ಸ್ಥಳೀಯ ಸಂಸ್ಥೆ ಚುನಾವಣೆ ದ.ಕ 50.97% ಉಡುಪಿ 51.85% ಮತ ಚಲಾವಣೆ.

Thursday, March 7th, 2013
MCC election

ಮಂಗಳೂರು : ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ನಡೆಯುತ್ತಿರುವ ಸ್ಥಳೀಯ ಸಂಸ್ಥೆ ಚುನಾವಣೆ ಮದ್ಯಾಹ್ನ 1 ಗಂಟೆಗೆ ವೇಳೆಗೆ ಚೇತರಿಸಿದ್ದು ದಕ್ಷಿಣ ಕನ್ನಡ ಜಿಲ್ಲೆಯ 544 ಮತಗಟ್ಟೆಗಳಲ್ಲಿ ಶೇಕಡಾ 5.97% ಮತದಾನವಾಗಿದೆ. ಉಡುಪಿ ಜಿಲ್ಲೆಯ ಒಟ್ಟು 148 ಮತಗಟ್ಟೆಗಳಲ್ಲಿ 51.85% ಮತದಾನವಾಗಿದೆ. ಮಂಗಳೂರು 41% ಉಳ್ಳಾಲ 43.8% ಮೂಡಬಿದ್ರೆ 52.2% ಬಂಟ್ವಾಳ 52.8% ಪುತ್ತೂರು 52.4%, ಬೆಳ್ತಂಗಡಿ 55.5% ಸುಳ್ಯ 59.1% ಮತದಾನವಾಗಿದೆ. ಉಡುಪಿ ನಗರ ಸಭೆ 48.25, ಸಾಲಿಗ್ರಾಮ 56.42, ಕುಂದಾಪುರ 49.31, ಕಾರ್ಕಳ 53.40% […]

ವಾಸುದೇವ ಅಡಿಗ ಕೊಲೆ ಆರೋಪಿ ಸುಬ್ರಹ್ಮಣ್ಯ ಉಡುಪ ಗೆ ಹೈಕೋರ್ಟ್ ನಿಂದ ಷರತ್ತು ಬದ್ದ ಜಾಮೀನು

Thursday, March 7th, 2013
Subrahmanya Udupa

ಬೆಂಗಳೂರು : ಆಸ್ತಿ ವಿವಾದಕ್ಕೆ ಸಂಬಂಧಿಸಿ ಕೊಲೆಯಾದ ವಾಸುದೇವ ಅಡಿಗ ಕೊಲೆ ಗೆ ಸಂಬಂಧಿಸಿ ಬಂಧನಕ್ಕೊಳಗಾದ ಆರೋಪಿ ಜೋತಿಷಿ ಸುಬ್ರಹ್ಮಣ್ಯ ಉಡುಪ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಕೆ.ಶ್ರೀಧರ್‌ ರಾವ್‌ ಅವರು, ಬುಧವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ವಾಸುದೇವ ಅಡಿಗ ಕೊಲೆಗೆ ಸಂಬಂಧಿಸಿ ಪ್ರಮುಖ ಆರೋಪಿ ರಮೇಶ ಬಾಯಾರಿ ಸೇರಿದಂತೆ ಸುಬ್ರಹ್ಮಣ್ಯ ಉಡುಪಮತ್ತು ಬೆಂಗಳೂರು ಮೂಲದ ಐವರು ಆರೋಪಿಗಳನ್ನು ಬಂಧಿಸಲಾಗಿತ್ತು. ಆದರೆ ಜೋತಿಷಿ ಸುಬ್ರಹ್ಮಣ್ಯ ಉಡುಪ ರವರು ಅಡಿಗ ಕೊಲೆ […]

ಮಂದಗತಿಯಲ್ಲಿ ಸಾಗುತ್ತಿರುವ ಮತದಾನ ನಗರದಲ್ಲಿ ಕೇವಲ 24 ಶೇಕಡಾ ಮತದಾನ

Thursday, March 7th, 2013
MCC election

ಮಂಗಳೂರು : ನಗರ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ ಇಂದು ಬೆಳಗ್ಗೆ 7ಗಂಟೆಗೆ ಆರಂಭಗೊಂಡಿದ್ದು, ಮಂಗಳೂರು ಮಹಾನಗರ ಪಾಲಿಕೆಯ 380 ಮತಗಟ್ಟೆಗಳಲ್ಲಿ ಬೆಳಗ್ಗೆ 11 ಗಂಟೆಯ ಫಲಿತಾಂಶದಂತೆ ಕೇವಲ 24% ಮತ ಚಲಾವಣೆಯಾಗಿದ್ದು ಮಂದಗತಿಯಿಂದ ಸಾಗುತ್ತಿದೆ. ಬೆಳಗ್ಗೆ 11 ಗಂಟೆಯ ವೇಳೆಗೆ ಉಳ್ಳಾಲ  ಪುರಸಭೆ 34%, ಮೂಡಬಿದ್ರೆ ಪುರಸಭೆ 34.1%, ಬಂಟ್ವಾಳ ಪುರಸಭೆ36.7% ಮತ ಚಲಾವಣೆಯಾಗಿದೆ. ಬೆಳ್ತತಂಗಡಿ ಯಲ್ಲಿ42.7 ಹಾಗೂ ಸುಳ್ಯದಲ್ಲಿ 43% ಮತದಾನವಾಗಿದ್ದು ಮತದಾರರು ಉತ್ಸುಕರಾಗಿ ಮತಚಲಾಯಿಸುತ್ತಿದ್ದಾರೆ. ಮಂಗಳೂರು ನಗರ ಹಾಗೂ ಉಳ್ಳಾಲದಲ್ಲಿ ಮತದಾರ ರ ಸಂಖ್ಯೆ […]

ಬಂಟ್ವಾಳದಲ್ಲಿ ಕಪಾಟು ವಿತರಣೆ, ಪುರಸಭಾ ಮುಖ್ಯಾಧಿಕಾರಿಯವರ ವಿರುದ್ಧ ಪ್ರಕರಣ ದಾಖಲು

Thursday, March 7th, 2013
Bantwal, Godraje delivary

ಬಂಟ್ವಾಳ : ಬುಧವಾರ ಬಂಟ್ವಾಳದಲ್ಲಿ ಚುನಾವಣಾ ನೀತಿ ಸಂಹಿತೆ ಪಾಲಿಸಬೇಕಾದ ಪುರಸಭಾ ಅಧಿಕಾರಿಗಳೇ ಚುನಾವಣಾ ನೀತಿ ಸಂಹಿತೆ ಉಲ್ಲಂಘಿಸಿ ಪುರಸಭಾ ವ್ಯಾಪ್ತಿಯ ಫಲಾನುಭವಿಗಳಿಗೆ ಕಪಾಟು ವಿತರಿಸಿದ ಘಟನೆ ಬೆಳಕಿಗೆ ಬಂದಿದೆ. ಬುಧವಾರ ಬೆಳಿಗ್ಗೆ ಚೆಂಡ್ತಿಮಾರು ದಲಿತಕಾಲೋನಿಗೆ ಪಿಕಪ್ ವಾಹನದಲ್ಲಿ ಕಪಾಟುಗಳನ್ನು ತರಲಾಗಿದ್ದು, ಮೂರು ಮನೆಗಳಿಗೆ ವಿತರಣೆ ಮಾಡಲಾಗಿದೆ. ಈ ಕುರಿತು ಮನೆಮಾಲಕರೊಬ್ಬರು ಪ್ರಶ್ನಿಸಿದರೂ  ಕೇಳದೆ ಕಪಾಟು ಇಳಿಸಿ ತೆರಳಿದ್ದಾರೆ. ಇದಕ್ಕೆ ಬಿಜೆಪಿಯ ಸೂಚನೆಯಂತೆ ಮುಖ್ಯಾಧಿಕಾರಿಗಳು ಕಪಾಟು ವಿತರಣೆ ಮಾಡಿದ್ದಾರೆ ಎಂದು ಕಾಂಗ್ರೇಸ್ ಕಾರ್ಯಕರ್ತರು ಆರೋಪಿಸಿದ್ದು ತನಿಖೆಗೆ ಒತ್ತಾಯಿಸಿದ್ದಾರೆ. […]

ಸ್ಥಳೀಯ ಸಂಸ್ಥೆ ಚುನಾವಣೆಗೆ ಸರ್ವ ಸಿದ್ದತೆ

Thursday, March 7th, 2013
ಸ್ಥಳೀಯ ಸಂಸ್ಥೆ ಚುನಾವಣೆಗೆ ಸರ್ವ ಸಿದ್ದತೆ

ಮಂಗಳೂರು : ಮಾರ್ಚ್ 7 ರಂದು ನಡೆಯಲಿರುವ ಮಂಗಳೂರು ಮಹಾನಗರ ಪಾಲಿಕೆ ಸೇರಿದಂತೆ  ನಗರ ಸ್ಥಳೀಯ ಸಂಸ್ಥೆಗಳಿಗೆ ನಡೆಯುವ ಚುನಾವಣೆಗೆ ದ.ಕ. ಜಿಲ್ಲಾಡಳಿತ ಸರ್ವಸನ್ನದ್ಧವಾಗಿದ್ದು ಮುಕ್ತ ಹಾಗೂ ಶಾಂತಿಯುತ ಮತದಾನಕ್ಕೆ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎನ್‌. ಪ್ರಕಾಶ್‌ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಜಿಲ್ಲೆಯಲ್ಲಿ ಒಟ್ಟು 544 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. 84 ಮತಗಟ್ಟೆಗಳನ್ನು ಅತಿಸೂಕ್ಷ್ಮಹಾಗೂ 70 ಮತಗಟ್ಟೆಗಳನ್ನು ಸೂಕ್ಷ್ಮ ಎಂದು ಗುರುತಿಸಲಾಗಿದೆ. ಮಂಗಳೂರು ಮಹಾನಗರ ಪಾಲಿಕೆಯಲ್ಲಿ 31 ಸೂಕ್ಷ್ಮ ಹಾಗೂ 61 ಅತಿಸೂಕ್ಷ್ಮ, ಮೂಡಬಿದಿರೆ […]

ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆ :ಮಾರ್ಚ್ 7ರಂದು ಜಿಲ್ಲೆಯ 677 ಅಭ್ಯರ್ಥಿಗಳ ಭವಿಷ್ಯ ನಿರ್ಧಾರ

Wednesday, March 6th, 2013
Local bodies election

ಮಂಗಳೂರು : ಮಾರ್ಚ್ 7ರಂದು ನಡೆಯುವ ಸ್ಥಳೀಯಾಡಳಿತ ಸಂಸ್ಥೆಗಳ ಚುನಾವಣೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ 677 ಅಭ್ಯರ್ಥಿಗಳ ಭವಿಷ್ಯ ನಿರ್ಧಾರಗೊಳ್ಳಲಿದೆ. ಅದಕ್ಕಾಗಿ ವಿವಿಧ ರಾಜಕೀಯ ಪಕ್ಷಗಳು ಬಿರುಸಿನ ಮತಪ್ರಚಾರದಲ್ಲಿ ತೊಡಗಿದ್ದು, ಅಂತಿಮವಾಗಿ ಜಯದ ಮಾಲೆ ಯಾರ ಕೊರಳಿಗೆ ಬೀಳಲಿದೆ ಎಂಬುದು ಕುತೂಹಲ ಹುಟ್ಟಿಸಿದೆ. ಈ ಚುನಾವಣೆಯು ಎಪ್ರಿಲ್ ಅಥವಾ ಮೇ ತಿಂಗಳಲ್ಲಿ ನಡೆಯುವ ರಾಜ್ಯ ವಿಧಾನ ಸಭಾ ಚುನಾವಣೆಗೆ ಪೂರ್ವಭಾವಿಯಾದ ಸೆಮಿಫೈನಲ್ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಸ್ಥಳೀಯಾಡಳಿತ ಚುನಾವಣೆಯಲ್ಲಿ ಯಾವ ಪಕ್ಷದ ಅಭ್ಯರ್ಥಿಗಳು ಅಧಿಕ ಸಂಖ್ಯೆಯಲ್ಲಿ ಆಯ್ಕೆಯಾಗುತ್ತಾರೋ […]

ಪೊಲೀಸ ರ ಹೊಟ್ಟೆ ಕರಗಿಸುವ ಕೆಲಸ ನಡೆಯಲಿ

Wednesday, March 6th, 2013

ಮಂಗಳೂರು : ಪೊಲೀಸ್ ಹುದ್ದೆಗೆ ಆಯ್ಕೆಯಾಗಲು ಸದೃಢ ಕಾಯವೇ ಮುಖ್ಯ ಮಾನದಂಡ. ವಿಪರ್ಯಾಸವೆಂದರೆ, ಡೊಳ್ಳು ಹೊಟ್ಟೆಯೇ ಪೊಲೀಸ್ ವೃತ್ತಿಯ ಸಂಕೇತವಾಗಿಬಿಟ್ಟಿದೆ. ಪಾತಕಿಗಳನ್ನು ಬೆನ್ನಟ್ಟಿ ಸೆರೆಹಿಡಿಯುವ ಹೊಣೆ ಹೊತ್ತಿರುವ ಪೊಲೀಸರಿಗೆ ಫಿಟ್ ನೆಸ್ ಅತ್ಯಗತ್ಯ. ಆದರೆ, ಗುಂಬಜಾಕೃತಿಯ ಹೊಟ್ಟೆ ಹೊತ್ತು ತಿರುಗುವ ಪೊಲೀಸರನ್ನು ಕಳ್ಳ – ಖದೀಮರು ಅಣಕಿಸುವಂತಾಗಿದೆ. ಸೇವೆಗೆ ಸೇರ್ಪಡೆಯಾದ ಸಿಬ್ಬಂದಿಗೆ ವರ್ಷಗಟ್ಟಲೆ ಕಠಿಣ ದೈಹಿಕ ತರಬೇತಿ ನೀಡಿ, ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗುವಂತೆ ದೇಹವನ್ನು ಹುರಿಗೊಳಿಸುತ್ತಿರುವುದೇನೋ ನಿಜ. ಆದರೆ, ವೃತ್ತಿಯಲ್ಲಿ ನೆಲೆಯೂರುತ್ತಿದ್ದಂತೆ ಕ್ರಮೇಣ ಅವರ ಉದರ […]

ಕರ್ನಾಟಕದಿಂದ ಕೇರಳಕ್ಕೆ ಕೋಳಿ ಅಕ್ರಮ ಸಾಗಾಟ; ಖಜಾನೆಗೆ ಲಕ್ಷಾಂತರ ನಷ್ಟ

Wednesday, March 6th, 2013

ಕಾಸರಗೋಡು : ಕರ್ನಾಟಕ- ಕೇರಳ ಗಡಿ ಭಾಗದಲ್ಲಿ ಅಕ್ರಮ ಕಳ್ಳಸಾಗಾಟದ ದಂಧೆಗೆ ಚಾಲನೆ ದೊರೆತಿದೆ. ಕಾಸರಗೋಡಿನ ಎಣ್ಮಕಜೆ ಪಂಚಾಯಿತಿ ವ್ಯಾಪ್ತಿಯ ಪೆರ್ಲ- ಪೂವನಡ್ಕ ರಸ್ತೆಯ ಕುರೆಡ್ಕದಿಂದ ನಡುಬೈಲು ಮತ್ತು ಸೇರಾಜೆ ಮೂಲಕ ಕೋಳಿಗಳ ವ್ಯಾಪಕ ಕಳ್ಳಸಾಗಾಟ ಎಗ್ಗಿಲ್ಲದೆ ನಡೆಯುತ್ತಿದ್ದು, ಕೇರಳ ಹಾಗೂ ಕರ್ನಾಟಕ ರಾಜ್ಯದ ಖಜಾನೆಗೆ ಭಾರಿ ಮೊತ್ತದ ತೆರಿಗೆ ನಷ್ಟವುಂಟಾಗುತ್ತಿದೆ. ಕರ್ನಾಟಕ- ಕೇರಳ ಗಡಿ ಭಾಗದಲ್ಲಿ ಅಕ್ರಮವಾಗಿ ಕಳ್ಳ ಸಾಗಾಟ ನಡೆಯುತ್ತಿರುವುದು ಇದು ಮೊದಲ ಬಾರಿಯೇನಲ್ಲ. ಈ ಹಿಂದೆ ತೊಟ್ಟೆ ಸಾರಾಯಿ, ಕೋಣ ಮಾಂಸ ಸಾಗಾಟ […]

ದಕ: ಜೆಲ್ಲಿ ಕ್ರಶರ್ಗಳ ಎತ್ತಂಗಡಿ !

Wednesday, March 6th, 2013

ಮಂಗಳೂರು : ಧೂಳು ಮೂಲಕ ಪರಿಸರ ಹಾನಿ ಮಾಡುವ ಜೆಲ್ಲಿ ಕಲ್ಲು ಪುಡಿ ಮಾಡುವ ಕ್ರಶರ್ ಉದ್ಯಮ ಸ್ಥಗಿತೊಳಿಸಿ, ಸುರಕ್ಷಿತ ವಲಯದಲ್ಲಿ ಸ್ಥಾಪಿಸಬೇಕು ಎಂಬ ರಾಜ್ಯ ಹೈಕೋರ್ಟ್ ಆದೇಶದಂತೆ ರೂಪಿಸಿದ ಕರ್ನಾಟಕ ಕಲ್ಲುಪುಡಿ ಮಾಡುವ ಘಟಕಗಳ (ಕ್ರಷರ್ಗಳ) ನಿಯಂತ್ರಣ ವಿಧೇಯಕದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ  ಪ್ರಥಮ ಹಂತದಲ್ಲಿ  12 ಸುರಕ್ಷಿತ ವಲಯ ಗುರುತಿಸಲಾಗಿದೆ. ಮಂಗಳೂರು ತಾಲೂಕಿನ ಪಡುಕೊಣಾಜೆ, ಕಡಂದಲೆ, ಪುಚ್ಚಮೊಗರು, ಐಕಳದ ಮೂರು ಕಡೆ ಮತ್ತು ನೆಲ್ಲಿಕಾರಿನ ಎರಡು ಕಡೆ, ಪುತ್ತೂರು ತಾಲೂಕಿನ ಕಬಕ, ಬೆಳ್ತಂಗಡಿಯ ಅಂಡಿಂಜೆ, […]

ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ : ಡಿ.ವಿ

Wednesday, March 6th, 2013
DV Sadananda Gowda

ಮಂಗಳೂರು : ವೈಯಕ್ತಿಕ ಕಾರಣಗಳಿಂದಾಗಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂಬುದಾಗಿ ಮಾಜಿ ಮುಖ್ಯಮಂತ್ರಿ ಡಿ. ವಿ. ಸದಾನಂದ ಗೌಡ ಹೇಳಿದ್ದಾರೆ. ಮಂಗಳೂರಿನಲ್ಲಿ ಮಂಗಳವಾರ ತನ್ನನ್ನು ಭೇಟಿಯಾದ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ವಿಧಾನಸಭಾ ಕ್ಷೇತ್ರದ ಚುನಾವಣೆಗೆ ಸ್ಪರ್ಧಿಸಲಿರುವ ಬಿಜೆಪಿಯ 125 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಮಾರ್ಚ್ 25ರ ಒಳಗೆ ಪ್ರಕಟಿಸಲಾಗುವುದು. ಸ್ಥಳೀಯ ಸಂಸ್ಥೆಗಳ ಚುನಾವಣೆ ನಡೆದ ಬಳಿಕ ರಾಜ್ಯದ ಬಿಜೆಪಿ ನಾಯಕರು ಹಾಗೂ ಉನ್ನತ ಮಟ್ಟದ ನಾಯಕರ ಸಭೆ ನಡೆಸಲಾಗುವುದು. ಇದರಲ್ಲಿ ವಿಧಾನಸಭಾ ಅಭ್ಯರ್ಥಿಗಳ ಮೊದಲ […]