ಚಂದ್ರು ಆಕ್ಷನ್ ಕಟ್ ಚಿತ್ರ ‘ಬ್ರಹ್ಮ, ದಿ ಲೀಡರ್’ ನಲ್ಲಿ ಉಪೇಂದ್ರ

Saturday, March 30th, 2013
Upendra

ಇದೇ ಮೊದಲ ಬಾರಿಗೆ ತಾಜ್ ಮಹಲ್, ಚಾರ್ ಮಿನಾರ್,ಮೈಲಾರಿ ಖ್ಯಾತಿಯ ನಿರ್ದೇಶಕ ಆರ್ ಚಂದ್ರು ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಒಂದಾಗುತ್ತಿದ್ದಾರೆ. ಚಂದ್ರು ಆಕ್ಷನ್ ಕಟ್ ಹೇಳುತ್ತಿರುವ ಚಿತ್ರಕ್ಕೆ ಉಪ್ಪಿ ಹೀರೋ. ನಾಯಕಿ ಇನ್ನೂ ಪಕ್ಕಾ ಆಗಿಲ್ಲ. ಮುಂದಿನ ತಿಂಗಳೇ ಮುಹೂರ್ತ. ಉಪೇಂದ್ರ  ಹೋಂ ಬ್ಯಾನರ್ ಚಿತ್ರವನ್ನು ಮುಂದಕ್ಕಾಗಿ ಚಂದ್ರು ಚಿತ್ರಕ್ಕೆ ಓಕೆ ಮಾಡಿದ್ದಾರೆ. ಆರ್ ಚಂದ್ರು ಆಕ್ಷನ್ ಕಟ್ ಹೇಳುತ್ತಿರುವ ಚಿತ್ರಕ್ಕೆ ‘ಬ್ರಹ್ಮ, ದಿ ಲೀಡರ್’ ಎಂದು ಹೆಸರಿಡಲಾಗಿದೆ. ಕನ್ನಡ, ತೆಲುಗಿನಲ್ಲಿ ಚಿತ್ರ ಏಕಕಾಲಕ್ಕೆ ಸೆಟ್ಟೇರಲಿದೆಯಂತೆ. […]

ಕಾರ್ಯಕರ್ತರು ಪಾಂಡವರ ರಥದ ಸಾರಥಿಗಳಾಗಿ ಪಕ್ಷವನ್ನು ಮುನ್ನಡೆಸಲಿದ್ದಾರೆ : ಪ್ರಹ್ಲಾದ್ ಜೋಶಿ

Saturday, March 30th, 2013
BJP samavesha

ಮಂಗಳೂರು : ಬಿಜೆಪಿಯೊಳಗೆ  ಜಗಳವಾಡಿದವರಾರೂ ಈಗ ಬಿಜೆಪಿಯಲ್ಲಿಲ್ಲ,  ಅವರ ಬಗ್ಗೆ ಯಾರೂ ಚಿಂತಿಸುವುದು ಬೇಡ,  ಹಳೆಯದನ್ನು ಕ್ಷಮಿಸಿ, ನಮಗೆ ಮತ ನೀಡಿ ಎಂದು ಮತದಾರ ಬಂಧುಗಳಲ್ಲಿ ವಿನಂತಿಸಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಕಾರ್ಯಕರ್ತರಿಗೆ ಕರೆ ನೀಡಿದರು. ನಗರದ ನೆಹರೂ ಮೈದಾನದಲ್ಲಿ ಶುಕ್ರವಾರ ನಡೆದ ಬಿಜೆಪಿ ವಿಜಯ ಸಂಕಲ್ಪ ಸಮಾವೇಶದಲ್ಲಿ ಅವರು ಮಾತನಾಡಿದರು. ಜಗದೀಶ್ ಶೆಟ್ಟರ್, ಈಶ್ವರಪ್ಪ, ಆರ್. ಅಶೋಕ್, ಡಿ.ವಿ. ಸದಾನಂದ ಗೌಡ, ಪ್ರಹ್ಲಾದ ಜೋಶಿ ಹೀಗೆ ಪಂಚ ಪಾಂಡವರ ನೇತೃತ್ವದ ಬಿಜೆಪಿ ಯು ವಿಒಧಾನಸಭಾ ಚುನಾವಣೆಯನ್ನು ಎದುರಿಸಲು […]

ಕುಂದಾಪುರ : ನಿಂತಿದ್ದ ಲಾರಿಗೆ ಜೀಪ್ ಡಿಕ್ಕಿ ಕ್ರೈಮ್ ವಿಭಾಗದ ಪಿ.ಎಸ್.ಐ. ರೇವತಿ ಗಂಬೀರ

Saturday, March 30th, 2013
kundapur jeep lory mishap

ಕುಂದಾಪುರ : ಕುಂದಾಪುರ ಕ್ರೈಮ್ ವಿಭಾಗದ ಪಿ.ಎಸ್.ಐ. ರೇವತಿ ಹಾಗೂ ಜೀಪ್ ಚಾಲಕ ರಾಮ ಗುರುವಾರ ರಾತ್ರಿ ಕುಂದಾಪುರ ತಾಲೂಕಿನ ವಡೇರಹೋಬಳಿ ಗ್ರಾಮದ ಶಾಸ್ತ್ರಿ ಪಾರ್ಕ್‌ ಹತ್ತಿರ ನಿಲ್ಲಿಸಿದ್ದ ಲಾರಿಗೆ ಡಿಕ್ಕಿ  ಹೊಡೆದ ಪರಿಣಾಮ ಕುಂದಾಪುರ ಕ್ರೈಮ್ ವಿಭಾಗದ ಪಿ.ಎಸ್.ಐ. ರೇವತಿ ಹಾಗೂ ಚಾಲಕ ರಾಮ ಗಂಬೀರವಾಗಿ ಗಾಯಗೊಂಡಿದ್ದಾರೆ. ಪಿ.ಎಸ್.ಐ. ರೇವತಿ ಹಾಗೂ ಚಾಲಕ ರಾಮ ಕುಂಭಾಶಿ ಕಡೇಯೀಂದ ಕುಂದಾಪುರದ ಕಡೆಗೆ ಹಿಂದಿರುಗುತ್ತಿದ್ದ ವೇಳೆ ರಸ್ತೆಯಲ್ಲಿ ಜೀಪಿಗೆ ಸಂಗಮ್ ಕಡೆಯಿಂದ ವಾಹನವೊಂದು ರಸ್ತೆಯ ಬಲಬದಿಗೆ ಬಂದ ಕಾರಣ ಅಪಘಾತವಾಗುವುದನ್ನು ತಪ್ಪಿಸಲು,  ರಸ್ತೆಯ ಎಡಬದಿಗೆ ಜೀಪನ್ನು ಚಲಾಯಿಸಿಲಾಯಿತು ಪರಿಣಾಮ ರಾಷ್ಟ್ರೀಯ ಹೆದ್ದಾರಿಯ ಎಡಬದಿಯಲ್ಲಿ […]

ಕಾಸರಗೋಡು : ಮೊಗ್ರಾಲ್ ಪುತ್ತೂರು ಪೇಟೆಯಲ್ಲಿ ಭೀಕರ ರಸ್ತೆ ಅಪಘಾತ ಬೈಕ್ ಸವಾರರಿಬ್ಬರ ಸಾವು

Saturday, March 30th, 2013
Mishap at Mogral Puttur

ಕಾಸರಗೋಡು : ರಾಷ್ಟ್ರೀಯ ಹೆದ್ದಾರಿಯ ಮೊಗ್ರಾಲ್ ಪುತ್ತೂರು ಪೇಟೆಯಲ್ಲಿ ಗುರುವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಮೃತಪಟ್ಟಿದ್ದು, ನಾಲ್ವರು ಗಾಯಗೊಂಡಿದ್ದಾರೆ. ಮೃತರನ್ನು ಮೊಗ್ರಾಲ್ ಪುತ್ತೂರು ಕೆ.ಕೆ. ರಸ್ತೆಯ ಕುನ್ನಿಲ್‌ನ ಸಾದಿಕ್(19) ಮತ್ತು ಕುನ್ನಿಲ್ ಸಬೀನಾ ಮಂಝಿಲ್‌ನ ಸಮೀರ್ ಆಸಿಫ್ (20) ಎಂದು ಗುರುತಿಸಲಾಗಿದೆ. ಆಟೊ ಪ್ರಯಾಣಿಕರಾದ ಮುಹಮ್ಮದ್ ಎಂಬವರ ಪುತ್ರಿ ಡಾನಿಯಾ ಗಂಭೀರ ಗಾಯ ಗೊಂಡಿದ್ದು, ಮಂಗಳೂರಿನ ಆಸ್ಪತ್ರೆಗೆ ದಾಖಲಿಸ ಲಾಗಿದೆ. ಉಳಿದ ಪ್ರಯಾ ಣಿಕರಾದ ಅಬ್ದುಲ್ ಖಾದರ್ ಎಂಬವರ ಪತ್ನಿ ಮರಿಯಾ, […]

ಮಾಜಿ ಪಕ್ಷ ಬಿಜೆಪಿ ಗೆ ತೆರಳಲು ಮುಂದಾದ ನಾಗರಾಜ ಶೆಟ್ಟಿ

Friday, March 29th, 2013
B Nagaraja Shetty

ಮಂಗಳೂರು : ಬಿಜೆಪಿ ಯಿಂದ ಹೊರನಡೆದು ಕುಮಾರಸ್ವಾಮಿಯವರ ಜೆಡಿಎಸ್ ಪಕ್ಷ ಸೇರ್ಪಡೆ ಗೊಂಡ ಮಾಜಿ ಬಿಜೆಪಿ ಸಚಿವ ನಾಗರಾಜ ಶೆಟ್ಟಿ  ಜೆಡಿಎಸ್ ನಲ್ಲಿ ರಾಜ್ಯ ಉಪಾಧ್ಯಕ್ಷರ ಸ್ಥಾನವನ್ನು ಅಲಂಕರಿಸಿದ್ದರು. ಆದರೆ ಇದೀಗ ಜೆಡಿಎಸ್ ನಲ್ಲಿನ ಬಿನ್ನಭಿಪ್ರಾಯಗಳಿಂದಾಗಿ  ಅವರು ತಮ್ಮ ಮಾಜಿ ಪಕ್ಷ ಬಿಜೆಪಿ ಸೇರಿಕೊಳ್ಳುವ ಸೂಚನೆ ಕಂಡುಬರುತ್ತಿದೆ. ಈಗಾಗಲೇ ಜೆಡಿಎಸ್ ಗೆ ರಾಜಿನಾಮೆ ನೀಡಿರುವ ನಾಗರಾಜ ಶೆಟ್ಟಿ ಬಿಜೆಪಿ ಪಕ್ಷದಲ್ಲಿನ ಬಿನ್ನಭಿಪ್ರಾಯದಿಂದಾಗಿ ಜೆಡಿಎಸ್ ಸೇರಿದ್ದೇ ಆದರೆ ಜೆಡಿಎಸ್ ನ ಜಿಲ್ಲಾಧ್ಯಕ್ಷರ ಕಾರ್ಯಗಳಿಂದಾಗಿ ಬೇಸತ್ತು ಆ ಪಕ್ಷಕ್ಕೆ ರಾಜಿನಾಮೆ […]

ಎಂ.ಬಿ.ಸದಾಶಿವ ರ ಅಧ್ಯಕ್ಷತೆಯಲ್ಲಿನ ಪಕ್ಷ ಇನ್ನು ಮುಂದಿನ ದಿನಗಳಲ್ಲಿ ಕರಾವಳಿಯಲ್ಲಿ ನೆಲೆ ಕಳೆದುಕೊಳ್ಳುತ್ತದೆ : ಡಿ.ಎಂ.ಅಸ್ಲಂ

Friday, March 29th, 2013
DM Aslam

ಮಂಗಳೂರು : ಪಕ್ಷದಿಂದ ಉಚ್ಛಾಟಿಸಲಾಗಿದೆ ಎಂದು ಮಾಧ್ಯಮಗಳಲ್ಲಿ ಪ್ರಕಟವಾಗಿದೆ ಆದರೆ ಈ ಬಗ್ಗೆ ಯಾವುದೇ ಮಾಹಿತಿ ತನಗೆ ಲಭಿಸಿಲ್ಲ ಮತ್ತು ಯಾವುದೇ ಆದೇಶದ ಪ್ರತಿ ನನ್ನ ಕೈ ಸೇರಿಲ್ಲ ಮಾದ್ಯಮಗಳಲ್ಲಿ ಪ್ರಕಟವಾದ ವರದಿಯಿಂದಲೇ ಈ ಬಗ್ಗೆ ತಿಳಿದಿದ್ದೇನೆ ಎಂದು ಜೆಡಿ‌ಎಸ್ ದ.ಕ.ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಡಿ.ಎಂ.ಅಸ್ಲಂ ಹೇಳಿದ್ದಾರೆ. ಈ ಕುರಿತು ಗುರುವಾರ ಪತ್ರಿಕಾ ಘೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ನನ್ನನ್ನು ಪಕ್ಷದಿಂದ ಅಮಾನತು ಗೊಳಿಸಿರುವ ಬಗ್ಗೆ ಹೇಳಿಕೆ ನೀಡಿರುವ ಪಕ್ಷದ ಜಿಲ್ಲಾಧ್ಯಕ್ಷ ಎಂ.ಬಿ.ಸದಾಶಿವ ಪಕ್ಷಕ್ಕಾಗಿ ಯಾವುದೇ ರೀತಿಯ […]

ಸ್ವಾರ್ಥಕ್ಕಾಗಿ ಸಂಘಟನೆಯ ಬಳಕೆ : ಬಿಲ್ಲವರ ಯೂನಿಯನ್ ಕಾರ್ಯದರ್ಶಿ ರವಿಶಂಕರ್ ಮಿಜಾರ್ ಆರೋಪ

Thursday, March 28th, 2013
All India Billawa Union

ಮಂಗಳೂರು : ಅಖಿಲ ಭಾರತ ಬಿಲ್ಲವರ ಯೂನಿಯನ್ ನ ಅಧ್ಯಕ್ಷರಾಗಿರುವ ನವೀನ್ ಚಂದ್ರ ಸುವರ್ಣ ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದು ತಮ್ಮ ಸ್ವಹಿತಾಸಕ್ತಿ ಗಾಗಿ  ಯೂನಿಯನ್ ನ ಕ್ರಮಗಳಿಗೆ ವಿರುದ್ದವಾಗಿ, ಕಾನೂನು ಬಾಹಿರ ಸಭೆಗಳನ್ನು ನಡೆಸುತ್ತಿದ್ದಾರೆ ಇದನ್ನು ಸರಿಪಡಿಸಿಕೊಳ್ಳದಿದ್ದಲಿ ಮುಂದಿನ ದಿನಗಳಲ್ಲಿ  ಅಧಕ್ಷರು ಇದಕ್ಕೆ ತಕ್ಕ ಬೆಲೆಯನ್ನು ತೆರಬೇಕಾಗುತ್ತದೆ ಎಂದು ಬಿಲ್ಲವರ ಸಂಘಟನೆಗಳ ಏಕೀಕರಣ ಸಮಿತಿ ಪ್ರಧಾನ ಕಾರ್ಯದರ್ಶಿ ರವಿಶಂಕರ್ ಮಿಜಾರ್ ಎಚ್ಚರಿಸಿದರು. ಅವರು ಗುರುವಾರ ನಗರದಲ್ಲಿ ನಡೆದ ಪತ್ರಿಕಾ ಘೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಯೂನಿಯನ್ ನ ಅಧ್ಯಕ್ಷರಾಗಿರುವ […]

ಸುರತ್ಕಲ್ : ಟೋಲ್ ಗೇಟ್ ಕೇಂದ್ರ ವಿರೋಧಿಸಿ ಪ್ರತಿಭಟನೆ, ಉತ್ತಮ ಪ್ರತಿಕ್ರಿಯೆ

Thursday, March 28th, 2013
Tollgate, Surathkal bundh

ಸುರತ್ಕಲ್ : ಸುರತ್ಕಲ್ ನಾಗರಿಕ ಹಿತರಕ್ಷಣೆ ಸಮಿತಿ ಆಶ್ರಯದಲ್ಲಿ ಎನ್‌ಐಟಿಕೆ ಬಳಿ ಸ್ಥಾಪಿಸಲು ಉದ್ದೇಶಿಸಿರುವ ಟೋಲ್ ಗೇಟ್ ಕೇಂದ್ರ ವಿರೋಧಿಸಿ ಬುಧವಾರ ನಡೆದ ಬಂದ್‌ಗೆ ಸುರತ್ಕಲ್ ಪರಿಸರದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತ ವಾಯಿತು. ಸುರತ್ಕಲ್‌ನಿಂದ ಎನ್‌ಐಟಿಕೆ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ಪ್ರತಿಭಟನೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಸಕ್ರಿಯವಾಗಿ ಭಾಗವಹಿಸಿದ್ದು, ಹೋಟೆಲ್ ಗಳು, ಅಂಗಡಿ ಮುಗ್ಗಟುಗಳು ಸ್ವಯಂ ಪ್ರೇರಿತವಾಗಿ ಮುಚ್ಚುವ ಮೂಲಕ ಬಂದ್ ಗೆ ಉತ್ತಮ ಬೆಂಬಲ ವ್ಯಕ್ತವಾಯಿತು. ಒಂದು ಟೋಲ್‌ಗೇಟ್‌ನಿಂದ ಇನ್ನೊಂದಕ್ಕೆ 60 ಕಿ.ಮೀ. […]

ಕುಲಶೇಖರದ ಬಳಿ ರಸ್ತೆ ಅಪಘಾತ : ಓರ್ವನ ಸಾವು

Wednesday, March 27th, 2013
Accsident near Kulashekar

ಮಂಗಳೂರು : ಇಂದು ಬೆಳಗ್ಗೆ  ರಸ್ತೆ ಬದಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರಿಗೆ ಓಮ್ನಿ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟಿದ್ದು ಇನ್ನೋರ್ವ ಮಹಿಳೆಗೆ ಗಂಭೀರ ಗಾಯಗೊಂಡ ಘಟನೆ  ಕುಲಶೇಖರದ ಸೇಕ್ರೆಡ್ ಹಾರ್ಟ್ ಸ್ಕೂಲ್ ಬಳಿ ನಡೆದಿದೆ. ವಾಮಂಜೂರಿನಿಂದ ಕುಲಶೇಖರದ ಕಡೆಗೆ ಹೋಗುತ್ತಿದ್ದ ಓಮ್ನಿ ಕಾರು  ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಆಲ್ಬರ್ಟ್ ಫ್ರಾನ್ಸಿಸ್ಕೋ ಹಾಗೂ ಮಹಿಳೆಗೆ ಡಿಕ್ಕಿ ಹೊಡೆಯಿತು ಪರಿಣಾಮ ಆಲ್ಬರ್ಟ್ ಫ್ರಾನ್ಸಿಸ್ಕೋ(60) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರವಾಗಿ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. […]

ಚೋರರಿಬ್ಬರ ಬಂಧನ : ಐದು ಲಕ್ಷ ಮೌಲ್ಯದ ಸೊತ್ತುಗಳ ವಶ

Wednesday, March 27th, 2013
Kadri police

ಮಂಗಳೂರು : ಕದ್ರಿ ಕ್ರೈಂ ವಿಭಾಗದ ಪೊಲೀಸರು ಬಲ್ಮಠ ಬಳಿ ಮಂಗಳವಾರ ನಡೆಸಿದ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ಚೋರರಿಬ್ಬರು ಬಂಧಿಸಲ್ಪಟ್ಟಿದ್ದು ಅವರಿಂದ ಐದು ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ. ಬಂಧಿತರನ್ನು ಬಂದರು ನಿವಾಸಿ ಮುನೀರ್ ಅಹಮದ್ ಅಲಿಯಾಸ್ ಗೂಡ್ಸ್ ಮುನೀರ್ ಅಲಿಯಾಸ್ ಮುನ್ನ(57) ಹಾಗೂ ಮಂಜೇಶ್ವರ ಹೊಸಂಗಡಿ ನಿವಾಸಿ ಇಬ್ರಾಹಿಂ(67) ಎಂದು ಗುರುತಿಸಲಾಗಿದೆ. ಕದ್ರಿ ಕ್ರೈಂ ವಿಭಾಗದ ಪೊಲೀಸರು ಬಲ್ಮಠ ಬಳಿ ಗಸ್ತು ತಿರುಗುತ್ತಿದ್ದ ವೇಳೆ ಅನುಮಾನಾಸ್ಪದವಾಗಿ ಕಂಡುಬಂದ […]