ಪ್ರಗತಿಗಾಗಿ ಜನಸಂಖ್ಯೆ ನಿಯಂತ್ರಿಸಿ : ಆಶಾ ತಿಮ್ಮಪ್ಪ

Friday, July 11th, 2014
population control

ಮಂಗಳೂರು : ನಮ್ಮ ಪ್ರಗತಿಯ ಯೋಜನೆಗಳನ್ನೆಲ್ಲಾ ಇತಿಮಿತಿಯಿಲ್ಲದ ಜನಸಂಖ್ಯಾ ಸ್ಪೋಟ ನುಂಗಿ ಹಾಕುತ್ತಿದೆ. ನಾವು ಪ್ರಗತಿ ಹೊಂದ ಬೇಕಾದರೆ ಮೊದಲು ನಾವು ಸಣ್ಣ ಪರಿವಾರದ ಆಯ್ಕೆ ಮಾಡಿಕೊಂಡು ನಮ್ಮ ಜನಸಂಖ್ಯೆ ನಿಯಂತ್ರಿಸುವುದೊಂದೇ ನಮಗಿರುವ ದಾರಿ ಎಂದು ದಕ್ಷಿಣಕನ್ನಡ ಜಿಲ್ಲಾ ಪಂಚಾಯತ್ ಅಧ್ಯಕ್ಷ್ಯೆ ಆಶಾ ತಿಮ್ಮಪ್ಪ ಅವರು ಕರೆ ನೀಡಿದ್ದಾರೆ. ಅವರು ಇಂದು ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ,ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆ ವತಿಯಿಂದ ಮಂಗಳಗಂಗೋತ್ರಿ ವಿಶ್ವವಿದ್ಯಾನಿಲಯದ ಪುರುಷರ ವಸತಿಗೃಹ ಸಭಾ […]

ಉಪೇಕ್ಷಿತ ಸಹಕಾರಿ ಕ್ಷೇತ್ರಗಳನ್ನು ಬಲಪಡಿಸಲು ಹರೀಶ್ ಆಚಾರ್ ಕರೆ

Friday, July 11th, 2014
Harish Achar

ಮಂಗಳೂರು : ಸಹಕಾರಿ ಕ್ಷೇತ್ರಗಳ ಎಲ್ಲಾ ರಂಗಗಳನ್ನು ಬಲಪಡಿಸಬೇಕಾಗಿದೆ. ಸಹಕಾರಿ ರಂಗದಲ್ಲಿ ಮಹಿಳಾ ಕ್ಷೇತ್ರ, ಕೈಗಾರಿಕಾ ಕ್ಷೇತ್ರ, ಮೀನುಗಾರಿಕಾ ಕ್ಷೇತ್ರ ಮತ್ತು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕ್ಷೇತ್ರಗಳನ್ನು ಹೆಚ್ಚು ಸಕ್ಷಮವಾಗಿ ಮತ್ತು ಪರಿಣಾಮಕಾರಿಯಾಗಿ ಬೆಳಸಬೇಕಾಗಿದೆ. ಇಂತಹ ಉಪೇಕ್ಷಿತ ಸಹಕಾರಿ ಕ್ಷೇತ್ರಗಳನ್ನು ಒತ್ತು ನೀಡುವ ಮುಖಾಂತರ ಸಹಕಾರಿ ರಂಗವನ್ನು ಬಲಪಡಿಸಬೇಕಾಗಿದೆ. ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ಜಿಲ್ಲಾ ಸಹಕಾರಿ ಯೂನಿಯನ್ ಕಾರ್ಯಕ್ರಮ ಗಳನ್ನು ಹಾಕಿಕೊಳ್ಳಲಿದೆ ಎಂದು ದ. ಕ. ಜಿಲ್ಲಾ ಸಹಕಾರಿ ಯೂನಿಯನ್ ನ ಅಧ್ಯಕ್ಷರಾದ ಶ್ರೀ […]

ಬಲ್ಮಠ-ಬೆಂದೂರ್ವೆಲ್ ರಸ್ತೆಯ ಏಕಮುಖ ಸಂಚಾರ ಅವ್ಯವಸ್ಥೆ ಜಿಲ್ಲಾಧಿಕಾರಿಗೆ ದೂರು

Friday, July 11th, 2014
Bendoor Road

ಮಂಗಳೂರು: ಮಂಗಳೂರಿನ ಸಂಚಾರಿ ಪೊಲೀಸರು ನಗರದ ಬೆಂದೂರುವೆಲ್-ಬಲ್ಮಠ ರಸ್ತೆಯನ್ನು ಏಕಮುಖ ಸಂಚಾರ ವ್ಯವಸ್ಥೆಗೊಳಿಸಿರುವುದರಿಂದ ಸ್ಥಳೀಯ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ಆಸ್ಪತ್ರೆಗೆ ಬರುವ ರೋಗಿಗಳಿಗೆ, ಪರಿಸರದಲ್ಲಿ ವ್ಯಾಪಾರ ವಹಿವಾಟು ನಡೆಸುವ ಉದ್ಯಮಿಗಳಿಗೆ ಹಾಗೂ ಸ್ಥಳೀಯ ನಿವಾಸಿಗಳಿಗೆ ಬಹಳಷ್ಟು ತೊಂದರೆ ಆಗುತ್ತಿದೆ ಎಂದು ಆರೋಪಿಸಿ ಹಾಗೂ ತಕ್ಷಣ ಈ ರಸ್ತೆಯ ಅವ್ಯವಸ್ಥೆಯನ್ನು ಸರಿಪಡಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಬೇಕೆಂದು ಆಗ್ರಹಿಸಿ ಬೆಂದೂರ್ವೆಲ್-ಬಲ್ಮಠ-ಕಂಕನಾಡಿ ಪರಿಸರದ ನಿವಾಸಿಗಳು ಹಾಗೂ ಸ್ಥಳೀಯ ವ್ಯಾಪಾರಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿದರು. ಸದ್ರಿ ರಸ್ತೆಯನ್ನು ಏಕಮುಖ ಸಂಚಾರಿ ರಸ್ತೆಯನ್ನಾಗಿ […]

ಕರಾವಳಿ ಕಾವಲು ಪೋಲೀಸ್ ಠಾಣೆಗೆ ಉಚಿತ ಕರೆ ಸಂಖ್ಯೆ 1093

Friday, July 11th, 2014
Coastal guard

ಮಂಗಳೂರು : ಮಂಗಳೂರು ಕರಾವಳಿ ಕಾವಲು ಪೋಲೀಸ್ ಠಾಣೆಯು ತಲಪಾಡಿ ಕಡಲ ತೀರದಿಂದ ಹೊಸಬೆಟ್ಟು ಗ್ರಾಮದ ವರೆಗೆ ಅಧಿಕಾರ ವ್ಯಾಪ್ತಿಯನ್ನು ಹೊಂದಿದ್ದು, ಹಲವಾರು ಅಪರಾಧ ಪ್ರಕರಣಗಳನ್ನು ದಾಖಲಿಸುವ ಕಾರ್ಯಾಚರಣೆಯಲ್ಲಿ ತೊಡಗಿದೆ. ಸಮುದ್ರದಲ್ಲಿ 12 ನಾಟಿಕಲ್ ಮೈಲ್ ವ್ಯಾಪ್ತಿಯವರೆಗೆ ಇಲಾಖಾ ಬೋಟುಗಳಲ್ಲಿ ಅಹರ್ನಿಶಿಯಾಗಿ ಸಮುದ್ರ ಗಸ್ತು ಕರ್ತವ್ಯದೊಂದಿಗೆ ಅಕ್ರಮವಾಗಿ ಒಳನುಸುಳುವ ಅನುಮಾನಾಸ್ಪದ ಬೋಟುಗಳ ಚಲನವಲನಗಳನ್ನು ಭಯೋತ್ಪಾದಕರ ಬಗ್ಗೆ ನಿಗಾ ವಹಿಸುವ ಹಾಗೂ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿ ಅಪಾಯದಲ್ಲಿ ಸಿಲುಕಿದ ಬೋಟು ಮತ್ತು ಮೀನುಗಾರರನ್ನು, ಜೀವ ಹಾನಿಯಾಗುವ ತುರ್ತು ಸಂದರ್ಭಗಳಲ್ಲಿ […]

ಬಲಿಷ್ಟ ಭಾರತದ ನಿರ್ಮಾಣದ ಬಜೆಟ್ : ಸಂಸದ ನಳಿನ್

Thursday, July 10th, 2014
Nalin kumar

ಮಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರ ದೂರದೃಷ್ಠಿತ್ವದ, ಅಭಿವೃದ್ಧಿಶೀಲ, ಬಲಿಷ್ಟ ಭಾರತದ ನಿರ್ಮಾಣಕ್ಕೆ ಪೂರಕವಾದ ಬಜೆಟನ್ನು ಸಚಿವ ಅರುಣ್ ಜೆಟ್ಲಿ ನೀಡಿದ್ದಾರೆ ಎಂದು ದಕ್ಷಿಣ ಕನ್ನಡ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ. ಜನಸಾಮಾನ್ಯರ ಜೀವನಕ್ಕೆ ಪೂರಕವಾದ ಅಂಶಗಳನ್ನು ಗಮನಿಸಿ, ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡಲಾಗಿದೆ. ಬಟ್ಟೆಬರೆ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಇಳಿಕೆ ಮಾಡಲಾಗಿದೆ. ವೇತನ ವರ್ಗದವರಿಗೆ ಆದಾಯ ಮಿತಿ 2.50ಲಕ್ಷಗೆ ವಿಸ್ತರಿಸಲಾಗಿದೆ. ಕೃಷಿ ಉತ್ತೇಜನ, ಗ್ರಾಮೀಣ ರಸ್ತೆಗಳ ಅಭಿವೃದ್ಧಿ, ಎಲ್ಲಾ ಮನೆಗಳಿಗೆ […]

ಪೊಳಲಿ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ ನಾಡೋಜ ಡಾ. ಕೆ.ಪಿ. ರಾವ್

Thursday, July 10th, 2014
Dr KP Rao

ಮಂಗಳೂರು : ಅಗೋಸ್ತು ತಾ. 2 ಮತ್ತು 3 ರಂದು ಶ್ರೀ ಕ್ಷೇತ್ರ ಪೊಳಲಿಯಲ್ಲಿ ಜರಗಲಿರುವ ದ.ಕ. ಜಿಲ್ಲಾ 19ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರಾಗಿ, ವಿಶ್ವಮಾನ್ಯ ಕನ್ನಡಿಗ ಕಂಪ್ಯೂಟರ್ ವಿಜ್ಞಾನಿ, ಸಾಫ್ಟ್ವೇರ್ ಭಾಷಾ ತಜ್ಞ ಗಣಕ ಮಹೋಪಾಧ್ಯಾಯ – ಡಾ. ಕಿನ್ನಿಕಂಬಳ ಪದ್ಮನಾಭರಾವ್ ಆಯ್ಕೆಯಾಗಿದ್ದಾರೆ. ಸಾಹಿತ್ಯ ಮತ್ತು ಭಾಷಾ ಕ್ಷೇತ್ರ ಮತ್ತು ಗಣಕ ತಂತ್ರಜ್ಞಾನಗಳ ಸಮನ್ವಯದ ಸಂಕೇತವಾಗಿ, ಹೊಸ ಅಶೋತ್ತರಗಳ ನೆಲೆಯಲ್ಲಿ ಅವರಿಗೆ ಅರ್ಹ ಗೌರವ ಸಲ್ಲುತ್ತದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಸ್. […]

ವೆನ್ಲಾಕ್ ಆಸ್ಪತ್ರೆಯಲ್ಲಿ ‘ಜೀವನ ಶೈಲಿ ನಿರ್ವಹಣೆ ಹಾಗೂ ಯೋಗದ ಕರ್ಯಾಗಾರ’

Thursday, July 10th, 2014
Yoga

ಮಂಗಳೂರು : ಆಧುನಿಕ ಜೀವನ ಶೈಲಿಯಿಂದ ಉಂಟಾಗುವ ರೋಗಗಳ ಬಗ್ಗೆ ಆಯುಷ್ ಜನಜಾಗೃತಿ ಅಭಿಯಾನದ ಮೂಲಕ ಜಿಲ್ಲೆಯಾದ್ಯಂತ ಅರಿವು ಮೂಡಿಸುವ ಕಾರ್ಯಕ್ರಮವು ದಿನಾಂಕ 08.07.2014 ರಂದು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ ಜರುಗಿತು. ಕರ್ನಾಟಕ ರಾಜ್ಯ ಸರ್ಕಾರಿ ಆಯುಷ್ ವೈದ್ಯಾಧಿಕಾರಿಗಳ ಸಂಘದ ವತಿಯಿಂದ ಅಂತರಾಷ್ಟ್ರೀಯ ಯೋಗ ತೀರ್ಪುಗಾರರಾದ ಯೋಗರತ್ನ ಶ್ರೀ ಗೋಪಾಲಕೃಷ್ಣ ದೇಲಂಪಾಡಿಯವರಿಂದ ಜೀವನಶೈಲಿ ನಿರ್ವಹಣೆ ಹಾಗೂ ಯೋಗದ ಕರ್ಯಾಗಾರ ಹಮ್ಮಿಕೊಳ್ಳಲಾಯಿತು. ವೆನ್ಲಾಕ್ ಆಸ್ಪತ್ರೆಯ ಶುಶ್ರೂಷಕರು, ಕಿರಿಯ ಆರೋಗ್ಯ ಸಹಾಯಕರು, ನರ್ಸಿಂಗ್ ಕಾಲೇಜು ವಿದ್ಯಾರ್ಥಿಗಳು, ಅರೆವೈದ್ಯಕೀಯ ಸಿಬ್ಬಂದಿಗಳು ಮುಂತಾದ […]

ಮಂಗಳೂರು ವಲಯದ ಪ್ರತ್ಯೇಕ ರೈಲ್ವೆ ವಿಭಾಗ ರಚನೆ ಆಗದಿರುವ ಬಗ್ಗೆ ಅಸಮಾಧಾನ

Wednesday, July 9th, 2014
Protest on 2003

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯವರೇ ಆದ ಕೇಂದ್ರ ರೈಲ್ವೆ ಸಚಿವ ಡಿ.ವಿ. ಸದಾನಂದಗೌಡರು ಮಂಡಿಸಿದ ಈ ಬಾರಿಯ ರೈಲ್ವೆ ಬಜೆಟ್ ಕರ್ನಾಟಕ ರಾಜ್ಯದ ಕರಾವಳಿಯ ಜನತೆಗೆ ಉತ್ತಮ ಕೊಡುಗೆಯನ್ನು ನೀಡಿದೆ. ಇದೊಂದು ಉತ್ಪ್ರೇಕ್ಷೆಗಳಿಲ್ಲದ ಸಮಾಧಾನಕರ ಬಜೆಟ್. ಮಂಗಳೂರು ವಲಯದ ಪ್ರತ್ಯೇಕ ರೈಲ್ವೆ ವಿಭಾಗರಚನೆ ಆಗದಿರುವ ಹಾಗೂ ನೈರುತ್ಯ ವಲಯಕ್ಕೆ ಮಂಗಳೂರು ವಿಭಾಗ ಸೇರ್ಪಡೆಗೊಳಿಸದೇ ಇರುವುದು ಮಾತ್ರ ಬೇಸರದ ವಿಷಯವಾಗಿದೆ. ದ.ಕ. ಜಿಲ್ಲಾಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಎಸ್. ಪ್ರದೀಪ ಕುಮಾರ ಕಲ್ಕೂರ ಅವರ ನೇತೃತ್ವದಲ್ಲಿ […]

ಪಯ್ಣಾರಿ ಮಾಜಿ ಉಪ ಸಂಪಾದಕ, ಹಿರಿಯ ಪತ್ರಕರ್ತ ಫೆಲಿಕ್ಸ್ ಎ. ಡಿ’ಸೋಜಾ ಬೆಂದೂರು ನಿಧನ

Wednesday, July 9th, 2014
Felix A Dsouza

ಮುಂಬಯಿ : ಮುಂಬಯಿ ಕೇಂದ್ರವಾಗಿರಿಸಿ ಸುಮಾರು ಸುವರ್ಣಯುಗ ಪೂರೈಸಿದ್ದ ಪಯ್ಣಾರಿ ಕೊಂಕಣಿ ವಾರಪತ್ರಿಕೆಯ ಉಪ ಸಂಪಾದಕರಾಗಿ ಸೇವೆ ಸಲ್ಲಿಸಿದ್ದ ಹಿರಿಯ ಕೊಂಕಣಿ ಪತ್ರಕರ್ತ ಸೇವಕ ಫೆಲಿಕ್ಸ್ ಅಂತೋನಿ ಡಿ’ಸೋಜಾ ಅವರು ಅನಾರೋಗ್ಯದಿಂದಾಗಿ ಇಂದಿಲ್ಲಿ ಬುಧವಾರ ಬೆಳಿಗ್ಗೆ ಕೆನಡಾದಲ್ಲಿನ ಸುಪುತ್ರನ ನಿವಾಸದಲ್ಲಿ ನಿಧನರಾದರು. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಬೆಂದೂರು ಮೂಲದವರಾಗಿದ್ದ ಮೃತರು ಪತ್ನಿ ಶ್ರೀಮತಿ ಸೆಲಿನ್, ಡಿ’ಸೋಜಾ ಒಂದು ಹೆಣ್ಣು ಡಿ’ಸೋಜಾ (ಲಿನೇಟ್ ಆಶಾ ಡಿ’ಸೋಜಾ), ಒಂದು ಗಂಡು (ಅರುಣ್ ಡಿ’ ಸೋಜಾ) ಸೇರಿದಂತೆ ಬಂಧು ಬಳಗವನ್ನು […]

ಜನಸ್ಪಂದನೆಯ ರೈಲ್ವೇ ಬಜೆಟ್ – ಜಿಲ್ಲಾ ಬಿಜೆಪಿ ಸ್ವಾಗತ

Tuesday, July 8th, 2014
Railway budget

ಮಂಗಳೂರು : ದೇಶದ ರೈಲ್ವೇ ಪ್ರಗತಿಗೆ ಪೂರಕವಾಗಿ ಪ್ರಯಾಣಿಕರ ಸೌಲಭ್ಯ- ಸುರಕ್ಷತೆಗಳಿಗೆ ವಿಶೇಷ ಒತ್ತು ನೀಡಿ, ಕರ್ನಾಟಕದ ಜನತೆಯ ಹಿತವನ್ನೂ ಕಾಪಾಡುವುದರ ಜೊತೆಗೆ, ಜಿಲ್ಲೆಯ ಜನತೆಯ ರೈಲ್ವೇ ಬೇಡಿಕೆಗಳಿಗೆ ಸ್ಪಂದನೆಯನ್ನು ನೀಡಿರುವ ಕೇಂದ್ರ ರೈಲ್ವೇ ಬಜೆಟ ನ್ನು ಬಿಜೆಪಿ ದ.ಕ ಜಿಲ್ಲಾ ಸಮಿತಿ ಸಂಭ್ರಮದಿಂದ ಸ್ವಾಗತಿಸಿದೆ. ಭಾರತೀಯ ರೈಲನ್ನು ಅಂತಾರಾಷ್ಟ್ರೀಯ ಮಟ್ಟಕ್ಕೇರಿಸಲು ಪೂರಕವಾಗಿ ಮುಂಬೈ ಅಹಮದಬಾದ್ಗೆ ದೇಶದ ಪ್ರಪ್ರಥಮ ಬುಲೆಟ್ ಟ್ರೈನನ್ನು ಘೋಷಿಸುವುದರ ಜತೆಗೆ, ಕರ್ನಾಟಕವೂ ಸೇರಿದಂತೆ ದೇಶದಲ್ಲಿ 9 ಹೈಸ್ಪೀಡ್ ರೈಲು ಮತ್ತು 4 ಸೆಮಿ […]