ಕೇಂದ್ರ ಸರಕಾರದ ಬೆಲೆಯೇರಿಕೆ ವಿರುದ್ದ ಕುಂಬಳೆಯಲ್ಲಿ ಕಾಂಗ್ರೆಸ್ಸ್ ಪ್ರತಿಭಟನೆ

Tuesday, January 12th, 2016
congress Protest

ಕುಂಬಳೆ: ನರೇಂದ್ರಮೋದಿಯವರ ನೇತೃತ್ವದ ಕೇಂದ್ರ ಸರಕಾರ ನೀಡಿರುವ ಆಶ್ವಾಸನೆಗಳನನು ಹುಸಿಗೊಳಿಸಿ ಜನದ್ರೋಹ ಕಾರ್ಯತಂತ್ರಗಳನ್ನು ಹೆಣೆದು ಜನ ಸಾಮಾನ್ಯರ ಬದುಕನ್ನು ಹತಾಶೆಗೆ ತಳ್ಳುತ್ತಿದೆಯೆಂದು ಜಿಲ್ಲಾ ಕಾಂಗ್ರೆಸ್ಸ್ ಉಪಾಧ್ಯಕ್ಷ ಹಕೀಂ ಕುನ್ನಿಲ್ ಅಭಿಪ್ರಾಯ ವ್ಯಕ್ತಪಡಿಸಿದರು. ಮಂಡಲ ಕಾಂಗ್ರೆಸ್ಸ್ ನೇತೃತ್ವದಲ್ಲಿ ಕೇಂದ್ರ ಸರಕಾರದ ಬೆಲೆಯೇರಿಕೆ ಕ್ರಮಗಳ ವಿರುದ್ದ ಮಂಗಳವಾರ ಕುಂಬಳೆ ಅಂಚೆ ಕಚೇರಿಗೆ ನಡೆಸಿದ ಪ್ರತಿಭಟನೆಯನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಮೋದಿ ಜನರನ್ನು ಮರುಳುಗೊಳಿಸುವ ಹೇಳಿಕೆಗಳನ್ನಷ್ಟೇ ನೀಡುತ್ತಿದ್ದಾರೆ. ಕಾರ್ಯಕ್ಷಮತೆಯ ಯಾವುದೇ ಯೋಜನೆಗಳನ್ನು ಜನ ಸಾಮಾನ್ಯರಿಗೆ ನೀಡುವಲ್ಲಿ ವಿಫಲವಾಗಿದೆಯೆಂದು ಅವರು ಟೀಕಿಸಿದರು. ಮಂಡಲ […]

ವಿವೇಕಾನಂದರ ಮೂಲಕ ಜಗತ್ತಿಗೆ ಭಾರತದ ನೈಜ ಶ್ರೀಮಂತಿಕೆಯ ಧರ್ಶನವಾಗಿತ್ತು : ಯುಡಿಯೂರಪ್ಪ

Tuesday, January 12th, 2016
Vivekananda education trust

ಕಾಸರಗೋಡು: ರಾಷ್ಟ್ರದೊಳಗೆ ಗೊಂದಲ,ಅಂತರಾಷ್ಟ್ರೀಯವಾಗಿ ಭಾರತದ ಬಗ್ಗೆ ಅನಾದಾರಗಳು ನೆಲೆಯಾಗಿದ್ದ ಕಾಲದಲ್ಲೆಲ್ಲ ಇಲ್ಲಿಯ ಮಹತ್ವವನ್ನು ಜಗತ್ತಿಗೆ ಸಾರಲು ಮಹಾನ್ ಸಂತರುಗಳು ಅವತರಿಸಿ ಬಂದ ಪುಣ್ಯ ಭೂಮಿ ನಮ್ಮದು. ಹಿಂದೆ ಇಂತಹ ಸಂದರ್ಭದಲ್ಲೊಂದು ಸ್ವಾಮಿ ವಿವೇಕಾನಂದರ ಆದರ್ಶ, ಜಾಗೃತಿ ಕಾರ್ಯಗಳ ಮೂಲಕ ಜಗತ್ತಿಗೆ ಭಾರತದ ನೈಜ ಶ್ರೀಮಂತಿಕೆಯ ಧರ್ಶನವಾಗಿತ್ತು. ಇದೀಗ ಪ್ರಧಾನಿ ನರೇಂದ್ರ ಮೋದಿಯವರ ಮೂಲಕ ಮತ್ತೆ ಆ ಪ್ರಯತ್ನಗಳಾಗುತ್ತಿದೆಯೆಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಸಂಸದ ಬಿ.ಎಸ್.ಯುಡಿಯೂರಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು. ನಗರದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ವಿವೇಕಾನಂದ ಎಜ್ಯುಕೇಶನಲ್ ಹಾಗೂ […]

ಕಾಸರಗೊಡು ಎಂಡೋ ಪೀಡಿತರಿಗೆ ನೆರವು ನೀಡಿದ ತಾರೆ ಕಾವ್ಯಾ ಮಾಧವನ್

Saturday, January 9th, 2016
Kavya Madhavan

ಕಾಸರಗೊಡು : ಮಾರಕ ಎಂಡೋ ದುರಂತದ ಕಹಿ ನೆರಳು ಇನ್ನೂ ಹಿಂಬಾಲಿಸುತ್ತಿರುವುದು ಕಳವಳಕಾರಿ. ರೋಗ ಬಾಧಿತರ ನೋವು ಇನ್ನೂ ಮುಂದುವರಿದಿದ್ದು, ಶಾಶ್ವತ ಪರಿಹಾರ ಕ್ರಮಗಳಿಲ್ಲದಿರುವುದು ಖೇದಕರವೆಂದು ಮಲೆಯಾಳಂ ಚಲನಚಿತ್ರದ ಖ್ಯಾತ ತಾರೆ ಕಾವ್ಯಾ ಮಾಧವನ್ ಅಭಿಪ್ರಾಯ ವ್ಯಕ್ತಪಡಿಸಿದರು. ಎಂಡೋಸಲ್ಫಾನ್ ಸಮಸ್ಯೆಯಿಂದ ನಲುಗುತ್ತಿರುವವರಿಗೆ ತಮ್ಮ ಕುಟುಂಬ ಸಹಕಾರದೊಂದಿಗೆ ನೀಡಲಾದ ಆರ್ಥಿಕ ನೆರವನ್ನು ಜಿಲ್ಲಾ ಎಂಡೋ ಸೆಲ್ ಘಟಕಕ್ಕೆ ಶನಿವಾರ ಸಂಜೆ ಕಾಸರಗೋಡು ಪ್ರೆಸ್ ಕ್ಲಬ್‌ನಲ್ಲಿ ಹಸ್ತಾಂತರಿಸಿ ಅವರು ಮಾತನಾಡುತ್ತಿದ್ದರು. ತಾನು ನೀಡುತ್ತಿರುವ ನೆರವಿನಿಂದ ಎಂಡೋ ಸಂಕಷ್ಟದಲ್ಲಿರುವವರಿಗೆ ಹೇಳಿಕೊಳ್ಳುವ ಮಾರ್ಪಾಟುಗಳಾಗದು. […]

ಆಡಳಿತಾ ಭಾಷೆ ಮಸೂದೆ: ಸಂಘಟಿತ ಹೊರಾಟಕ್ಕೆ ತೆರೆದಿಟ್ಟ ಗಡಿನಾಡಿನಲ್ಲಿ ಕನ್ನಡ ಸಂವಾದ

Saturday, January 9th, 2016
kannada

ಕಾಸರಗೋಡು: ಭಾಷಾ ಅಲ್ಪಸಂಖ್ಯಾಕರ ಹಕ್ಕು ಸಂರಕ್ಷಣೆಗಾಗಿ ಸಂಘಟಿತ ಹೋರಾಟವನ್ನು ಬಲಪಡಿಸುವ ನಿಟ್ಟಿನಲ್ಲಿ ಗಡಿನಾಡಿನಲ್ಲಿ ಕನ್ನಡ ಸಂವಾದ ವೇದಿಕೆಯಾಯಿತು. ಶನಿವಾರ ನಗರದ ಕಾಸರಗೋಡು ಸೇವಾ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ಜಿಲ್ಲೆಯ ವಿವಿಧ ಸಂಘ-ಸಂಸ್ಥೆಗಳ ನೇತೃತ್ವದಲ್ಲಿ ಕೇರಳದಲ್ಲಿ ಆಡಳಿತ ಭಾಷೆ ಮತ್ತು ಭಾಷಾ ಅಲ್ಪಸಂಖ್ಯಾತರ ಸಂವಿಧಾನಬದ್ಧ ಹಕ್ಕುಗಳ ಸಂರಕ್ಷಣೆ ಆಡಳಿತ ಭಾಷಾ ಮಸೂದೆಯಿಂದ ಕನ್ನಡ ಭಾಷೆ, ಸಂಸ್ಕೃತಿ, ಶಿಕ್ಷಣದ ಮೇಲೆ ಆಗಬಹುದಾದ ಪರಿಣಾಮಗಳ ಚಿಂತನೆ ಮತ್ತು ಹೋರಾಟಕ್ಕಿರುವ ಆಯಾಮಗಳ ಕುರಿತು ಸಂವಾದ ಏರ್ಪಡಿಸಿತ್ತು. ಪ್ರಸ್ತುತ ಜಿಲ್ಲೆಯಲ್ಲಿ ಕನ್ನಡ ಭಾಷಾ ಅಲ್ಪಸಂಖ್ಯಾಕರ […]

ಭಾಷಾಂತರ ಕಾರ್ಯ ಸುಲಭ ಸಾಧ್ಯವಲ್ಲ : ಯು.ಎಸ್.ಶೆಣೈ

Saturday, January 9th, 2016
kasargod-chinna

ಕಾಸರಗೋಡು: ಆಧುನಿಕ ಸಂದರ್ಭದಲ್ಲಿ ಒಂದು ಭಾಷೆಯಿಂದ ಮತ್ತೊಂದು ಭಾಷೆಗೆ ಸಾಹಿತ್ಯ ಕೃತಿಗಳು ಭಾಷಾಂತರಗೊಳ್ಳಬೇಕಾದ ಅಗತ್ಯವಿದೆ.ಒಂದು ಭಾಷೆಯ ಕೃತಿಯು ಇನ್ನೊಂದು ಭಾಷೆಗೆ ಭಾಷಾಂತರಗೊಂಡಾಗ ಬಹಳಷ್ಟು ಜಾಗ್ರತೆ ವಹಿಸಬೇಕಾಗುತ್ತದೆ. ಮೂಲಭಾಷೆಯ ಸೊಗಡಿಗೆ ಧಕ್ಕೆ ಬಾರದಂತೆ, ಮೂಲಕೃತಿಯ ಆಶಯಕ್ಕೆ ಚ್ಯುತಿ ಬಾರದಂತೆ ಮುತುವರ್ಜಿವಹಿಸಬೇಕಾಗುತ್ತದೆ. ಈ ಬಗ್ಗೆ ಭಾಷಾಂತರಕಾರ ಎಚ್ಚರದಿಂದ ಭಾಷಾಂತರಿಸಬೇಕಾಗುತ್ತದೆ ಎಂದು ಖ್ಯಾತ ಸಂಘಟಕ, ಕುಂದಪ್ರಭಾ ಪತ್ರಿಕೆಯ ಸಂಪಾದಕ ಯು.ಎಸ್.ಶೆಣೈ ಅಭಿಪ್ರಾಯ ವ್ಯಕ್ತಪಡಿಸಿದರು. ಅವರು ಕುಂದಾಪುರದ ತೇಜಸ್ ಡೆವಲಪರ‍್ಸ್‌ನ ಆಶ್ರಯದಲ್ಲಿ ಹೊಟೇಲ್ ಶರೂನ್‌ನಲ್ಲಿ ಖ್ಯಾತ ನಿರ್ದೇಶಕ, ಕೊಂಕಣಿ ಅಕಾಡೆಮಿ ಮಾಜಿ ಅಧ್ಯಕ್ಷ […]

ಪೆರುವಾಡು-ಪೆಟ್ರೋಲ್ ಬಂಕ್ ಬಳಿ ಬೆಂಕಿ

Saturday, January 9th, 2016
fire

ಕುಂಬಳೆ: ರಾಷ್ಟ್ರೀಯ ಹೆದ್ದಾರಿ ಪೆರುವಾಡು ಪೆಟ್ರೋಲ್ ಬಂಕ್ ಸಮೀಪದ ಹಿತ್ತಿಲಿಗೆ ಗುರುವಾರ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು, ಭೀತಿ ಸೃಷ್ಟಿಸಿದ ವಾತಾವರಣ ಉಂಟಾಗಿದೆ. ಪೆಟ್ರೋಲ್ ಬಂಕ್ ಹತ್ತಿರದ ಖಾಸಗೀ ವ್ಯಕ್ತಿಯೊಬ್ಬರ ಹಿತ್ತಿಲಿನಲ್ಲಿ ಕಾಣಿಸಿಕೊಂಡ ಬೆಂಕಿ. ಹಿತ್ತಿಲಿನಲ್ಲಿದ್ದ ಸುಮಾರು 25ಕ್ಕೂ ಹೆಚ್ಚು ತೆಂಗಿನ ಮರಗಳು ಸೇರಿದಂತೆ ಅನೇಕ ಮರಗಳು ಹೊತ್ತಿ ಉರಿದು ನಾಶಗೊಂಡಿವೆ. ಪಕ್ಕದಲ್ಲೇ ಪೆಟ್ರೋಲ್ ಬಂಕ್ ಇದ್ದು, ಭಾರೀ ಅನಾಹುತ ಸಂಭವಿಸುವ ಅಪಾಯ ಎದುರಾಗಿದ್ದು, ಸ್ಥಳೀಯರನ್ನು ಆತಂಕಕ್ಕೀಡು ಮಾಡಿತ್ತು. ಆದರೆ ಹಿತ್ತಿಲಿಗೆ ಬೆಂಕಿ ತಗುಲಿದ ಕೆಲವೇ ಗಂಟೆಗಳಲ್ಲಿ ಕಾಸರಗೋಡು […]

ಭಾರತೀಯ ಭಾಷಾ ಅಧ್ಯಯನ ಕೇಂದ್ರಕ್ಕೆ ಕಯ್ಯಾರರ ಹೆಸರಿಡಬೇಕು : ಡಾ.ಪಿ.ಶ್ರೀಕೃಷ್ಣ ಭಟ್

Saturday, January 9th, 2016
Govinda Pai memorial

ಮಂಜೇಶ್ವರ: ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಆವರಣದಲ್ಲಿ ಅಸ್ತಿತ್ವಕ್ಕೆ ಬರಲಿರುವ ಭಾರತೀಯ ಭಾಷಾ ಅಧ್ಯಯನ ಕೇಂದ್ರಕ್ಕೆ ಪ್ರಸಿದ್ಧ ಕವಿ, ವಿದ್ವಾಂಸ, ನಾಡೋಜ ಡಾ.ಕಯ್ಯಾರ ಕಿಞ್ಞಣ್ಣ ರೈಗಳ ಹೆಸರಿಡಲು ಕಣ್ಣೂರು ವಿಶ್ವ ವಿದ್ಯಾನಿಲಯವು ಅಗತ್ಯದ ಕ್ರಮ ಕೈಗೊಳ್ಳಬೇಕೆಂದು ಪ್ರಾದೇಶಿಕ ಭಾಷಾ ಅಧ್ಯಯನಾಂಗದ ಸಂಯೋಜಕರಾಗಿದ್ದ ಕಾಸರಗೋಡು ಸರಕಾರಿ ಕಾಲೇಜಿನ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ.ಪಿ.ಶ್ರೀಕೃಷ್ಣ ಭಟ್ ಆಗ್ರಹಿಸಿದ್ದಾರೆ. ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸರಕಾರಿ ಕಾಲೇಜಿನ ಸಭಾಂಗಣದಲ್ಲಿ ‘ಕಯ್ಯಾರರ ಸಾಹಿತ್ಯ ಮರು ಓದು’ ಎನ್ನುವ ರಾಷ್ಟ್ರೀಯ […]

ಕಾಸರಗೋಡು ರೈಲುಗಾಡಿಯಲ್ಲಿ ನಕಲಿ ಟಿ.ಟಿಯ ಸೆರೆ

Friday, January 8th, 2016
ಕಾಸರಗೋಡು ರೈಲುಗಾಡಿಯಲ್ಲಿ ನಕಲಿ ಟಿ.ಟಿಯ ಸೆರೆ

ಕಾಸರಗೋಡು: ರೈಲುಗಾಡಿಯಲ್ಲಿ ಟಿಕೇಟು ತಪಾಸಣೆ ನಡೆಸುವ ಟಿಟಿಇಯ ಸೋಗಿನಲ್ಲಿ ರೈಲು ಪ್ರಯಾಣಿಕರನ್ನು ವಂಚಿಸುತ್ತಿದ್ದ ಯುವಕನ್ನು ರೈಲ್ವೇ ಪೋಲೀಸರು ಬಂಧಿಸಿದ್ದಾರೆ. ಮಂಗಳೂರು&ಕಣ್ಣೂರು ಇಂಟರ್ ಸಿಟಿ ರೈಲು ಗಾಡಿಯಲ್ಲಿ ಟಿಟಿಇ ಎಂದು ಹೇಳಿ ಪ್ರಯಾಣಿಕರನ್ನು ನಂಬಿಸಿ ಟಿಕೇಟ್ ಪರಿಶೀಲಿಸುವ ನೆಪದಲ್ಲಿ ಹಣ ಕಬಳಿಸುವ ಯತ್ನದಲ್ಲಿದ್ದ ಕಣ್ಣೂರು ಪಾಪನಶ್ಚೇರಿ ನಿವಾಸಿ ಪಿ.ಪಿ.ನಿಯಾಸ್(21)ಬಂಧಿತನಾದ ಆರೋಪಿ. ಈತನನ್ನು ಕಾಸರಗೋಡು ರೈಲ್ವೇ ಪೋಲೀಸರು ಬಂಧಿಸಿರುವರು.ನಿಯಾಸ್ ಅನುಮಾನಾಸ್ಪದನಾಗಿ ಟಿಕೇಟ್ ಪರಿಶೀಲಿಸುತ್ತಿರುವುದನ್ನು ಗಮನಿಸಿ ರೈಲು ಪ್ರಯಾಣಿಕರಾದ ಕಲ್ಲಿಕೋಟೆ ನಿವಾಸಿ ಶಾಫಿ ಎಂಬವರು ಪಾಲ್ಘಾಟ್ ರೈಲ್ವೇ ಕಮರ್ಶಿಯಲ್ ಕಂಟ್ರೋಲ್ ರೂಂ […]

ಚಲಿಸುವ ದೇವಾಲಯ, ನೀರ್ಚಾಲಿನಲ್ಲಿ ಗೋ ಆಲಯಕ್ಕೆ ಭರ್ಜರಿ ಸ್ವಾಗತ

Friday, January 8th, 2016
Go Deva

ಬದಿಯಡ್ಕ : ಭಗವಾನ್ ಶ್ರೀಕೃಷ್ಣನು ಬಾಲ್ಯ ಕಾಲದಲ್ಲಿ ಊಟ ಮಾಡದೆ ಹಠಮಾಡುವ ಸಂದರ್ಭದಲ್ಲಿ ಗೋವುಗಳನ್ನು ತೋರಿಸಿ ಊಟ ಮಾಡಿಸುತ್ತಿದ್ದರು ಎಂಬುದು ಪುರಾಣಗಳಲ್ಲಿ ಹೇಳಲ್ಪಟ್ಟಿದೆ. ಅನಾದಿ ಕಾಲದಿಂದಲೇ ನಾವು ಪೂಜಿಸಿಕೊಂಡು ಬಂದ ಗೋಮಾತೆ ರಾಷ್ಟ್ರಮಾತೆ, ರಾಷ್ಟ್ರೀಯ ಪ್ರಾಣಿಯಾಗಬೇಕು ಎಂದು ಚಲಿಸುವ ಗೋ ಆಲಯದ ರೂವಾರಿ ಗಣೇಶ್ ಭಟ್ ಮುಣ್ಚಿಕ್ಕಾನ ಹೇಳಿದರು. ಅವರು ಮಂಗಳವಾರ ಸಂಜೆ ನೀರ್ಚಾಲು ಶ್ರೀ ಧರ್ಮಶಾಸ್ತಾ ಭಜನಾಮಂದಿರದಲ್ಲಿ ಸೇರಿದ್ದ ಭಕ್ತರನ್ನುದ್ದೇಶಿಸಿ ಮಾತನಾಡುತ್ತಿದ್ದರು. ಧರ್ಮಶಾಸ್ತಾ ಸೇವಾ ಸಮಿತಿಯ ವತಿಯಿಂದ ಚಲಿಸುವ ಗೋ ಆಲಯಕ್ಕೆ ಅಯ್ಯಪ್ಪ ಭಕ್ತರು ಹಾಗೂ […]

ಪೆರ್ಲ: ಬಿಜೆಪಿ ಕಾರ್ಯಕರ್ತ ಹೃದಯಾಘಾತದಿಂದ ನಿಧನ

Wednesday, January 6th, 2016
Narayana

ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತ್ ಮಾಜಿ ಸದಸ್ಯ, ಮುಂಡೋಳಿ ಮೂಲೆ ದಿ.ನಿಟ್ಟೋಣಿ ಅಜಿಲ-ದಿ.ಬಾಗಿ ದಂಪತಿಗಳ ಪುತ್ರ, ಬಿಜೆಪಿ ಕಾರ್ಯಕರ್ತ ನಾರಾಯಣ(40) ಹೃದಯಾಘಾತದಿಂದ ಮಂಗಳವಾರ ರಾತ್ರಿ ನಿಧನರಾದರು. ಮಂಗಳವಾರ ರಾತ್ರಿ ಪತ್ನಿಯ ತಾಯಿ ಮನೆ ಆರ್ಲಪದವಿನಲ್ಲಿ ಎದೆನೋವು ಕಾಣಿಸಿಕೊಂಡಿದ್ದು, ತಕ್ಷಣ ಪುತ್ತೂರಿನ ಖಾಸಗೀ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ನಿಧನರಾದರು.1995-2000 ನೇ ಆಡಳಿತಾವಧಿಯಲ್ಲಿ ವಾಣೀನಗರ ವಾರ್ಡ್‌ನಿಂದ ಬಿಜೆಪಿ ಸದಸ್ಯರಾಗಿ ಚುನಾಯಿತರಾಗಿ ಆಯ್ಕೆಯಾಗಿದ್ದರು.ಇವರು ದೈವ ನರ್ತನ ಕಲಾವಿದರೂ ಆಗಿದ್ದರು.