ಮುಲ್ಲಕಾಡುವಿನಲ್ಲಿ ದೊಡ್ಡ ಮರ ಬಿದ್ದು ಕುಂಟಿಕಾನ್ – ಕಾವೂರ್ ರಸ್ತೆ ಸಂಚಾರ ಬಂದ್

Thursday, July 25th, 2013
Mullakadu Tree Fallen

ಮಂಗಳೂರು : ಕುಂಟಿಕಾನ್ ನಿಂದ ಕಾವೂರಿನ ರಸ್ತೆಯಲ್ಲಿ ಮುಲ್ಲಕಾಡುವಿನ ಪೋರ್ಥ್ ಮೈಲ್ ಎಂಬಲ್ಲಿ 23-07-13 ಮಂಗಳವಾರದಂದು 30 ವರ್ಷದ ಹಳೆಯ ಮಾವಿನ ಮರವು  ಹೈ-ಟೆನ್ಶನ್ ವಿದ್ಯುತ್ ಕಂಬಗಳ ಮೇಲೆ ಬಿದ್ದು 4 ಕಂಬಗಳು ಕುಸಿದು ಬಿದ್ದಿದೆ. ಇದರ ಪರಿಣಾಮುವಾಗಿ ಬೆಳಿಗ್ಗೆ 6ರಿಂದ ಸಂಜೆ 4ರ ವರೆಗೆ ರಸ್ತೆ ಸಂಚಾರ ಸ್ಥಗಿತವಾಗಿತ್ತು. ಯಾವುದೇ ಪ್ರಾಣಾಪಾಯ ಸಂಭವಿಸಲಿಲ್ಲ, ಮರವು ಬೃಹತ್ ಗಾತ್ರದಲ್ಲಿ ಬೆಳೆದ ಪರಿಣಾಮವಾಗಿ ತನ್ನ ಹೊರೆಯನ್ನು ತಾಳಲಾರದೆ ಕುಸಿಯಿತು. ಈ ಮರವು ಹಿಂದಿನ ದಿನ ರಾತ್ರಿಯುಂದಲೇ ಕಸಿಯಲು ಪ್ರಾರಂಭವಾಗಿದೆ ಎಂದು […]

ಮಣಿಪಾಲ್ ಆರೋಗ್ಯ ಕಾರ್ಡ್ ಪಡೆಯಲು ಕೊನೆಯ ದಿನಾಂಕ ಜುಲೈ 31

Wednesday, July 24th, 2013
kmc Health Card

ಮಂಗಳೂರು: ದ.ಕನ್ನಡ ಮತ್ತು ಉತ್ತರ ಕೇರಳದಲ್ಲಿ ಮಣಿಪಾಲ್ ಆರೋಗ್ಯ ಕಾರ್ಡ್ ಯೋಜನೆಯ 2013ನೇ ನೊಂದಾವಣೆಯು ಪ್ರಾರಂಭಗೊಂಡಿದೆ. ಇದು ಅತ್ಯಂತ ಕಡಿಮೆ ಬೆಲೆಗೆ ಲಭ್ಯವಿದ್ದು ಒಳ ಮತ್ತು ಹೊರರೋಗಿಗಳ ವಿಭಾಗದಲ್ಲಿ ಬಹುದೊಡ್ಡ ಮೊತ್ತದ ರಿಯಾಯಿತಿ ಪಡೆಯಬಹುದು. ಕಾರ್ಡ್ ನ ನೊಂದಾವಣೆಯು ಜುಲೈ 31 ಕೊನೆಗೊಳ್ಳುವುದೆಂದು ಕೆ.ಎಂ.ಸಿ. ಆಸ್ಪತ್ರೆಯ ಡೀನ್ ಡಾ.ಎಂ.ವಿ.ಪ್ರಭುರವರು ಮಂಗಳವಾರ ನಗರದಲ್ಲಿ ನಡೆದ ಸುದ್ದಿಘೊಷ್ಠಿಯಲ್ಲಿ ತಿಳಿಸಿದರು. ಕೆ.ಎಂ.ಸಿ. ಆಸ್ಪತ್ರೆಯ ಮಧುಸೂದನ್ ಉಪಾದ್ಯರವರು ಕಾರ್ಡ್ ನ ಪ್ರಯೋಜನಗಳ ಬಗ್ಗೆ ವಿವರಿಸುತ್ತಾ  ಕೆ.ಎಂ.ಸಿ. ಆಸ್ಪತ್ರೆ ಅತ್ತಾವರದಲ್ಲಿ ಉಚಿತ ವೈದ್ಯಕೀಯ ಸಮಾಲೋಚನೆ, […]

ಜುಲೈ 28ರಂದು ನಿಡ್ಡೋಡಿಯಲ್ಲಿ ಉಪವಾಸ ಸತ್ಯಾಗ್ರಹ

Tuesday, July 23rd, 2013
Niddodi ultra mega power plant

ನಿಡ್ಡೋಡಿ :  ಜುಲೈ 22ರಂದು ಸಂಸದ ನಳಿನ್ ಕುಮಾರ್ ಕಟೀಲ್ ನಿಡ್ಡೋಡಿಯ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಯಾಗಳಿರುವ ಪ್ರದೇಶಕ್ಕೆ ಸ್ಥಳ ಪರಿಶೀಲನೆಗಾಗಿ ಭೇಟಿ ನೀಡಿದರು.  ನಿಡ್ಡೋಡಿ ಗ್ರಾಮವು ಕೃಷಿಗೆ ಅನುಕೂಲಕರವಾದ ಭೂಮಿಯಾಗಿದೆ. ಇಲ್ಲಿ ಸರಕಾರವು 4000 ಮೆ.ವ್ಯಾಟ್ ಉಷ್ಣವಿದ್ಯುತ್ ಸ್ಥಾವರ ಸ್ಥಾಪನೆಯ ಯೋಜನೆಯನ್ನು ಹಮ್ಮಿಕೊಂಡಿರುವ ವಿಷಯ ನಮಗೆ ತಿಳಿದಿದೆ. ಸ್ಥಾವರ ಸ್ಥಾಪನೆಯಾದರೆ ಭತ್ತ, ಕಬ್ಬು, ತೆಂಗಿನಮರ ಮತ್ತು ಬಾಳೆಹಣ್ಣು ಇತ್ಯಾದಿ ಬೆಳೆಗಳು ನಾಶವಾಗುತ್ತದೆ ಎಂದು ಮಾತೃಭೂಮಿ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಅಲ್ಪೋನ್ಸ ಡಿ’ ಸೋಜ ತಿಳಿಸಿದರು. ನಮಗೆ […]

ಟ್ಯಾಕ್ಷಿಮೆನ್ಸ್ ಮತ್ತು ಮ್ಯಾಕ್ಷಿಕ್ಯಾಬ್ ಎಸೋಸಿಯನ್ ನಿಂದ ಜುಲೈ 23 ರಂದು ಬೃಹತ್ ರಕ್ತದಾನ ಮತ್ತು ಉಚಿತ ನೇತ್ರ ಸೇವಾ ಶಿಬಿರ

Tuesday, July 23rd, 2013
taxi association

ಮಂಗಳೂರು : ದ.ಕ. ಜಿಲ್ಲಾ ಟ್ಯಾಕ್ಷಿಮೆನ್ಸ್ ಮತ್ತು ಮ್ಯಾಕ್ಷಿಕ್ಯಾಬ್ ಎಸೋಸಿಯನ್ ಇವರಿಂದ  ಜುಲೈ 23ರಂದು ಬೃಹತ್ ರಕ್ತದಾನ ಮತ್ತು  ಉಚಿತ ನೇತ್ರ ಸೇವಾ ಶಿಬಿರವು ಲಯನ್ಸ್ ಸೇವಾ ಮಂದಿರ, ಕದ್ರಿ, ಮಲ್ಲಿಕಟ್ಟೆಯಲ್ಲಿ ಬೆಳಿಗ್ಗೆ 8.00 ರಿಂದ 12.30ರ ತನಕ ಜರುಗಲಿರುವುದು ಎಂದು ಲಾಲ್ಬಾಗ್ ಲಯನ್ಸ ಕ್ಲಬ್ಬಿನ ಅಧ್ಯಕ್ಷ ಉಮನಾಥ್ ಇವರು ಇಂದು ಸೋಮವಾರ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾ ಘೊಷ್ಟಿಯಲ್ಲಿ ತಿಳಿಸಿದರು. ಈ ಶಿಬಿರದ ಉದ್ಘಾಟನೆಯನ್ನು  ಕ್ಷೇಮ ಮಲ್ಲಿಕಟ್ಟೆ ಇಲ್ಲಿನ ಪ್ರೊ. ಚಾನ್ಸೆಲರ್ ಆದ ಡಾ. ಶಾಂತರಾಮ್ […]

ಪೆರ್ನೆಯಲ್ಲಿ ಸಂಭವಿಸಿದ ಅನಿಲ ದುರಂತದ ಸಂತ್ರಸ್ತರಿಗೆ 43.2 ಲಕ್ಷ ಮೊತ್ತದ ಚೆಕ್ ವಿತರಣೆ

Monday, July 22nd, 2013
Perne Accident

ಬಂಟ್ವಾಳ: ಹಿಂದೂಸ್ಥಾನ್ ಪೆಟ್ರೋಲಿಯಂ ಕಂಪೆನಿಯಿಂದ  ಪೆರ್ನೆಯಲ್ಲಿ ಸಂಭವಿಸಿದ ಅನಿಲ ದುರಂತದ ಸಂತ್ರಸ್ತರಿಗೆ ಒಟ್ಟು 43.2 ಲಕ್ಷ ಮೊತ್ತದ ಚೆಕ್ಕನ್ನು ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಭಾನುವಾರ ಬಿ.ಸಿ.ರೋಡ್ ನ ಸಚಿವರ ಕಚೇರಿಯಲ್ಲಿ ವಿತರಿಸಿದರು. ಒಟ್ಟು 14 ಮಂದಿಗೆ ಪರಿಹಾರ ಧನವಾಗಿ 43.2 ಲಕ್ಷ ಮೊತ್ತದ ಚೆಕ್ ನ್ನು ವಿತರಿಸಲಾಯಿತು. ದುರಂತದಲ್ಲಿ ಜೀವಹಾನಿ ಮತ್ತು  ಮನೆ ಅಪಾರ ಆಸ್ತಿ ನಷ್ಟ ಉಂಟಾಗಿತ್ತು.  ಸ್ಥಳೀಯ ನಿವಾಸಿಗಳಾದ ಸಂದರ ರೈ ಅವರಿಗೆ 7.43 ಲಕ್ಷ, […]

ಪಡೀಲ್ ನ ಮೊರ್ನಿಂಗ್ ಮಿಸ್ಟ್ ಹೋಂ ಸ್ಟೇ ದಾಳಿ 38ನೇ ಆರೋಪಿ ಬಂಧನ

Monday, July 22nd, 2013
Homestay attack

ಮಂಗಳೂರು: ಪಡೀಲ್ ನ ಮೊರ್ನಿಂಗ್ ಮಿಸ್ಟ್ ಹೋಂ ಸ್ಟೇ ಮೇಲೆ ನಡೆದ ದಾಳಿಯಲ್ಲಿ ಭಾಗಿಯಾದ 38ನೇ ಆರೋಪಿ ಕಂದಾವರದ ಮನೋಜ್ ಎಂಬಾತನನ್ನು ಭಾನುವಾರ ಕಂಕನಾಡಿ ಪೊಲೀಸರು ಬಂಧಿಸಿದ್ದಾರೆ. ಮನೋಜ್ s/0 ಸುಂದರ ಮೂಡಬಿದರೆಯಲ್ಲಿರುವುದನ್ನು ಖಚಿತಪಡಿಸಿಕೊಂಡ ಕಂಕನಾಡಿ ಪೊಲೀಸರು ಬಜ್ಪೆ ಪೊಲೀಸರ ನೆರವಿನೊಂದಿಗೆ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. 44 ಆರೋಪಿಗಳಲ್ಲಿ ಈತ 38ನೇ ಆರೋಪಿಯಾಗಿದ್ದಾನೆ. ಇನ್ನು ಆರು ಮಂದಿ ಆರೋಪಿಗಳ ಬಂಧನವಾಗಬೇಕಾಗಿದೆ. 2012ರ ಜುಲೈ 28ರಂದು ನಡೆದ ಹೋಮ್ ಸ್ಟೇ ದಾಳಿಯಲ್ಲಿ ಬಂಧನಕ್ಕೊಳಗಾಗಿದ್ದ ಆರೋಪಿಗಳ ಪೈಕಿ 17 ಮಂದಿ […]

ಹತ್ತನೇ ತರಗತಿ ವಿದ್ಯಾರ್ಥಿನಿಯನ್ನು ಅತ್ಯಾಚಾರ ಮಾಡಿದ ಇಬ್ಬರು ಆರೋಪಿಗಳ ಬಂಧನ

Monday, July 22nd, 2013
Kerala Rapist

ಕಾಸರಗೋಡು:  ಹತ್ತನೇ ತರಗತಿ ವಿದ್ಯಾರ್ಥಿನಿಯನ್ನು ಶಾಲೆಗೆ ಬಿಡುವುದಾಗಿ ಹೇಳಿ ರಿಕ್ಷಾದಲ್ಲಿ ಕರೆದುಕೊಂಡು ಹೋಗಿ ತನ್ನ ಗೆಳೆಯನ ಜೊತೆ ಸೇರಿ ಅತ್ಯಾಚಾರ ಮಾಡಿದ ಇಬ್ಬರನ್ನು ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ. ಬಾರಡ್ಕ ನಿವಾಸಿ ಆಟೋರಿಕ್ಷಾ ಚಾಲಕ ಇಬ್ರಾಹಿಂ ಬಾಲಕಿಯನ್ನು ಜು.17ರಂದು ಬಲವಂತವಾಗಿ ರಿಕ್ಷಾದಲ್ಲಿ ಕರೆದುಕೊಂಡು ಹೋಗಿ ತನ್ನ ಗೆಳೆಯ ಖಾಲಿದ್ ನೊಂದಿಗೆ ಜನವಾಸವಿಲ್ಲದ ಮನೆಯಲ್ಲಿ ಅತ್ಯಾಚಾರವೆಸಗಿದ್ದಾರೆ ಎಂದು ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಲಭಿಸಿದ ದೂರಿನನ್ವಯ ತನಿಖೆ ನಡೆಸಿದಾಗ ಆರೋಪಿಗಳ ಹೆಸರು ಬಹಿರಂಗವಾಗಿದೆ.

ದೇವಾಡಿಗ ಸಮಾಜದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ 6ಲಕ್ಷ ರೂ ಮೊತ್ತದ ವಿದ್ಯಾರ್ಥಿ ವೇತನ ವಿತರಣೆ

Monday, July 22nd, 2013
Devadiga Sanga

ಮಂಗಳೂರು : ಕರ್ನಾಟಕ ರಾಜ್ಯ ದೇವಾಡಿಗ ಸಂಘ ಹಾಗೂ ದುಬೈ ದೇವಾಡಿಗರ ಸಂಘದ ವತಿಯಿಂದ ಬಾನುವಾರ ನಗರದ ಮಣ್ಣಗುಡ್ಡ, ಗಾಂದಿನಗರದಲ್ಲಿರುವ ಕರ್ನಾಟಕ ರಾಜ್ಯ ದೇವಾಡಿಗ ಸಂಘದ ಸಮಾಜ ಭವನದಲ್ಲಿ  ದೇವಾಡಿಗ ಸಮಾಜದ ಪ್ರತಿಭಾವಂತ ಎಸ್‌ಎಸ್‌ಎಲ್‌ಸಿ, ಪಿಯುಸಿ ಮತ್ತು ಡಿಗ್ರೀ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಹಾಗೂ ಅರ್ಥಿಕವಾಗಿ ಹಿಂದುಳಿದ ಅರ್ಹ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವು ಜರಗಿತು. ದುಬೈ ದೇವಾಡಿಗರ ಸಂಘದ ಅಧ್ಯಕ್ಷರಾದ ಹರೀಶ್ ಸೇರಿಗಾರ್ ಅವರು ಮಾತನಾಡಿ, ನಾವು ಸಮಾಜದಲ್ಲಿ ಇತರರಿಗೆ ಸಾಧ್ಯವಾದಷ್ಟು ಸಹಾಯ ಮಾಡಬೇಕು. ಒಂದು ಕೈ ಯಿಂದ […]

ಮಲ್ಪೆ ಬೀಚ್‌ ನಲ್ಲಿ ಬಾಲಕಿಯ ಮೇಲೆ ಬೀದಿ ನಾಯಿಗಳ ದಾಳಿ, ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು

Sunday, July 21st, 2013
Dog fighting

ಮಲ್ಪೆ: ಮಲ್ಪೆ ಬೀಚ್‌ ಕಡಲತೀರದಲ್ಲಿ ಮೀನು ಹಿಡಿಯುವುದನ್ನು ನೋಡಲು ಹೋಗಿದ್ದ ಬಾಲಕಿಯೊರ್ವಳ ಮೇಲೆ ಏಳೆಂಟು ನಾಯಿಗಳು ದಾಳಿ ನಡೆಸಿ ಗಂಭೀರಗಾಯಗೊಳಿಸಿದ ಘಟನೆ ಶನಿವಾರ ಸಂಜೆ ನಡೆದಿದೆ. ಬಾಲಕಿಯನ್ನು ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಲ್ಪೆ ಕೊಳದಲ್ಲಿ ವಾಸವಾಗಿರುವ ಪ್ರಕಾಶ್‌ ಅವರ ಮಗಳು ಸೌಂದರ್ಯ (6) ನಾಯಿ ದಾಳಿಗೆ ಒಳಗಾದ ಮಗು. ತಾಯಿಯ ಹಿಂದೆ ನಡೆದು ಹೋಗುತ್ತಿದ್ದ ಮಗುವಿನ ಮೇಲೆ ಸುಮಾರು 7-8 ನಾಯಿಗಳು ಏಕಾಏಕಿ  ದಾಳಿ ನಡೆಸಿ ಬೆನ್ನು, ತೊಡೆ ಮತ್ತು ಕಾಲುಗಳಿಗೆ ಕಚ್ಚಿ ತೀವ್ರ ಗಾಯಗೊಳಿಸಿದೆ. ಈ […]

ಏರ್‌ ಇಂಡಿಯಾ ವಿಮಾನದಲ್ಲಿ ಆಕ್ರಮ ಚಿನ್ನ ಸಾಗಾಟ ; 52 ಲಕ್ಷ ರೂ. ಮೌಲ್ಯದ 2.16 ಕೆ.ಜಿ ಚಿನ್ನ ವಶ

Sunday, July 21st, 2013
Illigal Gold

ಮಂಗಳೂರು: ಶನಿವಾರ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ ಮತ್ತು ಕಸ್ಟಮ್ಸ್‌ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ  ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನದಲ್ಲಿ ಅಕ್ರಮ ಚಿನ್ನ ಸಾಗಾಟದ ಎರಡು ಪ್ರಕರಣಗಳನ್ನು ಪತ್ತೆಹಚಿದ್ದಾರೆ. ಆಕ್ರಮ ಚಿನ್ನ ಸಾಗಾಟ ಮಾಡುತ್ತಿದ್ದ ದಂಪತಿ ಸಹಿತ ಒಟ್ಟು ಮೂವರನ್ನು ಬಂಧಿಸಿ 52 ಲಕ್ಷ ರೂ. ಮೌಲ್ಯದ 2.16 ಕೆ.ಜಿ ಬಂಗಾರವನ್ನು ವಶಪಡಿಸಿ ಕೊಂಡಿದ್ದಾರೆ. ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ  ಬೆಳಗ್ಗೆ 9.30 ಕ್ಕೆ  ತಲುಪಿದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನದಲ್ಲಿ ಈ […]