ಮಂಗಳೂರು ದಸರಾಕ್ಕೆ ಸಚಿವ ವಯಲಾರ್‌ ರವಿ ಅವರಿಂದ ವಿದ್ಯುಕ್ತ ಚಾಲನೆ

Monday, October 3rd, 2011
Vayalar Ravi

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಪ್ರಖ್ಯಾತ ಮಂಗಳೂರು ದಸರಾಕ್ಕೆ ಕೇಂದ್ರ ನಾಗರಿಕ ವಿಮಾನಯಾನ ಹಾಗೂ ಸಾಗರೋತ್ತರ ಭಾರತೀಯರ ವ್ಯವಹಾರಗಳ ಸಚಿವ ವಯಲಾರ್‌ ರವಿ ಅವರು ರವಿವಾರ ಚಾಲನೆ ನೀಡಿದರು. ಬ್ರಹ್ಮಶ್ರೀ ನಾರಾಯಣ ಗುರುಗಳು ಸಾರಿ ಸಾರಿರುವ ಸಂದೇಶ ವಿಶ್ವಮಾನ್ಯವಾಗಿದೆ. ಒಂದೇ ಜಾತಿ, ಒಂದೇ ಮತ, ಒಂದೇ ದೇವರು ಎಂಬುದಾಗಿ ಏಕತೆಯ ಸಂದೇಶ ನಮ್ಮೆಲ್ಲರ ಶಕ್ತಿ. ನಾನು ಬಾಲ್ಯದಿಂದಲೂಅವರ ಸಂದೇಶ ನನ್ನ ಚಿಂತನೆಗಳನ್ನು ಕೇಳುತ್ತಿದ್ದೆ. ಚಿಕ್ಕಂದಿನಲ್ಲಿ ವರ್ಕಳ ಶಿವಗಿರಿ ಮಠಕ್ಕೆ ಹೋಗುತ್ತಿದ್ದ ಪ್ರವಚನಗಳು ಇಂದಿಗೂ ನನ್ನ ಮೇಲೆ […]

ಡಾ| ಶಿವರಾಮ ಕಾರಂತ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ವನ್ಯಜೀವಿ ಸಪ್ತಾಹ 2011

Sunday, October 2nd, 2011
wild life week at Pilikula

ಮಂಗಳೂರು : ಡಾ| ಶಿವರಾಮ ಕಾರಂತ ಪಿಲಿಕುಳ ಜೈವಿಕ ಉದ್ಯಾನವನದಲ್ಲಿ ವನ್ಯಜೀವಿ ಸಪ್ತಾಹ 2011, ವನ್ಯಜೀವಿ ವಾಸಗೃಹಗಳ ಮತ್ತು ಕರ್ಣಾಟಕ ಬ್ಯಾಂಕ್‌ ವತಿಯಿಂದ ನಿರ್ಮಿಸಲಾದ ‘ವಿಶ್ರಾಂತಿ ಕುಟೀರ’ವನ್ನು ಶನಿವಾರ ಸಚಿವ ಜೆ. ಕೃಷ್ಣ ಪಾಲೆಮಾರ್‌ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಪಿಲಿಕುಳ ನಿಸರ್ಗಧಾಮಕ್ಕೆ ಅಪರೂಪದ ಹೊಸ ಪ್ರಾಣಿಗಳನ್ನು ತರಲು ಆದೇಶ ಮಂಜೂರಾಗಿದೆ. ಡಾ| ಶಿವರಾಮ ಕಾರಂತ ಪಿಲಿಕುಳ ಜೈವಿಕ ಉದ್ಯಾನವನ ವಿಸ್ತರಣೆ ಹಾಗೂ ಅಭಿವೃದ್ಧಿಗೆ ಸರಕಾರ 43 ಲಕ್ಷ ರೂ. ಮಂಜೂರು ಮಾಡಿದೆ ಎಂದು ಅವರು ತಿಳಿಸಿದರು. […]

ಸ್ಪೈಸ್‌ಜೆಟ್‌ ಮಂಗಳೂರು-ಹೈದರಾಬಾದ್‌ ಪ್ರಯಾಣ ದರ ರೂ. 1,499

Saturday, October 1st, 2011
Spice Jet

ಮಂಗಳೂರು: ಸ್ಪೈಸ್‌ಜೆಟ್‌ ಲಿಮಿಟೆಡ್‌ ಮಂಗಳೂರು-ಹೈದರಾಬಾದ್‌ ನಡುವೆ ವಿಮಾನ ಸಂಚಾರವನ್ನು ನೂತನ ಅತ್ಯಾಧುನಿಕ Q – 400 ವಿಮಾನದೊಂದಿಗೆ ಶುಕ್ರವಾರ ಆರಂಭಿಸಿತು.ಈ ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆಯ ಉಪಾಧ್ಯಕ್ಷ ವಿ. ರಾಜಾ ಮೊದಲ ವಿಮಾನ ಹೈದರಾಬಾದ್‌ನಿಂದ ಮಧ್ಯಾಹ್ನ 1 ಗಂಟೆಗೆ ನಿರ್ಗಮಿಸಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಧ್ಯಾಹ್ನ 2.40ಕ್ಕೆ ಇಳಿಯಲಿದೆ. ಮೊದಲ ವಿಮಾನದಲ್ಲಿ ಹೈದರಾಬಾದ್‌ನಿಂದ 67 ಮಂದಿ ಪ್ರಯಾಣಿಕರು ಮಂಗಳೂರಿಗೆ ಆಗಮಿಸಿದ್ದು ಇಲ್ಲಿಂದ 73 ಮಂದಿ ತೆರಳಿದ್ದಾರೆ ಎಂದರು.ಈ ಮಾರ್ಗದಲ್ಲಿ ನಿತ್ಯ ಎರಡು ಸಂಚಾರ ನಡೆಸಲಿದೆ. ಮಂಗಳೂರು- ಹೈದರಾಬಾದ್‌ […]

ಬಿ.ಎಸ್.ಯಡಿಯೂರಪ್ಪ ವಿಚಾರಣೆಗೆ ಹೈಕೋರ್ಟ್ ತಡೆ

Friday, September 30th, 2011
BS Yeddyurappa

ಬೆಂಗಳೂರು : ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಲೋಕಾಯುಕ್ತ ವಿಶೇಷ ನ್ಯಾಯಾಲಯ ನೀಡಿದ್ದ ಸಮನ್ಸ್‌ಗೆ ಹೈಕೋರ್ಟ್ ಶುಕ್ರವಾರ ಮಧ್ಯಂತರ ತಡೆಯಾಜ್ಞೆ ನೀಡಿದೆ. ಅದರೆ ಯಡಿಯೂರಪ್ಪ ವಿರುದ್ಧ ಇರುವ 2 ಮತ್ತು 3ನೇ ದೂರಿಗೆ ಸಂಬಂಧಿಸಿದಂತೆ ಹೈಕೋರ್ಟ್ ಏಕಸದಸ್ಯ ಪೀಠ ನೀಡಿರುವ ತಡೆಯಾಜ್ಞೆ ಪ್ರಶ್ನಿಸಲು ಸಿರಾಜಿನ್ ಬಾಷಾ ನಿರ್ಧರಿಸಿದ್ದಾರೆ. ಸಿರಾಜಿನ್ ಪರ ವಕೀಲ ಹೇಮಂತ ರಾಜು ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಲಾಗುವುದು ಎಂದಿದ್ದಾರೆ. ಎರಡು ಮೂರು ದಿನಗಳಲ್ಲಿ ಪ್ರಕರಣದ ವಿಚಾರಣೆ ಬರುವ […]

ಸದ್ಯದಲ್ಲೇ ದುಬಾರಿಯಾಗಲಿರುವ ಆಟೋರಿಕ್ಷಾ ಪ್ರಯಾಣ ದರ

Thursday, September 29th, 2011
Channappa-Gowda

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎನ್‌.ಎಸ್‌. ಚನ್ನಪ್ಪ ಗೌಡ ಅವರ ಅಧ್ಯಕ್ಷತೆಯಲ್ಲಿ ಪೆಟ್ರೋಲ್‌ ಬೆಲೆ ಏರಿಕೆ ಹಿನ್ನಲೆಯಲ್ಲಿ ಆಟೋರಿಕ್ಷಾ ಪ್ರಯಾಣ ದರ ಪರಿಷ್ಕರಣೆ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರ ಸಮಾಲೋಚನಾ ಸಭೆ ನಡೆಯಿತು. ಸಭೆಯಲ್ಲಿ ವಿವಿಧ ಆಟೋರಿಕ್ಷಾ ಚಾಲಕರ ಸಂಘಟನೆಗಳ ಪ್ರತಿನಿಧಿಗಳು, ಅಟೋ ಚಾಲಕರು, ಮಾಲಕರು, ಹಾಗೂ ಬಳಕೆ ದಾರರು ಭಾಗವಹಿಸಿದ್ದರು. ಪೆಟ್ರೋಲ್‌ ದರ ಏರಿದೆ. ಖರ್ಚು ಶೇ. 40ರಷ್ಟು ಏರಿಕೆಯಾಗಿದೆ. ಕನಿಷ್ಠ ಪ್ರಯಾಣ ದರ ಮತ್ತು ಪ್ರತೀ ಕಿ.ಮೀ. ಗೆ ಈಗ ಇರುವ ದರವನ್ನು […]

ಮಾಧ್ಯಮ ಪ್ರತಿನಿಧಿಗಳ ಕುಟುಂಬ ಸದಸ್ಯರಿಗಾಗಿ ‘ಆಧಾರ್‌’ ಗುರುತು ಚೀಟಿ ನೋಂದಣಿ

Wednesday, September 28th, 2011
Adhar Card

ಮಂಗಳೂರು: ದ. ಕ. ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜಿಲ್ಲೆಯ ಮಾಧ್ಯಮ ಪ್ರತಿನಿಧಿಗಳ ಕುಟುಂಬ ಸದಸ್ಯರಿಗಾಗಿ ಮಂಗಳವಾರ ನಗರದ ಪತ್ರಿಕಾ ಭವನದಲ್ಲಿ ಏರ್ಪಡಿಸಿದ ‘ಆಧಾರ್‌’ ಗುರುತು ಚೀಟಿ ನೋಂದಣಿ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಜೆ. ಕೃಷ್ಣ ಪಾಲೆಮಾರ್‌ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಸಮಸ್ಯೆಗಳ ನಿವಾರಣೆಯ ದೃಷ್ಟಿಯಿಂದ ಪ್ರತಿಯೊಬ್ಬರೂ ವಿಶಿಷ್ಟ ಗುರುತು ಚೀಟಿ ‘ಆಧಾರ್‌’ ಪಡೆಯುವುದು ಆವಶ್ಯವಾಗಿದೆ, ಆಧಾರ್‌ ಕುರಿತು ಮಾಧ್ಯಗಳು ಸಾರ್ವಜನಿಕರಲ್ಲಿ ಇನ್ನಷ್ಟು ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದ್ರು. ದಿನ ನಿತ್ಯದ ಸಮಸ್ಯೆಗಳಾದ […]

ಕಲರ್ ಟಿ.ವಿ. ಪ್ರತಿಭಾ ಸ್ಪರ್ಧೆಯಲ್ಲಿ ಕುದ್ರೋಳಿ ಗಣೇಶ್‌ ಹಾಗೂ ತಂಡ ಫೈನಲ್‌ ಹಂತಕ್ಕೆ

Saturday, September 24th, 2011
Kudroli Ganesh

ಮಂಗಳೂರು: ಕಲರ್ ಟಿ.ವಿ. ಚಾನೆಲ್‌ನವರು ನಡೆಸುತ್ತಿರುವ ಇಂಡಿಯಾಸ್‌ ಗಾಟ್‌ ಟ್ಯಾಲೆಂಟ್‌ ರಾಷ್ಟ್ರೀಯ ಪ್ರತಿಭಾ ಸ್ಪರ್ಧೆಯಲ್ಲಿ ಜಾದೂಗಾರ ಕುದ್ರೋಳಿ ಗಣೇಶ್‌ ಹಾಗೂ ತಂಡ ಫೈನಲ್‌ ಹಂತವನ್ನು ತಲುಪಿದೆ.ಇವರೊಂದಿಗೆ ಭಾಗವಹಿಸಿದ್ದ ಇನ್ನುಳಿದ ೫ ಕಲಾವಿದರ ತಂಡವು ಸ್ಪರ್ಧೆಯ ಅಂತಿಮ ಹಂತವನ್ನು ತಲುಪಿದ್ದಾರೆ. ಸ್ಪರ್ಧೆಯ ತೀರ್ಪುಗಾರಾಗಿ ಚಿತ್ರನಟ ಧರ್ಮೇಂದ್ರ, ಸೋನಾಲಿ ಬೇಂದ್ರೆ ಹಾಗೂ ಕಿರಣ್‌ಖೇರ್‌ ಕಾರ್ಯ ನಿರ್ವಹಿಸಿದ್ದರು. ಕಾರ್ಯಕ್ರಮ ವೀಕ್ಷಿಸಿದ ವಿಶೇಷ ಅತಿಥಿಗಳಾಗಿದ್ದ ಚಿತ್ರನಟಿ ಹೇಮಾ ಮಾಲಿನಿ, ಇಶಾ ಡಿಯೋಲ್‌ ಅವರು ಗಣೇಶ್‌ ಹಾಗೂ ತಂಡದ ಯಕ್ಷಗಾನದ ವೈಭವವನ್ನು ಶ್ಲಾಘಿಸಿದರು. ಕುದ್ರೋಳಿ […]

‘ಒರಿಯರ್ದೊರಿ ಅಸಲ್‌’ ತುಳು ಚಲನಚಿತ್ರದ ಶತದಿನ ಸಂಭ್ರಮ

Thursday, September 22nd, 2011
Oriyardori Asal

ಮಂಗಳೂರು: ‘ಒರಿಯರ್ದೊರಿ ಅಸಲ್‌’ ಚಲನಚಿತ್ರದ ಶತದಿನ ಸಂಭ್ರಮ ನಗರದ ಪುರಭವನದಲ್ಲಿ ಬುಧವಾರ ವರ್ಣರಂಜಿತವಾಗಿ ಜರಗಿತು. ಶತದಿನ ಕಾರ್ಯಕ್ರಮವನ್ನು ಶಾಸಕ ಕೆ. ಅಭಯಚಂದ್ರ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ತುಳುಚಿತ್ರರಂಗದ ಇತಿಹಾಸದಲ್ಲಿ ದಾಖಲೆ ನಿರ್ಮಿಸಿದ ಅಸಲ್‌ ಚಿತ್ರ ವರ್ಷಕಾಲ ಪ್ರದರ್ಶನವಾಗುತ್ತಿರಲೆಂದು ಹಾರೈಸಿದರು. ಸಂಸದ ನಳಿನ್‌ ಕುಮಾರ್‌ ಕಟೀಲು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಅವರು ತುಳು ಚಿತ್ರರಂಗಕ್ಕೆ -ಅಸಲ್‌ ಚಿತ್ರ ಒಂದು ಅಪೂರ್ವ ಆಯಾಮ ನೀಡಿದೆ. ತುಳು ಚಿತ್ರಕ್ಕೆ ಭವಿಷ್ಯವಿದೆ ಎಂಬುದನ್ನು ಜಿಲ್ಲೆಯ ತುಳುವರು ಸಾಬೀತು ಗೊಳಿಸಿದ್ದಾರೆ ಎಂದರು. ಶತದಿನ […]

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ವಿಧವಾ ಮಹಿಳೆಯರಿಗೆ ವಿಶೇಷ ಕಾರ್ಯಕ್ರಮ

Wednesday, September 21st, 2011
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ವಿಧವಾ ಮಹಿಳೆಯರಿಗೆ ವಿಶೇಷ ಕಾರ್ಯಕ್ರಮ

ಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ದಸರಾ ಉತ್ಸವ ಸಂದರ್ಭದಲ್ಲಿ ಈ ಬಾರಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಅವರು ಪತ್ರಿಕಾಭಾವನದಲ್ಲಿ ಮಂಗಳವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಗಂಡ ಮೃತಪಟ್ಟ ಮಹಿಳೆಯನ್ನು ಸಮಾಜ ಇತರ ಮಹಿಳೆಯರಂತೆ ಗೌರವ ಭಾವದಿಂದ ನೋಡುವಂತಾಗಬೇಕು. ಅದಕ್ಕಾಗಿ ಸುಮಾರು 1500 ಮಂದಿ ವಿಧವೆಯರಿಗೆ ಸೀರೆ, ಕುಂಕುಮದ ಕರಡಿಗೆ, ಹೂವು, ಬಳೆಗಳನ್ನು ದಸರಾ ಉತ್ಸವ ಸಂದರ್ಭದಲ್ಲಿ ನೀಡಲಾಗುವುದು ಎಂದು ಹೇಳಿದರು. ಮಹಿಳೆಯರಿಗೆ ವಿಶೇಷ ಗೌರವ […]

ಮಕ್ಕಳಿಗೆ ಸಂಸ್ಕೃತಿ ಸಂಸ್ಕಾರಗಳನ್ನು ಚಿಕ್ಕಂದಿನಲ್ಲೇ ಕಲಿಸಬೇಕು : ಒಡಿಯೂರು ಶ್ರೀ

Sunday, September 18th, 2011
Odiyooru Sree

ವಿಟ್ಲ : ಕರ್ನಾಟಕ ತುಳು ಸಾಹಿತ್ಯ ಅಕಾಡಮಿ ಮತ್ತು ಶ್ರೀ ಗುರುದೇವದತ್ತ ಸಂಸ್ಥಾನಮ್‌ ಒಡಿಯೂರು ಇದರ ಜಂಟೀ ಆಶ್ರಯದಲ್ಲಿ ಒಡಿಯೂರು ಜ್ಞಾನ ಮಂದಿರದಲ್ಲಿ ಮೂರು ದಿನಗಳ ಕವಿತಾ ರಚನಾ ಕಮ್ಮಟವನ್ನು ಒಡಿಯೂರು ಶ್ರೀ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ರವಿವಾರ ದೀಪ ಬೆಳಗಿಸಿ ಉದ್ಘಾಟಿಸಿದರು. ಉದ್ಘಾಟನೆ ಬಳಿಕ ಮಾತನಾಡಿದ ಒಡಿಯೂರು ಶ್ರೀಗಳು ಮಕ್ಕಳಿಗೆ ಸಂಸ್ಕೃತಿ ಸಂಸ್ಕಾರಗಳನ್ನು ಚಿಕ್ಕಂದಿನಲ್ಲೇ ಕಲಿಸಬೇಕು. ಮಕ್ಕಳಲ್ಲಿ ತುಳು ಭಾಷೆಯ ಪ್ರೀತಿಯನ್ನು ಬೆಳೆಸಬೇಕು. ಪ್ರತಿ ಮನೆಯಲ್ಲಿಯೂ ಸನಾತನ ತುಳು ಸಂಸ್ಕೃತಿಯನ್ನು ಬೆಳೆಸುವ ಕೆಲಸ […]