ಆ್ಯಕ್ಟಿವಾ ನಿಯಂತ್ರಣ ತಪ್ಪಿ ಬಸ್ಸಿನ ಹಿಂಬದಿಗೆ ಡಿಕ್ಕಿ ಮಹಿಳೆ ಸಾವು

Wednesday, November 6th, 2013
hoige-bazar

ಮಂಗಳೂರು: ಬಸ್‍ನ ಹಿಂಬದಿಗೆ ಆ್ಯಕ್ಟಿವಾ ಹೊಂಡಾ ಡಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನದ ಹಿಂಬದಿ ಸವಾರೆ ಮೃತಪಟ್ಟ ಘಟನೆ ನಿನ್ನೆ ಬೆಳಿಗ್ಗೆ ಹೊೈಗೆಬಜಾರ್‍ನಲ್ಲಿ ನಡೆದಿದೆ. ಮೃತರನ್ನು ಹೊೈಗೆ  ಬಜಾರ್ ನಿವಾಸಿ ವಿಜಯಲಕ್ಷ್ಮಿ(55) ಎಂದು ಗುರುತಿಸಲಾಗಿದೆ. ಇವರು ನಿನ್ನೆ ಬೆಳಿಗ್ಗೆ ತನ್ನ ಪತಿಯೊಂದಿಗೆ ಆ್ಯಕ್ಟಿವಾದಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಆ್ಯಕ್ಟಿವಾ ನಿಯಂತ್ರಣ ತಪ್ಪಿ ಬಸ್ಸೊಂದರ ಹಿಂಬದಿಗೆ ಡಿಕ್ಕಿ ಹೊಡೆದಿದೆ. ಆಗ ವಿಜಯಲಕ್ಷ್ಮಿ ಬಸ್ಸಿನ ಹಿಂಬದಿ ಚಕ್ರದ ಅಡಿಗೆ ಬಿದ್ದಿದ್ದು, ಇದರಿಂದಾಗಿ ಗಂಭೀರ ಗಾಯಗೊಂಡ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತದೇಹವನ್ನು […]

ಭಾರತದ ಮಂಗಳಯಾನ ಯಶಸ್ವಿ

Wednesday, November 6th, 2013
ISRo

ಶ್ರೀಹರಿಕೋಟ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಕೇಂದ್ರದ ಮಹತ್ವಾಕಾಂಕ್ಷಿ ಯೋಜನೆ ಮಂಗಳಯಾನ ಆರಂಭಗೊಂಡಿದೆ. ಮಂಗಳನ ಅಂಗಳದಲ್ಲಿ ಜೀವ ಕಣ ಪತ್ತೆಗೆ ಇಸ್ರೋ ದೇಶಿ ನಿರ್ಮಿತ ಮಾರ್ಸ್ ಆರ್ಬಿಟರ್ ನೌಕೆ(ಪಿಎಸ್ ಎಲ್ ವಿ ಸಿ25)ಯಲ್ಲಿ ಮಂಗಳನೆಡೆಗೆ ಉಪಗ್ರಹ ಹಾರಿಸಲಾಗಿದೆ. ಸುಮಾರು 40 ನಿಮಿಷಗಳ ಕಾಲದ ಉಸಿರುಬಿಗಿ ಹಿಡಿದ ವಾತಾವರಣದ ನಂತರ 44.4 ಮೀ ಎತ್ತರದ ರಾಕೆಟ್ ನಿಂದ ನೌಕೆ ಪ್ರತ್ಯೇಕಗೊಂಡು ಪಥ ಕಂಡುಕೊಂಡಿದೆ. ಈ ಮೂಲಕ ಮಂಗಳಯಾತ್ರೆ ಕೈಗೊಂಡ ವಿಶ್ವದ 6ನೇ ರಾಷ್ಟ್ರ ಹಾಗೂ ಏಷ್ಯಾದ ಪ್ರಥಮ ದೇಶವಾಗಿ […]

ಶಾಂತಿ ಪ್ರಕಾಶನದ ‘ಪುಸ್ತಕ ಮೇಳ’ ಉದ್ಘಾಟನೆ

Tuesday, November 5th, 2013
shanti-prakash

ಮಂಗಳೂರು : ಮಂಗಳೂರಿನ ಶಾಂತಿ ಪ್ರಕಾಶನದ ರಜತ ಮಹೋತ್ಸವದ ಅಂಗವಾಗಿ ‘ಪುಸ್ತಕ ಮೇಳ- ವಿಶನ್ ಎಕ್ಸ್ಪೋ’ ಸಮಾರಂಭ ಕಾರ್ಯಕ್ರಮವನ್ನು ಅರಣ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ್ ರೈ  ಸೋಮವಾರ ನಗರದ ಪುರಭವನದಲ್ಲಿ ಉದ್ಘಾಟನೆ ಮಾಡಿದರು. ಸಚಿವ ರಮಾನಾಥ್ ರೈ ಮಾತಾನಾಡಿ , ಈ ಸಮಾಜದಲ್ಲಿ ಪ್ರತಿದಿನ ತಪ್ಪುಗಳು ಸಂಭವಿಸುತ್ತಲೇ ಇದೆ. ಹೀಗಿರುವಾಗ ಅದನ್ನು ಸರಿಪ ಡಿಸುವವರು ಯಾರು ಎಂಬ ಪ್ರಶ್ನೆಯೂ ಮುಖ್ಯವಾಗುತ್ತದೆ. ಹಾಗಾಗಿ ಸ್ವತಃ ಮನುಷ್ಯರೇ ಆ ಎಲ್ಲಾ ತಪ್ಪುಗಳನ್ನು ತಿದ್ದಿಕೊಂಡರೆ ಸುಂದರ ಸಮಾಜವನ್ನು ಸೃಷ್ಟಿಸಬಹುದು […]

ಬಿಜೈನ ಸರ್ಕಾರಿ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ರಾಮ್‍ಸೇನಾದ ನೇತೃತ್ವದಲ್ಲಿ ಪ್ರತಿಭಟನೆ

Tuesday, November 5th, 2013
ram-sene

ಮಂಗಳೂರು : ದೀಪಾವಳಿ ಹಬ್ಬದ ಪ್ರಯುಕ್ತ ದೂರದ ಊರಿನಲ್ಲಿದ್ದ ಮಂಗಳೂರಿಗರು ಊರಿಗೆ ಬಂದಿದ್ದರು. ನಿನ್ನೆ ರಜಾ ಅವಧಿ ಮುಕ್ತಾಯಗೊಂಡ ಹಿನ್ನೆ ಲೆಯಲ್ಲಿ ಬೆಂಗಳೂರು ಸೇರಿದಂತೆ ಇತರೆ ಊರಿಗೆ ತೆರಳಲು ಬಿಜೈನ ಕೆಎಸ್ ಆರ್‍ಟಿಸಿ ಬಸ್‍ ನಿಲ್ದಾಣಕ್ಕೆ ಬಂದಿದ್ದಾರೆ. ಈ ವೇಳೆ ಬಸ್ಸುಗಳ ಸಂಖ್ಯೆ ಕಡಿಮೆಯಿದ್ದ ಕಾರಣ ನಿಲ್ದಾಣದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿ ಪ್ರಯಾಣಿಕರು ಪರದಾಡುವಂತಾಗಿದೆ. ಹೀಗಾಗಿ ಪ್ರಯಾಣಿಕರು ಹೆಚ್ಚುವರಿ ಬಸ್‍ಗಳನ್ನು ಹಾಕುವಂತೆ ಕೆಎಸ್ ಆರ್‍ಟಿಸಿ ಅಧಿಕಾರಿಗಳನ್ನು ಒತ್ತಾಯಿಸಿದಾಗ ಕೆಎಸ್‍ಆರ್‍ಟಿಸಿ ಅಧಿಕಾರಿಗಳು ಹೆಚ್ಚುವರಿ ಹಣ ಕೇಳಿದ ಪ್ರಸಂಗ ನಡೆದಿದ್ದು, […]

ನಿಡ್ಡೋಡಿಯಲ್ಲಿ ಉಷ್ಣ ವಿದ್ಯುತ್‌ ಸ್ಥಾವರ ನಿರ್ಮಾಣ ಇಲ್ಲ : ಸಚಿವ ಬಿ. ರಮಾನಾಥ ರೈ

Saturday, November 2nd, 2013
ramanath

ಮಂಗಳೂರು : ಜಿಲ್ಲಾ ಉಸ್ತುವಾರಿ ಹಾಗೂ ಅರಣ್ಯ ಇಲಾಖೆಯ ಸಚಿವ ಬಿ. ರಮಾನಾಥ ರೈ ನಿಡ್ಡೋಡಿಯಲ್ಲಿ ಉಷ್ಣ ವಿದ್ಯುತ್‌ ಸ್ಥಾವರ ನಿರ್ಮಾಣ ಇಲ್ಲ ಎಂದು ಶುಕ್ರವಾರ ಘೋಷಿಸಿದರು. ಸಚಿವ ಬಿ. ರಮಾನಾಥ ರೈ ಅವರು ಕನ್ನಡಪರ ಚಿಂತಕರ ಚಾವಡಿ ‘ಕನ್ನಡ ಕಟ್ಟೆ’ಯನ್ನು ಉದ್ಘಾಟಿಸಿ, ಜಿಲ್ಲೆಯ ಪರಿಸರಕ್ಕೆ ಹಾನಿಯಾಗುವ ಅಥವಾ ಜನತೆಗೆ ಬೇಡವಾದ ಯಾವ ಯೋಜನೆಗಳೂ ಇಲ್ಲಿ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ನೇತ್ರಾವತಿ ನದಿ ತಿರುವು ಪ್ರಸ್ತಾವನೆಯ ಬಗ್ಗೆಯೂ ಮರುಪರಿಶೀಲನೆಗೆ ಕೋರಲಾಗಿದೆ ಎಂದರು. ಕನ್ನಡಪರ ಕಾರ್ಯವನ್ನು ಕ್ರಿಯಾಶೀಲವಾಗಿ ನಡೆಸುವಂತೆ […]

ದ.ಕ.ಜಿಲ್ಲಾಡಳಿತದ ವತಿಯಿಂದ 58ನೇ ಕನ್ನಡ ರಾಜ್ಯೋತ್ಸವವ ಆಚರಣೆ

Friday, November 1st, 2013
ದ.ಕ.ಜಿಲ್ಲಾಡಳಿತದ ವತಿಯಿಂದ  58ನೇ ಕನ್ನಡ ರಾಜ್ಯೋತ್ಸವವ ಆಚರಣೆ

ಮಂಗಳೂರು : ದ.ಕ.ಜಿಲ್ಲಾಡಳಿತದ ವತಿಯಿಂದ ಮಂಗಳೂರು ನೆಹರೂ ಮೈದಾನದಲ್ಲಿ 58ನೇ ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮನಾಥ ರೈ ಧ್ವಜಾರೋಹಣ ನೆರವೇರಿಸಿ, ಬಳಿಕ ಪಥಸಂಚಲನ ಕಮಾಂಡರ್ ರಿಂದ ಗೌರವವಂದನೆ ಸ್ವೀಕರಿಸಿದರು. ಬಿ.ರಮನಾಥ ರೈ ಅವರು ಕನ್ನಡ ರಾಜ್ಯೋತ್ಸವದ ಸಂದೇಶದಲ್ಲಿ ನಮ್ಮ ನಾಡಿನ ಭಾಷೆ, ಕಲೆ, ಸಂಸ್ಕೃತಿ ಹಾಗೂ ಪರಂಪರೆಗಳನ್ನು ನೆನೆದು ಅವುಗಳನ್ನು ಪ್ರಾಮಾಣಿಕವಾಗಿ ಜಾರಿಗೆ ತರುವುದರ ಮೂಲಕ ಅವುಗಳನ್ನು ಅಭಿವೃದ್ದಿಗೊಳಿಸುವ ಮಹತ್ವದ ದಿನ. ಆಡಳಿತದ ಎಲ್ಲಾ ಕ್ಷೇತ್ರಗಳಲ್ಲಿ ಕನ್ನಡ ಬಳಕೆಗೆ ನಮ್ಮ ಸರ್ಕಾರ ಹೆಚ್ಚಿನ […]

ಬಂಟ್ವಾಳ ತಾಲೂಕು ಸಾಮಾಜಿಕ ಹೋರಾಟ ಸಮಿತಿ ಆಶ್ರಯದಲ್ಲಿ ಬಿ.ಸಿ. ರೋಡ್‌ ತಾಲೂಕು ಕಚೇರಿ ಎದುರು ಪ್ರತಿಭಟನೆ

Friday, November 1st, 2013
sowjanya

ಬಂಟ್ವಾಳ:  ಬಂಟ್ವಾಳ ತಾಲೂಕು ಸಾಮಾಜಿಕ ಹೋರಾಟ ಸಮಿತಿ ಆಶ್ರಯದಲ್ಲಿ ಉಜಿರೆ ಕಾಲೇಜು ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಹಾಗೂ ಜಿಲ್ಲೆಯಲ್ಲಿ ನಡೆದ ಇತರ ಅಸಹಜ ಸಾವಿನ ಪ್ರಕರಣಗಳ ಸಿಬಿಐ ತನಿಖೆ ಆಗಲಿ ಎಂದು ಅ. 31ರಂದು ಬಿ.ಸಿ. ರೋಡ್‌ ತಾಲೂಕು ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಆಗ್ರಹಿಸಲಾಯಿತು. ಸಿದ್ದಕಟ್ಟೆಯ ಭಾರತಿ, ಅಡ್ಯಾರ್‌ನ ಅಕ್ಷತಾ, ಮೂಡಬಿದಿರೆಯ ಸುಚರಿತ ಸಹಿತ ಎಲ್ಲ ಅಸಹಜ ಪ್ರಕರಣಗಳ ತನಿಖೆ ನಡೆಸಬೇಕು ಎಂದು ಪ್ರತಿಭಟನೆ ಉದ್ದೇಶಿಸಿ ಮಾತನಾಡಿದವರು ಅಭಿಪ್ರಾಯ ವ್ಯಕ್ತಪಡಿಸಿದರು. ಅಮಾಯಕ ಮಹಿಳೆಯರ […]

2013ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ : ಹರೇಕಳ ಹಾಜಬ್ಬ

Thursday, October 31st, 2013
rajyotsava-prashasti

ಮಂಗಳೂರು: ಹರೇಕಳದಂತಹ ಪುಟ್ಟ ಊರಿನಲ್ಲಿ ಕಿತ್ತಳೆ ಹಣ್ಣು ಮಾರಿ ಶಾಲೆ ಕಟ್ಟುವ ಮೂಲಕ ಶೈಕ್ಷಣಿಕ ಕ್ರಾಂತಿಗೆ ಕಾರಣರಾದ ಹರೇಕಳ ಹಾಜಬ್ಬರನ್ನು ರಾಜ್ಯ ಸರ್ಕಾರ ಗುರುತಿಸಿದ್ದು, ಅವರನ್ನು ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿದೆ. 2013ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪ್ರಕಟಗೊಂಡಿದ್ದು, ವಿವಿಧ ಕ್ಷೇತ್ರಗಳ ಒಟ್ಟು 58 ಸಾಧಕರಿಗೆ ಪ್ರಶಸ್ತಿ ಪ್ರಕಟಗೊಂಡಿದೆ. ಸಂಕೀರ್ಣ ವಿಭಾಗದಲ್ಲಿ ಹರೇಕಳ ಹಾಜಬ್ಬ ಆಯ್ಕೆ ಗೊಂಡಿದ್ದಾರೆ. ಇವರು ಕಿತ್ತಳೆ ಹಣ್ಣು ಮಾರಿ ಶಾಲೆ ಕಟ್ಟುವ ಮೂಲಕ ಶೈಕ್ಷಣಿಕ ಕ್ರಾಂತಿಗೆ ಕಾರಣವಾಗಿದ್ದರು. ಉಡುಪಿ […]

ಜಬ್ಬಾರ್ ಟ್ರಾವೆಲ್ಸ್‌ನ ವೋಲ್ವೊ ಬಸ್ಸ್ ಗೆ ಬೆಂಕಿ ಹೊತ್ತಿ 42 ಮಂದಿ ಸಜೀವ ದಹನ

Thursday, October 31st, 2013
mahabunagar

ಪಾಲೆಂ: ಆಂಧ್ರಪ್ರದೇಶ ಮಹಬೂಬನಗರ ಜಿಲ್ಲೆ ಪಾಲೆಂ ಹತ್ತಿರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬುಧವಾರ ಬೆಳಗಿನ ಜಾವ ಬೆಂಗಳೂರಿನಿಂದ ಹೈದರಾಬಾದ್‌ಗೆ ಹೊರಟಿದ್ದ ಜಬ್ಬಾರ್ ಟ್ರಾವೆಲ್ಸ್‌ನ ವೋಲ್ವೊ ಬಸ್ಸ್ ಗೆ ಬೆಂಕಿ ಹೊತ್ತಿಕೊಂಡು 44 ಪ್ರಯಾಣಿಕರು ಸುಟ್ಟು ಕರಕಲಾಗಿದ್ದಾರೆ. ಇದು 44ನೇ ರಾಷ್ಟ್ರೀಯ ಹೆದ್ದಾರಿ. ಕಾಕತಾಳಿಯ ಎಂಬಂತೆ ಮೃತರ ಸಂಖ್ಯೆ ಕೂಡ 44. ಬಸ್‌ನಲ್ಲಿದ್ದ 51 ಜನರಲ್ಲಿ ಚಾಲಕ, ಕ್ಲೀನರ್‌ ಸೇರಿ 7 ಜನ ಮಾತ್ರ ಬದುಕುಳಿದಿದ್ದಾರೆ. ಇವರಲ್ಲಿ ತೀವ್ರವಾಗಿ ಗಾಯಗೊಂಡ ಐವರನ್ನು ಹೈದರಾಬಾದ್‌ನ ಅಪೊಲೊ ಸಂಸ್ಥೆಯ ಸೇನಾ ಆಸ್ಪತ್ರೆಗೆ ಚಿಕಿತ್ಸೆಗೆ […]

`ವಿದಾಯ್’ ಶಾದಿ ಭಾಗ್ಯ ಯೋಜನೆಗೆ ವಿಶ್ವ ಹಿಂದೂ ಪರಿಷತ್ ವಿರೋಧ

Wednesday, October 30th, 2013
VHP

ಮಂಗಳೂರು : ಸಮಾಜದ ಪ್ರತಿಯೊಂದು ಸಮುದಾಯದಲ್ಲೂ ಬಡ ವರ್ಗದವರಿದ್ದಾರೆ. ಮುಸ್ಲಿಂ ಹೆಣ್ಣುಮಕ್ಕಳಿಗೆ ಮಾತ್ರ ನೀಡಲಾಗುವ ವಿದಾಯ್ ಹೆಸರಿನ ಶಾದಿ ಭಾಗ್ಯ ಯೋಜನೆಯನ್ನು ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳಗಳು ತೀವ್ರರೀತಿಯಾಗಿ ವಿರೋಧಿಸುತ್ತವೆ ಎಂದು ವಿಶ್ವ ಹಿಂದೂ ಪರಿಷತ್‌ನ ವಿಭಾಗ ಸೇವಾ ಪ್ರಮುಖ್ ಡಾ.ಪಿ.ಅನಂತಕೃಷ್ಣ ಭಟ್ ಹೇಳಿದರು. ಅವರು ಬುಧವಾರ ನಗರದಲ್ಲಿ ಏರ್ಪಡಿಸಿದ್ದ ಪತ್ರಿಕಾಗೊಷ್ಠಿಯಲ್ಲಿ ಮಾತನಾಡಿ ಕೇವಲ ಮುಸ್ಲಿಂ ಹೆಣ್ಣುಮಕ್ಕಳಿಗೆ ವಿವಾಹದ ಸಂದರ್ಭದಲ್ಲಿ ವಸ್ತುಗಳನ್ನು ಖರೀದಿಸುವುದಕ್ಕಾಗಿ ಧನ ಸಹಾಯ ನೀಡುವುದು ರಾಜ್ಯ ಸರ್ಕಾರದ ಪಕ್ಷಪಾತಿ ಹಾಗೂ ವೋಟ್ ಬ್ಯಾಂಕ್ […]