ಹಿಂದೂ ಜನಾಂಗದ ವಿರುದ್ದ ತಾರತಮ್ಯ: ಮುತಾಲಿಕ್

Wednesday, November 27th, 2013
mutalik

ಮಂಗಳೂರು : ಶ್ರೀರಾಮ ಸೇನೆಯ ವತಿಯಿಂದ ನಗರದ ಆರ್ಯಸಮಾಜದಲ್ಲಿ ಮಂಗಳವಾರ ಪತ್ರಿಕಾ ಗೋಷ್ಠಿ ಕರೆಯಲಾಗಿತ್ತು. ನೂತನ ಸಂಘಟನೆ `ರಾಮ್‍ಸೇನಾ’ವನ್ನು ಸ್ಥಾಪಿಸುವ ಮೂಲಕ ಶ್ರೀರಾಮ ಸೇನೆಯನ್ನು ತ್ಯಜಿಸಿದ್ದೇನೆಂದು ಸ್ವತಃ ಪ್ರಸಾದ್ ಅತ್ತಾವರ್ ಹೇಳುತ್ತಿದ್ದರೂ ಶ್ರೀರಾಮ ಸೇನೆಯ ರಾಷ್ಟ್ರಾಧ್ಯಕ್ಷ ಪ್ರಮೋದ್ ಮುತಾಲಿಕ್ ಮಾತ್ರ ಅವರು ನಮ್ಮಲ್ಲೇ ಇದ್ದಾರೆ ಎನ್ನುವ ಹೇಳಿಕೆ ನೀಡಿರುವುದು ಕಾರ್ಯಕರ್ತ ವಲಯದಲ್ಲಿ ಸಾಕಷ್ಟು ಗೊಂದಲಗಳಿಗೆ ಕಾರಣವಾಗಿದೆ. ಪತ್ರಿಕಾ ಗೋಷ್ಠಿಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಸಾದ್ ಅತ್ತಾವರ್  ಶ್ರೀರಾಮ ಸೇನೆ ತ್ಯಜಿಸಿಲ್ಲ. ಅವರು ನಮ್ಮಲ್ಲೇ ಇದ್ದಾರೆ. ಅಲ್ಲದೇ […]

ಮುಖ್ಯಮಂತ್ರಿಯವರು ರಾಜೀನಾಮೆ ನೀಡಬೇಕು : ದ.ಕ ಜಿಲ್ಲಾ ಯುವ ಮೋರ್ಚಾ

Tuesday, November 26th, 2013
BJP-Y.M

ಮಂಗಳೂರು:  ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅಲ್ಪ ಸಂಖ್ಯಾತರ ತುಷ್ಟೀಕರಣ ನೀತಿ ಅನುಸರಿಸುತ್ತಿದ್ದಾರೆ  ಹಾಗಾಗಿ ಮುಖ್ಯಮಂತ್ರಿಯವರು ರಾಜೀನಾಮೆ ನೀಡಬೇಕು ಎಂದು ಅಗ್ರಹಿಸಿ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಯುವ ಮೋರ್ಚಾದ ವತಿಯಿಂದ ಸೋಮವಾರ ದ.ಕ. ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಪ್ರತಿಭಟನೆ ನಡೆಯಿತು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಯುವಮೋರ್ಚಾದ ರಾಜ್ಯಾಧ್ಯಕ್ಷ ಪಿ.ಮುನಿರಾಜು, ಇಂಡಿಯನ್ ಮುಜಾಹಿದ್ದೀನ್ ಎಂಬ ಭಯೋತ್ಪಾದನಾ ಸಂಘಟನೆಯನ್ನು ಹುಟ್ಟು ಹಾಕಿ ಭಯೋತ್ಪಾದನಾ ಕೃತ್ಯಗಳನ್ನು ನಡೆಸುತ್ತಿರುವ ಕರ್ನಾಟಕದವನೇ ಆಗಿರುವ ಯಾಸಿನ್ ಭಟ್ಕಳ್ ಯಾರೆಂಬುದು ಗೊತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ರಾಜ್ಯದ […]

ಯುಎಂಪಿಪಿ ಸ್ಥಾಪನೆಯನ್ನು ವಿರೋಧಿಸಿ ಪ್ರತಿಭಟನಾ ಜಾಥಾ

Tuesday, November 26th, 2013
massive-project

ಮೂಡುಬಿದಿರೆ : ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮತ್ತು ಮಾತೃಭೂಮಿ ಸಂರಕ್ಷಣಾ ಸಮಿತಿ ನಿಡ್ಡೋಡಿ ಸಂಯುಕ್ತಾಶ್ರಯದಲ್ಲಿ ಕೃಷಿ ಆಧರಿತ ಪ್ರದೇಶವಾದ ನಿಡ್ಡೋಡಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರ ಸ್ಥಾಪಿಸಲುದ್ದೇಶಿಸಿರುವ ಉಷ್ಣ ವಿದ್ಯುತ್ ಸ್ಥಾವರ ಸ್ಥಾಪನೆಯನ್ನು ವಿರೋಧಿಸಿ ನಿಡ್ಡೋಡಿ ಪೇಟೆಯಲ್ಲಿ  ನ.24ರಂದು ಪ್ರತಿಭಟನಾ ಜಾಥಾ ನಡೆಯಿತು. ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಳ ಪ್ರಥಮದರ್ಜೆ ಕಾಲೇಜು ಉಪನ್ಯಾಸಕ ಡಾ. ಸೋಂದಾ ಭಾಸ್ಕರ ಭಟ್, ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿ, ಪರಿಸರಕ್ಕೆ ಮಾರಕವಾದ ಉಷ್ಣ ವಿದ್ಯುತ್ ಸ್ಥಾವರವನ್ನು ಯಾವುದೇ ಕಾರಣಕ್ಕೂ ನಿಡ್ಡೋಡಿಯಲ್ಲಿ […]

ಪಿ.ಸಿ. ಆಭರಣ ಮಳಿಗೆ ಮಂಗಳೂರಿನಲ್ಲಿ ತೆರೆದ ಬಾಲಿವುಡ್ ತಾರೆ ನಟಿ ಶಿಲ್ಪ ಶೆಟ್ಟಿ

Monday, November 25th, 2013
shilpa-shetty

ಮಂಗಳೂರು : ನಗರದ ಬಲ್ಲಾಳ್‌ಬಾಗ್‌ನ ಕಾಯರ್‌ಮಂಜ್ ಕಟ್ಟಡದಲ್ಲಿ  ಪಿ.ಸಿ. ಜ್ಯುವೆಲ್ಲರಿ ಶೋರೂಂ ಅನ್ನು ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿ ಭಾನುವಾರ ಉದ್ಘಾಟನೆ ಮಾಡಿದರು. ಬಾಲಿವುಡ್ ತಾರೆ ಶಿಲ್ಪಾ ಶೆಟ್ಟಿ ಮಾತನಾಡಿ, ಮಂಗಳೂರು ಮಹಿಳೆಯರಿಗೆ ಸೌಂದರ್ಯ ಪ್ರಜ್ಞೆ ಹೆಚ್ಚು, ಇಲ್ಲಿಯವರಿಗೆ ಆಭರಣ ತುಂಬಾ ಇಷ್ಟ, ಅಷ್ಟು ಗ್ಯಾರಂಟಿ ನೀಡುತ್ತೇನೆ. ಮಂಗಳೂರಿಗೆ ಬರಬೇಕೆಂದು ಹಂಬಲಿಸುತ್ತಿರುತ್ತೇನೆ, ಸಮಯಾವಕಾಶ ಕೊರತೆಯಿಂದ ಬರಲು ಸಾಧ್ಯವಾಗಿಲ್ಲ. ಪಿ.ಸಿ. ಜ್ಯುವೆಲ್ಲರಿ ಉದ್ಘಾಟನೆಗೆ ಕರೆದಾಗ ತಕ್ಷಣ ಒಪ್ಪಿಕೊಂಡು ಬಂದೆ. ಇಲ್ಲಿನ ಮಲ್ಲಿಗೆ ಹೂವು ಎಂದರೆ ನನಗೆ ತುಂಬಾ ಇಷ್ಟ. ವಿಮಾನ […]

ಈಜುಕೊಳದಲ್ಲಿ ಈಜುಗಾರರಿಗೆ ಸೂಕ್ತ ಭದ್ರತೆ : ಶಾಸಕ ಜೆ.ಆರ್‌. ಲೋಬೋ

Saturday, November 23rd, 2013
mcc-office

ಮಂಗಳೂರು: ಮಹಾನಗರ ಪಾಲಿಕೆಯ ಮಣ್ಣಗುಡ್ಡದಲ್ಲಿರುವ ಏಕೈಕ ಸಾರ್ವಜನಿಕ ಈಜುಕೊಳದ ಒಟ್ಟು ವ್ಯವಸ್ಥೆ ಸುಧಾರಣೆಗೆ ಸಂಬಂಧಿಸಿ ಶಾಸಕ ಜೆ.ಆರ್‌. ಲೋಬೋ  ನೇತೃತ್ವದಲ್ಲಿ ಮಹಾನಗರ ಪಾಲಿಕೆ ಕಚೇರಿಯಲ್ಲಿ ಶುಕ್ರವಾರ ಸಭೆ ನಡೆಯಿತು. ಈಜುಕೊಳದಲ್ಲಿ ಈಜುಗಾರರಿಗೆ ಸೂಕ್ತ ಭದ್ರತೆ ನೀಡಲು ವಿಶೇಷ ಕ್ರಮ ಕೈಗೊಳ್ಳುವಂತೆ ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು. ಈಜುಕೊಳಕ್ಕೆ ಸಿಸಿ ಕೆಮರಾ ಹಾಗೂ ಆಕ್ಸಿಜನ್‌ ವ್ಯವಸ್ಥೆ ಮಾಡುವ ಬಗ್ಗೆ ಶೀಘ್ರ ಕ್ರಮಕೈಗೊಳ್ಳುವಂತೆ ಜತೆಗೆ ಸೂಕ್ತ ಭದ್ರತೆಗಾಗಿ ಸೆಕ್ಯುರಿಟಿ ಗಾರ್ಡ್‌, ಲೈಫ್‌ ಗಾರ್ಡ್‌ ವ್ಯವಸ್ಥೆ ಮಾಡುವಂತೆ ಶಾಸಕರು ಸೂಚಿಸಿದರು. ಸಮರ್ಪಕವಾಗಿ ಈಜುಕೊಳದ […]

ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷರಿಂದ ವಿಶ್ವಾಸ ಸಮ್ಮೇಳನ ಉದ್ಘಾಟನೆ

Saturday, November 23rd, 2013
mass

ಮಂಗಳೂರು :ವಿಶ್ವಾಸದ ವರ್ಷಾಚರಣೆ ಸಮಾರೋಪದ ಅಂಗವಾಗಿ ಮಂಗಳೂರು ಧರ್ಮ ಪ್ರಾಂತ್ಯದ ವತಿಯಿಂದ  ಮೂರು ದಿನಗಳ ವಿಶ್ವಾಸ ಸಮ್ಮೇಳನವನ್ನು  ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ರೈ| ರೆ| ಡಾ| ಅಲೋಶಿಯಸ್‌ ಪಾವ್‌ ಡಿ’ಸೋಜಾ ಶುಕ್ರವಾರ ಉದ್ಘಾಟಿಸಿದರು. ಮಂಗಳೂರು ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ರೈ| ರೆ| ಡಾ| ಅಲೋಶಿಯಸ್‌ ಪಾವ್‌ ಡಿ’ಸೋಜಾ ಕ್ಯಾಥೊಲಿಕ್‌ ಕ್ರೈಸ್ತರು ಆಚರಿಸಿಕೊಂಡು ಬಂದಿರುವ ವಿಶ್ವಾಸದ ವರ್ಷಾಚರಣೆ ದೇವರ ಮೇಲಿರುವ ವಿಶ್ವಾಸ ಬಲಪಡಿಸಲು ಹಾಗೂ ಅದು ಜೀವನದಲ್ಲಿ ಸ್ಥಿರವಾಗಿ ಉಳಿಯಲು ಪೂರಕವಾಗಬೇಕು ಎಂದು ಹೇಳಿದರು.ವಿಶ್ವಾಸ ಬಲಪಡಿಸಿ ಅದನ್ನು […]

ಸುಳ್ಯ ಕಾಲ್ನಡಿಗೆಯ ಪ್ರತಿಭಟನ ತಂಡ ಇಂದು ಮಂಗಳೂರಿಗೆ : ಸೌಜನ್ಯಾ ಕೊಲೆಯ ನೆನೆಪು

Friday, November 22nd, 2013
sullia

ಸುಳ್ಯ : ಸೌಜನ್ಯಾ ಕೊಲೆಯ ನಂತರ ಎಚ್ಚೆತ್ತ ಗುಲ್ಬರ್ಗ ಧರ್ಮಪೀಠದ ಸ್ವಾಮಿ ಕಬೀರಾನಂದ ಹಾಗೂ ಜನಜಾಗ್ರತಿ ಹೊರಟಗಳಲ್ಲಿ ಪಳಗಿದ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷ ದ ಸ್ಥಳೀಯ ಕಾರ್ಯದರ್ಶಿ ಕೆ.ವಸಂತ್ ಆಚಾರಿ ಇವರ ಜಂಟಿ ನೇತ್ರತ್ವದಲ್ಲಿ ಕಾರ್ಯಕರ್ತರ ಒಂದು ತಂಡವು ಸುಳ್ಯದಿಂದ ಮಂಗಳೂರು ವರೆಗೆ ಗುರುವಾರ (ನ.21) ಪಾದಯಾತ್ರೆ ಬೆಳೆಸಿದೆ. ಈ ಜಾಥ ಶುಕ್ರವಾರ ಸಂಜೆಯ ಹೊತ್ತಿಗೆ ಮಂಗಳೂರು ತಲುಪಿ ಒಂದು ಪ್ರತಿಭಟನೆಯ ಸಭೆಯನ್ನು ನಡೆಸುವ ಸಾಧ್ಯತೆ ಇದೆ. ಕಾಲ್ನಡಿಗೆಯ ಪ್ರಾರಂಭದಲ್ಲಿ ಜನ ಸಮೂಹವನ್ನು ಉದ್ದೇಶಿಸಿ ಮಾತನಾಡಿದ ಕಬೀರಾನಂದರು, […]

ಕಾಂಗ್ರೆಸ್ ಕಚೇರಿಯಲ್ಲಿ ದಿ.ಇಂದಿರಾಗಾಂಧಿಯವರ 96ನೇ ಜನ್ಮದಿನಾಚರಣೆ

Wednesday, November 20th, 2013
I. Gandhi

ಮಂಗಳೂರು : ಮಾಜಿ ಪ್ರಧಾನಿ ದಿ.ಇಂದಿರಾಗಾಂಧೀಯವರ 96ನೇ ಜನ್ಮದಿನಾಚರಣೆಯ ಅಂಗವಾಗಿ ನಗರದ ಕಾಂಗ್ರೆಸ್ ಕಚೇರಿಯಲ್ಲಿ  ಮಂಗಳವಾರ ಅವರ ಭಾವಚಿತ್ರಕ್ಕೆ ಪುಷ್ಪ ನಮನವನ್ನು  ಸಲ್ಲಿಸಲಾಯಿತು. ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹಿಂ ಕೋಡಿಜಾಲ್  ಮಾತನಾಡಿ, ಮಹಿಳೆಯರಿಗೆ ಇವತ್ತು ಸ್ಥಳೀಯ ಆಡಳಿತದಲ್ಲಿ ಪ್ರಮುಖ ಸ್ಥಾನ ಸಿಗಬೇಕಾದರೆ ಅದಕ್ಕೆ ಮುಖ್ಯ ಕಾರಣ ದಿ.ಇಂದಿರಾಗಾಂಧಿ. ಇವರು ಭೂ ಮಸೂದೆಯನ್ನು ತರುವ ಮೂಲಕ ಸರ್ವರಿಗೂ ಸಮಪಾಲು ದೊರೆಯುವಂತೆ ಮಾಡಿದರು. 20 ಅಂಶಗಳ ಕಾರ್ಯಕ್ರಮ ರೂಪಿಸಿ ಬ್ಯಾಂಕ್‌ನ್ನು ರಾಷ್ಟ್ರೀಕರಣ ಗೊಳಿಸಿದರು. ಹಿಂದುಳಿದ ವರ್ಗ, ಅಲ್ಪಸಂಖ್ಯಾತರಿಗೆ, ಮಹಿಳೆಯರಿಗೆ ಇಂದಿರಾಗಾಂಧಿಯವರಿಂದಲೇ ನಿಜವಾದ […]

ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಪ್ರಶ್ನೆ : ಪೂಜಾರಿ

Tuesday, November 19th, 2013
Janardhan-poojary

ಮಂಗಳೂರು : ಭಾನುವಾರ ಬೆಂಗಳೂರಿನಲ್ಲಿ ನಡೆದ ಮೋದಿ ಭಾಷಣ ಕುರಿತ್ತಂತೆ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ನಗರದ ಕಾಂಗ್ರೆಸ್ ಕಚೇರಿಯಲ್ಲಿ ತಾ.18 ರಂದು ಪತ್ರಿಕಾಗೋಷ್ಠಿಯನ್ನು ಏರ್ಪಡಿಸಿದ್ದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪೂಜಾರಿ, ಮೋದಿಯವರೇ ನಿಮಗೆ ಮದುವೆ ಯಾಗಿದೆಯಾ? ನಿಮ್ಮ ಹೆಂಡತಿಯ ಹೆಸರೇನು? ಅವರು ನಿಮ್ಮೊಂದಿಗೆ ಇದ್ದಾರಾ? ಅವರೀಗ ಎಲ್ಲಿದ್ದಾರೆ? ಹೀಗೆ ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ವಿರುದ್ಧ ಪ್ರಶ್ನೆಗಳ ಸುರಿಮಳೆಗೈದರು. ತಾಕತ್ತಿದ್ದರೆ ನನ್ನ ಪ್ರಶ್ನೆಗಳಿಗೆ ಉತ್ತರಿಸಿ ಎಂದು ನರೇಂದ್ರ ಮೋದಿಗೆ ಬಹಿರಂಗ ಸವಾಲು ಹಾಕಿದರು. ಮೋದಿ […]

ಬಿ‌ಎಸ್‌ಎನ್‌ಎಲ್ ನೌಕರರ ಫೆಡರೇಶನ್ ನ ಮೂರನೇ ಜಿಲ್ಲಾ ಮಟ್ಟದ ಸಮ್ಮೇಳನ

Saturday, November 16th, 2013
Lobo

ಮಂಗಳೂರು  : ಬಿ‌ಎಸ್‌ಎನ್‌ಎಲ್ ನೌಕರರ ಫೆಡರೇಶನ್ ನ ಮೂರನೇ ಜಿಲ್ಲಾ ಮಟ್ಟದ ಸಮ್ಮೇಳನ ವನ್ನು ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ಜೆ.ಆರ್,ಲೋಬೊ ಶುಕ್ರವಾರ ನ 15, 2013 ರಂದು ನಗರದ ನಾಸಿಕ್ ಬಂಗೇರ ಹಾಲ್ ನಲ್ಲಿ  ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಒಂದು ಕಾಲದಲ್ಲಿ ದೂರವಾಣಿ ಸಂಪರ್ಕ ಹೊಂದುವುದು ಪ್ರತಿಷ್ಟೆಯಾಗಿತ್ತು,  ಇಂದು  ದೂರವಾಣಿ  ಜಗತ್ತಿನಲ್ಲಿ ಕ್ರಾಂತಿಯಾಗಿದೆ ಪ್ರತಿಯೊಬ್ಬರಿಗೂ ದೂರ್ವಾಣಿ ಸಂಪರ್ಕ ಕೈಗೆಟಕುವ ದರದಲ್ಲಿ ಸಿಗುತ್ತಿದೆ.  ಗ್ರಾಹಕರಿಗೆ ಅನೇಕ ಆಯ್ಕೆಯ ಅವಕಾಶಗಳಿವೆ.  ಬಿ‌ಎಸ್‌ಎನ್‌ಎಲ್  ಜನರಿಗೆ  ವಿಭಿನ್ನವಾದ ಸೇವೆ ನೀಡುತ್ತಿದೆ,  ಜನರು […]