ಆಕಾಶವಾಣಿ ದೂರದರ್ಶನ ಕಾರ್ಯಕರ್ತರ ರಾಷ್ಟ್ರೀಯ ವಿಚಾರವಿನಿಮಯ ಸಮಾರಂಭ

Thursday, November 4th, 2010
ಆಕಾಶವಾಣಿ ದೂರದರ್ಶನ ಕಾರ್ಯಕರ್ತರ ರಾಷ್ಟ್ರೀಯ ವಿಚಾರವಿನಿಮಯ

ಮಂಗಳೂರು: ಆಕಾಶವಾಣಿ ಮತ್ತು ದೂದರ್ಶನ ನೌಕರರ ರಾಷ್ಟ್ರೀಯ ಮಹಾಕೂಟದ ಆಶ್ರಯದಲ್ಲಿ  ಸಂಸ್ಥೆಯ ಅಧ್ಯಕ್ಷ ಎಸ್. ಅನಿಲ್ ಕುಮಾರ್ ಅವರ ಉಪಸ್ಥಿತಿಯಲ್ಲಿ, ಮಂಗಳೂರು ನಗರದ ಎಸ್.ಡಿ.ಎಂ ಉದ್ಯಮಾಡಳಿತ ಉನ್ನತವಿದ್ಯಾಲಯದ ಸಭಾಂಗಣದಲ್ಲಿ ಇಂದು ಗುರುವಾರ (ನ.4) ಬೆಳಗ್ಗೆ ಹತ್ತು ಘಂಟೆಗೆ, “ಆಕಾಶವಾಣಿ-ಅಂದು, ಇಂದು” ಎಂಬ ವಿಷಯವಾಗಿ ರಾಷ್ಟ್ರೀಯ ವಿಚಾರಗೋಷ್ಟಿ, ಹಾಗೂ “ಬಾನುಲಿಯ ಬೆಳಕು” ಎಂಬ ಸ್ಮರಣಿಕೆಯನ್ನು ಬಿಡುಗಡೆಮಾಡುವ ಕಾರ್ಯಕ್ರಮಗಳ ಉದ್ಘಾಟನೆಯನ್ನು ಧರ್ಮಾಧಿಕಾರಿ ಧರ್ಮಸ್ಥಳ ಡಾ. ವೀರೇಂದ್ರ ಹೆಗ್ಗಡೆಯವರು ನೆರವೇರಿಸಿಕೊಟ್ಟರು. ಪ್ರಸಾರಭಾರತೀಯ ಮಾಜಿ ಮುಖ್ಯಾಧಿಕಾರಿ / ಅಧ್ಯಕ್ಷರಾದ ಪತ್ರಕರ್ತ ಡಾ.ಎಂ.ವಿ ಕಾಮತ್ […]

ಮನೆ ಲೀಸಿಗೆ ಕೊಡುವುದಾಗಿ ನಂಬಿಸಿ ಹಲವರಿಗೆ ಕೊಟ್ಯಾಂತರ ರೂಪಾಯಿ ವಂಚನೆ

Wednesday, November 3rd, 2010
ಕೊಟ್ಯಾಂತರ ರೂಪಾಯಿ ವಂಚನೆ

ಮಂಗಳೂರು : ಮಂಗಳೂರಿನ ಅತ್ತಾವರದ ಹಾರ್ಮನಿ ವಸತಿ ಸಂಕೀರ್ಣದ ನಿವಾಸಿಯಾಗಿರುವ ಇಬ್ರಾಹಿಂ ಶೆರೀಫ್ ಎಂಬಾತ ಬಾಡಿಗೆ ಮನೆಯ ಹುಡುಕಾಟದಲ್ಲಿರುವವರನ್ನು ಸಂಪರ್ಕಿಸಿ ಬಾಡಿಗೆ ಮನೆಯನ್ನು ತಾನೇ ಗೊತ್ತು ಮಾಡಿಕೊಟ್ಟು ಪ್ರತೀ ತಿಂಗಳ ಬಾಡಿಗೆಯನ್ನು ತಾನೇ ಪಾವತಿಸುತ್ತೇನೆ ಎಂದು ನಂಬಿಸಿ ಅದಕ್ಕಾಗಿ ತನ್ನಲ್ಲಿ ನಿರ್ಧಿಷ್ಟ ಮೊತ್ತವನ್ನು ಠೇವಣಿಯಾಗಿ ಇಡಬೇಕು ಎಂಬ ಕರಾರಿನಂತೆ ಒಪ್ಪಂದ ಪತ್ರವನ್ನು ಮಾಡಿಕೊಂಡು ಹಲವಾರು ವ್ಯಕ್ತಿಗಳಿಂದ ಲಕ್ಷಾಂತರ ರೂಪಾಯಿಯನ್ನು ಪಡೆದು ಈಗ ಏಕಾಏಕಿ ಮನೆ ಬಾಡಿಗೆಯನ್ನು ಪಾವತಿಸದೆ ಠೇವಣಿಯನ್ನು ಹಿಂದಿರುಗಿಸದೆ ಪರಾರಿಯಾಗಿರುತ್ತಾನೆ. ಏರುತ್ತಿರುವ ನಿವೇಶನ ಮತ್ತು ಮನೆ […]

ಜಿಲ್ಲಾಧಿಕಾರಿ ಪೊನ್ನುರಾಜ್ ವರ್ಗಾವಣೆಯನ್ನು ರದ್ದುಗೊಳಿಸಿದ ರಾಜ್ಯ ಸರ್ಕಾರ

Wednesday, November 3rd, 2010
ಜಿಲ್ಲಾಧಿಕಾರಿ ಪೊನ್ನುರಾಜ್

ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ವಿ.ಪೊನ್ನುರಾಜ್ ಅವರ ಶಿವಮೊಗ್ಗ ವರ್ಗಾವಣೆಯ ಆದೇಶವನ್ನು ರಾಜ್ಯ ಸರಕಾರ ರದ್ದುಗೊಳಿಸಿದ್ದು ಪಂಕಜ್‌ಕುಮಾರ್ ಪಾಂಡೆ ಅವರನ್ನು ಶಿವಮೊಗ್ಗ ಜಿಲ್ಲಾಧಿಕಾರಿಯಾಗಿಯೇ ಮುಂದುವರಿಸಲು ಸೂಚಿಸಿದೆ. ಇವರ ಜೊತೆ ವರ್ಗಾವಣೆಗೊಂಡ ಇನ್ನು ಮೂರು ಜನ ಐಎಎಸ್ ಅಧಿಕಾರಿಗಳ ವರ್ಗಾವಣೆ ಆದೇಶವನ್ನು ಮಾರ್ಪಡಿಸಿ ರಾಜ್ಯ ಸರ್ಕಾರ ಮಂಗಳವಾರ ಆದೇಶ ಹೊರಡಿಸಿದೆ. ದ.ಕ ಜಿಲ್ಲಾಪಂಚಾಯತ್ ಸಿಇಓ ಪಿ ಶಿವಶಂಕರ್ ಅವರ ಆದೇಶವನ್ನು ತಡೆ ಹಿಡಿಯಲಾಗಿದೆ. ಕರ್ನಾಟಕ ಲೋಕಸೇವಾ ಆಯೋಗದ ಕಾರ್ಯದರ್ಶಿ ವಿ.ಬಿ.ಪಾಟೀಲರ ವರ್ಗಾವಣೆ ಆದೇಶವನ್ನು ರದ್ದುಪಡಿಸಿ ಅದೇ ಹುದ್ದೆಯಲ್ಲಿ ಮುಂದುವರಿಸಲಾಗಿದೆ. […]

ಶಿಕ್ಷಣದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ಮೊಳಹಳ್ಳಿ ಶಿವರಾವ್ ಪುರಸ್ಕಾರ

Tuesday, November 2nd, 2010
ದಿ| ಮೊಳಹಳ್ಳಿ ಶಿವರಾವ್ ಸ್ಮರಣಾರ್ಥಕ

ಮಂಗಳೂರು: ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ವತಿಯಿಂದ ಸಹಕಾರಿ ಪಿತಾಮಹ ದಿ| ಮೊಳಹಳ್ಳಿ ಶಿವರಾವ್ ಸ್ಮರಣಾರ್ಥಕ ಹತ್ತನೇ ತರಗತಿ ಹಾಗೂ ಪದವಿಪೂರ್ವ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕಗಳಿಸಿ ಸಾಧನೆಗೈದ ವಿದ್ಯಾರ್ಥಿ, ವಿದ್ಯಾರ್ಥಿನಿಯರಿಗೆ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಮೊಳಹಳ್ಳಿ ಶಿವರಾವ್ ಸ್ಮಾರಕ ಸಭಾಭವನದಲ್ಲಿ ಪ್ರತಿಭಾ ಪುರಸ್ಕಾರ ಮತ್ತು ವಿದ್ಯಾರ್ಥಿವೇತನ ವಿತರಣೆ ಇಂದು ಸಂಜೆ ನಡೆಯಿತು. ಪ್ರತಿಭಾನಿವಿತರನ್ನು ರೆ| ಪಾ| ಜೋಸೆಫ್ ರೊಡ್ರಿಗಸ್ ಎಸ್. ಜೆ. ಶಾಲು ಹೊದಿಸಿ ಪ್ರಶಸ್ತಿ ಫಲಕ ಹಾಗೂ ಪ್ರಶಸ್ತಿ ಪತ್ರ ನೀಡಿ […]

ಬ್ಯಾರಿ ಸಾಹಿತ್ಯ ಅಕಾಡೆಮಿಗೆ ನೂತನ ವೆಬ್ ಸೈಟ್.

Tuesday, November 2nd, 2010
ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ನೂತನ ವೆಬ್ ಸೈಟ್

ಮಂಗಳೂರು : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ನೂತನ ವೆಬ್ ಸೈಟ್ karnatakabearysahityaacademy.org ಯನ್ನು ನಗರದ ಶ್ರೀನಿವಾಸ ಹೋಟೇಲ್ ನಲ್ಲಿ ಇಂದು ಬೆಳಿಗ್ಗೆ 10.00ಗೆ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲು ಗುಂಡಿ ಒತ್ತುವ ಮೂಲಕ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು ಬ್ಯಾರಿ ಭಾಷೆ ಮತ್ತು ಸಂಸ್ಕೃತಿಯು ತುಳು ಭಾಷೆ ಮತ್ತು ಸಂಸ್ಕೃತಿಯಷ್ಟೇ ಶ್ರೀಮಂತವಾಗಿದೆ. ಈ ಎರಡೂ ಸಮುದಾಯಗಳ ಸಂಬಂಧ ಅನನ್ಯವಾಗಿದೆ. ಇತ್ತೀಚೆಗಿನ ದಿನಗಳಲ್ಲಿ ಉದ್ಯೋಗ ಮತ್ತಿತರ ಕಾರಣಕ್ಕಾಗಿ ಬ್ಯಾರಿಗಳು ಜಗತ್ತಿನ ವಿವಿಧ ಮೂಲೆಗಳಲ್ಲಿ ಹಂಚಿ […]

ನೆಹರೂ ಮೈದಾನಿನಲ್ಲಿ ಕನ್ನಡ ರಾಜ್ಯೋತ್ಸವ ಹಾಗೂ 44 ಮಂದಿ ಸಾಧಕರಿಗೆ ಪ್ರಶಸ್ತಿ ವಿತರಣೆ

Monday, November 1st, 2010
ನೆಹರೂ ಮೈದಾನಿನಲ್ಲಿ ರಾಜ್ಯೋತ್ಸವ

ಮಂಗಳೂರು : ಜಿಲ್ಲಾಡಳಿತದ ವತಿಯಿಂದ ಮಂಗಳೂರು ನೆಹರೂ ಮೈದಾನಿನಲ್ಲಿ ನಡೆಯುವ ರಾಜ್ಯೋತ್ಸವದ ಕಾರ್ಯಕ್ರಮಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಜೆ. ಪಾಲೇಮಾರ್ ರಾಷ್ಟ್ರ ಧ್ವಜಾರೋಹಣ ಮಾಡುವ ಮೂಲಕ ಉದ್ಘಾಟಿಸಿದರು. ಜ್ಯೋತಿ ವೃತ್ತದಲ್ಲಿ ಭವನೇಶ್ವರಿಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ರಾಜ್ಯೋತ್ಸವದ ಮೆರವಣಿಗೆಗೆ ಚಾಲನೆ ನೀಡಲಾಯಿತು. ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಅಕರ್ಷಕ ವೇಷಭೂಷಣಗಳೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡರು. ಧ್ವಜಾರೋಹಣದ ಬಳಿಕ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವರು ಇಂದು  ಕನ್ನಡ ಭಾಷೆ ಹಾಗೂ ಅಭಿವೃದ್ಧಿ ಮತ್ತು ಕನ್ನಡಿಗರ ಸಾಧನೆಯ ಬಗ್ಗೆ ಸಿಂಹಾವಲೋಕನ […]

ಕನ್ನಡ ನಾಡು ನುಡಿಯ ರಾಷ್ಟೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ ಸಮಾಪನ

Monday, November 1st, 2010
ಆಳ್ವಾಸ್ ನುಡಿಸಿರಿ 2010

ಮೂಡಬಿದಿರೆ: ಮೂಡಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಮೂರು ದಿನಗಳ ಕಾಲ ನಡೆದ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿಸಿರಿ 2010 ವಿವಿಧ ರಂಗಗಳಲ್ಲಿ ಸೇವೆ ಮಾಡಿದ ಹತ್ತು ಮಂದಿ ಸಾಧಕರಿಗೆ ಸನ್ಮಾನಿಸುವ ಮೂಲಕ ಸಮಾಪನ ಗೊಂಡಿದೆ. ಮಧ್ಯಾನ್ಹ 3ಕ್ಕೆ ಆರಂಭವಾದ ಸನ್ಮಾನಿತರ ಮೆರವಣಿಗೆಯಲ್ಲಿ ಡಾ. ಮೋಹನ್ ಆಳ್ವಾ, ಡಾ. ವೀರೇಂದ್ರ ಹೆಗ್ಗಡೆ, ಗಣೇಶ್ ಕಾರ್ನಿಕ್, ಕೆ. ಅಮರನಾಥ ಶೆಟ್ಟಿ , ಸಮ್ಮೇಳನಾಧ್ಯಕ್ಷೆ ವೈದೇಹಿ ಹಾಗೂ ಸನ್ಮಾನಗೊಳ್ಳುವ ಗಣ್ಯರು ಪಾಲ್ಗೊಂಡಿದ್ದರು. ಕೊಂಬು,  ಡೋಲು, ಕೊಳಲು, […]

ನಗರದಲ್ಲಿ ವೈದ್ಯಕೀಯ ಸಂಘದ ಕರ್ನಾಟಕ ರಾಜ್ಯ ಘಟಕದ 76ನೇ ವಾರ್ಷಿಕ ವೈಜ್ನಾನಿಕ ಸಮ್ಮೇಳನ ಉದ್ಘಾಟನೆ

Saturday, October 30th, 2010
ಐಎಂಎ ಮೆಡಿಕಾನ್ - 2010

ಮಂಗಳೂರು : ವೈದ್ಯಕೀಯ ಸಂಘದ ಕರ್ನಾಟಕ ರಾಜ್ಯ ಘಟಕದ 76ನೇ ಐಎಂಎ ಮೆಡಿಕಾನ್ – 2010 ವಾರ್ಷಿಕ ಸಮ್ಮೇಳನವನ್ನು ಡಾ| ಟಿಎಂಎ ಪೈ ಇಂಟರ್‌ನ್ಯಾಶನಲ್ ಕನ್ವೆನ್ಸನ್ ಸೆಂಟರ್ ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜೆ.ಕೃಷ್ಣ ಪಾಲೆಮಾರ್ ಅವರು ಉದ್ಘಾಟಿಸಿದರು.  ಉನ್ನತ ಶಿಕ್ಷಣ  ಸಚಿವ ಡಾ| ವಿ.ಎಸ್.ಆಚಾರ್ಯ ಆವರು ” ಸರ್ವರಿಗೂ ಆರೋಗ್ಯ” ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕ ಎನ್.ಯೋಗೀಶ್ ಭಟ್ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿದ್ದರು ಸಮಾರಂಭದ  ಅಧ್ಯಕ್ಷತೆ ಯನ್ನು […]

ಆಕರ್ಷಕ ಕಲಾಮೇಳಗಳೊಂದಿಗೆ ಆಳ್ವಾಸ್ ನುಡಿಸಿರಿ ಪ್ರಾರಂಭ

Friday, October 29th, 2010
ಆಳ್ವಾಸ್ ನುಡಿಸಿರಿ 2010

ಮೂಡಬಿದ್ರೆ : ಕನ್ನಡ ಮನಸ್ಸು ಮತ್ತು ಜೀವನ ಮೌಲ್ಯಗಳು ಎಂಬ ಪರಿಕಲ್ಪನೆಯಡಿ ಮೂಡಬಿದ್ರೆಯ ಶ್ರೀಮತಿ ಆನಂದ ಆಳ್ವಾ ಆವರಣದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಕನ್ನಡ ನಾಡು ನುಡಿಯ ರಾಷ್ಟ್ರೀಯ ಸಮ್ಮೇಳನ ಆಳ್ವಾಸ್ ನುಡಿ ಸಿರಿಯನ್ನು ಖ್ಯಾತ ಕವಿಗಳಾದ ಡಾ. ಎಚ್.ಎಸ್. ವೆಂಕಟೇಶ ಮೂರ್ತಿಯವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡ ಇತರ ಗಣ್ಯರು ಮರದ ಕುಂಡಿಕೆಯಲ್ಲಿ ಇರಿಸಲಾದ ಭತ್ತದ ತೆನೆಗೆ ತಾಮ್ರದ ಕಲಸದಲ್ಲಿ ಹಾಲೆರೆಯುವ ಮೂಲಕ ನುಡಿಸಿರಿಯ ಆರಂಭಕ್ಕೆ ಸಾಕ್ಷ್ಯರಾದರು. ವೇದಿಕೆಯ ಮುಂಭಾಗದಲ್ಲಿ […]

“ನಮ್ಮ ಕುಡ್ಲ” ಗೂಡುದೀಪ ಸ್ಪರ್ಧೆ

Thursday, October 28th, 2010
"ನಮ್ಮ ಕುಡ್ಲ" ಗೂಡುದೀಪ

ಮಂಗಳೂರು: ನಮ್ಮ ಕುಡ್ಲ ವತಿಯಿಂದ ನವೆಂಬರ್ 4 ರಂದು ಗುರುವಾರ ಸಂಜೆ 5 ಗಂಟೆಗೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಗೂಡು ದೀಪ ಸ್ಪರ್ಧೆ ನಡೆಯಲಿದೆ, ಮೂರುವಿಭಾಗಗಳಲ್ಲಿ ನಡೆಯುವ ಈ ಸ್ಪರ್ಧೆಯಲ್ಲಿ ಸಾಂಪ್ರದಾಯಿಕ, ಆಧುನಿಕ ಹಾಗೂ ವಿಶೇಷ ಮಾದರಿಯ ಗೂಡು ದೀಪಗಳಿಗೆ ಸ್ಪರ್ಧೆಗೆ ಅವಕಾಶ ನೀಡಲಾಗಿದೆ ಎಂದು ಕಾರ್ಯಕ್ರಮದ ನಿರ್ವಾಹಕ ಕದ್ರಿ ನವನೀತ್ ಶೆಟ್ಟಿ ಇಂದು ಪತ್ರಿಕಾಭವನದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಪ್ರಥಮ ಹಾಗೂ ದ್ವತೀಯ ಸ್ಥಾನ ಪಡೆಯುವ ಗೂಡುದೀಪಗಳಿಗೆ ಚಿನ್ನದ ಪದಕವನ್ನು ಬಹುಮಾನವಾಗಿ ನೀಡಲಾಗುವುದು. ತೀಪುಗಾರರಿಗೆ […]