ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಸಂಬ್ರಮದ ರಜತಮಹೋತ್ಸವ

Thursday, February 21st, 2013
Odiyooru Rathotsava

ವಿಟ್ಲ : ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ಬುಧವಾರ ರಥೋತ್ಸವದ ಅಂಗವಾಗಿ ಏರ್ಪಡಿಸಿದ ಧರ್ಮಸಭೆಯಲ್ಲಿ ಶ್ರೀ ಸಂಸ್ಥಾನದ ರಜತಮಹೋತ್ಸವಕ್ಕೆ ಶ್ರೀ ಗುರುದೇವಾನಂದ ಸ್ವಾಮೀಜಿ ಚಾಲನೆ ನೀಡಿದರು. ಬಳಿಕ ಆಶೀರ್ವಚನ ವಿತ್ತ ಶ್ರೀ ಗುರುದೇವಾನಂದ ಸ್ವಾಮೀಜಿ ಯವರು  ರಥ ಜೀವನಪಥವನ್ನು ತೋರುತ್ತದೆ. ದೇಹವನ್ನು ರಥವೆಂದು ಪರಿಗಣಿಸಿ, ಪಂಚೇಂದ್ರಿಯಗಳೆಂಬ ಅಶ್ವಗಳು, ಬುದ್ಧಿಯೆಂಬ ಸಾರಥಿ, ಮನಸ್ಸು ಎಂಬ ಹಗ್ಗದಲ್ಲಿ ಬೆಸೆದು ನಿಯಂತ್ರಿಸಿದಾಗ ರಥಿಕ ಅಂದರೆ ಅಂತರಂಗದಲ್ಲಿರುವ ಭಗವಂತ ಸ್ವರೂಪಿ ಆನಂದದಿಂದಿರುತ್ತಾನೆ ಎಂದು ನುಡಿದರು. ಕ್ಷೇತ್ರದ ವತಿಯಿಂದ ತುಳು ಅಕಾಡೆಮಿ ಸಹಕಾರದಲ್ಲಿ ಮುಂದಿನ ದಿನಗಳಲ್ಲಿ […]

ಫೆಬ್ರವರಿ 24- ಪೋಲಿಯೋ ಲಸಿಕಾ ದಿನ

Thursday, February 21st, 2013
polio drop

ಮಂಗಳೂರು : ಪೋಲಿಯೋ ರೋಗವನ್ನು ದೇಶದಿಂದ ತೊಲಗಿಸಿ ದೇಶವನ್ನು ಪೋಲಿಯೋ ಮುಕ್ತವಾಗಿಸುವಲ್ಲಿ ರಾಜ್ಯ ಹಾಗೂ ಕೇಂದ್ರ ಸರಕಾರಗಳು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅನುಷ್ಠಾನಗೊಳಿಸುತ್ತಿವೆ. ಈ ನಿಟ್ಟಿನಲ್ಲಿ ದ.ಕ. ಜಿಲ್ಲೆಯಲ್ಲಿಯೂ 2013ರ ಫೆಬ್ರವರಿ 24ರಂದು ಎರಡನೇ ಸುತ್ತಿನ ಪಲ್ಸ್ ಪೋಲಿಯೋ ಲಸಿಕಾ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ದ,ಕ.ಜಿಲ್ಲೆಯಲ್ಲಿ 0-5 ವಯೋಮಾನದ ಮಕ್ಕಳ ಸಂಖ್ಯೆ 1,63,860 ಇದ್ದು, ಇವರಲ್ಲಿ ವಲಸೆ ಕಾರ್ಮಿಕರ ಮಕ್ಕಳ ಸಂಖ್ಯೆ ಅಂದಾಜು 2319 ಎಂದು ಪರಿಗಣಿಸಲಾಗಿದೆ.ಪ್ರತಿಯೊಂದು ಮಗುವಿಗೂ ಪೋಲಿಯೋ  ಲಸಿಕೆ ಹಾಕಿಸುವುದರಿಂದ ಪೋಲಿಯೋ ನಿಯಂತ್ರಣ ಸಾಧ್ಯವಾಗುತ್ತದೆ. ಅದರಲ್ಲಿಯೂ […]

ಕೊಂಡೆವೂರು ಸಹಸ್ರ ಚಂಡಿಕಾ ಮಾಹಾಯಾಗ : ಹೊರೆಕಾಣಿಕೆ ಸಿದ್ಧತೆಯ ಪೂರ್ವಬಾವಿ ಸಭೆ.

Thursday, February 21st, 2013
Kondevoor sahashra chandika yaga

ಮಂಗಳೂರು : ಸಹಸ್ರ ಚಂಡಿಕಾಯಾಗ ಸಮಿತಿ ಆಶ್ರಯದಲ್ಲಿ ಶ್ರೀ ಧಾಮ ಮಾಣಿಲದ ಪರಮ ಪೂಜ್ಯ ಯೋಗಿಕೌಸ್ತುಭ ಕರ್ಮಯೋಗಿ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಮತ್ತು ಕೊಂಡೆವೂರು ಶ್ರೀ ನಿತ್ಯಾನಂದ ಯೋಗಶ್ರಮದ ಪರಮ ಪೂಜ್ಯ ಶ್ರೀ ಶ್ರೀ ಯೋಗನಂದ ಸರಸ್ವತಿ ಸ್ವಾಮೀಜಿ ಇವರ ದಿವ್ಯ ಉಪಸ್ಥಿತಿಯಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪ್ರಧಾನ ಅರ್ಚಕರಾದ ಬ್ರಹ್ಮಶ್ರೀ ಕಮಲಾದೇವಿ ಪ್ರಸಾದ ಅಸ್ರಣ್ಣರ ನೇತ್ರತ್ವದಲ್ಲಿ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಪ್ರಧಾನ ಆಚಾರ್ಯತ್ವದಲ್ಲಿ ಉಪ್ಪಳದ ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದ […]

ಸ್ಥಳೀಯ ಸಂಸ್ಥೆಗಳ ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ಸಮಿತಿಯಿಂದ ತನನ್ನು ದೂರ ಇಡಲಾಗಿದೆ : ಮಾಜಿ ಮೇಯರ್ ಅಶ್ರಫ್

Thursday, February 21st, 2013
DCC Pressmeet

ಮಂಗಳೂರು : ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಪಟ್ಟಂತೆ ಜಿಲ್ಲಾ ಕಾಂಗ್ರೆಸ್ಸ್ ಯಲ್ಲಿ ತನನ್ನು ಕೈಬಿಡಲಾಗಿದೆ ಹಾಗು ಇತ್ತೀಚೆಗೆ ಪಕ್ಷದಲ್ಲಿ ತನ್ನನ್ನು ಕಡೆಗಣಿಸಲಾಗುತ್ತಿದೆ ಎಂದು ಮಾಜಿ ಮೇಯರ್ ಅಶ್ರಫ್ ದೂರಿದ ಘಟನೆ ಬುಧವಾರ ನಡೆಯಿತು. ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಗೆ ಸಂಬಂಧಿಸಿದಂತೆ ಜಿಲ್ಲಾ ಕಾಂಗ್ರೆಸ್ ನಲ್ಲಿ ಸಮಿತಿಯೊಂದನ್ನು ರಚಿಸಿದ್ದು ಈ ಕುರಿತ ಮಾಹಿತಿಯನ್ನು ಜಿಲ್ಲೆಯಲ್ಲಿ ಚುನಾವಣಾ ಉಸ್ತುವಾರಿ ಹೊಂದಿರುವ ಮಾಜಿ ಸಂಸದ ಬಿ.ಜನಾರ್ದನ ಪೂಜಾರಿ ಬುಧವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಪತ್ರಕರ್ತರಿಗೆ ನೀಡುತ್ತಿದ್ದ […]

ಓಟ್ಸ್‌ನ ಟಿನ್‌ನ ಮೂಲಕ ಅಕ್ರಮವಾಗಿ ಚಿನ್ನಾಭರಣ ಸಾಗಾಟ ಮಾಡಲೆತ್ನಿಸಿದ ಭಟ್ಕಳ ಮೂಲದ ವ್ಯಕ್ತಿಯ ಬಂಧನ

Thursday, February 21st, 2013
Gold Smuggling

ಮಂಗಳೂರು : ದುಬೈಯಿಂದ ಆಗಮಿಸಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಅಕ್ರಮವಾಗಿ ಚಿನ್ನಾಭರಣ ಸಾಗಾಟ ಮಾಡಲೆತ್ನಿಸಿದ ಪ್ರಯಾಣಿಕನೊಬ್ಬನನ್ನು ಮಂಗಳೂರಿನ ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ. ಭಟ್ಕಳದ ಅಬ್ದುಲ್ ಘನಿ ಬಂಧಿತ ಆರೋಪಿಯಾಗಿದ್ದು, ಆರೋಪಿಯು 300 ಗ್ರಾಂ. ಚಿನ್ನವನ್ನು ಓಟ್ಸ್‌ನ ಟಿನ್‌ನಲ್ಲಿರಿಸಿ ತಂದಿದ್ದನು. ಆದರೆ ಈ ಬಗ್ಗೆ  ಮಾಹಿತಿ ಪಡೆದ ಮಂಗಳೂರಿನ ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ತಪಾಸಣೆ ನಡೆಸಿದರು. ಈ  ಸಂದರ್ಭ ಆರೋಪಿಯ ಬಳಿಯಿದ್ದ ಚಿನ್ನಾಭರಣ ಪತ್ತೆಯಾಗಿದೆ, ಅಧಿಕಾರಿಗಳು ಅದನ್ನು ವಶಪಡಿಸಿಕೊಂಡಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು […]

ಕಾರ್ಮಿಕ ಸಂಘಟನೆಗಳು ಕರೆ ನೀಡಿದ ಭಾರತ ಬಂದ್ ಗೆ ಮಂಗಳೂರಿನಲ್ಲಿ ಉತ್ತಮ ಪ್ರತಿಕ್ರಿಯೆ

Wednesday, February 20th, 2013
Bharat Bundh

ಮಂಗಳೂರು  : ವಿವಿಧ ಬೇಡಿಕೆಗಳನ್ನು ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ನಡೆಸಿದ  ಬಂದ್‌ ಯಶಸ್ವಿಯಾಗಿತ್ತು. ಯಾವುದೇ ಅಹಿತಕರ ಘಟನೆಗಳು ಸಂಭವಿಸದೆ  ಶಾಂತಿಯುತವಾಗಿತ್ತು. ಬ್ಯಾಂಕ್‌ ಹಾಗೂ ಸರಕಾರಿ ಕಚೇರಿಗಳು ತೆರೆದಿತ್ತಾದರೂ ಕಡಿಮೆ ಹಾಜರಾತಿ ಕಂಡುಬಂದಿದೆ.  ಶಾಲೆ ಕಾಲೇಜುಗಳಲ್ಲಿ ತರಗತಿಗಳು ನಡೆಯಲಿಲ್ಲ. ನಗರದಲ್ಲಿ ಕೆಲವೊಂದು ಅಂಗಡಿ, ಮುಂಗಟ್ಟುಗಳು ಎಂದಿನಂತೆ ತೆರೆದಿದ್ದು ವ್ಯಾಪಾರವಿಲ್ಲದೆ ಬಿಕೋ ಎನ್ನುತ್ತಿತ್ತು. ಕೆಲವು ಕಡೆಗಳಲ್ಲಿ ಮಾತ್ರ ಬೆರಳೆನಿಕೆಯಷ್ಟು ಅಂಗಡಿ, ಹೊಟೇಲ್, ಬಟ್ಟೆ ಅಂಗಡಿ, ವೈನ್ ಶಾಫ್, ಮೆಡಿಕಲ್ ಶಾಫ್, ಮತ್ತಿತರ ಸಣ್ಣಪುಟ್ಟ ಶಾಫ್‌ಗಳು ತೆರೆದಿದ್ದವು. ನಗರದ ಚಿತ್ರಮಂದಿರಗಳು ಸೇರಿದಂತೆ […]

ರಸ್ತೆ ಅವ್ಯವಸ್ಥೆ ಸರಿಪಡಿಸಲು ಒತ್ತಾಯಿಸಿ ಸಾರ್ವಜನಿಕರಿಂದ ಪ್ರತಿಭಟನೆ

Tuesday, February 19th, 2013
Kuppe Padavu protest

ಎಡಪದವು : ಇಲ್ಲಿನ ಕುಪ್ಪೆಪದವು ಗ್ರಾಮದ ಕಾಡಕೇರಿ ಬಳಿಯ ಬೋಳಿಯಕ್ಕೆ ಹೋಗುವ ಸುಮಾರು 2.5 ಕಿ.ಮೀ. ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಆ ರಸ್ತೆಯಲ್ಲಿ ತೆರಳಲು ಸಾರ್ವಜನಿಕರು ಹಾಗೂ  ವಾಹನಗಳು ಬಹಳಷ್ಟು ಕಷ್ಟ ಪಡುತ್ತಿರುವುದರಿಂದ ಈ ರಸ್ತೆಯನ್ನು ಈ ಕೂಡಲೆ ದುರಸ್ತಿ ಮಾಡಬೇಕೆಂದು ಒತ್ತಾಯಿಸಿ ಕುಪ್ಪೆಪದವು ಗ್ರಾಮಸ್ಥರು ಜೆಡಿಎಸ್ ಪಕ್ಷದ ನೇತೃತ್ವದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ  ನಡೆಸಿದರು. ಈ ಸಂದರ್ಭದಲ್ಲಿ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡುತ್ತಾ, ಕರ್ನಾಟಕ […]

ಗ್ರಾಮಾಂತರ ಪ್ರದೇಶದ ರಿಕ್ಷಾಗಳ ನಗರಪ್ರದೇಶ ಪ್ರವೇಶಕ್ಕೆ ಪರವಾನಗಿ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ

Tuesday, February 19th, 2013
Rural auto drivers strike

ಮಂಗಳೂರು : ಗ್ರಾಮಾಂತರ ಪ್ರದೇಶದ ರಿಕ್ಷಾ ಚಾಲಕರಿಗೆ ಮಂಗಳೂರು ನಗರಪ್ರದೇಶಕ್ಕೆ ಬಾಡಿಗೆ ಮಾಡಲು ಪರವಾನಗಿ ನೀಡಬೇಕೆಂದು ಕೋರಿ ಮಂಗಳವಾರ ರಿಕ್ಷಾಚಾಲಕರು ತೊಕ್ಕೊಟ್ಟಿನಿಂದ ಮಂಗಳೂರು ಜಿಲ್ಲಾಧಿಕಾರಿ ಕಚೇರಿಯವರೆಗೆ ರಿಕ್ಷಾ ಜಾಥಾದ ಮೂಲಕ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯ ನೇತೃತ್ವ ವಹಿಸಿದ ಯೋಗೀಶ್ ಶೆಟ್ಟಿ ಜಪ್ಪು ಮಾತನಾಡಿ, ಮಂಗಳೂರು ನಗರದ ನೇತ್ರಾವತಿ ಸೇತುವೆಯಿಂದ ತೊಕ್ಕೊಟ್ಟು ಉಳ್ಳಾಲ ದೇರಳಕಟ್ಟೆ ಸೋಮೇಶ್ವರ, ಕೋಟೆಕಾರ್, ಕುತ್ತಾರ್, ಕೋಣಾಜೆ ಮುಂತಾದ ಪ್ರದೇಶಗಳು ಮಂಗಳೂರು ನಗರಕ್ಕೆ ಅತ್ಯಂತ ಸಮೀಪದಲ್ಲಿದ್ದು, ಕೇವಲ 10 ಕಿ.ಮೀ. ಪರಿಮಿತಿಯಲ್ಲಿ […]

ಸೈನ್ಯಕ್ಕಿಂತ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯದಲ್ಲಿರುವಾಗ ಪ್ರಾಣ ತ್ಯಾಗ ಮಾಡುವ ಅಧಿಕಾರಿಗಳ ಸಂಖೆಯೇ ಹೆಚ್ಚು : ಪ್ರತಾಪ್ ರೆಡ್ಡಿ

Tuesday, February 19th, 2013
Prataap Reddy

ಮಂಗಳೂರು : ಪೊಲೀಸ್ ಇಲಾಖೆಯನ್ನು ರಾಷ್ಟ್ರದ ಸೈನ್ಯಕ್ಕೆ ಹೋಲಿಸಿದರೆ ಪೊಲೀಸ್ ಇಲಾಖೆಗೆ ಸೈನ್ಯದಂತೆ ನೇರವಾದ ಶತ್ರುಗಳಿಲ್ಲ ಬದಲಿಗೆ ಶತ್ರುಗಳು ಸಮಾಜದಲ್ಲಿ ವಿವಿಧ ಸ್ತರಗಳಲ್ಲಿ, ಬೇರೆ ಬೇರೆ ರೂಪದಲ್ಲಿದ್ದಾರೆ. ಇಂತಹ  ಸಮಾಜ ಘಾತುಕ ವ್ಯಕ್ತಿಗಳನ್ನು ಮಟ್ಟ ಹಾಕಲು ಪೊಲೀಸರು ತಮ್ಮ ಇತಿಮಿತಿಗಳಿಗಿಂತ ಸ್ವಲ್ಪ ಹೆಚ್ಚಾಗಿ ಕ್ರಮ ಕೈಗೊಂಡರು ಕೂಡ ನಾಗರಿಕ ಸಮಾಜದ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ. ಸೈನ್ಯಕ್ಕಿಂತ ಪೊಲೀಸ್ ವ್ಯವಸ್ಥೆಯಲ್ಲಿ ಕರ್ತವ್ಯದಲ್ಲಿರುವಾಗ  ಪ್ರಾಣ ತ್ಯಾಗ ಮಾಡಿದ ಅಧಿಕಾರಿಗಳೆ ಹೆಚ್ಚಿನ  ಸಂಖ್ಯೆಯಲ್ಲಿದ್ದರು ಪೊಲೀಸ್ ಇಲಾಖೆಗೆ ಮಾತ್ರ ಸರಿಯಾದ ವ್ಯವಸ್ಥೆಗಳು ಸಿಗುತ್ತಿಲ್ಲ ಎಂದು ಪಶ್ಚಿಮವಲಯ […]

ಗಾಂಜಾ ಮಾಫಿಯಾದ ಪ್ರಮುಖ ರೂವಾರಿ ಕೇಶವ್ ಸನೀಲ್ ಬಂಧನ

Tuesday, February 19th, 2013
Gaanja Mafia

ಮಂಗಳೂರು : ಸುರತ್ಕಲ್ ಗಾಂಜಾ ಮಾಫಿಯಾದ ಪ್ರಮುಖ ರೂವಾರಿಯಾದ  ಕೇಶವ್ ಸನೀಲ್ ನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕೆಲವು ದಿನಗಳ ಹಿಂದೆ ಸುರತ್ಕಲ್ ಪೊಲೀಸರು ಕಾರಿನಲ್ಲಿ ಅಪಾರ ಪ್ರಮಾಣದ ಗಾಂಜಾವನ್ನು ಪತ್ತೆಹಚ್ಚಿ, ಕೆಲವರನ್ನು ಬಂಧಿಸಿದ್ದರು. ಆದರೆ ಈ ಜಾಲದ ಮುಖ್ಯ ರೂವಾರಿ ಕೇಶವ ಸನಿಲ್ ಪೊಲೀಸರ ಕಣ್ಣು ತಪ್ಪಿಸಿ, ತಲೆಮರೆಸಿಕೊಂಡಿದ್ದ. ಗಾಂಜಾವನ್ನು ಪ್ರಮುಖವಾಗಿ ಕಾರಿನ ಮೂಲಕ ವಿದ್ಯಾರ್ಥಿ ಗಳಿಗೆ ಪೂರೈಕೆ ಮಾಡಲಾಗುತ್ತಿತ್ತು ಇದಕ್ಕೆ ಸಂಬಂದಿಸಿದಂತೆ ಕೆಲವು ಆರೋಪಿಗಳನ್ನು ಬಂಧಿಸಲಾಗಿತ್ತು ಆದರೆ ಇದೀಗ ಪೋಲೀಸರ ನಿರಂತರ ತನಿಖೆಯ ಮೂಲಕ ಗಂಜಾದ ಪ್ರಮುಖ […]