ನಾಡಿನೆಲ್ಲೆಡೆ ಹೆಂಗಳೆಯರಿಂದ ವೈಭವದ ಮಹಾಲಕ್ಷ್ಮೀ ಪೂಜೆ

Friday, July 27th, 2012
varalakshmi vratham

ಮಂಗಳೂರು : ಹಿಂದೂ ಹಬ್ಬಗಳಲ್ಲಿ ವರಮಹಾಲಕ್ಷ್ಮಿ ವ್ರತವು ಒಂದಾಗಿದ್ದು  ಶ್ರಾವಣಮಾಸದ ಎರಡನೇ ಶುಕ್ರವಾರದಂದು ಬರುವ ಈ ಹಬ್ಬವನ್ನು ಪ್ರಮುಖವಾಗಿ ಕನಾ೯ಟಕ, ತಮಿಳುನಾಡು, ಆಂದ್ರಪ್ರದೇಶ ರಾಜ್ಯಗಳಲ್ಲಿ ವಿಶೇಶವಾಗಿ ಆಚರಿಸುತ್ತಾರೆ.  ದೇವರಲ್ಲಿ ಆರೋಗ್ಯ, ಐಶ್ವಯ೯ ,ಆಯಸ್ಸು ವೃದ್ದಿಗಾಗಿ ಮಹಿಳೆಯರು ವಿಶೇಶ ಪ್ರಾಥ೯ನೆಯನ್ನು ಈ ಹಬ್ಬದಲ್ಲಿ  ಸಲ್ಲಿಸುತ್ತಾರೆ. ಮುಂಜಾನೆ ಬೇಗನೆ ಎದ್ದು ಅಭ್ಯಂಜನವನ್ನು ಮುಗಿಸಿ,  ಶುಭ್ರವಾದ ಬಟ್ಟೆಯನ್ನು ದರಿಸಿಕೊಂಡು  ಮನೆಯ ಮುಂದಿನ ಬಾಗಿಲಿಗೆ ರಂಗೋಲಿ ಹಾಕಿ, ಬಾಗಿಲಿಗೆ ಹಸಿರು ತೋರಣವನ್ನು ಕಟ್ಟಿ ಪೂಜಾಸಾಮಗ್ರಿಗಳನ್ನೆಲ್ಲಾ ತಯಾರು ಮಾಡಿಕೊಂಡು ಪೂಜೆಗೆ ಸಿದ್ದರಾಗುತ್ತಾರೆ. ಮೊದಲು ಕಳಶವನ್ನು ಸ್ಥಾಪಿಸಿ ಅದಕ್ಕೆ ಲಕ್ಶ್ಮೀದೇವಿಯ ಮುಖವಾಡವನ್ನು […]

ದೇಶದ 13ನೇ ರಾಷ್ಟ್ರಪತಿಯಾಗಿ ಪ್ರಣಬ್ ಮುಖರ್ಜಿ ಅಧಿಕಾರ ಸ್ವೀಕಾರ

Thursday, July 26th, 2012
Pranab Mukherjee

ಹೊಸದಿಲ್ಲಿ : ಪ್ರಣಬ್ ಮುಖರ್ಜಿಯವರು  ಬುಧವಾರ ಪೂರ್ವಾಹ್ನ 11.38ಕ್ಕೆ ಸರಿಯಗಿ ಪ್ರಮಾಣ ವಚನ ಸ್ವೀಕರಿಸುವ ಮೂಲಕ ದೇಶದ 13 ನೇ ರಾಷ್ಟ್ರಪತಿಯಾಗಿ ಅಧಿಕಾರವನ್ನು ಸ್ವೀಕರಿಸಿದರು. ಸಂಸತ್ತಿನ ಸೆಂಟ್ರಲ್  ಹಾಲ್ ನಲ್ಲಿ  ಸುಪ್ರೀಮ್  ಕೋರ್ಟಿನ  ಮೂಖ್ಯ ನ್ಯಾಯಧೀಶರಾದ ಎಸ್‌.ಎಚ್‌. ಕಪಾಡಿಯಾ ರವರು ಪ್ರಣ್ ಬ್ ಮುಖರ್ಜಿ  ಯವರಿಗೆ  ಪ್ರಮಾಣ ವಚನ ಬೋಧಿಸಿದರು. ಈ ಸಂದಭ೯ದಲ್ಲಿ  ಉಪರರಾಷ್ಟ್ರಪತಿ ಹಮೀದ್  ಅನ್ಸಾರಿ, ರಾಷ್ಟ್ರಪತಿ ಪ್ರತಿಭಾ ಪಾಟೀಲ್‌, ಲೋಕಸಭಾ ಸ್ಪೀಕರ್ ಮೀರಾ ಕುಮಾರ್‌, ಪ್ರಧಾನಿ ಮನಮೋಹನ್‌ ಸಿಂಗ್‌, ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ  ಹಾಗೂ ಕೇಂದ್ರದ  ಸಚಿವರು, ವಿರೋದ ಪಕ್ಶದ […]

ತುಳುನಾಡಿನಲ್ಲಿ ಸಂಭ್ರಮದ ನಾಗಾರಾಧನೆ

Wednesday, July 25th, 2012
Nagarapanchami

ಮಂಗಳೂರು : ನಾಗಾರಾಧನೆ ಭಾರತೀಯ ಸಂಪ್ರದಾಯದಲ್ಲಿ ಹೆಚ್ಹಿನ ಪ್ರಾಮುಖ್ಯತೆಯನ್ನು ಪಡೆದುಕೊಂಡಿದ್ದು ತುಳುನಾಡಿನ ಮಟ್ಟಿಗಂತೂ ಅತ್ಯಂತ ಪವಿತ್ರವಾದ ಸಂಪ್ರದಾಯವಾಗಿದೆ.  ದ.ಕ  ಹಾಗೂ  ಉಡುಪಿ ಜಿಲ್ಲೆಗಳಲ್ಲಿ  ಸೋಮವಾರ ನಾಗರಪಂಚಮಿಯನ್ನು ವಿವಿಧ ಕಡೆಗಳಲ್ಲಿ  ಸಡಗರದಿಂದ ಆಚರಿಸಲಾಯಿತು. ಮಂಗಳೂರಿನ ಪ್ರಮುಖ ಹಾಗೂ ಪ್ರಸಿದ್ದ  ನಾಗಾರಾಧನ ಕ್ಷೇತ್ರಗಳಾದ ಆದಿ ಸುಬ್ರಹ್ಮಣ್ಯ,  ಕುಡುಪು ಶ್ರೀ ಆನಂತ ಪದ್ಮನಾಭ ದೇವಾಲಯ, ಕುಕ್ಕೆ  ಸುಬ್ರಹ್ಮಣ್ಯ ದೇವಾಲಯಗಳಲ್ಲಿ ಭಕ್ತರು ಬ್ರುಹತ್  ಸಂಖೆಯಲ್ಲಿ ನೆರೆದಿದ್ದು ವಿಶೇಷ  ಅಲಂಕಾರಗಳೊಂದಿಗೆ  ವಿಶೇಷ  ಪೂಜೆಗಳು ನೆರವೇರಿದವು. ನಾಗಸನ್ನಿಧಿಗಳಲ್ಲಿ ಪ್ರಮುಖವಾಗಿ ಸೀಯಾಳಾಭಿಷೇಕ, ನಾಗತಂಬಿಲ, ಪಂಚಾಮೃತ ಆಭಿಷೇಕಗಳು ಜರಗಿದವು. ಮಂಗಳೂರಿನ […]

ಮುಜರಾಯಿ ದೇವಾಲಯಗಳಲ್ಲಿ ಮಳೆಗಾಗಿ ವಿಶೇಷ ಪೂಜೆ ಜುಲೈ 27 ರಿಂದ

Saturday, July 21st, 2012
Rain

ಬೆಂಗಳೂರು : ರಾಜ್ಯ ಸರ್ಕಾರ, ಮುಜರಾಯಿ ದೇವಾಲಯಗಳಲ್ಲಿ ‘ವರುಣಮಂತ್ರ ಪೂರ್ವಕವಾಗಿ ಜಲಾಭಿಷೇಕ ಪೂಜೆ’ ನಡೆಸಲು ಆದೇಶ ಹೊರಡಿಸಿದೆ. ತೀವ್ರ ಬರಗಾಲ ಆವರಿಸಿರುವುದರಿಂದ ಮಳೆಗಾಗಿ ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಮುಜರಾಯಿ ಇಲಾಖೆಗೆ ವ್ಯಾಪ್ತಿಗೆ ಒಳಪಡುವ ಸುಮಾರು 34 ಸಾವಿರ ದೇವಾಲಯಗಳಲ್ಲಿ ಎರಡು ದಿನ ವಿಶೇಷ ಪೂಜೆ ನಡೆಯಲಿದೆ. ಪ್ರತಿ ದೇವಾಲಯದಲ್ಲಿ ತಲಾ ಐದು ಸಾವಿರ ರೂ. ವೆಚ್ಚದಲ್ಲಿ ಪೂಜೆ ಮಾಡಲು ಅವಕಾಶ ನೀಡಲಾಗಿದೆ.  ಈ ಜಲ ಪೂಜೆಗಾಗಿ ಒಟ್ಟು  17 ಕೋಟಿ ರೂ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. […]

ಅಡ್ಡಹೊಳೆ ಮನೆಯಲ್ಲಿ ಊಟ ಮಾಡಿದ ನಕ್ಸಲರ ತಂಡ, ಮುಂದುವರಿದ ಕೂಂಬಿಂಗ್ ಕಾರ‍್ಯಾಚರಣೆ

Saturday, July 21st, 2012
naxal

ಪುತ್ತೂರು:  ಪುತ್ತೂರು ತಾಲೂಕಿನ ಶಿರಾಡಿ ಗ್ರಾಮದ ಅಡ್ಡಹೊಳೆ ಪ್ರದೇಶದಲ್ಲಿ ನಕ್ಸಲ್ ತಂಡ ಮತ್ತೆ ಕಾಣಿಸಿ ಕೊಂಡಿದೆ. ಬೆಳ್ತಂಗಡಿ ಶಿಶಿಲ ಪ್ರದೇಶದಲ್ಲಿ ನಕ್ಸಲರಿಗಾಗಿ ಎಎನ್‌ಎಫ್ ಹಾಗೂ ಪೊಲೀಸರು ಕೂಂಬಿಂಗ್ ಕಾರ್ಯಚರಣೆ ನಡೆಸುತ್ತಿದ್ದು ಈ ನಡುವೆ ಶಿರಾಡಿಯಲ್ಲಿ ನಕ್ಸಲ್ ತಂಡ ಪ್ರತ್ಯಕ್ಷ ವಾಗಿರುವುದು ತೀವ್ರ ಕುತೂಹಲ ಮೂಡಿಸಿದೆ. ಅಡ್ಡಹೊಳೆಯ ವರ್ಗೀಸ್ ಎಂಬವರ ಮನೆಗೆ ಹಾಗೂ ಸಮೀಪದ ಇನ್ನೆರಡು ಮನೆಗಳಿಗೆ ಬುಧವಾರ ರಾತ್ರಿ ಹಾಗೂ ಗುರುವಾರ ಬೆಳಗ್ಗಿನ ಜಾವ ಬಂದ ಐದು ಮಂದಿಯ ತಂಡ ಆ ಮನೆಯಲ್ಲಿ ಊಟ ನೀಡುವಂತೆ ಕೇಳಿಕೊಂಡಿದೆ, ಊಟ ಮುಗಿಸಿ ಬಳಿಕ […]

ಡಾ. ಬಿ.ಮಾಧವ ಭಂಡಾಯವರಿಗೆ ಗಣ್ಯರಿಂದ ಅಂತಿಮ ನಮನ

Friday, July 20th, 2012
Madava Bandary

ಮಂಗಳೂರು : ಮಂಗಳವಾರ ರಾತ್ರಿ ನಿಧನರಾದ ಆರೆಸ್ಸೆಸ್ ಮಾಜಿ ವಿಭಾಗ ಸಂಘ ಚಾಲಕ, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ. ಮಾಧವ ಭಂಡಾರಿ ಯವರ ಪಾರ್ಥಿವ ಶರೀರದ ಅಂತ್ಯಕ್ರಿಯೆ ನಗರದ ಬೋಳೂರು ರುದ್ರಭೂಮಿಯಲ್ಲಿನೆರವೇರಿತು. ನಗರದ ಸಂಘನಿಕೇತನದಲ್ಲಿ ಪಾರ್ಥಿವ ಶರೀರದ ಅಂತಿಮ ದರ್ಶನವನ್ನು  ಸಮಾಜ ಬಾಂಧವರು ಪಡೆದು ಗೌರವ ಸಲ್ಲಿಸಿದರು. ಬಿ. ಜನಾರ್ದನ ಪೂಜಾರಿ  ಮಾಧವ ಭಂಡಾರಿಯವರ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ಈ ಸಂದರ್ಭದಲ್ಲಿ ಆರೆಸ್ಸೆಸ್ ಹಿರಿಯ ನಾಯಕ ದಾ.ಮ. ರವೀಂದ್ರ, ಆರೆಸ್ಸೆಸ್ ನಲ್ಲಿ […]

ಹೊಸಮನೆ ಲಿಂಗಪ್ಪ ಮಲೆಕುಡಿಯ ಹಾಗೂ ವಿಠಲ ಮಲೆಕುಡಿಯರಿಗೆ ಜಾಮೀನು

Wednesday, July 4th, 2012
vitala Malekudiya

ಬೆಳ್ತಂಗಡಿ: ಕುತ್ಲೂರು ಗ್ರಾಮ ಮಣಿಲ ಹೊಸಮನೆ ಲಿಂಗಪ್ಪ ಮಲೆಕುಡಿಯ ಹಾಗೂ ಅವರ ಪುತ್ರ ಮಂಗಳೂರು ವಿ.ವಿ. ವಿದ್ಯಾರ್ಥಿ ವಿಠಲ ಮಲೆಕುಡಿಯನಿಗೆ ಬೆಳ್ತಂಗಡಿ ನ್ಯಾಯಾಲಯ ಮಂಗಳವಾರ ಜಾಮೀನು ನೀಡಿದೆ. ನಕ್ಸಲ್‌ ಸಂಪರ್ಕದ ಆರೋಪದಲ್ಲಿ ಮಾ.2ರಂದು ನಕ್ಸಲ್‌ ನಿಗ್ರಹ ದಳದರು ವಿಠಲ ಹಾಗೂ ಅವರ ತಂದೆಯನ್ನು ಬಂಧಿಸಿದ್ದರು. ಆ ಸಂಧರ್ಭದಲ್ಲಿ ಪೊಲೀಸರಿಂದ ಹಲ್ಲೆಗೊಳಗಾದ ಲಿಂಗಪ್ಪ ಮಲೆಕುಡಿಯರನ್ನು ಆಸ್ಪತ್ರೆಗೆ ಸೇರಿಸಲು ಬಂದಾಗ ಬಲಾತ್ಕಾರವಾಗಿ ಬಂಧಿಸಿದ್ದರು ಎಂದು ವಿಠಲನ ತಾಯಿ ಆರೋಪಿಸಿದ್ದರು. ರಾಜ್ಯ ಉನ್ನತ ನ್ಯಾಯಾಲಯದಲ್ಲಿಯೂ ವಿಠಲನ ಜಾಮೀನು ಬೇಡಿಕೆ ಈಡೇರಿರಲಿಲ್ಲ. ನ್ಯಾಯಾಲಯ […]

ನೂತನ ಪೊಲೀಸ್‌ ಮಹಾ ನಿರ್ದೇಶಕ ಲಾಲ್‌ರೊಖುಮಾ ಪಚಾವ್‌ ಮಂಗಳೂರು ಭೇಟಿ

Friday, June 29th, 2012
DGP Lalrokhuma Pachau

ಮಂಗಳೂರು : ರಾಜ್ಯದ ನೂತನ ಪೊಲೀಸ್‌ ಮಹಾ ನಿರ್ದೇಶಕ ಲಾಲ್‌ರೊಖುಮಾ ಪಚಾವ್‌ ಮೇ 31ರಂದು ಡಿಜಿಪಿ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಗುರುವಾರ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿ ನೀಡಿದ ಅವರು ಜಿಲ್ಲಾಡಳಿತ ಮತ್ತು ಇಲ್ಲಿನ ಪೊಲೀಸ್‌ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿ ನಡೆಸಿದರು. ಪೊಲೀಸ್‌ ಇಲಾಖೆಯಲ್ಲಿ ಮಾನವ ಸಂಪದ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಠಾಣೆಗಳಿಗೆ ಆಧುನಿಕ ತಂತ್ರಜ್ಞಾನದ ಮತ್ತು ವೈಜ್ಞಾನಿಕ ಉಪಕರಣ ಮತ್ತು ಇತರ ಅಗತ್ಯ ಮೂಲಸೌಲಭ್ಯಗಳನ್ನು ಒದಗಿಸಿ ಉನ್ನತೀಕರಿಸಲಾಗುತ್ತಿದೆ […]

ಓವರ್ ಟೇಕ್ : ಬಸ್ ಹೊಂಡಕ್ಕೆ 24 ಮ೦ದಿಗೆ ಗಾಯ

Wednesday, June 27th, 2012
Bus Accident

ಉಳ್ಳಾಲ : ರಾಷ್ಟ್ರೀಯ ಹೆದ್ದಾರಿ 66ರ ಕಲ್ಲಾಪು ಬಳಿ ಬುಧವಾರ ಬೆಳಿಗ್ಗೆ ಖಾಸಗಿ ಬಸ್ಸೊಂದು ಅತೀ ವೇಗದ ಚಾಲನೆಯಿಂದ ಉರುಳಿ ಬಿದ್ದ ಪರಿಣಾಮ 24 ಪ್ರಯಾಣಿಕರು ಗಾಯಗೊಂಡು ಇಬ್ಬರ ಸ್ಥಿತಿ ಗಂಭೀರವಾಗಿದೆ. ಬುಧವಾರ ಪೂರ್ವಾಹ್ನ 11ರ ಸುಮಾರಿಗೆ ಈ ಬಸ್‌ ಮಂಗಳೂರಿನಿಂದ ತಲಪಾಡಿಯ ಕಿನ್ಯಕ್ಕೆ ತೆರಳುತ್ತಿತ್ತು. ಕಲ್ಲಾಪು ಸಮೀಪದ ಆಡಂಕುದ್ರು ಬಳಿ ಬಲಬದಿಯಲ್ಲಿ ನಿರ್ಮಾಣ ಹಂತದಲ್ಲಿರುವ ಮಣ್ಣಿನ ರಸ್ತೆಗೆ ಚಾಲಕ ಬಸ್ಸನ್ನು ವೇಗವಾಗಿ ತಿರುಗಿಸಿದ್ದು, ಅದೇ ವೇಳೆಗೆ ಎದುರಿನಿಂದ ಬಂದ ಇನ್ನೊಂದು ಖಾಸಗಿ ಬಸ್‌ಗೆ ಸೈಡ್‌ ನೀಡಲೆಂದು […]

ಕಮ್ಯೂನಿಸ್ಟ್‌ ಪಕ್ಷದ ಹಿರಿಯ ಮುಖಂಡ ಬೇವಿಂಜೆ ವಿಷ್ಣು ಕಕ್ಕಿಲ್ಲಾಯ ನಿಧನ

Tuesday, June 5th, 2012
Bv Kakkilaya

ಮಂಗಳೂರು : ಕಮ್ಯೂನಿಸ್ಟ್‌ ಪಕ್ಷದ ಹಿರಿಯ ಮುಖಂಡ ಬೇವಿಂಜೆ ವಿಷ್ಣು ಕಕ್ಕಿಲ್ಲಾಯ (93) ಅವರು ಸೋಮವಾರ ಮುಂಜಾನೆ 2.30ಕ್ಕೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದರು. ಸ್ವಾತಂತ್ರ್ಯ ಹೋರಾಟಗಾರರಾಗಿ, ಕರ್ನಾಟಕ ಏಕೀಕರಣ ಚಳವಳಿಯ ರೂವಾರಿಗಳಲ್ಲಿ ಓರ್ವರಾಗಿ, ರಾಜ್ಯಸಭೆ ಮತ್ತು ಕರ್ನಾಟಕ ಶಾಸನ ಸಭೆಗಳ ಸದಸ್ಯರಾಗಿ, ರೈತ ಕಾರ್ಮಿಕ ಮುಖಂಡರಾಗಿ, ಕಮ್ಯೂನಿಸ್ಟ್‌ ಪಕ್ಷದ ಮುಖಂಡರಾಗಿ, ನವಕರ್ನಾಟಕ ಪ್ರಕಾಶನ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾಗಿ ಅವರು ನಾಡಿಗೆ ಸಲ್ಲಿಸಿದ ಸೇವೆ ಅಪಾರ. ಕಕ್ಕಿಲ್ಲಾಯ ಅವರು ಡಾ| ಶ್ರೀನಿವಾಸ ಕಕ್ಕಿಲ್ಲಾಯ ಸಹಿತ ನಾಲ್ವರು […]