭಾನುವಾರವೇ ಬಾಬ್ಬಿ ಅಂತ್ಯಕ್ರಿಯೆ ನೇರವೇರಿದೆ. ಸಹೋದರನಾಗಿ ನಟಿ ಜೂಹಿ ಚಾವ್ಲಾಗೆ ಅತ್ಯಂತ ಹತ್ತಿರವಾಗಿದ್ದ ಬಾಬ್ಬಿ ನಿಧನದಿಂದ ಜೂಹಿ ಅಧೀರರಾಗಿದ್ದಾರೆ. ಸೋದರ ಕೋಮಾ ಸ್ಥಿತಿ […]

ಬಿಜೆಪಿಯಲ್ಲಿ ಟಿಕೆಟ್ ಗೊಂದಲ ಮೋದಿ ಪಾಲಿಗೆ ವಾರಣಸಿ ಪಕ್ಕಾ ಅಟಲ್‌ರ ಲಖನೌ ಲಕ್ ಯಾರಿಗೆ?

Monday, March 10th, 2014
Murli-Manohar-Joshi

ನವದೆಹಲಿ: ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಉತ್ತರಪ್ರದೇಶದ ವಾರಾಣಸಿ ಕ್ಷೇತ್ರದಿಂದ ಸ್ಪರ್ಧಿಸುವ ಬಗೆಗಿನ ಗೊಂದಲಗಳಿಗೆ ಭಾನುವಾರ ಬಹುತೇಕ ತೆರೆ ಬಿದ್ದಿದೆ. ಕೇಂದ್ರದ ಮಾಜಿ ಸಚಿವ, ಹಾಲಿ ಸಂಸದ ಡಾ. ಮುರಳಿ ಮನೋಹರ ಜೋಶಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ‘ಪಕ್ಷದ ವರಿಷ್ಠರು ಯಾವುದೇ ನಿರ್ಧಾರ ಕೈಗೊಂಡರೂ ಅದನ್ನು ನಾನು ಪಾಲಿಸುತ್ತೇನೆ’ ಎಂದು ಅವರು ನವದೆಹಲಿಯಲ್ಲಿ ತಿಳಿಸಿದ್ದಾರೆ. 13ರ ಸಭೆಯಲ್ಲಿ ನಿರ್ಧಾರ: ಮಾ.13ರಂದು ನವದೆಹಲಿಯಲ್ಲಿ ಬಿಜೆಪಿಯ ಕೇಂದ್ರೀಯ ಚುನಾವಣಾ ಸಮಿತಿ ಸಭೆ ನಡೆಯಲಿದೆ ಎಂದು ಅವರು ಹೇಳಿದ್ದಾರೆ.  […]

26 ಕೈಯಾಳುಗಳು ಅಂತಿಮ, ಲಕ್ಷ್ಮಿ, ನಿವೇದಿತ್, ನಿಲೇಕಣಿ, ರಮ್ಯಾ, ಸುರೇಶ್, ಕುಮಾರ್ ಕ್ಲಿಯರ್

Saturday, March 8th, 2014
Janardhana-poojary

ನವದೆಹಲಿ: ಕರ್ನಾಟಕದಿಂದ ಅತಿ ಹೆಚ್ಚು ಸ್ಥಾನ ನಿರೀಕ್ಷಿಸಿರುವ ಕಾಂಗ್ರೆಸ್ ಹೈಕಮಾಂಡ್ ಕೊನೆಗೂ 26 ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಖೈರುಗೊಳಿಸಿದೆ. ಆಂತರಿಕ ಚುನಾವಣೆ ಮೂಲಕ ಆಯ್ಕೆ ಮಾಡಬೇಕಾದ ಮಂಗಳೂರು ಮತ್ತು ಬೆಂಗಳೂರು ಉತ್ತರ ಕ್ಷೇತ್ರಗಳ ಪೈಕಿ ಮಂಗಳೂರಿಗೆ ಜನಾರ್ದನ ಪೂಜಾರಿ ಅವರನ್ನೇ ಕಣಕ್ಕಿಳಿಸಲು ನಿರ್ಧರಿಸಿದೆ ಎಂದು ತಿಳಿದು ಬಂದಿದೆ. ಈ ಹಿಂದೆಯೇ ನಿರ್ಧರಿಸಿದ್ದಂತೆ ಎಲ್ಲ 9 ಹಾಲಿ ಸಂಸದರು ಟಿಕೆಟ್ ಗಿಟ್ಟಿಸಿದ್ದಾರೆ.  ಶುಕ್ರವಾರ ಸೋನಿಯಾ ಗಾಂಧಿ ಅವರ ನಿವಾಸದಲ್ಲಿ ನಡೆದ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಸುದೀರ್ಘ ಚರ್ಚೆ ನಂತರ […]

ಲೋಕಸಮರ: ಬಿಜೆಪಿಯ ಮೊದಲ ಪಟ್ಟಿ ಬಿಡುಗಡೆ, 4 ಹಾಲಿ ಸಂಸದರಿಗೆ ಕೊಕ್

Saturday, March 8th, 2014
BJP

ನವದೆಹಲಿ: ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ 20 ಲೋಕಸಭಾ ಕ್ಷೇತ್ರಗಳಿಗೆ ಬಿಜೆಪಿಯು ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಶನಿವಾರ ಬಿಡುಗಡೆ ಮಾಡಿದ್ದು, ಮೊದಲ ಪಟ್ಟಿಯಲ್ಲಿ ನಾಲ್ವರು ಹಾಲಿ ಸಂಸದರಿಗೆ ಕೊಕ್ ನೀಡಲಾಗಿದೆ. ಅಭ್ಯರ್ಥಿಗಳ ಆಯ್ಕೆ ಸಂಬಂಧ ಇಂದು ದೆಹಲಿಯಲ್ಲಿ ನಡೆದ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ 20 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಅಂತಿಮಗೊಳಿಸಲಾಯಿತು. ಸಭೆಯ ಬಳಿಕ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅನಂತ್ ಕುಮಾರ್ ಅವರು ಮೊದಲ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದರು. […]