ಭಾರತವು ಥಾಯ್ಲೆಂಡ್ ಗೆ ಉತ್ತಮ ಮಾರುಕಟ್ಟೆಯಾಗಿದೆ :ಸೆಥಫನ್ ಬುದ್ದಾನಿ

Saturday, January 12th, 2013
tourism in Thailand

ಮಂಗಳೂರು : ಭಾರತದಿಂದ ಥಾಯ್ಲ್ಯಾಂಡ್ ಗೆ  ಹೆಚ್ಚಿನ ಪ್ರವಾಸಿಗರು ಪ್ರವಾಸ ಹೋಗುತ್ತಿದ್ದು ಇದನ್ನು ಇನ್ನಷ್ಟು ಹೆಚ್ಚಿಸುವ ದೃಷ್ಟಿಯಿಂದ  ಟೂರಿಸಂ ಅಥಾರಿಟಿ ಆಫ್ ಥಾಯ್ಲೆಂಡ್(ಟಿಎಟಿ) ವತಿಯಿಂದ ನಗರದಲ್ಲಿ ಜನವರಿ 11 ಶುಕ್ರವಾರದಂದು ಹೋಟೆಲ್ ಗೇಟ್ ವೇ ನಲ್ಲಿ ಥಾಯ್ಲೆಂಡ್ ಸಂಸ್ಕೃತಿ, ಪರಂಪರೆಯನ್ನು ಸಾರುವ ನೃತ್ಯ ಕಾರ್ಯಕ್ರಮ ಹಾಗೂ ಕಲೆಗಳನ್ನು ಪ್ರದರ್ಶಿಸಲಾಯಿತು. ನಗರದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ (ಟಿಎಟಿ) ಮುಂಬಯಿ ಕಚೇರಿಯ ನಿರ್ದೇಶಕ ಸೆಥಫನ್ ಬುದ್ದಾನಿ ಮಾತನಾಡಿ ಮಂಗಳೂರು ಸೇರಿದಂತೆ ದಕ್ಷಿಣ ಭಾರತವನ್ನು ನಮ್ಮ ದೇಶದ ಪ್ರವಾಸೋದ್ಯಮಕ್ಕೆ ಆಕರ್ಷಿಸಲು ಹಲವಾರು ಮಾರ್ಗೋಪಾಯಗಳನ್ನು ಕಂಡುಕೊಂಡಿದ್ದು, ಈಗಾಗಲೆ […]

ಡಾ| ಕಲ್ಲಡ್ಕ ಪ್ರಭಾಕರ ಭಟ್‌ ರಿಂದ ರಾಷ್ಟ್ರೀಯ ಯುವಜನೋತ್ಸವ ಸಮಾವೇಶದ ಉದ್ಘಾಟನೆ

Saturday, January 12th, 2013
150th Vivekananda Birth anniversary

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌, ಯುವಜನಸೇವಾ ಮತ್ತು ಕ್ರೀಡಾ ಇಲಾಖೆ ಹಾಗೂ ಮಂಗಳೂರಿನ ರಾಮಕೃಷ್ಣ ಆಶ್ರಮದ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ 150ನೇ ಜನ್ಮಸಂವತ್ಸರ ಆಚರಣೆ ಅಂಗವಾಗಿ ಶುಕ್ರವಾರದಿಂದ ನಗರದ ರಾಮಕೃಷ್ಣ ಮಠದಲ್ಲಿ ಆರಂಭವಾದ ಯುವ ಸಮಾವೇಶವನ್ನು ಕಲ್ಲಡ್ಕದ ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕ ಕಲ್ಲಡ್ಕ ಡಾ| ಪ್ರಭಾಕರ ಭಟ್‌ ಉದ್ಘಾಟಿಸಿದರು. ಭಾರತೀಯ ಸಂಸ್ಕೃತಿ – ಪರಂಪರೆಯ ಬಗ್ಗೆ ಅಗಾಧವಾದವಾದ ಅಭಿಮಾನ, ಅದನ್ನು ಇಡಿ ಜಗತ್ತಿನಾದ್ಯಂತ ಪ್ರಚಾರ ಮಾಡಿ, ದೇಶಭಕ್ತಿಯ ಮಂತ್ರ ಜಪಿಸಿಕೊಂಡು ಜಗತ್ತಿನಲ್ಲೇ ಗುರುತಿಸಿಕೊಂಡ […]

ಜ್ಯುವೆಲ್ಲರಿಯಿಂದ ಚಿನ್ನ ಎಗರಿಸಿದ ವಿದೇಶಿ ಕಳ್ಳರು ಒಬ್ಬ ಆರೋಪಿ ಸೆರೆ

Saturday, January 12th, 2013
Rajadhani Jewellers Tokkotu

ಮಂಗಳೂರು : ತೊಕ್ಕೊಟ್ಟು ಹೊಸ ಬಸ್ ನಿಲ್ದಾಣ ಸಮೀಪವಿರುವ ರಾಜಧಾನಿ ಜ್ಯುವೆಲ್ಲರಿಗೆ ಶುಕ್ರವಾರ ಆಗಮಿಸಿದ ಜಾರ್ಜಿಯ ಮೂಲದ ಇಬ್ಬರು ವ್ಯಕ್ತಿಗಳು ಜ್ಯುವೆಲ್ಲರಿಯಿಂದ ಸುಮಾರು 1.3 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು ಮಾಡಿ ಪರಾರಿಯಾಗಿ ಅದರಲ್ಲಿ ಒಬ್ಬ ಸೆರೆ ಸಿಕ್ಕಿದ್ದು ಇನ್ನೊಬ್ಬ ಪರಾರಿಯಾಗಿದ್ದಾನೆ. ಶುಕ್ರವಾರ ಮಧ್ಯಾಹ್ನ 2;30 ರ ವೇಳೆಗೆ ಗ್ರಾಹಕರ ಸೋಗಿನಲ್ಲಿ ಆಗಮಿಸಿದ ಸನೂಸ್ ಮತ್ತು ಇನ್ನೋರ್ವ ಅಂಗಡಿಯಲ್ಲಿದ್ದ ಕೆಲಸದವರಲ್ಲಿ ಬಳೆ ಹಾಗೂ ಬ್ರಾಸ್ಲೇಟ್ ಗಳ ಬೆಲೆ ಕೇಳಿ ಅವರ ಗಮನವನ್ನು ಬೇರೆಡೆ ಸೆಳೆದು ಎರಡು […]

ಕ್ಯಾಂಡಲ್ ಪ್ಯಾಕ್ಟರಿಯಲ್ಲಿ ಬೆಂಕಿ, ಕೋಟ್ಯಾಂತರ ರೂಪಾಯಿ ನಷ್ಟ

Saturday, January 12th, 2013
Fire mishap candle factory

ಮಂಗಳೂರು : ಜನವರಿ 10 ಗುರುವಾರ ರಾತ್ರಿ ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ, ಮಣಿಪಾಲ ಮೀಡಿಯಾ ನೆಟ್ವರ್ಕ್ ಲಿಮಿಟೆಡ್ ಎಂಬ ಸಂಸ್ಥೆಗೆ ಸೇರಿದ ಕ್ಯಾಂಡಲ್ ಪ್ಯಾಕ್ಟರಿಯಲ್ಲಿ ಕಾಣಿಸಿಕೊಂಡ ಭಾರಿ ಬೆಂಕಿಯಿಂದಾಗಿ ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿದ್ದು, ಕಾರ್ಖಾನೆ ಬಹುತೇಕ ಬೆಂಕಿಗಾಹುತಿಯಾಗಿದೆ. ಘಟನೆಯಿಂದ ಸುಮಾರು 45 ಕೋಟಿ ರೂಪಾಯಿ ಮೌಲ್ಯದ ಯಂತ್ರಗಳು, 15 ಕೋಟಿ ರೂಪಾಯಿ ಮೌಲ್ಯದ ಕಟ್ಟಡ ಹಾಗೂ ಕಚ್ಛಾ ಸಾಮಗ್ರಿ ಸಹಿತ ಪ್ರಾಥಮಿಕ ಮಾಹಿತಿ ಪ್ರಕಾರ ನಷ್ಟದ ಪ್ರಮಾಣ ಸುಮಾರು 100 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. […]

ಮೆಗಾ ಮೀಡಿಯಾ “ಸಾಂಸ್ಕೃತಿಕ ಹಬ್ಬ 2013” ನಗರದ ಪುರಭವನದಲ್ಲಿ ಜನವರಿ 18 ಶುಕ್ರವಾರ ಸಂಜೆ 4:30ಕ್ಕೆ

Thursday, January 10th, 2013
Mega media

ಮಂಗಳೂರು : ಮೆಗಾ ಮೀಡಿಯಾ ತನ್ನ 10 ನೇ ವರ್ಷಾಚರಣೆಯ ಪ್ರಯುಕ್ತ ನಗರದ ಪುರಭವನದಲ್ಲಿ ಜನವರಿ 18 ಶುಕ್ರವಾರ ಸಂಜೆ 4:30ಕ್ಕೆ ಮೆಗಾ ಮೀಡಿಯಾ “ಸಾಂಸ್ಕೃತಿಕ ಹಬ್ಬ 2013” ಮನರಂಜನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕಾರ್ಯಕ್ರಮದಲ್ಲಿ ಮನೋರಂಜನಾ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ, ಮೆಗಾ ಮೀಡಿಯಾ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಹಾಗೂ ಸಭಾಕಾರ್ಯಕ್ರಮ ನಡೆಯಲಿದೆ ಎಂದು ಮೆಗಾ ಮೀಡಿಯಾ ನ್ಯೂಸ್ ನ ಪ್ರದಾನ ಸಂಪಾದಕ ಶಿವಪ್ರಸಾದ್ ಅವರು ಇಂದು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದರು. ಮೆಗಾಮೀಡಿಯಾ 2002 ರಲ್ಲಿ ಆರಂಭಗೊಂಡು […]

ಜನವರಿ 27 ಬಜೊಡಿ ಪ್ರೇಮನಗರದ ಸಂದೇಶ ಪ್ರತಿಷ್ಠಾನದ ಆವರಣದಲ್ಲಿ ಸಂದೇಶ ಪ್ರಶಸ್ತಿ ಪ್ರಧಾನ ಸಮಾರಂಭ

Thursday, January 10th, 2013
Sandesha awards

ಮಂಗಳೂರು : ನಗರದ ಸಂದೇಶ ಫೌಂಡೇಶನ್‌ ವತಿಯಿಂದ ನೀಡಲಾಗುವ ಸಂದೇಶ ಪ್ರಶಸ್ತಿಗೆ 2013ನೇ ಸಾಲಿನಲ್ಲಿ ಒಟ್ಟು 9 ಮಂದಿ ಆಯ್ಕೆಯಾಗಿದ್ದಾರೆ ಎಂದು ನಗರದ ಪ್ರೆಸ್ ಕ್ಲಬ್ ನಲ್ಲಿ ಮಾತನಾಡಿದ ಸಂದೇಶ ಪ್ರಶಸ್ತಿಯ ಆಯ್ಕೆ ಸಮಿತಿ ಅಧ್ಯಕ್ಷ ನಾ. ಡಿಸೋಜಾ ತಿಳಿಸಿದರು. ನಾಡಿನ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯ ವ್ಯಕ್ತಿಗಳಿಗೆ ಕಳೆದ 22 ವರ್ಷ ಗಳಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು ಪ್ರಶಸ್ತಿಯು ತಲಾ 10 ಸಾವಿರ ರೂಪಾಯಿ ನಗದು, ಪ್ರಶಸ್ತಿ ಪತ್ರ ಹಾಗೂ ನೆನಪಿನ ಕಾಣಿಕೆ […]

ರವೀಂದ್ರ ಕಲಾ ಭವನದಲ್ಲಿ ಏರ್ಪಟ್ಟ ರಾಷ್ಟ್ರೀಯ ವಿಚಾರಸಂಕಿರಣ ‘ಕಲೆ-ಹಿಂಸೆ’

Thursday, January 10th, 2013
National seminar

ಮಂಗಳೂರು : ಬುಧವಾರ ಮಂಗಳೂರು ವಿಶ್ವವಿದ್ಯಾನಿಲಯದ ರವೀಂದ್ರ ಕಲಾ ಭವನದಲ್ಲಿ ಕಾಲೇಜಿನ ಇಂಗ್ಲಿಷ್‌ ವಿಭಾಗ ವತಿಯಿಂದ ನಡೆದ ‘ಕಲೆ-ಹಿಂಸೆ’ ಎಂಬ ವಿಷಯಕ್ಕೆ ಸಂಬಂಧಿಸಿದಂತೆ ಏರ್ಪಟ್ಟ ರಾಷ್ಟ್ರೀಯ ವಿಚಾರಸಂಕಿರಣವನ್ನು ಮಂಗಳೂರು ವಿಶ್ವದ್ಯಾನಿಲಯದ ಕುಲಪತಿ ಪ್ರೊ| ಟಿ.ಸಿ. ಶಿವಶಂಕರ ಮೂರ್ತಿ ಉದ್ಘಾಟಿಸಿದರು ಬಳಿಕ ಮಾತನಾಡಿದ ಅವರು ಹಿಂಸೆ ಎನ್ನುವುದು ವಿವಿಧ ಆಯಾಮಗಳಲ್ಲಿ, ಬೇರೆ ಬೇರೆ ಸಂದರ್ಭದಲ್ಲಿ ಪ್ರತಿಫಲಿಸಿದರೆ, ಕಲೆ ಮಾನವನ ಜೀವನದಲ್ಲಿ ಅನನ್ಯ ಭಾವರೂಪಿಯಾಗಿ ಹೊಸತನವನ್ನು ಪ್ರಜ್ವಲಿಸುತ್ತದೆ. ಕಲೆಯ ಮೂಲಕ ಹಿಂಸೆಯನ್ನು ತಡೆಗಟ್ಟಿ, ಅದನ್ನು ಮಟ್ಟಹಾಕಲು ಸಾಧ್ಯ ಎಂದವರು ಹೇಳಿದರು. […]

ಹಾಡ ಹಗಲೇ ನಿಲ್ಲಿಸಿದ್ದ ಕಾರಿನಿಂದ ಲಕ್ಷಾಂತರ ಮೌಲ್ಯದ ಹಣ ಕಳವು

Thursday, January 10th, 2013
thef in car

ಮಂಗಳೂರು : ಕಾರಿನ ಗಾಜು ಒಡೆದು 8 ಲಕ್ಷ ರೂಪಾಯಿ ನಗದನ್ನು ಕಳ್ಳತನ ಮಾಡಿದ ಘಟನೆ ಬುಧವಾರ ಮಧ್ಯಾಹ್ನ ಕೂಳೂರು ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ನಡೆದಿದೆ. ಸುರತ್ಕಲ್ ಸಮೀಪದ ಸೂರಿಂಜೆ ನಿವಾಸಿ ಕೇಶವ ಶೆಟ್ಟಿ (34) ಎಂಬವವರು ಬುಧವಾರ ಲ್ಯಾಂಡ್ ಡೀಲಿಂಗ್ ನಡೆಸಿದ್ದು, ಜಾಗ ಖರೀದಿಸಿದವರು ನೀಡಿದ ಹಣವನ್ನು ಕಾರಿನಲ್ಲಿಟ್ಟು ಲಾಕ್ ಹಾಕಿ ಕೂಳೂರು ರಾಷ್ಟ್ರೀಯ ಹೆದ್ದಾರಿ 66ರ ಸಮೀಪದ ಹೋಟೆಲ್‌ಗೆ ಊಟ ಮಾಡಲೆಂದು ತೆರಳಿದ್ದರು. ಇದರ ಲಾಭವನ್ನು ಪಡೆದ ಕಳ್ಳರು ಸರಿಯಾದ ಸಮಯ ಗಮನಿಸಿ […]

ಉಳ್ಳಾಲ : ವೈಯಕ್ತಿಕ ದ್ವೇಷ ಯುವಕನ ಕೊಲೆಯತ್ನ

Thursday, January 10th, 2013
Ullal group clash

ಉಳ್ಳಾಲ : ಉಳ್ಳಾಲ ಕೋಡಿ ನಿವಾಸಿ ಇಬ್ರಾಹಿಂ ಎಂಬವರ ಮಗ ವಾಕರ್ ಯೂನುಸ್ (೨೧) ಎಂಬಾತನ ಮೇಲೆ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಹಲ್ಲೆ ನಡೆಸಿ, ಕಡಿದು ಕೊಲೆ ಮಾಡಲು ಯತ್ನಿಸಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ. ವಾಕರ್ ಯೂನುಸ್ ನಿನ್ನೆ ರಾತ್ರಿ ದರ್ಗಾ ಸಂದರ್ಶನ ಮುಗಿಸಿ ಕೋಡಿಗೆ ಆಗಮಿಸುತ್ತಿದ್ದ ಸಂದರ್ಭದಲ್ಲಿ ಕೊಲೆಯತ್ನ ನಡೆಸಲಾಗಿದೆ. ವಕಾರ್ ಯೂನಸ್ ತನ್ನ ಸ್ನೇಹಿತರೊಂದಿಗೆ ಕಾರಿನಿಂದ ಇಳಿದು ಪಕ್ಕದಲ್ಲಿದ್ದ ಗೂಡಂಗಡಿ ಬಳಿ ತೆರಳುತ್ತಿದ್ದಾಗ ಹಠಾತನೆ ದಾಳಿ ನಡೆಸಿದ ಇಲಿಯಾಸ್ […]

ಬಾರೊಂದರಲ್ಲಿ ಲಂಚ ಸ್ವೀಕರಿಸುತ್ತಿದ್ದ ಸುಳ್ಯದ ಸರ್ವೇಯರ್ ಲೋಕಾಯುಕ್ತ ವಶಕ್ಕೆ

Wednesday, January 9th, 2013
Sullia surveyor

ಸುಳ್ಯ : ಸುಳ್ಯದ ಜಟ್ಟಿಪಳ್ಳದ ಬಾರೊಂದರಲ್ಲಿ ಮಂಗಳವಾರ ಮಧ್ಯಾಹ್ನ ಲಂಚ ಸ್ವೀಕರಿಸುತ್ತಿದ್ದ ಸುಳ್ಯದ ಸರ್ವೆ ಇಲಾಖೆಯ ಸರ್ವೇಯರನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಸುಳ್ಯ ಭೂಮಾಪನಾ ಇಲಾಖೆಯ ಪರವಾನಗಿ ಭೂಮಾಪಕ ಚೆನ್ನಪಟ್ಟಣ ಮೂಲದ ಶರತ್‌ಕುಮಾರ್(೩೪) ಬಂಧಿತ ಆರೋಪಿಯಾಗಿದ್ದಾನೆ. ಆಲೆಟ್ಟಿ ಗ್ರಾಮದ ಕೋಲ್ಚಾರಿನ ಪದ್ಮಾನಾಭ ಎಂಬುವವರು ಕೊಯಿಂಗಾಜೆಯಲ್ಲಿರುವ ತಮ್ಮ ಒಂದೂವರೆ ಎಕ್ರೆ ಜಾಗ ಸರ್ವೆ ಮಾಡಲು ಕಳೆದ ಡಿಸೆಂಬರ್ ೧೨ ರಂದು ಅರ್ಜಿ ಸಲ್ಲಿಸಿದ್ದರು. ಬಳಿಕ ೨೯ ರಂದು ಶರತ್‌ಕುಮಾರ್ ಕೊಯಿಂಗಾಜೆಗೆ ತೆರಳಿ ಸ್ಥಳದ ಸರ್ವೆ ನಡೆಸಿದ್ದರು. ಆದರೆ ದಾಖಲೆಗಳನ್ನು […]