ಬಹುನಿರೀಕ್ಷೆಯ ತುಳು ಚಿತ್ರ ‘ತೆಲಿಕೆದ ಬೊಳ್ಳಿ’ ನಾಳೆ ತೆರೆಗೆ

Wednesday, December 5th, 2012
Telikeda Bolli Tulu Movie

ಮಂಗಳೂರು : ಬಹುನಿರೀಕ್ಷೆಯ, ಬಹುತಾರಾಗಣದ ಹಾಸ್ಯ ಪ್ರಧಾನ ತೆಲಿಕೆದ ಬೊಳ್ಳಿ ಚಿತ್ರವು ದಕ್ಷಿಣಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಡಿಸೆಂಬರ್ 6ರಂದು ತೆರೆಕಾಣಲಿದೆ. ಈ ಸಂಬಂಧ ಮಂಗಳವಾರ ನಗರದಲ್ಲಿ ಆಯೋಜಿಸಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ತೆಲಿಕೆದ ಬೊಳ್ಳಿ ಚಿತ್ರದ ಪ್ರಮುಖ ನಟ ಹಾಗೂ ಚಿತ್ರಕಥೆ, ಸಂಭಾಷಣೆ ಬರೆದ ದೇವದಾಸ್‌ ಕಾಪಿಕಾಡ್‌ ರವರು ಮಾಹಿತಿ ನೀಡಿದರು. ಸುಧೀರ್‌ ಕಾಮತ್‌ ಮತ್ತು ಶರ್ಮಿಳಾ ದೇವದಾಸ್‌ ಕಾಪಿಕಾಡ್‌ ನಿರ್ಮಾಪಕರಾಗಿರುವ ಈ ಚಿತ್ರಕ್ಕೆ ಖ್ಯಾತ ನಿರ್ದೇಶಕ ಪಿ.ಎಚ್‌. ವಿಶ್ವನಾಥ್‌ ಅವರ ನಿರ್ದೇಶನವಿದೆ. ಆರ್‌. ಮಂಜುನಾಥ್‌ ಅವರ […]

ಸಹೋದರರಿಬ್ಬರ ಕಲಹ ಕೊಲೆಯಲ್ಲಿ ಅಂತ್ಯ

Tuesday, December 4th, 2012
Man killed by younger brother

ಮಂಗಳೂರು :ಕೊಣಾಜೆ ಠಾಣಾ ವ್ಯಾಪ್ತಿಯ ಬೆಳ್ಮ ಗ್ರಾಮದ ಬರುವ ಎಂಬಲ್ಲಿ ಇಂದು ಬೆಳಗಿನ ಜಾವ ಅಣ್ಣನು ತಮ್ಮನಿಂದ ಕೊಲೆಯಾದ ಘಟನೆ ವರದಿಯಾಗಿದೆ. ಪ್ರವೀಣ್ ಡಿಸೋಜಾ ಮೃತ ವ್ಯಕ್ತಿಯಾಗಿದ್ದು, ಈತನ ಸಹೋದರ ನವೀನ್ ಎಂಬಾತ ಕಬ್ಬಿಣದ ಸರಳಿನಿಂದ ಹೊಡೆದು ಕೊಲೆ ಮಾಡಿದ್ದಾನೆನ್ನಲಾಗಿದೆ. ನವೀನ್ ನಗರದ ಕಾಲೇಜ್ ಒಂದರ ವಾಹನದ ಚಾಲಕನಾಗಿ ಕೆಲಸ ಮಾಡುತ್ತಿದ್ದು ನಿತ್ಯ ಬೆಳಗ್ಗೆ 5 ಗಂಟೆಯ ವೇಳೆಗೆ ಕೆಲಸಕ್ಕೆ ತೆರಳುತ್ತಿದ್ದನು ಆದರೆ ಅಣ್ಣ ಪ್ರವೀಣ್ ಯಾವುದೇ ಕೆಲಸಕ್ಕೆ ಹೋಗದೆ ಮನೆಯಲ್ಲಿಯೇ ಇರುತ್ತಿದ್ದು ನಿತ್ಯ ಜಗಳವಾಡುತ್ತಿದ್ದ ಎನ್ನಲಾಗಿದೆ. […]

ಮಂಗಳೂರು : ರಿಕ್ಷಾ ಪ್ರಯಾಣ ದರ ಹೆಚ್ಚಿಸುವಂತೆ ರಿಕ್ಷಾ ಚಾಲಕರ ವಿವಿಧ ಸಂಘಟನೆಗಳಿಂದ ಜಿಲ್ಲಾಡಳಿತಕ್ಕೆ ಮನವಿ

Tuesday, December 4th, 2012
Auto drivers protest

ಮಂಗಳೂರು : ಸೋಮವಾರ ನಗರದ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗ ರಿಕ್ಷಾ ಚಾಲಕರ ವಿವಿಧ ಸಂಘಟನೆಗಳ ವತಿಯಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ದಿನನಿತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗಿದ್ದು ರಿಕ್ಷಾ ಪ್ರಯಾಣ ದರವು ಕಡಿಮೆ ಇರುವುದರಿಂದ ರಿಕ್ಷಾ ಚಾಲಕರು ಜೀವನ ಸಾಗಿಸಲು ಕಷ್ಟವಾಗುತ್ತಿದೆ. ಹಾಗಾಗಿ ಜಿಲ್ಲಾಡಳಿತವು ಈ ಕೂಡಲೇ ರಿಕ್ಷಾ ಪ್ರಯಾಣ ದರವನ್ನು ಹೆಚ್ಚಿಸಬೇಕು ಎಂದು ಒತ್ತಾಯಿಸಲಾಯಿತು. ದಿನ ಬಳಕೆಯ ವಸ್ತುಗಳ ಬೆಲೆ, ರಿಕ್ಷಾ ಬಿಡಿ ಭಾಗಗಳು, ವಿಮೆ ಹಾಗೂ ಇನ್ನಿತರ ವಸ್ತುಗಳ ಬೆಲೆಯು ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಆದರೆ ರಿಕ್ಷಾ […]

ಬಟ್ಟೆ ಚೀಲಕ್ಕೆ ಬದಲಾಗಿ ಪರ್ಯಾಯ ಚೀಲ ಒದಗಿಸುವಂತೆ ಸಲಹೆ

Tuesday, December 4th, 2012
Distribution of Cloth Bags

ಮಂಗಳೂರು :ಜಿಲ್ಲೆಯಲ್ಲಿ ಪ್ಲಾಸ್ಟಿಕ್‌ ಉತ್ಪನ್ನಗಳ ಉಪಯೋಗ ಹಾಗೂ ಮಾರಾಟಕ್ಕೆ ಸಂಬಂಧಿಸಿದಂತೆ ನಿಷೇಧವನ್ನು ಈಗಾಗಲೇ ಜಾರಿಗೊಳಿಸಲಾಗಿದ್ದು, ಆ ಪ್ರಯುಕ್ತ ಜಿಲ್ಲಾಡಳಿತದ ವತಿಯಿಂದ ಸೋಮವಾರ ನಿರ್ಗಮನ ಜಿಲ್ಲಾಧಿಕಾರಿ ಡಾ| ಎನ್‌.ಎಸ್‌. ಚನ್ನಪ್ಪ ಗೌಡ ರವರು ನಗರದ ಸ್ಟೇಟ್‌ಬ್ಯಾಂಕ್‌ ಬಳಿ ಇರುವ ಮೀನು ಮಾರುಕಟ್ಟೆಯಲ್ಲಿ ಬಟ್ಟೆ ಚೀಲ ವಿತರಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭ ದ.ಕ.ಜಿಲ್ಲಾಧಿಕಾರಿಗಳು ಮೀನು ಮಾರುಕಟ್ಟೆಗೆ ಇತರ ಅಧಿಕಾರಿಗಳೊಂದಿಗೆ ತೆರಳಿ ಅಲ್ಲಿನ ವ್ಯಾಪಾರಸ್ಥರಿಗೆ ಬಟ್ಟೆ ಕೈ ಚೀಲ ವಿತರಿಸಲು ಮುಂದಾದಾಗ ಪ್ಲಾಸ್ಟಿಕ್ ನಿಷೇಧದ ನಿರ್ಧಾರದಿಂದ ಆಕ್ರೋಶಗೊಂಡಿದ್ದ ಮೀನು ಮಾರಾಟ […]

ಮಂಗಳೂರಿಗೆ ಆಗಮಿಸಿದ ಇನ್ನೆರಡು ವಿದೇಶಿ ಪ್ರವಾಸಿ ಹಡಗು

Tuesday, December 4th, 2012
foreign vessels NMPT

ಮಂಗಳೂರು :ಸೋಮವಾರ ನವಮಂಗಳೂರು ಬಂದರಿಗೆ ಎರಡು ಐಷಾರಾಮಿ ವಿದೇಶಿ ಪ್ರಯಾಣಿಕ ಹಡಗುಗಳು ಆಗಮಿಸಿವೆ. ಬ್ರಿಟನ್‌ ಮತ್ತು ಅಮೆರಿಕದ ಒಟ್ಟು 1,080ಕ್ಕೂ ಅಧಿಕ ಪ್ರವಾಸಿಗರು ಹಾಗೂ 793 ಸಿಬಂದಿಯನ್ನು ಒಳಗೊಂಡ ಎಂವಿ ಸೀಬೋರ್ನ್ ಒಡಿಸ್ಸಿ ಹಾಗೂ ಎಂ.ವಿ. ಸವೆನ್‌ಸಿಸ್‌ ವೋಗಯರ್ ಹಡಗುಗಳು ಆಗಮಿಸಿದವು. ಕೆಲವು ದಿನಗಳ ಹಿಂದೆ ನವಮಂಗಳೂರು ಬಂದರಿಗೆ ಎರಡು ಐಷಾರಾಮಿ ವಿದೇಶಿ ಪ್ರಯಾಣಿಕ ಹಡಗುಗಳು ಬಂದ ಬೆನ್ನಲ್ಲೇ ಈ ಐಷಾರಾಮಿ ಹಡಗುಗಳು ನಿನ್ನೆ ಆಗಮಿಸಿವೆ. 650 ಪ್ರಯಾಣಿಕರು ಮತ್ತು 454 ಸಿಬ್ಬಂದಿ ಹೊತ್ತ ಎಂವಿ ಸೆವೆನ್‌ಸೀಸ್ […]

ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಎನ್.ಪ್ರಕಾಶ್ ಅಧಿಕಾರ ಸ್ವೀಕಾರ

Monday, December 3rd, 2012
N. Prakash Mangalore New DC

ಮಂಗಳೂರು :ಮಂಗಳೂರು ಮಾಜಿ ಜಿಲ್ಲಾದಿಕಾರಿ ಡಾ.ಎನ್.ಎಸ್.ಚನ್ನಪ್ಪಗೌಡ ರವರು ನೂತನ ಜಿಲ್ಲಾಧಿಕಾರಿ ಎನ್.ಪ್ರಕಾಶ್ ರವರಿಗೆ ಇಂದು ತಮ್ಮ ಕಚೇರಿಯಲ್ಲಿ ಅಧಿಕಾರ ಹಸ್ತಾಂತರಿಸಿದರು. ಈ ಮೂಲಕ ದ.ಕ.ಜಿಲ್ಲೆಯ 123ನೇ ಜಿಲ್ಲಾಧಿಕಾರಿಯಾಗಿ ಎನ್.ಪ್ರಕಾಶ್ ರವರು ಅಧಿಕಾರ ವಹಿಸಿಕೊಂಡರು. ಈ ಮೊದಲು ಇವರು ಬೆಂಗಳೂರಿನಲ್ಲಿ ಕೆ.ಎಸ್.ಆರ್.ಟಿ.ಸಿ. ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಮೈಸೂರು ಜಿಲ್ಲೆಯ ನಂಜನಗೂಡಿನಲ್ಲಿ 1955 ರಲ್ಲಿ ಜನಿಸಿದ ಇವರು ನಂಜನಗೂಡಿನಲ್ಲಿ ತನ್ನ ಪದವಿವರೆಗಿನ ಶಿಕ್ಷಣವನ್ನು ಪೂರೈಸಿ ನಂತರ ಬೆಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಂ.ಎ. ಇತಿಹಾಸ ವಿಭಾಗದಲ್ಲಿ 2ನೇ ರ್‍ಯಾಂಕ್ ನೊಂದಿಗೆ ಉತ್ತೀರ್ಣರಾಗಿ ನಂತರ ರೇಣುಕಾಚಾರ್ಯ […]

ನಗರದ ಫಳ್ನೀರ್‌ ಬಳಿ ರೌಡಿ ಬಿಜೈ ರಾಜಾ ಕೊಲೆ, ನಾಲ್ವರ ವಿಚಾರಣೆ

Monday, December 3rd, 2012
Notorious gangster Bejai Raja

ಮಂಗಳೂರು :ಶನಿವಾರ ರಾತ್ರಿ ನಗರದ ಫಳ್ನೀರ್‌ ರಸ್ತೆಯ ಡ್ಯಾನಿಶ್‌ ಹೊಟೇಲ್‌ ಎದುರು ರೌಡಿ ಪಾಂಡು ಪೈ ಕೊಲೆ ಪ್ರಕರಣದ ಆರೋಪಿ ಶೈಲೇಶ್ ಯಾನೆ ಬಿಜೈ ರಾಜ ನನ್ನು ಕಾರಿನಲ್ಲಿ ಬಂದ ನಾಲ್ವರು ದುಷ್ಕರ್ಮಿಗಳು ಮಾರಕಾಯುಧಗಳಿಂದ ಕಡಿದು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಶೈಲೇಶ್ ಯಾನೆ ಬಿಜೈ ರಾಜ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರ ಪೊಲೀಸ್ ಕಮೀಷನರ್ ವ್ಯಾಪ್ತಿಯ ಪೊಲೀಸರ ತಂಡ ಭಾನುವಾರ ನಾನಾ ಕಡೆ ತೆರಳಿ ತನಿಖೆ ಕೈಗೊಂಡಿದ್ದು, ನಾಲ್ವರನ್ನು ವಿಚಾರಣೆಗೊಳಪಡಿಸಿದ್ದಾರೆ. ಈ ನಡುವೆ ಬಿಜೈ ರಾಜಾ […]

ಸಿಸಿಬಿ ಕಾರ್ಯಾಚರಣೆ :ಪೆಟ್ರೋಲ್, ಡೀಸೆಲ್ ಕಳವು ಜಾಲ ಪತ್ತೆ 6 ಆರೋಪಿಗಳ ಸೆರೆ

Monday, December 3rd, 2012
Fuel theft racket

ಮಂಗಳೂರು :ಮಂಗಳೂರಿನ ಸಿಸಿಬಿ ಪೊಲೀಸರು ಪೆಟ್ರೋಲ್ ಟ್ಯಾಂಕರ್‌ನ ಒಳಭಾಗದಲ್ಲಿ ರಹಸ್ಯವಾಗಿ ಮತ್ತೊಂದು ಟ್ಯಾಂಕ್ ನಿರ್ಮಿಸಿ ಪೆಟ್ರೋಲ್ ಸಂಸ್ಥೆ ಹಾಗೂ ಬಂಕ್‌ಗಳಿಗೆ ವಂಚಿಸಿ, ನಿರಂತರವಾಗಿ ಪೆಟ್ರೋಲ್ ಹಾಗೂ ಡೀಸೆಲ್ ಕಳವು ಮಾಡುತ್ತಿದ್ದ ಜಾಲವನ್ನು ಪತ್ತೆಹಚ್ಚಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳನ್ನು ಬಂಧಿಸಲಾಗಿದ್ದು. ಒಟ್ಟು 69 ಲಕ್ಷ ರೂ ಮೌಲ್ಯದ 5 ಟ್ಯಾಂಕರ್ ಹಾಗೂ ನಗದು 3 ಲಕ್ಷ ರೂ. ವಶಪಡಿಸಿಕೊಳ್ಳಲಾಗಿದೆ. ಐಓಸಿಎಲ್‌ನಿಂದ ಟ್ಯಾಂಕರ್‌ಗೆ ಪೆಟ್ರೋಲ್ ಹಾಗೂ ಡೀಸೆಲ್‌ನ್ನು ಭರ್ತಿ ಮಾಡಿದ ನಂತರ ಐಓಸಿಎಲ್‌ನವರು ಟ್ಯಾಂಕ್‌ನ ಮೇಲ್ಭಾಗ ಮತ್ತು […]

ಇತಿಹಾಸ ಪ್ರಸಿದ್ಧ ಕದ್ರಿ ಕಂಬಳ

Monday, December 3rd, 2012
Kadri Kambala

ಮಂಗಳೂರು :ಡಿಸೆಂಬರ್ 2 ಭಾನುವಾರ ಇತಿಹಾಸ ಪ್ರಸಿದ್ಧ ಕದ್ರಿ ಶ್ರೀ ಮಂಜುನಾಥ ದೇವರ ಕಂಬಳವು ಕದ್ರಿ ಶ್ರೀ ಯೋಗೀಶ್ವರ ಮಠದ ಮಹಂತರಸ ರಾಜಯೋಗಿ ಶ್ರೀ ಸಂದ್ಯಾನಾಥ್ ಅವರ ಉಪಸ್ಥಿಯಲ್ಲಿ ಜರಗಿತು. ಇದೆ ಪ್ರಪ್ರಥಮ ಬಾರಿಗೆ ಕದ್ರಿ ಕಂಬಳಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಾರ್ಯಕ್ರಮವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು. ಬಳಿಕ ಮಾತನಾಡಿದ ಅವರು ಕಂಬಳ ದಕ್ಷಿಣ ಕನ್ನಡದ ಸಾಂಸ್ಕೃತಿಕ ಕ್ರೀಡೆ, ಇಲ್ಲಿನ ಜನತೆಯು ಕಂಬಳಕ್ಕೆ ಹೆಚ್ಚು ಮಾನ್ಯತೆ ನೀಡಿದ್ದಾರೆ. ಇದಕ್ಕೆ ಅಪಾರ ಜನ ಬೆಂಬಲವಿದೆ ಎಂದರು. […]

ತೊಕ್ಕೊಟ್ಟು ಜಂಕ್ಷನ್ ನಲ್ಲಿರುವ ಗುಜರಿ ಸಂಗ್ರಹಣ ದಾಸ್ತಾನಿಗೆ ಬೆಂಕಿ ಭಾರಿ ನಸ್ಟ

Saturday, December 1st, 2012
Scrap shop Thokkottu

ಮಂಗಳೂರು :ಉಳ್ಳಾಲ ಪೋಲೀಸ್ ಠಾಣಾ ವ್ಯಾಪ್ತಿಯ, ತೊಕ್ಕೊಟ್ಟು ಜಂಕ್ಷನ್ ನಲ್ಲಿನ ಗುಜರಿ ಸಂಗ್ರಹಣ ದಾಸ್ತಾನಿಗೆ ನಿನ್ನೆ ಮಧ್ಯರಾತ್ರಿ 11.40ರ ಸುಮಾರಿಗೆ ಬೆಂಕಿ ತಗುಲಿದ ಪರಿಣಾಮ ಭಾರಿ ನಸ್ಟ ಸಂಭವಿಸಿದೆ. ಇದು ಮಹಮ್ಮದ್ ಆಶ್ರಫ್ ಎಂಬುವವರಿಗೆ ಸೇರಿದ್ದಾಗಿದ್ದು ಸುಮಾರು 5 ಲಕ್ಷದಸ್ಟು ನಸ್ಟ ಸಂಭವಿಸಿದೆ. ರಾತ್ರಿಯೇ ಎರಡು ಅಗ್ನಿಶಾಮಕದಳ ಸ್ಥಳಕ್ಕೆ ಧಾವಿಸಿದ್ದು 3 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಿಯಂತ್ರಣಕ್ಕೆ ತಂದಿವೆ. ಈ ಕಾರ್ಯಚರಣೆಯಲ್ಲಿ ಸ್ಥಳೀಯರು ಸಹಕರಿಸಿದರು. ಈ ಪ್ರದೇಶದ ಅಕ್ಕಪಕ್ಕದಲ್ಲಿ ಮನೆ ಹಾಗೂ ವಾಣಿಜ್ಯ ಸಂಕೀರ್ಣಗಳಿದ್ದು […]