ಜನವರಿ 29 ರಿಂದ ಫೆಬ್ರವರಿ 1 ರ ವರೆಗೆ ದಕ್ಷಿಣ ಕನ್ನಡ ಜಿಲ್ಲಾ ಮತ್ತು ಉಡುಪಿ ಜಿಲ್ಲಾ ಕಾಂಗ್ರೆಸ್‌ ಸಮಿತಿಯಿಂದ ಕಾಂಗ್ರೆಸ್‌ ಪಾದಯಾತ್ರೆ

Tuesday, January 29th, 2013
Congress Padayaatra

ಮಂಗಳೂರು : ಜನವರಿ 29 ರಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ವತಿಯಿಂದ ಉಳ್ಳಾಲದಲ್ಲಿ ರಾಣಿ ಅಬ್ಬಕ್ಕ ವೃತ್ತದಿಂದ ಪ್ರಾರಂಭಗೊಂಡು ಉಡುಪಿ ವರೆಗೆ ದಕ್ಷಿಣ ಕನ್ನಡ ಜಿಲ್ಲಾ ಮತ್ತು ಉಡುಪಿ ಜಿಲ್ಲಾ ಕಾಂಗ್ರೆಸ್‌ ಸಮಿತಿ ಆಶ್ರಯದಲ್ಲಿ ‘ಕಾಂಗ್ರೆಸ್‌ ನಡಿಗೆ- ಸಾಮರಸ್ಯದ ಕಡೆಗೆ’ ಪಾದಯಾತ್ರೆ ನಡೆಯಲಿದೆ. ಮಂಗಳವಾರ ಬೆಳಗ್ಗೆ 9ಕ್ಕೆ ಉಳ್ಳಾಲದ ರಾಣಿ ಅಬ್ಬಕ್ಕ ವೃತ್ತದಿಂದ ಆರಂಭವಾಗುವ ಪಾದಯಾತ್ರೆಯನ್ನು ಕೆಪಿಸಿಸಿ ಅಧ್ಯಕ್ಷ ಡಾ| ಜಿ. ಪರಮೇಶ್ವರ್‌ ಉದ್ಘಾಟಿಸಲಿದ್ದಾರೆ. ಈ ಪಾದಯಾತ್ರೆಯಲ್ಲಿ ಎಂ. ವೀರಪ್ಪ ಮೊಯ್ಲಿ, ಆಸ್ಕರ್‌ ಫೆರ್ನಾಂಡಿಸ್‌, ಸಿದ್ಧರಾಮಯ್ಯ, […]

ಬಜೊಡಿಯ ಸಂದೇಶ ಪ್ರತಿಷ್ಠಾನದ ಆವರಣದಲ್ಲಿ ನಡೆದ 2013ನೇ ಸಾಲಿನ ಸಂದೇಶ ಪ್ರಶಸ್ತಿ ಪ್ರಧಾನ ಸಮಾರಂಭ

Monday, January 28th, 2013
Sandesha Awards

ಮಂಗಳೂರು : ಸಂದೇಶ ಪ್ರತಿಷ್ಠಾನ ನೀಡುವ 2013ನೇ ಸಾಲಿನ ಸಂದೇಶ ಪ್ರಶಸ್ತಿ ಪ್ರಧಾನ ಸಮಾರಂಭವು ಭಾನುವಾರ ಸಂಜೆ ಬಜೊಡಿಯ ಸಂದೇಶ ಪ್ರತಿಷ್ಠಾನದ ಆವರಣದಲ್ಲಿ ನಡೆಯಿತು. ಈ ಸಂದರ್ಭ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಒಟ್ಟು 9 ಸಾಧಕರಿಗೆ ಪ್ರಶಸ್ತಿ ಪ್ರಧಾನ ಮಾಡಲಾಯಿತು. ಕರಾವಳಿ ಅಂದರೆ ಸಾಮರಸ್ಯದ ಕಲಾವಳಿ. ಇಲ್ಲಿ ಮತ, ಧರ್ಮ, ಭಾಷೆ, ಸಂಸ್ಕೃತಿಯ ವೈವಿಧ್ಯ ನಲಿದಾಡುತ್ತಿರುತ್ತದೆ. ಬಹುತ್ವವನ್ನು ಗಟ್ಟಿಗೊಳಿಸುವ ಸಂದೇಶ ಸಾರುವ ಸಾಂಸ್ಕೃತಿಕ ಪ್ರಭಾವಳಿ, ತನ್ನ ವಿವೇಕ ತಂಡದ ಮೊದಲ ನಾಟಕದ ಪಯಣ ಆರಂಭವಾಗಿದ್ದೇ ಕರಾವಳಿಯ […]

ಇ-ಆಡಳಿತ ವ್ಯವಸ್ಥೆಯಿಂದ ತ್ವರಿತ ಸೇವೆ ಸಾಧ್ಯ: ಜೆ.ಆರ್.ಲೋಬೋ

Monday, January 28th, 2013
ಇ-ಆಡಳಿತ ವ್ಯವಸ್ಥೆಯಿಂದ ತ್ವರಿತ ಸೇವೆ ಸಾಧ್ಯ: ಜೆ.ಆರ್.ಲೋಬೋ

ಮಂಗಳೂರು : ನಗರಾಭಿವೃದ್ಧಿ ಇಲಾಖೆಯಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿ ಸೂಪರ್ ಟೈಂ ಸ್ಕೇಲ್ ಕೆಎಎಸ್ ಅಧಿಕಾರಿಯಾಗಿ ನಿವೃತ್ತಿಯಾಗಿರುವ ಜೆ.ಆರ್.ಲೋಬೋ ಅವರು ರಾಜಕೀಯ ರಂಗ ಪ್ರವೇಶಿಸಿದ್ದಾರೆ. ಮಂಗಳೂರು ಮಹಾನಗರಪಾಲಿಕೆ ಆಯುಕ್ತರಾಗಿ, ಕರ್ನಾಟಕ ನಗರಾಭಿವೃದ್ಧಿ ಮತ್ತು ಕರಾವಳಿ ಪರಿಸರ ನಿರ್ವಹಣೆ ಯೋಜನೆ (ಕುಡ್ಸೆಂಪ್) ಯೋಜನಾ ನಿರ್ದೇಶಕರಾಗಿ ಮತ್ತು ಪಿಲಿಕುಳ ನಿಸರ್ಗಧಾಮದ ಕಾರ್ಯನಿರ್ವಹಕ ನಿರ್ದೇಶಕರಾಗಿ ಜೆ.ಆರ್.ಲೋಬೋ ಮಂಗಳೂರು ನಗರದ ಜನತೆಗೆ ಚಿರಪರಿಚಿತರು. ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಮುಖಂಡರಾಗಿ ಗುರುತಿಸಿಕೊಂಡಿರುವ ಲೋಬೋ ಅವರು ಇದೀಗ ಸಾಮಾಜಿಕ ಚಟುವಟಿಕೆಯಲ್ಲಿ ಸಕ್ರಿಯರಾಗಿದ್ದಾರೆ. ಸದ್ಯದಲ್ಲೇ ಮಹಾನಗರಪಾಲಿಕೆ […]

ಕರಾವಳಿಯ ಪ್ರವಾಸೋದ್ಯಮದಿಂದ ದೂರ ಉಳಿದ ಸಸಿಹಿತ್ಲು !

Monday, January 28th, 2013

ಮಂಗಳೂರು : ನಂದಿನಿ ಮತ್ತು ಶಾಂಭವಿ ನದಿಗಳು ಅರಬ್ಬಿ ಸಮುದ್ರಕ್ಕೆ ಸೇರಿ ತ್ರಿವೇಣಿ ಸಂಗಮದ ಕೇಂದ್ರ ಬಿಂದು ಎಣಿಸಿರುವ ಸಸಿಹಿತ್ಲು ಎಂಬ ಪುಟ್ಟ ಗ್ರಾಮಕ್ಕೆ ತನ್ನ ಅಜ್ಞಾತವಾಸ ಮತ್ತೂ ಮುಂದುವರಿಯುವ ಆತಂಕ ಎದುರಾಗಿದೆ. ಒಂದು ಕಡೆ ನದಿ ಕಡಲಿನ ತ್ರಿವೇಣಿ ಸಂಗಮದ ಅಳಿವೆ ಬಾಗಿಲು, ಸಸಿಹಿತ್ಲು ಕಡೆಯ ಜಾಗವನ್ನು ಕಬಳಿಸುತ್ತಾ ಬರುತ್ತಿದೆ. ಮತ್ತೊಂದು ಕಡೆ ಮೂರು ದಶಕದಿಂದ ಭರವಸೆಯಾಗಿರುವ ಸಸಿಹಿತ್ಲು ನಂದಿನಿ ನದಿ ಸೇತುವೆ ಇನ್ನೂ ಮರಿಚಿಕೆಯಾಗಿಯೇ ಉಳಿದಿದೆ. ಪ್ರವಾಸೋದ್ಯಮದ ಪಟ್ಟಿಯಲ್ಲಿ ಹೆಸರು ಪಡೆದಿರುವ ಸಸಿಹಿತ್ಲು ಗ್ರಾಮದತ್ತ […]

ಹತ್ತೂರಿನ ಪುತ್ತೂರಿನಲ್ಲಿ ಡಿವಿಎಸ್ ವಿರುದ್ಧ ಕರಂದ್ಲಾಜೆ

Monday, January 28th, 2013
Sadananda Gowda, Shobha Karandlaje

ಮಂಗಳೂರು : ಸದಾನಂದ ಗೌಡ ಮೇಲೆ ಶೋಭಾ ಕರಂದ್ಲಾಜೆ ಆಕ್ರೋಶಿತರಾಗಿಯೇ ಇದ್ದಾರೆ. ಯಡಿಯೂರಪ್ಪರೊಂದಿಗೆ ಗುರುತಿಸಿಕೊಂಡ ನೆಪದಲ್ಲಿ ಶೋಭಾ ಕರಂದ್ಲಾಜೆಯ ಮಂತ್ರಿ ಸ್ಥಾನ ಕಿತ್ತುಕೊಳ್ಳಲು ಸದಾನಂದ ಗೌಡರು ಪಿತೂರಿ ನಡೆಸಿದ್ದರು ಎಂದು ಶೋಭಾರ ಹಿಂಬಾಲಕರು ನಂಬಿದ್ದಾರೆ. ಇದೇ ಕೋಪದಲ್ಲಿ ಡಿ.ವಿ. ವಿರುದ್ಧ ಪುತ್ತೂರಿನಲ್ಲಿ ಸ್ಪರ್ಧಿಸುತ್ತೇನೆ ಎಂದು ಶೋಭಾ ಎಚ್ಚರಿಕೆ ಸಂದೇಶವನ್ನೂ ನೀಡಿದ್ದರು. ಡಿ.ವಿ.ವಿರುದ್ಧ ಶೋಭಾ ಸ್ಪರ್ಧಿಸದೇ ಇದ್ದರೂ ಕೂಡ ಡಿ.ವಿ. ಗೆಲವು ತಡೆಯಲು ಹೋರಾಡದೆ ಇರಲಾರರು. ಶೋಭಾ ಪುತ್ತೂರಿನಲ್ಲಿ ಓಡಾಡಿದ್ದೇ ಆದರೆ ಒಕ್ಕಲಿಗ ಮತಗಳು ಒಡೆಯದಿರಲಾರವು ಎಂದು ಸದಾನಂದ […]

ಬಿಜೈ ರಾಜಾ ಮರ್ಡರ್ : ಚಾಣಾಕ್ಷ ಕಾರ್ಪೋರೇಟರ್ ಕೈಚಳಕ

Monday, January 28th, 2013
ಬಿಜೈ ರಾಜಾ ಮರ್ಡರ್ : ಚಾಣಾಕ್ಷ ಕಾರ್ಪೋರೇಟರ್ ಕೈಚಳಕ

ಮಂಗಳೂರು : ಪಾಂಡು ಪೈ ಹಂತಕ ಬಿಜೈ ರಾಜಾ ಹತ್ಯೆಯ ಹಿಂದೆ ಬಿಜೆಪಿ ಕಾರ್ಪೋರೇಟರ್ ರೊಬ್ಬರ ಕೈವಾಡ ಇರುವುದು ದೃಢಪಟ್ಟಿದೆಯಾದರೂ ಅವರನ್ನು ರಕ್ಷಿಸಲು ಪೊಲೀಸರು ಬಿಜೈ ರಾಜಾ ಹತ್ಯೆ ಪ್ರಕರಣವನ್ನೇ ಮುಚ್ಚಿಹಾಕುವ ಹುನ್ನಾರದಲ್ಲಿದ್ದಾರೆ ಎಂಬ ಮಾಹಿತಿಯೊಂದು ಲಭ್ಯವಾಗಿದೆ. ಈಗಾಗಲೇ ಬಂಧಿಸಿದವರನ್ನು ಹೊರತುಪಡಿಸಿ ಮತ್ಯಾರನ್ನೂ ಬಂಧಿಸಬಾರದು ಎನ್ನುವ ಒಪ್ಪಂದ ಮೂಲಕ ಬಿಜೈ ರಾಜಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಲ್ಪೆ ಪ್ರದೀಪ್ ಮತ್ತು ಕಿರಣ್ ಪೊಲೀಸರಿಗೆ ಶರಣಾಗಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಪೊಲೀಸರು ಮಾತ್ರ ಮಲ್ಪೆ ಪ್ರದೀಪ್ ಹಾಗೂ […]

ಉದ್ಯಮಿ ಮನಮೋಹನ್ ಮಲ್ಲಿ ಸಾವು: ತುಕ್ಕು ಹಿಡಿದು ಕೂತ ತನಿಖೆ

Monday, January 28th, 2013
Manmohan malli

ಮಂಗಳೂರು : ಅಭಿಮಾನ್? ಸಮೂಹ ಸಂಸ್ಥೆಗಳ ಮೆನೇಜಿಂಗ್ ಡೈರೆಕ್ಟರ್ ಆಗಿದ್ದ ಮನಮೋಹನ ಮಲ್ಲಿ ಆಕಸ್ಮಿಕ ಸಾವಿನ ಪ್ರಕರಣಕ್ಕೆ ಜನವರಿ 15ರಂದು ಮೂರು ತಿಂಗಳು ಪೂರ್ತಿಗೊಳ್ಳುತ್ತಿದೆ. ಓರ್ವ ಯಶಸ್ವಿ ಉದ್ಯಮಿಯಾಗಿದ್ದು, ಸಾರ್ವಜನಿಕ ರಂಗದಲ್ಲಿ ನಿಸ್ವಾರ್ಥ ಸೇವೆಯ ಮೂಲಕ ಜನಮೆಚ್ಚುಗೆ ಪಡೆದಿದ್ದ ಮಲ್ಲಿ ಸಾವಿನ ಕುರಿತು ಪ್ರಾರಂಭದಲ್ಲೇ ಸಂಶಯಗಳಿತ್ತಾದರೂ ಉತ್ತರ ಸಿಗದ ಪ್ರಶ್ನೆಗಳು ಇಂದಿಗೂ ಹಾಗೇ ಉಳಿದು ಕೊಂಡಿವೆ. ಮಲ್ಲಿ ರೈಲಿನಿಂದ ಬಿದ್ದು ಆಕಸ್ಮಿಕ ಸಾವಿಗೀಡಾದರೆಂದು ಹೇಳಲಾಗಿತ್ತಾದರೂ ಇಂದಿಗೂ ಅವರ ಮಿತ್ರರು, ಬಂಧು ವರ್ಗ ಮಾತ್ರ ಇದನ್ನು ನಿರಾಕರಿಸುತ್ತ ಮಲ್ಲಿ […]

ಪಣಂಬೂರು ಬೀಚ್‌ ಉತ್ಸವಕ್ಕೆ ತೆರೆ

Monday, January 28th, 2013
Panambur Beach Fest

ಮಂಗಳೂರು : ಕರಾವಳಿಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಗೆ ವಿಫುಲ ಅವಕಾಶವಿದೆ, ಕೇರಳ-ಗೋವಾ ರಾಜ್ಯಗಳ ಮಾದರಿಯಲ್ಲಿ ಕರಾವಳಿಯಲ್ಲೂ ಬೀಚ್ ಅಭಿವದ್ಧಿಗೆ ಅವಕಾಶಗಳಿದ್ದು ಈ ಬಗ್ಗೆ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಕಷ್ಣ ಜೆ. ಪಾಲೆಮಾರ್ ಹೇಳಿದರು. ಅವರು ಪಣಂಬೂರಿನಲ್ಲಿ ರವಿವಾರ ನಡೆದ ಬೀಚ್‌ ಉತ್ಸವದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ರವಿವಾರ ಪಣಂಬೂರು ಬೀಚ್‌ ಉತ್ಸವಕ್ಕೆ ಅಪಾರ ಜನಸಾಗರವೇ ಹರಿದು ಬಂದಿದ್ದು, ಬೀಚ್ ನಲ್ಲಿ ಏರ್ಪಡಿಸಲಾದ ವಿವಿಧ ಸ್ಪರ್ದೆಗಳಲ್ಲಿ ಜನರು ಭಾಗವಹಿಸಿ ಸಂತಸಪಟ್ಟರು. ಈ ಬಾರಿ ಬೀಚ್‌ […]

ನೆಹರೂ ಮೈದಾನದಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಆಕರ್ಷಕ ಪಥಸಂಚಲನ, ಸಾಧಕರಿಗೆ ಗೌರವ, ವಿದ್ಯಾರ್ಥಿಗಳ ನೃತ್ಯ ವೈವಿದ್ಯ

Saturday, January 26th, 2013
ನೆಹರೂ ಮೈದಾನದಲ್ಲಿ ಗಣರಾಜ್ಯೋತ್ಸವದ ಪ್ರಯುಕ್ತ ಆಕರ್ಷಕ ಪಥಸಂಚಲನ, ಸಾಧಕರಿಗೆ ಗೌರವ, ವಿದ್ಯಾರ್ಥಿಗಳ ನೃತ್ಯ ವೈವಿದ್ಯ

ಮಂಗಳೂರು : ನಗರದ ನೆಹರೂ ಮೈದಾನದಲ್ಲಿ ಶನಿವಾರ ದಕ್ಷಿಣ ಕನ್ನಡ ಜಿಲ್ಲಾಡಳಿತ ಮತ್ತು ಶಿಕ್ಷಣ ಇಲಾಖೆಯ ವತಿಯಿಂದ ನಡೆದ ಜಿಲ್ಲಾ ಮಟ್ಟದ ಗಣರಾಜ್ಯೋತ್ಸವ ದಿನಾಚರಣೆಯ ಧ್ವಜಾರೋಹಣವನ್ನು ಉನ್ನತ ಶಿಕ್ಷಣ ಖಾತೆ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ನೆರವೇರಿಸಿದರು. ಧ್ವಜವಂದನೆಯ ಬಳಿಕ ಪಥಸಂಚಲನ ತಂಡಗಳಿಂದ ಗೌರವ ಸ್ವೀಕರಿಸಿ, ಆಕರ್ಷಕ ಪಥಸಂಚಲನ ವೀಕ್ಷಿಸಿದರು. ಸುಮಾರು 20 ವಿವಿಧ ತಂಡಗಳು ಹಾಗೂ 2 ಪೊಲೀಸ್‌ ವಾದ್ಯ ತಂಡ ಪಥ ಸಂಚಲನದಲ್ಲಿ ಭಾಗವಹಿಸಿದ್ದವು. ಜೊತೆಗೆ ಶಾಲಾ ಮಕ್ಕಳ ವಿವಿಧ […]

ಕರ್ತವ್ಯ ಲೋಪ : ಕೊಣಾಜೆ ಠಾಣಾಧಿಕಾರಿ ಶಿವಪ್ರಕಾಶ್ ಅಮಾನತು

Friday, January 25th, 2013
Konaje SI shivaprakash

ಮಂಗಳೂರು: ಕೊಣಾಜೆ ಠಾಣಾಧಿಕಾರಿ ಶಿವಪ್ರಕಾಶ್ ವಿರುದ್ಧ ಕರ್ತವ್ಯ ಲೋಪವೆಸಗಿದ ಕಾರಣಕ್ಕೆ ಮಂಗಳೂರು ಕಮೀಷನರ್ ಮನೀಷ್ ಖರ್ಬೀಕರ್ ಅಮಾನತು ಆದೇಶ ಹೊರಡಿಸಿದ್ದಾರೆ. ಕೊಲೆ ಪ್ರಕರಣವವೊಂದನ್ನು ಅಪಘಾತ ಎಂದು ಕೇಸು ದಾಖಲಿಸಿಕೊಂಡಿದ್ದಕ್ಕಾಗಿ ಕೊಣಾಜೆ ಶಿವಪ್ರಕಾಶ್ ಅವರನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ. ದೇರಳಕಟ್ಟೆ ನಿವಾಸಿ ರಝಾಕ್ ಎಂಬವರ ಪತ್ನಿ ಸೌದಾ(35) ಎಂಬವರನ್ನು ಡಿ. 6 ರಂದು ಅಬ್ದುಲ್ ರೆಹಮಾನ್ ಎಂಬಾತ ಬೈಕಿನಲ್ಲಿ ಕರೆದುಕೊಂಡು ಹೋಗುತ್ತಿದ್ದ ಸಂದರ್ಭ ಬೈಕಿನಿಂದ ಕೆಳಗೆ ಬಿದ್ದು ಗಂಭೀರ ಗಾಯಗೊಂಡು ದೇರಳಕಟ್ಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತ ಪಟ್ಟಿದ್ದರು. ಕೊಣಾಜೆ […]