ಮಂಗಳೂರು ಪಾಲಿಕೆ : ವಿರೋಧ ಪಕ್ಷಕ್ಕೆ ಮೇಯರ್, ಆಡಳಿತ ಪಕ್ಷಕ್ಕೆ ಉಪಮೇಯರ್

Thursday, March 8th, 2012
Mayor GulZar

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ 5ನೇ ಅವಧಿಯ ಕೊನೆಯ ಮೇಯರ್‌ ಆಯ್ಕೆಗೆ ಬುಧವಾರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್‌ನ ಗುಲ್ಜಾರ್‌ ಬಾನು ಮೇಯರ್‌ ಆಗಿ ಆಯ್ಕೆಯಾಗಿದ್ದಾರೆ, ಪಾಲಿಕೆಯಲ್ಲಿ ಬಹುಮತವಿರುವ ಬಿಜೆಪಿ ಅಭ್ಯರ್ಥಿ ಇದ್ದರೂ ವಿರೋಧ ಪಕ್ಷದ ಅಭ್ಯರ್ಥಿಯೊಬ್ಬರು ಮೇಯರ್ ಆಗಿರುವುದು ಅಚ್ಚರಿ ಮೂಡಿಸಿತು. ರೂಪಾ ಡಿ. ಬಂಗೇರ ಅವರು ಆಡಳಿತ ಪಕ್ಷ ಬಿಜೆಪಿಯ ಮೇಯರ್ ಅಭ್ಯರ್ಥಿಯಾಗಿದ್ದರು. ಅವರು ಮೀಸಲಾತಿಗೆ ಸಂಬಂಧಿಸಿದ ಜಾತಿ ಪ್ರಮಾಣ ಪತ್ರವನ್ನು ಸರಿಯಾಗಿ ಹಾಜರು ಪಡಿಸಿಲ್ಲ ಎಂಬ ನೆಪಯೊಡ್ಡಿ ಅವರ ನಾಮ ಪತ್ರವನ್ನು ತಿರಷ್ಕರಿಸಲಾಯಿತು. ಆಡಳಿತ […]

ಮುಖ್ಯಮಂತ್ರಿಗಳಿಂದ ಬಿಜೆಪಿ ಅಭ್ಯರ್ಥಿ ವಿ.ಸುನೀಲ್‌ ಕುಮಾರ್‌ ಪರ ಪ್ರಚಾರ

Tuesday, March 6th, 2012
Cm Udupi

ಉಡುಪಿ: ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು  ಜಿಲ್ಲೆಯ ವಿವಿಧೆಡೆ ಲೋಕಸಭಾ ಚುನಾವಣೆಯ ಬಿಜೆಪಿ ಅಭ್ಯರ್ಥಿ ವಿ.ಸುನೀಲ್‌ ಕುಮಾರ್‌  ಪರ ಪ್ರಚಾರ ನಡೆಸಿದರು. ಕಾರ್ಕಳ ಹೊಸ್ಮಾರಿನಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಕಾರ್ಕಳ ಬಿಜೆಪಿ ಕಚೇರಿಗೆ ಭೇಟಿ ನೀಡಿದರು.  ಮುಖ್ಯಮಂತ್ರಿಗಳೊಂದಿಗೆ ವಿಧಾನಸಭಾ ಡೆಪ್ಯುಟಿ ಸ್ಪೀಕರ್‌ ಯೋಗೀಶ ಭಟ್‌, ಅಭ್ಯರ್ಥಿ ಸುನೀಲ್‌ಕುಮಾರ್‌, ಜಿಲ್ಲಾಧ್ಯಕ್ಷ ಕೆ.ಉದಯಕುಮಾರ ಶೆಟ್ಟಿ, ಶಾಸಕರಾದ ಕೆ.ರಘುಪತಿ ಭಟ್‌, ಲಾಲಾಜಿ ಮೆಂಡನ್‌, ಕೋಟ ಶ್ರೀನಿವಾಸ ಪೂಜಾರಿ, ನಗರಸಭಾಧ್ಯಕ್ಷ ಕಿರಣ್‌ಕುಮಾರ್‌ ಮೊದಲಾದವರು ಉಪಸ್ಥಿತರಿದ್ದರು. ಉಡುಪಿ ತಾಲೂಕಿನಲ್ಲಿ ಪ್ರವಾಸ ಪೆರ್ಡೂರು ಶ್ರೀಅನಂತಪದ್ಮನಾಭ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ […]

ನ್ಯಾಯವಾದಿಗಳೇ ಕಾನೂನನ್ನು ಕೈಗೆತ್ತಿಕ್ಕೊಂಡ ಅನಾಗರಿಕ ಘಟನೆ

Saturday, March 3rd, 2012
Journalist Bangalore

ಬೆಂಗಳೂರು : ಮಾಜಿ ಸಚಿವ ಜನಾರ್ಧನರೆಡ್ಡಿ ಅವರನ್ನು ನ್ಯಾಯಾಲಯಕ್ಕೆ ಕರೆತರುವುದನ್ನು ಚಿತ್ರೀಕರಣ ಮಾಡಲು ಹೋಗಿದ್ದ ಮಾಧ್ಯಮ ಸಿಬ್ಬಂದಿ ಮೇಲೆ ವಕೀಲರು ಬೇಕಾಬಿಟ್ಟಿ ಹಲ್ಲೆ ಮಾಡಿ ಅನಾಗರಿಕ ವರ್ತನೆ ತೋರಿಸಿದ್ದಾರೆ. ತಡೆಯಲು ಹೋದ ಪೊಲೀಸರ ಮೇಲೂ ಮುಗಿಬಿದ್ದಿದ್ದಾರೆ. ಜನಸಾಮಾನ್ಯರಿಗೆ ನ್ಯಾಯ ನೀಡಬೇಕಾದ ನ್ಯಾಯವಾದಿಗಳೇ ಕಾನೂನನ್ನು ಕೈಗೆತ್ತಿ ಗೂಂಡಾವೃತ್ತಿ ತೋರಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಜನಾರ್ದನ ರೆಡ್ಡಿ ಅವರನ್ನು ಸಿವಿಲ್ ಕೋರ್ಟ್ ಕಾಂಪೆಕ್ಸ್ ನಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಕರೆತರಲಾಯಿತು. ಈ ಸಮಯಕ್ಕೆ ಸರಿಯಾಗಿ ಕೋರ್ಟ್ ಕಾಂಪೆಕ್ಸ್ ಪಾರ್ಕಿಂಗ್ ಸ್ಥಳದಲ್ಲಿ ಇಬ್ಬರು […]

ಕಾರ್ಮಿಕ ಸಂಘಟನೆಗಳ ಸಾರ್ವತ್ರಿಕ ಮುಷ್ಕರ ಮಂಗಳೂರು ಉಡುಪಿ ಬಹುತೇಕ ಯಶಸ್ವೀ

Wednesday, February 29th, 2012
Trade Strike

ಮಂಗಳೂರು : ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕರೆ ನೀಡಿದ್ದ ದೇಶವ್ಯಾಪಿ ಕಾರ್ಮಿಕರ ಸಾರ್ವತ್ರಿಕ ಮುಷ್ಕರ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಯಶಸ್ವಿಯಾಗಿದೆ. ಮುಂಜಾನೆ ಕೆಲವು ಸರಕಾರಿ ಹಾಗೂ ಖಾಸಗಿ ಬಸ್‌ಗಳು ಸಂಚಾರ ಆರಂಭಿಸಿದ ವೇಳೆ ಅವುಗಳ ಮೇಲೆ ಕಲ್ಲುತೂರಾಟ ನಡೆಸಿದ ಘಟನೆಗಳು ಸಂಭವಿಸಿದೆ. ಲಾಲ್‌ಬಾಗ್‌, ಕರಂಗಲ್ಪಾಡಿ, ಅಡ್ಯಾರ್‌, ಕಣ್ಣೂರು, ಪಡೀಲ್‌ಗ‌ಳಲ್ಲಿ ಸರಕಾರಿ ಬಸ್‌ಗಳ ಮೇಲೆ ನಡೆದ ಕಲ್ಲು ತೂರಾಟದಲ್ಲಿ ಗಾಜುಗಳಿಗೆ ಹಾನಿಯಾಗಿದೆ. ಲಾಲ್‌ಬಾಗ್‌, ಪಿವಿಎಸ್‌ ವೃತ್ತ,, ಫಳ್ನೀರ್‌ ಮುಂತಾದ ಕಡೆಗಳಲ್ಲಿ ಕಲ್ಲುತೂರಾಟದಿಂದ ಕೆಲವು ಖಾಸಗಿ […]

ಯಡಿಯೂರಪ್ಪ ಮೊದಲು ಆರೋಪ ಮುಕ್ತರಾಗಲಿ ಅಮೇಲೆ ನಾಯಕತ್ವ : ಗಡ್ಕರಿ

Friday, February 24th, 2012
Nithin Gadkari

ಬೆಂಗಳೂರು : ಹೊಸೂರು ರಸ್ತೆಯ ಗೆಸ್ಟ್ ಲೈನ್ ರೆಸಾರ್ಟ್‌ನಲ್ಲಿ ನಡೆದ ಚಿಂತನ-ಮಂಥನ ಸಭೆಯಲ್ಲಿ ‘ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ. ಯಾವುದೇ ಕಾರಣಕ್ಕೂ ಅಶಿಸ್ತನ್ನು ಸಹಿಸಲು ಸಾಧ್ಯವಿಲ್ಲ. ದಯಮಾಡಿ ಬಂಡಾಯ ರಾಜಕೀಯ ಮಾಡಬೇಡಿ. ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ನಿತಿನ್ ಗಡ್ಕರಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಎರಡೂ ಕೈಮುಗಿದು ಮನವಿ ಮಾಡಿಕೊಂಡ ಘಟನೆ ಶುಕ್ರವಾರ ನಡೆಯಿತು. ಗೆಸ್ಟ್ ಲೈನ್ ರೆಸಾರ್ಟ್‌ನಲ್ಲಿ ಸುಮಾರು 1 ಗಂಟೆಗೂ ಹೆಚ್ಚು ಕಾಲ ಚಿಂತನ-ಮಂಥನ ಸಭೆಯಲ್ಲಿ ಸ್ಪಷ್ಟ ಸಂದೇಶ ರವಾನಿಸಿದ ಗಡ್ಕರಿ, ರಾಜ್ಯದಲ್ಲಿ ಸದಾನಂದ ಗೌಡರನ್ನು ಮುಖ್ಯಮಂತ್ರಿ […]

ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿಯಾಗಬೇಕು : ಬಿ.ಪಿ.ಹರೀಶ್

Thursday, February 23rd, 2012
Yeddyurappa

ಬೆಂಗಳೂರು : ಯಡಿಯೂರಪ್ಪ ಇಂದು ತಮ್ಮ ನಿವಾಸದಲ್ಲಿ ಎಲ್ಲ ಶಾಸಕರು, ಸಚಿವರು, ಸಂಸದರಿಗೆ ಕರೆದ ಔತಣಕೂಟದಲ್ಲಿ ಅವರ ಬಲಗೈಬಂಟ ಶಾಸಕ ಬಿ.ಪಿ.ಹರೀಶ್ ಅವರು ಪಕ್ಷದ ಹಿತದೃಷ್ಟಿಯಿಂದ ಬಿ.ಎಸ್.ಯಡಿಯೂರಪ್ಪ ಅವರು ಮತ್ತೊಮ್ಮೆ ಮಖ್ಯಮಂತ್ರಿಯಾಗಬೇಕು ಎಂದು ಹೇಳುವ ಮೂಲಕ ಬಿಜೆಪಿಯಲ್ಲಿ ಮತ್ತೆ ಅಂತಃ ಕಲಹ ಆರಂಭಗೊಂಡಂತಾಗಿದೆ. ಸದಾನಂದ ಗೌಡರಿಂದ ಬಿಜೆಪಿ ಪಕ್ಷ ನಾಶವಾಗುತ್ತಿದೆ. ಬಿಜೆಪಿಯನ್ನು ಒಗ್ಗಟ್ಟಿನಲ್ಲಿಡಲು ಮುಖ್ಯಮಂತ್ರಿಗೆ ಸಾಧ್ಯವಿಲ್ಲ. ಹಾಗಾಗಿ ಪಕ್ಷದ ಹಿತದೃಷ್ಟಿಯಿಂದ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡಲೇಬೇಕು’ ಡಿ.ವಿ.ಸದಾನಂದ ಗೌಡರು ಜೆಡಿಎಸ್ ಋಣ ತೀರಿಸುತ್ತಿದ್ದಾರೆ. ಅವರೇ ಮುಖ್ಯಮಂತ್ರಿಯಾಗಿ […]

ಬಿಲ್ಲವರ ಯೂನಿಯನ್‌ನ ಮಹಾಸಭೆಯಲ್ಲಿ ಅಸಮಾಧಾನ, ಪೊಲೀಸರಿಂದ ಲಘು ಲಾಟಿ ಪ್ರಹಾರ

Wednesday, February 22nd, 2012
Narayan Guru College

ಮಂಗಳೂರು : ಕುದ್ರೋಳಿ ನಾರಾಯಣ ಗುರು ವಿದ್ಯಾಸಂಸ್ಥೆಯ ಆವರಣದಲ್ಲಿ ಮಂಗಳವಾರ ಬೆಳಗ್ಗೆ 11 ಗಂಟೆಗೆ ನಡೆದ ಬಿಲ್ಲವರ ಯೂನಿಯನ್‌ನ ಮಹಾಸಭೆಯಲ್ಲಿ ಸಭೆಯ ಬಗ್ಗೆ ಅಸಮಾಧಾನಗೊಂಡಿದ್ದ ಗುಂಪು ಅಕ್ಷೇಪ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ. ಪೊಲೀಸರು ಮಧ್ಯಪ್ರವೇಶಿಸಿ ಲಘು ಲಾಟಿ ಪ್ರಹಾರ ಮಾಡುವ ಮೂಲಕ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಬಿಲ್ಲವರ ಯೂನಿಯನ್‌ನ ಮಹಾಸಭೆಗೆ ಎಲ್ಲಾ ಸದಸ್ಯರುಗಳಿಗೆ ಆಹ್ವಾನ ನೀಡಿಲ್ಲ ಎಂದು ಆರೋಪಿಸಿ ಅಸಮಾಧಾನಗೊಂಡ ಗುಂಪು ಅಕ್ಷೇಪ ವ್ಯಕ್ತಪಡಿಸಿ ಯೂನಿಯನಿನ ಅಧ್ಯಕ್ಷ ನವೀನ್‌ಚಂದ್ರ ಸುವರ್ಣ ಅವರು ತಮ್ಮ ಪರವಾಗಿ ಇರುವವರನ್ನು […]

ಮಂಗಳೂರು ಮಹಾನಗರ ಪಾಲಿಕೆ ಸಭೆಯಲ್ಲಿ ಮೊಬೈಲ್‌ ನಿಷೇಧಿಸಿದ ಮೇಯರ್‌

Saturday, February 18th, 2012
Mayor Praveen Kumar

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ಸಭೆ ನಡೆಯುವಾಗ ಸದನದೊಳಗೆ ಮೊಬೈಲ್‌ ಬಳಕೆಯನ್ನು ನಿಷೇಧಿಸಬೇಕೆಂದು ವಿಪಕ್ಷ ಸದಸ್ಯರು ಆಗ್ರಹಿಸಿದ ಹಿನ್ನೆಲೆಯಲ್ಲಿ, ಶುಕ್ರವಾರ ಪಾಲಿಕೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಮೇಯರ್‌ ಪ್ರವೀಣ್‌ ಅಂಚನ್‌ ಅವರು ಸದನ ಕಲಾಪ ನಡೆಯುತ್ತಿರುವಾಗ ಮೊಬೈಲ್‌ ಬಳಸದಂತೆ ಆದೇಶ ನೀಡಿದ್ದಾರೆ. ವಿಪಕ್ಷ ಸದಸ್ಯ ಆಶ್ರಫ್‌ ಮೊದಲಿಗೆ ವಿಷಯ ಪ್ರಸ್ತಾವಿಸಿ ಸದನದ ಒಳಗಡೆ ಮೊಬೈಲ್‌ ಬಳಕೆ ನಿಷೇಧಿಸಬೇಕು ಎಂದು ಸೂಚಿಸಿದರು. ಮಾಧ್ಯಮದವರು ನಮ್ಮನ್ನೇ ಗುರಿಯಾಗಿಸಿಕೊಂಡು ಕಣ್ಣಿಡುತ್ತಿದ್ದಾರೆ. ಸದನ ಸಭೆ ನಡೆಯುವಾಗ ಕೆಲವರು ಮೊಬೈಲ್‌ ಬಳಸುತ್ತಿದ್ದಾರೆ. ಈ ಕಾರಣದಿಂದಾಗಿ […]

ಬಿಜೆಪಿ ಹಿರಿಯ ಮುಖಂಡ ಡಾ. ವೇದವ್ಯಾಸ ಶ್ರೀನಿವಾಸ ಆಚಾರ್ಯ ನಿಧನ

Tuesday, February 14th, 2012
Dr VS Acharya

ಬೆಂಗಳೂರು : ಬಿಜೆಪಿ ಹಿರಿಯ ಮುಖಂಡ, ಸಜ್ಜನ, ಅಜಾತಶತ್ರು, ರಾಜಕಾರಣಿ ಡಾ. ವೇದವ್ಯಾಸ ಶ್ರೀನಿವಾಸ ಆಚಾರ್ಯ (71) ಅವರು ಫೆ.14ರಂದು ಹಠಾತ್ತಾಗಿ ಅಸ್ವಸ್ಥರಾಗಿ ಹೃದಯಾಘಾತದಿಂದ ನಗರದ ಮಲ್ಲಿಗೆ ನರ್ಸಿಂಗ್ ಹೋಂನಲ್ಲಿ ಕೊನೆಯುಸಿರೆಳೆದರು. ನೃಪತುಂಗ ರಸ್ತೆಯಲ್ಲಿರುವ ಕಲೆ ಮತ್ತು ವಿಜ್ಞಾನ ಕಾಲೇಜಿನಲ್ಲಿ ನಡೆದ ಸಮಾರಂಭವೊಂದರಲ್ಲಿ ಭಾಗವಹಿಸುತ್ತಿದ್ದಾಗ ವೇದಿಕೆಯಲ್ಲಿಯೇ ಅವರು ಕುಸಿದುಬಿದ್ದಿದ್ದರು. ಅವರನ್ನು ಕೂಡಲೆ ಕ್ರೆಸೆಂಟ್ ರಸ್ತೆಯಲ್ಲಿರುವ ಮಲ್ಲಿಗೆ ನರ್ಸಿಂಗ್ ಹೋಂಗೆ ದಾಖಲಿಸಲಾಯಿತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಆಚಾರ್ಯ ಅವರು ತೀರಿಕೊಂಡಿದ್ದಾರೆ. ವಿ.ಎಸ್. ಆಚಾರ್ಯ ಅವರು ಇಂದು ಮಧ್ಯಾಹ್ನವೇ ಮಂಗಳೂರಿನಿಂದ […]

ಬಂಟ್ವಾಳ ತಹಶೀಲ್ದಾರ್‌ ಟಿ. ಎನ್‌. ನಾರಾಯಣ ರಾವ್‌ ಲೋಕಾಯುಕ್ತ ಬಲೆಗೆ

Saturday, February 11th, 2012
Bantwal Tahashidhar T N Narayana Rao

ಬಂಟ್ವಾಳ: ಬಂಟ್ವಾಳ ತಹಶೀಲ್ದಾರ್‌ ಟಿ. ಎನ್‌. ನಾರಾಯಣ ರಾವ್‌ ಅವರು ಕೋವಿ ಪರವಾನಗಿ ಹೆಸರು ಬದಲಾವಣೆ ಮಾಡಲು ಲಂಚ ಸ್ವೀಕಾರ ಮಾಡಿದ ಆರೋಪದಲ್ಲಿ ಲೋಕಾಯುಕ್ತ ಪೊಲೀಸರು ಅವರನ್ನು ನೇರ ಕಾರ್ಯಾಚರಣೆಯಲ್ಲಿ ಬಂಧಿಸಿದ್ದಾರೆ. ಕೊಳ್ನಾಡು ನಿವಾಸಿ ಸತೀಶ ಪ್ರಭು ಎಂಬವರು ನೀಡಿದ ದೂರಿನ ಮೇರೆಗೆ ಫೆ. 10ರಂದು ಸಂಜೆ ಲೋಕಾಯುಕ್ತ ಪೊಲೀಸರು ಧಾಳಿ ನಡೆಸಿ ತಹಶೀಲ್ದಾರ್‌ ಟೇಬಲ್‌ ಡ್ರಾವರ್‌ನಲ್ಲಿ ದಾಖಲೆ ರಹಿತ 85 ಸಾವಿರ ನಗದನ್ನು ವಶಪಡೆಸಿ ಕೊಂಡರು. ಗಜೆಟೆಡ್‌ ಮಟ್ಟದ ಅಧಿಕಾರಿ ಲೋಕಾಯುಕ್ತ ಬಲೆಗೆ ಬೀಳುತ್ತಿರುವುದು ಬಂಟ್ವಾಳ […]