ದೇಹದ ಪವಿತ್ರೀಕರಣಕ್ಕೆ ಮುದ್ರಾಧಾರಣೆ ರಾಮಬಾಣ-ವಿಶ್ವಪ್ರಸನ್ನಶ್ರೀ

Thursday, August 7th, 2014
Mudradharane

ಮುಂಬಯಿ : ಶಂಖ ಚಕ್ರಗಳು ಭಗವಂತನ ಶ್ರೀಮಾನ್ ನಾರಾಯಣರ ಚಿಹ್ನೆಗಳು. ಅದನ್ನು ನಾವು ಪವಿತ್ರವಾಗಿರತಕ್ಕಂತಹ ಆಗ್ನಿಯಲ್ಲಿ ಸುದರ್ಶನ ಮಂತ್ರದಿಂದ ಆಗ್ನಿಯಲ್ಲಿ ಬಿಸಿಮಾಡಿ ಮೈ ಮೇಲೆ ಧಾರಣೆ ಮಾಡಿಕೊಳ್ಳಬೇಕು ಎಂದು ಶಾಸ್ತ್ರ ವಚನವಿದೆ. ವರ್ಷಕ್ಕೊಮ್ಮೆಯಾದರೂ ಇದನ್ನು ಮಾಡಿಸಿ ಕೊಳ್ಳುವುದರಿಂದ ನಮ್ಮ ದೇಹವನ್ನು ಭಗವಂತನ ಸೇವೆಗೋಸ್ಕರ ಮುಡಿಪು ಅನ್ನುವ ಭಾವನೆಯನ್ನು ಮನದಲ್ಲಿ ತುಂಬಿಕೊಂಡು ದೇಹವನ್ನೇ ಪಾವಿತ್ರೀಕರಣ ಗೊಳಿಸಿಕೊಳ್ಳುವುದು ಉದ್ದೇಶವಾಗಿದೆ. ಸರ್ವೊತ್ತಮನಾಗಿರತಕ್ಕಂತಹ ಭಗವಂತನ ಮುದ್ರೆಯನ್ನು ಮೈಮೇಲೆ ಧಾರಣೆ ಮಾಡಿಕೊಳ್ಳುವುದರಿಂದ ನಮ್ಮ ದೇಹವನ್ನು ಭಗವಂತನಿಗೆ ಸಮರ್ಪಿಸಿದ್ದೇವೆ ಎನ್ನುವುದಾದರೆ ಮತ್ತೊಂದೆಡೆ ಇತರೇ ಯಾವುದೇ ಶುದ್ರ […]

ಸುಬ್ರಹ್ಮಣ್ಯದಲ್ಲಿ ಭಕ್ತಿ ಸಂಭ್ರಮದ ನಾಗರ ಪಂಚಮಿ:ಹಾಲು ಸಮರ್ಪಿಸಿದ ಭಕ್ತರು

Friday, August 1st, 2014
kukke Subrahmanya

ಸುಬ್ರಹ್ಮಣ್ಯ : ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಗರಪಂಚಮಿಯನ್ನು ಭಕ್ತಿ ಸಡಗರದಿಂದ ಆಚರಿಸಲಾಯಿತು. ಈ ನಿಮಿತ್ತ ಶ್ರೀ ದೇವಳದ ಹೊರಾಂಗಣದಲ್ಲಿರುವ ನಾಗಪ್ರತಿಷ್ಠಾ ಮಂಟಪದಲ್ಲಿ ನಾಗರಾಜನಿಗೆ ಹಾಲು ಮತ್ತು ಎಳನೀರಿನ ಅಭಿಷೇಕ ನೆರವೇರಿತು. ಭಕ್ತಾಧಿಗಳು ನೀಡಿದ ಕ್ಷೀರ ಮತ್ತು ಎಳನೀರನ್ನು ನಾಗರಾಜನಿಗೆ ಪುರೋಹಿತ ಕುಮಾರ ಭಟ್ ಎರೆದರು. ತನುವಿನೊಂದಿಗೆ ಹಿಂಗಾರ ಇತ್ಯಾದಿಗಳನ್ನು ಕೂಡಾ ಭಕ್ತರು ಸಮರ್ಪಿಸಿದರು. ಮಹಾಪೂಜೆಯ ನಂತರ ನಾಗಪ್ರತಿಷ್ಠಾ ಮಂಟಪದಲ್ಲಿನ ನಾಗರಾಜನಿಗೆ ವಿಶೇಷ ನೈವೇಧ್ಯ ಸಮರ್ಪಣೆ ನೆರವೇರಿತು. ಕುಕ್ಕೆಯಲ್ಲಿ ಪ್ರತಿದಿನ ನಡೆಯುವ ಆಶ್ಲೇಷಾ ಬಲಿ,ಪಂಚಾಮೃತ ಮಹಾಭಿಷೇಕ, ನಾಗಪ್ರತಿಷ್ಠೆ, […]

ಸುಬ್ರಹ್ಮಣ್ಯ:ನಿರಂತರ ಮಳೆ: ಮುಳುಗಿದ ಕುಮಾರಧಾರ ಸೇತುವೆ

Friday, August 1st, 2014
kumaradhara

ಸುಬ್ರಹ್ಮಣ್ಯ: ಘಟ್ಟ ಪ್ರದೇಶದಲ್ಲಿ ಹಾಗೂಸುಬ್ರಹ್ಮಣ್ಯ ಪರಿಸರದಲ್ಲಿ ಮಳೆಯು ತನ್ನ ರಭಸತೆ ಮತ್ತು ನಿರಂತರತೆಯನ್ನು ಮುಂದುವರೆದಿದ್ದು ಪುಣ್ಯ ನದಿ ಕುಮಾರಧಾರವು ತುಂಬಿ ಹರಿದು ಕುಕ್ಕೆಸುಬ್ರಹ್ಮಣ್ಯ ಸಂಪರ್ಕಿಸುವ ಕುಮಾರಧಾರ ಸೇತುವೆಯು ಮುಳುಗಡೆಗೊಂಡಿದೆ.ಗುರುವಾರ ಸುರಿದ ಕುಂಭದ್ರೋಣ ಮಳೆಗೆ ರಾತ್ರಿ 8.30ರ ಸುಮಾರಿಗೆ ಮುಳುಗಡೆಗೊಂಡಿತು. ಆ ಬಳಿಕ ಮಳೆಯ ಪ್ರಮಾಣ ಅಧಿಕಗೊಂಡು ಶುಕ್ರವಾರ ಕೂಡಾ ಸೇತುವೆಯ ಮೇಲೆ ಹರಿಯುತ್ತಿದ್ದ ಪ್ರವಾಹವು ಕಡಿಮೆಯಾಗಲಿಲ್ಲ. ಇದರಿಂದಾಗಿ ಸುಬ್ರಹ್ಮಣ್ಯ-ಮಂಗಳೂರು ರಾಜ್ಯ ಹೆದ್ದಾರಿಯ ಸಂಚಾರವು ಸ್ಥಗಿತಗೊಂಡಿತು.ಅಲ್ಲದೆ ಕ್ಷೇತ್ರಕ್ಕೆ ಬೆಂಗಳೂರು-ಧರ್ಮಸ್ಥಳ ಮೊದಲಾದ ಭಾಗಗಳಿಂದ ಬರುವ ಭಕ್ತಾಧಿಗಳ ಸಂಚಾರಕ್ಕೆ ತಡೆಯಾಯಿತು. ಸೇತುವೆಯು […]

ತುಟ್ಟಿಭತ್ತೆ ಪಡೆಯುವುದು ಭಿಕ್ಷೆಯಲ್ಲ-ಹಕ್ಕು: ಪಿ.ಸಂಜೀವ

Wednesday, July 30th, 2014
beedi

ಬಂಟ್ವಾಳ : ಬೀಡಿ ಕಾರ್ಮಿಕರಿಗೆ ತುಟ್ಟಿಭತ್ತೆ ಪಾವತಿಸುವುದಕ್ಕೆ ಅಡ್ಡಿ ಮಾತಾಡುವ ಮಾಲಕರು ಪದೇ ಪದೇ ಸಭೆ ಕರೆದು ಕಾಲಾಹರಣ ಮಾಡುತ್ತಿರುವುದು ಸರಿಯಲ್ಲ, ಬೀಡಿ ಉತ್ಪಾದನೆ ಕುಂಠಿತಗೊಳ್ಳಲು ಸರಕಾರದ ಕೈಗಾರಿಕಾ ವಿರೋಧಿ ನೀತಿ ಕಾರಣ ಎಂಬ ವಾಸ್ತವಾಂಶ ತಿಳಿದಿದ್ದರೂ ಮಾಲಕರು ಸಂಬಂಧಪಟ್ಟ ಸರಕಾರದ ವಿರುದ್ಧ ಧ್ವನಿ ಎತ್ತದೆ ಬೀಡಿ ಕಾರ್ಮಿಕರಿಗೆ ಕಾನೂನು ಪ್ರಕಾರ ಕೊಡಬೇಕಾಗಿದ್ದ ತುಟ್ಟಿಭತ್ತೆಯನ್ನು ಎಪ್ರಿಲ್ ಒಂದರಿಂದಲೇ ಪಾವತಿಸಬೇಕಾಗಿದ್ದರೂ ಅನಾವಶ್ಯಕವಾಗಿ ವಿಳಂಬಿಸುತ್ತಿರುವುದು ಖಂಡನೀಯ, ಆದುದರಿಂದ ಮಾಲಕರು ಕಾರ್ಮಿಕರನ್ನು ಭಿಕ್ಷುಕರೆಂದು ಪರಿಗಣಿಸಬಾರದು ಬದಲಾಗಿ ಕಾರ್ಮಿಕರ ಪ್ರಸ್ತುತ ಸ್ಥಿತಿಗತಿಯನ್ನು ಅರ್ಥೈಸಿಕೊಂಡು […]

ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಭಾರತದ ಒಟ್ಟು ಪದಕಗಳ ಸಂಖ್ಯೆ 9ಕ್ಕೆ ಏರಿಕೆ

Tuesday, July 29th, 2014
Commonwealth Games 2014

ಗ್ಲಾಸ್ಗೋ: ಭಾರತದ ವೇಟ್‌ಲಿಫ್ಟರ್‌ ಸತೀಶ್‌ ಶಿವಲಿಂಗಂ ತಮ್ಮ ಪದಾರ್ಪಣಾ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲೇ ಚಿನ್ನದ ಪದಕದಿಂದ ಸಿಂಗಾರಗೊಂಡು ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅವರು ಪುರುಷರ 77 ಕೆಜಿ ವಿಭಾಗದ ವೇಟ್‌ಲಿಫ್ಟಿಂಗ್‌ನಲ್ಲಿ ಈ ಸಾಧನೆಗೈದರು. ಇದೇ ವಿಭಾಗದ ರಜತ ಪದಕ ಭಾರತದ ಮತ್ತೂಬ್ಬ ಸ್ಪರ್ಧಿ ರವಿ ಕಾಟುಲು ಪಾಲಾಯಿತು. ಕಳೆದ ವರ್ಷ ನಡೆದ ಕಾಮನ್‌ವೆಲ್ತ್‌ ಚಾಂಪಿಯನ್‌ಶಿಪ್‌ನಲ್ಲಿ ಚಿನ್ನದ ಪದಕ ಜಯಿಸಿದ್ದ ತಮಿಳುನಾಡಿನ ವೆಲ್ಲೂರಿನವರಾದ 22ರ ಹರೆಯದ ಸತೀಶ್‌ ಶಿವಲಿಂಗಂ, ರವಿವಾರ ತಡರಾತ್ರಿ ನಡೆದ ಸ್ಪರ್ಧೆಯಲ್ಲಿ ಒಟ್ಟು 328 ಕೆಜಿ (149+179) […]

ವಿ.ಆರ್.ಭಟ್ ಫೇಸ್‌ಬುಕ್‌ನಲ್ಲಿ ಮಾಡಿದ ಕಮೆಂಟ್‌ಗೆ ದೂರು

Tuesday, July 29th, 2014
Prabha

ಬೆಂಗಳೂರು: ಫೇಸ್‌ಬುಕ್‌ನಲ್ಲಿ ಬಾಯಿಗೆ ಬಂದದ್ದನ್ನೆಲ್ಲಾ ಬರೆಯುವುದು, ಮತ್ತೊಬ್ಬರ ಪೋಸ್ಟ್‌ಗಳಿಗೆ ಪ್ರಚೋದನಕಾರಿಯಾಗಿ, ಅವಮಾನಿಸುವ ಅಥವಾ ಗೇಲಿ ಮಾಡುವ ಕಮೆಂಟ್ ಹಾಕಿದರೆ ಏನಾಗುತ್ತದೆ ಎನ್ನುವುದಕ್ಕೆ ಈ ಪ್ರಕರಣ ಸಾಕ್ಷಿ. ಪುರೋಹಿತಶಾಹಿ ಉಪಯೋಗಕ್ಕಿಲ್ಲ ಎನ್ನುವ ರೀತಿಯಲ್ಲಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದ ಹೋರಾಟಗಾರ್ತಿ ಪ್ರಭಾ ಎನ್. ಬೆಳವಂಗಲ ಅವರಿಗೆ ಟೀಕೆ ಮಾಡುವ ಭರದಲ್ಲಿ ‘ನಿಮ್ಮಂಥವರನ್ನು ಅತ್ಯಾಚಾರಿಗಳಿಂದ ಅತ್ಯಾಚಾರ ಮಾಡಿಸಬೇಕು’ ಎಂದು ಕಮೆಂಟ್ ಮಾಡಿದ ವಿ.ಆರ್.ಭಟ್ ಎಂಬುವರ ವಿರುದ್ಧ ಚಂದ್ರ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ವಿ.ಆರ್.ಭಟ್ ಮಾಡಿದ ಕಮೆಂಟ್‌ಗೆ ಫೇಸ್‌ಬುಕ್‌ನಲ್ಲಿ ವ್ಯಾಪಕ ಖಂಡನೆ […]

ಜಿಲ್ಲೆ ಹೆಸರು ದಕ್ಷಿಣ ಕನ್ನಡವೇ ಇರಲಿ : ಎ.ಬಿ.ಇಬ್ರಾಹಿಂ

Monday, July 28th, 2014
DC AB Ibrahim

ಮಂಗಳೂರು : ದಕ್ಷಿಣಕನ್ನಡ ಜಿಲ್ಲೆ ಹೆಸರನ್ನು ಮಂಗಳೂರು ಜಿಲ್ಲೆ ತುಳುನಾಡು ಮತ್ತಿತರ ಹೆಸರು ಸೂಕ್ತವೆಂದು ಸಾರ್ವಜನಿಕರ ತಮ್ಮ ಅಭಿಪ್ರಾಯಗಳನ್ನು ಸೂಚಿಸುತ್ತಿದ್ದು, ಮಂಗಳೂರು ಜಿಲ್ಲೆ ಎಂಬುದಾಗಿ ಮಾರ್ಪಾಡು ಮಾಡುವ ವಿಚಾರವು ಅತೀ ಸೂಕ್ಷ್ಮ ವಿಚಾರವಾಗಿರುವುದರಿಂದ ಜಿಲ್ಲೆಯ ಜನ ದಕ್ಷಿಣಕನ್ನಡ ಎಂಬ ಹೆಸರಿನೊಂದಿಗೆ ಭಾವನಾತ್ಮಕವಾಗಿ ಬೆರೆತುಕೊಂಡಿರುವುದರಿಂದ ಜಿಲ್ಲೆಯ ಹೆಸರನ್ನು ದಕ್ಷಿಣಕನ್ನಡ ಎಂದೇ ಮುಂದುವರಿಸುವಂತೆ ಹಾಗೂ ಜಿಲ್ಲೆಗೆ ಮರು ನಾಮಕರಣ ಆವಶ್ಯಕತೆ ಇಲ್ಲವೆಂಬುದಾಗಿ ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ತಮ್ಮ ಹಾಗೂ ಸಾರ್ವಜನಿಕರ ಅಭಿಪ್ರಾಯವನ್ನು ರಾಜ್ಯದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಗಳಿಗೆ […]

ಸುಶಾಂತ್ ನ ಚಿಕಿತ್ಸೆಗೆ ನೆರವಾಗುವಿರಾ… ಕಾಲುಗಳಿಗೆ ಸ್ವಾಧೀನವಿಲ್ಲ…ಆತನಿಗೆ ಅಮ್ಮನೇ ಎಲ್ಲ

Monday, July 28th, 2014
sushanth

ಮಂಗಳೂರು: ಆ ಪುಟ್ಟ ಬಾಲಕನ ಪ್ರತಿಯೊಂದು ಕೆಲಸಕ್ಕೂ ಅಮ್ಮನ ನೆರವು ಬೇಕು. ಬಾಲ್ಯದ ಕ್ಷಣಗಳನ್ನು ಖುಷಿಯಿಂದ ಕಳೆಯಬೇಕಾದ ಆತನಿಗೆ ಭಗವಂತ ಆ ಭಾಗ್ಯ ಕರುಣಿಸಿಲ್ಲ. ತನ್ನೆರಡೂ ಕಾಲುಗಳ ಸ್ವಾಧೀನವನ್ನು ಕಳೆದುಕೊಂಡಿರುವ ಆ ಪುಟ್ಟ ಬಾಲಕನಿಗೆ ಈಗ ಅಮ್ಮನೇ ಎಲ್ಲ. ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಪಳ್ಳಿ ಎಂಬಲ್ಲಿನ ಸುಧಾಕರ ಆಚಾರ್ಯ ಮತ್ತು ತನುಜ ದಂಪತಿಯ ಪುತ್ರ ಹತ್ತರ ಹರೆಯದ ಸುಶಾಂತನ ನೋವಿನ ಕಥೆಯಿದು. ಎಲ್ಲರಂತೆ ಖುಷಿಯಿಂದ ನಲಿದಾಡುತ್ತಾ ಶಾಲೆಗೆ ತೆರಳಬೇಕಿದ್ದ ಈತ ಕಳೆದ ನಾಲ್ಕು ವರ್ಷಗಳಿಂದ ನಡೆದಾಡುವ […]

ಮನಸ್ಸು ಮಾನಸ ಸರೋವರದಂತಿರಬೇಕು : ರಾಘವೇಶ್ವರಶ್ರೀ

Friday, July 25th, 2014
Raghaveshwara

ಕೆಕ್ಕಾರು: ನಮ್ಮ ಜೀವನದಲ್ಲಿ ‘ಬೇಕು’ ಎನ್ನುವುದು ನಿರಂತರ, ಸಾಕು ಎನ್ನುವವರೇ ಇಲ್ಲ. ನಾವು ದುಃಖ, ಕಷ್ಟ ಬಂದಾಗ ಮಾತ್ರ ಸಾಕು ಎನ್ನುತ್ತೇವೆ, ಸುಖ ಬಂದಾಗ ಇನ್ನೂ ಬೇಕು ಎನ್ನುತ್ತೇವೆ. ನಮ್ಮ ‘ಬೇಕು’ ಗಳು ನಾಡನ್ನು ಕಾಡಿದರೆ ನಾಡು-ಕಾಡಾಗುತ್ತದೆ. ಕಾಡನ್ನು ಕಾಡಿದರೆ ಅದು ಸುಡುಗಾಡಾಗುತ್ತದೆ ಎಂದು ರಾಘವೇಶ್ವರಶ್ರೀಗಳು ನುಡಿದರು. ಜಯ ಚಾತುರ್ಮಾಸ್ಯದ ಅಂಗವಾಗಿ ಕೆಕ್ಕಾರಿನಲ್ಲಿ ನಡೆಯುತ್ತಿರುವ ‘ರಾಮಕಥೆ’ಯನ್ನು ಅನುಗ್ರಹಿಸಿ ಅವರು ಮಾತನಾಡುತ್ತಾ ನಮ್ಮ ‘ಮನಸ್ಸು’ ಎನ್ನುವುದು ‘ಮಾನಸ ಸರೋವರದಂತಿರಬೇಕು’ ಅದರಂತೆ ಶುದ್ಧ ಸ್ಪಟಿಕ, ವಿಸ್ತಾರ, ಆಳ, ನಿರ್ಮಲ, ನಿಶ್ಚಲವಾಗಿದ್ದರೆ. ಅಂತಹ […]

ಕುವೈತ್ ಗೆ ವಿಮಾನ ಪುನಾರಂಭಿಸಲು ಐವನ್ ಡಿಸೋಜಾ ಒತ್ತಾಯ

Friday, July 25th, 2014
Ivan D souza

ಮಂಗಳೂರು : ಮಂಗಳೂರಿನಿಂದ ಕುವೈತ್ ಗೆ ನೇರ ವಿಮಾನ ರದ್ದು ಪಡಿಸಿದ್ದರ ಹಿಂದೆ ಲಾಭಿ ಕೆಲಸ ಮಾಡಿದೆ ಎಂದು ಆರೋಪಿಸಿರುವ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಖಾಸಗಿ ವಿಮಾನ ಸಂಸ್ಥೆಯ ಸಹಯೋಗ ಪಡೆದು ಕುವೈತ್ ವಿಮಾನ ಪುನಾರಂಭಿಸುವಂತೆ ಒತ್ತಾಯಿಸಿದ್ದಾರೆ. ವಿಧಾನ ಪರಿಷತ್ ನಲ್ಲಿ ಇಂದು ಮೂಲಬೂತ ಸೌಲಭ್ಯ ಅಭಿವೃದ್ದಿ ಸಚಿವ ರೋಷನ್ ಬೇಗ್ ರಿಗೆ ಕುವೈತ್ ಗೆ ವಿಮಾನ ಆರಂಭಿಸಲು ಇರುವ ತೊಡಕುಗಳ ಬಗ್ಗೆ ಪ್ರಶ್ನಿಸಿದ್ದು, ಪ್ರಯಾಣಿಕರ ಕೊರತೆಯಿಂದ ವಿಮಾನ ರದ್ದು ಪಡಿಸಲಾಗಿದೆ ಎಂಬ ಉತ್ತರಕ್ಕೆ […]