ನಿಯಮ ಕಗ್ಗಂಟು: ಬೀದಿಗೆ ಬಿದ್ದ ನರ್ಸಿಂಗ್ ವಿದ್ಯಾರ್ಥಿಗಳು !

Wednesday, February 13th, 2013
Nursing students

ಮಂಗಳೂರು : ಬಡತನ ಮತ್ತಿತರ ಕಾರಣಗಳಿಂದ ಖಾಸಗಿಯಾಗಿ ಪಿಯುಸಿ ಪರೀಕ್ಷೆ ಬರೆದು ನರ್ಸಿಂಗ್ ಶಿಕ್ಷಣ ಪಡೆಯುವವರಿಗೆ ಕರ್ನಾಟಕ ನರ್ಸಿಂಗ್ ಕೌನ್ಸಿಲ್ ಶಾಕ್ ನೀಡಿದೆ. ವಿದ್ಯಾರ್ಥಿಗಳು ಈಗಾಗಲೇ ಜನರಲ್ ನರ್ಸಿಂಗ್ ಅಂಡ್  ಮಿಡ್ವೆಫರಿ(ಜಿಎನ್ಎಂ) ಕೋರ್ಸ್ ಗೆ ದಾಖಲಾತಿ ಪಡೆದು, ಐದು ತಿಂಗಳು ಕಳೆದಿದ್ದರೂ, ಇದೀಗ ನಿಮಗೆ ಪರೀಕ್ಷೆಗೆ ಕುಳಿತುಕೊಳ್ಳಲು ಅವಕಾಶ ಇಲ್ಲ ಎಂದು ಸಾರಿದ್ದು, ಇದರಿಂದ ರಾಜ್ಯದ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ಅತಂತ್ರವಾಗಿದೆ. ನರ್ಸಿಂಗ್ ಕೌನ್ಸಿಲ್ನ ವೆಬ್ ಸೈಟ್ ಪ್ರಕಾರ ರಾಜ್ಯದಲ್ಲಿ 537 ಅಧಿಕೃತ ನೋಂದಾಯಿತ ನರ್ಸಿಂಗ್ ಶಿಕ್ಷಣ […]

ಶಿರಾಡಿ ರಕ್ಷಿತಾರಣ್ಯದಿಂದ ಅವ್ಯಾಹತ ಬೆತ್ತ ಕಳವು

Wednesday, February 13th, 2013
Shiradi Gate

ಶಿರಾಡಿ : ಪಶ್ಚಿಮ ಘಟ್ಟದ ಮಲೆನಾಡ  ತಪ್ಪಲಿನ ಶಿರಾಡಿ, ಗುಂಡ್ಯ, ಕೋಬಾರು, ಶಿರಿಬಾಗಿಲು ರಕ್ಷಿತಾರಣ್ಯದಿಂದ ಬೆಲೆ ಬಾಳುವ ಬೆತ್ತದ ಬಳ್ಳಿಗಳು ಕಳವಾಗುತ್ತಿರುವ ಬಗ್ಗೆ  ದೂರುಗಳಿವೆ. ಈ ಬಗ್ಗೆ  ಅರಣ್ಯ ಇಲಾಖೆ ಬಳಿ ಕೇಳಿದರೆ ನಮಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂಬ ಉತ್ತರ ಸಿಗುತ್ತಿದೆ. ರಕ್ಷಿತಾರಣ್ಯದ ಸಾವಿರಾರು ಎಕರೆ ಪ್ರದೇಶದಲ್ಲಿ ಹೇರಳವಾಗಿ ದೊರೆಯುವ ಹಾಗೂ ಅರಣ್ಯ ಇಲಾಖೆ ಹತ್ತು ವರ್ಷಗಳ ಹಿಂದೆ ಸುಮಾರು 100 ಹೆಕ್ಟೇರ್ ಪ್ರದೇಶದಲ್ಲಿ ನಾಟಿ ಮಾಡಿ ಬೆಳೆಸಲಾದ ಬೆತ್ತಗಳಲ್ಲಿ ಬಹುಪಾಲು ಈಗ […]

ಮಂಗಳೂರು ಮಹಾನಗರ ಪಾಲಿಕೆ ಮತ್ತು ಕರ್ನಾಟಕ ಬ್ಯಾಂಕ್ ಗಳ ಜಂಟಿ ಯೋಜನೆಯಲ್ಲಿ ನಗರದಲ್ಲಿ ಭಿತ್ತಿ ಚಿತ್ರ ಅಭಿಯಾನಕ್ಕೆ ಚಾಲನೆ

Tuesday, February 12th, 2013
novel project in city

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆ ಮತ್ತು ಕರ್ನಾಟಕ ಬ್ಯಾಂಕ್ ಇವುಗಳ ಸಂಯುಕ್ತ ಆಶ್ರಯದಲ್ಲಿ ಇಂದು ಬೆಳಗ್ಗೆ ನಗರದ ಪ್ರಮುಖ ಸ್ಥಳಗಳಲ್ಲಿನ ಆವರಣ ಗೋಡೆಗಳಲ್ಲಿ ಭಿತ್ತಿ ಚಿತ್ರಗಳನ್ನು ರಚಿಸುವ ಅಭಿಯಾನಕ್ಕೆ  ಕರ್ನಾಟಕ ಬ್ಯಾಂಕಿನ ಆಡಳಿತ ನಿರ್ದೇಶಕ ಪಿ.ಜಯರಾಮ್ ಭಟ್  ಚಾಲನೆ ನೀಡಿದರು. ನಗರ ಸೌಂದರ್ಯ ಮತ್ತು ನಗರ ನೈರ್ಮಲ್ಯವನ್ನು ಕಾಪಾಡುವ ಹಿನ್ನಲೆಯಲ್ಲಿ ಮಹಾನಗರ ಪಾಲಿಕೆ ಮತ್ತು ಕರ್ನಾಟಕ ಬ್ಯಾಂಕ್ ಈ ಅಭಿಯಾನವನ್ನು ಹಮ್ಮಿಕೊಂಡಿವೆ. ಈ ಸಂದರ್ಭ ಮಾತನಾಡಿದ ಕರ್ನಾಟಕ ಬ್ಯಾಂಕಿನ ಆಡಳಿತ ನಿರ್ದೇಶಕ ಪಿ.ಜಯರಾಮ್ ಭಟ್  ನಗರದ ಸೌಂದರ್ಯವನ್ನು ಕಾಪಾಡುವ ಉದ್ದೇಶದಿಂದ […]

ದೇಶದ್ರೋಹಿ ಸಂಘಟನೆಗಳು ಯುವಪೀಳಿಗೆಯನ್ನು ನಿರ್ನಾಮಗೊಳಿಸಲು ಸಂಚು ನಡೆಸುತ್ತಿವೆ : ಸತ್ಯಜಿತ್ ಸುರತ್ಕಲ್

Tuesday, February 12th, 2013
Hindu Jaagarana Vedike

ಮಂಗಳೂರು : ಹಿಂದೂ ಜಾಗರಣಾ ವೇದಿಕೆ ಮತ್ತು ಕೋಡಿಕೆರೆ ನಾಗರೀಕ ಸಮಿತಿ ವತಿಯಿಂದ ಜಂಟಿಯಾಗಿ ಮಂಗಳೂರು ಜಿಲ್ಲಾಧಿಕಾರಿ ಕಚೇರಿ ಎದುರು ಇಂದು ಬೆಳಿಗ್ಗೆ ಪ್ರತಿಭಟನಾ ಸಭೆ ನಡೆಸಿತು. ಹಿಂದೂ ಜಾಗರಣ ವೇದಿಕೆಯ ರಾಜ್ಯ ಸಹ ಸಂಚಾಲಕರಾದ ಸತ್ಯಜಿತ್ ಸುರತ್ಕಲ್ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ಮಂಗಳೂರು ನಗರದಲ್ಲಿ ನಡೆಯುತ್ತಿರುವ ವ್ಯಾಪಕ ಮಾದಕ ದ್ರವ್ಯ ದಂದೆಯ ಹಿಂದೆ ವ್ಯವಸ್ಥಿತ ಪಿತೂರಿ ಇದ್ದು ದೇಶದ್ರೋಹಿ ಸಂಘಟನೆಗಳು ಯುವಪೀಳಿಗೆಯನ್ನು ನಿರ್ನಾಮಗೊಳಿಸುವ  ಸಂಚಿನಲ್ಲಿ ಭಾಗಿಯಾಗಿದೆಯಲ್ಲದೆ, ಚೀನಾ, ಪಾಕಿಸ್ತಾನ ಮತ್ತು ಅಫ್ ಘಾನಿಸ್ತಾನಗಳು ಬೃಹತ್ ಪ್ರಮಾಣದಲ್ಲಿ ಮಾದಕ ದ್ರವ್ಯವನ್ನು […]

ಬೆಂಗ್ರೆಯಲ್ಲಿ ಬರಕಾ ಮೀನು ಎಣ್ಣೆ ತಯಾರಿಕಾ ಘಟಕ ಸ್ಥಾಪನೆ ವಿರೋಧಿಸಿ ಕಾಲ್ನಡಿಗೆ ಜಾಥಾ

Tuesday, February 12th, 2013
fish meal unit Bengre

ಮಂಗಳೂರು : ಬೆಂಗ್ರೆಯ ಸಾರ್ವಜನಿಕ ಆಟದ ಮೈದಾನದಲ್ಲಿ, ಬಂದರು ಇಲಾಖೆಗೆ ಸಂಬಂಧಿಸಿದ ಜಾಗದಲ್ಲಿ  ಬರಕಾ ಮೀನು ಎಣ್ಣೆ ತಯಾರಿಕಾ ಘಟಕಕ್ಕೆ   ಶಿಲಾನ್ಯಾಸ ನಡೆಸಿರುವ ಕ್ರಮವನ್ನು ವಿರೋದಿಸಿ ಬೆಂಗ್ರೆ ನಾಗರಿಕರು ಸೋಮವಾರ ಬೆಂಗ್ರೆಯಿಂದ  ಜಿಲ್ಲಾಧಿಕಾರಿ ಕಚೇರಿವರೆಗೆ  ಕಾಲ್ನಡಿಗೆ ಜಾಥಾ ಹಾಗೂ ಪ್ರತಿಭಟನೆ ನಡೆಸಿದರು. ಅಲ್‌ಮದ್ರಸತುದ್ದೀನಿಯ್ಯಃ ಮುಹ್ಯಿದ್ದೀನ್ ಜುಮಾ ಮಸೀದಿ ಆಡಳಿತ ಸಮಿತಿಯ ನೇತೃತ್ವದಲ್ಲಿ ಬೆಂಗ್ರೆಯಿಂದ ಪ್ರಾರಂಭಗೊಂಡ ಕಾಲ್ನಡಿಗೆ  ಜಾಥಾವು ರಾವ್ ಅಂಡ್ ರಾವ್ ಸರ್ಕಲ್, ಸರ್ಕಾರಿ ಲೇಡಿಗೋಶನ್ ಆಸ್ಪತ್ರೆ, ನಗರದ ಆರ್ ಟಿ  ಓ, ಸೈದಾನಿ ಬೇಬಿ ದರ್ಗಾದ ಮೂಲಕ […]

ಮಂಗಳೂರಿನಲ್ಲಿ ಹೆಲ್ಮೆಟ್ ಗಳಿಗೆ ದಂಡಂ ದಶಗುಣಂ !

Tuesday, February 12th, 2013
sub standard helmets in Mangalore

ಮಂಗಳೂರು : ಕಳಪೆ ಹೆಲ್ಮೆಟ್ ಧರಿಸಿಕೊಂಡು ದ್ವಿಚಕ್ರ ವಾಹನ ಚಲಾಯಿಸುವವರ ವಿರುದ್ಧ ಮಂಗಳೂರು ನಗರ ಸಂಚಾರಿ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಲಿದ್ದಾರೆ. ತಲೆಯನ್ನು ಪೂರ್ತಿಯಾಗಿ ಮುಚ್ಚುವಂತಹ ಹಾಗೂ ಗಟ್ಟಿಮುಟ್ಟಾದ ಹೆಲ್ಮೆಟ್ ಧರಿಸಬೇಕು ಎಂಬ ನಿರ್ದೇಶನ ವಿದ್ದರೂ, ದ್ವಿಚಕ್ರವಾಹನ ಸವಾರರು ಧರಿಸಿದ್ದ ಸುರಕ್ಷಿತವಲ್ಲದ ಹೆಲ್ಮೆಟ್ ಗಳನ್ನು ಪೊಲೀಸರು ಇನ್ನೂ ಮುಂದೆ ಹಿಡಿದು ದಂಡ ಹಾಕುವ ಕೆಲಸಕ್ಕೆ ಕೈ ಹಾಕಲಿದ್ದಾರೆ. ಮಂಗಳೂರು ನಗರ ಸಂಚಾರಿ ಪೊಲೀಸರು ಈ ಸಂಬಂಧ ‘ಸ್ಪೆಷಲ್ ಡ್ರೈವ್’ ಎಂಬ ವಿಶೇಷ ಕಾರ್ಯಾಚರಣೆ ಪ್ರಾರಂಭಿಸಿದೆ. ಬಹುತೇಕ ದ್ವಿಚಕ್ರ […]

ಕೆಜೆಪಿಯಲ್ಲಿ ಬಿರುಕು ಬಿಟ್ಟ ಶೋಭಾ

Tuesday, February 12th, 2013
Shobha Karandlaje

ಮಂಗಳೂರು : ಕೆಜೆಪಿಯನ್ನು ನಾವು ಎಷ್ಟೇ ಕಷ್ಟ ಪಟ್ಟು ಸಂಘಟಿಸಿದರೂ ಅದರ ಪೂರ್ಣ ಲಾಭ ಪಡೆಯಲಿರುವವರು ಶೋಭಾ ಕರಂದ್ಲಾಜೆ ನಾವು ಶ್ರಮಿಸಿ ಆಕೆಗೆ ಲಾಭ ಮಾಡಿಕೊಡುವುದಕ್ಕಿಂತ ಬಿಜೆಪಿಯಲ್ಲೇ ಇರುವುದು ಲೇಸು ಎಂಬ ನಿರ್ಧಾರಕ್ಕೆ ಬಿಜೆಪಿಯಲ್ಲಿರುವ ಯಡಿಯೂರಪ್ಪರ ಕಟ್ಟಾ ಬೆಂಬಲಿಗರು ಬಂದಿದ್ದಾರೆ. ಯಡಿಯೂರಪ್ಪ ಮೊದಲಿನಿಂದಲೂ ಹೇಳಿಕೊಂಡು ಬಂದಂತೆ ಬಿಜೆಪಿಯಲ್ಲಿ ಅವರ ನಿಷ್ಠೆ, ಅಭಿಮಾನದ 40 ಶಾಸಕರು ಈಗಲೂ ಇದ್ದಾರೆ. ಯಡಿಯೂರಪ್ಪರ ಪರ ಪ್ರೀತಿ, ವಿಶ್ವಾಸವನ್ನು ಈಗಲೂ ಪ್ರಕಟಿಸುತ್ತಾರೆ. ಆದರೆ ತಮ್ಮ ಭವಿಷ್ಯವನ್ನು ನೆನೆದು ಕೆಜೆಪಿಯಿಂದ ದೂರ ಸರಿಯುತ್ತಿದ್ದಾರೆ ಎನ್ನುವ […]

ಆಡಳಿತ ವಿವಾದದಲ್ಲಿ ನಿರಾಭರಣೆಯಾದ ಮಾರಿಯಮ್ಮ

Tuesday, February 12th, 2013
Urva Mariyamma

ಮಂಗಳೂರು : ಭಕ್ತರು ನೀಡಿದ ನೂರಾರು ಕೆ.ಜಿ.ಯ ಚಿನ್ನದ ಆಭರಣಗಳಿದ್ದರೂ ಅದನ್ನು ತೊಡುವ ಅವಕಾಶ ಇಲ್ಲದೆ ಉರ್ವ ಮಾರಿ ಯಮ್ಮ ಹೂವಿನ ಅಲಂಕಾರದಿಂದ ನಿತ್ಯ ಸೇವೆ ಪಡೆಯುತ್ತಿರುವ ವಿಚಾರ ಇದೀಗ ಬೆಳಕಿಗೆ ಬಂದಿದೆ. ತನ್ನ ಮೇಲಿನ ನಂಬಿಕೆಯನ್ನು ಉಳಿಸಿ ಕೊಳ್ಳಲಾಗದೆ ಅಧಿಕಾರ ಕಳೆದುಕೊಂಡಿರುವ ಇಲ್ಲಿನ ಹಿಂದಿನ ಆಡಳಿತ ಮೊಕ್ತೇಸರರ ಮೊಂಡು ವಾದದಿಂದಾಗಿ ಉರ್ವ ಮಾರಿಯಮ್ಮ ನಿರಾಭರಣೆಯಾಗಿ ಪೂಜೆ ಪಡೆಯುತ್ತಿದ್ದಾಳೆ. ಈ ಬಗ್ಗೆ ದೇವಿ ಬಳಿಯೇ ಭಕ್ತರು ದೂರು ನೀಡಿದಾಗ ನನ್ನ ಆಭರಣವನ್ನು ನನಗೆ ಬೇಕೆಂದಾಗ ನಾನೇ ತರಿಸಿಕೊಂಡು […]

ವಿಧಾನಸಭೆ ಚುನಾವಣೆಯಿಂದ ಸೊರಕೆ ಔಟ್

Tuesday, February 12th, 2013
Vinaykumar Sorake

ಮಂಗಳೂರು : ಮಾಜಿ ಸಂಸದ ವಿನಯ ಕುಮಾರ್ ಸೊರಕೆ ಮತ್ತೊಮ್ಮೆ ಸಂಸದರಾಗುವ ಆಸೆ ಹೊತ್ತಿದ್ದಾರೆ. ವಿನಯ ಕುಮಾರ್ ಸೊರಕೆಯವರನ್ನು ವಿಧಾನ ಸಭೆಯ ಚುನಾವಣೆಯ ಅಭ್ಯರ್ಥಿಯಾಗಿಸುವ ಪ್ರಯತ್ನಗಳು ವಿಫಲವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವ ಸಾಮರ್ಥ್ಯದ ಅಭ್ಯರ್ಥಿಗಳನ್ನೇ ಕಣಕ್ಕಿಳಿಸುವ ಉದ್ದೇಶದಿಂದ ಕಾಂಗ್ರೆಸ್ ನ ಹಿರಿಯ ನಾಯಕರು ವಿಧಾನಸಭೆಗೆ ವಿನಯ ಕುಮಾರ್ ಸೊರಕೆ ಹೆಸರನ್ನು ತೇಲಿ ಬಿಟ್ಟಿದ್ದರು. ಪುತ್ತೂರು ಮೂಲದವರಾದ ಸೊರಕೆ ಪುತ್ತೂರು ವಿಧಾನಸಭಾ ಕ್ಷೇತ್ರದಿಂದಲೇ ಕಣಕ್ಕಿಳಿಯಲಿದ್ದಾರೆ ಎಂಬುದು ಒಂದು ಕಡೆ ಚರ್ಚೆಯಲ್ಲಿರುವಾಗಲೇ, ಸೊರಕೆಯ ಹೆಸರು ಬೆಳ್ತಂಗಡಿ […]

ರಿಯಲ್ ಎಸ್ಟೇಟ್ ಉದ್ಯಮಿ ಗಿರೀಶ್ ಪುತ್ರನ್ ರ ಕೊಲೆ, ಆರೋಪಿಯ ಬಂಧನ

Monday, February 11th, 2013
Girish Putran murder case

ಮಂಗಳೂರು : ಮಂಗಳೂರಿನ ಹೊಯಿಗೆ ಬಜಾರ್ ನಿವಾಸಿ, ರಿಯಲ್ ಎಸ್ಟೇಟ್ ಉದ್ಯಮಿ ಗಿರೀಶ್ ಪುತ್ರನ್ ರ ಕೊಲೆಗೆ ಸಂಬಂಧಪಟ್ಟಂತೆ ಕೋಡಿಕಲ್ ನ ನತಾಶ(28) ಎಂಬ ಯುವತಿಯನ್ನು ಬಜ್ಪೆ ಪೊಲೀಸರು ಬಂಧಿಸಿದ್ದು, ಫೆಬ್ರವರಿ 23ರ ತನಕ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಯುವತಿಗೆ ಕಿರುಕುಳ ಹಾಗೂ ಅತಿಯಾದ ಚಿನ್ನಾಭರಣ ಧರಿಸುತ್ತಿದ್ದುದು ಕೊಲೆಗೆ ಕಾರಣ ಎಂಬುದು ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ಬಂಧಿತ ಯುವತಿ ನತಾಶ ಗೆ  ಮದುವೆ ನಿಶ್ಚಿತಾರ್ಥ ನಡೆದಿದ್ದರೂ, ಗಿರೀಶ್ ಪುತ್ರನ್ ಆಕೆಗೆ ಕಿರುಕುಳ ನೀಡುತ್ತಿದ್ದರು. ಇದರಿಂದ ನೊಂದ ಯುವತಿ ಗಿರೀಶ್ […]