ಪಡುಬಿದ್ರಿ : ರಾಷ್ಟೀಯ ಹೆದ್ದಾರಿ 66 ರಲ್ಲಿ ಭೀಕರ ರಸ್ತೆ ಅಪಘಾತ ನಾಲ್ವರ ಸಾವು

Tuesday, October 16th, 2012
Mishape Tenka Ermal

ಉಡುಪಿ: ಸೋಮವಾರ ರಾತ್ರಿ ಸುಮಾರು  8.45 ರ ವೇಳೆಗೆ ಪಡುಬಿದ್ರಿಯ ತೆಂಕ ಎರ್ಮಾಳು ಬಳಿ ಟಾಟಾಸುಮೊ ಹಾಗೂ ಗ್ಯಾಸ್ ಸಿಲಿಂಡರ್ ಇದ್ದ ಲಾರಿಯ ನಡುವೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಐವರು ಗಂಭೀರವಾಗಿ ಗಾಯಗೊಂಡರೆ, ನಾಲ್ವರು ಮೃತಪಟ್ಟಿದ್ದಾರೆ. ತೀವ್ರ ಗಾಯಗೊಂಡ ಉಳಿದ ನಾಲ್ವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಟಾಟಾಸುಮೊದಲ್ಲಿದ್ದವರು ಕೇರಳದವರಾಗಿದ್ದು ಒಂದೇ ಕುಟುಂಬದ ಸದಸ್ಯರೆಂದು ತಿಳಿದು ಬಂದಿದ್ದು. ಕೊಲ್ಲೂರು ಶ್ರೀ ಮೂಕಾಂಬಿಕ ದೇವಸ್ಥಾನಕ್ಕೆ ನವರಾತ್ರಿ ಆಚರಣೆಯಲ್ಲಿ ಭಾಗವಹಿಸಲು ತೆರಳುತ್ತಿದ್ದ ಸಂದರ್ಭ ಈ ಭೀಕರ ಅಪಘಾತ ಸಂಭವಿಸಿದೆ. […]

ಖ್ಯಾತ ರಿಯಲ್ ಎಸ್ಟೇಟ್, ಅಭಿಮಾನ್ ಸಮೂಹ ಸಂಸ್ಥೆಗಳ ಮಾಲೀಕ ಮನಮೋಹನ್ ಮಲ್ಲಿ ಚಲಿಸುತಿದ್ದ ರೈಲಿನಿಂದ ಬಿದ್ದು ಸಾವು

Monday, October 15th, 2012
Manmohan Malli

ಮಂಗಳೂರು: ಅಭಿಮಾನ್ ಸಮೂಹ ಸಂಸ್ಥೆಗಳ ಮಾಲೀಕ, ನಗರದ ಖ್ಯಾತ ರಿಯಲ್ ಎಸ್ಟೇಟ್ ಉಧ್ಯಮಿ ಮನಮೋಹನ್ ಮಲ್ಲಿ ಉಡುಪಿ ಜಿಲ್ಲೆಯ ಕಾಪು-ಪಾಂಗಳ ಬಳಿ ಚಲಿಸುತ್ತಿದ್ದ ರೈಲಿನಿಂದ ಬಿದ್ದು ಮೃತಪಟ್ಟ ಘಟನೆ ಇಂದು ಬೆಳಗ್ಗೆ ಸಂಭವಿಸಿದೆ. ಗೋವಾದಿಂದ ಮಂಗಳೂರಿಗೆ ವ್ಯವಹಾರಕ್ಕೆ ಸಂಬಧಿಸಿದಂತೆ ರೈಲಿನಲ್ಲಿ ಆಗಮಿಸುತ್ತಿದ್ದ ಮಲ್ಲಿಯವರು ಮುಂಜಾನೆ 2 ಗಂಟೆಯ ಸುಮಾರಿಗೆ ರೈಲಿನಿಂದ ಬಿದ್ದು ಮೃತಪಟ್ಟಿರಬಹುದೆಂದು ಪೋಲಿಸ್ ಮೂಲಗಳು ತಿಳಿಸಿವೆ. ನಿದ್ದೆಗಣ್ಣಿನಲ್ಲಿಯೇ ಟಾಯ್ಲೆಟ್ಗೆ ತೆರಳಿದ್ದ ಸಂದರ್ಭ ಆಕಸ್ಮಿಕವಾಗಿ ರೈಲಿನಡಿ ಬಿದ್ದಿರಬಹುದೆಂದು ಶಂಕಿಸಲಾಗಿದೆ. ಪ್ರಕರಣವು ಕಾಪು ಠಾಣೆಯಲ್ಲಿ ದಾಖಲಾಗಿದ್ದು, ಈ ಬಗ್ಗೆ […]

ರೋಶನಿ ನಿಲಯದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ಏಳನೇ ವರ್ಷಾಚರಣೆ

Saturday, October 13th, 2012
RTI Act

ಮಂಗಳೂರು : ವೈಟ್ ವಿಸ್ಟಲ್  ಮಂಗಳೂರು, ಸೋಶಿಯಲ್ ಚೇಂಜ್ ಮ್ಯಾನೇಜ್ ಮೆಂಟ್ ಪೋರಮ್, ಸ್ಕೂಲ್ ಅಪ್ ಸೋಶಿಯಲ್  ವರ್ಕ್ಸ್ ರೋಶನಿ ನಿಲಯ ಇವುಗಳ ಸಹಯೋಗದೊಂದಿಗೆ ರೋಶನಿ ನಿಲಯದಲ್ಲಿ ಇಂದು ಬೆಳಿಗ್ಗೆ ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದ ಏಳನೇ ವರ್ಷಾಚರಣೆಯ ಸಮಾರಂಭ ನಡೆಯಿತು. ಮುಖ್ಯ ಅತಿಥಿಯಾಗಿ ಮಾತನಾಡಿದ ಡಾ. ರವೀಂದ್ರ ಶಾನ್ ಭೋಗ್, ವಿದ್ಯಾವಂತರು ಮಾಹಿತಿಯನ್ನು ಪಡೆದುಕೊಳ್ಳುವುದು ಸುಲಭ. ಗ್ರಾಮೀಣ ಪ್ರದೇಶದ ಅವಿದ್ಯಾವಂತರಿಗೆ ಮಾಹಿತಿ ಹಕ್ಕಿನ ಬಗ್ಗೆ ಅರಿವಿರುವುದಿಲ್ಲ. ಅದನ್ನು ತಿಳಿಯಪಡಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದರು. […]

ಕಾಣೆಯಾದ ಹೈಸ್ಕೂಲ್ ಹುಡುಗಿಯರು ಮಹಿಳೆಯೊಬ್ಬರ ಮನೆಯಲ್ಲಿ ಪತ್ತೆ

Saturday, October 13th, 2012
Capitanio High School

ಮಂಗಳೂರು : ಅಕ್ಟೋಬರ್ 12 ಶುಕ್ರವಾರ ರಂದು ನಗರದ ಕಪಿತಾನಿಯೊ ಹೈಸ್ಕೂಲ್ ನ ನಾಪತ್ತೆಯಾಗಿದ್ದ ನಾಲ್ಕು ಬಾಲಕಿಯರನ್ನು ಇಂದು ಮುಂಜಾನೆ ನಗರದ ಇಎಸ್ಐ ಆಸ್ಪತ್ರೆಯ ಶಿವಬಾಗ್ ಬಳಿಯ ಮಹಿಳೆಯೊಬ್ಬರ ಮನೆಯಲ್ಲಿ ಪತ್ತೆ ಹಚ್ಚಲಾಗಿದೆ. ಪ್ರಕ್ಷಿತಾ, ಲಾವಣ್ಯ, ಧನ್ಯ, ನಿಶ್ಮಿತಾ 8 ನೇ ತರಗತಿಯ ವಿದ್ಯಾರ್ಥಿನಿಯರಾಗಿದ್ದು ಶುಕ್ರವಾರ ಸಂಜೆ ಶಾಲೆ ಬಿಟ್ಟ ಬಳಿಕ ಮನೆಗೆ ಹಿಂದಿರುಗದ ಕಾರಣ ಆತಂಕಗೊಂಡ ಮನೆಯವರು ಸಂಜೆ ವೇಳೆ ಗ್ರಾಮಾಂತರ ಪೋಲಿಸ್ ಠಾಣೆಗೆ ತೆರಳಿ ದೂರು ಸಲ್ಲಿಸಿದ್ದರು. ಪೋಲೀಸರು ಕೂಡಲೆ ಕಾರ್ಯಪ್ರವೃತ್ತರಾಗಿ ಶೋಧ ಕಾರ್ಯ […]

ಬಿಜೆಪಿ ಮಹಿಳಾಮೋರ್ಚಾದಿಂದ ಗ್ಯಾಸ್ ಸಿಲಿಂಡರ್ ಮಿತಿಯ ರದ್ದುಗೊಳಿಸಲು ಬೃಹತ್ ಪ್ರತಿಭಟನೆ

Friday, October 12th, 2012
Bjp Mahila Morcha

ಮಂಗಳೂರು: ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಗ್ಯಾಸ್ ಸಿಲಿಂಡರ್ ಮಿತಿಯನ್ನು ರದ್ದು ಗೊಳಿಸಲು ದ. ಕ. ಜಿಲ್ಲಾಧಿಕಾರಿ ಕಛೇರಿ ಮುಂಬಾಗದಲ್ಲಿ ಬೃಹತ್ ಪ್ರತಿಭಟನಾ ಸಭೆ ಇಂದು ಬೆಳಿಗ್ಗೆ ನಡೆಯಿತು. ಬಿಜೆಪಿ ಮಹಿಳಾ ಮೋರ್ಚಾದ ಸದಸ್ಯರು ನಗರದ ಜ್ಯೋತಿ ವೃತ್ತದಿಂದ ಕಾಲ್ನಡಿಗೆಯಲ್ಲಿ ಜಾಥಾ ಹೊರಟು ಜಿಲ್ಲಾಧಿಕಾರಿ ಮುಖ್ಯ ದ್ವಾರದ ಬಳಿ ಜಮಾಹಿಸಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಮಹಿಳಾ ಮೋರ್ಚಾ ಅದ್ಯಕ್ಷೆ ಪುಲಸ್ಯ ರೈ ಮಾತನಾಡಿ 2004 ರಲ್ಲಿ ಈ ದೇಶದಲ್ಲಿ ಅಧಿಕಾರಕ್ಕೆ ಬಂದ ಕೇಂದ್ರದ ಯುಪಿಎ ಸರಕಾರವು […]

ಮಂಗಳೂರು ತಾಲೂಕಿನಲ್ಲಿ ನ. 1ರಿಂದ ಪ್ಲಾಸ್ತಿಕ್ ನಿಷೇಧ

Friday, October 12th, 2012
Dr N S Channappa Gowda.

ಮಂಗಳೂರು : ಪ್ಲಾಸ್ಟಿಕ್  ಹಾವಳಿಯಿಂದ ದಕ್ಷಿಣ ಕನ್ನಡ ಜಿಲ್ಲೆಯನ್ನು ಮುಕ್ತಗೊಳಿಸುವ ನಿಟ್ಟಿನಲ್ಲಿ ಹಂತಹಂತವಾಗಿ ಪ್ಲಾಸ್ಟಿಕ್‌ ನಿಷೇಧ ಜಾರಿಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ ಎಂದು ಜಿಲ್ಲಾಧಿಕಾರಿ ಡಾ| ಎನ್‌. ಎಸ್‌. ಚನ್ನಪ್ಪಗೌಡ ಅವರು ವಿವಿಧ ಸಂಘಟನೆಗಳು ಹಾಗೂ ಅಧಿಕಾರಿಗಳ ಸಭೆಯನ್ನುದ್ದೇಶಿಸಿ  ಗುರುವಾರ  ಮಾತನಾಡಿದ  ಅವರು ನವೆಂಬರ್ ೧ರಿಂದ ಪ್ಲಾಸ್ಟಿಕ್‌ ನಿಷೇದ ಮಂಗಳೂರು ನಗರ, ತಾಲೂಕಿನಲ್ಲಿ ಜಾರಿಗೆ ಬರಲಿದೆ ಎಂದು ತಿಳಿಸಿದರು.  ಜಿಲ್ಲೆಯ ನಾಗರಿಕರ ಸಹಕಾರ ಪ್ಲಾಸ್ಟಿಕ್‌ ಹಾವಳಿಯನ್ನು ನಿಷೇಧಿಸಲು ಅಗತ್ಯವಿದೆ ಎಂದರು. ನಿಷೇಧವನ್ನು ಅನುಷ್ಠಾನಕ್ಕೆ ತರುವಲ್ಲಿ ಜಿಲ್ಲೆಯ ಆಡಳಿತದ ಸಹಕಾರ ಅಗತ್ಯವಿದೆ. […]

ಉಡುಪಿ ತಾ.ಪಂ.ಚುನಾವಣೆ ಗೌರಿಪೂಜಾರಿ ನೂತನ ಅಧ್ಯಕ್ಶೆಯಾಗಿ ಆಯ್ಕೆ

Thursday, October 11th, 2012
Udupi Taluk Panchayat President

ಉಡುಪಿಃ ಬುಧವಾರ ನಡೆದ ಉಡುಪಿ ತಾಲ್ಲೂಕು ಪಂಚಾಯತ್ ಅಧ್ಯ ಕ್ಷ ಹಾಗೂ ಉಪಾಧ್ಯಕ್ಷ ಚುನಾವಣೆ ಯಲ್ಲಿ ಬಿಜೆಪಿ ಗೌರಿಪೂಜಾರಿ ಅಧ್ಯಕ್ಷ್ಯೆಯಾಗಿ, ರಾಮ ಕುಲಾಲ್ ಉಪಾಧ್ಯಕ್ಶರಾಗಿ ಆಯ್ಕೆಯಾದರು. ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಯಿಂದ ನಾಮಪಪತ್ರ ಸಲ್ಲಿಸಿದ್ದು ಕಾಂಗ್ರೆಸ್ ನಿಂದ ಸ್ಪರ್ಧಿಸಿದ ಅಭ್ಯರ್ಥಿ ಡಾ. ಸುನೀತ ಶೆಟ್ಟಿ ಯವರು 18 ಮತಗಳನ್ನು ಗಳಿಸಿದರೆ ಬಿಜೆಪಿ ಅಭ್ಯರ್ಥಿ ಗೌರಿಪೂಜಾರಿ ಯವರು 23 ಮತಗಳನ್ನು ಗಳಿಸಿ ಒಟ್ಟು 5 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಬಿಜೆಪಿಯಿಂದ ಸ್ಪರ್ಧಿಸಿದ ರಾಮ ಕುಲಾಲ್ ಅವರು ಕಾಂಗ್ರೆಸ್ […]

ಭಾರತ್ ಬೀಡಿ ವರ್ಕ್ಸ್ ಪ್ರೈ.ಲಿಮಿಟೆಡ್ ನ ಗಣಪತಿ ಪೈ ನಿಧನ

Thursday, October 11th, 2012
Ganapathy pai

ಮಂಗಳೂರು : ಭಾರತ್ ಗ್ರೂಪ್ ಕಂಪನಿಯ ಗಣಪತಿ ಪೈ ಬುಧವಾರ ರಾತ್ರಿ ಮಂಗಳೂರಿನ ತಮ್ಮ ಸ್ವಗೃಹದಲ್ಲಿ ನಿಧನರಾದರು. ಅವರಿಗೆ  77 ವರ್ಷ ವಯಸ್ಸಾಗಿತ್ತು. ಕೆಲವು ದಿನಗಳಿಂದ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರನ್ನು ನಗರದ ಖಾಸಗಿ ಆಸ್ಪತ್ರೆಯಲ್ಲಿ  ಚಿಕಿತ್ಸೆ ನೀಡಲಾಗಿತ್ತು. ಭಾರತ್ ಬೀಡಿ ವರ್ಕ್ಸ್ ಪ್ರೈ.ಲಿಮಿಟೆಡ್ ನ್ನು ಸ್ಥಾಪಿಸಿದ ತಂದೆ ಮಂಜುನಾಥ ಪೈಯವರೊಂದಿಗೆ  1954 ರಲ್ಲಿ ಸೇರಿಕೊಂಡರು.  ಅದರ ಬಳಿಕ ಸಹೋದರರಾದ ದಾಮೋದರ್ ಮತ್ತು ಮಾಧವ ಪೈ ಕೂಡ ಕೈ ಜೋಡಿಸಿದರು. ಇವರ ವಿವಿಧ ಸಂಸ್ಥೆಗಳಲ್ಲಿ 50,000ಕ್ಕಿಂತಲೂ ಹೆಚ್ಚು ಮಂದಿ […]

ಧರ್ಮಸ್ಥಳದಲ್ಲಿ ಕಾಡಿನಲ್ಲಿ ವಿದ್ಯಾರ್ಥಿನಿಯನ್ನು ಅತ್ಯಾಚಾರಗೈದು ಕೊಲೆ

Wednesday, October 10th, 2012
Dharmasthala Rape

ಬೆಳ್ತಂಗಡಿ: ಉಜಿರೆ ಎಸ್‌ಡಿಎಂ ಪದವಿಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯನ್ನು ಧರ್ಮಸ್ಥಳದ ನಿರ್ಜನ ಪ್ರದೇಶದ ಕಾಡಿನಲ್ಲಿ ಅತ್ಯಾಚಾರ ಮಾಡಿ ಕೊಲೆ ಮಾಡಲಾಗಿದೆ. ಧರ್ಮಸ್ಥಳದ ಪಾಂಗಾಳ ಮನೆ ಚಂದಪ್ಪ ಗೌಡರ ಪುತ್ರಿ ಸೌಜನ್ಯ (17) ಮೃತ ಯುವತಿಯಾಗಿದ್ದು ಕಾಲೇಜು ಬಿಟ್ಟು ಮನೆಗೆ ಬರುವ ವೇಳೆಗೆ ಈ ಕೃತ್ಯ ನಡೆಸಿರಬೇಕೆಂದು ಶಂಕಿಸಲಾಗಿದೆ. ಮಂಗಳವಾರ ಕಾಲೇಜಿಗೆ ತೆರಳಿದ್ದ ಸೌಜನ್ಯ ಸಂಜೆ ಎಂದಿನಂತೆ ಮನೆಗೆ ಬಂದಿರಲಿಲ್ಲ. ಎಂದಿನಂತೆ ಹೊತ್ತು ಕಳೆದರೂ ಮನೆಗೆ ಬಾರದಿದ್ದುದರಿಂದ ಮನೆಯವರು ಹುಡುಕಾಟ ಆರಂಭಿಸಿದರು. ರಾತ್ರಿ 10. ಗಂಟೆ ಕಳೆದರೂ […]

ವರುಣ ಕೃಪೆಗಾಗಿ ನಾಡಿನ ವಿವಿಧ ದೇವಾಲಯಗಳಲ್ಲಿ ವಿಶೇಷ ಪ್ರಾಥ೯ನೆ

Saturday, July 28th, 2012
Special poojas

ಮಂಗಳೂರು: ಮುಜರಾಯಿ ಇಲಾಖೆಯ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿಯವರು ಸುಮಾರು 17 ಕೋಟಿ ರೂಪಾಯಿ ವೆಚ್ಚ ದಲ್ಲಿ ರಾಜ್ಯದ ಮುಜರಾಯಿ ಇಲಾಖೆಗೆ ಸಂಬಂಧಪಟ್ಟ ಸುಮಾರು 34,000 ದೇವಾಲಯಗಳಲ್ಲಿ ಮಳೆಗಾಗಿ ಪೂಜೆ-ಪ್ರಾಥ೯ನೆ ಯನ್ನು ಜುಲೈ 27 ಹಾಗೂ ಆಗಸ್ಟ್ 2 ರಂದು ಸಲ್ಲಿಸಲು ಅನುಮತಿ ಸೂಚಿಸಿದ್ದರು. ಅದರಂತೆ ಜುಲೈ 27 ಶುಕ್ರವಾರ ರಾಜ್ಯದ ಮುಜರಾಯಿ ಇಲಾಖೆಗೆ ಸೇರಿದ ದೇವಾಲಯಗಳಲ್ಲಿ ಬೆಳಗ್ಗಿನಿಂದಲೇ ವಿಶೇಷ ಪೂಜೆಗಳು, ಪ್ರಾಥ೯ನೆಗಳು ನಡೆದವು. ಮಂಗಳೂರಿನ ವಿವಿಧ ದೇವಾಲಯಗಳಲ್ಲಿ ಶುಕ್ರವಾರ ವರಮಹಾಲಕ್ಶ್ಮಿ ಪೂಜೆಯ ಜೊತೆಯಲ್ಲಿಯೆ ಮಳೆಗಾಗಿ ವಿಶೇಷ […]