ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತಕ್ಕೆ ಒಟ್ಟು101 ಪದಕಗಳು

Thursday, October 14th, 2010
ಸೈನಾ ನೆಹ್ವಾಲ್

ನವದೆಹಲಿ : ದೆಹಲಿಯಲ್ಲಿ ನಡೆದ 19ನೇ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಭಾರತ ಈ ಬಾರಿ ಭರ್ಜರಿ 38 ಸ್ವರ್ಣ ಪದಕ, 27ಬೆಳ್ಳಿ, 36 ಕಂಚು ಒಟ್ಟು101  ಪದಕ ಗೆದ್ದುಕೊಳ್ಳುವ ಮೂಲಕ ಆತಿಥೇಯ ಭಾರತ ತಂಡವು ನೂತನ ಇತಿಹಾಸ ರಚಿಸಿದೆ. ಕಾಮನ್ ವೆಲ್ತ್ ಗೇಮ್ಸ್ ನ ಕೊನೆಯ ದಿನವಾದ ಇಂದು ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಸಿಂಗಲ್ಸ್ ವಿಭಾಗದಲ್ಲಿ ಜಯಗಳಿಸಿ ಭಾರತವನ್ನು ಪದಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೆರುವಂತೆ ಮಾಡಿದರು. 2002ರಲ್ಲಿ ನಡೆದ ಮ್ಯಾಂಚೆಸ್ಟರ್ ಕೂಟದಲ್ಲಿ ಭಾರತ 22 ಚಿನ್ನಗಳನ್ನು […]

ಎರಡನೇ ಬಾರಿಗೆ ಬಹುಮತ ಗೆದ್ದ ಯಡಿಯೂರಪ್ಪ ಸರಕಾರ

Thursday, October 14th, 2010
ಬಿ.ಎಸ್.ಯಡಿಯೂರಪ್ಪ

ಬೆಂಗಳೂರು : ದೇಶದ ಇತಿಹಾಸದಲ್ಲೇ ಒಂದೇ ವಾರದಲ್ಲಿ ಎರಡೆರಡು ಬಾರಿ ವಿಶ್ವಾಸ ಮತ ಚಲಾಯಿಸಿ ದಕ್ಷಿಣ ಭಾರತದಲ್ಲಿ ಮೊದಲ ಭಾರಿಗೆ ಅಧಿಕಾರ ಹಿಡಿದ ಬಿ.ಎಸ್.ಯಡಿಯೂರಪ್ಪ ಸರಕಾರ ವಿಶ್ವಾಸಮತ ಯಾಚನೆಯಲ್ಲಿ ಗೆಲುವು ಸಾಧಿಸಿದೆ. ವಿಧಾನ ಸಭಾ ಸ್ಪೀಕರ್ ದ್ವನಿ ಮತದ ಮೂಲಕ ವಿಶ್ವಾಸ ಮತ ಚಲಾಯಿಸಲು ಸೂಚಿಸಿದರಾದರೂ ವಿರೋಧ ಪಕ್ಷದ ಪ್ರತಿರೋದದಿಂದಾಗಿ ತಲೆ ಎಣಿಕೆಗೆ ಸೂಚನೆ ನೀಡಿದರು. ಪರ ಹಾಗೂ ವಿರೋಧ ಪಕ್ಷಗಳ ಶಾಸಕರ ಪ್ರತಿ ಸಾಲಿನ ಮತ ಎಣಿಕೆ ಬಳಿಕ ಯಡಿಯೂರಪ್ಪ ಪರವಾಗಿ 106 ಹಾಗೂ ವಿರೋಧವಾಗಿ […]

ರಾಜ್ಯಪಾಲರು, ಕಾಂಗ್ರೆಸ್, ಜೆಡಿಎಸ್ ನಾಯಕರ ವರ್ತನೆಗೆ ದ.ಕ ಜಿಲ್ಲಾ ಬಿಜೆಪಿ ಖಂಡನೆ.

Wednesday, October 13th, 2010
ಬಿ.ಜೆಪಿಯ ಜಿಲ್ಲಾಧ್ಯಕ್ಷ ಪದ್ಮನಾಭ ಕೊಟ್ಟಾರಿ

ಮಂಗಳೂರು:  ಕಳೆದ ಒಂದು ವಾರದ ರಾಜ್ಯದ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದಾಗ ಈ ರಾಜ್ಯದಲ್ಲಿ ಜನಾದೇಶದೊಂದಿಗೆ ಜನಪರ ಆಡಳಿತ ನೀಡುವ  ಒಂದು ಸರಕಾರವನ್ನು ಅಧಿಕಾರದಿಂದ ಕೆಳಗಿಳಿಸಲು ಪ್ರತಿಪಕ್ಷಗಳು ಯಾವ ರೀತಿ ಕಾರ್ಯೋನ್ಮುಖವಾಗಿದೆ ಎನ್ನುವುದರ ಜ್ವಲಂತ ಸಾಕ್ಷಿಯಾಗಿದೆ. ರಾಜ ಭವನವನ್ನು ರಾಜಕೀಯ ಚಟುವಟಿಕೆಗಳ ಕೇಂದ್ರವಾಗಿರಿಸಿಕೊಂಡು ರಾಜ್ಯಪಾಲರನ್ನು ಪಕ್ಷದ ಏಜಂಟರಂತೆ ಉಪಯೋಗಿಸಿಕೊಂಡ ಕಾಂಗ್ರೆಸ್-ಜೆಡಿಎಸ್ನ ಕುತಂತ್ರ ಬಯಲಾಗಿದೆ ಎಂದು ಬಿ.ಜೆಪಿಯ ಜಿಲ್ಲಾಧ್ಯಕ್ಷ ಪದ್ಮನಾಭ ಕೊಟ್ಟಾರಿಯವರು ಇಂದು ಬಿಜೆಪಿ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು. ಸರಕಾರದ ಭಾಗವಾಗಿ ಕಾರ್ಯನಿರ್ವಹಿಸಿದ ಸಚಿವರನ್ನು, ಶಾಸಕರನ್ನು ರೆಸಾರ್ಟ್ ಗಳಲ್ಲಿ […]

ಕೆನಡಾದ ಡೆಲ್ಟಾ ಮಹಾ ನಗರ ಪಾಲಿಕೆಯ ತಂಡ ಮಂಗಳೂರಿನಲ್ಲಿ

Tuesday, October 12th, 2010
ಕೆನಡಾ ಮಹಾ ನಗರ ಪಾಲಿಕೆಯ ತಂಡ ಮಂಗಳೂರಿನಲ್ಲಿ

ಮಂಗಳೂರು :  ಕೆನಡಾದ ಡೆಲ್ಟಾ ಮಹಾ ನಗರ ಪಾಲಿಕೆಯ ಮೇಯರ್ ಲೂಯಿಸ್ ಇ.ಜಾಕ್ಸನ್ ತನ್ನ ನಿಯೋಗದೊಂದಿಗೆ ಸೋಮವಾರ ನಗರಕ್ಕೆ ಭೇಟಿ ನೀಡಿದ್ದಾರೆ.  ಮಂಗಳೂರು ಮಹಾ ನಗರ ಪಾಲಿಕೆ ಯೊಂದಿಗೆ ಹೆಚ್ಚಿನ ಬಾಂಧವ್ಯ ಹೊಂದಲು ಮತ್ತು ಮಹಾನಗರ  ಪಾಲಿಕೆಯ ಅಭಿವೃದ್ದಿ ಕಾರ್ಯಗಳ ಅಧ್ಯಯನಕ್ಕೆ ಈ ತಂಡ ನಗರಕ್ಕೆ ಭೇಟಿ ನೀಡಿದೆ. ನಿಯೋಗದಲ್ಲಿ ಮೇಯರ್ ಸಹಿತ ಅಲ್ಲಿನ ಸಿ‌ಇ‌ಒ ಜಾರ್ಜ್ ವಿ. ಹಾರ್ವೆ, ಆಡಳಿತ ವ್ಯವಸ್ಥಾಪಕಿ ಮಂಜತ್ ಕೈಲಾ ಮತ್ತಿತರರು ಇದ್ದರು. ಇಂದು ಬೆಳಿಗ್ಗೆ ಮಂಗಳೂರು ಮಹಾನಗರ  ಪಾಲಿಕೆಯ ಸಭೆಯಲ್ಲಿ […]

ವಿಶ್ವಾಸ ಮತ ಗೆದ್ದ ಯಡಿಯೂರಪ್ಪ ಸರಕಾರ, ಸದನದಲ್ಲಿ ಪ್ರತಿ ಪಕ್ಷಗಳ ಗದ್ದಲ

Monday, October 11th, 2010
ವಿಶ್ವಾಸಮತ ಗೆದ್ದ ಯಡಿಯೂರಪ್ಪ

ಬೆಂಗಳೂರು :  ಧ್ವನಿಮತದ ಮೂಲಕ ವಿಶ್ವಾಸಮತವನ್ನು ಅಂಗೀಕರಿಸಲಾಗಿದೆ ಎಂದು ಸೋಮವಾರ ಬೆಳಗ್ಗೆ 10ಗಂಟೆಗೆ ಸರಿಯಾಗಿ ಸ್ಪೀಕರ್ ಕೆ ಜಿ ಬೋಪಯ್ಯ ಸದನದಲ್ಲಿ ಘೋಷಿಸುತ್ತಿದ್ದಂತೆ . ಪ್ರತಿಪಕ್ಷಗಳ ತೀವ್ರ ಗದ್ದಲದ ನಡುವೆ ರಣರಂಗವಾಗಿ ಮಾರ್ಪಟ್ಟಿತು. ಬಳಿಕ ಸ್ಪೀಕರ್ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು ಸರಕಾರದ ಪರವಾಗಿ 106 ಮತಗಳು ಇರುವುದರಿಂದ ಬಿಜೆಪಿ ಸರ್ಕಾರಕ್ಕೆ ಬಹುಮತ ಸಾಬೀತಾಗಿದ್ದು, ವಿರುದ್ಧ ಶೂನ್ಯ ಮತಗಳು ಬಿದ್ದಿವೆ ಎಂದು ಬೋಪಯ್ಯ ಘೊಷಿಸಿದ್ದಾರೆ. ಇನ್ನು ಮುಂದಿನ ನಿರ್ಣಯ ರಾಜ್ಯಪಾಲರ ಕೈಯಲ್ಲಿದೆ ಅಲ್ಲೂ ಸಾಧ್ಯವಾಗದಿದ್ದರೆ ಪ್ರತಿ ಪಕ್ಷಗಳು ರಾಷ್ಟ್ರ […]

ಜಿಲ್ಲಾ ಎಸ್ಪಿಯವರಿಂದ ಕಾನೂನು ಸಮಸ್ಯೆಗಳ ದೂರು ಆಲಿಕೆ

Sunday, October 10th, 2010
ಜಿಲ್ಲಾ ಎಸ್ಪಿಯವರಿಂದ ಕಾನೂನು ಸಮಸ್ಯೆಗಳ ದೂರು ಆಲಿಕೆ

ಮಂಗಳೂರು : ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ, ದಲಿತರಿಗೆ ಆಗುವ ತೊಂದರೆಗಳು, ಪೊಲೀಸ್ ಇಲಾಖೆಗಳಲ್ಲಿ ಜನ ಸಾಮಾನ್ಯರಿಗೆ ಆಗುವ ಕಿರುಕುಳ ಮೊದಲಾದ ದೂರುಗಳನ್ನು ಇಂದು ಜಿಲ್ಲಾ ಎಸ್ಪಿ ಡಾ| ಸುಬ್ರಹ್ಮಣೇಶ್ವರ ರಾವ್ ಅವರು ತಮ್ಮ ಕಛೇರಿಯಲ್ಲಿ ಆಲಿಸಿದರು. ಪೊಲೀಸ್ ನಿರೀಕ್ಷಕರಾದ ಬಿ.ಜೆ.ಭಂಡಾರಿ, ಬಂಟ್ವಾಳ ಪೊಲೀಸ್ ನಿರೀಕ್ಷಕರಾದ ನಜುಂಡೇ ಗೌಡ, ಸುಳ್ಯ ಪೊಲೀಸ್ ನಿರೀಕ್ಷಕರಾದ ಮಂಜಯ್ಯ ಹಾಗೂ ಜಿಲ್ಲೆಯ ಇನ್ನಿತರ ಠಾಣೆಗಳ ಉಪ ನಿರೀಕ್ಷಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ದ.ಕ. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಗೋಪಾಲ ಕಾಡು […]

ನಿರ್ಮಲ ನಗರ ಅಭಿಯಾನದೊಂದಿಗೆ ಬೀದಿ ನಾಟಕ.

Sunday, October 10th, 2010
ನಿರ್ಮಲ ನಗರ ಅಭಿಯಾನ

ಮಂಗಳೂರು: ಲಯನ್ಸ್ ಕ್ಲಬ್ ಮಂಗಳೂರು ಹಾಗೂ ರಾಮಕೃಷ್ಣ ಪದವಿ ಪೂರ್ಣ ಕಾಲೇಜು ಬಂಟ್ಸ್ ಹಾಸ್ಟೆಲ್ ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ನಗರ ನೈರ್ಮಲೀಕರಣ ಜಾಗೃತಿ ಕಾರ್ಯಕ್ರಮದ ಅಂಗವಾಗಿ ನಿರ್ಮಲ ನಗರ ಅಭಿಯಾನ ಕಾರ್ಯಕ್ರಮ ಶನಿವಾರ ಬೆಳಿಗ್ಗೆ ಬಂಟ್ಸ್ ಹಾಸ್ಟೆಲ್ ವೃತ್ತದ ಬಳಿ ನಡೆಯಿತು. ನಿರ್ಮಲ ನಗರ ಅಭಿಯಾನವು ಜಾಥಾ ಹಾಗೂ ಬೀದಿನಾಟಕದೊಂದಿಗೆ ಆರಂಭವಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ದ.ಕ. ಜಿಲ್ಲಾಧಿಕಾರಿ ವಿ. ಪೊನ್ನುರಾಜ್ ನೆರವೇರಿಸಿದರು. ಬಳಿಕ ಮಾತನಾಡಿದ ಅವರು ನಾವು ನಮ್ಮ ಮನೆ ಹಾಗೂ ಹಿತ್ತಿಲನ್ನು ಹೇಗೆ ಸ್ವಚ್ಚವಾಗಿಡುತ್ತೇವೆಯೋ […]

ಗೋವಾ ರಾಜ್ಯದಿಂದ ಅಕ್ರಮವಾಗಿ ಕೇರಳ ರಾಜ್ಯಕ್ಕೆ ಮದ್ಯ ಸಾಗಾಟ

Saturday, October 9th, 2010
ಮದ್ಯ ಸಾಗಾಟ

ಮಂಗಳೂರು: ಗೋವಾ ರಾಜ್ಯದಿಂದ ಅಕ್ರಮವಾಗಿ ಮದ್ಯವನ್ನು ಕೇರಳ ರಾಜ್ಯಕ್ಕೆ ಕೆ.ಎ.19 ಝಡ್ 1636 ಇಂಡಿಕಾ ಕಾರಿನಲ್ಲ್ಲಿ ಸಾಗಿಸಿ ಅಲ್ಲಿ ಹೆಚ್ಚಿನ ಜಿಲ್ಲೆಗೆ ಮಾರಾಟ ಮಾಡುತ್ತಾರೆ ಎಂಬ ಮಾಹಿತಿ ಪಡೆದ ಪಶ್ಚಿಮ ವಲಯದ ಅಬಕಾರಿ ಜಾರಿ ಮತ್ತು ಲಾಟರಿ ನಿಷೇದ ದಳದ ಪೊಲೀಸ್ ಉಪಾಧೀಕ್ಷಕರಾದ ಶ್ರೀ. ವಿಶ್ವನಾಥ ಪಂಡಿತ್ ರವರು ಪೊಲೀಸ್ ಉಪನಿರೀಕ್ಷಕರಾದ ನಾರಾಯಣ ಬೈಂದೂರು ಹಾಗೂ ಸಿಬ್ಬಂದಿಯವರೊಂದಿಗೆ ದಿನಾಂಕ 07-10-2010 ರಂದು ಮಧ್ಯಾಹ್ನ ಮುಡಿಪು ಜಂಕ್ಷನ್ ನಲ್ಲಿ ಹೊಂಚು ಹಾಕಿ ಕಾದು ಕುಳಿತುಕೊಂಡಿದ್ದಾಗ ಮಧ್ಯಾಹ್ನ ಸುಮಾರು 3.30 […]

ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ಅವರಿಂದ ಬ್ರಹತ್ ಮಂಗಳೂರು ದಸಾರಕ್ಕೆ ಚಾಲನೆ

Friday, October 8th, 2010
ಮಂಗಳೂರು ದಸರಾ

ಮಂಗಳೂರು :  ಕುದ್ರೋಳಿ ಶ್ರೀ ಗೋಕರ್ಣ ಕ್ಷೇತ್ರದ ವತಿಯಿಂದ ನಡೆಯುವ ಮಂಗಳೂರು ದಸರಾವನ್ನು ದ.ಕ. ಜಿಲ್ಲಾಧಿಕಾರಿ ವಿ.ಪೊನ್ನುರಾಜ್ ದೀಪ ಬೆಳಗಿಸುವುದರ ಮೂಲಕ ಇಂದು ಮಧ್ಯಾಹ್ನ ಚಾಲನೆ ನೀಡಿದರು. ಅ.8 ರಿಂದ 18 ರವರೆಗೆ ನಡೆಯುವ ನವರಾತ್ರಿ ಉತ್ಸವ ಮತ್ತು ಮಂಗಳೂರು ದಸರಾ ಪೂಜಿಸಲ್ಪಡುವ ನವದುರ್ಗೆಯರ ಮತ್ತು ಶಾರದ ಮಾತೆಯ ವಿಗ್ರಹ ಹಾಗೂ ಗಣಪತಿಯ ವಿಗ್ರಹ ವನ್ನು  ಕ್ಷೇತ್ರದ ಶ್ರೀ ಗೋಕರ್ಣ  ಕಲ್ಯಾಣಮಂಟಪದಲ್ಲಿ ಆಕರ್ಷಕವಾಗಿ ನಿರ್ಮಿಸಿದ ಸ್ವರ್ಣಮಯ ಮಂಟಪಗಳಲ್ಲಿ ಪ್ರತಿಷ್ಠಾಪಿಸಲಾಯಿತು. ಕ್ಷೇತ್ರದ ಅಧ್ಯಕ್ಷರಾದ ಎಚ್.ಎಸ್.ಸಾಯಿರಾಮ್, ಉಪಾದ್ಯಕ್ಷರಾದ ರಾಘವೇಂದ್ರ ಕುಳೂರು, […]

ಸರಕಾರದ ಯೋಜನೆಗಳು ಜನಸಾಮಾನ್ಯರ ಬಳಿಗೆ ತಲುಪುವಂತಾಗಬೇಕು : ಸಂಸದ ನಳಿನ್

Wednesday, October 6th, 2010
ಜಿಲ್ಲಾ ಸಣ್ಣ ಕೈಗಾರಿಕಾ ಸಂಘದಲ್ಲಿ `ನಾರು ಕುರಿತ ಕಾರ್ಯಗಾರ'

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಸಣ್ಣ ಕೈಗಾರಿಕಾ ಸಂಘ ಇದರ ನಾರು ಮಂಡಳಿ ಪ್ರಾದೇಶಿಕ ಕಚೇರಿ ಆಶ್ರಯದಲ್ಲಿ ಯೆಯ್ಯಾಡಿಯಲ್ಲಿ ಬುಧವಾರ ಬೆಳಿಗ್ಗೆ `ನಾರು ಕುರಿತ ಕಾರ್ಯಗಾರ’ವನ್ನು  ಸಂಸದ ನಳಿನ್ ಕುಮಾರ್ ಕಟೀಲು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಕಾರ್ಯಗಾರಗಳ ಮೂಲಕ ಸರಕಾರದ ಯೋಜನೆಗಳು ಜನಸಾಮಾನ್ಯರ ಬಳಿಗೆ ತಲುಪುವಂತಾಗಬೇಕು. ಇಂತಹ ಕಾರ್ಯಗಾರಗಳಲ್ಲಿ ಜನರು ಭಾಗವಹಿಸುವ ಮೂಲಕ ಸ್ವಂತ ಉದ್ದಿಮೆಗಳನ್ನು ಅಭಿವೃದ್ಧಿಪಡಿಸಬೇಕು ಎಂದು ಉದ್ಘಾಟನೆ ಬಳಿಕ ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು. ಸರಕಾರದ ಯೋಜನೆಗಳನ್ನು ಅಧಿಕಾರಿಗಳು ಜನರಿಗೆ […]