ಕ್ರೈಸ್ತರ ಮೇಲಿನ 23 ಪ್ರಕರಣಗಳನ್ನು ಕೈಬಿಡಲು ರಾಜ್ಯ ಸಚಿವ ಸಂಪುಟ ನಿರ್ಧಾರ

Saturday, December 3rd, 2011
DVS and Fathers

ಮಂಗಳೂರು : 2008ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಚರ್ಚ್‌ ದಾಳಿಯ ವೇಳೆ ಪ್ರತಿಭಟಿಸಿದ್ದ ಹಾಗೂ ಕ್ರೈಸ್ತರ ಮೇಲೆ ದಾಖಲಿಸಲಾಗಿದ್ದ 23 ಪ್ರಕರಣಗಳನ್ನು ಕೈಬಿಡಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ. ಕಳೆದ 3 ವರ್ಷಗಳಿಂದ ಮುಖ್ಯಮಂತ್ರಿ, ಗೃಹ ಸಚಿವರು ಮತ್ತು ಪೊಲೀಸ್‌ ವರಿಷ್ಠರಿಗೆ ತಮ್ಮ ಅಹವಾಲು ಸಲ್ಲಿಸಿದ್ದರೂ ಅಮಾಯಕರ ಮೇಲಿನ ಪ್ರಕರಣಗಳನ್ನು ಸರಕಾರ ಹಿಂದಕ್ಕೆ ಪಡೆದಿರಲಿಲ್ಲ. ರಾಜ್ಯ ಸಚಿವ ಸಂಪುಟ ಕೈಗೊಂಡಿರುವ ಈ ನಿರ್ಧಾರವನ್ನು ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ರೈ| ರೆ| ಡಾ| ಎಲೋಶಿಯಸ್‌ ಪಾವ್ಲ್ […]

ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತಿಸಂಭ್ರಮದ ಚಂಪಾಷಷ್ಠಿ ಬ್ರಹ್ಮರಥೋತ್ಸವ ಸಮಾಪನ

Thursday, December 1st, 2011
subrahmanya champasashti

ಸುಬ್ರಹ್ಮಣ್ಯ : ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬುಧವಾರ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಭಕ್ತಿಸಂಭ್ರಮದಿಂದ ಚಂಪಾಷಷ್ಠಿ ಬ್ರಹ್ಮರಥೋತ್ಸವ ನಡೆಯಿತು. ಬೆಳಗ್ಗೆ ಬ್ರಹ್ಮರಥದಲ್ಲಿರಿಸಲಾದ ಉತ್ಸವಮೂರ್ತಿಗೆ ದೇವಳದ ಪ್ರಧಾನ ಅರ್ಚಕ ವೆ|ಮೂ| ಬಿ. ಕೇಶವ ಜೋಗಿತ್ತಾಯ ಮತ್ತು ರಾಜೇಶ್‌ ಭಟ್‌ ಆರತಿ ಬೆಳಗಿದರು. ಸಾಲಂಕೃತ ಪಾಲಕಿಯಲ್ಲಿ ಸುಬ್ರಹ್ಮಣ್ಯ ದೇವರು ಹಾಗೂ ಉಮಾಮಹೇಶ್ವರ ದೇವರ ಉತ್ಸವಮೂರ್ತಿಯನ್ನು ಇರಿಸಿ ದೇವಳದ ಹೊರಾಂಗಣದಲ್ಲಿ ಪ್ರದಕ್ಷಿಣೆ ಬಂದು ಬಳಿಕ ಉಮಾಮಹೇಶ್ವರ ದೇವರನ್ನು ಪಂಚಮಿ ರಥದಲ್ಲಿ, ಸುಬ್ರಹ್ಮಣ್ಯ ದೇವರನ್ನು ಬ್ರಹ್ಮರಥದಲ್ಲಿರಿಸಲಾಯಿತು. ಆರತಿ ಬೆಳಗಿದ ಅನಂತರ ರಥದ ಮೇಲಿಂದ […]

ರಾಷ್ಟ್ರೀಯ ಹೆದ್ದಾರಿ : ಮಂದಗತಿಯ ಕಾಮಗಾರಿ, ಅಲ್ಲಲ್ಲಿ ಟೋಲ್‌ಗೇಟ್‌ – ಸಭೆ

Sunday, November 27th, 2011
DC Chennappa Gowda

ಮಂಗಳೂರು: ಸುರತ್ಕಲ್‌- ಬಿ.ಸಿ. ರೋಡ್‌ ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ನಿರ್ವಹಣೆಯ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಶನಿವಾರ  ಸಮಾಲೋಚನಾ ಸಭೆ ನಡೆಯಿತು. ಸಭೆಯಲ್ಲಿ ಹೆದ್ದಾರಿ ಚತುಷ್ಪಥ ಕಾಮಗಾರಿಯ ಬಗ್ಗೆ ನಾಗರಿಕರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಒಂದು ಟೋಲ್‌ಗೇಟ್‌ನಿಂದ ಕನಿಷ್ಠ 60 ಕಿ. ಮೀ. ದೂರದಲ್ಲಿ ಇನ್ನೊಂದು ಟೋಲ್‌ಗೇಟ್‌ ನಿರ್ಮಿಸಬಹುದು. ಅಲ್ಲದೆ ಮಹಾನಗರ ಪಾಲಿಕೆಯ ಗಡಿಯಿಂದ 10 ಕಿ. ಮೀ. ಅನಂತರ ಇನ್ನೊಂದು ಟೋಲ್‌ಗೇಟ್‌ ನಿರ್ಮಿಸಬಹುದು ಎನ್ನುವ ನಿಯಮವಿದೆ. ಬ್ರಹ್ಮರಕೂಟ್ಲುವಿನಲ್ಲಿ ರಾ. ಹೆದ್ದಾರಿಯಲ್ಲಿ ಟೋಲ್‌ಗೇಟ್‌ ನಿರ್ಮಿಸಲಾಗಿದ್ದು, ಬೈಕಂಪಾಡಿ ಪರಿಸರದಲ್ಲಿ ಇನ್ನೊಂದು […]

ಹಿಂದೂಗಳ ದಮನ – ಹಿಂಸಾಚಾರ ತಡೆ ಮಸೂದೆ ರದ್ದುಗೊಳಿಸಲು ಬೃಹತ್‌ ಪ್ರತಿಭಟನೆ

Thursday, November 24th, 2011
HJV Potest

ಮಂಗಳೂರು: ಕೇಂದ್ರ ಸರಕಾರ ಪ್ರಸಕ್ತ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲು ಉದ್ದೇಶಿಸಿರುವ ಹಿಂದೂ ವಿರೋಧಿ ಮಸೂದೆಯನ್ನು ಅನುಷ್ಠಾನಗೊಳಿಸಬಾರದು ಎಂದು ಆಗ್ರಹಿಸಿ ಹಿಂದೂ ಹಿತರಕ್ಷಣಾ ವೇದಿಕೆ ಆಶ್ರಯದಲ್ಲಿ ಬೃಹತ್‌ ಪ್ರತಿಭಟನಾ ಸಭೆ ನಡೆಯಿತು. ಸಭೆಗೂ ಮುನ್ನ ಹಿಂದೂ ಹಿತರಕ್ಷಣಾ ವೇದಿಕೆಯ ಕಾರ್ಯಕರ್ತರು ನಗರದ ಜ್ಯೊತಿ ಸರ್ಕಲ್ ನಿಂದ ಪ್ರತಿಭಟನಾ ಮೆರವಣಿಗೆ ನಡೆಸಿದರು. ನೆಹರೂ ಮೈದಾನದ ವಿಶಾಲ ವೇದಿಕೆಯಲ್ಲಿ ವಿವಿಧ ಮಠಗಳ ಸ್ವಾಮೀಜಿಗಳು ಸೇರಿದಂತೆ ಧಾರ್ಮಿಕ ಮುಖಂಡರು ಉಪಸ್ಥಿತರಿದ್ದರು. ಕೇಂದ್ರ ಸರಕಾರ ಹಿಂದೂಗಳನ್ನು ದಮನ ಮಾಡಲು ಮತೀಯ ಹಾಗೂ ನಿರ್ದೇಶಿತ ಹಿಂಸಾಚಾರ […]

ವೈದ್ಯರ ನಿವಾಸ ಮತ್ತು ಕ್ಲಿನಿಕ್‌ಗೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳ ದಾಳಿ

Thursday, November 24th, 2011
it Official Raid

ಮಂಗಳೂರು : ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಬುಧವಾರ ಮಂಗಳೂರಿನ ಆಯ್ದ ಪ್ರಸಿದ್ಧ ವೈದ್ಯರ ನಿವಾಸಗಳಿಗೆ ಮತ್ತು ಕ್ಲಿನಿಕ್‌ಗಳಿಗೆ ದಾಳಿ ಮಾಡಿ ದಾಖಲೆ ಪತ್ರಗಳನ್ನು ಪರಿಶೀಲಿಸಿ ಕೆಲವು ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಬೆಂಗಳೂರಿನ ಐ.ಟಿ. ಅಧಿಕಾರಿಗಳು ಕದ್ರಿಯ ಕೈಬಟ್ಟಲ್‌, ಡಾಕ್ಟರ್ ಕಾಲನಿಗಳಲ್ಲಿರುವ ವೈದ್ಯರ ನಿವಾಸಗಳು, ಬಲ್ಮಠದಲ್ಲಿರುವ ಕ್ಲಿನಿಕ್‌ಗೆ ದಾಳಿ ನಡೆಸಸಿದ್ದಾರೆ. ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸಿದ್ದಾರೆ ಎಂದು ಹೇಳಲಾಗುತ್ತಿದೆ ಯಾದರೂ ಯಾವ್ಯಾವ ದಾಖಲೆಗಳನ್ನು ಕೊಂಡೊಯ್ದಿದ್ದಾರೆ ಎಂಬ ವಿಚಾರ ತಿಳಿದು ಬಂದಿಲ್ಲ. ದಾಳಿಯಲ್ಲಿ ಪಾಲ್ಗೊಂಡ ಅಧಿಕಾರಿಗಳು ಈ ಕುರಿತು […]

ಚಾಲಕ ರವಿ ಮೇಲೆ ಹಲ್ಲೆ ನಡೆಸಿದ ಮೂವರು ಆರೋಪಿಗಳ ಬಂಧನ

Tuesday, November 22nd, 2011
3 brothers

ಮಂಗಳೂರು : ನ.13 ರಂದು ಮಧ್ಯಾಹ್ನ ಮಂಗಳೂರು ತಾಲೂಕು ಕಂದಾವರ ಗ್ರಾಮದ ಬಜಪೆ ವಿಮಾನ ನಿಲ್ದಾಣದ ಸಿಗ್ನಲ್‌ ಸ್ಟೇಷನ್‌ ಬಳಿ ಮಾರುತಿ ಓಮ್ನಿ ಕಾರಿನಲ್ಲಿ ಬಂದು ಆಟೋರಿಕ್ಷಾವನ್ನು ತಡೆದು ಚಾಲಕ ರವಿ ಯಾನೆ ರವೀಂದ್ರ ಅವರ ಮೇಲೆ ತಲವಾರು ಮತ್ತು ಮರದ ಸೊಂಟೆ, ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ ಮೂವರು ಆರೋಪಿಗಳನ್ನು ನ. 21 ರಂದು ಬೆಳಗಿನ ಜಾವ ಗುರುಪುರದಲ್ಲಿ ಬಂಧಿಸಲಾಗಿದೆ. ಪ್ರಕರಣದಲ್ಲಿ ಬಂಧನಕ್ಕೊಳಗಾದ ಆರೋಪಿಗಳನ್ನು ಮಾರಿಪಳ್ಳದ ನಿವಾಸಿ ಹನೀಫ್‌ ಯಾನೆ ಮಾದ ಹನೀಫ್‌ (26 ), […]

ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವದ ಅಂಗವಾಗಿ ರಾಜ್ಯಮಟ್ಟದ ವಸ್ತುಪ್ರದರ್ಶನ ಆರಂಭ

Monday, November 21st, 2011
lakhadeep

ಬೆಳ್ತಂಗಡಿ,: ಶ್ರೀಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವದ ಅಂಗವಾಗಿ ಏರ್ಪಡಿಸಿದ 34ನೇ ರಾಜ್ಯಮಟ್ಟದ ವಸ್ತುಪ್ರದರ್ಶನವನ್ನು ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಭಾನುವಾರ ದ.ಕ. ಜಿಲ್ಲಾಧಿಕಾರಿ ಡಾ| ಎನ್‌.ಎಸ್‌. ಚನ್ನಪ್ಪ ಗೌಡ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಸಿರಿ ಸಂಸ್ಥೆಯ ಮೂಲಕ ವಿರೇಂದ್ರ ಹೆಗ್ಗಡೆಯವರು ಆರ್ಥಿಕವಾಗಿ ಹಿಂದುಳಿದ ಮಹಿಳೆಯರಿಗೆ ಚೈತನ್ಯ ತುಂಬುವ ಕಾರ್ಯ ನಡೆಯುತ್ತಿರುವುದು ಶ್ಲಾಘನೀಯ ಎಂದರು. ವಿದ್ಯಾ ಸಂಸ್ಥೆಗಳು ವ್ಯಾಪಾರಿ ಕ್ಷೇತ್ರವಾಗುತ್ತಿರುವ ಈ ದಿನಗಳಲ್ಲಿ ಶ್ರೀಕ್ಷೇತ್ರ ನೀಡುತ್ತಿರುವ ಶೈಕ್ಷಣಿಕ ಸೇವೆ ಅಮೂಲ್ಯ ಎಂದು ಹೇಳಿದರು, ಪ್ರತ್ಯಕ್ಷ, ಪರೋಕ್ಷವಾಗಿ ದೇವರನ್ನು ಸ್ಮರಿಸುವುದರಿಂದ ಉತ್ತಮ ಸಮಾಜ […]

ಪಡಿತರ ಚೀಟಿ ಪಡೆಯಲು ಆನ್‌ಲೈನ್‌ ವ್ಯವಸ್ಥೆ ಆರಂಭ

Saturday, November 19th, 2011
Online Ration card

ಬೆಂಗಳೂರು: ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಹೊಸ ವ್ಯವಸ್ಥೆ ಜಾರಿಮಾಡಿದ್ದು ಇನ್ನು ಮುಂದೆ ಪಡಿತರ ಚೀಟಿಗಾಗಿ ಕಚೇರಿ ಮುಂದೆ ಸಾಲುಗಟ್ಟಿ ನಿಲ್ಲಬೇಕಿಲ್ಲ. ನೀವು ಕುಳಿತಲ್ಲಿಂದಲೇ ಆನ್‌ಲೈನ್‌ ಮೂಲಕ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ (http://ahara.kar.nic.in) ಅರ್ಜಿ ಸಲ್ಲಿಸಿ ಪಡಿತರ ಚೀಟಿ ಪಡೆಯುವ ವಿನೂತನ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದ್ದು, ಇದು ನವಂಬರ್ 19 ಶನಿವಾರದಿಂದಲೇ ಆರಂಭಗೊಳ್ಳಲಿದೆ. ಒಂದು ವರ್ಷದಿಂದ ಸ್ಥಗಿತಗೊಂಡಿದ್ದ ಪಡಿತರ ಚೀಟಿ ವಿತರಣೆ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಪುನಾರಂಭಿಸಿದೆ. […]

ಬಾಲಕಿಯನ್ನು ಮನೆಗೆಲಸದಿಂದ ಬಿಡಿಸಿದ ಕಾರ್ಮಿಕ ಇಲಾಖೆಯ ಅಧಿಕಾರಿಗಳು

Friday, November 18th, 2011
child Labour

ಮಂಗಳೂರು: ಕಾರ್ಮಿಕ ಇಲಾಖೆಯ ಅಧಿಕಾರಿಗಳು ಗುರುವಾರ ನಗರದ ಪಾಂಡೇಶ್ವರದಲ್ಲಿ ಮನೆ ಕೆಲಸ ನಿರ್ವಹಿಸುತ್ತಿದ್ದಳೆನ್ನಲಾದ ಚಿಕ್ಕಮಗಳೂರು ಮೂಲದ ಬಾಲಕಿಯೋರ್ವಳನ್ನು ಪತ್ತೆ ಹಚ್ಚಿ ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದಾರೆ. ಕಾರ್ಮಿಕ ಇಲಾಖೆಯ ಅಧಿಕಾರಿಗಳು ಪಾಂಡೇಶ್ವರ ಪೊಲೀಸರ ಸಹಕಾರದಲ್ಲಿ ಓಲ್ಡ್‌ಕೆಂಟ್‌ ರಸ್ತೆಯಲ್ಲಿನ ಮನ್ಸೂರ್‌ ಹುಸೈನ್‌ ಅವರ ಮನೆಗೆ ದಾಳಿ ಮಾಡಿ ಬಾಲಕಿಯನ್ನು ವಶಕ್ಕೆ ತೆಗೆದುಕೊಂಡರು. ರಕ್ಷಿಸಲ್ಪಟ್ಟ ಬಾಲಕಿಯನ್ನು ಚಿಕ್ಕಮಗಳೂರು ಜಿಲ್ಲೆ ತರೀಕೆರೆಯ ಬೆಗೂರು ಗ್ರಾಮದ ಮಿನಾಝ್ 12 ವ ಎಂದು ಗುರುತಿಸಲಾಗಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಗಂಗಾಧರ್‌ […]

ಹೆಣ್ಣು ಮಗುವಿಗೆ ಜನ್ಮ ನೀಡಿದ ಭುವನ ಸುಂದರಿ ಐಶ್‌

Thursday, November 17th, 2011
Aishwarya Rai

ಮುಂಬೈ:   ಮಾಜಿ ಭುವನ ಸುಂದರಿ ಐಶ್ವರ್ಯ ರೈ ಅಂಧೇರಿಯ ಸೆವೆನ್‌ ಹಿಲ್ಸ್‌ ಎಂಬ ಐಷಾರಾಮಿ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಅಮಿತಾಬ್ ಕುಟುಂಬಕ್ಕೆ ಬುಧವಾರ ಪುಟ್ಟ ಅತಿಥಿಯ ಆಗಮನವಾಗಿದೆ. ಸೋಮವಾರ ರಾತ್ರಿಯೇ ಐಶ್ವರ್ಯ ರೈ ಅವರನ್ನು ದಾಖಲಿಸಲಾಗಿತ್ತು. 11.11.11ರಂದು ಹೆರಿಗೆಯಾಗುತ್ತದೆ, ಮಕ್ಕಳ ದಿನವಾದ ನ.14ರಂದು ಆಗುತ್ತದೆ ಎಂಬೆಲ್ಲಾ ವದಂತಿ ಹಾಗೂ ಬೆಟ್ಟಿಂಗ್‌ಗಳನ್ನು ಹುಸಿಗೊಳಿಸಿ ಸಾಮಾನ್ಯ ದಿನವಾದ ಗುರುವಾರ ಹೆರಿಗೆಯಾಗಿದ್ದು ವಿಶೇಷ. ಅವಳಿ ಮಗುವಾಗುತ್ತದೆ ಎಂಬ ಜ್ಯೋತಿಷ್ಯ ಕೂಡ ಸುಳ್ಳಾಗಿದೆ. ಐಶ್‌ಗೆ ಹೆರಿಗೆಯಾಗುತ್ತಿದ್ದಂತೆ ಪತಿ ಅಭಿಷೇಕ್‌ […]