ಸರ್ಕಾರದಿಂದಲೂ ಜೀತಪದ್ಧತಿ: ಬಿ.ಎಂ.ಭಟ್ ಆರೋಪ

Friday, December 6th, 2013
akshara

ಪುತ್ತೂರು: ಸಿಐಟಿಯು ನೇತೃತ್ವದ ಅಕ್ಷರ ದಾಸೋಹ ನೌಕರರ ಸಂಘದ ನೇತೃತ್ವದಲ್ಲಿ ಅಕ್ಷರ ದಾಸೋಹ ನೌಕರರ ವೇತನ ಹೆಚ್ಚಳವೂ ಸೇರಿದಂತೆ ಹಲವು ಬೇಡಿಕಗಳನ್ನು ಈಡೇರಿಸುವಂತೆ ಆಗ್ರಹಿಸಿ ಪುತ್ತೂರು ಮತ್ತು ಬೆಳ್ತಂಗಡಿ ತಾಲೂಕಿನ ಅಕ್ಷರ ದಾಸೋಹ ಯೋಜನೆಯ ಕಾರ್ಯಕರ್ತರು ಗುರುವಾರ ಪುತ್ತೂರಿನ ತಾಲೂಕು ಕಚೇರಿಯ ಎದುರು ಪ್ರತಿಭಟನೆ ನಡೆಸಿದರು. ಸಿಐಟಿಯು ರಾಜ್ಯ ಕಾರ್ಯ ದರ್ಶಿ ಬಿ.ಎಂ. ಭಟ್  ಮಾತನಾಡಿ ಕಡಿಮೆ ಸಂಬಳಕ್ಕೆ ಕಾರ್ಮಿಕರನ್ನು ದುಡಿಸಿಕೊಳ್ಳುವ ಮೂಲಕ ಜೀತದಾಳು ಪದ್ಧತಿ ಅನುಸರಿ ಸುತ್ತಿರುವ ಹೋಟೆಲ್ ಇನ್ನಿತರ ಸಂಸ್ಥೆ ಗಳ ವಿರುದ್ಧ ಕನಿಷ್ಠ […]

ಮಡೆ ಸ್ನಾನವನ್ನು ವಿರೋಧಿಸಿ ಉಪವಾಸ ಸತ್ಯಾಗ್ರಹ : ಶಿವರಾಮು

Thursday, December 5th, 2013
K-S-Shivaram

ಮಂಗಳೂರು : ಹಿಂದುಳಿದ ವರ್ಗಗಳ ಜಾಗೃತಿ ವೇದಿಕೆಯ ವತಿಯಿಂದ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಮಡೆ ಸ್ನಾನವನ್ನು ವಿರೋಧಿಸಿ ಮತ್ತು ಈ ಕೂಡಲೇ ರಾಜ್ಯ ಸರ್ಕಾರ ಈ ಸಂಪ್ರದಾಯಕ್ಕೆ ತಡೆ ನೀಡ ಬೇಕೆಂದು ಒತ್ತಾಯಿಸಿ ಬರುವ ಡಿಸೆಂಬರ್ 7ರಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹ ನಡೆಸುವುದಾಗಿ  ಬುಧವಾರ ನಗರದ ಪತ್ರಿಕಾಗೋಷ್ಠಿಯಲ್ಲಿ ರಾಜ್ಯಾಧ್ಯಕ್ಷ ಕೆ.ಎಸ್.ಶಿವರಾಮು ತಿಳಿಸಿದ್ದಾರೆ. ಶಿವರಾಮು ಮಾತನಾಡಿದ ಅವರು, ಹಲವಾರು ವರ್ಷಗಳಿಂದ ಸಂಪ್ರದಾಯ, ನಂಬಿಕೆಯ ಹೆಸರಿನಲ್ಲಿ ಕುಕ್ಕೆ ಸುಬ್ರಹ್ಮಣ್ಯ ಮತ್ತು ಇತರೆ ದೇವಸ್ಥಾನಗಳಲ್ಲಿ ನಡೆಯುತ್ತಿರುವ ಮಡೆ ಸ್ನಾನ ಅಮಾನವೀಯವಾಗಿದೆ. […]

ರೈತ ಸಂಘ ಒಕ್ಕೂಟದ ವತಿಯಿಂದ ಪ್ರತಿಭಟನೆ

Thursday, December 5th, 2013
WTO

ಮಂಗಳೂರು: ದಕ್ಷಿಣ ಭಾರತ ರೈತ ಸಂಘ ಒಕ್ಕೂಟದ ವತಿಯಿಂದ ಇಂಡೋನೇಷ್ಯಾದ ಬಾಲಿಯಲ್ಲಿ ನಡೆಯಲಿರುವ 33 ರಾಷ್ಟ್ರಗಳ 9ನೇ ಶೃಂಗಸಭೆಯಿಂದ ಭಾರತದ ಪ್ರತಿನಿಧಿಗಳು ಹೊರನಡೆಯಬೇಕು ಮತ್ತು ರೈತರ ಹಿತಾಸಕ್ತಿಯನ್ನು ಬಲಿಕೊಡುವ ಒಪ್ಪಂದಗಳಿಗೆ ಸಹಿ ಹಾಕಬಾರದು ಎಂದು ಆಗ್ರಹಿಸಿ ಮಂಗಳವಾರ ನವಮಂಗಳೂರು ಬಂದರು ಮಂಡಳಿ ಮುಂದೆ ಪ್ರತಿಭಟನೆ ನಡೆಯಿತು. ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ ಮತ್ತು ಕೇರಳ ರಾಜ್ಯ ರೈತ ಪ್ರತಿನಿಧಿಗಳು ಹಾಗೂ ರಾಜ್ಯದ ಮಂಡ್ಯ, ತುಮಕೂರು, ಕೊಡಗು ಗಡಿಭಾಗದ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿ, ದೇಶದ ಅಭಿವೃದ್ಧಿಯ ದೃಷ್ಟಿಯಿಂದ ಜಿ 33 […]

ಅಪರಾಧಿ ಬ್ಯಾಂಕ್‌ ಮ್ಯಾನೇಜರ್‌ ರಮೇಶ ನಾಯ್ಕನಿಗೆ ಮರಣದಂಡನೆ

Thursday, December 5th, 2013
naik

ಪುತ್ತೂರು : ಪಾಣಾಜೆ ಗ್ರಾಮದ ಅರ್ಧಮೂಲೆಯಲ್ಲಿ ತನ್ನ ಸ್ವಂತ ಮಕ್ಕಳನ್ನು ಕೆರೆಗೆ ದೂಡಿ ಹಾಕಿ ಕೊಲೆಗೈದ ಅಪರಾಧಿ ಬ್ಯಾಂಕ್‌ ಮ್ಯಾನೇಜರ್‌ ರಮೇಶ ನಾಯ್ಕನಿಗೆ ಮರಣದಂಡನೆ ವಿಧಿಸಿ ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್‌ ನ್ಯಾಯಾಧೀಶ ಟಿ.ಜೆ. ಶಿವಶಂಕರೇಗೌಡ ಐತಿಹಾಸಿಕ ತೀರ್ಪು ನೀಡಿದ್ದಾರೆ. ಪುತ್ತೂರಿನಲ್ಲಿ ತ್ವರಿತ ಸೆಷನ್ಸ್‌ ನ್ಯಾಯಾಲಯ ಮತ್ತು ಈಗ ಜಿಲ್ಲಾ ಸೆಷನ್ಸ್‌ ನ್ಯಾಯಾಲಯದ ಇತಿಹಾಸದಲ್ಲಿಯೇ ರಮೇಶ ನಾಯ್ಕನಿಗೆ ನೀಡಿದ ಮರಣ ದಂಡನೆಯು ಮೊದಲ ಪ್ರಕರಣವಾಗಿದೆ. ಸಾಯುವ ತನಕ ನೇಣು ಹಾಕುವಂತೆ ತೀರ್ಪು ಪ್ರಕಟಿಸಿದ ನ್ಯಾಯಾಧೀಶರು ಉಚ್ಚ […]

ಧರ್ಮಸ್ಥಳದಲ್ಲಿ 81ನೇ ಸರ್ವಧರ್ಮ ಸಮ್ಮೇಳನ ಸಂಪನ್ನ

Monday, December 2nd, 2013
dharmasthala

ಧರ್ಮಸ್ಥಳ :  ಲಕ್ಷದೀಪೋತ್ಸವ ಅಂಗವಾಗಿ ಅಮೃತವರ್ಷಿಣಿ ಸಭಾ ಭವನದಲ್ಲಿ ಏರ್ಪಡಿಸಿದ ಸರ್ವಧರ್ಮ ಸಮ್ಮೇಳನವನ್ನು ಕಾನೂನು ಸಚಿವ ಟಿ.ಬಿ. ಜಯಚಂದ್ರ ಭಾನುವಾರ ಉದ್ಘಾಟಿಸಿದರು. ಕಾನೂನು ಸಚಿವ ಟಿ.ಬಿ. ಜಯಚಂದ್ರ ಮಾತನಾಡಿ, ಜಾತಿ, ಮತ, ಧರ್ಮದ ಹೆಸರಿನಲ್ಲಿ ನಡೆಯುವ ಅನ್ಯಾಯ, ಶೋಷಣೆ, ಮೂಢನಂಬಿಕೆ ಹಾಗೂ ಇತರ ಅನಿಷ್ಟ ಪದ್ಧತಿ ಸಾಮಾ ಜಿಕ ಆಂದೋಲನದ ರೀತಿಯಲ್ಲಿ ನಿವಾರಣೆ ಮಾಡಬೇಕು. ದೇವನೊಬ್ಬ ನಾಮ ಹಲವು ಎಂಬಂತೆ ನಾವೆಲ್ಲರೂ ಒಬ್ಬರೇ ದೇವರ ಮಕ್ಕಳು ಎಂಬ ಭಾವನೆಯಿಂದ ಪರಸ್ಪರ ಪ್ರೀತಿ-ವಿಶ್ವಾಸ ದಿಂದ ಸಾರ್ಥಕ ಜೀವನ ನಡೆಸಬೇಕು […]

ಪ್ರೀತಿಗೆ ಪ್ರತಿರೋಧ ಮಾಡಿದ ಯುವತಿಯನ್ನು ಕೊಲೆಗೈದ ಆರೋಪಿಯ ಬಂಧನ

Saturday, November 30th, 2013
yogisha

ಮಲ್ಪೆ : ಉಡುಪಿ ಅಜ್ಜರಕಾಡಿನ ಮಹಿಳಾ ಪ್ರ.ದರ್ಜೆ ಕಾಲೇಜಿನ ದ್ವಿತೀಯ ಪಿಯುಸಿ ಕಲಾ ವಿಭಾಗದ ವಿದ್ಯಾರ್ಥಿನಿಯಾಗಿದ್ದ ರಂಜಿತಾ (19)ಳನ್ನು ನವಂಬರ್ 27 ರಂದು ಚೂರಿಯಿಂದ ಇರಿದು ಕೊಲೆ ಮಾಡಿದ ಆರೋಪಿ ಯೋಗೀಶನನ್ನು ಮಲ್ಪೆ ಪೊಲೀಸರು ನವಂಬರ್‌ 30 ರಂದು ಮಧ್ಯಾಹ್ನ ಸ್ಥಳೀಯರ ನೆರವಿನಿಂದ ಬಂಧಿಸಿದ್ದಾರೆ. ಯೋಗೀಶ (26). ಈತ ವೃತ್ತಿಯಲ್ಲಿ ಎಲೆಕ್ಟೀಶಿಯನ್‌, ಪೈಂಟಿಗ್‌ ಇನ್ನಿತರ ಕೆಲಸ ಮಾಡಿಕೊಂಡಿದ್ದ. ಆತ ಸ್ಥಳೀಯವಾಗಿ ರಂಜಿತಾಳನ್ನು ತಾನು ಲವ್‌ ಮಾಡುತ್ತಿರುವುದಾಗಿ ಹೇಳಿಕೊಳ್ಳುತ್ತಿದ್ದ. ತನ್ನನ್ನು ಪ್ರೀತಿಸುವಂತೆ ಆಕೆಯನ್ನು ಪದೇ ಪದೇ ಪೀಡಿಸುತ್ತಿದ್ದ, ಆಕೆ […]

ಭಯೋತ್ಪಾದನಾ ರಾಜಕೀಯ ಕೊನೆಗೊಳಿಸಿ : ಎಸ್‍ಡಿಪಿಐ

Saturday, November 30th, 2013
SDPI

ಬೆಳ್ತಂಗಡಿ: ಎಸ್‍ಡಿಪಿಐನ ತಾಲೂಕು ಸಮಿತಿ ವತಿಯಿಂದ ಬೆಳ್ತಂಗಡಿಯ ಗುರು ನಾರಾಯಣ ಸಭಾಭವನದಲ್ಲಿ ಭಯೋತ್ಪಾದನಾ ರಾಜಕೀಯ ಕೊನೆಗೊಳಿಸಿ ಅಭಿಯಾನದ ಪ್ರಯುಕ್ತ ವಿಚಾರ ಸಂಕಿರಣವು ಶುಕ್ರವಾರ ನಡೆಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ಎಸ್‍ಡಿಪಿಐನ ರಾಜ್ಯ ಸಮಿತಿ ಸದಸ್ಯ ಅನ್ವರ್ ಸಾದತ್  ಭಯೋತ್ಪಾದನೆಯ ನೆಪದಲ್ಲಿ ಒಂದು ಸಮುದಾಯವನ್ನು ಶಾಶ್ವತವಾಗಿ ಆರೋಪಿ ಸ್ಥಾನದಲ್ಲಿ ನಿಲ್ಲಿಸುವ ಕಾರ್ಯತಂತ್ರಗಳು ನಡೆಯುತ್ತಿವೆ. ಇದು ಖಂಡನೀಯ ಎಂದು ಹೇಳಿದರು. ಗಾಂಧಿ ಹತ್ಯೆಯೇ ಈ ದೇಶ ಕಂಡ ಮೊದಲ ಭಯೋತ್ಪಾದನೆ. ಯಾರೋ ನಡೆಸುವ ಭಯೋತ್ಪಾದಕ ಕೃತ್ಯಗಳನ್ನು ಮುಸ್ಲಿಂರ ತಲೆಗೆ ಕಟ್ಟುವ […]

ತುಳು ಭಾಷೆಯನ್ನೇ ಅಲ್ಲಗಳೆದ “ಪ್ರತಿಭಾ ಕಾರಂಜಿ”

Thursday, November 28th, 2013
prathibha-karanji

ಬಂಟ್ವಾಳ : ಪ್ರತಿಭಾ ಕಾರಂಜಿಯ ಹೆಸರಿನಲ್ಲಿ ಕಳೆದ ಹಲವು ವರ್ಷಗಳಿಂದ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ವಿವಿಧ ಸ್ಪರ್ಧೆಗಳನ್ನು ಶಿಕ್ಷಣ ಇಲಾಖೆ ಆಯೋಜಿಸುತ್ತಿದೆ. ತುಳುನಾಡಿನ ಎಲ್ಲೆಡೆ ಭಾಷಾಭಿಮಾನ ಉಕ್ಕಿ ಹರಿಯುತ್ತಿದ್ದರೆ, ಸಾರ್ವಜನಿಕ ಶಿಕ್ಷಣ ಇಲಾಖೆ ಮಾತ್ರ ಪ್ರತಿಭಾ ಕಾರಂಜಿ ಸ್ಪರ್ಧಾ ಕಾರ್ಯಕ್ರಮದಿಂದ ತುಳು ಭಾಷೆಯನ್ನು ದೂರವಿಟ್ಟಿದೆ. ಈ 29 ಸ್ಪರ್ಧೆಗಳ ಜೊತೆ ಜನಪದ ಗೀತೆ, ನೃತ್ಯ ಸ್ಪರ್ಧೆಗಳು ಇವೆ. ಆದರೆ, ದ.ಕ. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಶಾಲೆಗಳಿಗೆ ನೀಡಿರುವ ಸುತ್ತೋಲೆಯಲ್ಲಿ ಜನಪದ ಗೀತೆ ಹಾಗೂ […]

ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವ ಹರಿದು ಬರುತ್ತಿರುವ ಜನ ಸಾಗರ

Thursday, November 28th, 2013
Dharmasthala

ಬೆಳ್ತಂಗಡಿ :  ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದ ಲಕ್ಷದೀಪೋತ್ಸವ ಕಾರ್ಯಕ್ರಮವು ನ.28 ರಿಂದ ಡಿ. 3ರವರೆಗೆ ನಡೆಯಲಿವೆ. 36ನೇ ರಾಜ್ಯ ಮಟ್ಟದ ವಸ್ತು ಪ್ರದರ್ಶನವನ್ನು ಬೆಳ್ತಂಗಡಿ ಹೋಲಿ ರಿಡಿಮರ್ ಚರ್ಚ್‌ನ ಪ್ರಧಾನ ಗುರು ಫಾ.ಜೇಮ್ಸ್ ಡಿ’ ಸೋಜರವರು ಇಂದು ಶ್ರೀ ಮಂಜುನಾಥೇಶ್ವರ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ಧರ್ಮಾಧಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ವಹಿಸಲಿದ್ದಾರೆ. ಈ ವಸ್ತು ಪ್ರದರ್ಶನ ಡಿ.3ರ ತನಕವಿದ್ದು, ಉಚಿತ ಪ್ರವೇಶವಿರುತ್ತದೆ.  ಬಳಿಕ ವಸ್ತು ಪ್ರದರ್ಶನ ಮಂಟಪದಲ್ಲಿ ಸಂಜೆ 6 ಗಂಟೆಯಿಂದ ಶಿವಮೊಗ್ಗದ ಮ್ಯಾಜಿಕ್ […]

ಚಿತ್ರಕಲಾವಿದ ಅಮ್ಮುಂಜೆ ಇನ್ನಿಲ್ಲ

Thursday, November 28th, 2013
jagadish

ಮಂಗಳೂರು : ಹಿರಿಯ ಜನಪರಚಿತ್ರಕಲಾವಿದ, ಜಗತ್ ಆರ್ಟ್ ಗ್ಯಾಲರಿ ಸಂಸ್ಥಾಪಕ ಜಗದೀಶ ಅಮ್ಮುಂಜೆ (58) ಬುಧವಾರ ಬೆಳಗ್ಗೆ ನಗರದ ಆಸ್ಪತ್ರೆಯೊಂದರಲ್ಲಿ ನಿಧನರಾಗಿದ್ದಾರೆ. ಶ್ರಮಜೀವಿಯಾದ ಜಗದೀಶ ಅಮ್ಮುಂಜೆ ಅತಿಯಾದ ಮಧುಮೇಹದಿಂದ ಬಳಲುತ್ತಿದ್ದರು. ಅನಾರೋಗ್ಯಕ್ಕೆ ತುತ್ತಾಗಿದ್ದ ಅವರು ಕಳೆದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಅವರಿಗೆ  ವಯಸ್ಸಾಗಿತ್ತು. ಅವರು ಮಡದಿ, ಇಬ್ಬರು ಮಕ್ಕಳು, ಸಂಬಂಧಿಕರು ಮತ್ತು ಅಸಂಖ್ಯ ಸ್ನೇಹಿತರನ್ನು ಅಗಲಿದ್ದಾರೆ. ಹುಟ್ಟು ಕಲಾವಿದನಾಗಿದ್ದ ಜಗದೀಶ ಅಮ್ಮುಂಜೆ ಅವರು ಕಲಾತ್ಮಕ ಚಿತ್ರಗಳು,ಲ್ಯಾಂಡ್ ಸ್ಕೇಪ್, ಪೋಟ್ರ್ಯೇಟ್, ಟೆರ್ರಾಕೋಟಾ ಪ್ರತಿಮೆಗಳಿಗಾಗಿ ಪ್ರಸಿದ್ಧರು. ಮಂಗಳೂರಿನಲ್ಲಿ ಸ್ಕ್ರೀನ್ […]