ಕತ್ತಿಯಿಂದ ಕಡಿದು ಅಣ್ಣನ ಕೊಲೆ: ತಮ್ಮ ನ್ಯಾಯಲಯಕ್ಕೆ ಹಾಜರು

Wednesday, February 3rd, 2016
Chandrahasa

ಬದಿಯಡ್ಕ: ಕತ್ತಿಯಿಂದ ಕಡಿದು ಅಣ್ಣನನ್ನು ತಮ್ಮ ಕೊಲೆಗೈದ ಪ್ರಕರಣ ನಡೆದಿದ್ದು ಆರೋಪಿಯನ್ನು ಬದಿಯಡ್ಕ ಪೋಲಿಸರು ಬುಧವಾರ ಬೆಳಿಗ್ಗೆ ಬಂಧಿಸಿದ್ದಾರೆ. ಮುಂಡಿತ್ತಡ್ಕ ಸಮೀಪದ ಸರಳಿ ಕೊರಗಪ್ಪ ಪೂಜಾರಿಯವರ ಪುತ್ರ ವಾಸುದೇವ(35) ಕೊಲೆಗೀಡಾದ ದುರ್ದೈವಿ. ಆರೋಪಿಯಾದ ಇವರ ಸಹೋದರ ಚಂದ್ರಹಾಸ(28)ನನ್ನು ಮನೆ ಬಳಿಯ ಕಾಡಿನಿಂದ ಊರವರ ಸಹಾಯದೊಂದಿಗೆ ಬದಿಯಡ್ಕ ಪೋಲಿಸರು ಬಂಧಿಸಿ ಕೊಲೆಗೆ ಬಳಸಿದ ಕತ್ತಿಯನ್ನು ವಶಪಡಿಸಿಕೊಂಡಿದ್ದಾರೆ. ಘಟನೆಯ ಬಗ್ಗೆ ವಿದ್ಯಾನಗರ ಸಿ.ಐ ತನಿಖೆ ನಡೆಸುತ್ತಿದ್ದಾರೆ. ತರವಾಡು ಮನೆಯಲ್ಲಿ ಒಬ್ಬಂಟಿಯಾಗಿ ವಾಸವಾಗಿದ್ದ ವಾಸುದೇವ 7.15 ರ ವೇಳೆಗೆ ಮನೆಗೆ ತೆರಳಿದಾಗ […]

ಮುಖ್ಯಮಂತ್ರಿಯವರ ನಿರೀಕ್ಷೆಯಲ್ಲೇ ಕೊನೆಯುಸಿರೆಳೆದ ಐತ ಕೊರಗ

Wednesday, February 3rd, 2016
Itha Koraga

ಉಪ್ಪಳ: ಮುಖ್ಯಮಂತ್ರಿಯವರ ಸಹಾಯದ ನಿರೀಕ್ಷೆಯಲ್ಲೇ ಬಹುಕಾಲ ಶರಶಯ್ಯೆಯಲ್ಲಿದ್ದ ವ್ಯಕ್ತಿಯೋರ್ವರು ಕೊನೆಗೂ ಹುಸಿ ನಿರೀಕ್ಷೆಯೊಂದಿಗೆ ಇಹ ತ್ಯಜಿಸಿದ ಘಟನೆ ಬಾಯಾರು ದಳಿಕುಕ್ಕು ಕೊಲೋನಿಯಲ್ಲಿ ನಡೆದಿದೆ. ಪೈವಳಿಕೆ ಬಾಯಾರು ಸಮೀಪದ ದಳಿಕುಕ್ಕು ಕೊರಗ ಕೊಲೋನಿಯ ಐತ ಕೊರಗ ಸುಧೀರ್ಘ ಕಾಲಗಳಿಂದ ಪಾರ್ಶ್ವವಾಯು ಪೀಡಿತರಾಗಿ ಸೂಕ್ತ ಚಿಕಿತ್ಸೆಗೆ ಅನುಕೂಲವಿಲ್ಲದೆ ಸಂಕಷ್ಟದಲ್ಲಿದ್ದರು. ಇವರೀಗ ಕಳೆದ ಜ.28ರಂದು ರೋಗ ಉಲ್ಬಣಗೊಂಡು ಅಸುನೀಗಿದರು. ಐತರ ಪತ್ನಿ ಗಿರಿಜಾ ಆಸ್ಮ ರೋಗಿಯಾಗಿ ದೃಷ್ಟಿ ದೋಷವೂ ಬಾಧಿಸಿ ನಿತ್ರಾಣರಾಗಿದ್ದಾರೆ. ಇವರ ಒಂದು ಕಣ್ಣಿಗೆ ಇತ್ತೀಚೆಗೆ ಶಸ್ತ್ರ ಚಿಕಿತ್ಸೆಯನ್ನೂ ನಡೆಸಲಾಗಿತ್ತು. […]

ಪತ್ನಿಗೆ ಡಾಕ್ಟರ್ ಕಲಿಯಲು ನೆರವು ಲಭಿಸಿಲ್ಲ- ಪತಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನ

Wednesday, February 3rd, 2016
jagadisha

ಕಾಸರಗೋಡು: ಎಂಡೋಸಲ್ಫಾನ್ ಸಂತ್ರಸ್ತೆ ಶ್ರುತಿಯ ಪತಿ ಆದೂರು ಕುಂಟಾರಿನ ನಾರಾಯಣ ಅವರ ಪುತ್ರ ಜಗದೀಶ್(24) ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಂಗಳವಾರ ನಡೆದಿದೆ. ಗಂಭೀರ ಸ್ಥಿತಿಯಲ್ಲಿ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಬೆಂಗಳೂರಿನಲ್ಲಿ ಹೋಮಿಯೋ ಡಾಕ್ಟರ್ ವಿಭಾಗದಲ್ಲಿ ಕಲಿಯುತ್ತಿರುವ ಶ್ರುತಿಯ ಕಾಲೇಜು ಫೀಸ್ ಪಾವತಿಸಲು ಸಾಧ್ಯವಾಗದೆ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಗಿ ಸಂಬಂಧಿಕರು ತಿಳಿಸಿದ್ದಾರೆ. ಶ್ರುತಿಯ ಕಲಿಕೆಗೆ ಎಲ್ಲಾ ನೆರವು ನೀಡುವುದಾಗಿ ಈ ಹಿಂದೆ ಮುಖ್ಯಮಂತ್ರಿ ಭರವಸೆ ನೀಡಿದ್ದರು. ಆದರೆ ಈ ವರೆಗೂ ಚಿಕ್ಕಾಸು ಲಭಿಸಿಲ್ಲ. […]

ಭಾಷಾ ಮಸೂದೆ ವಿರುದ್ಧ ಆಕ್ರೋಷ : ಜಿಲ್ಲಾಧಿಕಾರಿ ಕಚೇರಿ ಮುಂದೆ ಧರಣಿ

Wednesday, February 3rd, 2016
Kerala Language Bill

ಕಾಸರಗೋಡು: ಮಣ್ಣಿನ ಮಕ್ಕಳಾದ ಕನ್ನಡಿಗರ ಮೇಲೆ ಕಡ್ಡಾಯವಾಗಿ ಮಲಯಾಳ ಹೇರಿಕೆಯ ಮುಖಾಂತರ ಸಂವಿಧಾನಬದ್ಧವಾಗಿ ನೀಡಲಾದ ಹಕ್ಕು, ಸವಲತ್ತುಗಳನ್ನು ಕಸಿದುಕೊಳ್ಳಲು ಭಾಷಾ ಮಸೂದೆಯ ಅಸ್ತ್ರವನ್ನು ಛೂಬಿಟ್ಟ ಕೇರಳ ಸರಕಾರದ ನೀತಿಯ ವಿರುದ್ಧ ವಿವಿಧ ಕನ್ನಡ ಪರ ಸಂಘ ಸಂಸ್ಥೆಗಳ ಸಂಯುಕ್ತ ಕನ್ನಡ ಹೋರಾಟ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ಫೆ.2 ರಂದು ಜಿಲ್ಲಾಧಿಕಾರಿ ಕಚೇರಿಗೆ ಸಾವಿರಾರು ಮಂದಿ ಕನ್ನಡಿಗರು ಜಾಥಾ ನಡೆಸಿ, ಧರಣಿ ಮುಷ್ಕರ ಹೂಡಿದರು. ಭಾಷಾ ಮಸೂದೆಯ ವಿರುದ್ಧ ಕನ್ನಡಿಗರ ಆಕ್ರೋಷ, ಘೋಷಣೆ ಮುಗಿಲುಮುಟ್ಟಿತು. ಕನ್ನಡಿಗರ ಧ್ವನಿ ತಿರುವನಂತಪುರಕ್ಕೆ […]

ಅಕ್ರಮ ಸ್ಪಿರಿಟ್, ಸ್ವದೇಶಿ ಮದ್ಯದೊಂದಿಗೆ ಓರ್ವನ ಸೆರೆ

Wednesday, February 3rd, 2016
spirit

ಕುಂಬಳೆ: ಹಿತ್ತಿಲೊಂದರಲ್ಲಿ ಅಕ್ರಮವಾಗಿ ಬಚ್ಚಿಡಲಾಗಿದ್ದ ಸ್ಪಿರಿಟ್ ಮತ್ತು ವಿದೇಶಿ ಮದ್ಯವನ್ನು ಅಬಕಾರಿ ಸ್ಪೆಶಲ್ ಸ್ವ್ಕಾಡ್‌ನ ಇನ್ಸ್‌ಪೆಕ್ಟರ್ ವಿ.ಕೃಷ್ಣಕುಮಾರ್ ನೇತೃತ್ವದಲ್ಲಿ ಪೇರಾಲ್ ಕಣ್ಣೂರಿನಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಪತ್ತೆ ಹಚ್ಚಿ ಓರ್ವನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಪೇರಾಲ್ ಕಣ್ಣೂರು ನಿವಾಸಿ ನಾರಾಯಣ ಪೂಜಾರಿ(51)ಎಂತಾತನನ್ನು ಈ ಸಂಬಂಧ ಬಂಧಿಸಲಾಗಿದೆ. 120 ಲೀಟರ್ ಅಕ್ರಮ ಸ್ಪಿರಿಟ್ ಮತ್ತು 180 ಎಂ.ಎಲ್‌ನ 375 ಬಾಟಲಿ ವಿದೇಶಿ ಮದ್ಯವನ್ನು ಈತನಿಂದ ವಶಪಡಿಸಲಾಗಿದೆ. ಸ್ಪಿರಿಟನ್ನು 30 ಲೀಟರಿನ 4 ಕ್ಯಾನ್‌ಗಳಲ್ಲಾಗಿ ಹಿತ್ತ್ತಲೊಂದರಲ್ಲಿ ಬಚ್ಚಿಡಲಾಗಿತ್ತು. ಮದ್ಯ ಗೋವಾ ನಿರ್ಮಿತ ಎಂದು […]

ಯುವಕನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ

Wednesday, February 3rd, 2016
satish

ಪೆರ್ಲ: ವಿವಾಹಿತ ಯುವಕನೋರ್ವನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಮನೆಯೊಳಗೆ ಪತ್ತೆಯಾದ ಘಟನೆ ಒಡ್ಯದಲ್ಲಿ ನಡೆದಿದೆ. ಕುರೆಡ್ಕ ಐತ್ತಪ್ಪ ನಾಯ್ಕರ ಪುತ್ರ ಸತೀಶ(35)ಮೃತದೇಹ ಒಡ್ಯ ಸಮೀಪದ ಮಾಯಿಲಕ್ಕಾನದಲ್ಲಿರುವ ಇವರ ಮನೆಯಲ್ಲಿ ಅಜೀರ್ಣಾವಸ್ಥೆಯಲ್ಲಿ ಪತ್ತೆಯಾಗಿದೆ. ಶರೀರದಲ್ಲಿ ಯಾವುದೇ ಗಾಯಗಳಿಲ್ಲದಿರುವುದರಿಂದ ಮರಣಕ್ಕೆ ಸ್ಪಷ್ಟ ಕಾರಣ ತಿಳಿಯದಿರುವುದರಿಂದ ಉನ್ನತ ವೈದ್ಯಕೀಯ ಪರೀಕ್ಷೆಗೆ ಪೆರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಮೃತದೇಹ ಕೊಂಡೊಯ್ಯಲಗಿದೆ. ಸತೀಶ್ ಈ ಹಿಂದೆ ನಲ್ಕದಲ್ಲಿ ಹೋಟೆಲ್ ನಡೆಸುತ್ತಿದ್ದರು. ಮಾಯಿಲಕ್ಕಾನದಿಂದ ಮದುವೆಯಾಗಿ ಪತ್ನಿ ಗೃಹದಲ್ಲಿ ಇವರು ವಾಸಿಸುತ್ತಿದ್ದರು. ಇತ್ತೀಚೆಗೆ ಪತ್ನಿ ಮನೆಯಿಂದ ಸ್ವಲ್ಪ […]

ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರೀ ವಿಷ್ಣುಮೂರ್ತಿ ಕ್ಷೇತ್ರದ ವಾರ್ಷಿಕೋತ್ಸವ

Tuesday, February 2nd, 2016
Perla Idiyadka Ullalti

ಪೆರ್ಲ: ಪೆರ್ಲ ಇಡಿಯಡ್ಕ ಶ್ರೀ ದುರ್ಗಾಪರಮೇಶ್ವರೀ(ಉಳ್ಳಾಲ್ತೀ)ವಿಷ್ಣುಮೂರ್ತಿ ಕ್ಷೇತ್ರ ವಾರ್ಷಿಕೋತ್ಸವ ಸೋಮವಾರ ವಿದ್ಯುಕ್ತವಾಗಿ ಆರಂಭಗೊಂಡಿದ್ದು,ಬೆಳಿಗ್ಗೆ ಹೊರೆಕಾಣಿಕೆ ಮೆರವಣಿಗೆ ಮೊದಲಾದ ಕಾರ್ಯಕ್ರಮದೊಂದಿಗೆ ಆರಂಭಗೊಂಡಿತು. ಸೋಮವಾರ ಬೆಳಿಗ್ಗೆ ಮಹಾಗಣಪತಿ ಹೋಮ,ಧ್ವಜಾರೋಹಣ,ಬಳಿಕ ಪೆರ್ಲ ಸತ್ಯನಾರಾಯಣ ಮಂದಿರ ಪರಿಸರದಿಂದ ಹೊರಟ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ ಶ್ರೀಕ್ಷೇತ್ರಕ್ಕೆ ಆಗಮಿಸಿತು.ಈ ಸಂದರ್ಭ ಕ್ಷೇತ್ರದ ಗೌರವಾಧ್ಯಕ್ಷ ಟಿ.ಆರ್.ಕೆ ಭಟ್,ಅಧ್ಯಕ್ಷ ಎ.ಬಿ.ತಂಬಾನ್ ಪೊದುವಾಳ್,ಕಾರ್ಯದರ್ಶಿ ಸದಾನಂದ ಶೆಟ್ಟಿ.ಕುದ್ವ,ಉಪಾಧ್ಯಕ್ಷ ವಿಷ್ಣು ಭಟ್ ಕುಂಚಿನಡ್ಕ,ಮೋಹನ ಆಚಾರ್ಯ,ಟಿ.ಶಿವರಾಮ ಭಟ್,ಪೊಯ್ಯೆ ಶಿವರಾಮ ಭಟ್,ಕುಂಞಿರಾಮ ಅಮೆಕ್ಕಳ,ವಾಸು ಶೆಟ್ಟಿ ಪೆರ್ಲ,ಮೋಹಿನಿ ಜೆ.ಆಳ್ವ, ವೀಣಾ ಪೆರ್ಲ,ಪುಷ್ಪಾವತಿ ಮೊದಲಾದವರು ನೇತೃತ್ವ ನೀಡಿದರು. ನೂರಾರು […]

ಸಾಹಸ ಮತ್ತು ಸಾಧನೆಗಳಿಂದ ಸಮಾಜ ಅಭಿವೃದ್ಧಿ : ಡಾ|ಶಿವಾನಂದ ಬೇಕಲ್

Tuesday, February 2nd, 2016
Ramakshatriya

ಕಾಸರಗೋಡು: ಇತಿಹಾಸದ ಸಾಧನೆ ಹೆಜ್ಜೆ ಹೆಜ್ಜೆಗೆ ಸ್ಮರಿಸುತ್ತಾ ಸಾಹಸ ಮತ್ತು ಸಾಧನೆಗಳಿಂದ ಸಮಾಜವನ್ನು ಅಭಿವೃದ್ಧಿ ಸಾಗಿಸಬಹುದು. ಸಜ್ಜನಿಕೆ, ಸೌಜನ್ಯ, ಸಂಸ್ಕೃತಿ, ಸಂಸ್ಕಾರ ಅದ್ಭುತಗಳಿಂದ ಕೂಡಿದ ರಾಮರಾಜ ಕ್ಷತ್ರಿಯ ಯಾನೆ ಕೋಟೆಯವರ ಸಮಾಜ ಇಂದು ವಿವಿಧ ಕ್ಷೇತ್ರಗಳಲ್ಲಿ ಸಾಧನೆಯನ್ನು ನಡೆಸುತ್ತಾ ಒಟ್ಟು ಸಮಾಜದಲ್ಲಿ ಗುರುತಿಸುವ ಮಟ್ಟಿಗೆ ಅಭಿವೃದ್ಧಿಯತ್ತ ಸಾಗಿದ್ದೇವೆ. ಇನ್ನಷ್ಟು ಸಾಧನೆಗೆ ಸಮಾಜದ ಒಗ್ಗಟ್ಟು, ಏಕತೆಯನ್ನು ರೂಢಿಸಿಕೊಳ್ಳಬೇಕೆಂದು ಆಕಾಶವಾಣಿ ಮತ್ತು ದೂರದರ್ಶನದ ನಿವೃತ್ತ ನಿರ್ದೇಶಕ ಡಾ|ಶಿವಾನಂದ ಬೇಕಲ್ ಅವರು ಹೇಳಿದರು. ಬೇಕಲ ಪಾಲಕುನ್ನಿನ ಶ್ರೀ ಅಂಬಿಕಾ ಸಭಾಭವನದಲ್ಲಿ ಆಯೋಜಿಸಿದ […]

ಭಾರತದ ಶಿಕ್ಷಣ ವ್ಯವಸ್ಥೆ ವಿಶ್ವದಲ್ಲಿಯೇ ಅಗ್ರಮಾನ್ಯ : ಹರ್ಷಾದ್ ವರ್ಕಾಡಿ

Saturday, January 30th, 2016
Education System

ಮಂಜೇಶ್ವರ: ಭಾರತದ ಶಿಕ್ಷಣ ವ್ಯವಸ್ಥೆ ವಿಶ್ವದಲ್ಲಿಯೇ ಮಾನ್ಯತೆಯನ್ನು ಪಡೆದಿದೆ. ವಿದೇಶಿಗರು ಇಲ್ಲಿ ಬಂದು ಶಿಕ್ಷಣ ಪಡೆಯುತ್ತಿದ್ದು, ಗುಣಮಟ್ಟದ ಹಾಗೂ ಶಿಸ್ತುಬದ್ಧ ಶಿಕ್ಷಣಕ್ಕೆ ಭಾರತ ಜಗತ್ತಿನಲ್ಲಿಯೇ ಹೆಸರುವಾಸಿಯಾಗಿದೆ. ಇಲ್ಲಿ ವ್ಯಾಸಂಗಗೈದವರು ಜಾಗತಿಕ ಮಟ್ಟದಲ್ಲಿ ಮಿಂಚುತ್ತಿರುವುದು ದೇಶದ ಶಿಕ್ಷಣ ವ್ಯವಸ್ಥೆಯ ಹೆಗ್ಗಳಿಕೆಯಾಗಿದೆ ಎಂದು ಕಾಸರಗೋಡು ಜಿಲ್ಲಾ ಪಂಚಾಯತು ಅಭಿವೃದ್ಧಿ ಸ್ಥಾಯೀ ಸಮಿತಿ ಅಧಕ್ಷ ಹರ್ಷಾದ್ ವರ್ಕಾಡಿ ಅಭಿಪ್ರಾಯ ವ್ಯಕ್ತಪಡಿಸಿದರು. ಕುಂಜತ್ತೂರು ಸರಕಾರಿ ಪ್ರೌಢಶಾಲೆಯಲ್ಲಿ ಜರುಗಿದ ಕೇರಳ ಸರಕಾರದ ವಿನೂತನ ಯೋಜನೆಯಾದ ಮಕ್ಕಳ ಮೇಲಿರುವ ನಮ್ಮ ಜವಾಬ್ದಾರಿ ಎಂಬ ಯೋಜನೆಯ ಉದ್ಘಾಟಿಸಿ […]

ಉಪ್ಪಳ ಇಬ್ಬರಿಗೆ ಚೂರಿ ಇರಿತ ; ಒರ್ವನಿಗೆ ಗಂಭೀರ

Saturday, January 30th, 2016
Uppala Stabbing

ಉಪ್ಪಳ : ಉಪ್ಪಳ ಪೇಟೆಯಲ್ಲಿ ಮತ್ತೆ ಗೂಂಡಾ ಆಕ್ರಮಣ ಉಂಟಾಗಿದ್ದು ಇಬ್ಬರನ್ನು ಗೂಂಡಾ ತಂಡವೊಂದು ತಲವಾರಿನಿಂದ ಇರಿದ ಘಟನೆ ಗುರುವಾರ ರಾತ್ರಿ ಸಂಭವಿಸಿದೆ. ಇರಿತದಿಂದ ಗಾಯಗೊಂಡ ತಳಂಗರೆಯ ಆರಿಫ್ ಉಪ್ಪಳ ಪ್ರತಾಪ್ ನಗರದ ಅಬ್ದುಲ್ಲ ಎಂದು ಗುರುತಿಸಲಾಗಿದೆ. ಇವರಿಬ್ಬರನ್ನು ಮಂಗಳೂರಿನ ಯುನಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುರುವಾರ ರಾತ್ರಿ 9 ಘಂಟೆ ಸುಮಾರಿಗೆ ಇವರಿಬ್ಬರು ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಉಪ್ಪಳದ ರಮ್ಭಿಝ್ , ಫಾರೂಕ್ ಎಂಬಿಬ್ಬರ ನೇತೃತ್ವದಲ್ಲಿ ತಲುಪಿದ ತಂಡ ತಲವಾರಿನಿಂದ ಇರಿದಿದೆ. ಹಳೆ ವೈಷಮ್ಯವೇ ಇರಿತಕ್ಕೆ […]