ಪೊಳಲಿ, ಕಟೀಲು, ಕುತ್ತಾರು ಕೊರಗಜ್ಜ ದೈವದ ಆದಿಕ್ಷೇತ್ರಕ್ಕೆ ಭೇಟಿ ನೀಡಿದ ನಟಿ ರಕ್ಷಿತಾ ಪ್ರೇಮ್ ಮತ್ತು ತಂಡ

Wednesday, October 6th, 2021
Rakshitha-Kuttaru

ಮಂಗಳೂರು : ಝೀ ಕನ್ನಡ ವಾಹಿನಿಯಲ್ಲಿ ಕಾಮಿಡಿ ಕಿಲಾಡಿ, ಡಾನ್ಸ್ ಕರ್ನಾಟಕ ರಿಯಾಲಿಟಿ ಶೋ ಜಡ್ಜ್ ಕನ್ನಡ ಚಿತ್ರರಂಗದ ಖ್ಯಾತ ನಟಿ ರಕ್ಷಿತಾ ಪ್ರೇಮ್ ಹಾಗೂ ಡಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋ ಕೊರಿಯೋಗ್ರಾಫರ್ ರಾಹುಲ್ ಮತ್ತು ಪ್ರಜ್ವಲ್ ಪೊಳಲಿ ಶ್ರೀ ರಾಜರಾಜೇಶ್ವರಿ ಮತ್ತು ಕಟೀಲು ದುರ್ಗಾಪರಮೇಶ್ವರಿ ಕ್ಷೇತ್ರ ದರ್ಶನ ನಡೆಸಿ ಇಂದು ಕುತ್ತಾರು ಕೊರಗಜ್ಜನ ಆದಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಡಾನ್ಸ್ ಕರ್ನಾಟಕ ಡ್ಯಾನ್ಸ್ ರಿಯಾಲಿಟಿ ಶೋ ಕೊರಿಯೋಗ್ರಾಫರ್ ರಾಹುಲ್ ಅವರ ಹರಕೆ ತೀರಿಸುವುದಕ್ಕೋಸ್ಕರ ನಟಿ […]

ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ನೂತನ ಆಕ್ಸಿಜನ್ ಉತ್ಪಾದನಾ ಘಟಕ ಉದ್ಘಾಟನೆ

Wednesday, October 6th, 2021
Putturu-Oxygen-Plant

ಪುತ್ತೂರು:  ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ನಿರ್ಮಾಣಗೊಂಡಿರುವ ನೂತನ ಆಕ್ಸಿಜನ್ ಉತ್ಪಾದನಾ ಘಟಕವನ್ನು ಸಚಿವ ಎಸ್.ಅಂಗಾರ ಬುಧವಾರ ಉದ್ಘಾಟನೆಗೊಳಿಸಿದರು. ಕ್ಯಾಂಪ್ಕೋ ಮತ್ತು ಜಿಲ್ಲಾಡಳಿತದ ಸಹಯೋಗದೊಂದಿಗೆ ಸುಮಾರು ಒಂದು ಕೋಟಿ ವೆಚ್ಚದಲ್ಲಿ  ಆಕ್ಸಿಜನ್ ಘಟಕ ಸಿದ್ಧಗೊಂಡಿದೆ.  ಕಾಂಪ್ಕೋ ಸಂಸ್ಥೆ 78 ಲಕ್ಷರೂ ವೆಚ್ಚ ಭರಿಸಿದೆ. ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಅವರು ಆನ್‌ಲೈನ್ ಮೂಲಕ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೋವಿಡ್ ಪ್ರಥಮ ಮತ್ತು ಎರಡನೇ ಅಲೆಯಲ್ಲಿ ಆಮ್ಲಜಕದ ಬೇಡಿಕೆಯನ್ನು ಗಮನಿಸಿ ಆಮ್ಲಜನಕದ ಬೇಡಿಕೆಗೆ ಶಾಶ್ವತ ಪರಿಹಾರಕ್ಕಾಗಿ ನಮ್ಮ ಸರಕಾರ ನಿರಂತರ ಶ್ರಮ […]

ನಮಗೆ ಬಜರಂಗದಳ ಅಂದ್ರೆ ರಕ್ಷಣೆ ಕೊಡುವ ದೇವರುಗಳು : ಚೈತ್ರಾ ಕುಂದಾಪುರ

Wednesday, October 6th, 2021
Surathkal-DurgaVahini

ಮಂಗಳೂರು : ಇಪ್ಪತ್ತು ಪರ್ಸೆಂಟ್ ಇರುವ ನೀವೇ ಇಷ್ಟು ಹಾರಾಡಿದ್ರೆ ಎಪ್ಪತ್ತು ಪರ್ಸೆಂಟ್ ಇರುವ ನಾವೆಷ್ಟು ಹಾರಡಬೇಡ, ಮರ್ಯಾದೆಯಿಂದ ಲವ್‌ ಜಿಹಾದ್‌ ಬಿಟ್ರೆ ನೀವು ಬದುಕಿಕೊಳ್ಳುತ್ತೀರಿ ಇಲ್ಲದಿದ್ದರೆ ಪ್ರತಿ ಮನೆಯ ಮುಸಲ್ಮಾನ ಹೆಣ್ಣು ಮಕ್ಕಳ ಹಣೆಗೆ ಕುಂಕುಮ ಇಟ್ಟು ಕರ್ಕೊಂಡು ಬರುತ್ತೇವೆ ಎಂದು ಚೈತ್ರಾ ಕುಂದಾಪುರ ಹೇಳಿದ್ದಾರೆ. ಸುರತ್ಕಲ್ ನಲ್ಲಿ  ಮಂಗಳವಾರ  ಬಜರಂಗ ದಳ, ದುರ್ಗಾ ವಾಹಿನಿಯಿಂದ ಬೃಹತ್ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ನಮ್ಮ ಊರಿನ ಆಶಾರನ್ನು ಆಯೇಶಾ ಮಾಡಿದಿರಿ, ತಾರಾರನ್ನು ತಮನ್ನಾ ಮಾಡಿದಿರಿ ಇನ್ನು ಸಹಿಸಿಕೊಂಡು ಇರೋಕೆ […]

ಪೆಟ್ರೋಲ್ ಬಂಕ್‌ನ ಮ್ಯಾನೇಜರ್ ದರೋಡೆ, ಮಾಜಿ ಉದ್ಯೋಗಿ ಸೇರಿ, ನಾಲ್ವರ ಬಂಧನ

Tuesday, October 5th, 2021
Petrol Bunk

ಮಂಗಳೂರು : ಆರ್ಶೀವಾದ್ ಪೆಟ್ರೋಲ್ ಬಂಕ್‌ನ ಮ್ಯಾನೇಜರ್ ಗೆ ಬ್ಯಾಟ್‌‌ನಿಂದ ಹಲ್ಲೆ ನಡೆಸಿ, 4.20 ಲಕ್ಷ ರೂ. ಹಣ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪೆಟ್ರೋಲ್ ಬಂಕ್‌ನ ಮ್ಯಾನೇಜರ್ ಬೋಜಪ್ಪನವರು ಸೆಪ್ಟೆಂಬರ್ 28 ರಂದು ಹಣ ಕಟ್ಟಲು ಬ್ಯಾಂಕಿಗೆ ಹೋಗುತ್ತಿದ್ದಾಗ ಘಟನೆ ನಡೆದಿತ್ತು. ಬಂಧಿತ ಆರೋಪಿಗಳನ್ನು ಶಕ್ತಿನಗರದ ಶ್ಯಾಮ್ ಶಂಕರ್, ಕುಡುಪು ಮೂಲದ ಅಭಿಷೇಕ್, ಕಾರ್ತಿಕ್ ಮತ್ತು ಸಾಗರ್ ಎಂದು ಗುರುತಿಸಲಾಗಿದೆ. ಘಟನೆಯ ಬಗ್ಗೆ  ಮಾಹಿತಿ ನೀಡಿದ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್, ಆರೋಪಿ  ಶ್ಯಾಮ್ ಶಂಕರ್ ಅದೇ ಪೆಟ್ರೋಲ್ […]

ಸಂಬಳ ಕೇಳಲು ಬಂದ ನೌಕರನ ಮೇಲೆ ಹಾರಿಸಿದ ಗುಂಡು ಮಗನಿಗೆ ತಗುಲಿ ಗಂಭೀರ

Tuesday, October 5th, 2021
vaishnavi-cargo

ಮಂಗಳೂರು : ಪಾರ್ಸೆಲ್ ಸಾಗಾಟದ  ವೈಷ್ಣವಿ ಎಕ್ಸ್ ಪ್ರೆಸ್ ಕಾರ್ಗೋ ಪ್ರೈ. ಲಿ.  ಸಂಸ್ಥೆಯ ನೌಕರರ ಸಂಬಳ ಕೇಳಿದ್ದಕ್ಕೆ, ಮಾಲೀಕ ಗುಂಡು ಹಾರಿಸಿದಾಗ ಅದು ಮಗನ ತಲೆಗೆ ತಾಗಿ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾದ ಘಟನೆ ನಗರದ ಮೊರ್ಗನ್ಸ್ ಗೇಟ್ ಬಳಿ ಮಂಗಳವಾರ ಸಂಜೆ ನಡೆದಿದೆ. ಸಂಬಳ ಕೇಳಲು ಬಂದ ನೌಕರನ ಮೇಲಿನ ಸಿಟ್ಟಿನಲ್ಲಿ ಸಂಸ್ಥೆಯ ಮಾಲೀಕ ರಾಜೇಶ್ ಪ್ರಭು ಎರಡು ಸುತ್ತು ಗುಂಡು ಹಾರಿಸಿದ್ದರು,  ಅದನ್ನು ತಡೆಯಲು ಬಂದ ತನ್ನ ಮಗನ ಮೇಲೆಯೇ ಗುಂಡು‌ ತಗುಲಿದೆ ಎನ್ನಲಾಗಿದೆ. ಕೋಷಿಷ್ಟ […]

ಕಂಕನಾಡಿ ಬಲ್ಲಾಳ್‌ಗುಡ್ಡೆ ಪ್ರದೇಶದಲ್ಲಿ ಚಿರತೆ, 25ಕ್ಕೂ ಅಧಿಕ ಬೀದಿ ನಾಯಿಗಳು ನಾಪತ್ತೆ

Monday, October 4th, 2021
Chita

ಮಂಗಳೂರು:  ಸೋಮವಾರ ಮಧ್ಯಾಹ್ನ 12 ಗಂಟೆ ವೇಳೆಗೆ ಕಂಕನಾಡಿ ಬಲ್ಲಾಳ್‌ಗುಡ್ಡೆ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಸ್ಥಳೀಯರು ಕೂಡಲೇ ಕಾರ್ಪೊರೇಟರ್‌ ಕೇಶವ್‌ ಮರೋಳಿ ಅವರ ಮೂಲಕ ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಮಂಗಳೂರು ವಲಯ ಅರಣ್ಯಾಧಿಕಾರಿ ಪ್ರಶಾಂತ್‌ ಪೈ ನೇತೃತ್ವದ ತಂಡ ಆಗಮಿಸಿ ಶೋಧ ನಡೆಸಿದೆ. ಕಂಕನಾಡಿಯ ಕನಪದವು, ಮಾರ್ತ ಕಾಂಪೌಂಡ್‌, ಬಲ್ಲಾಳ್‌ಗುಡ್ಡೆ ವ್ಯಾಪ್ತಿಯಲ್ಲಿಅರಣ್ಯಾಧಿಕಾರಿಗಳು ಶೋಧ ನಡೆಸಿದಾಗ ನಾಲ್ಕು ಕಡೆಗಳಲ್ಲಿ ಚಿರತೆಯ ಹೆಜ್ಜೆ ಗುರುತು ಪತ್ತೆಯಾಗಿದ್ದು, ಆ ಗುರುತನ್ನು ಅಧಿಕಾರಿಗಳು ಕಲೆ ಹಾಕಿದ್ದಾರೆ. ಕಂಕನಾಡಿ ವ್ಯಾಪ್ತಿಯ ಎರಡು ಕಡೆ […]

ಮೀನುಗಾರರ ಬಲೆಗೆ ಬಿದ್ದ ಭಾರೀ ಗಾತ್ರದ ಗಿಟಾರ್ ಶಾರ್ಕ್ ಮೀನು

Monday, October 4th, 2021
Shark Fish

ಮಲ್ಪೆ :  ಅಪರೂಪದ ಹಾಗೂ ಭಾರೀ ಗಾತ್ರದ ಗಿಟಾರ್ ಶಾರ್ಕ್ ಮೀನು ಮಲ್ಪೆ ಬಂದರಿನಿಂದ ಸುಮಾರು 20 ನಾಟೇಕಲ್ ದೂರದಲ್ಲಿ ಆಳ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಬೋಟಿಗೆ ಬಿದ್ದಿದೆ. ಅಕ್ಕಪಕ್ಕ ಬೆನ್ನ ಮೇಲೆ ಅಗಲ ರೆಕ್ಕೆಯಿರುವ ಈ ಮೀನು ಲುಕ್ಮನ್ ಎಂಬವರಿಗೆ ಸೇರಿದ ಮೀನುಗಾರಿಕಾ ಬೋಟಿನಲ್ಲಿನ ಮೀನುಗಾರರು ಬೀಸಿದ ಬಲೆಗೆ ಬಿದ್ದಿದೆ. ಅಂಜಲ್, ಬಂಗುಡೆ ಮೀನಿನ ಜೊತೆಗೆ ಈ ಮೀನು ಬಿದ್ದಿದೆ. ಸ್ಥಳೀಯವಾಗಿ ಇದಕ್ಕೆ ನೆಮ್ಮೀನ್ ಹಾಗೂ ಹೆಲಿಕಾಪ್ಟರ್ ಫಿಶ್ ಎಂಬುದಾಗಿ ಕರೆಯುತ್ತಾರೆ. ಈ ಮೀನು ಸುಮಾರು 84 ಕೆ.ಜಿ. ತೂಗುತ್ತಿತ್ತು. ಕೇರಳಿಗರು […]

ಹೆಂಡತಿ ಮಗುವನ್ನು ಹೊರಗೆ ಹಾಕಿ ಮೂರನೇ ಮದುವೆಯಾದ ಭೂಪ

Monday, October 4th, 2021
Raghavendra Kulakarni

ಮೂಡಬಿದ್ರೆ :  ಬೆಳುವಾಯಿ ಗ್ರಾಮದ ತರುಣಿಯೊಬ್ಬರನ್ನು ಮದುವೆಯಾಗಿದ್ದ ಬೆಂಗಳೂರಿನ ರಾಘವೇಂದ್ರ ಕುಲಕರ್ಣಿ ಎಂಬಾಂತ ಇದೀಗ ತನ್ನ ಪತ್ನಿಗೆ ವಂಚಿಸಿ ಮತ್ತೊಂದು ಮದುವೆಯಾಗಿದ್ದು, ಈ ಬಗ್ಗೆ ಮಂಗಳೂರಿನ ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಬೆಂಗಳೂರಿನ ಬಸವೇಶ್ವರ ಬಡವಾಣೆಯ ಅಂದ್ರಳ್ಳಿ ನಿವಾಸಿ ರಾಘವೇಂದ್ರ ಕುಲಕರ್ಣಿ ಎಂಬಾತ 2017 ರ ಜೂನ್ 18 ರಂದು ಮೂಡಬಿದ್ರೆಯ ತರುಣಿಯನ್ನು ಬೆಂಗಳೂರಿ ಲಗ್ಗೇರಿಯಲ್ಲಿರುವ ರಾಘವೇಂದ್ರ ಮಠದಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾಗಿದ್ದ. ಮದುವೆ ಸಂದರ್ಭದಲ್ಲಿ ಒಂದು ಲಕ್ಷ ರೂಪಾಯಿ ವರದಕ್ಷಿಣೆ ಕೂಡ ಪಡೆದಿದ್ದ. ಮದುವೆಯಾದ […]

ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ, ಪರಿಸರ ಕಾಳಜಿಯನ್ನು ಮೂಡಿಸುವ ಪ್ರಯತ್ನ ನಡೆಯಬೇಕು : ಮೋಹನದಾಸ ಸ್ವಾಮೀಜಿ

Sunday, October 3rd, 2021
Manila Sree

ಧರ್ಮಸ್ಥಳ  : ಭಜನಾ ಮಂಡಳಿಯ ಸದಸ್ಯರು ತಮ್ಮ ತಮ್ಮ ಪ್ರದೇಶದ ಅಭಿವೃದ್ಧಿಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು. ಇದಕ್ಕಾಗಿ ನಾಯಕತ್ವ ಗುಣಗಳನ್ನು ಬೆಳೆಸಿಕೊಳ್ಳುವುದು ಎಂದು  ಅತ್ಯಾವಶ್ಯಕ ಎಂದು ಶ್ರೀ ಧಾಮ ಮಾಣಿಲ ಸೇವಾಧಾಮದ ಶ್ರೀ ಮೋಹನದಾಸ ಸ್ವಾಮೀಜಿಯವರು ಮಾತನಾಡಿದರು. ಅವರು  ಧರ್ಮಸ್ಥಳದಲ್ಲಿ  ಭಜನಾ ತರಬೇತಿ ಕಮ್ಮಟದ ಎರಡನೇ ದಿನದಂದು ಶಿಬಿರಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ ಭಜನಾರ್ಥಿಗಳು ಧಾರ್ಮಿಕವಾಗಿ ತೊಡಗಿಸಿಕೊಳ್ಳುವುದರ ಜೊತೆಗೆ ಸಾಮಾಜಿಕವಾಗಿ, ಪರಿಸರ ರಕ್ಷಣಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಭೂಮಿಗೆ ನೀರಿಂಗಿಸುವ ಕೆಲಸ ಇಂದು ಆಗಬೇಕು. ಅಲ್ಲದೇ ಮಕ್ಕಳನ್ನು ತಮ್ಮ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಅವರಲ್ಲಿ ಧಾರ್ಮಿಕ ಪ್ರಜ್ಞೆ, […]

ವಿಟ್ಲದಲ್ಲಿ ಭಗವತ್ ಧ್ವಜ ತೆರವುಗೊಳಿಸಿದ ಪಿಡಿಒ

Sunday, October 3rd, 2021
Bhagavath

ಮಂಗಳೂರು : ವಿಟ್ಲ ವೀರಕಂಬ ಗ್ರಾಮದ  ಮಂಗಳಪದವು ಎಂಬಲ್ಲಿ  ಹಾಕಲಾದ  ಭಗವತ್ ಧ್ವಜವನ್ನು ಪಿಡಿಒ ತೆರವುಗೊಳಿಸಿರುವುದನ್ನು ವಿರೋಧಿಸಿ ಹಿಂದು ಸಂಘಟನೆ ಕಾರ್ಯಕರ್ತರು ವಿಟ್ಲ ಪೊಲೀಸ್ ಠಾಣೆಯಲ್ಲಿ ಜಮಾಯಿಸಿದ್ದು. ಬಳಿಕ ಭಗವತ್ ಧ್ವಜವನ್ನು ಮರು ಹಾಕುವ ಮೂಲಕ ಪ್ರಕರಣ ಇತ್ಯರ್ಥಗೊಂಡಿತು. ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ತಂಡಗಳ ನಡುವೆ ವಾಗ್ವಾದ ನಡೆದು ಠಾಣೆ ಮೆಟ್ಟಿಲೇರಿತ್ತು.