ಪೊಲೀಸ್ ಬೆಂಗಾವಲಿನಲ್ಲಿ ಪರೀಕ್ಷೆಬರೆದ ನಕ್ಸಲ್ ಬೆಂಬಲಿಗ ಆರೋಪಿ ವಿಠಲ ಮಲೆಕುಡಿಯ

Tuesday, April 17th, 2012
Vittala Malekudiya

ಮಂಗಳೂರು : ನಕ್ಸಲ್ ಬೆಂಬಲಿತ ಆರೋಪಿ ವಿಠಲ ಮಲೆಕುಡಿಯ ವಿವಿ ಪತ್ರಿಕೋದ್ಯಮದ ಎರಡನೆಯ ಸೆಮಿಸ್ಟರ್ ನ ಆಂತರಿಕ ವಿಷಯದ ಪರೀಕ್ಷೆಯನ್ನು ಇಂದು ಪೊಲೀಸ್ ಬೆಂಗಾವಲಿನಲ್ಲಿ ಬರೆದಿದ್ದಾನೆ. ಮಾರ್ಚ 3 ರಂದು ಬೆಳ್ತಂಗಡಿಯ ಕುತ್ಲೂರಿನಲ್ಲಿ ನಕ್ಸಲ್ ಬೆಂಬಲಿಗ ಎಂಬ ಆರೋಪದ ಮೇಲೆ ಬೆಳ್ತಂಗಡಿ ನಕ್ಸಲ್ ವಿರೋಧಿ ಪಡೆ ಆತನನ್ನು ಮತ್ತು ಆತನ ತಂದೆಯನ್ನು ಬಂಧಿಸಿತ್ತು. ಕಳೆದ ಶುಕ್ರವಾರರ ಸಲ್ಲಿಸಿದ ಅರ್ಜಿಯನ್ನು ಕೈಗೆತ್ತಿಗೊಂಡ ನ್ಯಾಯಾಲಯ ವಿಠಲ್‌ಗೆ ವಿವಿಯ ಆಂತರಿಕ ಪರೀಕ್ಷೆಗೆ ಹಾಜರಾಗಲು ಅನುಮತಿ ನೀಡಬಹುದು. ಜೈಲು ಅಧಿಕಾರಿಗಳು ಬೆಂಗಾವಲ ಪಡೆಯೊಂದಿಗೆ […]

ಕ್ಯಾಂಪ್ಕೋ ಚಾಕಲೇಟ್‌ಗಳು ಮಧ್ಯಪ್ರದೇಶದ ಮಾರುಕಟ್ಟೆಗೆ ಪ್ರವೇಶ

Tuesday, April 17th, 2012
campco chocolate

ಮಂಗಳೂರು : ಮಧ್ಯ ಪ್ರದೇಶದ ಹಾಲು ಉತ್ಪಾದಕರ ಒಕ್ಕೂಟ ಸಾಂಚಿ ಸಂಸ್ಥೆ ಹಾಗೂ ಕರ್ನಾಟಕದ ಕ್ಯಾಂಪ್ಕೋ ಸಂಸ್ಥೆ ಕ್ಯಾಂಪ್ಕೋ ಸಂಸ್ಥೆಯ ಚಾಕಲೇಟು ಉತ್ಪನ್ನಗಳನ್ನು ಮಧ್ಯಪ್ರದೇಶದಲ್ಲಿ ಮಾರಾಟ ಮಾಡುವ ಕುರಿತು ಒಪ್ಪಂದ ಮಾಡಿಕೊಂಡಿದೆ. ಉಭಯ ರಾಜ್ಯಗಳ ಮುಖ್ಯಮಂತ್ರಿಗಳ ಉಪಸ್ಥಿತಿಯಲ್ಲಿ ಒಪ್ಪಂದದ ಅಂತಿಮ ಪ್ರಕ್ರಿಯೆಯ ಬಳಿಕ ಚಾಕಲೇಟ್‌ ಬಿಡುಗಡೆ ನಡೆಯಲಿದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಕೋಂಕೋಡಿ ಪದ್ಮನಾಭ ಅವರು ಸೋಮವಾರ ನಡೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಮುಂದಿನ ಜೂನ್‌ ತಿಂಗಳಿನಿಂದ ಮಧ್ಯಪ್ರದೇಶದ ಎಲ್ಲಾ ಹಾಲಿನ ಬೂತ್‌ಗಳಲ್ಲಿ ಕ್ಯಾಂಪ್ಕೋ ಚಾಕಲೇಟ್‌ಗಳು ಲಭ್ಯವಾಗಲಿವೆ […]

ರಾಜ್ಯ ಸರಕಾರ ಬರಪೀಡಿತ ಪ್ರದೇಶಗಳಿಗೆ ಅಗತ್ಯ ಕಾರ್ಯಕ್ರಮಗಳನ್ನು ರೂಪಿಸಿಲ್ಲ : ಮೊಯ್ಲಿ

Monday, April 16th, 2012
Veerappa Moily

ಮಂಗಳೂರು : ಕೇಂದ್ರ ಕಾರ್ಪೊರೇಟ್‌ ವ್ಯವಹಾರಗಳ ಖಾತೆ ಸಚಿವ ಡಾ| ಎಂ. ವೀರಪ್ಪ ಮೊಲಿ ಅವರು ಭಾನುವಾರ ಮಂಗಳೂರಿನಲ್ಲಿ ವಿಶ್ವ ದೇವಾಡಿಗ ಸಮಾಜದ  ಸಭೆಯಲ್ಲಿ ಪತ್ರಕರ್ತರ ಪಶ್ನೆಗಳಿಗೆ ಉತ್ತರಿಸಿ ರಾಜ್ಯದ 123 ತಾಲೂಕುಗಳು ಬರಪೀಡಿತವಾಗಿವೆ ಎಂದು ಮೂರು ತಿಂಗಳ ಹಿಂದೆ ಸರಕಾರ ಗುರುತಿಸಿದ್ದು, ಬಳಿಕ ಪರಿಸ್ಥಿತಿ ನಿಬಾಯಿಸಲು ಯಾವುದೇ ಅಗತ್ಯ ಕಾರ್ಯಕ್ರಮಗಳನ್ನು ರೂಪಿಸಲಿಲ್ಲ. ಮುಖ್ಯಮಂತ್ರಿ ಬದಲಾವಣೆ ವಿಚಾರ ಸಂಬಂಧಿಸಿ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿದ್ದವರು ಅವರದೇ ತಾಪತ್ರಯ, ಅಂತಃಕಲಹಗಳಲ್ಲಿ ಮುಳುಗಿದ್ದರು. ವಿಷಯ ತಿಳಿದು ರಾಜ್ಯಕ್ಕೆ ಭೇಟಿ ನೀಡಿದ ಕೇಂದ್ರದ […]

ವಿಠಲ ಮಲೆಕುಡಿಯ ನಕ್ಸಲರ ಚಟುವಟಿಕೆಗಳಿಗೆ ಬೆಂಬಲ ಕೊಡುತ್ತಿದ್ದ :ಎ.ಆರ್‌. ಇನ್‌ಫೆಂಟ್‌

Friday, April 13th, 2012
AR Infant

ಮಂಗಳೂರು : ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ ಎ.ಆರ್‌. ಇನ್‌ಫೆಂಟ್‌ ಅವರು ಉಡುಪಿ ಜಿಲ್ಲೆಯ ಕಾರ್ಕಳ ಮತ್ತು ಚಿಕ್ಕ ಮಗಳೂರು ಜಿಲ್ಲೆಯ ಶೃಂಗೇರಿ ಮತ್ತಿತರ ಸುತ್ತಮುತ್ತಲ ನಕ್ಸಲ್‌ ಪೀಡಿತ ಪ್ರದೇಶಗಳಿಗೆ ಬುಧವಾರ ಮತ್ತು ಗುರುವಾರ 2 ದಿನಗಳ ಭೇಟಿ ನೀಡಿ ಪರಿಶೀಲಿಸಿ ಎಎನ್‌ಎಫ್‌ ಸಿಬಂದಿ ಮತ್ತು ಸ್ಥಳೀಯ ಜನರ ಜತೆ ಮಾತುಕತೆ ನಡೆಸಿದ ಬಳಿಕ ಗುರುವಾರ ಸಂಜೆ ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದರು. ಪತ್ರಿಕಾಗೋಷ್ಠಿ ಮಾತನಾಡಿದ ಅವರು ವಿಠಲ ಮಲೆಕುಡಿಯ ನಕ್ಸಲರ ಚಟುವಟಿಕೆಗಳಿಗೆ ಬೆಂಬಲ ಕೊಡುತ್ತಿದ್ದ ಎಂದು ಖಚಿತವಾದ ಹಿನ್ನೆಲೆಯಲ್ಲಿ […]

ಕೃಷಿ ತೋಟದಲ್ಲಿ ಪರ್ಯಾಯ ಬೆಳೆಗೆ ಪ್ರೊತ್ಸಾಹ ಧನ : ಡಿ.ವಿ. ಸದಾನಂದ ಗೌಡ

Wednesday, April 11th, 2012
ಕೃಷಿ ತೋಟದಲ್ಲಿ ಪರ್ಯಾಯ ಬೆಳೆಗೆ ಪ್ರೊತ್ಸಾಹ ಧನ : ಡಿ.ವಿ. ಸದಾನಂದ ಗೌಡ

ಪುತ್ತೂರು : ತಮ್ಮ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು 2 ದಿನಗಳ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರು ಪುತ್ತೂರಿನಲ್ಲಿ ಶ್ರೀ ಮಹಾಲಿಂಗೇಶ್ವರ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ತೋಟಗಾರಿಕೆಯಲ್ಲಿ ಪರ್ಯಾಯ ಬೆಳೆಗೆ ಪ್ರೊತ್ಸಾಹ ನೀಡುವ ಸಲುವಾಗಿ ಅಡಿಕೆ ಬೆಳೆಗಾರರಿಗೆ ತಮ್ಮ ಕೃಷಿ ತೋಟದಲ್ಲಿ ಅಡಿಕೆ ಹೊರತಾಗಿ ಇತರ ಆಹಾರ ಮತ್ತು ತೋಟಗಾರಿಕಾ ಬೆಳೆಗಳನ್ನು ಬೆಳೆಸಲು ಕೇರಳ ಮಾದರಿಯಲ್ಲಿ ಪ್ರೋತ್ಸಾಹಧನ ನೀಡುವ ಯೋಜನೆಯನ್ನು ಅನುಷ್ಠಾನಗೊಳಿಸಲು ರಾಜ್ಯ ಸರಕಾರ ಚಿಂತನೆ ನಡೆಸಿದೆ […]

ಮಂಗಳೂರು ಮಹಾನಗರದಲ್ಲಿ ಶೀಘ್ರದಲ್ಲೇ ಸರಕಾರಿ ಸಿಟಿಬಸ್‌ ಓಡಾಟ ಆರಂಭ – ಆರ್.ಟಿ.ಓ

Friday, April 6th, 2012
RTA Meeting

ಮಂಗಳೂರು : ಮಂಗಳೂರು ಪ್ರಾದೇಶಿಕ ಸಾರಿಗೆ ಕಚೇರಿ ವತಿಯಿಂದ ಗುರುವಾರ ಸಾರಿಗೆ ಕಚೇರಿಯಲ್ಲಿ ನಡೆದ ಸಾರಿಗೆ ಅದಾಲತ್ ನಲ್ಲಿ ಮಂಗಳೂರು ಮಹಾನಗರದಲ್ಲಿ ನಾಲ್ಕು ಸರಕಾರಿ ಸಿಟಿಬಸ್‌ಗಳ ಓಡಾಟಕ್ಕೆ ತಾತ್ಕಾಲಿಕ ನೆಲೆಯಲ್ಲಿ ಪರವಾನಿಗೆ ನೀಡುವ ಪ್ರಕ್ರಿಯೆಗಳು ಪ್ರಗತಿಯಲಿದ್ದು ಎಪ್ರಿಲ್‌ ಅಂತ್ಯಕ್ಕೆ ಮಂಜೂರುಗೊಳ್ಳುವ ಸಾಧ್ಯತೆಗಳಿವೆ ಎಂದು ಮಂಗಳೂರು ಪ್ರಾದೇಶಿಕ ಸಾರಿಗೆ ಅಧಿಕಾರಿ ಮಲ್ಲಿಕಾರ್ಜುನ ಹೇಳಿದರು. ರಾಜ್ಯ ಜಂಟಿ ಸಾರಿಗೆ ಆಯುಕ್ತ ವಿಜಯವಿಕ್ರಮ್‌ ಅಧ್ಯಕ್ಷತೆಯಲ್ಲಿ ಸಾರಿಗೆ ಅದಾಲತ್ ನಡೆಯಿತು. ಕೆಎಸ್‌ಆರ್‌ಟಿಸಿ ಸಲ್ಲಿಸಿರುವ ಅರ್ಜಿಗಳಲ್ಲಿ ಬೈಕಂಪಾಡಿಯಿಂದ ಕಂಕನಾಡಿ ವರೆಗೆ 2 ಬಸ್‌ಗಳು ಸೇರಿದಂತೆ […]

ಬಜಪೆ ಮನೆ ದರೊಡೆ ಕೇವಲ ಐದೇ ದಿನಗಳಲ್ಲಿ ಮೂವರು ಆರೋಪಿಗಳ ಬಂಧನ, ಸೊತ್ತು ವಶ

Monday, April 2nd, 2012
Bajpe Theft Case

ಮಂಗಳೂರು: ಬಜಪೆ ಪೊಲೀಸರು ಕಳೆದ ಮಾ. 27 ರಂದು ಸರೋಜಾ ಸಾಲಿಯಾನ್‌ ಅವರ ಮನೆಯಲ್ಲಿ ನಡೆದ ದರೋಡೆ ಪ್ರಕರಣದ ಮೂವರು ಆರೋಪಿಗಳನ್ನು ಬಂಧಿಸಿ ಅವರಿಂದ ಕಳವು ಮಾಡಿದ 10,00,000 ರೂ. ಮೌಲ್ಯದ ಚಿನ್ನಾಭರಣಗಳನ್ನು ವಶ ಪಡಿಸಿಕೊಂಡಿದ್ದಾರೆ. ಪ್ರಕರಣವನ್ನು ಕೇವಲ ಐದೇ ದಿನಗಳಲ್ಲಿ ಬೇಧಿಸಿರುವ ಪೊಲೀಸರು ಆರೋಪಿಗಳಾದ ಬಜಪೆ ಪಡು ಫೆರಾರ್‌ ಗ್ರಾಮದ ಚೇತನ್‌ (24), ಆತನ ಸಹಚರರಾದ ಪಶ್ಚಿಮ ಬಂಗಾಳದ ಕೃಷ್ಣ ಬಿಲಾಯಿ (23) ಮತ್ತು ಬಚ್ಚು ಮಂಡಲ್‌ (22) ಎಂಬವರನ್ನು ಬಧಿಸಿದ್ದಾರೆ. ಪಡುಫೆರಾರ್‌ ಗ್ರಾಮದ ಸುಂಕದಕಟ್ಟೆಯ […]

ವೃತ್ತಿಶಿಕ್ಷಣ ಕೋರ್ಸ್‌ಗಳ ಶುಲ್ಕ ಶೇ 10ರಷ್ಟು ಹೆಚ್ಚಳ

Sunday, April 1st, 2012
Student

ಬೆಂಗಳೂರು: ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಕಾಮೆಡ್- ಕೆ, ಖಾಸಗಿ ಎಂಜಿನಿಯರಿಂಗ್, ವೈದ್ಯಕೀಯ ಕಾಲೇಜುಗಳ ಆಡಳಿತ ಮಂಡಳಿಗಳ ಪದಾಧಿಕಾರಿಗಳು ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳ ಸಭೆಯಲ್ಲಿ ವೈದ್ಯಕೀಯ/ದಂತ ವೈದ್ಯಕೀಯ, ಎಂಜಿನಿಯರಿಂಗ್ ಮತ್ತಿತರ ವೃತ್ತಿಶಿಕ್ಷಣ ಕೋರ್ಸ್‌ಗಳ ಶುಲ್ಕವನ್ನು ಶೇ 10ರಷ್ಟು ಹೆಚ್ಚಿಸಲು ಹಾಗೂ ಕಳೆದ ಸಾಲಿನ ಸೀಟು ಹಂಚಿಕೆ ಪ್ರಮಾಣವನ್ನೇ 2012-13ನೇ ಸಾಲಿಗೂ ಮುಂದುವರಿಸಲು ತೀರ್ಮಾನಿಸಲಾಗಿದೆ. ಶುಲ್ಕ ಹೆಚ್ಚಳ ಪದವಿ ಮತ್ತು ಸ್ನಾತಕೋತ್ತರ ವೈದ್ಯಕೀಯ/ದಂತ ವೈದ್ಯಕೀಯ, ಎಂಜಿನಿಯರಿಂಗ್, ವಾಸ್ತುಶಿಲ್ಪ ಸೇರಿದಂತೆ ಎಲ್ಲ ಕೋರ್ಸ್‌ಗಳಿಗೂ ಅನ್ವಯವಾಗಲಿದೆ. ಸೀಟು […]

ಮೇಯರ್‌ ಗುಲ್ಜಾರ್‌ಬಾನು ಅವರಿಂದ ಮಂಗಳೂರು ಪಾಲಿಕೆಯ ಬಜೆಟ್ ಮಂಡನೆ

Saturday, March 31st, 2012
MCC Budjet

ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಮೇಯರ್‌ ಗುಲ್ಜಾರ್‌ಬಾನು ಅವರು 2012-13 ರ ಸಾಲಿನ 228.39 ಕೋ.ರೂ. ಮೊತ್ತದ ಬಜೆಟ್‌ ಶುಕ್ರವಾರ ಮಂಡಿಸಿದರು. ಬಹುಮತ ವಿರುವ ಬಿಜೆಪಿ ಮತ್ತು ಬಹುಮತ ವಿಲ್ಲದ ಕಾಂಗ್ರೆಸ್ಸ್ ನಡುವೆ ವಾದ ವಾಗ್ವದಗಳು ನಡೆದು ಬಜೆಟ್ ಮಂಡನೆಯಾಯಿತು. ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಪಾಲಿಕೆಯ ಬಜೆಟ್‌ ಅಧಿವೇಶನ ಆರಂಭವಾಗುತ್ತಿದ್ದಂತೆಯೇ ಬಿಜೆಪಿ ಸದಸ್ಯರು ಸದನಕ್ಕೆ ಹಾಜರಾದರು. ಬಿಜೆಪಿ ಸದಸ್ಯೆ ಶಾಂತಾ ಅವರಿಗೆ ಬಜೆಟ್‌ ಮಂಡಿಸುವಂತೆ ಮೇಯರ್‌ ಸೂಚಿಸಿದರು. ಶಾಂತಾ ಅವರು ಬಜೆಟ್‌ ಓದಲು ಆರಂಭಿಸುತ್ತಿದ್ದಂತೆ […]

‘ತೆಲಿಕೆದ ಬೊಳ್ಳಿ’ ತುಳು ಚಲನಚಿತ್ರದ ಮುಹೂರ್ತ

Thursday, March 29th, 2012
Telikeda Bolli

ಮಂಗಳೂರು: ದೇವದಾಸ್‌ ಕಾಪಿಕಾಡ್‌ ನಿರ್ಮಾಣದ “ಸೆಂಟ್ರಲ್‌ ಸಿನಿಮಾಸ್‌’ ಅರ್ಪಿಸುವ “ತೆಲಿಕೆದ ಬೊಳ್ಳಿ’ ತುಳು ಚಲನಚಿತ್ರದ ಮುಹೂರ್ತ ಬುಧವಾರ ವಾಮಂಜೂರಿನ ಬಂದಲೆಯಲ್ಲಿ ಜರಗಿತು. ಚಿತ್ರದ ಆರಂಭದ ದೃಶ್ಯಕ್ಕೆ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಉಮಾನಾಥ ಕೋಟ್ಯಾನ್‌ ಕ್ಯಾಮರಾ ಕ್ಲಾಪ್‌ ಮಾಡಿದರು, ಹಿರಿಯ ಯಕ್ಷಗಾನ ಕಲಾವಿದ ಮತ್ತು ಮಾಜಿ ಶಾಸಕ ಕುಂಬ್ಳೆ ಸುಂದರ್‌ ರಾವ್‌ ಕ್ಯಾಮರಾ ಚಾಲನೆ ಮಾಡಿದರು. ದೇವದಾಸ್‌ ಕಾಪಿಕಾಡ್‌ ಅವರ ಪುತ್ರ ಅರ್ಜುನ ಕಾಪಿಕಾಡ್‌ ಚಿತ್ರದ ನಾಯಕನಾಗಿ ಮೊದಲ ಬಾರಿಗೆ ಬೆಳ್ಳಿ ಪರದೆಯಲ್ಲಿ ಅವಕಾಶ ಪಡೆದಿದ್ದಾರೆ. […]