ನಗರದಲ್ಲಿ ಸ್ಯಾಮ್ ಸಂಗ್ ಕಂಪನಿಯ ನಕಲಿ ಉತ್ಪನ್ನಗಳ ಮಾರಾಟ, ಆರೋಪಿಗಳ ಬಂಧನ

Saturday, February 23rd, 2013
Dublicate Mobile phones seized

ಮಂಗಳೂರು : ಸ್ಯಾಮ್ ಸಂಗ್ ಕಂಪನಿಯ ನಕಲಿ ಉತ್ಪನ್ನಗಳನ್ನು  ಮಾರಾಟ ಮಾಡುತ್ತಿದ್ದ ನಗರದ ಸೆಂಟ್ರಲ್ ಮಾರ್ಕೆಟ್ ಸಮೀಪದ ದುಬೈ ಮಾರ್ಕೆಟ್‌ ನ ಮೊಬೈಲ್ ಅಂಗಡಿಗಳ ಮೇಲೆ ಶುಕ್ರವಾರ ಬಂದರು ಠಾಣೆ ಪೊಲೀಸರು ಹಾಗು ಸ್ಯಾಮ್ ಸಂಗ್ ಕಂಪನಿಯವರು ಒಟ್ಟಾಗಿ ದಾಳಿ ನಡೆಸಿ, ನಕಲಿ ಮೊಬೈಲ್‌ಗಳನ್ನು ವಶಕ್ಕೆ ತೆಗೆದುಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. ಸ್ಯಾಮ್ ಸಂಗ್ ಕಂಪನಿಯ ನಕಲಿ ಉತ್ಪನ್ನಗಳನ್ನು  ಹಾಗೂ ಮೊಬೈಲ್ ಗಳನ್ನು ಮಾರಾಟ ಮಾಡುತ್ತಿದ್ದಾರೆ ಎಂದು ಕಂಪನಿಯ ಅಧಿಕಾರಿಗಳು  ದೂರು ನೀಡಿದ್ದರು. ದೂರಿನನ್ವಯ ನಗರ ಎಸಿಪಿ ಕವಿತ […]

ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ನಡೆದ ‘ಕೊಂಕಣಿ ಅಭಿಮಾನ್‌’

Saturday, February 23rd, 2013
Konkani Abhiman

ಮಂಗಳೂರು : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಶುಕ್ರವಾರ ಅಕಾಡೆಮಿ ಕಚೇರಿಯಲ್ಲಿ  ತುಳು ಭಾಷಿಗರ ಕೊಂಕಣಿ ಕಾರ್ಯಕ್ರಮ ‘ಕೊಂಕಣಿ ಅಭಿಮಾನ್‌’ ನಡೆಯಿತು  ಇದರ ಉದ್ಘಾಟನೆಯನ್ನು ಮಣಿಪಾಲ ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಡಾ| ಬಿ.ಎಂ. ಹೆಗ್ಡೆ  ಅವರು ನೆರವೇರಿಸಿದರು. ಇಂಗ್ಲಿಷ್‌ ಭಾಷೆಗೆ ತನ್ನದೇ ಆದ ಲಿಪಿ ಇಲ್ಲದಿದ್ದರೂ ಜಗತ್ತಿನ ಎಲ್ಲ ಭಾಷೆಗಳ ಶಬ್ದಗಳನ್ನು ಸ್ವೀಕರಿಸುವ ಮೂಲಕ ಬೆಳವಣಿಗೆ ಹೊಂದಿ ಅಗ್ರಮಾನ್ಯ ಭಾಷೆ ಎನಿಸಿದೆ. ಅದೇ ರೀತಿ ಕೊಂಕಣಿ ಭಾಷೆ ಕೂಡ ಲಿಪಿ ಪ್ರಶ್ನೆ ಬದಿಗಿರಿಸಿ ಪ್ರಸ್ತುತ ಚಾಲ್ತಿಯಲ್ಲಿರುವ […]

ಫೆಬ್ರವರಿ 23 ರೊಳಗೆ ಮತದಾರರ ಪಟ್ಟಿಯಲ್ಲಿ ಹೆಸರು ನೊಂದಾಯಿಸುವಂತೆ ಸೂಚನೆ

Friday, February 22nd, 2013
Voters list

ಮಂಗಳೂರು : ಸ್ಥಳೀಯ ಸಂಸ್ಥೆಗಳ ಚುನಾವಣೆಯು ಮಾರ್ಚ್ 7 ರಂದು ನಡೆಯಲಿದ್ದು  ಮತದಾರರ ಪಟ್ಟಿಯಲ್ಲಿ ಹೆಸರಿರುವುದು ಕಡ್ಡಾಯವಾಗಿದೆ ಆದ್ದರಿಂದ ಅರ್ಹತೆ ಹೊಂದಿರುವ ಮತದಾರ ಹೆಸರು  ಮತದಾರರ ಪಟ್ಟಿಯಲ್ಲಿ ಬಿಟ್ಟು ಹೋಗಿದ್ದಲ್ಲಿ ನೋಂದಾಯಿಸಿಕೊಳ್ಳಲು ಫೆಬ್ರವರಿ 23 ಶನಿವಾರದವರೆಗೆ ಅವಕಾಶ ಇದೆ ಎಂದು ಮಂಗಳೂರು ತಹಶೀಲ್ದಾರ್ ರವಿಚಂದ್ರ ನಾಯಕ್ ತಿಳಿಸಿದರು. ಚುನಾವಣೆಯಲ್ಲಿ ಮತ ಚಲಾಯಿಸಬೇಕಾದರೆ ಮತದಾರರ ಪಟ್ಟಿಯಲ್ಲಿ ಹೆಸರಿರುವುದು ಕಡ್ಡಾಯವಾಗಿದೆ. ಎಲ್ಲಾ ಮತದಾರರು ತಮ್ಮ ಹೆಸರು ಪರಿಷ್ಕ್ರತ ಮತದಾರರ ಪಟ್ಟಿಯಲ್ಲಿ ಇದೆಯೇ ಎಂಬ ಬಗ್ಗೆ ಖಚಿತ ಪಡಿಸಿ ಒಂದು ವೇಳೆ […]

ಅಟ್ಟಹಾಸ

Friday, February 22nd, 2013
Attahaasa

ನೈಜ ಘಟನೆಗಳ ಸಿನಿಮಾ ಮಾಡುವುದರಲ್ಲಿ ಸಿದ್ಧ ಹಸ್ತರು ಎನ್ನುವುದು ಅಟ್ಟಹಾಸ ಚಿತ್ರದ  ನಿರ್ದೇಶಕ ಎಎಂಆರ್ ರಮೇಶ್ ಇನ್ನೊಮ್ಮೆ ಸಾಬೀತುಪಡಿಸಿದ್ದಾರೆ. ಈ ಹಿಂದೆ ಸೈನೈಡ್ ಚಿತ್ರ ನಿರ್ದೇಶಿಸಿ ಗೆದ್ದ ಎಎಂಆರ್ ರಮೇಶ್ ನಿರ್ದೇಶನದಲ್ಲಿ ಮೂಡಿ  ಬಂದ ಈ  ಚಿತ್ರ ಪ್ರಾರಭದಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿತ್ತು. ಆ ನಿರೀಕ್ಷೆಗಳು ಹುಸಿಯಾಗಿಲ್ಲ ಅನ್ನೋದು ಚಿತ್ರದ ಪ್ಲಸ್ ಪಾಯಿಂಟ್. ವೀರಪ್ಪನ್ ಹತ್ಯೆಯಾದ ಮೇಲೆ ಆತನ ಕುರಿತು ಯಾರೂ ಸಿನಿಮಾ ಮಾಡಿಯೇ ಇಲ್ಲ. ಈ ಬಗ್ಗೆ ಕನ್ನಡದಲ್ಲಿ  ಸ್ವಮೇಕ್ ಚಿತ್ರ ನಿರ್ಮಾಣವಾಗಿರುವುದು ನಿಜಕ್ಕೂ […]

ಫೆಬ್ರವರಿ 22, 23ರಂದು ನಡೆಯಲಿರುವ ‘ಸಾನಿಧ್ಯ ಪನಾಮ ಕ್ರೀಡಾ ಮಹೋತ್ಸವ-2013′ ರ ಕ್ರೀಡಾಜ್ಯೋತಿ ಮೆರವಣಿಗೆಗೆ ಚಾಲನೆ

Friday, February 22nd, 2013
Saanidhya Panama Kreeda Mahotsava

ಮಂಗಳೂರು : ಸಾನಿಧ್ಯ ಭಿನ್ನ ಸಾಮರ್ಥ್ಯದ ಮಕ್ಕಳ ವಸತಿ ಶಾಲೆ ಮತ್ತು ತರಬೇತಿ ಸಂಸ್ಥೆಯ ದಶಮಾನೋತ್ಸವ ಆಚರಣೆಯ ಹಿನ್ನಲೆಯಲ್ಲಿ ಶಕ್ತಿನಗರದ ನಾಲ್ಯಪದವು ಸರಕಾರಿ ಕುವೆಂಪು ಮಾದರಿ ಪ್ರೌಢ ಹಾಗೂ ಪ್ರಾಥಮಿಕ ಶಾಲಾ ಮೈದಾನದಲ್ಲಿ ಫೆಬ್ರವರಿ 22, 23ರಂದು ನಡೆಯಲಿರುವ ‘ಸಾನಿಧ್ಯ ಪನಾಮ ಕ್ರೀಡಾ ಮಹೋತ್ಸವ-2013’ ರಾಜ್ಯ ಮಟ್ಟದ ಕ್ರೀಡಾಕೂಟದ ಅಂಗವಾಗಿ ನಡೆದ ಕ್ರೀಡಾ ಜ್ಯೋತಿ ಮೆರವಣಿಗೆಗೆ ಗುರುವಾರ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ  ಚಾಲನೆ ನೀಡಿದರು. ಈ ಮೆರವಣಿಗೆಯಲ್ಲಿ ವಿವಿಧ ಶಾಲೆಗಳ ವಿಶೇಷ ಮಕ್ಕಳು ವಿವಿಧ […]

ಗಾಂಜಾ ಮಾರಾಟ ಪ್ರಯತ್ನ ಗಾಂಜಾ ಸಹಿತ ಆರೋಪಿಗಳ ಬಂಧನ

Friday, February 22nd, 2013
Manipal drug peddlers

ಮಣಿಪಾಲ : ಮಣಿಪಾಲ ಮಣ್ಣಪಳ್ಳ ಕೆರೆ ಬಳಿ ಗುರುವಾರ ಗಾಂಜಾ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಮೂರು ಮಂದಿಯನ್ನು ಗಾಂಜಾ ಸಹಿತ  ಮಣಿಪಾಲ ಪೊಲೀಸರು ಬಂಧಿಸಿದ್ದಾರೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕು ದೇವರಹಳ್ಳಿ ನಿವಾಸಿ ಗೋವಿಂದ ಸ್ವಾಮಿ(37), ದಾವಣಗೆರೆ ಚೆನ್ನಗಿರಿ ತಾಲೂಕು ಬಿಆರ್ ಟಿ ಕಾಲನಿ ನಿವಾಸಿ ಅಣ್ಣಪ್ಪ(29), ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕು ಕಣ್ಣೂರು ಗ್ರಾಮ ನಿವಾಸಿ ಧರ್ಮಪ್ಪ(50) ಎಂಬವರು ಆರೋಪಿಗಳಾಗಿದ್ದು, ಇವರನ್ನು  ಬಂಧಿಸಲಾಗಿದೆ. ಆರೋಪಿಗಳಿಂದ 70 ಸಾವಿರ ರೂ. ಮೌಲ್ಯದ 2,300 ಗ್ರಾಂ. ಗಾಂಜಾ, 2 […]

ಚಿಕ್ಕಮಗಳೂರಿನ ಕಡೂರು ಬಳಿ ರಸ್ತೆ ಅಪಘಾತ ಯುವ ವರದಿಗಾರ ಮೃತ್ಯು

Friday, February 22nd, 2013
Sanath Rao

ಮೂಡುಬಿದಿರೆ : ಚಿಕ್ಕಮಗಳೂರಿನ ಕಡೂರು ರಸ್ತೆಯಲ್ಲಿ ಗುರುವಾರ ಸಂಜೆ ನಡೆದ ಅಪಘಾತವೊಂದರಲ್ಲಿ ಮೂಡುಬಿದಿರೆ ಅಲಂಗಾರು ನಿವಾಸಿ, ದಾವಣಗೆರೆ ಟಿವಿ9 ಸುದ್ದಿವಾಹಿನಿಯ ವರದಿಗಾರ ರಾದ ಸನತ್ ರಾವ್(23) ಮೃತಪಟ್ಟಿದ್ದಾರೆ ಸನತ್ ದಾವಣಗೆರೆಯಿಂದ ಮೂಡುಬಿದಿರೆಗೆ ತನ್ನ ಬೈಕ್‌ನಲ್ಲಿ ಬರುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಆಲ್ಟೋ ಕಾರಿಗೆ ಢಿಕ್ಕಿಯಾಗಿ ತೀವ್ರ ಗಾಯಗೊಂಡ ಇವರನ್ನು ಸ್ಥಳೀಯರು ಜಿಲ್ಲಾಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸನತ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಮೂಡುಬಿದಿರೆ ಕಡಲಕೆರೆಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮುಖ್ಯೋಪಾಧ್ಯಾಯ ಜಯರಾಮ ರಾವ್ ಹಾಗೂ ಕಲ್ಲಮುಂಡ್ಕೂರ್ ನ ಸಿ.ಆರ್.ಪಿ […]

ಡಾ.ಚಂದ್ರಶೇಖರ ಕಂಬಾರ, ಎ.ಬಿ.ಸುಬ್ಬಯ್ಯ ಹಾಗು ಡಾ.ಕದ್ರಿ ಗೋಪಾಲನಾಥ್ ರಿಗೆ ಮಂಗಳೂರು ವಿಶ್ವ ವಿದ್ಯಾಲಯದಿಂದ ಗೌರವ ಡಾಕ್ಟರೇಟ್

Thursday, February 21st, 2013
Mangalore University

ಮಂಗಳೂರು : ಫೆಬ್ರವರಿ 23ರಂದು ನಡೆಯಲಿರುವ ಮಂಗಳೂರು ವಿಶ್ವವಿದ್ಯಾನಿಲಯದ 31ನೇ ಘಟಿಕೋತ್ಸವದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಮೂರು ಮಂದಿ ಗಣ್ಯರಿಗೆ ಗೌರವ ಡಾಕ್ಟರೇಟ್ ನೀಡಲು ವಿಶ್ವವಿದ್ಯಾನಿಲಯವು ತೀರ್ಮಾನಿಸಿರುವುದಾಗಿ ಗುರುವಾರ ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವಿವಿ ಉಪಕುಲಪತಿ ಪ್ರೊ.ಟಿ.ಸಿ.ಶಿವಶಂಕರಮೂರ್ತಿ ತಿಳಿಸಿದರು. ಸಾಹಿತ್ಯದಲ್ಲಿನ ಸೇವೆಗಾಗಿ ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಹಾಗೂ ನಾಟಕಕಾರ ಡಾ.ಚಂದ್ರಶೇಖರ ಕಂಬಾರ, ಕ್ರೀಡೆಯಲ್ಲಿನ ಸಾಧನೆಗಾಗಿ ಹಿರಿಯ ಹಾಕಿ ಪಟು ಕೊಡಗಿನ ಎ.ಬಿ.ಸುಬ್ಬಯ್ಯ, ಸಂಗೀತ ಕ್ಷೇತ್ರದಲ್ಲಿನ ಸಾಧನೆಗಾಗಿ ಹೆಸರಾಂತ ಸ್ಯಾಕ್ಸೊಫೋನ್ ವಾದಕ ಡಾ.ಕದ್ರಿ […]

ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎನ್.ಪ್ರಕಾಶ್ ಮಂಗಳೂರು ಮಹಾನಗರ ಪಾಲಿಕೆಯ ಆಡಳಿತಾಧಿಕಾರಿಯಾಗಿ ಅಧಿಕಾರ ಸ್ವೀಕಾರ

Thursday, February 21st, 2013
MCC administrator

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ನೂತನ ಆಡಳಿತಾಧಿಕಾರಿಯಾಗಿ, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎನ್.ಪ್ರಕಾಶ್ ರವರು ಇಂದು ಪಾಲಿಕೆಯ ಆಯುಕ್ತರಾಗಿರುವ ಹರೀಶ್ ಕುಮಾರ್ ಹಾಗೂ ಇತರ ಅಧಿಕಾರಿಗಳ ಸಮ್ಮುಖದಲ್ಲಿ ಅಧಿಕಾರ ವಹಿಸಿಕೊಂಡರು. ಮಾರ್ಚ್ 7ರಂದು ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು  ನಡೆಸಲು ಚುನಾವಣಾ ಆಯೋಗವು ನಿರ್ಧರಿಸಿರುವುದರಿಂದ, ಹಾಗು ಈಗಾಗಲೇ ಪಾಲಿಕೆಯಲ್ಲಿ ಅಧಿಕಾರದಲ್ಲಿದ್ದ ಪಕ್ಷಗಳ ಅಧಿಕಾರ ವ್ಯಾಪ್ತಿಯು ಮುಗಿದಿರುವುದರಿಂದ ಜಿಲ್ಲಾಧಿಕಾರಿ ಎನ್.ಪ್ರಕಾಶ್ ರವರು ಪಾಲಿಕೆಯ ನೂತನ ಆಡಳಿತಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡರು. ಬಳಿಕ ಮಾತನಾಡಿದ ಅವರು ಈಗಾಗಲೇ ಪ್ರಾರಂಭವಾಗಿರುವ ಎಲ್ಲಾ ಕಾಮಗಾರಿಗಳನ್ನು ಯಥಾಸ್ಥಿತಿಯಲ್ಲಿ ಮುಂದುವರಿಸಲಾಗುವುದು […]

ಎರಡನೇ ದಿನದ ಕಾರ್ಮಿಕ ಸಂಘಟನೆಗಳ ಮುಷ್ಕರಕ್ಕೆ ಕರಾವಳಿಯಲ್ಲಿ ಮಿಶ್ರ ಪ್ರತಿಕ್ರಿಯೆ

Thursday, February 21st, 2013
Strike mixed response in DK

ಮಂಗಳೂರು : ವಿವಿಧ ಕಾರ್ಮಿಕ ಸಂಘಟನೆಗಳು ನೀಡಿದ ಎರಡು ದಿನಗಳ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಮಂಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು ಆದರೆ ಎರಡನೇ ದಿನವಾದ ಇಂದು ಯಾವುದೇ ರೀತಿಯ ಮುಷ್ಕರಗಳು ನಡೆಯದೆ ಎಂದಿನಂತೆ ಜನರು ತಮ್ಮ ಕಾರ್ಯಗಳಲ್ಲಿ ತೊಡಗಿಕೊಂಡಿದ್ದು, ಬಸ್ ಸಂಚಾರ ಆರಂಭವಾಗಿದೆ. ಬೆಲೆ ಏರಿಕೆ ವಿರುದ್ಧ ಭುಗಿಲೆದ್ದ ರಾಷ್ಟ್ರವ್ಯಾಪಿ ಪ್ರತಿಭಟನೆಯಲ್ಲಿ ಕಾರ್ಮಿಕ ಸಂಘಟನೆಗಳು ಹಲವಾರು ಬೇಡಿಕೆಗಳನ್ನು ಮುಂದಿಟ್ಟಿದ್ದರು. ಎಲ್ಲ ಕಾರ್ಮಿಕರು ಹತ್ತು ಸಾವಿರ ಕನಿಷ್ಠ ಕೂಲಿ ನಿಗದಿ ಪಡಿಸಿ, ಬೋನಸ್ ಗಿರುವ ಎಲ್ಲ ಮಿತಿಗಳನ್ನು ತೆಗೆದುಹಾಕಬೇಕು, ಆಟೋ ಚಾಲಕರ ನೋಂದಾವಣೆ […]