ಬಜ್ಪೆ ಕಿನ್ನಿಪದವು ಬಳಿ ಮರದ ಸೊಂಟೆಯಿಂದ ಹೊಡೆದು ವ್ಯಕ್ತಿಯ ಕೊಲೆ

Friday, February 15th, 2013
ಬಜ್ಪೆ ಕಿನ್ನಿಪದವು ಬಳಿ ಮರದ ಸೊಂಟೆಯಿಂದ ಹೊಡೆದು ವ್ಯಕ್ತಿಯ ಕೊಲೆ

ಮಂಗಳೂರು : ವ್ಯಕ್ತಿಯೋರ್ವನನ್ನು ಮರದ ಸೊಂಟೆಯಿಂದ ಮುಖಕ್ಕೆ ಹೊಡೆದು ಕೊಲೆ ಮಾಡಿದ ಘಟನೆ ಫೆಬ್ರವರಿ 13ರ ಬುಧವಾರ ರಾತ್ರಿ ನಡೆದಿದೆ. ಕೊಲೆಯಾದ ವ್ಯಕ್ತಿ ಮುಡ್ಕೂರು ಸಮೀಪದ ಸಂಕಲಕರಿಯದ ನಿವಾಸಿ ಯಶವಂತ ಮಡಿವಾಳ(38).  ಬಜ್ಪೆ ಠಾಣಾ ವ್ಯಾಪ್ತಿಯಲ್ಲಿರುವ ಕಿನ್ನಿಪದವು  ಶ್ರೀ ಮಹಾಕಾಳಿ ದೈವಸ್ಥಾನದ ಬುಧವಾರ ಕೋಲಕ್ಕೆ ಬಂದಿದ್ದ ಈತ ನಾಪತ್ತೆಯಾಗಿದ್ದ. ನಾಪತ್ತೆಯಾದ ಯಶವಂತ ಮಡಿವಾಳನ ರಕ್ತಸಿಕ್ತವಾದ ಮೃತ ದೇಹ ಗುರುವಾರ ಮಧ್ಯಾಹ್ನದ ವೇಳೆಗೆ ಕಿನ್ನಿಪದವು ಮಹಾಕಾಳಿ ದೈವಸ್ಥಾನದ ಸಮೀಪದ ಧರ್ಮರಾಜ ಎಂಬರಿಗೆ ಸೇರಿದ ನಿರ್ಮಾಣಹಂತದ ಮನೆಯೊಂದರಲ್ಲಿ ಪತ್ತೆಯಾಗಿದೆ. ದವಡೆಗೆ ಮರದ ಸೊಂಟೆಯಿಂದ ಹೊಡೆದು […]

ಉಡುಪಿಯಲ್ಲಿ ಡಾ| ವಿ.ಎಸ್‌. ಆಚಾರ್ಯ ರ ಸ್ಮರಣಾರ್ಥ ಪ್ರತಿಮೆ ಅನಾವರಣ

Friday, February 15th, 2013
VS Acharya

ಉಡುಪಿ : ಉಡುಪಿ ನಗರಸಭೆ ಕಚೇರಿ ಮತ್ತು ಮಣಿಪಾಲ ರಜತಾದ್ರಿಯಲ್ಲಿರುವ ಜಿಲ್ಲಾಧಿಕಾರಿ ಕಚೇರಿಯ ಬಳಿ  ಸ್ಥಾಪಿಸಲಾದ ಡಾ| ವಿ.ಎಸ್‌. ಆಚಾರ್ಯ ರ ಪ್ರತಿಮೆಗಳನ್ನು ಫೆಬ್ರವರಿ  14 ಶುಕ್ರವಾರದಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಅನಾವರಣಗೊಳಿಸಿದರು. ಹಾಗು ಈ ಸಂದರ್ಭ  ಉಡುಪಿ ಜಿಲ್ಲಾ ಪಂಚಾಯತಿ  ಸಭಾಂಗಣಕ್ಕೆ ಡಾ| ಆಚಾರ್ಯ ಅವರ ಹೆಸರನ್ನಿಡಲಾಯಿತು. ಅನಂತರ ಮಾತನಾಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ‘ದಿ| ಡಾ| ವಿ.ಎಸ್‌. ಆಚಾರ್ಯ ಅವರು ಈ ಶತಮಾನ ಕಂಡ ಶ್ರೇಷ್ಠ ರಾಜಕಾರಣಿಗಳಲ್ಲಿ ಓರ್ವರು. ಅವರ […]

ಹಸಿರು ರಕ್ಷಣೆಗಾಗಿ ೧೦೦೦ ಕೋಟಿ ರೂಪಾಯಿಗಳನ್ನು ನೀಡಲಾಗಿದೆ : ಅನಂತ ಹೆಗಡೆ ಅಶೀಸರ

Friday, February 15th, 2013
Ananth Hegde Ashisara

ಮಂಗಳೂರು :  ಅರಣ್ಯ ಸಂರಕ್ಷಣೆಗೆ 18 ಕೋಟಿ ರೂಪಾಯಿ ಹಣವನ್ನು, ರಾಜ್ಯದ ಒಂದು ಗ್ರಾಮವನ್ನು ಹಸಿರು ಗ್ರಾಮವಾಗಿ ಪರಿವರ್ತಿಸಲು 3 ಕೋಟಿ ರೂಪಾಯಿಗಳನ್ನು ಮೀಸಲಿರಿಸಲಾಗಿದೆ ಎಂದು ರಾಜ್ಯ ಪಶ್ಚಿಮ ಘಟ್ಟ ಕಾರ್ಯಪಡೆಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಹೇಳಿದರು. ಅವರು ಗುರುವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಈ ಬಗ್ಗೆ ಮಾತನಾಡಿದರು. ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ  ಅರಣ್ಯ ಸಂರಕ್ಷಣೆಗೆ ಇತರೆ ವಿಷಯಗಳಿಗಿಂತ ಹೆಚ್ಚಿನ ಪ್ರಾಶಸ್ತ್ಯ ವನ್ನು ನೀಡಲು ಯೋಚಿಸಿದ್ದು, ಒಟ್ಟು 18 ಕೋಟಿ ರೂಪಾಯಿ ಹಣವನ್ನು ಹಸಿರು […]

ಕಾಲೇಜು ಆವರಣದ ಬಳಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದ ಸ್ಟಾಲ್ ಮೇಲೆ ಅಧಿಕಾರಿಗಳ ದಾಳಿ

Thursday, February 14th, 2013
Stall selling tobacco products

ಮಂಗಳೂರು : ನಗರದ ಬೆಸೆಂಟ್ ಮಹಿಳಾ ಕಾಲೇಜಿನ ಆವರಣದ ಬಳಿ  ಇರುವ ಪಾನ್ ಸ್ಟಾಲ್ ನಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಬಗ್ಗೆ ಖಚಿತ ಮಾಹಿತಿ ಪಡೆದ ಪಾಲಿಕೆ ಅಧಿಕಾರಿಗಳು ಇಂದು ಪಾನ್ ಸ್ಟಾಲ್ ಮೇಲೆ ದಾಳಿ ಮಾಡಿ ಮಾರಾಟ ಮಾಡುತ್ತಿದ್ದ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಂಡು ಇನ್ನು ಮುಂದೆ ಇಂತಹ ಉತ್ಪನ್ನಗಳನ್ನು ಮಾರಾಟ ಮಾಡದಂತೆ ಎಚ್ಚರಿಕೆ ನೀಡಿದರು. ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿ ನಗರದ ಬೆಸೆಂಟ್ ಮಹಿಳಾ ಕಾಲೇಜಿನ ಆವರಣದ ಬಳಿಯಿದ್ದ ಪಾನ್ ಸ್ಟಾಲ್ ನವರು […]

ಮನೆಮನೆಗೆ ಭರತನಾಟ್ಯದ ಬಾಲ ಕಲಾವಿದೆ, ನಾಟ್ಯಮಯೂರಿ ಕುಮಾರಿ ಅಯನಾ ವಿ. ರಮಣ್

Thursday, February 14th, 2013
Ayana.V.Raman

ಮಂಗಳೂರು :  ಏಕಕಾಲದಲ್ಲಿ ಎರಡು ಕೈಗಳಲ್ಲಿ ಬೇರೆ ಬೇರೆ ತಾಳಗಳನ್ನು ಹಾಕುತ್ತಾ, ಒಂದು ಕಣ್ಣಿನ ಹುಬ್ಬನ್ನು ಹಾರಿಸುತ್ತಾ (ರೇಚಿತ), 60 ಸಂವತ್ಸರಗಳ ಹೆಸರುಗಳನ್ನು ಹೇಳುತ್ತಾಳೆ ಈ ಪುಟಾಣಿ ಕಲಾವಿದೆ. 72 ಮೇಳಕರ್ತ ರಾಗಗಳ ಹೆಸರುಗಳನ್ನು, ರಾಗಚಕ್ರ, ಮೇಳ ಸಂಖ್ಯೆ ಮತ್ತು ಆರೋಹಣ – ಅವರೋಹಣ ಸ್ವರಗಳನ್ನು ನಿಖರವಾಗಿ ಹೇಳಬಲ್ಲಳೀಕೆ. 35 ತಾಳಗಳನ್ನು 5 ಗತಿಗಳಲ್ಲಿ ಪ್ರೇಕ್ಷಕರ ಪ್ರಶ್ನೆಗಳಿಗನುಗುಣವಾಗಿ ಪ್ರತ್ಯಕ್ಷೀಕರಿಸುತ್ತಾಳೀಕೆ. 60 ಸಂವತ್ಸರಗಳು, ನಕ್ಷತ್ರ. ಮಾಸ, ತಿಥಿಗಳ ಹೆಸರು ಹಾಗೂ ಭಗವದ್ಗೀತೆ, ನಾಟ್ಯಶಾಸ್ತ್ರ-ಅಭಿನಯ ದರ್ಪಣದ ಆಯ್ದ ಶ್ಲೋಕಗಳನ್ನು, ಸ್ತೋತ್ರ-ಸೂಕ್ತಗಳನ್ನು […]

ಮೀನು ಸಂಸ್ಕರಣಾ ಕಾರ್ಖಾನೆಯಲ್ಲಿ ಅಮೋನಿಯಾ ಅನಿಲ ಸೋರಿಕೆ ಓರ್ವನ ಸಾವು, ಇಬ್ಬರು ಗಂಭೀರ

Thursday, February 14th, 2013
Indo Fisheries factory

ಮಂಗಳೂರು : ಕೊಣಾಜೆ ಠಾಣಾ ವ್ಯಾಪ್ತಿಯ ಹರೇಕಳದ ಏಲಿಯಾರಪದವಿನಲ್ಲಿರುವ ಇಂಡೋ ಫಿಶರೀಸ್ ಮೀನಿನ ಸಂಸ್ಕರಣಾ ಕಾರ್ಖಾನೆಯಲ್ಲಿ ಅಮೋನಿಯಾ ಅನಿಲ ಸೋರುವಿಕೆಯಿಂದ ಓರ್ವ ಕಾರ್ಮಿಕ ಮೃತ ಪಟ್ಟಿದ್ದು, ಇಬ್ಬರು ಗಂಭೀರ ಸ್ಥಿತಿಯಲ್ಲಿದ್ದಾರೆ. ಕಾಸರಗೋಡು ಜಿಲ್ಲೆಯ ಕುಂಬಳೆ ನಿವಾಸಿ ರಿಯಾಜ್(22) ಮೃತಪಟ್ಟಿದ್ದು, ಕೋಟೆಕಾರು ಬೀರಿ ನಿವಾಸಿ ಹನೀಫ್(23) ಹಾಗೂ ಕಾಸರಗೋಡಿನ ಕುಂಬಳೆಯ ಸಂಕೇತ್(23)  ಚಿಂತಾಜನಕ ಸ್ಥಿತಿಯಲ್ಲಿದ್ದಾರೆ. ರಾತ್ರಿ 8.30ರ ಸುಮಾರಿಗೆ ಫ್ಯಾಕ್ಟರಿಯಲ್ಲಿ ಮೀನಿನ ರಫ್ತಿಗಾಗಿ ಅವುಗಳನ್ನು ಸಂಗ್ರಹಿಸುತ್ತಿರುವಾಗ ಫ್ರೀಜರ್ ನಲ್ಲಿ ಹಠಾತ್ತಾಗಿ ಅಮೋನಿಯಾ ಅನಿಲ ಸೋರುವಿಕೆ ಉಂಟಾಯಿತು. ಇದನ್ನು ಗಮನಿಸಿದ ರಿಯಾಜ್ […]

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಬ್ರವರಿ 15 ರಿಂದ ಕಾರ್ಯಾರಂಭಿಸಲಿರುವ ಆಮ್ ಆದ್ಮಿ ಪಾರ್ಟಿ

Thursday, February 14th, 2013
Aam Admi Party

ಮಂಗಳೂರು : ಭ್ರಷ್ಟಾಚಾರದ ವಿರುದ್ಧ ಧ್ವನಿ ಎತ್ತಿದ, ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಜನಲೋಕಪಾಲ ಮಸೂದೆಯೆ ಸೂಕ್ತ ಎಂದು ಹೇಳಿದ ಆರ್ ಟಿಐ ಕಾರಯಕರ್ತ ಅರವಿಂದ್ ಕೆಜ್ರೀವಾಲರ ಆಮ್ ಆದ್ಮಿ ಪಕ್ಷ ಫೆಬ್ರವರಿ 15 ರಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾರ್ಯಾರಂಭಿಸಲಿದೆ ಎಂದು ಪಕ್ಷದ ದಕ್ಷಿಣ ಕನ್ನಡ ಜಿಲ್ಲಾ ಸಂಚಾಲಕ ಎಸ್. ನಂದಗೋಪಾಲ್ ತಿಳಿಸಿದರು. ಅವರು ನಿನ್ನೆ ಪತ್ರಿಕಾಭಾವನದಲ್ಲಿ ನಡೆದ ಪತ್ರಿಕಾ ಘೋಷ್ಠಿಯಲ್ಲಿ ಈ ವಿಚಾರವನ್ನು ತಿಳಿಸಿದರು. ಈಗಾಗಲೇ ಬೆಂಗಳೂರಿನಲ್ಲಿ ಪ್ರಾರಂಭವಾದ ಪಕ್ಷವು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ರಾಜ್ಯದ […]

ವೇತನ,ಮನೆ ಬಾಡಿಗೆ ಭತ್ಯೆ ಹೆಚ್ಚಿಸುವಂತೆ ಕೋರಿ ಕರ್ನಾಟಕ ರಾಜ್ಯ ಶಿಕ್ಷಕರ ಹಾಗೂ ಉಪನ್ಯಾಸಕರ ಕ್ರಿಯಾ ಸಮಿತಿ ವತಿಯಿಂದ ಪ್ರತಿಭಟನೆ

Wednesday, February 13th, 2013
Teachers Protest

ಮಂಗಳೂರು : ಕರ್ನಾಟಕ ರಾಜ್ಯ ಶಿಕ್ಷಕರ ಹಾಗೂ ಉಪನ್ಯಾಸಕರ ಕ್ರಿಯಾ ಸಮಿತಿ ವತಿಯಿಂದ ಬುಧವಾರ ಬೆಳಗ್ಗೆ 9 ಗಂಟೆಗೆ  ದ.ಕ. ಜಿಲ್ಲಾಧಿಕಾರಿ ಕಚೇರಿಯ ಮುಂಬಾಗದಲ್ಲಿ ಶಿಕ್ಷಕರ ಹಾಗೂ ಉಪನ್ಯಾಸಕರ ವೇತನ ತಾರತಮ್ಯ ನಿವಾರಿಸುವಂತೆ ಹಾಗೂ ಗ್ರಾಮೀಣ ಪಟ್ಟಣ ಪ್ರದೇಶಗಳ ಮನೆ ಬಾಡಿಗೆ ಹೆಚ್ಚಳ ಮಾಡುವಂತೆ ಒತ್ತಾಯಿಸಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು. ಕರ್ನಾಟಕ ರಾಜ್ಯ ಪ್ರಾಥಮಿಕ ಶಿಕ್ಷಕರ ಸಂಘದ ದ.ಕ. ಜಿಲ್ಲಾ ಸಮಿತಿ ಅಧ್ಯಕ್ಷರಾದ  ಶಿವಶಂಕರ್ ಭಟ್ ಮಾತನಾಡಿ, ಗುಣಮಟ್ಟದ ಶಿಕ್ಷಣಕ್ಕಾಗಿ ತಮ್ಮನ್ನು ತಾವು ಮುಡಿಪಾಗಿಡುವ ಶಿಕ್ಷಕರಿಗೆ ರಾಜ್ಯದ ಬೇರೆ […]

ಮಂಗಳೂರಿನ ಬಂಗ್ರಕೂಳೂರು ಕಾವೂರಿನ ಮಾಲಾಡಿ ಕೋರ್ಟ್‌ನಲ್ಲಿ ವೈಭವದಿಂದ ನಡೆದ ತಿರುಪತಿ ಶ್ರೀನಿವಾಸ ಕಲ್ಯಾಣೋತ್ಸವ

Wednesday, February 13th, 2013
Srinivasa Kalyanotsava

ಮಂಗಳೂರು : ತಿರುಮಲ ತಿರುಪತಿ ದೇವಸ್ಥಾನ ಹಾಗೂ ಮಂಗಳೂರಿನ ಸಾರ್ವಜನಿಕ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿಯ ಆಶ್ರಯದಲ್ಲಿ ತಿರುಪತಿ ಶ್ರೀನಿವಾಸ ಕಲ್ಯಾಣೋತ್ಸವವು ಮಂಗಳವಾರ ಸಂಜೆ ಬಂಗ್ರಕೂಳೂರು ಕಾವೂರಿನ ಮಾಲಾಡಿ ಕೋರ್ಟ್‌ನಲ್ಲಿ ನಡೆಯಿತು. ದ.ಕ. ಜಿಲ್ಲೆಯಲ್ಲಿ ಇದೆ ಮೊದಲ ಬಾರಿಗೆ ಮಾಲಾಡಿ ಕೋರ್ಟ್‌ನಲ್ಲಿ ತಿರುಪತಿ ದೇವಸ್ಥಾನದ ನೇರ ವ್ಯವಸ್ಥೆಯಲ್ಲಿ ಶ್ರೀದೇವಿ ಭೂದೇವಿ ಸಹಿತ ಶ್ರೀ ಶ್ರೀನಿವಾಸ ದೇವರಿಗೆ ಕಲ್ಯಾಣೋತ್ಸವ ನೆರವೇರಿತು. ಇದಕ್ಕೂ ಮೊದಲು ಮಂಗಳವಾರ ಬೆಳಗ್ಗೆ ಏಳುಮಲೆ ಬೆಟ್ಟದ ಒಡೆಯ ಶ್ರೀನಿವಾಸ ದೇವರ ಪುರಪ್ರವೇಶ ಬಂಟ್ಸ್‌ ಹಾಸ್ಟೆಲ್‌ನಲ್ಲಿ ನಡೆದಿತ್ತು. ಅಲ್ಲಿಂದ […]

ಗಾಂಜಾ ಮಾರಾಟ ಆರೋಪಿಗಳ ಸೆರೆ

Wednesday, February 13th, 2013
Ganja seized at Sullia

ಮಂಗಳೂರು : ಸುಳ್ಯದ ಕ್ಯಾಂಪಸ್ ರಸ್ತೆಯ ವಿವೇಕಾನಂದ ಸರ್ಕಲ್ ಬಳಿ ಬೆಳಗ್ಗಿನ ಜಾವ ಗಾಂಜಾ ಮಾರಾಟ ಮಾಡುತ್ತಿದ್ದ ಮೂರು ಮಂದಿಯನ್ನು ಪೊಲೀಸರು ದಾಳಿ ನಡೆಸಿ ಬಂಧಿಸಿದ್ದು, ಅವರಿಂದ ಕಾರು ಸಹಿತ ೫ ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ನಗರದ ಕುರುಂಜಿಭಾಗ್ ದೇವರಕಳಿಯ ನಿವಾಸಿ ತೀರ್ಥಪ್ರಸಾದ್(೨೧), ಗಾಂಧಿನಗರ ಕಲ್ಲುಮುಟ್ಲು ನಿವಾಸಿ ಇರ್ಫಾನ್ (೨೦) ಮತ್ತು ಜೂನಿಯರ್ ಕಾಲೇಜು ನಿವಾಸಿ ವಿನೋದ್(೨೩) ಬಂಧಿತರು. ಈ ಪ್ರಕರಣದ ಪ್ರಮುಖ ಆರೋಪಿ ಕಾಸರಗೋಡಿನ ಚೆರ್ಕ ಎಂಬವನು ತಲೆಮರೆಸಿಕೊಂಡಿದ್ದಾನೆ. ಸುಳ್ಯದ ಕ್ಯಾಂಪಸ್ ರಸ್ತೆಯ […]