ನಗರದಲ್ಲಿನ ಮಂಗಳಮುಖಿಯರ ಅಂಕಿ ಅಂಶ ಸಂಗ್ರಹಕ್ಕೆ ಪೊಲೀಸ್‌ ಆಯುಕ್ತ ಮನೀಶ್‌ ಕರ್ಬೀಕರ್‌ ಸೂಚನೆ

Monday, November 26th, 2012
Manish Karbikar

ಮಂಗಳೂರು :ಕೆಲವು ಮಂದಿ ಸೋಮಾರಿ ಪುರುಷರು ಮಂಗಳಮುಖೀಯರ ವೇಷ ಹಾಕಿಕೊಂಡು ಮಂಗಳೂರು ನಗರ, ಪಣಂಬೂರು ಬೀಚ್‌ ಮತ್ತು ಸುತ್ತಮುತ್ತ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿರುವುದಾಗಿ ದಲಿತ ಸಂಘರ್ಷ ಸಮಿತಿಯ ಸಂಚಾಲಕ ಆನಂದ ಎಸ್‌.ಪಿ. ಅವರು ರವಿವಾರ ಪೊಲೀಸ್‌ ಆಯುಕ್ತರ ಕಚೇರಿಯ ಸಭಾಂಗಣದಲ್ಲಿ ನಡೆದ ಪರಿಶಿಷ್ಟ ಜಾತಿ -ಪಂಗಡದ ದೌರ್ಜನ್ಯ ತಡೆ ಬಗೆಗಿನ ಮಾಸಿಕ ಸಭೆಯಲ್ಲಿ ತಿಳಿಸಿದರು. ಈ ಸಬಂಧ ಸಭೆಯ ಅಧ್ಯಕ್ಷತೆ ವಹಿಸಿದ ಪೊಲೀಸ್ ಆಯುಕ್ತ ಮನೀಶ್ ಕರ್ಬೀಕರ್‌ ರವರು ನಗರದಲ್ಲಿರುವ ಮಂಗಳಮುಖೀಯರ ಬಗ್ಗೆ ಸಮೀಕ್ಷೆ ನಡೆಸಿ ಅಂಕಿ […]

ಜನಸಾಗರದಿಂದ ಕೂಡಿದ ಉಲ್ಲಾಳ ಬೀಚ್ ಉತ್ಸವ

Monday, November 26th, 2012
Ullal Beach Festival

ಮಂಗಳೂರು :ಮಾರುತಿ ಯುವಕ ಮಂಡಲದ ರಜತ ಮಹೋತ್ಸವದ ಅಂಗವಾಗಿ ಉಳ್ಳಾಲ ಮೊಗವೀರ ಪಟ್ಣದಲ್ಲಿ ಎರಡು ದಿನಗಳ ಕಾಲ ನಡೆದ ಬೀಚ್‌ ಉತ್ಸವದಲ್ಲಿ ಸಮುದ್ರಕ್ಕೆ ಸವಾಲೆಸೆಯುವಂತೆ ಜನ ಸಾಗರ ಸೇರಿತ್ತು. ಮೊದಲ ದಿನವಾದ ಶನಿವಾರವೇ ಜನರಿಂದ ತುಂಬಿದ್ದ ಉಳ್ಳಾಲ ಬೀಚ್ ಗೆ ರವಿವಾರ ನಾನಾ ಕಡೆಗಳಿಂದ ಜನಸಾಗರವೇ ಹರಿದು ಬಂದಿತ್ತು. ರವಿವಾರ ಬೆಳಗ್ಗೆ ಬಲೆ ಬೀಸುವ ಸ್ಪರ್ದೆ ಹಾಗೂ ನಾಡಾದೋಣಿ ಸ್ಪರ್ಧೆಗೆ ಶಾಸಕ ಯು. ಟಿ ಖಾದರ್ ಚಾಲನೆ ನೀಡಿದರು. ಕಾರ್ಯಕ್ರಮವು ಬಲೆ ಬೀಸುವ ಸ್ಪರ್ಧೆಯೊಂದಿಗೆ ಆರಂಭವಾಯಿತು. ಬಲೆ […]

ಕರಾವಳಿಯಲ್ಲಿ ಗರಿಕೆದರಿದ ಯಡ್ಡಿ ಪಕ್ಷ ಕುಂದಾಪುರದಲ್ಲಿ ಹಾಲಾಡಿ ಶೆಟ್ಟರಿಗೆ ಮಣೆ

Saturday, November 24th, 2012
Yadyurappa & Halaadi

ಮಂಗಳೂರು :ರಾಜ್ಯದ ಬಿಜೆಪಿ ಪಕ್ಷದ ಭವಿಷ್ಯ ಸಧ್ಯಕ್ಕಂತೂ ನೆಟ್ಟಗೆ ಇಲ್ಲ ಎನ್ನುವ ಮಾತುಗಳೇ ಜಾಸ್ತಿಯಾಗಿ ಕೇಳಿಸಿಕೊಳ್ಳಲು ಆರಂಭವಾಗಿದೆ. ಕಾರಣ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಬಿಜೆಪಿಯನ್ನು ಬಿಟ್ಟು ತನ್ನದೇ ಹೊಸ ಪಕ್ಷ ಕೆಜೆಪಿಯನ್ನು ಕಟ್ಟಿಕೊಳ್ಳುತ್ತಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಈಗಾಗಲೇ ಹೊಸ ಪಕ್ಷ ಘೋಷಣೆ ಮಾಡಿರುವ ಯಡಿಯೂರಪ್ಪರ ನೂತನ ಪಕ್ಷದ ರಾಜಾಧ್ಯಕ್ಷರಾಗಿ ಬಿಜೆಪಿಯಿಂದ ಹೊರಹಾಕಲ್ಪಟ್ಟ ಧನಂಜಯ ಕುಮಾರ್ ನೇಮಕವಾದ ಬೆನ್ನಲ್ಲೇ ರಾಜ್ಯದ ನಾನಾ ಕಡೆ ಕೆಜೆಪಿ ಪಕ್ಷಕ್ಕೆ ನಾಯಕರ ಹುಡುಕಾಟ ಶುರುವಾಗಿದೆ. ಅದರಲ್ಲೂ ಮುಖ್ಯವಾಗಿ ಡಿಸೆಂಬರ್ ತಿಂಗಳ 9ರಂದು […]

ತುಳಸಿ ಪೂಜೆಯ ಸನಾತನ ಮಹತ್ವ

Saturday, November 24th, 2012
Tulasi Pooja

ಮಂಗಳೂರು :ದೀಪಾವಳಿ ಹಬ್ಬದ ಬಲಿ ಪಾಡ್ಯಮಿಯ ನಂತರ ಬರುವ ಇನ್ನೊಂದು ಹಬ್ಬ ಎಂದರೆ ಉತ್ಥಾನ ದ್ವಾದಶೀ. ಕಾರ್ತಿಕ ಮಾಸದ ಶುಕ್ಲಪಕ್ಷದ ದ್ವಾದಶಿ ತಿಥಿಯಂದು ಈ ಪವಿತ್ರ ದಿನವನ್ನು ಹಬ್ಬವನ್ನಾಗಿ ಆಚರಿಸುವರು. ಅಂದಿನ ದಿನ ರೇವತಿ ನಕ್ಷತ್ರದ ಯೋಗವಿದ್ದರೆ ಇನ್ನೂ ಶ್ರೇಷ್ಠ. ಉತ್ಥಾನವೆಂದರೆ ಏಳು ಎಂಬರ್ಥ. ಶ್ರೀಮನ್ನಾರಾಯಣನು ತನ್ನ ನಿದ್ರಾವಸ್ಥೆಯಿಂದ ಹೊರ ಬಂದು ತನ್ನ ಭಕ್ತಾದಿಗಳಿಗೆ ದರ್ಶನ ಕೊಡುವನೆಂಬ ಪ್ರತೀತಿ ಇದೆ. ಆ ಭಗವಂತನು ಹಾಲ್ಗಡಲಿನಲ್ಲಿ ಮಲಗಿದ್ದು, ಅವನನ್ನು ಸುಪ್ರಭಾತ ಸೇವೆಯ ಮೂಲಕ ಎಬ್ಬಿಸುವುದರಿಂದ ಈ ವ್ರತವನ್ನು ಕ್ಷೀರಾಬ್ಧಿವ್ರತವೆಂದೂ […]

ನವೆಂಬರ್ 24, 25 ರಂದು ಉಳ್ಳಾಲ ಕಡಲ ತೀರದಲ್ಲಿ ಬೀಚ್ ಉತ್ಸವ

Saturday, November 24th, 2012
Ullal Beach Utsava

ಮಂಗಳೂರು : ಸುಕುಮಾರ್ ತೊಕ್ಕೋಟ್ಟು ;  ಉಳ್ಳಾಲ ಈ ದೇಶದ ಮೊಟ್ಟಮೊದಲ ಸ್ವಾತಂತ್ಯ್ರ ಸಮರಕ್ಕೆ ಕಹಳೆ ಊದಿದ ತಾಣ. ಉಳ್ಳಾಲದ ರಾಣಿ ಅಬ್ಬಕ್ಕ ಪೋರ್ಚುಗೀಸರ ವಿರುದ್ದ ಹೋರಾಟ ಮಾಡಿದ್ದು ಇಲ್ಲೇ ಎನ್ನುವುದು ಬಹು ಮುಖ್ಯ ಸಂಗತಿ. ಅಬ್ಬಕ್ಕಳ ಆರಾಧ್ಯದೇವರು ಸೋಮನಾಥ. ಪ್ರತೀ ದಿನವೂ ಈ ದೇವಾಲಯಕ್ಕೆ ಅಬ್ಬಕ್ಕ ಬಂದು ಸೋಮನಾಥ ದೇವರಿಗೆ ಪೂಜೆ ಸಲ್ಲಿಸುವ ಪರಿಪಾಠವಿತ್ತು. ಆಕೆ ಬದುಕಿರುವಷ್ಟು ಕಾಲವೂ ಈ ದೇವಾಲಯಕ್ಕೆ ಬಂದು ದೇವರಿಗೆ ಕೈಮುಗಿದ ಮೇಲೆಯೇ ಯಾವುದೇ ಕೆಲಸ ಮಾಡುತ್ತಿದ್ದಳು. ಆಕೆ ಕೊನೆಯುಸಿರೆಳೆದಾಗಲೂ ಜೈ […]

ಕಕ್ಕೂರು ಮರ್ಡರ್ ಪ್ರಕರಣ: ಅಷ್ಟಕ್ಕೂ ಕೊಲೆಗಾರ ಯಾರು ?

Saturday, November 24th, 2012
Kakur Murder case

ಮಂಗಳೂರು :ಇದು ತೀರಾ ಸಾಮಾನ್ಯವಾದ ಪ್ರಕರಣವಲ್ಲ. ಒಂದೇ ಮನೆಯಲ್ಲಿ ನಾಲ್ಕು ಮೃತದೇಹಗಳು ಬಿದ್ದುಕೊಂಡಿರುವುದು ಜತೆಗೆ ಮನೆ ಮಾಲೀಕ ತಲೆ ತಪ್ಪಿಸಿಕೊಂಡಿರುವುದು ಎಲ್ಲವೂ ಇಡೀ ಜಿಲ್ಲೆಯ ಜನರಲ್ಲಿ ಸಾವಿರಾರು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿತ್ತು. ಇದರ ಜತೆಗೆ ಪೊಲೀಸ್ ಇಲಾಖೆನೂ ಕೂಡ ತಲೆ ಮೇಲೆ ಕೈ ಹೊತ್ತು ಕುಳಿತುಕೊಂಡಿತ್ತು. ಈಗ ಮನೆ ಮಾಲೀಕರ ತಲೆ ಬರುಡೆ ಸೇರಿದಂತೆ ಅವರ ಆತ್ಮಹತ್ಯೆಗಳ ಕುರುಹುಗಳು ಪತ್ತೆಯಾಗುವ ಮೂಲಕ ಎದ್ದು ನಿಂತು ಕೊಂಡು ಪ್ರತಿಯೊಬ್ಬರು ಕೇಳುವ ಪ್ರಶ್ನೆ ಒಂದೇ ಅಷ್ಟಕ್ಕೂ ಕೊಲೆಗಾರ ಯಾರು ಸ್ವಾಮಿ..? ಆದರೆ […]

ಡಿಸಿ ಎತ್ತಂಗಡಿ ಹಿಂದೆ ಭಟ್ಟರ ಆಟ

Saturday, November 24th, 2012
Yogish Bhatt Chennapa

ಮಂಗಳೂರು :ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎನ್.ಎಸ್. ಚನ್ನಪ್ಪ ಗೌಡರನ್ನು ಏಕ್ ದಂ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬೆಂಗಳೂರಿನ ಕೇಂದ್ರ ಕಚೇರಿ ನಿರ್ದೇಶಕರಾಗಿ ನಿಯುಕ್ತಿಗೊಳಿಸಿದ ನಿರ್ಧಾರದ ಹಿಂದೆ ಏನಿದೆ ಮರ್ಮ ಎನ್ನುವ ರಹಸ್ಯ ವಿಚಾರ ಕಡೆ ಕಣ್ಣು ಹಾಕಿದರೆ ಜಿಲ್ಲೆಗೆ ಬಂದ ಎಲ್ಲ ಡಿಸಿಗಳ ಎತ್ತಂಗಡಿಯ ಹಿಂದೆ ಇರುವ ರಾಜಕಾರಣದ ನಂಟು ಹೊರಬೀಳುತ್ತದೆ. ಜಿಲ್ಲೆಯ ಅಭಿವೃದ್ಧಿಗೆ ಮಾರಕ, ರಾಜಕಾರಣಿಗಳ ಮಾತು ಕೇಳುತ್ತಿಲ್ಲ ಎನ್ನುವ ನಾನಾ ಕಾರಣಗಳನ್ನು ಒಡ್ಡಿಕೊಂಡು ಜಿಲ್ಲೆಯ ಡಿಸಿಗಳನ್ನು ಏಕ್ ದಂ ಎತ್ತಂಗಡಿ ಮಾಡುವ […]

ಉದ್ಯಮಿ ಅಪಹರಣ ಯತ್ನ ರವಿ ಪೂಜಾರಿ ಸಹಚರನ ಬಂಧನ

Friday, November 23rd, 2012
Ravi Poojary Aide

ಮಂಗಳೂರು :ಕಿನ್ನಿಗೋಳಿಯ ಉದ್ಯಮಿ ಸಿಪ್ರಿಯಾನ್ ಡಿಸೋಜ ಎಂಬವರ ಅಪಹರಣ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಲ್ಕಿ ಪೊಲೀಸರು ಗುರುವಾರ ರವಿ ಪೂಜಾರಿ ಸಹಚರನನ್ನು ಬಂಧಿಸಿದ್ದಾರೆ. ಸೋಮೇಶ್ವರ ಕೋಟೆಕಾರ್ ಪಂಡಿತ್ ಹೌಸ್ ನಿವಾಸಿ ಚಿತ್ತರಂಜನ್ ಶೆಟ್ಟಿ ಬಂಧಿತ ಆರೋಪಿಯಾಗಿದ್ದಾನೆ. ಆರೋಪಿಯನ್ನು ಗುರುವಾರ ತೊಕ್ಕೊಟ್ಟು ಜಂಕ್ಷನ್ ನಲ್ಲಿ ಬಂಧಿಸಿ ಮೂಡುಬಿದಿರೆ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಅಕ್ಟೋಬರ್ 12ರಂದು ಬೆಳಗ್ಗೆ 9.45ಕ್ಕೆ ಸಿಪ್ರಿಯಾನ್ ಡಿಸೋಜರು ಕಿನ್ನಿಗೋಳಿಯಿಂದ ತನ್ನ ಮನೆಗೆ ಕಾರಿನಲ್ಲಿ ಬರುತ್ತಿದ್ದಾಗ ಮತ್ತೊಂದು ಕಾರಿನಲ್ಲಿ ಬಂದ ನಾಲ್ಕು ಮಂದಿಯ ತಂಡ ಪಿಸ್ತೂಲ್ ತೋರಿಸಿ ಅಪಹರಣಕ್ಕೆ […]

ಆಮ್ಮಿ ಕೊಂಕಣಿ ಸಾಂಸ್ಕೃತಿಕ ಮಹೋತ್ಸವಕ್ಕೆ ಚಾಲನೆ

Friday, November 23rd, 2012
Aami Konkani

ಮಂಗಳೂರು :ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಆಶ್ರಯದಲ್ಲಿ ನಗರದ ಪುರಭವನದಲ್ಲಿ ಆಯೋಜಿಸಿರುವ ಆಮ್ಮಿ ಕೊಂಕಣಿ ನಾಲ್ಕು ದಿನಗಳ ಕೊಂಕಣಿ ಸಾಂಸ್ಕೃತಿಕ ಮಹೋತ್ಸವವನ್ನು ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದ ಗೌಡ ಗುರುವಾರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಯಾವುದೇ ಒಂದು ದೇಶದ, ಸಮುದಾಯದ ಅಸ್ತಿತ್ವ ಅದರ ಭಾಷೆ, ಸಂಸ್ಕೃತಿ, ಸಂಸ್ಕಾರ, ಆಚಾರ ವಿಚಾರಗಳ ಉಳಿವಿನ ಮೇಲಿದೆ. ಒಂದು ಸಮುದಾಯದ ಸಂಸ್ಕೃತಿಯ ಆಚರಣೆ ಎಂದಿಗೂ ಶಾಶ್ವತವಾಗಿ ಉಳಿಯಬೇಕಾದರೆ ಆ ಸಮುದಾಯದ ಭಾಷೆಯನ್ನು ಉಳಿಸಿ ಬೆಳೆಸಬೇಕು. ದೇಶದ ವಿವಿಧ ಜನರನ್ನು […]

ಇಂದು ಸಾರಿಗೆ ಸಚಿವ ಆರ್‌. ಅಶೋಕ್‌ ರವರಿಂದ ಮಣಿಪಾಲದ ನೂತನ ಆರ್‌ಟಿ‌ಒ ಕಚೇರಿ ಉದ್ಘಾಟನೆ

Friday, November 23rd, 2012
New RTO Office Udupi

ಉಡುಪಿ : ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಬಳಿ ನೂತನವಾಗಿ ನಿರ್ಮಿಸಲಾದ ಸುಸಜ್ಜಿತ ಆರ್‌ಟಿ‌ಒ ಕಚೇರಿ ಕಟ್ಟಡ ಪೂರ್ಣಗೊಂಡಿದ್ದು ಉಪಮುಖ್ಯಮಂತ್ರಿ, ಸಾರಿಗೆ ಸಚಿವರಾದ ಆರ್‌. ಅಶೋಕ್‌ ಇಂದು ಮಧ್ಯಾಹ್ನ 12 30 ಕ್ಕೆ ಈ ನೂತನ ಕಚೇರಿಯನ್ನು ಉದ್ಘಾಟಿಸಲಿದ್ದಾರೆ. ಒಟ್ಟು 2.32 ಎಕ್ರೆ ಪ್ರದೇಶದಲ್ಲಿ ಸುಮಾರು 5.94 ಕೋ.ರೂ. ವೆಚ್ಚದಲ್ಲಿ ಕಟ್ಟಡವನ್ನು ನಿರ್ಮಿಸಲಾಗಿದ್ದು, ಕಟ್ಟಡವು ತಳ‌ಅಂತಸ್ತು, ನೆಲ ಅಂತಸ್ತು, ಮತ್ತು ಮೊದಲ ಮಹಡಿಗಳನ್ನೊಳಗೊಂಡಿದೆ . ರಾಜ್ಯದ ವಿವಿಧ ಆರ್‌ಟಿ‌ಒ ಕಚೇರಿಗಳಲ್ಲಿ ವಿಶಾಲ, ವಿಸ್ತಾರವಾದ ಕಚೇರಿ ಎಂಬ ಹೆಗ್ಗಳಿಕೆ ಮಣಿಪಾಲದ […]